ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾ ಬೆಳಕೆ ಮನ್ಮನಕೆ

ಪ್ರಜ್ವಲ್ ಕೌಡಹಳ್ಳಿ,

ಬಾ ಬೆಳಕೆ ಮನ್ಮನಕೆ
ನವತನಕೆ ರೂಪವೆತ್ತಂತೆ
ರೂಪಗಳಾಲಾಪ ಸುಯ್ಯುತಲಿ
ಚೈತ್ರವಾಗು ಮನ್ವನಕೆ ನೀ ಅಂತೆ

ಚಿಂತೆಗಳ ಮಡಿಲಿನಲಿ ಬಯಸೆ ನಿಶ್ಚಿಂತೆ
ನಿತ್ಯ ದೀವಟಿಗೆಯ ಸುಖದ ಜೀವನಕೆ
ಹಸಿರುಗಟ್ಟಿದ ಧರೆ ಉಸಿರು ನೀಡ್ವಂತೆ
ನೆಮ್ಮದಿಯ ಎಲರಿನಲಿ ತಂಪು ಹರುಷಕ್ಕೆ

ನಿಡುಗಟ್ಟಿದ ಮೇಘಗಳನು ಸರಿಸುತಲಿ
ಇನನ ಕಿರಣದಲಿ ಭುವಿಬೆಳಗುವಂತೆ
ಗೊಂದಲದ ಗೋಳಿನಲಿ ಗೌನವಾಗುತಲೀ
ಬಾಳ ಕಡುಪಥವ ನೀ ಹೂ ಮಾಡ್ವಂತೆ

ಬಾ ಬೆಳಕೆ ಮನ್ಮನಕೆ
ರಸವಿರಸರಹಿತವಾಗಿ
ಸಮಚಿತ್ತದ ಶಾಂತಿಯಲೇ
ಸಮರಸದ ಸಾರವಾಗಿ

ವಿನಯವಿಲುಳಿತ ಚೇತನದಿ
ಭಾವ ಮಂಥನದ ಕತ್ತಲೆಯಲ್ಲಿ
ಬಂದು ನೀ ಬೆಳಗು
ಅಂಧನ ಬಾಳಿನ ಕಣ್ಣು ನೀನಾಗಿ

ಮತಿಯ ತಿರುಳೊಳು ಮರುಳ ಹೋಗಿಸಿ
ಕರುಣೆ ಮಂತ್ರದ ಸುಗೋಷಕೆ
ದಯೆಯ ಕಾಣುವ ನಯನ ತೆರೆಸಿ
ಬಾ ನೀನು ಬೆಳಕೇ ಮನ್ಮನಕೆ

====================

About The Author

Leave a Reply

You cannot copy content of this page

Scroll to Top