ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು
ಕಾವ್ಯ ಸಂಗಾತಿ ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು ಅವಳು ಶಬ್ಧ ಅವನು ಕಾವ್ಯ ಅವನು ರಾಗ ಅವಳು ತಾಳಅವನು ಭಾವ ಅವಳು ಜೀವ.ಅರಳಿವೆ ಶಬ್ಧ ಕಾವ್ಯದಲಿಹೊಮ್ಮಿವೆ ರಾಗಸೂಸುತ ಭಾವ.ತುಂಬಿದಳವಳದಕೆ ಜೀವಧಾರೆಯೆರೆಯುತ ಒಲವಇಮ್ಮಡಿಸುತ ಗೆಲುವ.ಜಗವೇಈ ಪ್ರೀತಿಯ ನೀನೆಂದರಿವೆನಿನಗಿಲ್ಲ ಇದರ ಪರಿವೆ ಭಾವನೆಗಳ ಬೆಸುಗೆಗೆಪ್ರತಿದಿನಭೇಟಿಯಾಗ ಬೇಕೆಂದಿಲ್ಲಮಾತಾಡಬೇಕೆಂದಿಲ್ಲಅವ್ಯಕ್ತ ಭಾವನೆಗೆ ಸರಿಸಾಟಿ ಇಲ್ಲಹಿತಬಯಸುವಪ್ರೀತಿ ಹರಿಸುವ ಉನ್ನತಿ ಹಾರೈಸುವ ಭಾವಎಲ್ಲಿದ್ದರೂ ಹೇಗಿದ್ದರೂ ನೆಮ್ಮದಿಯಿಂದಿರುಮಾತನಾಡಿದರೂ ಮಾತನಾಡದಿದ್ದರೂಹಾರೈಕೆಯೊಂದೇಎಂದೆಂದಿಗೂ ನೀ ಸಂತಸದಿಂದಿರುಮೌನದಿ ಎಲ್ಲವ ನುಡಿಯುತಿರುಸೂಸುತಿರು ಅಗೋಚರ ಭಾವನೆಗಳಸ್ಪರ್ಶಿಸುತಿರು ಈ ಮನದಾಳದ ಭಾವಗಳ. ಪ್ರೊ ರಾಜೇಶ್ವರಿ ಶೀಲವಂತ ಪುಣೆ
ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು Read Post »









