“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್
ಕಾವ್ಯ ಸಂಗಾತಿ “ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ ನನ್ನವನ ಸ್ವಗತ ನೀನಿಲ್ಲದೆ….. ಏಳಬೇಕು ಎಬ್ಬಿಸಲು ನೀನಿಲ್ಲಅಲಾರಾಂ ಹೊಡೆದುಕೊಳ್ಳುತ್ತದೆಈಗ ನಿನಗೆ ನಾನೇ ಗತಿ ಏಳುತ್ತೇನೆ ಅಡುಗೆ ಮನೆ ಕಡೆ ನೋಡುತ್ತೇನೆ.ಬಳೆಗಳ ಸದ್ದಿಲ್ಲದೆ ಸುಮ್ಮನಾಗುತ್ತೇನೆಪೆದ್ದನಂತೆ ಬಿಸಿ ನೀರು ಕಷಾಯ ಕಾಫಿ ಕುದಿಸುವವರಿಲ್ಲನಾನೇ ಕುದಿಯುತ್ತೇನೆ ಒಮ್ಮೊಮ್ಮೆಎದುರಾಳಿ ನೀನಿಲ್ಲದೆ ಕಸಗುಡಿಸಿ ನೀರು ಚಿಮುಕಿಸುತ್ತೇನೆತಳಿವುಂಡ ಅಂಗಳ ಅಣಕಿಸುತ್ತದೆರಂಗೋಲಿ ಎಳೆಯುವ ನೀನಿಲ್ಲದೆ ಅಡುಗೆ ಮನೆಯೊಳಗೆ ಬರುತ್ತೇನೆಏನಾದರೊಂದನ್ನು ಬೇಯಿಸಿಕೊಳ್ಳಲೇಬೇಕುಹೊರಗಡೆ ಏನನ್ನು ತಿನ್ನುವ ಹಾಗಿಲ್ಲ ಮೂರು ಗೆರೆ ದಾಟಲಾರದ ಸಂಕಟಕೈಸುಟ್ಟುಕೊಳ್ಳುವುದುಅನಿವಾರ್ಯ ನಾನು ನಳನಂತೆ ಅಲ್ಲದಿದ್ದರೂ ಒಲೆಯ ಮೇಲಿಟ್ಟ ಹಾಲು ಉಕ್ಕದಂತೆಮಾಡಲಿಟ್ಟ ಉಪ್ಪಿಟ್ಟು ತಳ ಹತ್ತದಂತೆನೋಡಿಕೊಳ್ಳಬೇಕು ಮೈ ತುಂಬಾ ಕಣ್ಣಾಗಿ ಸ್ನಾನಕ್ಕೆ ಬಿಟ್ಟುಕೊಂಡ ಬಿಸಿನೀರುತುಂಬಿ ಹೊರ ಚೆಲ್ಲುತ್ತದೆಗ್ಯಾಸ್ ವೇಸ್ಟ್ ಆಗುತ್ತೆ ಎಂದು ಮಕ್ಕಳಿಗೆ ಬಯ್ಯುವನಾನು ಈಗ ಅವಳಿಲ್ಲದೆ ನಾನೇ ಮಗುವಾಗಿದ್ದೇನೆ ಏನೊಂದು ತೋಚದು ಅವಸರದಲ್ಲಿಟಿಫಿನ್ ಬಾಕ್ಸ್ ಸಿದ್ಧಗೊಳಿಸಿಕೊಳ್ಳುವುದುದೊಡ್ಡ ಯುದ್ದದಿನವೂ ಅವಳ ಮೆನು ಮೆಸೇಜ್ನೋಡಿ ಸಾಕಾಗಿ ಬಿಟ್ಟಿದೆ ಸ್ವೀಟ್ ಅಂತೆ ಹಣ್ಣಂತೆ ಕಾಳುಗಳಂತೆಮತ್ತೆ ಮೇಲೆ ಟಿಫನ್ ಅಂತೆಅಯ್ಯೋ…. ಯಾಕಾದರೂಹೋದಳೊ ಇವಳು ಊರಿಗೆ ಏನಾದರೊಂದು ಮರೆಯುತ್ತೇನೆಗಡಿಬಿಡಿಯಲ್ಲಿ ಪುಸ್ತಕ ಪೆನ್ನು ಡೈರಿಒಮ್ಮೊಮ್ಮೆ ಮೊಬೈಲ್ ಬೈಕ್ ಕೀ ಮತ್ತೆ ಒಳಗೆ ಬರುತ್ತೇನೆಹಿಂಬಾಗಿಲು ಮುಂಭಾಗಲುಲಾಕ್ ಮಾಡಿದ್ದೇನೊ ಇಲ್ಲವೋಎನ್ನುವ ಸಂಶಯ ಹೀಗೆ …. ಅವಳು ಹೋದಾಗಿನಿಂದದಿನಚರಿಯ ದಿಕ್ಕು ತಪ್ಪಿದೆ ————– ಡಾ. ಮೀನಾಕ್ಷಿ ಪಾಟೀಲ್
“ನನ್ನವನ ಸ್ವಗತ, ನೀನಿಲ್ಲದೆ” ಡಾ.ಮೀನಾಕ್ಷಿ ಪಾಟೀಲ್ Read Post »









