ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಗಝಲ್

ಅಭಿಜ್ಞಾ ಪಿ ಎಮ್ ಗೌಡ

ಆಗಸದಿ ನಗುತ ಚಂದದಲಿ ತಾರೆಗಳು
ಬೆಳಕನು ಹರಡುತಿವೆ ಇನಿಯಾ
ಪ್ರೀತಿ ಬಯಸಿದ ಸುಂದರ ಕನಸುಗಳ
ಭರವಸೆ ಹೆಚ್ಚುತಿವೆ ಇನಿಯಾ

ಎದೆಯ ಬಯಲಲಿ ತರುಲತೆಗಳ ಹಸಿರು
ರಂಗೇರಿದಿಯೆ ಪ್ರತಿ ದಿನವು
ಕೊನರಿದ ಒಲವಿನಲಿ ಮನಸಿನ ಭಾವ
ಸಿಂಚನ ಮೆಚ್ಚುತಿವೆ ಇನಿಯಾ

ಪಲ್ಲಕ್ಕಿ ದಿಬ್ಬಣದಿ ಹೃದಯಗಳ ಬಂಧ
ಬಹು ಪರಾಕ್ ಕೂಗುತಿವೆ
ಪರಾಮರ್ಶೆಯ ಅದ್ಭುತ ಕಲೆ ಆಸ್ತೆಯ
ಘಮಲನು ತೋರುತಿವೆ ಇನಿಯಾ

ಅಭೀಪ್ಸೆಗಳ ಚಾದರದಿ ತುಂಬಿ ತುಳುಕಿದೆ
ಸದಾ ವಾಂಛಲ್ಯದ ಪರಾಕಾಷ್ಟೆ
ವಿಚಾರ ಮಂಥನದಿ ಸಾಕ್ಷಿಗಳು ಭರಪೂರ
ನೆನಪುಗಳನು ಹುಡುಕುತಿವೆ ಇನಿಯಾ

ಅಂಬರದ ಮಿಂಚಿನೊಳಗೆ ನನ್ನವನ
ಮೊಗ ಲಾಲೈಸಿ ಕರೆದಿದೆ ಅನುದಿನ
ಬೆಳದಿಂಗಳ ರಾತ್ರಿಯಲಿ ಅಭಿಯ ಕಂಗಳು
ಕಾದಲನ ಶೋಧಿಸುತಿವೆ ಇನಿಯಾ


About The Author

1 thought on “”

Leave a Reply

You cannot copy content of this page

Scroll to Top