ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಮತ್ತೆ ಹಾರಿತು ಹಕ್ಕಿ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಮತ್ತೆ ಹಾರಿತು ಹಕ್ಕಿ” ಮುರಿದ ರೆಕ್ಕೆಗಳ ನೋವನುಮರೆತಂತೆ ಕಂಡ ಆ ಹಕ್ಕಿ,ಗಾಳಿಯ ಕ್ರೂರ ಕೈಗಳಲ್ಲಿ ಸಿಲುಕಿನೆಲಕ್ಕೊಮ್ಮೆ ಬಿದ್ದಿತ್ತು. ಆಕಾಶವೆಂದರೆ ಕನಸು,ಹಾರಾಟವೆಂದರೆ ಬದುಕು,ಎಂದು ತಿಳಿದ ಅದರ ಕಣ್ಣಲ್ಲಿಅಂದು ಕತ್ತಲೆ ತುಂಬಿತ್ತು. ಗೂಡಿನ ಮೂಲೆಗೊಮ್ಮೆ ಕುಳಿತುಗಾಯಗಳನ್ನೇ ಎಣಿಸುತ್ತ,“ಇನ್ನು ಹಾರಲಾರೆನೋ?” ಎಂಬಮೌನದ ಪ್ರಶ್ನೆಯೊಂದಿತ್ತು. ಬೆಳಗಿನ ಮೊದಲ ಕಿರಣಅದರ ರೆಕ್ಕೆಗೆ ಮುತ್ತಿಟ್ಟಾಗ,ಒಣಗಿದ್ದ ಕನಸಿನೊಳಗೊಂದುಹೊಸ ವಸಂತ ಮೂಡಿತು. ಗಾಳಿಯೇ ಮತ್ತೆ ಕರೆದಿತು“ಬಾ, ಹೆದರಬೇಡ!” ಎಂದಿತು,ಬಿದ್ದ ನೆಲವನ್ನೇ ಮೆಟ್ಟಿಲಾಗಿಸಿಆ ಹಕ್ಕಿ ಮೇಲೇರಿತು. ಒಮ್ಮೆ… ಎರಡು ಬಾರಿ…ರೆಕ್ಕೆಗಳು ನಡುಗಿದವು,ಆದರೂ ಸೋಲಿನ ನೆನಪುಗಳ ಮೇಲೆಧೈರ್ಯದ ಗೀತೆ ಬರೆದವು. ಈ ಬಾರಿ ಕೇವಲ ಆಕಾಶಕ್ಕಲ್ಲ,ತನ್ನೊಳಗಿನ ಭಯದಾಚೆಗೆ;ಈ ಬಾರಿ ಕೇವಲ ಬದುಕಿಗಲ್ಲ,ಬದುಕಿನ ಅರ್ಥದಾಚೆಗೆ. ಬಿರುಗಾಳಿಗಳು ಬಂದರೂಇನ್ನು ಅದು ನಿಲ್ಲುವುದಿಲ್ಲ,ಮುರಿದ ರೆಕ್ಕೆಗಳ ಇತಿಹಾಸವನ್ನೇಸೋಲಿನ ಕಥೆ ಎನ್ನುವುದಿಲ್ಲ. ಬೀಳುವುದು ಅಂತ್ಯವಲ್ಲ,ಕಣ್ಣೀರು ದೌರ್ಬಲ್ಯವಲ್ಲ;ಮತ್ತೆ ಎದ್ದು ಹಾರುವ ಕ್ಷಣವೇಜೀವನದ ನಿಜವಾದ ಜಯಗಾಥೆ! ಆಕಾಶ ವಿಶಾಲವಾಗಿತ್ತು,ದಿಕ್ಕುಗಳು ಕೈಬೀಸಿ ಕರೆದವು,ಬಂಧನಗಳೆಲ್ಲ ಕೆಳಗಿಳಿದಾಗಸ್ವಾತಂತ್ರ್ಯ ಹಾಡಾಗಿ ಮೊಳಗಿತು. ಮತ್ತೆ ಹಾರಿತು ಹಕ್ಕಿ…ಮುರಿದ ರೆಕ್ಕೆಗಳನ್ನೇ ಬಲವಾಗಿಸಿಕೊಂಡು,ಸತ್ತ ಕನಸುಗಳನ್ನೇ ಜೀವವಾಗಿಸಿಕೊಂಡು,ತನ್ನ ಸೋಲನ್ನೇ ಮೆಟ್ಟಿಲಾಗಿಸಿಕೊಂಡು— ಮತ್ತೆ ಹಾರಿತು ಹಕ್ಕಿ…ಈ ಬಾರಿಆಕಾಶವನ್ನೇ ತನ್ನದಾಗಿಸಿಕೊಂಡುಕೇವಲ ಹಕ್ಕಿಯಾಗಿ ಅಲ್ಲ,ಸೋಲಿನ ಸಮಾಧಿಯ ಮೇಲೆಗೆಲುವಿನ ಗೀತೆ ಹಾಡುವಸ್ವಾತಂತ್ರ್ಯದ ಪ್ರತೀಕವಾಗಿ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಮತ್ತೆ ಹಾರಿತು ಹಕ್ಕಿ” Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಲೆಕ್ಕವೇ ಇಲ್ಲ” ಎದೆ ಗೂಡಲಿ ಬಚ್ಚಿಟ್ಟ ಕನಸುಗಳಿಗೆ ಲೆಕ್ಕವೇ ಇಲ್ಲಬಿರಿದ ಭಾವನೆಗಳ ನೋಟಗಳಿಗೆ ಲೆಕ್ಕವೇ ಇಲ್ಲ ಸುಳಿ ಗಾಳಿಯಲಿ ಒಮ್ಮೆಯೂ ಪಿಸುಗೂಡಬಾರದೆಹಿಡಿದಿಟ್ಟ ಬಯಕೆಗಳು ನೀಲ ನೀಲಿಯಲಿ ಸೇರುವ ಸಾಲಿಗೆ ಲೆಕ್ಕವೇ ಇಲ್ಲ ಮೋಹ ಮಧುವಿಗೆ ವಾಸ್ತವವೇ ಮರೆತು ಬಿಟ್ಟಿರುವೆತೀರದ ಬಯಕೆಗಳ ಹರಿವ ನೀರಿಗೆ ತೇಲುವ ದಾರಿಗೆ  ಲೆಕ್ಕವೇ ಇಲ್ಲ ಮಾಮರ ಕೋಗಿಲೆ ಮೂಕ ಮರ್ಮರ ತಾಳಿದೆಕಟ್ಟಿದ ಗೋಪುರಕೆ ಕಳಸ ಬಿದ್ದು ಶೋಕಗೀತೆಗೆ ಲೆಕ್ಕವೇ ಇಲ್ಲ ಒಲವ ಭಾವದ ವೀಣೆ ತಂತಿ ನುಡಿಸುವುದೇ ಮರೆತು ಬಿಟ್ಟಿದೆಕಹಿ ಬೇವು ಜಗಿಯುತ ರೇಶಿಮೆ ದೂಡುವ ದಿನಗಳಿಗೆ ಲೆಕ್ಕವೇ ಇಲ್ಲ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ” Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ‌ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಜ್ವಲಿಸುವ ಪ್ರೀತಿಯ ಸಹಿಸಿ ನುಂಗಲೆಂಗ ಹೇಳುಸುಡುವ ಕೆಂಡವ ಕಟ್ಟಿಕೊಂಡು ತಾಳಲೆಂಗ ಹೇಳು ಬಯಕೆ ಬಾಂದಳ ತೋಟ ನಳನಳಿಸುತಿದೆ ನೋಡುಒಲವಿನೊರತೆಯ ಒತ್ತರವ ತಡೆಯಲೆಂಗ ಹೇಳು ಮನಸು ಕಂಡ ಆಸೆಯೆಲ್ಲಾ ಫಲಿಸದೆಂದು ನಾ ಬಲ್ಲೆಪ್ರೇಮದುಯ್ಯಾಲೆಯ ಏರಿಳಿತ ತಾಳಲೆಂಗ ಹೇಳು ಜೀವ ಜೀವಕಂಟಿದ ನಂಟಿನ ಗಂಟು ಬಿಡಿಸಲುಂಟೆಪ್ರೇಮಾಮೃತವೇ ವಿಷವಾದರೆ ಬಾಳಲೆಂಗ ಹೇಳು ಒಡಲಾಳ ವಿರಹ ಭೋಗ೯ರೆತಕೆ ಸಿಕ್ಕು ತಪ್ತವಾಗಿದೆತುಟಿಯ ಮಧು ಹೆಪ್ಪುಗಟ್ಟಿದರೆ ಉಸುರಲೆಂಗ ಹೇಳು ಸರಸವಿಲ್ಲದ ಕೋಲಾಹಲ ಅವುಡುಗಚ್ಚಿಸಿ ಚುಚ್ಚುತಿದೆಹಾರಬೇಕೆನುವ ಬಯಕೆ ಪುಕ್ಕವ ಕತ್ತರಿಲೆಂಗ ಹೇಳು ಹುಚ್ಚೆದ್ದ ಆಸೆಗಳ ಸೊಕ್ಕನೆಲ್ಲ ಮುರಿಯಲಾಗುತಿಲ್ಲಕುದಿವ ಬೆಚ್ಚನೆಯ ಆ  ಭಾವ ಹೊಚ್ಚಲೆಂಗ ಹೇಳು ಅನುಳೆದೆಯಲ್ಲೆ ಅಚ್ಚಾದ  ಚಿತ್ರ ಕೊಚ್ಚಿ ಕತ್ತರಿಸಲುಂಟೆಚಿತ್ತ ಬಿತ್ತಿಯ ನೆನಪು ವಿಧಿ ಚೋರಗ ಒಪ್ಪಿಸಲೆಂಗ ಹೇಳು// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ‌ ಗಜಲ್ Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” ​ತಲ್ಲಣಗಳೆಲ್ಲ ಮೀರಿದಮೇಲೆ—ಕದ ತಟ್ಟಿದೆ ನೀನು;ದೀಪ ಹಚ್ಚುವ ತವಕವೇ ಇರಲಿಲ್ಲ ನನಗೆ,ನೀನು ಹೊತ್ತಿಸಿದ ಬೆಳಕಿಗೆಕತ್ತಲೆ ಗೋಳಾಡಿ ಕರಗಿತು. ​ಒಡೆದು ಗಾಯಗೊಂಡಅಪರಾಹ್ನದ ಕನಸಿಗೆ,ಬಂದೆರಗಿದ ತಂಗಾಳಿತಲೆ ಸವರಿದಂತಿತ್ತು;ಇಂಗಿಹೋದ ಒಣ ಹಂಗುಕಂಬಳಿಯ ಮರೆಯಲ್ಲಿಮುತ್ತೈದೆಯಂತೆಪಿಸುಗುಟ್ಟಿತು. ​ನೆನಪು ಕೊಯ್ದ ಕಂಬನಿ,ಟಪಕ್ಕನೆ ಉದುರಿತೆರೆಯ ಮರೆಯಲ್ಲಿನೆಲ ಹಿಡಿಯಿತು;ಹಳಸಲು ಪ್ರೀತಿಯಹಿಲಾಲು ಒಗೆದುಇಸ್ತ್ರಿ ಹಾಕಿ ನೀನುಲೇಪನ ಹಚ್ಚಿದರೂ—ಲವಲವಿಕೆಯೇ ಲೇವಡಿ ಮಾಡಿತು! ​ನೀನು ಬಂದದ್ದುತುಸು ತಡವಾಯ್ತೇನೋ…?ಕತ್ತಲು ಮುಸುಕಿದ ತೇವದಲಿಒಣಗಿಹೋದ ಶಬ್ದಗಳುಗದ್ಗದಿಸಿ ಬಿಕ್ಕಳಿಸಿದವು;ಬಹು ಬಿರಿಯಾದ ಎದೆಯೊಳಗೆಉತ್ತರವಿಲ್ಲದ ಪ್ರಶ್ನೆಗಳುಮತ್ತೆ ನರಳಿಸಿದವು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ ಅವರ ಗಜಲ್ ಬಾಲರವಿಯು  ಕದ್ದನೇನು  ಅವಳ ಅಧರದ  ಕೆಂಪನು  ಸಾಕಿಗುಲಾಬಿ  ಹೂವು ಬೇಡಿತೇ ನಲ್ಲೆಯ  ಕೆನ್ನೆಯ  ರಂಗನು  ಸಾಕಿ ಅದೇಕೆ  ಬಾನು ನೀರಸಗೊಂಡಿದೆ  ಮೇಘ ಮುಸುಕಿನಲಿಚಂದ್ರಿಕೆಯು  ಸೆಳೆಯಿತೇ ನನ್ನವಳ  ಮೈಯ  ಬಿಳುಪನು  ಸಾಕಿ ಹೂದೋಟವೆಲ್ಲವೂ  ಘಮಘಮಿಸಿದೆ ಅರಳಿದರಳುಗಳ ಸೌಗಂಧದಿಂದಭ್ರಮರ  ಬೆರಗುಗೊಂಡಿತೇ ಕಂಡು ಚೆಲುವೆಯ ಕುರುಳನು  ಸಾಕಿ ಕಡಲ ಅಲೆಗಳು ನಗುತಿವೆ  ಒಯ್ಯಾರದಲಿ  ದಡವ ಚುಂಬಿಸುತಲಿಕಾರ್ಮೋಡ  ಚಕಿತಗೊಂಡಿತೇ ನೋಡಿ  ಕಂಗಳ  ಕಾಡಿಗೆಯನು  ಸಾಕಿ ಠೀವಿಯಲಿ  ಗರಿಗೆದರಿ ಕುಣಿಯುತಿದೆ  ನವಿಲೊಂದು  ದೂರದಲಿಹೃದಯ ಹಾಡುತಿಹುದೇ ರಾಗವಾಗಿ  ಬೇಗಂ ಳ ಒಲವನು ಸಾಕಿ ಹಮೀದಾಬೇಗಂ ದೇಸಾಯಿ.

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಇಲ್ಲೊಂದಿಷ್ಟು ಸಹಿಸಲಾಗದ್ದನ್ನು ಸಹಿಸಬೇಕಿದೆ ನೋಡುಕೆಲವೊಂದಿಷ್ಟು ಕೇಳಲಾಗದ್ದನ್ನು ಕೇಳಿಸಬೇಕಿದೆ ನೋಡು ಅವರಿವರ ಡೊಂಬರಾಟದ ಹೋರಾಟಗಳಾಗಾಗ ನೋಡುತ್ತಿರುಮೂರು ಮಂಗಗಳು ಉದಾಹರಣೆ ತಿಳಿಸಬೇಕಿದೆ ನೋಡು ನ್ಯಾಯ ಪ್ರಾಮಾಣಿಕತೆಗಳ ಮೂಟೆ ಕಟ್ಟಿ ಮೂಲೆ ಸೇರಿವೆಬಕೆಟ್ ಹಿಡಿದು ಬದುಕುವವರಿಗೆ ಬಿಸಿ ಮುಟ್ಟಿಸಬೇಕಿದೆ ನೋಡು ಇಲ್ಲಿ ತಿಳಿದು ತಿಳಿಯದಂತಿಹರು ಅನೇಕಾನೇಕ ಬುದ್ಧಿವಂತರುಕತ್ತಲೆಯಲ್ಲಿ ಅಡಗಿದವರಿಗೆ ಜ್ಞಾನದ ಕಿಡಿ ಹೊತ್ತಿಸಬೇಕಿದೆ ನೋಡು ಮತ್ತೊಮ್ಮೆ ಅವತಾರವೆತ್ತಬೇಕಿದೆ ಶ್ರೀಹರಿ ಭೂಗರ್ಭದಲ್ಲಿ ರೇಖೂಮುಂದಿನ ಪೀಳಿಗೆಗಾದರೂ ಸಂಸ್ಕಾರಗಳ ಕಲಿಸಬೇಕಿದೆ ನೋಡು ರೇಖಾಕ್ಷರ

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಇಂದಿಗೆ ಬಾಳಲಿ ನಿನ್ನ ನನ್ನ ಹಿಸಾಬ್ ಚುಕ್ತಾ ಆಯ್ತುಮಂದಿಗೆ ಬಾಯಲಿ ನಮ್ಮಿಬ್ಬರ  ಕಿತಾಬ್ ಮಕ್ತಾ ಆಯ್ತು ಹೃದಯದಿಂದ ಲೆಕ್ಕದ ಪನ್ನಾಪನ್ನಾ ಕಿತ್ತು ಬಿಸಾಕಿದ್ದೇನೆಧೋಕಾ ಎಲ್ಲ ಸರಿಸಿದಾಗ ಬಜಾರಿನಲೇ ನಕಾಬ್ ಬಯಲಾಯ್ತು  ರಂಗಿಗೆ ಬಂಗು ಹತ್ತಿದಾಗ ಎಲ್ಲಿದೆ ಹೇಳು ಖೂಬ್ಸೂರ್ತಿಕಟ್ಟ ಕಡೆಗೆ ನಿನ್ನೆಲ್ಲ ಕರ್ತುತಗಳಿಗೆ ಜವಾಬ್ ಕೊಟ್ಟಾಯ್ತು ನಂಬಿಕೆಗಳ ಮೇಲೆಯೆ ನಂಬಿಕೆ ಸತ್ತು ಹೋಗಿದೆ ನನ್ನಲ್ಲಿನಟ್ಟನಡುರಾತ್ರಿಯಲೇ ರಾತ್ರಿಯಲೇ ನಕ್ಷತ್ರಗಳ ಶಬಾಬ್ ಹೊರಟೋಯ್ತು  ಸ್ವಪ್ನಗಳ ಸವಾರಿ ಮಾಡಿ ಆಸೆ ತೀರ ಮುಟ್ಟಲಿಲ್ಲ ಜ್ಯೋತಿ ಬದುಕಿನ ನಶೆ ಏರುವ ಮುನ್ನವೇ ಜಾಮಿನಿಂದ ಶರಾಬ್ ಚೆಲ್ಲೋಯ್ತು ಜ್ಯೋತಿ ಮಾಳಿ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” ಪ್ರತಿ ಮುಂಜಾನೆಯುನನ್ನ ಮನೆ ಕಿಟಕಿಯ ಮುಂದೆಸೂರ್ಯೋದಯ ಬಂದು ನಿಲ್ಲುತ್ತದೆ!ಅದನ್ನು ತೆರೆಯುವ ಕೀಲಿಕೈಈ ಕಾಂಕ್ರೀಟಿನ ಮನೆ ಅಡಿಪಾಯದೊಳಗೆಹೂತುಹೋಗಿದೆ! ಈ ಮನೆಯ ಗೋಡೆಗಳುಇಟ್ಟಿಗೆ ಗಾರೆಯಿಂದಲ್ಲಅರ್ಧಕ್ಕೆ ಮುರಿದ ಸಂಭಾಷಣೆಗಳಿಂದಕಟ್ಟಲ್ಪಟ್ಟಿವೆ!ಅವುಗಳ ನಡುವೆಒಂದು ನಗು ಸಿಕ್ಕಿಕೊಂಡುವರ್ಷಗಳಿಂದ ಪ್ರತಿಧ್ವನಿಯಾಗಲು ಕಲಿಯುತ್ತಿದೆ! ನಗರದ ರಸ್ತೆಗಳುಮನುಷ್ಯರ ಕಾಲುಗಳನ್ನುಗಮ್ಯದ ಕಡೆಗೆ ಕರೆದೊಯ್ಯುವುದಿಲ್ಲ!ಹೆಜ್ಜೆಗಳ ನೆನಪುಗಳನ್ನುಡಾಂಬರಿನ ಕೆಳಗೆ ಸಮಾಧಿ ಮಾಡುತ್ತವೆ! ನನ್ನ ನೆರಳು ಸಂಜೆಯಾಗುತ್ತಿದ್ದಂತೆನನ್ನನ್ನು ಬಿಟ್ಟುಬೀದಿದೀಪದ ಕೆಳಗೆ ಕೆಲಸಕ್ಕೆ ಸೇರಿಕೊಳ್ಳುತ್ತದೆ! ರಾತ್ರಿ ಮನೆಗೆ ಬಂದಾಗಕನ್ನಡಿಯ ಮುಖದಲ್ಲೂ ನನ್ನಷ್ಟೇ ಆಯಾಸ! ಕನ್ನಡಿಯೊಳಗಿನ ನಾನು ಪ್ರತಿದಿನಸ್ವಲ್ಪ ಸ್ವಲ್ಪವಾಗಿ ಪಾರದರ್ಶಕನಾಗುತ್ತಿದ್ದೇನೆಮುಖ ಮರೆತು ಹೋಗದಂತೆ! ಮರಗಳು ಈಗಎಲೆಗಳನ್ನು ಉದುರಿಸುವುದಿಲ್ಲಹಕ್ಕಿಗಳ ವಿಳಾಸಗಳನ್ನುಒಂದೊಂದಾಗಿ ಕೆಳಗೆ ಬೀಳಿಸುತ್ತಿವೆ! ಗಾಳಿಯ ಕೈಯಲ್ಲಿ ಹೂವಿನ ಪರಿಮಳವಿಲ್ಲಬೀಗ ಹಾಕಿದ ಮನೆಗಳಕೊನೆಯ ನಿಟ್ಟುಸಿರನ್ನು ಹೊತ್ತು ತಿರುಗುತ್ತಿದೆ! ನಾನು ಇನ್ನೂ ಆಕಾಶವನ್ನು ನೋಡುತ್ತೇನೆಅದು ಮೇಲಿಲ್ಲನನ್ನ ಕಣ್ಣಿನಲ್ಲಿ ಬಿರುಕು ಬಿಟ್ಟ ನೀಲಿ ಬಣ್ಣವಾಗಿಮೆಲ್ಲಗೆ ಉದುರುತ್ತಿದೆ! ಆಕಾಶದಿಂದ ಬೀಳುವಪ್ರತಿ ಹನಿಯುಸತ್ತ ಕನಸಿನ ಕೊನೆಯ ಬೆಳಕು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” Read Post »

ಕಾವ್ಯಯಾನ, ಗಝಲ್

ಸುಕನಸು ಅವರ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ನಾನಿರದ ಬದುಕಲಿ ನೀ ಸಂತಸದಿಂದಿದ್ದರೆ ಬೇರೇನು ಬೇಕೆನಗೆನಿನ್ನದೆ ಲೋಕದಲಿ ನೀ ಬಯಸಿದಂತಿದ್ದರೆ ಬೇರೇನು ಬೇಕೆನಗೆ ಒಲವ ಮಳೆಯಲಿ ಜೊತೆ ನೆನೆದ ನೆನಪು ನನ್ನ ಪಾಲಿಗಿದೆಯಲ್ಲಲಾಲಸೆ ಮತ್ತಿನಲಿ ನೀ ಓಲಾಡುತಲಿದ್ದರೆ ಬೇರೇನು ಬೇಕೆನಗೆ ಹಾರೈಸುವೆ ನಿನ್ನ ಸಂಕಷ್ಟದ ದೆಸೆಗಳು ನನ್ನೊಂದಿಗೆ ತೆರಳಲಿಸುಯೋಗದೊಂದಿಗೆ ನಿನ್ನ ಗೆಳೆತನವಿದ್ದರೆ ಬೇರೇನು ಬೇಕೆನಗೆ ಕಂಡೆನಂದೇ ನಾ ಜೊತೆಯಲಿರೆ ಅನ್ಯರೆಡೆಗೆ ವಾಲಿದ ನಿನ್ನ ಒಲವಅವರೊಲವೊಂದಿಗೆ ಹೊಂದಾಣಿಕೆಯಿದ್ದರೆ ಬೇರೇನು ಬೇಕೆನಗೆ ನೀ ಬಯಸಿದ ಬಯಕೆಗಳ ನಾ ಪೂರೈಸಲು ಸೋತೆನೇನೊ ನಲ್ಲನಿನ್ನಿಚ್ಚೆಗೆ  ರೂಪಕೊಡುವ ಗೆಣಿಕಾರರಿದ್ದರೆ ಬೇರೇನು ಬೇಕೆನಗೆ ಮಲ್ಲಿಗೆ ಸುಮ ಪರಿಮಳಕಷ್ಟೆ, ಮುಡಿದವರ ನಸೀಬು ತಿದ್ದಲಾಗದುಅದೃಷ್ಟದೊಂದಿಗೆ ನಿನ್ನ  ಒಪ್ಪಂದವಾಗಿದ್ದರೆ ಬೇರೇನು ಬೇಕೆನಗೆ ಸುಕನಸು

ಸುಕನಸು ಅವರ ಗಜಲ್ Read Post »

ಕಾವ್ಯಯಾನ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ”

ಕಾವ್ಯ ಸಂಗಾತಿ ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” ಭೀಮನ ಅಮಾವಾಸ್ಯೆಯಂದುನನ್ನ ಪಾದಗಳ ಮೇಲೆನೀ ಹೂವಿಟ್ಟಾಗನಿನ್ನ ಬೆರಳ ತುದಿಯ ಸ್ಪರ್ಶದಲ್ಲಿನನ್ನ ಹೃದಯನಿನ್ನ ಹೆಸರನ್ನೇ ಜಪಿಸಿತ್ತು ನೀ ಅದನ್ನು ಪೂಜೆ ಎಂದೆ,ನನಗದು ಪೂಜೆಯಾಗಿರಲಿಲ್ಲನನ್ನ ಬದುಕಿಗೆನೀ ನೀಡಿದ ಪ್ರೀತಿಯಮೌನ ಪ್ರಮಾಣವಾಗಿತ್ತು ನಿನ್ನ ಕಂಗಳಲ್ಲಿಆ ಕ್ಷಣ ಕಂಡ ಭಕ್ತಿಗಿಂತನಿನ್ನ ಹೃದಯದಲ್ಲಿದ್ದನನ್ನ ಮೇಲಿನ ಪ್ರೀತಿಯೇನನ್ನನ್ನು ಹೆಚ್ಚು ತಲೆಬಾಗಿಸಿತ್ತು ಇಂದು ಬೇಬಿಮಾ…ನಿನ್ನ ಪಾದಗಳ ಮುಂದೆಕೈಗಳನ್ನಿಡುವ ಸರದಿ ನನ್ನದು ನೀ ಇಷ್ಟು ವರ್ಷನನ್ನ ಬದುಕಿನ ದಾರಿಯಲ್ಲಿನನ್ನೊಂದಿಗೆ ನಡೆದಿರುವೆಈಗ ನಿನ್ನ ಪಾದಗಳಿಗೆ ಹೂವಿಡುವಾಗಆ ಹೂವಿನೊಂದಿಗೆನನ್ನ ಕೃತಜ್ಞತೆಯನ್ನೂ ಇಡುವೆ. ಕಷ್ಟದ ದಿನಗಳಲ್ಲಿ ಮುಖ ನೋಡಿಕೊಂಡೇನನ್ನ ನೋವನ್ನು ಅರಿತವಳು ನೀನುನನ್ನ ಸೋಲಿನ ದಿನಗಳಲ್ಲಿ“ನಾನಿದ್ದೇನೆ” ಎಂದುನನ್ನ ಕೈ ಹಿಡಿದವಳು ನೀನು. ನಾನು ಕುಗ್ಗಿದಾಗನನ್ನೊಳಗೆ ಧೈರ್ಯ ತುಂಬಿದವಳುನಾನು ಮೌನವಾದಾಗನನ್ನ ಮೌನವನ್ನು ಓದಿದವಳುನಾನು ಗೆದ್ದಾಗನನಗಿಂತ ಹೆಚ್ಚು ಸಂತೋಷಪಟ್ಟವಳು ನೀನೇ ಅಲ್ಲವೇ ಬೇಬಿಮಾ… ನನ್ನ ಬಾಳ ಬಾಗಿಲಿಗೆನೀ ಕಾಲಿಟ್ಟ ದಿನದಿಂದಈ ಮನೆಕೇವಲ ಗೋಡೆಗಳ ಮನೆಯಲ್ಲನಿನ್ನ ನಗುವಿನಿಂದಮನೆಯಾಯಿತುನಿನ್ನ ಮಮತೆಯಿಂದಮಂದಿರವಾಯಿತುನಿನ್ನ ಹೆಜ್ಜೆ ಗುರುತುಗಳಿಂದನನ್ನ ಬದುಕಾಯಿತು ನಿನ್ನ ಪಾದದ ಗೆಜ್ಜೆಯ ನಾದವೇನನ್ನ ಬೆಳಗಿನ ರಾಗನಿನ್ನ ಹೆಜ್ಜೆಯ ಸದ್ದೇನನ್ನ ಸಂಜೆಯ ನಿರೀಕ್ಷೆನೀ ಹತ್ತಿರವಿದ್ದರೆಮೌನವೂ ಮಾತಾಗುತ್ತದೆನೀ ದೂರವಿದ್ದರೆಮಾತುಗಳಿದ್ದರೂಮನಸ್ಸು ಮೌನವಾಗುತ್ತದೆ ಬಾ ಬೇಬಿಮಾ…ನಿನ್ನ ಪಾದಗಳನ್ನುಒಮ್ಮೆ ನನ್ನ ಮಡಿಲಲ್ಲಿರಿಸುಹೂವಿಡುವ ನೆಪದಲ್ಲಿನಿನ್ನ ಕೈ ಹಿಡಿದುಒಂದು ಮಾತು ಹೇಳಬೇಕು“ನನ್ನ ಬದುಕಿಗೆನೀ ಬಂದದ್ದುನನ್ನ ಅದೃಷ್ಟವಲ್ಲನನ್ನ ಬದುಕೇನಿನ್ನಿಂದ ಅದೃಷ್ಟವಾಯಿತು” ನಿನ್ನ ಪಾದಗಳಿಗೆನಾನು ಬಾಗುವಾಗನಿನ್ನ ಭಗವಂತನಾಗಿ ಇರುವುದಿಲ್ಲನಿನ್ನ ಪ್ರೀತಿಯಲ್ಲಿಜೀವಮಾನವಿಡೀಸೋತು ಬದುಕಲು ಬಯಸುವಒಬ್ಬ ಪ್ರೇಮಿಯಾಗಿ ಬಾಗುವೆ ನೀ ನನ್ನ ಅರ್ಧಾಂಗಿಯೆಂದುಹೇಳುವುದು ಬಹಳ ಸಣ್ಣ ಮಾತುನೀ ನನ್ನ ಬದುಕಿನಅರ್ಧವಲ್ಲ ಬೇಬಿಮಾ—ನನ್ನ ಬದುಕಿನಪೂರ್ಣ ಅರ್ಥ ನೀನು ನನ್ನ ನಗುವಿನ ಹಿಂದೆನಿನ್ನ ಮಮತೆಯಿದೆನನ್ನ ಧೈರ್ಯದ ಹಿಂದೆನಿನ್ನ ನಂಬಿಕೆಯಿದೆನನ್ನ ಪ್ರತಿಯೊಂದು ಹೆಜ್ಜೆಯ ಹಿಂದೆನಿನ್ನ ಮೌನ ಪ್ರಾರ್ಥನೆಯಿದೆ ನಾನು ಹೊರಗೆಜಗತ್ತಿನ ಮುಂದೆಎಷ್ಟೇ ದೊಡ್ಡವನಾಗಿ ನಿಂತರೂಮನೆಗೆ ಮರಳಿದಾಗನಿನ್ನ ಒಂದು ನೋಟಕ್ಕಾಗಿಕಾಯುವ ಸಾಮಾನ್ಯ ಮನುಷ್ಯ ನಾನು ನಿನ್ನ ಪಾದಗಳ ಮೇಲೆಒಂದು ಹೂವಿಡುವೆಅದರೊಳಗೆನನ್ನ ಕೃತಜ್ಞತೆಒಂದು ಮುತ್ತಿಡುವೆಅದರೊಳಗೆನನ್ನ ಜೀವಮಾನ ಪ್ರೀತಿ ಒಂದು ಕ್ಷಣಕಣ್ಣುಮುಚ್ಚುವೆಆ ಕ್ಷಣದಲ್ಲಿನನ್ನ ಮನಸ್ಸುಒಂದೇ ಒಂದು ಪ್ರಾರ್ಥನೆ ಮಾಡುವುದು “ದೇವರೇ,ಮುಂದಿನ ಏಳೇಳು ಜನ್ಮಗಳಲೂಮತ್ತೆ ಈ ಮಲ್ಲಿಗೆ ಸುಮವನ್ನೇ ಕೊಡುಅವಳ ಪಾದಗಳ ಬಳಿಯೇಮತ್ತೊಮ್ಮೆ ನನ್ನ ಬದುಕನ್ನುಆರಂಭಿಸುವ ಅವಕಾಶ ಕೊಡು” ನಿನ್ನ ಪಾದಪೂಜೆನನ್ನ ಭಕ್ತಿಯಲ್ಲ ಬೇಬಿಮಾ;ನೀ ನನ್ನನ್ನುಎಷ್ಟು ಪ್ರೀತಿಸಿದ್ದೀಯೋಅದಕ್ಕಿಂತಲೂ ಹೆಚ್ಚು ಪ್ರೀತಿಯಿಂದನಿನ್ನನ್ನು ಗೌರವಿಸುವನಮ್ಮ ದಾಂಪತ್ಯದ ಹಬ್ಬ ಇದುಗಂಡ ಹೆಂಡತಿಗೆ ಬಾಗಿದ ಕ್ಷಣವಲ್ಲಎರಡು ಹೃದಯಗಳುಒಬ್ಬರಿಗೊಬ್ಬರು“ನೀ ಇಲ್ಲದೆ ನಾನು ಪೂರ್ಣನಲ್ಲ”ಎಂದು ಅಪ್ಪಿಕೊಂಡ ಕ್ಷಣ ನೀ ಬರಿ ನನ್ನ ಹೆಂಡತಿಯಲ್ಲ…ನನ್ನ ಉಸಿರು,ನನ್ನ ನೆಮ್ಮದಿ,ನನ್ನ ಮೌನದ ಭಾಷೆ,ನನ್ನ ಕಣ್ಣೀರಿನ ಅರ್ಥ,ನನ್ನ ನಗುವಿನ ಕಾರಣ,ನನ್ನ ಸುಕನಸು,ನನ್ನ ಬದುಕು… ನನ್ನ ಕೊನೆಯ ಉಸಿರಿನವರೆಗೂನಿನ್ನ ಕೈ ನನ್ನ ಕೈಯಲ್ಲಿರಲಿನನ್ನ ಕೊನೆಯ ಹೆಜ್ಜೆಯವರೆಗೂನಿನ್ನ ಹೆಜ್ಜೆ ನನ್ನ ಹೆಜ್ಜೆಯ ಜೊತೆಯಿರಲಿಜೊತೆ ಜೊತೆಯಾಗಿ ಈ ಸಂಸಾರ ನೌಕೆ ಸಾಗಿಸೋಣ ರತ್ನರಾಯಮಲ್ಲ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” Read Post »

You cannot copy content of this page

Scroll to Top