ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮಹಿಳಾ ದಿನದ ವಿಶೇಷ

ಎಂ. ಆರ್. ಅನಸೂಯ

ಗಟ್ಟಿಗಿತ್ತಿಯರು

Sad Woman paintings

ಅರಿವಿಲ್ಲದೆಯೇ
ಬಿಟ್ಟು ಕೊಡುತ್ತಾ
ಬದುಕ ಕಟ್ಟಿಕೊಳ್ಳುತ್ತಾ ಬಂದವರು
ಇದ್ದರೂ ಸಂಕಟದ
ಗೋಳು ಗೊಣಗಾಟ
ಕಷ್ಟವನ್ನೇ ಇಷ್ಟವನ್ನಾಗಿಸಿದ ಪರಿಪಾಠದವರು
ಅಲ್ಲಿದೆ ಒಲಮೆಯ ಬಲವು
ತೀರದ ಛಲದ ಕಸುವು
ಕುಗ್ಗಿ ದಣಿದರೂ ಅಪರಾಜಿತೆಯರಾದವರು

ಬಸಿದು ತನುವ ಜೀವರಕ್ತೆಯಾದವರು
ಬೆಸೆದು ಮನವ ಅರಿವ ಬೆಳಕಾದವರು
ದುಡಿದು ಧನವ ಬೆವರಿನಲ್ಲು ತಂಪಾದವರು
ಕಂಡಿಲ್ಲ ಇನಿತಾದರೂ ದಣಿವು
ಬೇರಾರಿಗೂ ದಕ್ಕದ ಪ್ರಕೃತಿಯಿತ್ತ ವರವು !

ಸಕಲವೂ ಸಾಧ್ಯವೆಂದ ಸಶಕ್ತ ಸಬಲೆಯರು
ಕೊಟ್ಟ ಹತ್ತರಷ್ಟು ಮೊಗೆವ ಗಟ್ಟಿಗಿತ್ತಿಯರು
ಜೀವ ಸೃಷ್ಟಿಯ ಪ್ರಕೃತಿಗೆ ಸಾಟಿಯಾದವರು
ಆತ್ಮವಿಶ್ವಾಸಕೆ ಮತ್ತೊಂದು ಹೆಸರೇ ಸ್ತ್ರೀ
ಇದನರಿಯದವರು ಕೇವಲ ಗಾವಿಲರು


About The Author

1 thought on “”

Leave a Reply

You cannot copy content of this page

Scroll to Top