ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಬ್ರಾಹಿಂ ಸುತಾರ ನೆನಪಿಗೆ

ನಬಿಸಾಹೇಬ್ ಅಮೀನಾಬಿ ದಂಪತಿಗಳ ಪುತ್ರನಾಗಿ ಜನಿಸಿದರು ಇಬ್ರಾಹಿಂ ಸುತಾರ
ಆಧುನಿಕ ಸೂಫಿಸಂತರು ಕನ್ನಡದ ಕಬೀರ್ ನಂತೆ ಬೆಳಗಿದರು ಇಬ್ರಾಹಿಂ ಸುತಾರ

ಖುರಾನ್ ಹದೀಸ್ ಭಗವತ್ಗೀತೆ ಉಪನಿಷತ್ ವಚನಗಳ ಆಳ ಅಧ್ಯಯನದ ಪ್ರವಚನಕಾರ
ಪರಮಾತ್ಮ ಧರ್ಮ ಮಾನವ ಕುಲ ಎಲ್ಲವೂ ಒಂದೇ ಎಂದು ಸಾರಿದರು ಇಬ್ರಾಹಿಂ ಸುತಾರ

ಆಧ್ಯಾತ್ಮಿಕ ಚಿಂತಕರು ಸರ್ವಧರ್ಮಗಳ ಸಮನ್ವಯ ಭಾವದವರು ಇವರು
ಕನ್ನಡ ರಾಜ್ಯೋತ್ಸವ, ಪದ್ಮಶ್ರೀ ಪ್ರಶಸ್ತಿಗಳಿಂದ ಪುರಸ್ಕೃತರು ಇಬ್ರಾಹಿಂ ಸುತಾರ

ಮತಗಳೆಂಬ ಬಣ್ಣ ಬಣ್ಣದ ಹೂವುಗಳನ್ನು ಒಂದುಗೂಡಿಸಿದ ಗುಲ್ದಸ್ಥ ನಮಗೆಲ್ಲ
ಜನ ಮನಗಳಲ್ಲಿ ಭಾವೈಕ್ಯತೆಯ ಸುಗಂಧ ಹಬ್ಬಿಸಿದರು ಇಬ್ರಾಹಿಂ ಸುತಾರ

ಬಡತನದಲ್ಲಿ ಬೆಂದು ಪ್ರಾಮಾಣಿಕ ದೇಶ ಸೇವೆಗೈದ ಮಹಾ ಲಿಂಗ ಪುರ ದವರು
“ಮಾಜಾ” ಜಾತಿ ವಾಚಕ ಪದಗಳಲ್ಲ ತತ್ವ ವಾಚಕ ಪದಗಳೆಂದು ಅರುಹಿದರು ಇಬ್ರಾಹಿಂ ಸುತಾರ


ಮಾಜಾನ್ ಮಸ್ಕಿ

About The Author

Leave a Reply

You cannot copy content of this page

Scroll to Top