ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು”

ಅಮ್ಮನ ಸಂಗಾತಿ ಡಾ.ದಾನಮ್ಮ ಝಳಕಿ “ಅವ್ವ ಆಲದ ನೆರಳು” ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…!*ಅವ್ವ ಆಲದ ನೆರಳು* ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…! ಡಾ.‌ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು” Read Post »

ಕಾವ್ಯಯಾನ

ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ”

ಕಾವ್ಯ ಸಂಗಾತಿ ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ” ಜೀವ ತಂತು ದಾಟಿ ಬಂತುಹತ್ತು ಮೈಲಿಗಲ್ಲನುಗಟ್ಟಿಯಾಗಿ‌ ಸಾಗಿಸುತ್ತಬಾಳ ಸುಖದ ತೇರನು ಎರಡು ಮುತ್ತು ಮುದದಿ ಹೆತ್ತುಮಧುರ ಪ್ರೇಮ ಕಾಣ್ಕೆಗೆನೀಡಿ ನೀನೆ ಸಾಕ್ಷಿಯಾದೆಸಹಯೋಗದ ಬಾಳ್ವೆಗೆ ಕ್ಷುದ್ರ ಮೂಲದಿಂದಗಾಧಸೃಷ್ಟಿಗರ್ಭ ವಿಸ್ಮಯಎನಿತು ಬಾಳೊ ಏಸು ಒಡಲೊತನಗೆ ತಾನೆ ತನ್ಮಯ ಉದಧಿ ತಲದಿ ನಭದ ತುದಿಗೆಸಚೇತನದ ಸರಿಗಮಫಲ ಹೇತುಕ ಪರಿಣಾಮದಗೌಣ ಭಾವ ಸಂಭ್ರಮ ನಿತ್ಯ ನಲಿವ ಅಪ್ರಮೇಯಜೀವಕೋಟಿಯಂತೆಯೇನಮ್ಮದೊಂದು ಪಾಲು ಇರಲಿಜಗದ ಸಂತೆಯಂತೆಯೇ  ಸಂತೋಷಕುಮಾರ ಅತ್ತಿವೇರಿ

ಸಂತೋಷಕುಮಾರ ಅತ್ತಿವೇರಿ “ದಾಂಪತ್ಯ ದಶಕ” Read Post »

ಕಾವ್ಯಯಾನ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ”

ಕಾವ್ಯ ಸಂಗಾತಿ ನಿಂಗಮ್ಮ ಭಾವಿಕಟ್ಟಿ “ವಿಚಿತ್ರ ಅಮ್ಮ” ತಿಂಗಳೆಚ್ಚರವಿದ್ದುಬೆಳದಿಂಗಳ ಸ್ನಾನಮಾಡುವ ಅಮ್ಮ ನಕ್ಷತ್ರಗಳೊಂದಿಗೆಆಡುವ ಅಮ್ಮ ಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ  ಒಬ್ಬಳೇ ನಗುತಯಾವುದೋ ಮಂತ್ರಗುನುಗುಣಿಸುತ ಓಡಾಡುವ ಎಲ್ಲಾ ಕಾಯಿಲೆಗೂಮದ್ದು ಹೇಳುವ ಅಮ್ಮಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ ಎಲ್ಲ ಮಕ್ಕಳನ್ನುಮುಟ್ಟಿ ನಗಿಸುವಪಕ್ಕದ ಮನೆ ಗಿಡಕುನೀರು ಹನಿಸುವ ಅಮ್ಮವ್ಯಕ್ತಿ ವಸ್ತುಗಳ ಭೇದವರಿಯದೆ ಧನ್ಯವಾದ ಹೇಳುವಅಮ್ಮ ಒಮ್ಮೊಮ್ಮೆಹುಚ್ಚಿ ಎನಿಸಿ ಬಿಡುತ್ತಾಳೆ  ಹಸಿವೆಯ ಹಾಸಿಹೊದ್ದು ಎದ್ದು ಬಂದ ಆಕೆಗೆಲ್ಲರ ಹಸಿವೆಯ ಸದ್ದು ಗೊತ್ತು ಮುತ್ತಿನೊಂದಿಗೆ ಪ್ರೀತಿಬಡಿಸುವ  ವಿಚಿತ್ರ ಅಮ್ಮ ಅಲ್ಲ ಆಕೆ ಹುಚ್ಚಿ ಅಲ್ಲಮಕ್ಕಳು ನೆರೆಯವರಿಗೆಲ್ಲ ಪ್ರೀತಿ ಸಹಾಯ ಕರುಣೆಗಳಹುಚ್ಚು ಹಿಡಿಸಿದವಳು ಹೊಳೆಯುವ ಮೊದಲೇ ಹೋಗಿ ಹೊಳೆಯತೊಡಗಿದಳು ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ” Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ “ನೀ ಹೀಗೇಕೆ ಮಾಡಿದೆ” ಈ ಭೂಮಿಯ ಮೇಲೆಒಳ್ಳೆಯ ಜನರನ್ನು ಹುಟ್ಟಿಸಿಅವರ ನಡುವೆ ಕೆಟ್ಟವರನ್ನು ಸೃಷ್ಟಿಸಿಕಾಡಿಸಲು ಪೀಡಿಸಲು ಬಿಟ್ಟೆನೀ ಹೀಗೇಕೆ ಮಾಡಿದೆ… ಕಾಡಿನಲ್ಲಿ ಮುಗ್ಧ ಪ್ರಾಣಿಗಳನ್ನುಸ್ವಚ್ಛಂದವಾಗಿ ಅಲೆಯಲು ಬಿಟ್ಟೆಅವನ್ನು ಹಿಂಸಿಸಿ ತಿನ್ನಲುಕ್ರೂರ ಪ್ರಾಣಿಗಳ ಚೂಬಿಟ್ಟೆನೀ ಹೀಗೇಕೆ ಮಾಡಿದೆ… ಕೂಡಿ ಬಾಳಲು ದುಡಿದು ತಿಂದುನಲಿಯಲು,ಹಗಲನು ಸೃಷ್ಟಿಸಿದೆಕಳ್ಳಾಟ-ಅಕ್ರಮಗಳ ಮಾಡಲುಕತ್ತಲು ಕರುಣಿಸಿದೆನೀ ಹೀಗೇಕೆ ಮಾಡಿದೆ… ಪ್ರೀತಿ ಅಂತ:ಕರಣ ಮಾನವನ ಎದೆಯಲ್ಲಿ ನೆಟ್ಟೆಮನದಲ್ಲಿ ವಿಷ ಬೀಜ ಬಿತ್ತಿಕ್ರೂರಿ ಅತ್ಯಾಚಾರಿಅನಾಚಾರಿಯಾಗುವ ಮನಸನಿಟ್ಟೆನೀ ಹೀಗೇಕೆ ಮಾಡಿದೆ.. ಡಾ. ಗೀತಾ ದಾನಶೆಟ್ಟಿ, ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ನೀ ಹೀಗೇಕೆ ಮಾಡಿದೆ” Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” ಯಾವ ಶಿಲ್ಪಿಯೂ ಕೆತ್ತಲಾಗದಕಲಾವಿದನ ಕೈ ಚಳಕಕೂ ನಿಲುಕದಪರಮಾನಂದದ ನಿಮ್ಮ ನಗುಬದುಕಿನ ಪಾಠ ಹೇಳುತಿವೆ ನಮ್ಮೊಡನಿರುವ ಜೀವಂತ ದೇವರುಗಳುಅವರೊಡನಾಟವೇದೇವನೊಲುಮೆಯ ನೋಟಸುಖ ದುಃಖಗಳಸಮ್ಮಿಲನದ ‌ಸ್ಪೂರ್ತಿಯ ಪಾಠ ಮುಖದ ತುಂಬಾಚೈತನ್ಯದ ಚಿಲುಮೆಹೊತ್ತುಹೇಳುತಿರುವಿರಿಬಾಳೆಂಬ ಹೋರಾಟದನಗುವಿನ ಮೌಲ್ಯಬಲ್ಲವನ ಬೆಲ್ಲದ ಸವಿಮಧುರ ಮಿಲನದ ಸಂತೃಪ್ತಿ ಏನಿದ್ದರೇನ್ ಬಾಳಲಿನೆಮ್ಮದಿಯೊಂದಿಲ್ಲದಿದ್ದರೆಮಕ್ಕಳಾಟದಿ ಮೈಮರೆತುನೋವ ಮರೆತು ನಲಿವ ಕಾಣಬೇಕುಆ ಸತ್ಯ ಕಾಣುವ ಮನಸುನಮದಾಗಲಿಹರಸಿ ಹಾರೈಸಿ ಮಕ್ಕಳೇ ಶಿವಕುಮಾರ ಕೋಡಿಹಾಳ ಮೂಡಲಗಿ

ಶಿವಕುಮಾರ ಕೋಡಿಹಾಳ ಮೂಡಲಗಿ “ನಿಷ್ಕಲ್ಮಶ ನಗು” Read Post »

ಕಾವ್ಯಯಾನ

ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ”

ಕಾವ್ಯ ಸಂಗಾತಿ ಬನಶ್ರೀ ಹತ್ತಿ ವಿಜಯಪುರ “ಮರೆಯಾದ ನನ್ನಪ್ಪ” ಬೆನ್ನ ಹಿಂದೆ ಬೆಟ್ಟದಂತೆ ನಿಂತಿದ್ದೆ,ಕಣ್ಣ ಮುಂದೆ ದಾರಿದೀಪವಾಗಿದ್ದೆ.ನಿನ್ನ ಕೈ ಹಿಡಿದು ನಡೆದ ಹಾದಿಇಂದಿಗೂ ನನ್ನ ಬಾಳ ಹಸಿರು,ಇಂದು ನೀನಿಲ್ಲದೆ ಬದುಕುಬರೀ ಬಳಲಿಕೆಯ ಉಸಿರು. ನನ್ನ ಸಣ್ಣ ತಪ್ಪುಗಳ ತಿದ್ದಿ ಬುದ್ದಿ ಹೇಳುತ್ತಿದ್ದೆ,ಕಷ್ಟ ಬಂದಾಗ ಧೈರ್ಯ ತುಂಬಿನಗು ಬೀರುತ್ತಿದ್ದೆ.ನೀನು ಹಾಕಿಕೊಟ್ಟ ಹಾದಿಯೇ ನನ್ನಾಸ್ತಿನಿನ್ನ ನೆನಪುಗಳೇ ನನ್ನ ಜೀವನದ ಬುತ್ತಿ. ಅಪ್ಪ ಅಂದರೆ ಕೇವಲ ಎರಡಕ್ಷರವಲ್ಲ,ಒಂದು ದೊಡ್ಡ ಆಲದ ಮರ,ನೀನಿಲ್ಲದ ಈ ಬಾಳು ಈಗ ಮರುಭೂಮಿಮರೆಯಾದರೂ ನೀನು ನನ್ನಎದೆಯ ಗೂಡಿನಲ್ಲಿರುವೆ,ನನ್ನ ಪ್ರತಿ ಯಶಸ್ಸಿನಲ್ಲೂ ನಿನ್ನ ದಿವ್ಯ ಚೇತನ ನೀನು ಮರೆಯಾಗಿ ಹೋಗಿಲ್ಲಇಲ್ಲಿಯೇ ಭೂಮಿ ಬೆಳೆ ಮಳೆಯಲ್ಲಿರುವೆಆಗಾಗ ನಿನ್ನ ತುಂತರ ಹನಿನನ್ನ ಕಣ್ಣೀರು ಮರೆಸುವವು ಅಪ್ಪಅಪ್ಪ ಮತ್ತೊಮ್ಮೆ ಬಂದು ಪ್ರೀತಿ ತೋರು ಬನಶ್ರೀ ಹತ್ತಿ ವಿಜಯಪುರ

ಬನಶ್ರೀ ಹತ್ತಿ ವಿಜಯಪುರ ಅವರ ಕವಿತೆ “ಮರೆಯಾದ ನನ್ನಪ್ಪ” Read Post »

ಕಾವ್ಯಯಾನ

ಮಹಾಂತೇಶ್‌ ಬಿ ನಿಟ್ಟೂರು ಅವರ ಕವಿತೆ “ನೆಲದ ಎದೆ ಅಗ್ನಿಕುಂಡ”

ಕಾವ್ಯ ಸಂಗಾತಿ ಮಹಾಂತೇಶ್‌ ಬಿ ನಿಟ್ಟೂರು “ನೆಲದ ಎದೆ ಅಗ್ನಿಕುಂಡ” ಹಾಗೂ ಹೀಗೂ ಹೇಗೋ ಮರ ಬೆಳೆದುದೊಡ್ಡದಾಗಿ ಮೈ ಕೈ ತುಂಬಿಕೊಳ್ಳಲು; ಫಲಕ್ಕಾಗಿ ಸರತಿಯ ಸಾಲುಕೆಲವೊಮ್ಮೆ ನೂಕುನುಗ್ಗಲು ಒಂದು ಗುಂಪು ಚೀಲ ಹಿಡಿದು ನಿಂತಿದೆಹಣ್ಣು ಹಂಪಲು ತುಂಬಿಕೊಳ್ಳಲು ಇನ್ನೊಂದು ಗುಂಪು ಪಾತ್ರೆ ಹಿಡಿದು ಕೂತಿದೆಕೊಂಬೆ ರೆಂಬೆಗಳ ಮೇಲಿಟ್ಟಿಹಜೇನುರಸ ಹಿಂಡಿ ತೆಗೆಯಲು ಮತ್ತೊಂದು ಗುಂಪು ಬುಟ್ಟಿಹಿಡಿದು ಕಾಯುತ್ತಿದೆಹಕ್ಕಿ-ಪಕ್ಷಿಗಳಿಟ್ಟ ಮೊಟ್ಟೆ ಹೊತ್ತು ಸಾಗಲುಕೊನೆಗೆ ಬೇಟೆಯಾಡಿ ಬೇಯಿಸಿ ತಿನ್ನಲು ಅಲ್ಲೊಂದು ತಂಡ ಮಚ್ಚು, ಕೊಡಲಿಗರಗಸ ತಂದು ಸುತ್ತುವರೆದಿದೆಆದಷ್ಟು ಬೇಗ ಕಡಿದು ಬುಡಮೇಲು ಮಾಡಿಮನೆ ಮಾರಿಗೆ ನಾಟಾ ಮಾಡಿಸಲುಓಲೈಕೆಯ ಒಲೆ ಉರಿಸಲು ಇಲ್ಲೊಂದು ಸಮೂಹ ಹೊಂಚಿ ಕೂತಿದೆಗಾಳಿಗೋ, ಮಳೆಗೋ ಬಿದ್ದ ಕೂಡಲೇ ಮರಆ ಜಾಗ ಕಬ್ಜಾ ಮಾಡುವ ಹುನ್ನಾರ….. ಪ್ರಕೃತಿಯ ಸುಕೃತಿಗಳಾದಮರ ಗಿಡ ಬಳ್ಳಿಯ ಪರಿವಾರವನ್ನುನೆಟ್ಟು ಬೆಳೆಸದೇ ಅಟ್ಟು ಉಣ್ಣುವಪರಮ ಸ್ವಾರ್ಥಿಗಳೀ ನೀಚ ನಡೆಗೆಕಲ್ಪವೃಕ್ಷಗಳ ಕಲ್ಪನಾತೀತ ವೇದನೆಗೆಮುಗಿಲು ಕೆಂಡ, ನೆಲದ ಎದೆ ಅಗ್ನಿಕುಂಡ ! ಮಹಾಂತೇಶ್‌ ಬಿ ನಿಟ್ಟೂರು    

ಮಹಾಂತೇಶ್‌ ಬಿ ನಿಟ್ಟೂರು ಅವರ ಕವಿತೆ “ನೆಲದ ಎದೆ ಅಗ್ನಿಕುಂಡ” Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಇಂಗದ ಬಾಯಾರಿಕೆ” ​ಬಿಸಿಲ ಶಲಾಕೆಇಳಿದು ಚುಚ್ಚಿದೆಹೃದಯದಟ್ಟದ ಆಳಕೆ;ಬತ್ತಿಸಿ ಪ್ರಾಣದ ಒರತೆಯಉಳಿದಿದೆ— ಇಂಗದ ಬಾಯಾರಿಕೆ. ​ಅರಿಯದ ನೋವುಅಸ್ಥಿ-ಮಾಂಸವ ಕೊರೆಯಲು;ಬೆವರಿನ ನದಿಯಲಿಹುಡುಕುವ ಹಾದಿಯೇಬಸವಳಿದ ಮನಕೆ ಕಿರು ಆಸರೆ. ​ಹೆಜ್ಜೆಗಳು ಭಾರವಾಗಿ,ಬೆಳಕೇ ಬೆಂಕಿಯ ಮಳೆಯಾಗಿ;ದಿಗಂತದಲಿ ನಿಂತುಜೀವ ಹಿಂಡುವಾಗ—ಸೋಲೊಪ್ಪದೆ ವಿಧಿಯಿಲ್ಲವೇ? ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ” Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು”

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” ಬೆಂದ ಜೀವದ ಬೇಗೆನಂದಿಸುವವರು ಯಾರುಹಸಿವಿನ ನರಳಾಟದಲ್ಲಿಸಾಯುತ್ತಿರುವವರು ನಾವು ಸಂಕಟದಲ್ಲಿ ಕೂಗಾಡಿದರೆಮೂರಡಿಯಲ್ಲಿ ಹೂಳುವರುತೋಪು ಬಂದೂಕುಗಳಿಲ್ಲದೆಹತವಾಗುತ್ತಿರುವ ಜೀವಗಳು ಹಸಿವಿನ ಚೀಲ ಬೆನ್ನು ಏರಿದೆಶಾಂತಿ ನೆಮ್ಮದಿಯ ವೇದಾಂತಗುನುಗುಟ್ಟುತ್ತಾ ಕಿವಿ ತಟ್ಟಿದೆಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ ಬಾಳೊಂದು ಮಾಯೆ ಎಂದರು ಅನುಭಾವಿಗಳುಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆಮೆರೆಯುತ್ತಿದೆ ಏಕೆ? ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಸುವ ಮಂತ್ರವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…ಒಮ್ಮೆ ತಿಳಿಸು ಮನವವೇ… ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ್ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ್ ಗಜಲ್ (ಲಕ್ಷ್ಮಣ ಶರೆಗಾರ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )ನನಗೆಲ್ಲವೂ ಆದವನ ಮೇಲೆಯೇ, ಎಲ್ಲರಿಗಿಂತಹೆಚ್ಚು ಶಿಕಾಯತ್ ಇವೆಯೆಂದು ಯಾರಿಗೆ ಹೇಳಲಿಬೇಹಿಸಾಬ್ ಕೋಪದ ಹಿಂದೆಯೇ ಬೇಯಿಂತಹಾಇಷ್ಕ್ ಇದೆಯೆಂದು ಯಾರಿಗೆ ಹೇಳಲಿ ಸಾಗರದಷ್ಟು ಕೋಪವೇ ಇರಲಿದುನಿಯಾದ ಸಾವಿರ ಜನರ ಮೇಲೆ ಸಾಕಿಅವನೊಬ್ಬನ ಮುಂದೆ ರಚ್ಛೆ ಹಿಡಿದು,ಕೂಗಾಡುವುದುರೂಹ್ ನ ಆಸೆಯೆಂದು ಯಾರಿಗೆ ಹೇಳಲಿ ಹುರುಳಿಲ್ಲದ ರಸ್ಮ್,ರಿವಾಜ್ ಗಳುನಮ್ಮನು ಬಂಧಿಸಲೆತ್ನಿಸಿ ಸೋಲುತಿಹವು ಎಲ್ಲದಕ್ಕೂ ಮೀರಿದ,ಹೆಸರಿಡಲಾಗದ ಬಾಂಧವ್ಯಅವನೊಂದಿಗೆ ಬೆಸೆದಿದೆಯೆಂದು ಯಾರಿಗೆ ಹೇಳಲಿ ಎಲ್ಲವೂ, ಎಲ್ಲರೂ ತನ್ನ ಹಿಸಾಬ್ ನಂತೆಯೇನಡೆಯಬೇಕೆನ್ನುವುದು ಈ ಜಗತ್ತುಇದೆ ಖಾಯಾಲಿಯಲಿ ಅದೆಷ್ಟು ಖಾಬ್ ಗಳುಕಬ್ರಸ್ತಾನ್ ಸೇರಿವೆಯೆಂದು ಯಾರಿಗೆ ಹೇಳಲಿ ಅವನನು ನೆನೆಯಲೂ ಪರವಾನಗಿಯೇ ಇಲ್ಲ,  ಈ ವಾಣಿಗೆ ಈ ಜನುಮದಲಿಆದರೂ  ದೇವರೆದುರು ಕೈಮುಗಿವಾಗೊಮ್ಮೆ,ಅವನನೇ ಕೇಳುವೆಯೆಂದು ಯಾರಿಗೆ ಹೇಳಲಿ ವಾಣಿ ಯಡಹಳ್ಳಿಮಠ್

ವಾಣಿ ಯಡಹಳ್ಳಿಮಠ್ ಅವರ ಗಜಲ್ Read Post »

You cannot copy content of this page

Scroll to Top