ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಜಗವು ಉರಿಯುತಿದೆ ಜೀವಿಗಳು ನರಳುತಿವೆ ನೀ ಸುಮ್ಮನಿರುವಿಹೃದಯಗಳು ಬೆಂಕಿಯಲಿ ಬಿದ್ದು ಬೇಯುತಿವೆ ನೀ ಸುಮ್ಮನಿರುವಿ ಕಂದಮ್ಮಗಳು ಹುಡುಕುತಿವೆ ಹೆತ್ತವರನು ನೆತ್ತರಿನಲಿ ನೋಡುದೀನರು ಕಂಡ ಕನಸುಗಳು ಮಣ್ಣಾಗುತಿವೆ ನೀ ಸುಮ್ಮನಿರುವಿ ವಿಶ್ವದಲ್ಲಿ ನಾನೆಂಬ ಅಹಂಕಾರದ ಕಹಿ ಕಳೆಯು ಬೆಳೆಯುತಿದೆನಂಬಿದ ದೈವಗಳೆಲ್ಲಾ ಸಾಯುತಿವೆ ನೀ ಸುಮ್ಮನಿರುವಿ ನಿತ್ಯ ಉರುಳುತಿವೆ ರಾಶಿ ಹೆಣಗಳು ಅಂತ್ಯಕ್ರಿಯೆ ಇಲ್ಲದೆಯೇಭೂಮಂಡಳದಲಿ ಮಸಣಗಳು ಬೆಳೆಯುತಿವೆ ನೀ ಸುಮ್ಮನಿರುವಿ ಪ್ರೀತಿಯಲಿ ಎಲ್ಲರನು ಬಂಧಿಸುವ ಶಕ್ತಿಯು ನಿನಗಿದೆ ಪ್ರಭೆದ್ವೇಷ ಅಸೂಯೆಯ ಬಾಂಬುಗಳು ಸಿಡಿಯುತಿವೆ ನೀ ಸುಮ್ಮನಿರುವಿ ಪ್ರಭಾವತಿ ಎಸ್ ದೇಸಾಯಿ
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »









