ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಕ್ಕನೆಂದರೆ ಬರೀ ಅಕ್ಕನಲ್ಲವೋ

ಮಾಲತಿ ಎಸ್. ಆರಾಧ್ಯ

Akka Mahadevi: The Blazing Sun of Bhakti

ಅಕ್ಕನೆಂದರೆ ಬರೀ ಅಕ್ಕನಲ್ಲವೋ
ಆಚಾರ ವಿಚಾರ ಸದ್ವಿಚಾರ ನಮ್ಕಕ್ಕ
ಕನ್ನಡದ ಮೊದಲ ಕವಿಯತ್ರಿ
ಬಸವ ಕಲ್ಯಾಣ ಅನುಭವ ಮಂಟಪದಿ
ಅಲ್ಲಮರ ದಿಟ್ಟ ಪ್ರಶ್ನೆಗಳಿಗೆ ಉತ್ತರವನ್ನಿತ್ತ ದಿಟ್ಟೆ
ನಮ್ಮಕ್ಕ

ಕಾಯಾ ವಾಚಾ ಮನಸಾ ಚೆನ್ನಮಲ್ಲಿಕಾರ್ಜುನನೇ ಪತಿಯಾಗಿ ಸ್ವೀಕರಿಸಿದ ಸಾಧ್ವಿ
ಆರಿಗೂ ಹೆದರದ
ಆತ್ಮಯಾಗಿ
ಆತ್ಮಸಂಗಾತಕೆ ಶಿವನನೇ
ಹೃದಯದೀ ಆರಾಧಿಸುತಾ ವಚನಗಳಲಿ ಸಾಮಾಜಿಕ ಕಳಕಳಿಯ
ಪದಗಳ ಭಿತ್ತಿ
ಜಗಕೆ ಉಣಬಡಿಸಿದ
ಸಂಸ್ಕಾರದ ಬುತ್ತಿ!

ಲೌಕಿಕ ಜಗವ ಧಿಕ್ಕರಿಸಿ
ಕೇಶಾಂಬರೆಯಾಗಿ ನಡೆದ
ಉಡುತಡಿಯ ಶರಣೆ
ಅಕ್ಕರೆಯ ಅಕ್ಕ
ನಮಗೆಲ್ಲಾ ಮಾದರಿ
ಅಲ್ಲಮ ಬಸವ ಸಿದ್ಧರಾಮ ಶರಣರೊಡನೆ ಕಲ್ಯಾಣ
ಕ್ರಾಂತಿದಿ ತೊಡಗಿಸಿ ಚೆನ್ನಮಲ್ಲಿಕಾರ್ಜುನ ಅಂಕಿತದಿ ಹಲವಾರು
ವಚನಗಳ ಕೊಡುಗೆಯಾಗಿ ನೀಡಿ
ಎತ್ತರದ ಚೇತನವಾಗಿ ಬೆಳೆದ
ನಮ್ಮ ಅಕ್ಕ

ಕಿರಿಯ ವಯಸಿನಲ್ಲೇ
ಹಿರಿಯ ಅನುಭಾವ
ಅಸಾಮಾನ್ಯ ಜೀವನ
ಅಕ್ಕನ ಬರಹಗಳು ಎಮಗೆ
ಸಾವಿರ ವರಹಗಳು
ಅಕ್ಕನೆಂದರೆ ಬರೀ ಅಕ್ಕನಲ್ಲವೋ
ಆಚಾರ ವಿಚಾರ ಸವಿಚಾರ ನಮ್ಮಕ್ಕ !!!!!


About The Author

1 thought on “ಅಕ್ಕನೆಂದರೆ ಬರೀ ಅಕ್ಕನಲ್ಲವೋ”

Leave a Reply

You cannot copy content of this page

Scroll to Top