ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಹಗಲು ವೇಷ ತೊಟ್ಟವರಲ್ಲ ನಾವು
ಕಾಲಿಗೆ ಗೆಜ್ಜೆಕಟ್ಟಿ ಕುಣಿಯುವರಲ್ಲ ನಾವು

ನಾನಾ ಪರಿಯ ಅನುಭವ ಪಡೆಯುವುದೇಕೆ
ಜಗದಿ ಜಂಗಮರಂತೆ ತಿರುಗುವರಲ್ಲ ನಾವು

ಶಿರದಲ್ಲೊಂದು ಗಂಟು ಹೊತ್ತು ನಡೆದೆವಲ್ಲ
ಉರಗದ ತೆರದಲಿ ಹರಿಯುವರಲ್ಲ ನಾವು

ಗೇಣುಹೊಟ್ಟೆ ತುಂಬಿಸಲು ನೂರೆಂಟು ಆಟ
ಬಿಡಾರದಲಿ ಶಾಶ್ವತದಲಿ ಇರುವವರಲ್ಲ ನಾವು

ಹರಿದ ಎಕ್ಕಡದಂತೆ ಬಾಳು ನರಕವಾಗಿದೆ
ಹಿಲಾಲಿನ ಬೆಳಕನ್ನು ನೋಡುವವರಲ್ಲ ನಾವು

ಮೃಷ್ಟಾನ್ನಕ್ಕೆ ಕೈಗಳನ್ನು ಬೊಗಸೆ ಒಡ್ಡಲಿಲ್ಲ
ಕಣ್ಣೆತ್ತಿ ಮೇಲೊಮ್ಮೆ ದಿಟ್ಟಿಸುವರಲ್ಲ ನಾವು

ಮುಖಕ್ಕೆ ಬಣ್ಣಹಚ್ಚಿ ನಗಿಸುತಿಹನು ಅಭಿನವ
ಸುಖದಲಿ ತೇಲುತ ಸಾಯುವವರಲ್ಲ ನಾವು


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top