ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಪ್ಪಾ ನೀನು ಇರಬೇಕಿತ್ತು

ರಜಿಯಾ ಕೆ ಭಾವಿಕಟ್ಟಿ

pencil sketch old man | Portrait drawing, Pencil drawings of girls, Girl  face drawing

ಅಪ್ಪಾ ನೀನು ಇರಬೇಕಿತ್ತು
ನಾನೀಗ ಬೆಳದು ದೊಡ್ಡವನಾಗಿದ್ದೆನೆ
ನಿನ್ನೆಲ್ಲ ಆಸೆಗಳನ್ನು ನಾ ಸ್ವಲ್ಪಮಟ್ಡಿಗಾದರೂ ಈಡೇರಿಸುತ್ತಿದ್ದೆ.ಅದಕೆ ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು
ಅಮ್ಮನೊಂದಿಗೆ ಜೊತೆಯಾಗಿ
ನಾನೊಮ್ಮೆ ಅದನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ . ಅದಕೇ ನೀ ಇರಬೇಕಿತ್ತು.

ಅಪ್ಪ ನೀ ಇರಬೇಕಿತ್ತು
ಅಕ್ಕ ಅಣ್ಣ ತಮ್ಮ ತಂಗಿ ಎಲ್ಲರೊಟ್ಟಿಗೆ ನೀನು ಇನ್ನೂ ಹೆಚ್ಚುಕಾಲ ಉಳಿಯಬಹುದಿತ್ತು.
ಅದಕೇ ನೀ ಇರಬೇಕಿತ್ತು.

ಅಪ್ಪ ನೀ ಇರಬೇಕಿತ್ತು
ನಿನ್ನ ಮತ್ತು ಅಮ್ಮ ಹೆಸರನ್ನ
ನಮ್ಮ ಹೊಸ ಮನೆಗೆ ಇಟ್ಟಗಾ ಅದನ್ನು ನೋಡಿ ಸಂತೋಷಪಡಲು
ಅಪ್ಪ ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು
ಇಲ್ಲ ಸಲ್ಲದವರೆಲ್ಲ ಆಡಿಕೊಂಡು
ನಗಾಡುವಾಗ ಗದ್ಗಗರಿಸಲು ಒಮ್ಮೆ ಅವರಿಗೆಲ್ಲ ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು.
ನಾನು ಶುದ್ದ ಪರಿಪೂರ್ಣ ವ್ಯಕ್ತಿಯಾಗಿ ಇರುವಾಗ ನನ್ನ ಏಳಿಗೆಯನ್ನು ನೀ ಬೆನ್ನುತಟ್ಟಲು
ಅಪ್ಪ ನೀ ಇರಬೇಕಿತ್ತು

ಅಪ್ಪ ನೀನು ಇರಬೆರಕಿತ್ತು
ಹಬ್ಬ ಹರಿದಿನಗಳು ಮನೆಯ ಮದುವೆ ಮುಂಜಿ ಸಂತಸ ಸಂಭ್ರಮದಲ್ಲಿ ನೀ ನಗುತ್ತ ನಮ್ಮೊಂದಿಗೆ ಅಪ್ಪ ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು
ಅಮ್ಮನ ಆರೋಗ್ಯ ಹದಗಟ್ಟೆ
ಸ್ಥಿತಿಯಲ್ಲೂ ಸಂಬಧಿಗಳೇ ಮೂಗು
ಮುರಿಯುವಾಗ ಬೆನ್ನುಗಾವಲಾಗಿ ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು
ಆಪ್ತರೆಲ್ಲ ನಮ್ಮಿಂದ ಏನು ಆಗದು
ಎಂದರೂ ನಾವು ಎದೆಗುಂದದೆ
ನಿನ್ನ ಇರುವಿಕೆಯ ನೆನಪಲ್ಲೇ ಎಲ್ಲವನೂ ಜಯಿಸಿದಾಗ ಅದನ್ನು ಕಣ್ತುಂಬಿಕೊಳ್ಳಲು ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು
ಸಮಾಜದಲ್ಲಿ ನೀ ನಿಮ್ಮ ಅಪ್ಪನಂತೆ
ಎಂದು ಎಲ್ಲರೂ ಹರಸಿ ಆರೈಸಿ
ನನ್ನ ಮುಗ್ದ ಮನಸ್ಸನ್ನು ಒಪ್ಪಿಕೊಂಡಾಗ ಅದನ್ನು ನೋಡಿ ಹರುಷ ಪಡಲೂ ನೀ ಇರಬೇಕಿತ್ತು.

ಅಪ್ಪ ನೀನು ಇರಬೇಕಿತ್ತು
ನಮ್ಮೊಟ್ಟಿಗೆ ನಾ ಮತ್ತಷ್ಟು ಖುಷಿಪಡುತ್ತಿದ್ದೆ ನೀ ನನ್ನ ಚಿಕ್ಕ ಮಗನೆಂದು ಹೆಮ್ಮೆಪಟ್ಟಾಗ ಒಂದು ಹನಿ ಸಂತೋಷ ಕಂಬನಿ ಮಿಡಿದು
ನಾನು ನಿನ್ನ ಅಪ್ಪಿಕೊಳ್ಳುತ್ತಿದ್ದೆ.
ಅಪ್ಪ ನೀ ಇರಬೇಕಿತ್ತು.

ಅಪ್ಪ ನೀ ಇರಬೇಕಿತ್ತು …..


About The Author

3 thoughts on “ಅಪ್ಪಾ ನೀನು ಇರಬೇಕಿತ್ತು”

  1. H, showkath ali madduru.

    ತುಂಬ ಭಾವುಕ ಕವಿತೆ, ಅಪ್ಪನನ್ನು ನೆನೆದು ಕಣ್ ತುಂಬಿ ಬಂತು, ಅಪ್ಪ ಓದುಗರ ಪಾಲಿಗೆ ಒಂದು ಸುಂದರವಾದ ಕವಿತೆ, ಆದರೂ ಮರೆಯಲಾಗದಂಥ ಜೀವನನುಭವ, ಅಭಿನಂದನೆಗಳು

Leave a Reply

You cannot copy content of this page

Scroll to Top