ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಮಾಜಾನ್ ಮಸ್ಕಿ

Sankranti 2022 in Andhra Pradesh and Telangana - Telugu Sankranthi Festival  in 2022 | Hindu Blog

ಸುಗ್ಗಿಯ ಹಬ್ಬ ಕರೆಸಿತು ಸಂಕ್ರಾಂತಿ
ರೈತನಿಗೆ ಹರುಷ ಭರಿಸಿತು ಸಂಕ್ರಾಂತಿ

ದಕ್ಷಿಣಯಣದಿಂದ ಉತ್ತರಾಯಣಕ್ಕೆ ಪಥ
ಭಾಸ್ಕರನ ಪ್ರಖರತೆ ಹೊಮ್ಮಿಸಿತು ಸಂಕ್ರಾಂತಿ

ಬೆಳೆಗೆ ಚೈತನ್ಯ ತೇಜಸ್ಸು ರವಿಯ ಹೊಂಗಿರಣ
ಎಳ್ಳು ಬೆಲ್ಲ ಆರೋಗ್ಯ ವೃದ್ಧಿಸಿತು ಸಂಕ್ರಾಂತಿ

ಶ್ರೀರಾಮ ರಾವಣನನ್ನು ಸಂವಹರಿಸಿದ ದಿನ ಇದು
ಪೂರ್ವಜರನ್ನು ಮನೆ ಅಂಗಳಕ್ಕೆ ತರಿಸಿತು ಸಂಕ್ರಾಂತಿ

ಶೀತ ವಾತ ಆಲಸ್ಯ ಜಡ್ಡು ಓಡಿಸಿ “ಮಾಜಾ”
ಸ್ನೇಹದಿ ಸವಿಯ ಮಾತು ಕಲಿಸಿತು ಸಂಕ್ರಾಂತಿ


About The Author

Leave a Reply

You cannot copy content of this page

Scroll to Top