ಪರವಿನ ಬಾನು ಯಲಿಗಾರ ಅವರ “ನಾರಿ”
ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ನಾರಿ” ನೀನೇಷ್ಟುಸಾಧಿಸಿದರೆನು ,ತಪ್ಪುತ್ತಿಲ್ಲವಲ್ಲ ನಿನ್ನ ಮೇಲಿನ ದೌರ್ಜನ್ಯ . ನೀನೇಷ್ಟು ಓದಿದರೆನು , ನಿನ್ನ ಪಾಲಿನನ್ಯಾಯಕ್ಕಗಿ ನಿ ಹೋರಾಡುವುದು ತಪ್ಪಲಿಲ್ಲ. ನೀನ್ಯಾವ ಅಧಿಕಾರ ಪಡೆದರೇನು ,ನಿನಗೇ ರಕ್ಷಣೆ ಇನ್ನೂ ಸಿಕ್ಕಿಲ್ಲ . ನೀನೆಷ್ಟು ಹಕ್ಕಿನ ಪಾಠ ಮಾಡಿದರೇನು ,ನಿನ್ನ ಮನೆಯಲ್ಲೇ ನಿನ್ನ ಹಕ್ಕು ಗೌಣ . ನಿನಗೆಷ್ಟು ಪದವಿ ಪುರಸ್ಕಾರ ದಕ್ಕಿದರೇನು ,ನಿನಾಗಿರುವೆ ಮತ್ತೊಬ್ಬರ ಅಡಿಯಾಳು . ನೀ ಛಾಪು ಮೂಡಿಸಿದರೆನು ,ಅನ್ಯ ಗೃಹದಲ್ಲಿ ಕಾಲೂರಿ ,ನಿನಗೇ ನೆಲೆ ಇಲ್ಲ , ನೀ ಇರುವಲ್ಲಿ . ನೀನಾಗಿರುವೆ ಯಾವಾಗಲೂ ದ್ವಿತೀಯಳು ,ಆದರೆ , ಆದ್ವಿತೀಯಳಾಗುವ ದಿನ ಬಂದೆ ಬರುವುದು , ಒಂದು ದಿನ ….. ——————— ಪರವೀನ ಬಾನು ಯಲಿಗಾರ
ಪರವಿನ ಬಾನು ಯಲಿಗಾರ ಅವರ “ನಾರಿ” Read Post »









