ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಗಜಲ್

ಕಸ್ತೂರಿ ಡಿ ಪತ್ತಾರ

starry heart

ಓಡುವ ಮೋಡ ಮಳೆಸುರಿದು ಹೋಗುವಂತೆ ಇರಬೇಕಿತ್ತು ನಿನ್ನ ಪ್ರೀತಿ
ಮಂಜಹನಿ ಬಿಸಿಲಿಗೆ ಕರಗಿದಂತೆ ಮನದಲಿ ಕರಗಬೇಕಿತ್ತು ನಿನ್ನ ಪ್ರೀತಿ

ಕಮಾನುಕಟ್ಟಿ ಕರಗಿದಂತೆ ಭಾವಕೆ ಒಲವ ಬಳಿಯಬೇಕಿತ್ತು ನಿನ್ನ ಪ್ರೀತಿ
ನೀರಮೇಲಿನ ಗುಳ್ಳೆಯಂತೆ ಅರಕ್ಷಣವಾದರೂ ನಲಿಯಬೇಕಿತ್ತು ನಿನ್ನ ಪ್ರೀತಿ

ಒಂದು ಕ್ಷಣ ಹುಣ್ಣಿಮೆಯ ಮೋಹಕ ಹೊನಲಾಗಿ ಚೆಲ್ಲಬೇಕಿತ್ತು ನಿನ್ನಪ್ರೀತಿ
ಅಂಬುದಿಯೆಂತೆ ಒಮ್ಮೆಯಾದರೂ ಉಕ್ಕುಕ್ಕಿ ಬರಬೇಕಿತ್ತು ನಿನ್ನ ಪ್ರೀತಿ

ವಸಂತಕಾಲದಲ್ಲಿ ವನ ಚಿಗುರುವಂತೆ ಮನದಲ್ಲಿ ಚಿಗುರಬೇಕಿತ್ತು ನಿನ್ನ ಪ್ರೀತಿ
ಬೆಳ್ಮುಗಿಲ ಬಾನಲಿ ಹಾರಾಡುವ ಹಕ್ಕಿಯಂತೆ ಹಾರಾಡಬಹುದಿತ್ತು ನಿನ್ನಪ್ರೀತಿ

ಪ್ರೀತಿಯ ಕುರುಹಾಗಿ ಒಂದಿಷ್ಟಾದರೂ ನನಗೆ ಮೀಸಲಿಡಬೇಕಿತ್ತು ನಿನ್ನ ಪ್ರೀತಿ “ಕಸ್ತೂರಿ”ಯೊಡನೆ ಒಂದರಗಳಿಗೆಯಾದರೂ ಒಲವಿಂದ ಕಳೆಯಬೇಕಿತ್ತು ನಿನ್ನ ಪ್ರೀತಿ.


About The Author

1 thought on “”

Leave a Reply

You cannot copy content of this page

Scroll to Top