ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್‍ ವಿಶೇಷ

ಇದ್ದು ಹೋಗು

ಅರುಣಾ ನರೇಂದ್ರ

ಕಡತಗಳ ನಡುವೆ
ಒಡೆತನದ ಹಮ್ಮಿ ಲೆ
ಕುಳಿತರೂ
ಅದೇಕೆ ಹಣೆಯ ಮೇಲೆ
ಬೆವರ ಸಾಲು !

ಇಂಗ್ಲಿಷ್ ಅಂಕಿಯ
ಲೆಕ್ಕಾಚಾರ ಬಿಟ್ಟು
ಒಮ್ಮೆ ತಲೆಯೆತ್ತಿ ನೋಡು
ಜಗವೆಷ್ಟು ಸುಂದರ !

ನಿತ್ಯವೂ ನಿನ್ನ ಗೊಣಗಾಟ
ರೇಗಾಟ ಕುರ್ಚಿ ಮೇಜುಗಳಿಗೂ
ತಿಳಿದಿದೆ ಬಿಡು

ಜಗವ ಮೋಹಿಸುವ
ಆ ನಿನ್ನ ನಗುವೆಲ್ಲಿ
ಕಳೆದಿದೆ ಗೆಳೆಯಾ…

ನಗು ಮರೆತ ತುಟಿಗೆ
ಮುತ್ತು ಪೋಣಿಸಲೇ
ಮಂಜಾಗಿ ಮೈ ಸವರಿ
ತಣ್ಣಗಾಗಿಸಲೇ

ಒತ್ತಡಕೆ ಒತ್ತೆಯಾಳಾಗದೆ
ಒಮ್ಮೆಯಾದರೂ
ಬಂದಿದ್ದು ಹೋಗು
ನನ್ನೆದೆಯ ಗಿರಿಧಾಮದಲಿ !


About The Author

2 thoughts on “”

Leave a Reply

You cannot copy content of this page

Scroll to Top