ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಏನಿದು ಆವಾಂತರ

10,560,210 Art Stock Photos, Pictures & Royalty-Free Images - iStock

ಮೋಸ ಸುಲಿಗೆ ದುರ್ಜರ
ಕೋಪ ಆಕ್ರೋಶದ ಆಗರ
ಸೇಡು ಕಟುಕತನ ಭೀಕರ
ದುಃಖ ದುಗುಡ ತರತರ

ಅವಮಾನ ಅಪಚಾರದ ಹಾಹಾಕಾರ
ನೋವು ನಷ್ಟ ರಣಭಯಂಕರ
ಎಲ್ಲೆಂದರಲ್ಲಿ ಅನ್ಯಾಯ ಅತ್ಯಾಚಾರ
ನರಳಾಟ ಕಿರುಚಾಟ ಮುಗಿಲೆತ್ತರ
ಕಾರಣ ಮಾತ್ರ ಅಗೋಚರ

ವಿಧಿಯೇ ನಿನ್ನ ಲೀಲೆಗೆ ಜಗವೆ ತತ್ತರ
ನಿನ್ನ ಆಟಕ್ಕೆ ಜೀವನ ಅಸ್ಥಿರ
ಯಾರ ಹಮ್ಮಿನ ಲೆಕ್ಕವೂ ಇಲ್ಲಿ ಅತಂತ್ರ
ನಿನ್ನಾಟದೊಳಗೆ ಎಲ್ಲವೂ ತ್ರಣ ಮಾತ್ರ

ತಪ್ಪು ಮಾಡಿದರೆ ನಿನ್ನ ಪ್ರಹಾರ
ಸಹಿಸಲು ಬೇಕು ಧೈರ್ಯ ಅಪಾರ
ಮನುಷ್ಯ ಪ್ರಕೃತಿಯ ಕುಮಾರ
ತಲೆಮೇಲೆ ಕರ್ಮದ ಋಣ ಭಾರ

ಹೆಣಗದಿರು ಸ್ಥಾಪಿಸಲು ನಿನ್ನ ಸರ್ವಾಧಿಕಾರ
ಸಮಯಕ್ಕಿದೆ ಎಲ್ಲವ ಬದಲಿಸುವ ಪರಮಾಧಿಕಾರ
ದುಡುಕಿ ಬದುಕ ಕಳೆಯದಿರು ಬರ್ಬರ
ಪ್ರೀತಿ ಸಹನೆಯ ತೋರು ನಿತ್ಯ ನಿರಂತರ


ಶಾಲಿನಿ ಕೆಮ್ಮಣ್ಣು

About The Author

Leave a Reply

You cannot copy content of this page

Scroll to Top