ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಬಾಗೇಪಲ್ಲಿ ಕೃಷ್ಣ ಮೂರ್ತಿ

ನಿನ್ನೆಡೆಗೆ ನನಗೆ ಏಕೆ ಆಸಕ್ತಿ ಹುಟ್ಟಿತೋ ನಾನರಿಯೆ ಗೆಳತಿ.
ನಿನ್ನ ಸಿಹಿ ನಾಮಧೇಯ ಏಕೆ ಮೋಹದಿ ನನ್ನ ಕಟ್ಟಿತೋ ನಾನರಿಯೆ ಗೆಳತಿ

ಮದುವೆ ಸ್ವರ್ಗದಲಿ ನಿರ್ಧಾರವಾದುದು ಎಂಬ ಗಾದೆಯ ಮಾತಿದೆ
ಸ್ವರ್ಗಾಧಿಪ ಇಂದ್ರಗೆ ನಮ್ಮ ಹೆಸರುಗಳು ಏಕೆ ಮರೆತು ಬಿಟ್ಪಿತೋ ನಾನರಿಯೆ ಗೆಳತಿ.

ಯಾರು ಯಾರನು ನಮ್ಮಲಿ ಮೊದಲು ಕಂಡೆವೋ ನನಗೆ ನೆನಪಿಲ್ಲ
ಯಾರಿಗೆ ಮೊದಲು ಪ್ರೇಮಾಂಕುರ ಆಯಿತೋ ನಾನರಿಯೆ ಗೆಳತಿ

ನಿನ್ನೊಡನೆ ಸಂಭಾಷಣೆಯ ಮಧುರ ಮಾತುಗಳ ಪ್ರಭಾವ ಇರಬಹುದು
ಹಲವು ಮನ್ಮಥನ ಹೂ ಬಾಣದಂತೆ ಚುಚ್ಚಿತೋ ನಾನರಿಯೆ ಗೆಳತಿ.

ಕೃಷ್ಣ ಹೇಳುವ ಅಂದವು ಅನಂದಮಯ ಪ್ರೀತಿಸುವುದು ತಪ್ಪಲ್ಲವೆನುವರು.
ಅಂದ ನನ್ನದಾಗ ಬೇಕೆಂಬ ತಪ್ಪುಗ್ರಹಿಕೆ ಏಕಾಯಿತೋ ನಾನರಿಯೆ ಗೆಳತಿ.


About The Author

1 thought on “ಗಜಲ್”

  1. ತುಂಬಾ ದಿನಗಳ ನಂತರ ನಿಮ್ಮ ಗಜಲ್ ಓದಿ ಸಂತೋಷವಾಯಿತು. ನಿಮ್ಮ ಭೇಟಿ ಮಾಡಿ ಹಲವು ವರ್ಷಗಳಾಗಿದೆ. ಕೈವಾರ ಸಾಹಿತ್ಯ ಸಮ್ಮೇಳನದಲ್ಲಿ ನಿಮ್ಮನ್ನು ನೋಡಿರಬಹುದು.
    ಚಂದ್ರಶೇಖರ, ರಾಮಮೂರ್ತಿನಗರ, ಬೆಂಗಳೂರು.
    9480268372

Leave a Reply

You cannot copy content of this page

Scroll to Top