ಸಂತೆಯೊಳಗೊಂದು ಮನೆಯ ಮಾಡಿ.
ಕಥಾ ಸಂಗಾತಿ
ಸಂತೆಯೊಳಗೊಂದು ಮನೆಯ ಮಾಡಿ.
ಜ್ಯೋತಿ ಡಿ. ಬೊಮ್ಮಾ
ಸಂತೆಯೊಳಗೊಂದು ಮನೆಯ ಮಾಡಿ. Read Post »
ಕಥಾ ಸಂಗಾತಿ
ಸಂತೆಯೊಳಗೊಂದು ಮನೆಯ ಮಾಡಿ.
ಜ್ಯೋತಿ ಡಿ. ಬೊಮ್ಮಾ
ಸಂತೆಯೊಳಗೊಂದು ಮನೆಯ ಮಾಡಿ. Read Post »
” ಧವಳಗಿರಿಯ ಹೆಮ್ಮೆಯ ಕುವರಿ ಈ ಬಾಲೆ ”
ಅನುಸೂಯರವರ ಹೊಸ ಕಥೆ
” ಧವಳಗಿರಿಯ ಹೆಮ್ಮೆಯ ಕುವರಿ ಈ ಬಾಲೆ “ Read Post »
ಕಥಾ ಸಂಗಾತಿ ವಾಡಿಕೆ ಶ್ರಮ ಕುಮಾರ್ ಇದುವರೆಗು ನೋಡಿದ ಇಪ್ಪತ್ತು ಹುಡುಗಿಯರನ್ನು ಸಾರಾಸಗಟ್ಟಾಗಿ ಯಾವುದೇ ಕಾರಣ ನೀಡದೆ ತಿರಸ್ಕಾರ ಮಾಡಿದ್ದ ಮಗನ ಮೇಲೆ ನರಸಯ್ಯನಿಗೆ ತಡೆಯಿಡಿಯಲಾರದಷ್ಟು ಕೋಪ್ವ ತರಿಸಿದ್ದರು ಹಲ್ಲು ಕಚ್ಚಿ ದೂರದ ಸಂಭಂದದಲ್ಲಿ ಸರಿಯೊಂದುವ ಒಂದು ಹುಡುಗಿ ನೋಡಿ ಬಂದಿದ್ದರು ‘ನಾಳೆ ಹೋರಡೋಕ್ ಹೇಳು ಒಳ್ಳೆಯ ಸಂಬಂಧ ಬಿಟ್ರೆ ಮೂರ್ ವರ್ಷ ಕಂಕಣಬಲ ಇಲ್ವಂತೆ ಬತ್ತ ಅಯ್ನೋರ್ನು ಮಾತಾಡ್ಸಿ ಬಂದಿವ್ನಿ ತಿದ್ದೇಳು ಅವ್ನ್ಗೆ’ ಎಂದೇಳಿ ನರಸಯ್ಯ ಹೊರಡುವಾಗ ಎಷ್ಟು ಹೇಳಿದರು ಕಿವಿಗಾಕಿಕೊಳ್ಳುವ ಜಯಮಾನ ಮಾದೇವನದಲ್ಲವೆಂದು ಗೊತ್ತಿದ್ದರೂ ತಲೆದೂಗಿದಳು ಲಕ್ಷಮ್ಮ ಎಮ್ಮೆಕೊಪ್ಪಲಿನಿಂದ ಪಾದಯಾತ್ರೆಯಲ್ಲೇ ಮಾದಪ್ಪನ ಬೆಟ್ಟವ ಅತ್ತಿಬಂದಮೇಲೆ ಮಾದೇಶ್ವರನ ವರಪ್ರಸಾದದಿಂದ ಹುಟ್ಟಿದ್ದನೆಂದು ಹುಟ್ಟಿ ಅಳುವ ಧ್ವನಿಯಲ್ಲೇ ಗಂಡು ಮಗು ನನಗೆಂದು ನರಸಯ್ಯ ಮನಸಲ್ಲೇ ಚೀರಿ ಮೂರುಬಾರಿ ಮಾದೇವ ಮಾದೇವ ಮಾದೇವನೆಂದು ಊರ ದಿಕ್ಕುಗಳಿಗು ಕೇಳುವ ಹಾಗೆ ಕೂಗಿದ್ದಾಗಿನಿಂದ ಮಾದೇವ,ಮಾದು,ಮಾದನಾಗಿ ಕರೆಸಿಕೊಳ್ಳುತ್ತಿದ್ದ ಮಾದೇವನದ್ದು ಒಣಕು ದೇಹವಾದರು ನರಸಯ್ಯ ಹೊಡೆದು ಬಡಿದು ಹೊಲ ಮನೆಯಲ್ಲಿ ಮಾಡಿಸುತ್ತಿದ್ದ ಗ್ಯೈಮೆಯ ದೆಸೆಯಿಂದ ಗಟ್ಟಿಮುಟ್ಟಾಗಿ ಕಾಣುತ್ತಿದ್ದ ಮೆಕ್ಕೆ ಜೋಳದ ಸಾಲಿನಂತಿದ್ದ ಹಲ್ಲು,ಕಪ್ಪು ಬಿಳಿ ತಿಕ್ಕಾಡುವ ಬಣ್ಣ, ಎಡಕ್ಕೆ ಬಾಚುವ ಕೂದಲಿನ ತುದಿಯಲ್ಲಿ ಮಿಂಚುತಿದ್ದ ಕೆಂಚು ಅವನಂದವನ್ನ ಹೆಚ್ಚಿಸಿದ್ದರು ಅವನಿಗದು ನಗಣ್ಯ ಅಪ್ಪನಿಗೆ ಹೆಚ್ಚುಗೆಯೇ ಎದರಿ ಅಮ್ಮನ ಸೆರಗೊಳಗೆ ಕವುಚುತಿದ್ದ ಮಾದೇವನಿಗೆ ಅದ್ಯಾವ ಗರ ಬಡಿದಿತ್ತೊ ಅವತ್ತು ಅಪ್ಪನಿಗೇ ತಿರುಗಿ ಮಾತಾಡಿ ಅವರ ಮಾತನ್ನು ಕೇಳದೇ ಇದ್ದದ್ದು ನರಸಯ್ಯನಿಗೆ ಸಹಿಸದೇ ಹೋಗಿ ಅವತ್ತಿನಿಂದು ಅವನೊಟ್ಟಿಗೆ ಮಾತು ಬಿಟ್ಟವರು ಇವತ್ತಿನ ವರೆಗೂ ಮಾತಾಡಿಲ್ಲದ ಬಗೆಯನ್ನು ಬಟ್ಟೆ ಹೋಗೆಯುವಾಗ ಪಕ್ಕದ ಮನೆಯ ಶಾಂತನೊಂದಿಗೋ ಹಾಚೆ ಬೀದಿಯ ಕಪ್ಪೆಚನ್ನಿಯೊಂದಿಗೋ ಹೇಳುವುದು ಲಕ್ಷಮ್ಮನಿಗೆ ದಿನದ ಮಾತಿನಲ್ಲಿ ಬೆರೆಯುತ್ತಿತ್ತು, ಮಾದೇವ ಹೆಚ್ಚಿಗೆ ಮಾತನಾಡುವವನಲ್ಲ ಲಕ್ಷಮ್ಮ ಒಂದೋ ಎರಡೋ ಮಾತು ಅವನೊಂದಿಗಾಡಿದರೆ ಹೆಚ್ಚು ಅಂಗೂ ಅವನನ್ನು ತಡೆದು ನಿಲ್ಲಿಸಿಕೊಂಡು’ಮಗ ಮಾದು ನೀನು ಪಿಯುಸಿ ಆದ್ಮೇಲೆ ಮುಂದಿಕ್ಕೆ ಓದಲ್ಲ ಅಂದೆ ಅಪ್ಪ ಬಡಿದರೂ ಓದ್ಲಿಲ್ಲ ಬೇಸಾಯ ಮಾಡ್ತೀನಿ ಅಂದೆ ಮಾಡ್ದೆ ಒಳ್ಳೆದಾಗಿ ಬೆಳ್ದೆ ಒಳ್ಳೆ ಮಗ ನೀನು ಅಪ್ಪ ನೋಡೋ ಹುಡ್ಗೀನ ಮದುವೆ ಹಾಗಿ ಅಪ್ಪನ ನೆಮ್ದಿ ಉಳ್ಸು ಮಾದು’ಎಂದೇಳಿದ ಲಕ್ಷಮ್ಮನ ಮಾತಿಗೆ ಸಬ್ಯಸ್ತನಂತೆ ‘ಆಗ್ಲಿ’ ಎಂದೇಳಿ ಹಾಗದೇ ಹೋಗಿದ್ದ. ‘ಹಳೆ ಕಾಲಾನೆಲ್ಲ ಶಪಿಸ್ಕೊಂಡು ಮೂರೊತ್ತು ಚಿಂತೆಯೊಳಗೇ ಇದ್ಬುಡಕೇಳು ನಿನ್ಮಗಂಗೆ ಹೆಣ್ಗಿಣ್ಣೆಲ್ಲ ಯಾಕೆ’ ನರಸಯ್ಯನ ಆಪ್ತ ಜಲ್ಲ ಮಾದೇವನ ಮದುವೆಯ ಮಾತು ಬಂದಾಗಲೆಲ್ಲ ಕೆಣಕಿದರೆ ‘ಊ ಕನಂತ್ ಹೋಲ ನಮ್ಮಯ್ದ ಗೊಡ್ಡಸ ಹಾಗಿದ್ರೆ ನೀನೆಲ್ದಂಗೆ ಮಾಡುವೆ’ ಅನ್ನುತ್ತ ಹೋಗೆಸೊಪ್ಪನ್ನು ಬೋರ್ಡಿಗಾಕುವುದರ ಇಲ್ಲ ಬಿತ್ತನೆ ತರುವುದರ ವಿಚಾರಗಳ ತೆಗೆದು ಮಾತು ಬದಲಾಯಿಸಿ ಜಮೀನನ್ನು ಎಳೆದು ತರುತ್ತಿದ್ದ. ಮಾದೇವ ತೋರಿಸುವ ಯಾವೊಂದು ಹುಡುಗಿಯರ ಒಪ್ಪದೇ ಇರುವುದ ತಿಳಿಯಲೇ ಬೇಕೆಂದು ಒಂದುಪಾಯ ಮಾಡಿ ನರಸಯ್ಯ ಮಾದೇವನ ಸ್ನೇಹಿತ ಚಂದ್ರುನನ್ನು ಬಿಟ್ಟು ಅವನ ಮನಸ್ಸಲ್ಲಿ ಯ್ಯಾರಾದರು ಇದ್ದಾರ ಕೇಳಿ ಏಳಪ್ಪ ಅಂದರು ‘ಕೇಳಿ ಹೇಳ್ತೀನಪ್ಪ’ ಎಂದ ಚಂದ್ರು ಕೊಟ್ಟ ಮಾತಿನಂತೆ ಅವನೊಳಗಿನ ಹುಡುಗಿಯನ್ನು ಕೆಣಕಿ ಕೆಣಕಿ ತೆಗೆಯಲು ನೋಡಿದ ಹುಹೂ ಅಳ್ಳಾಡದ ಮಾದೇವ ಇದೆ ಅಥವ ಇಲ್ಲ ಯಾವುದೂ ತೋರಗೊಡಲಿಲ್ಲ ಚಂದ್ರುವಿಗೆ ಗೆಲುವಾಗದೆ ‘ಇಲ್ಲ ಅವ್ನು ಏನನ್ನು ಹೇಳ್ತಾ ಇಲ್ಲ’ ಎಂದೇಳಿ ನರಸಯ್ಯನ ಮುಂದೆ ತಲಾಬಾಗಿ ಸಪ್ಪಗಾದ ‘ಚಂದ್ರು ಅದ್ಬುಡಪ್ಪ ನಿಮ್ನಪ್ಪ ಹೊಲ್ತಾಕ್ ಬರಕ್ ಹೇಳ್ದ ಹೋಗಿ ಅದೇನು ಕೇಳೋಗು’ ಎಂದೇಳಿ ಚಂದ್ರುನನ್ನು ಕಳುಹಿಸಿ ಜಲ್ಲಯ್ಯನಿಗಾಗಿ ಊರ ಕುರ್ಜಿನ ಬಳಿ ಕಾಯುತ್ತ ಅವನು ಬಂದೊಡನೆ ‘ಇವತ್ತು ಎರಡ್ರಲೊಂದು ತಿರ್ಮಾನ ಮಾಡ್ಲಾ ಜಲ್ಲ ಅವ್ನು ನಮ್ಮ್ ಕೈಗೆ ಸಿಗಂಗ್ ಕಾಣ್ತಾ ಇಲ್ಲ ಯಾರೇನೆ ಹೇಳುದ್ರು ಕೇಳ್ದಿದ್ಮೇಲೆ ಏನ್ಮಾಡದು ಹೇಳು’ ಮುಂತಾಗಿ ಹೇಳುತ್ತ ಮನೆಯ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಮದುವೆಯಾಗದ ಚೆಂದುಳ್ಳಿ ಹೆಣ್ಣುಗಳು ಬಗೆ ಬಗೆಯಾಗಿ ಕಾಣುತ್ತಿದ್ದವು. ನರಸಯ್ಯನನೊಂದಿಗೆ ಜಲ್ಲಯ್ಯ ಬಂದದ್ದನ್ನು ಹರೆಗಣ್ಣಲ್ಲಿ ಕಂಡೊಡನೆ ಹಳೆಯ ಟೀವಿಯೊಳಗೆ ಮೂಡಿದ್ದ ತನ್ನ ಮುಖವನ್ನೇ ನೋಡುತ್ತ ಕುಂತಲ್ಲಿಂದ ಎದ್ದುನಿಂತ ಮಾದೇವ. ಲಕ್ಷಮ್ಮನನ್ನು ಹುಣಸೇಕುಪ್ಪೆಯಿಂದ ಮದುವೆಯಾಗಿ ಕರಕೊಂಡು ಬರುವ ದಿನವನ್ನು ಗುರುಹಿರಿಯರು ಗೊತ್ತುಮಾಡುವ ದಿನ ಗೊತ್ತಾದಾಗ ನರಸಯ್ಯನು ಎತ್ತಿನಗಾಡಿಯಲ್ಲಿ ಕೆಮ್ಮಣ್ಣೊಡೆದು ಎಮ್ಮೆಕೊಪ್ಪಲಲ್ಲಿದ್ದ ಎರಡೊಕ್ಕುಲು ಕುಂಬಾರರನ್ನು ಮೀರಿಸುವವನಂತೆ ಗುಡ್ಡೆಮಾಡಿ ನೀರಿನಲ್ಲಿ ಉನಿಸಿ ಚೆನ್ನಾಗಿ ತುಳಿದು ಅದಮಾಡಿ ಒಂದಿಬ್ಬರು ಕೈಯಾಳುಗಳೊಂದಿಗೆ ಕಟ್ಟಿದ ಮನೆ ಬೆಳಕಲ್ಲು ಗೌ ಗುಡುವುದು ಅದಿದ್ದ ಎತ್ತರದ ಕಾರಣಕ್ಕೊ ಅಥವ ಉದ್ದ ಅಗಲ ಜಾಸ್ತಿಯಾದ ಕಾರಣಕ್ಕೋ ನರಸಯ್ಯನಿಗೂ ತಿಳಿಯದು. ಸಮವಿಲ್ಲದ ಮಣ್ಣಿನ ಗೋಡೆಗೆ ಬಳಿದ ಗುಲಾಬಿ ಬಣ್ಣದ ನೇರಕ್ಕೆ ತಿದ್ದಿದ್ದ ಪೋಟೋಗಳ ಸಾಲಿನಲ್ಲಿ ಈಶ್ವರ ಪಾರ್ವತಿಯರು ಮುಗುಳ್ನಗುತ್ತ ನೋಡುವ ಕಡೆಯಲ್ಲಿ ಇದ್ದ ಮರದ ಕುರ್ಚಿಯಲ್ಲ ಜಲ್ಲ,ನರಸ ಕೂತವರು ಮಾತು ಶುರುಮಾಡಲು ತಡವರಿಸುವವರಂತೆ ಬೀಡಿ ಕಚ್ಚಿ ಬೆಂಕಿ ತಾಕಿಸಿದರು, ಕಳ್ಳುಗಳನ್ನ ಬಳಸಿ ಹೊಗೆ ಹೋರಗೆ ಬರುತಿದ್ದರು ಮಾತಾಡಲೊಲ್ಲದೆ ಅಲ್ಲಿ ಎಲ್ಲವು ಶಬ್ದದಿಂದ ದೂರವಾದಂತಿದ್ದವು. ಇಬ್ಬರೂ ಮಾತಾಡಲೂ ಮಾತಿಲ್ಲದವರಂತೆ ಇದ್ದದ್ದನ್ನು ಕಾಣಲಾಗದೆ ಮಾತುಮುರಿದ ಲಕ್ಷ್ಮಮ್ಮ ‘ಮಾದು, ಅಪ್ಪ ಸರಿಯಾಗಿ ಊಟ ಮಾಡ್ತಾ ಇಲ್ಲಪ್ಪ ನಿಂದೇ ಯೋಚ್ನೆ ಮೂರೊತ್ತು,ಮೇಲಷ್ಟೇ ನಿನ್ಕಂಡ್ರೆ ಅಂಗಾಡೋದು ಒಳಗೊಳಗೆ ನೀನಂದ್ರೆ ಜೀವನಪ್ಪ ಅವ್ರ್ಗೆ ,ಮನ್ಸ ನೋಯಿಸ್ದೆ ಅವ್ರೇಳೋ ಹಾಗ್ ಕೇಳಿ ತಲೆಬಾಗಪ್ಪ ನಿನ್ನ್ದಮ್ಮಯ್ಯ ಅಂತೀನಿ ‘ಎರಡನಿ ಕಣ್ಣೀರ ತಂದುಕೊಂಡ ಅಂಗಲಾಚಿದಳು. ಬಂಡೆಯಂತೆ ಅಲ್ಲಾಡದೆ ನಿಂತವನು ‘ನನ್ಗಾಗಿ ಅಳ್ಬೇಡ ನೀನು ಅಪ್ಪನ್ಗು ಹೇಳು ನನ್ಗಾಗಿ ಕೊರ್ಗೊದು ಬೇಡ ಅಂತ’ಮಾದೇವನ ಮಾತು ಕನಿಕರದ ಬದಲು ಕಡ್ಡಿ ತುಂಡಾಗುವಂತಿದ್ದವು ಅದ ಕೇಳಿ ಲಕ್ಷಮ್ಮನು ಬಾಯಿ ಕಟ್ಟಿದವಳಂತಾದಳು ನರಸಯ್ಯನು ಸೇದುತಿದ್ದ ಬೀಡಿಯ ಹೊಗೆಯ ಜೊತೆಗೆ ಕೊಪವನ್ನು ತುಂಬಿಕೊಂಡು ಬುಸುಗುಟ್ಟಿದಾಗ ಮೂಗಿನೆಳ್ಳೆಯಿಂದ ಕೋಪವು ಹೊಗೆಯನ್ನು ಹೊರಗೆ ತಂದು ಕರಗಿಸಿತ್ತು. ಮಾವನ ಮಗಳು ಬೇಡವಾದ್ಲು,ನಿನ್ನಪ್ಪನ ಸಂಬಂದಿಗಳ ಮಕ್ಳು ಬೇಡವಾದ್ರು,ಬೇರೆ ಊರಿನ ಹೆಣ್ಣುಗಳು ಸುದ ಬೇಡವಾದ್ರು ನಿನ್ಗೆ ಇನ್ನೆಲ್ಲಿಂದಪ್ಪ ತರುವ ಹೇಳು’ಜಲ್ಲಯ್ಯ ಕೇಳಲು ಮಾದೇವ ಉಸ್ರಾಡಲಿಲ್ಲ ‘ಮಾದು ನಿನ್ನ್ ಮನ್ಸಲ್ಲಿ ಅದೆನದೆ ಹೇಳು ಇಂಗೆ ಮೂಖ್ನಂಗೆ ನಿಂತ್ಕಂಡ್ರೆ ನಾವು ಏನ್ ತಿಳ್ಕಳಾದು’ಎಂದು ಬೇಸರದಲ್ಲಿ ಹೇಳಿದಾಗಲು ಅಲ್ಲಾಡಲಿಲ್ಲ ಮಾದೇವ ‘ನಿನ್ಗೆ ಬುದ್ದಿ ತಿಳ್ದಂಗೆ ಮಾಡಪ್ಪ’ಕೂತಲ್ಲಿಂದ ಮೇಲೇಳುತ್ತ ಕೊನೆಯದಾಗಿ ಹೇಳಿ ಹೊರಟನು ಜಲ್ಲಯ್ಯ ಬೀಡಿ ಎಳೆಯುತ್ತ ಹೊಗೆಯ ಬಿಡುತ್ತ ಮೌನವನ್ನೇ ದ್ಯಾನಿಸಿದ ನರಸಯ್ಯ. ‘ಮಾದೇವಂಗೆ ಗಾಳಿ ತಾಕಿರಬೇಕು’ ‘ಯಾವ್ ಮಾದೇವನ್ಲ’ ‘ಅದೇ ಕೆಳಮನೆ ನರಸಯ್ಯನ ಮಗ’ ‘ಒಬ್ನೇ ಮಗ ಕುಂತಲ್ಲೇ ಕುರೋದಂತೆ ನಿಂತಲ್ಲೇ ನಿಲ್ಲೊದಂತೆ’ ‘ಹೊಲ್ದಲ್ ಮಾತ್ರ ಚುರ್ಕು ಬಡ್ದಿದು ಆದ್ರೆ ಯಾವ್ ಹುಡ್ಗೀರ್ನು ಒಪ್ತಿಲ್ವಂತೆ’ ಊರಲ್ಲೆಲ್ಲ ಮಾದೇವನದ್ದೆ ಸುದ್ದಿಯಾಗಿದ್ದು ನರಸಯ್ಯನಿಗೆ ಹೌಹಾರಿ ಬಂತು ‘ಜನ್ರೆಲ್ಲ ಇಲ್ಲಸಲ್ಲದ್ದು ಮಾತಾಡೋಕ್ ಸುರುಮಾಡೋರೆ ಇವನ್ಗೆ ಇನ್ನ ಹೆಣ್ಣು ಕೊಟ್ಟಂಗೆ ಎತ್ತೋರು,ಹಾಳಾದೋನು ಇದ್ದು ನಮ್ಮ್ ಹೊಟ್ಟೆ ಉರ್ಸೊಬದ್ಲು ಕಟ್ಟೆಹಾರಿ ಜೀವಹೋದ್ರೆ …’ ಮುಂದೇನು ಆಡದೆ ಗೋಡೆ ಹೊರಗಿ ಚಿಂತಿಸ ಹತ್ತಿದನು ಲಕ್ಷ್ಮಮ್ಮ ಮಲಗಿದಲ್ಲೇ ಬಿಕ್ಕಿ ಬಿಕ್ಕಿ ಅತ್ತಳು ಮಗನ ನಡವಳಿಕೆ ಒಗಟಿನ ರೀತಿಯಾಗಿ ಕಾಣತೊಡಗಿತವರಿಗೆ ತುಂಬಾ ಚುರುಕಿನ ಹುಡುಗ ಒಂದಲ್ಲ ಒಂದು ಕ್ಯಾತೆ ಮಾಡದೇ ನಿದ್ದೆಮಾಡಿದವನಲ್ಲ ಅಪ್ಪನಿಗೆ ಹೆದರಿದಷ್ಟು ಅವನು ಬೇರ್ಯಾರಿಗು ಹೆದರಿದವನಲ್ಲ ಅಂತ ಮಗ ಬಿಡಿಸಲಾಗದವನಂತೆ ಆಡುತ್ತಿದ್ದದ್ದು ಲಕ್ಷಮ್ಮನಿಗೆ ಕಣ್ಣೀರ ನಿಲ್ಲಿಸುತ್ತಿರಲಿಲ್ಲ. ರಾಗಿಕೂಯ್ಲಿನಲ್ಲಿ ಜಯಳೊಂದಿಗೆ ಮಾದೇವನು ನಗ್ನಾಟವಾಡುತಿದ್ದದ್ದು ನರಸಯ್ಯನಿಗೆ ಎಲ್ಲಿಲ್ಲದಷ್ಟು ಕೋಪ ತರಿಸಿತ್ತು,ಅವಳಿಗೆ ಆದಷ್ಟು ಬೈದು ಅವಳು ಕ್ಯುಯ್ಲು ಕೂಯ್ಯವುದನ್ನೆ ನಿಲ್ಲಿಸಿದ್ದನು,ಅವಳೊಬ್ಬಳೇ ಅಲ್ಲ ಊರಿನ ಯಾವ ಹೆಣ್ಣುಮಕ್ಕಳು ಅವನೊಂದಿಗೆ ಮಾತನಾಡುವುದು ನಿಷಿದ್ಧವಾಗಿತ್ತು ಮಾತಾಡಿಸುವ ಹೆಣ್ಣನ್ನ ಮಾದೇವ ಮಾಡ್ಕೊತಾನೆ ಎಂಬುದೊಂದಿತ್ತು ದಿಗಿಲು ನರಸಯ್ಯನಿಗೆ,ಈಗವನೇ ಅಕ್ಕಪಕ್ಕದ ಹುಡುಗಿಯರ ಬಿಟ್ಟು ಮಾತ್ನಾಡಿಸಿ ನಗ್ನಾಡಿಸಿ ಅವನೊಳಗೇನಿದೆ ತಿಳ್ಕೊಳ್ಳಿ ಇವೇ ಮುಂತಾದ ಸೂಚನೆ ಕೊಟ್ಟು ಕಳುಹಿಸುತ್ತಿದ್ದರು ತಿಳಿಯಗೊಡುತ್ತಿಲ್ಲ ಮಾದೇವ,ರಾತ್ರೆಯಲ್ಲ ಎದ್ದೇ ಇದ್ದು ಬೆಳಗೆಲ್ಲ ಮಲಗೇ ಇರುತಿದ್ದ ಅವನ ವರ್ತನೆಗಳ ಗಮನಿಸಿ ಬೈಲಿನಲ್ಲಿ ಗಾಳಿ ಬಡಿದಿರಬೇಕೆಂದು ಜಲ್ಲ ಹೇಳಿದ್ದು ನಿಜವೆಂದು ನಂಬಿದನು,ಮನೆದೇವರಾದ ಮಾದೇಶ್ವರರ ಮುಂತಾಗಿ ಯಾವ ದೇವರನ್ನು ಬಿಡದೆ ಎಲ್ಲ ದೇವರಿಗು ಅರಕೆ ಕಟ್ಟಿ ನನ್ಮಗ ಮೊದಲಿನಂತಾದರೆ ಅರ್ದ ಎಕ್ಕರೆ ಜಮೀನನ್ನೆ ಬಿಡುವುದಾಗಿ ಕುರ್ಜಿನ ಮಧ್ಯ ಮೂಡಿದ್ದ ಗ್ರಾಮ ದೇವತೆಯ ಬೇಡಿಕೊಂಡರು ಜಗ್ಗುತ್ತಿಲ್ಲ ಮಾದೇವ ಹಿಂದಿಗಿಂತಲೂ ಹೆಚ್ಚಾಗೇ ಬದಲಾಗುತ್ತಲೇ ಇದ್ದ. ಒಂದು ರಾತ್ರಿ ವೊಲದಲ್ಲಿ ಮುಳ್ಳಿನ ಮೇಲೆ ಕೂತವನಂತೆ ಕೂತು ಭಾರವಾಗಿದ್ದ ಅಲ್ಲಿನ ಶಬ್ದವನ್ನೇಲ್ಲ ಕೇಳುತ್ತಿದ್ದ ಮಾದೇವ,ತಂಗಾಳಿಯಲ್ಲಿ ಸಂಕ್ರಾಂತಿಯ ಚಳಿಗೂ ನಡುಗುತ್ತಿಲ್ಲ ಅವನ ಮೈಯ್ಯಿ ಗಟ್ಟಿಯಾಗಿ ಬೇರು ಬಿಟ್ಟವನಂತೆ ಭೂಮಿಯಲ್ಲಿ ಕೂಡಿಕೊಂಡು ಉತ್ತು ಬಿತ್ತ ಕ್ಷಣವನ್ನು ನೆನೆದ, ಇದ್ದಕ್ಕಿದ್ದಂತೆ ನರಸಯ್ಯನು ಲಕ್ಷಮ್ಮನ ಕೈಯಿಡಿದೆಳೆದು ತಂದು ಗೆರೆ ಮೂಡಿಸಿ ಒಂದಷ್ಟು ಹುಡುಗಿಯರನ್ನು ಸಾಲಾಗಿ ನಿಲ್ಲಿಸಿದನು ಅವರೆಲ್ಲರ ಕೈಯ್ಗಳಿಗೆ ಕಡಕತ್ತಿ ಕೊಟ್ಟು ಕಿವಿಯಲ್ಲಿ ಏನನ್ನೋ ಹೇಳಿದೊಡನೆ ಮಾದೇವನ ಬುಡದಲ್ಲಿನ ಬೇರನ್ನು ಕತ್ತಿರಿಸಲು ಮುಂದಾದರು ‘ನೀವು ಕೂಯ್ದಾಕುದ್ರು ನಾನು ಚಿಗ್ರುತೀನಿ ಸಾವಿಲ್ಲ ನನ್ನ ಬುಡಕ್ಕೆ’ಎಂದು ಮಾದೇವ ಒಂದೇ ಉಸಿರಿನಲ್ಲಿ ಹೇಳಿದಾಗ ಅವರೆಲ್ಲರು ಸಾಲಾಗಿ ನರಸಯ್ಯನ ಮುಂದಾಗಿ ಒಬ್ಬೊಬ್ಬರಾಗೇ ಕಡಕತ್ತಿಯ ತೂಗುತ್ತ ಮಾದೇವನ ಮುಂದೆ ಹಾದು ಹೋದರು ಅವೆಲ್ಲಕ್ಕು ಕದಡಿ ಹೋದವನಂತೆ ಅಲ್ಲಿಂದೆದ್ದು ಕಟ್ಟೆಯ ಮೇಲೊಗಿ ಕೂತು ಕೈ ಉಜ್ಜಿದ ಶಾಕದಲ್ಲಿ ಕೆನ್ನೆಗಳಿಗೆ ತಾಕಿಸಿದ ಚಳಿ ಹೆಚ್ಚುತ್ತಿತ್ತು ಗಾಳಿಯು ಇನ್ನಷ್ಟು ತಂಪಾಯಿತು ಸಣ್ಣ ಮಂಜಿನನಿಗಳು ಬೀಳತೊಡಗಿದವು ಅವನ್ನು ಸರಿಸುತ್ತ ಊರ ಹೆಂಗಸರೆಲ್ಲರು ಕಟ್ಟೆಯ ನೀರಿನಲ್ಲಿ ಈಜಿಬಂದರು ಅವರಲ್ಲೊಬ್ಬ ಹೆಂಗಸು ಮಾದೇವನೊಂದಿಗೆ ಮಾತಿಗಿಳಿದಳು ‘ಏನಾಯ್ತು ನಿಂಗೆ ಮಾದ’ ‘ನನ್ಗೆ ದೆವ್ವ ಹಿಡ್ದದೆ’ ‘ದೆವ್ವನಾ’ ‘ಹೂ ಅದಕ್ಕೆ ನಾನು ಯಾವ್ ಹುಡ್ಗೀನು ಒಪ್ತಿಲ್ಲ,ಅದಕ್ಕೆ ನಾನು ಯಾರ್ನು ಸರಿಯಾಗಿ ಮಾತಾಡ್ಸ್ತ ಇಲ್ಲ’ ‘ಅಂಗಾದ್ರೆ ನೀನು ಮದ್ವೆ ಆಗಲ್ವ’ ‘ನಾನಾಗಲೇ ಮದ್ವೆ ಆಗಿದ್ದು ಗೊತ್ತಾಗಿಲ್ವ ನಿಂಗೆ ಅವರ್ಗೇನೋ ಗೊತ್ತಿಲ್ಲ ಅಂತ ಅನ್ಕೊಂಡಿದ್ದೆ ನಿನ್ಗು ಗೊತ್ತಿಲ್ವ’ ಎಂದೇಳಿ ಮಾದೇವ ಜೋರಾಗಿ ನಕ್ಕ ತಕ್ಷಣವೇ ಅವಳು ಮೊಕ ಸಿಂಡರಿಸಿಕೊಂಡದ್ದ ನೋಡಲಾಗದವನಂತೆ ‘ ಹೇಳ್ತೀನಿ ಕೇಳು,ಅವರು ತೋರುವ ಹುಡುಗಿಯರಂತಲ್ಲ ಅವ್ಳು ನಾಚಲ್ಲ ಹೆದ್ರಲ್ಲ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಾಳೆ,ಅವರಿಗೆ ಅವ್ಳ ಬಗ್ಗೆ ಗೊತ್ತಾಗೋದಿಲ್ಲ ಯಾಕಂದ್ರೆ ನಿನ್ನಂತೆ ಅವ್ರು ಕೇಳ್ಸ್ಕೊಳ್ಳೋ ಮನುಷ್ರಲ್ಲ ಒಂದ್ವೇಳೆ ಕೇಳಿಸ್ಕೊಂಡ್ರು ಅವರ್ಯಾರ್ಗು ಅವ್ಳು ಇಡ್ಸೊದಿಲ್ಲ,ಇಡಿಸುದ್ರು ಒಪ್ಪೋದೂ ಇಲ್ಲ , ಇನ್ನೊಂದ್ ತಿಳ್ಕೊ ಅವಳಂತ ಅವಳು ಇನ್ನೆಲ್ಲಿದಾಳು ಅವ್ರು ನಂಗೆ ಕಟ್ಟಾಕೆ’ಪ್ರತೀ ಮಾತನ್ನು ಹಿಡಿದೇಳಿ ಸುಮ್ಮನಾದ. ‘ಮುಂದೇನ್ಮಾಡ್ತೀಯ’ ಅವಳು ಕೇಳಿದಳು, ‘ಮುಂದೇನ್ಮಾಡ್ತೀಯಾ….ಕೇಳುತ್ತಲೇ ಇದ್ದವಳು ಅವನು ಏನನ್ನು ಹೇಳದ್ದ ಕಂಡು’ನೀನ್ ಹೇಳ್ದಿದ್ರೆ ಅಷ್ಟಾಯ್ತು ಹೋಗು’ಎಂದು ಮಿಕ್ಕ ಹೆಂಗಸರ ಕೂಡಿ ಈಜಿಹೋದಳು. ಅತ್ತು ಅತ್ತು ಲಕ್ಷಮ್ಮನ ಕಣ್ಣುಗಳು ಬತ್ತಿವೆ ಸರಿಯಾಗಿ ಊಟಮಾಡದೆ ನರಸಯ್ಯನ ಮಯ್ಯಿ ಒಣಗಿದೆ ಇದೆಲ್ಲವನ್ನ ನೋಡಲಾಗದೆ ನೆರೆಹೊರೆಯವರೆಲ್ಲ ಮಾದೇವನಿಗೆ ಬುದ್ದಿಹೇಳಲು ಮುಂದಾದರು ಒಂದು ವಾರವಾಗಿತ್ತು ಅವನು ಮನೆಬಿಟ್ಟು ಹೊಲದಲ್ಲೇ ಗುಡಿಸಲಾಕಿ ಅಲ್ಲೇ ಮಲಗುತ್ತಿದ್ದ ಊಟ ಎಲ್ಲಿ ಮಾಡಿತ್ತಿದನೋ ಅವನಿಗೇ ತಿಳಿಯದು, ಅಕ್ಕ ಪಕ್ಕದ ಜಮೀನಿನವರು ಕರೆದು ಕೊಟ್ಟರೆ ಸ್ವಲ್ಪ ತಿಂದು ಅವರು ಹೇಳುವ ಬುದ್ದಿಮಾತಿಗೆ ಪ್ರತಿಕ್ರಿಯಿಸದೇ ಅಲ್ಲಿಂದೆದ್ದು ಮತ್ತೆಲ್ಲಿಗೋ ಹೊರಟು ಬಿಡುತ್ತಿದ್ದ ಅದಾಗೇ ನಡೆಯುವಾಗ ಸಂಜೆ ಇಳಿಯುವ ಹೊತ್ತಿಗೆ ಮನೆಗೆ ಬಂದ ಮಾದೇವ ತೊಳೆಯದೇ ಇದ್ದ ಗುಡ್ಡೆ ಪಾತ್ರೆಗಳ ತೊಳೆದು ತೊಡೆಯದೇ ಇದ್ದ ರಾಸಿ ನಂಜ್ಗಸ ತೊಡೆದು ಒಲೆ ಅಚ್ಚಿದ, ಕನ್ಸಲ್ಲಿದ್ದೀನ ಅಂದುಕೊಂಡ ಲಕ್ಷಮ್ಮನಿಗೆ ನನಸೆಂದು ತೋರಿದಾಗ ಅಷ್ಟಿಷ್ಟಲ್ಲ ಅವಳು ಖುಷಿಪಟ್ಟಿದ್ದು, ನರಸಯ್ಯ ನೆಮ್ಮದಿಯ ಉಸಿರ ಬಿಟ್ಟಿದ್ದು ಕಾಲಿಯಂತಿದ್ದ ಮನೆಯ ಹಂಚಿನ ಸಂದಿಯಿಂದ ತೂರಿಬಂದಿದ್ದ ಬೇಳಕಲ್ಲಿ
ಕಥಾ ಸಂಗಾತಿ ನಿರ್ಧಾರ ವಿಜಯಾಮೋಹನ್ ನಿರ್ಧಾರ ಮನೇಲಿ ಇಂಗೆ ನನ್ನ ತಾಯಿಯ ಸಲುವಾಗಿ,ಒಬ್ಬರಿಂದ ಒಬ್ಬರಿಗೆ ಹುಟ್ಟಿಕೊಂಡಿದ್ದ ಮಾತುಗಳು, ಅವು ಬರೀ ಮಾತಾಗಿರದೆ, ನನ್ನ ಹೃದಯವನ್ನ ಘಾಸಿ ಮಾಡುವಂತೆ ಮಸಿಯುತ್ತಿದ್ದವು. ಅವು ಇಷ್ಟೊಂದು ವಿಕೋಪಕ್ಕೆ ತಿರುಗುತ್ತವೆ ಎಂದು, ನಾನು ಕೂಡ ಯಾವತ್ತು ಎಣಿಸಿರಲಿಲ್ಲ. ಇಂಗೆ ಬದುಕಿನ ಸಂದರ್ಭಗಳು ಒಂದೆ ಸಮವಾಗಿರುವುದಿಲ್ಲ, ಅಥವ ನಾವಂದುಕೊಂಡಂತೆ ಸುಲಭವಾಗೂ ಇರುವುದಿಲ್ಲ, ಈಗ ಮೂರು ದಿವಸದಿಂದ ಮನೇಲಿ, ನನ್ನ ಮತ್ತು ಅಮ್ಮನ ವಿರುದ್ದ ಮಾತನಾಡುತ್ತಿರುವ ದ್ವನಿಗಳು.ಎಗ್ಗು ಸಿಗ್ಗಿಲ್ಲದೆ ನನ್ನ ವಿರುದ್ದ ಎದ್ದು ನಿಂತಿರುವುದರಿಂದ. ನಾನು ಯಾರ ಜೊತೆ ಮಾತಾಡ್‌ದಂಗೆ ಇದ್ದು ಬಿಟ್ಟಿದ್ದೆ, ನೆನ್ನೆ ಸಂಜೇಲಿ ಮನೆಯ ಡೈನಿಂಗ್ ಟೇಬಲ್ಲಿನ ಮ್ಯಾಲಿದ್ದ. ನಾಕು ತುತ್ತು ಅನ್ನ ತಿಂದಿದ್ದು ಬಿಟ್ಟರೆ. ಬೆಳಿಗ್ಗೆಯಿಂದ ಒಂದು ತೊಟ್ಟು ರಸಾ ಅನ್ನೋದು ಇಳಿದಿರಲಿಲ್ಲ, ನೀನು ತಿನ್ನು ಬಾ ಅನ್ನುವವರೆಲ್ಲ, ಬಿಂಕವಾದ ಮುಷ್ಕರಕ್ಕೆ ತಿರುಗಿಕೊಂಡಿದ್ದರು. ಅಂಗಾಗೆ ನನ್ನೊಳಗೆ ನಾನಿರಲಾಗದೆ, ಕಾರು ತಗೊಂಡು ಸೀದ ಊರಿನ ಕಡೆ ಹೊರಟೆ, ಮೊದಲಿನಿಂದಲು ನಾನು ಹಸಿವು ತಡಕೊಂಡವನಲ್ಲ. ಒಂತರಾ ಹಾಳೂರ ದೆವ್ವಿನಂಗೆ ಉಂಡವನು,ಅಂತ ಹಸಿವನ್ನು ಅದುಮಿಕೊಂಡು. ಕಾರಿನಲ್ಲಿ ಬರುತ್ತಿದ್ದವನಿಗೆ.ನಮ್ಮೂರ ಹೋಬಳಿ ಹೆಡ್‌ಕ್ವಾರ್ಟರ್ ಸಿಕ್ಕಿತ್ತು, ಕೂಡ್ಲೆ ಬಸ್‌ಟಾಪಿನ ಪಕ್ಕ ಎರಡು ದೊಡ್ಡ ವಿಶಾಲವಾದ, ಕೆಂಖೇಸರಿ ಮರದ ಕೆಳಗೆ. ನನ್ನ ಕಾರನ್ನು ನಿಲ್ಲಿಸಿದೆ, ಸೀದಾ ಹೋಟೆಲ್ ಶಾರದಾ ಎಂಬಲ್ಲಿಗೆ ಹೋಗಿ ಕುಂತು ಕೊಂಡೆ, ಹೋಟೆಲ್ ಸರ್ವರ್‌ನತ್ತಿರ ಅಲ್ಲಿರುವ ತಿಂಡಿಗಳ ವಿವರವನ್ನು ತಿಳುಕೊಂಡು, ಒಳ್ಳೆದೊಂದು ದೋಸೆ ಕೊಡಪ್ಪ ಎಂದೇಳಿ ಕಾಯುತ್ತ ಕುಂತು ಕೊಂಡೆ. ಒಳಗೆ ಹೋದ ಸರ್ವರ್ ಎಷ್ಟೊತ್ತಾದರು ಬರಲೇ ಇಲ್ಲ, ನನಗೆ ಬರಬೇಕಿರುವ ದೋಸೆಗೋಸ್ಕರ ಕಾಯ್‌ತಾ ಕೂತಿದ್ದೆ, ಅಷ್ಟೊತ್ತಿಗಾಗಲೆ ನಮ್ಮೂರಿನ ವಾಡೆ ಮನೆಯ ನಾಗನೆಂಬೋನು ಬಂದು, ನನ್ನ ಪಕ್ಕಕ್ಕೆ ಕುಂತುಕೊೊಡು. ಯಣ ಯಾಕಣ ಇಂಗ್ ಬಡವಾಗಿದ್ದೀಯ? ಅಂದ, ಅವನ ಕೆನ್ನೆಗಳ ಮೇಲಿದ್ದ ಕಣ್ಣುಗಳು ರೋಡು ಪಕ್ಕದಲ್ಲಿನ ಗುಂಡಿಗಳಂತೆ ಒಳಕ್ಕೋಗಿದ್ದವು. ತಲೆ ಅಲ್ಲಲ್ಲಿ ಬಿಳಿ ಪುಕ್ಕದಂತೆ ತರಕಲಾಗಿ ಬೆಳ್ಳಗಾಗಿತ್ತು, ನನಗೊಂದು ಗಳಿಗೆ ಇವನ್ಯಾರಪ್ಪ ಅಂಬೊ ತಬ್ಬಿಬ್ಬಿನಲ್ಲಿ. ಅವನನ್ನೆ ಬಿಟ್ಟ ಕಣ್ಣು ಬಿಟ್ಟಂತೆ ದಿಟ್ಟಿಸಿ ನೋಡಿದೆ. ಯಾಕಣ ನನ್ ಗುರುತ್ ಸಿಗಲಿಲ್ಲವೆ? ನಾನ್ ಕಣಣ ವಾಡೆ ಮನೆ ನಾಗ ಅಂದ, ತಟಕ್ಕನೆ ನನ್ನ ಮನಸ್ಸಿಗೆ ಅರಿವಾಯಿತು, ನಾಗ ಚೆನ್ನಾಗಿದ್ದೀಯೇನೊ ಅಂದೆ ಕಕ್ಕುಲಾತಿಯಿಂದ. ಏನ್ ಚಂದ್‌ವೊ ಏನ್ ಚಾರ್‌ವೊ? ನಿಮ್ಮಂಗೆ ನೆರಳು ಮರೇಲಿ ನಾವು ಬದುಕೋರಲ್ಲ, ಸುಖುವಾಗಿ ಉಣ್ಣೋರಲ್ಲ, ಬೆಳಗೆದ್ರೆ ಬಿಸಿಲು ಬ್ಯಾಗೆ ಅನ್ನದಂಗೆ ಕೂಲಿ ಕೆರೀಬೇಕು ಹಿಟ್ಟುಣ್ಣಬೇಕು. ತಗಿಯಣ ನನ್ ಚೆಂದಾನ ಏನಂತ ಕೇಳ್‌ತ್ತಿಯಾ? ಎಂದು ಮುಖ ಕಿವುಚಿಕೊಂಡು ಹೇಳ್‌ದ. ನನಗು ಅವನನ್ನು ನೋಡಿ ಪೆಚ್ಚೆನಿಸಿತು, ಎಂಗೊ ಮನೇಲೆಲ್ಲಾ ಚೆನ್ನಾಗವರೇನಪ್ಪ ಅಂದೆ. ಊನಣ ಎಲ್ಲಾ ಚೆನ್ನಾಗವರೆ ಅಂದವನು ಬಾಯಿಗೆ ಬಿಡುವು ಕೊಡದೆ. ನಿಮ್ಮನೇಲಿ ಗಂಗಮ್ಮಜ್ಜಿ ಎಂಗ್ಯೆತಣ? ಅಂದ ಅವನು ತಟ್ಟೆಂದು ಕೇಳಿದ ಪ್ರಶ್ನೆಗೆ. ಯಾವುದನ್ನು ಸಲೀಸಾಗಿ ಹೇಳಲಾಗಲಿಲ್ಲ. ಯಾಕೆಂದರೆ ನನ್ನ ಮಾತಿಗೆ ಅವನು ಅವಕಾಶ ಕೊಡದಂಗೆ, ಕೂಡಲೆ ನೀವೆಂಗಾ ಇರ‍್ರಪ್ಪ, ಗಂಗಮ್ಮಜ್ಜೀನ್ ಮಾತ್ರ ಸೆಂದಾಕ್ ನೋಡ್‌ಕಳಪ್ಪ. ನಿಮಗೆಲ್ಲಾ ಹಿಟ್ಟು-ಬಟ್ಟೆ ಹೊಂಚಾಕಾಗಿ, ನೀವು ಈ ಮಟ್ಟಕ್ಕೆ ಬರಾಕಾಗಿ, ಆವಮ್ಮ ಬಾಳಾ ಕಷ್ಟ ಬಿದ್ದೈತೆ ಕಣ್ರಪ್ಪ. ಅವಮ್ಮನೆ ಇಲ್ಲದಿದ್ರೆ ನೀವು ಇಷ್ಟು ಮಾತ್ರಕ್ಕೆ ಬರ್‌ತಿರಲಿಲ್ಲ ಕಣಪ್ಪ, ಅಂತ ಅವನ ಜೇಬಲ್ಲಿದ್ದ ಮೋಟು ಬೀಡಿಯೊಂದನ್ನ ತಡಕಿ ತಡಕಿ ತಗದ, ಪಕ್ಕದ ಟೇಬಲ್ಲಿನವನ ಕಡೆಗೆ ತಿರುಗಿ. ಯಣ ಬೆಂಕಿ ಪಟ್ನ ಇದ್ರೆ ಕೊಡು ಅಂದ, ಇರೊ ನಾಗ ತಿಂಡಿ ತಿನ್ನಿವಂತೆ,ಬೀಡಿ ಆಮೇಲ್ ಸೇದೀವಿ ಅಂದೆ ಉನ್ನಾರವಾಗಿ. ಬ್ಯಾಡ್ ಕಣಣ ಮನೆಯಾಗೆ ಸಪ್ಪೆಸರು, ಬಿಸಿ ಮುದ್ದೆ ಉಂಡು ಬಂದಿದ್ದೀನಿ. ನನಗೆ ತಿಂಡಿ ಬ್ಯಾಡ ಕಣಪ್ಪ, ಒಂದ್ ಲೋಟ ಟೀ ಕುಡಿಯಾನ ಅಂತ ಒಳಕ್ ಬಂದೆ ನಿರ್ವಿಕಾರವಾಗಿ ಮಾತಾಡದ. ಅವನ ಆ ಮಾತಿಗೆ ನಾನು ಏನೊಂದು ಉತ್ತರಿಸಲಿಲ್ಲ, ಎಂಗೋ ನೀನ್ ಸಿಕ್ಕಿದ್ದಕ್ಕೆ ಬಾಳ ಖುಷಿಯಾತು ಅಂದ, ಯಾಕಪ್ಪ ನನ್ ಬಗ್ಗೆ ನಿನಗೆ ಅಂತಾ ಖುಷಿ ಮನಸ್ಸು ಉಬ್ಬಿಸಿಕೊಂಡು ಕೇಳಿದೆ, ಇನ್ನೇನಪ್ಪ ಎಲ್ಲೊ ಹೋಗಿ ಆ ಮಾಯಾ ನಗರದಲ್ಲಿ ಸೇರ್‌ಕಂಡಿದ್ದಿರಾ. ನಿಮ್ಮಂತವರ ಮುಖಾನ ನಾವು ವರ್ಷಾನುಗಟ್ಲೆ ನೋಡಾಕಾಗಲ್ಲ. ಯಾಕಂದ್ರೆ ನಮ್ಮವರು, ತಮ್ಮವರು, ಕುಲೊಸ್ತರು, ಅಣ್ಣತಮ್ಮಂದ್ರು, ಹಬ್ಬ ಹರಿದಿನಗಳು, ಅನ್ನುವಂತ ಕಕ್ಕುಲಾತಿ ಅಂಬೋದು. ನಮ್ಮನ್ನ ಬಾದ್‌ಸಂಗೆ ನಿಮ್ಮುನ್ನ ಬಾದ್‌ಸಲ್ಲ ಕಣಣ್ಣ, ಅದಿಕ್ಕೆ ನಾನು ಈ ಮಾತೇಳ್‌ದೆ. ನೀವೆಲ್ಲ ನೆರಳು ಮರೇಲಿರೋರು ಸುಖಪುತ್ರರು, ನಿಮಗೆ ದುಡ್ಡೊಂದಿದ್ರೆ ಸಾಕು, ನಿಮ್ಮನ್ನ ಯಾವುದು ಬಾದ್‌ಸಲ್ಲ ಅಂದ. ಇಷ್ಟು ಮಾತುಗಳನ್ನ ನನಗೆ ಅವಕಾಶವಿಲ್ಲದಂಗೆ. ಅವನೊಬ್ಬನೆ ಲೇವಡಿ ಮಾಡುತ್ತ ಮಾತಾಡ್ ಬುಟ್ಟ . ಮುಖ ಕಿವುಚಿಕೊಂಡಿತ್ತು. ನಾನು ಏನೊಂದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವನ ಹರಿತವಾದ ಮಾತುಗಳಿಗಾಗಿ, ನನ್ನ ಮುಖವು ನನಗರಿವಿಲ್ಲದಂಗೆ ಕಳಾ ಹೀನವಾಗಿತ್ತು. ಮುಂದಿದ್ದ ತಟ್ಟೆಯೊಳಗಿನ ದೋಸೆಯು ಕೂಡ, ಕಾವು ಕಳೆದುಕೊಂಡು ತಣ್ಣಗೆ ಮೈ ಚಾಚಿಕೊಂಡಿತ್ತು.ಅವನು ಸುತಾರಾಂ ನನಗೆ ತಿಂಡಿ ಬ್ಯಾಡವೇ ಬ್ಯಾಡಂದ, ನಾನು ದೋಸೆಯ ಚೂರನ್ನ ಮುರಿದು ಬಾಯಿಗಿಟ್ಟು ಕೊಂಡಾಗ. ಅದರ ರುಚಿಯೆ ಸರಿಯಾಗ್ಲಿಲ್ಲವೊ? ನನ್ ಬಾಯೆ ರುಚಿಕಳಕಂತೊ? ನಾಗನ ಬಾಯಿಂದ ಬಂದ ಎಲ್ಲ ಮಾತುಗಳು, ನನ್ನ ಮನಸ್ಸನ್ನ ಅಪ್ಪಟವಾಗಿ ಕುಕ್ಕಿದವು. ಅದು ಯಾಕೆಂದರೆ ಊರಲ್ಲಿ ನಮ್ಮ ದೊಡ್ಡಣ್ಣಯ್ಯನ ಹೊಲವೊಂದನ್ನ, ಈ ನಾಕೈದು ವರ್ಷದಿಂದ ಇದೇ ನಾಗನೆ ಕೋರಿಗೆ ಮಾಡುತ್ತಿದ್ದ. ಮೈಸೂರಿನಲ್ಲಿದ್ದ ನಮ್ಮಣ್ಣ, ಸರಿಯಾಗಿ ಬೆಳೆಯ ಖರ್ಚು ಕೊಡಲಾರದೆ, ಕಿತಾಪತಿ ಮಾಡ್‌ತ್ತಿದ್‌ನಂತೆ. ನೀನಿಷ್ಟೇನೆ ಬೆಳೆಯೋದು? ನಮಗಿಷ್ಟೇನೆ ಕೊಡೊದು? ಯಾಕೋ ಈಗೀಗ ಗಾಂಚಾಲಿ ಜಾಸ್ತಿ ಮಾಡ್‌ತ್ತೀಯ? ಎಂದು ಸಿಕ್ಕಾಗಲೆಲ್ಲ, ಏನಾದ್ರು ಒಂದನ್ನು ಕೊಂಕಿಸಿಕೊಂಡು ಬೈಯ್ಯುತ್ತಿರುತ್ತಾನಂತೆ. ನಾಗನಿಗು ಕೇಳಾತಂಕ ಕೇಳಿ ಬೇಜಾರಾಗಿತ್ತೆಂದು, ನಮ್ಮೂರಿನ ಜನ ಅಂಗು ಇಂಗು, ಇವನ ಮತ್ತು ನಮ್ಮಣ್ಣಯ್ಯನ ವಿಚಾರವನ್ನ ಹೇಳ್‌ತ್ತಾನೆ ಇದ್ರು. ಈ ಸಲವಂತು ನಾಗ ಮುಂಗಾರಿಗೂ ಮುಂಚೆಯೆ ಕಲ್ಲು ಮುಳ್ಳು ಹಾಯಿದು. ಹಸನು ಮಾಡಿಕೊಂಡಿದ್ದ ಹೊಲವನ್ನ, ನಮ್ಮಣ್ಣ ನಿಷ್ಟುರವಾಗಿ ಬಿಡಿಸಿ, ಬೇರೆಯವರಿಗೆ ಕೊಡಿಸಿದನೆಂದು, ನಾಗನಿಗೆ ಬಾಳ ಸಂಕಟವಾಗಿತ್ತು. ಇಂತದ್ದೊಂದು ವಿಷಯವನ್ನ, ನಮ್ಮೂರಿನ ಮನೆ ಪಕ್ಕದ ಎಂಕಟೇಶಿ ಎಂಬೋನು ಫೋನು ಮಾಡಿ. ಯಣ ನಿಮ್ಮಣ್ಣಯ್ಯ ವಾಡೆ ನಾಗನಿಗೆ. ಬಾರಿ ಅನ್ಯಾಯ ಮಾಡ್‌ಬುಟ್ಟ ಕಣಣ. ಅಂತ ಊರಲ್ಲಿ ನಡೆದ ವಿದ್ಯಮಾನವನ್ನೆಲ್ಲ. ಈಗ ಆರು ತಿಂಗಳ ಮುಂಚೆಯೆ ಹೇಳಿದ್ದು ನೆನಪಾಯಿತು. ಜೊತೆಗೆ ಇವತ್ತು ನನ್ನನ್ನ ಚುಚ್ಚಿ ಮಾತಾಡುತ್ತಿರುವ. ಮರ್ಮದ ಬಗ್ಗೆಯು ಅರಿವಾಗತೊಡಗಿತು. ಯಣ ಟೀ ಹೇಳಾನೊ? ಕಾಫಿ ಹೇಳಾನೊ? ಇನ್ನೊಂದು ಸಲ ವಾಡೆನಾಗನ ದ್ವನಿಗೆ, ನನ್ನ ತಟ್ಟೇಲಿದ್ದ ದೋಸೆ ಖಾಲಿಯಾಗಿ, ಕೊನೆ ಚೂರೊಂದು ಉಳುಕಂಡಿದ್ದು. ನನ್ನ ನಿಗಕ್ಕೆ ಬಂತು. ನಾನು ಅವನ ಪ್ರಶ್ನೆಗೆ ಉತ್ರ ಹೇಳಾಕ್ ಮುಂಚೆಯೆ. ಏ ರಾಜ ಒಳ್ಳೆವೆರೆಡು ಗಟ್ಟಿ ಟೀ ತಗಂಬಾರಲ, ಅನುತ ಕೂಗಿ ಅವನೆ ಆಡ್ರು ಮಾಡ್ ಬುಟ್ಟ. ನಾನೀಗ ಊರಿಗೆ ಬರುತ್ತಿರುವ ವಿಚಾರವನ್ನಾಗಲಿ. ಇವನ ಮತ್ತು ನಮ್ಮಣ್ಣಯ್ಯನ ಮದ್ಯೆ ನಡೆದಿರುವ ವಿಚಾರವನ್ನಾಗಲಿ. ಕೆದಕಲು ತಯಾರಿಲ್ಲದವನಾದೆ. ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂಬಂತೆ, ಮತ್ತೆ ಮಾತಿಗೆ ಮಾತಿನ ಚರ್ಚೆ ಯಾಕೆಂದು. ಇಬ್ಬರು ಮೌನವಾಗಿ ಟೀ ಕುಡುದ್‌ವಿ. ಕೊನೆಗೆ ನನಗಿಂತ ಮುಂಚೆ ಎದ್ದೋಗಿ, ದೋಸೆಯ ಬಿಲ್ಲನ್ನು ಸೇರಿಸಿ, ಅವನೆ ದುಡ್ಡು ಕೊಟ್ಟು ಬಂದ. ಯಾಕೊ ನಾನ್ ಕೊಡುತ್ತಿರ್‌ಲಿಲ್ಲವೇನೊ, ನಿನ್ ಋಣ ನನಗ್ಯಾಕಪ್ಪ ಅಂದೆ. ಓ ಬಾರಪ್ಪ ಇದೇನ್ ಋಣ? ನೀವು ಬೆಂಗಳೂರಿನ್ ಜನವೆ ಇಂಗೆ, ಎಂಜಲು ಕೈಯ್ಯಲ್ಲಿ ಕಾಗೆ ಓಡುಸೊ ಜನ, ಎಂದು ಮುಖಕ್ಕೊಡದಂತೆ ಮಾತಾಡ್‌ಬುಟ್ಟ. ಅಲ್ಲು ಮೌನವಾಗಿದ್ದೆ, ಸರಿ ಊರಾಕ್ ಬರ್‌ತ್ತೀಯ ಕಾರ್ ತಂದಿದ್ದೀಯ? ಎಂದು ಮತ್ತೊಮ್ಮೆ ಮಾತು, ಕೆದಕಿದ ಹೌದೆಂದು ಮೌನವಾಗಿ ಗೋಣಾಡಿಸಿದೆ, ಸರಿ ಇರು ನಾನು ಬರ್‌ತ್ತೀನಿ, ಡಿಬ್ಬಯ್ಯನ ಅಂಗಡೀಲಿ ಎರಡು ಗೊಬ್ಬರದ ಚೀಲ ಮಡಗಿದ್ದೀನಿ, ತಗಂಡೋಗಾನ ಅನುತ, ಬಿರ ಬಿರನೆ ಕೆಳಗಡೆ, ಬೀದಿಯ ಕಡೆಗೆ ಇಳಿದು ಹೋದ. ನಾನು ಒಂದೆರೆಡೆಜ್ಜೆ ಮುಂದೆಯಿದ್ದ, ಕೆಂಕೇಸರಿ ಮರದ ಕೆಳಗೆ, ವಿಶಾಲವಾದ ನೆರಳಲ್ಲಿ ನಿಂತುಕೊಂಡು. ಜೇಬಲ್ಲಿದ್ದ ಸಿಗರೇಟೊಂದನ್ನ ಹಚ್ಚಿದೆ. ನಾನು ಓದಿದ, ಹಳೆಯ ಹೈಸ್ಕೂಲೊಂದರ ಗಾಯಗೊಂಡ ಗೋಡೆಗಳು, ಪಕ್ಕದಲ್ಲೆ ಹೊಸ ಕಟ್ಟಡಗಳ ಕೊಠಡಿಗಳು. ಅಪ್ಪನಿಗೆ ನಾನು ಐಸ್ಕೂಲು ಸೇರಲು ಇಷ್ಟವಿರಲಿಲ್ಲ, ಇದ್ದೂರಲ್ಲಿ ಓದಿದ್ದು ಸಾಕು ಬಿಡೊ, ಬೇರೂರಿನ ಇಸ್ಕೂಲಿನಲ್ಲಿ ಓದಿ, ಬೂದಿ ಉಯ್ಯಾದೇನು ಬ್ಯಾಡ ಬಿಡೊ?ಸುಮ್ಮನತ್ತ ಮನೇಲಿರೊ ಕುರಿಗಳನ್ನ ಮೇಯಿಸ್ ಬಾರಲ, ಅನುತ ಬೆಳಗ ಸಂಜೆ ಸಿಕ್ಕಾ ಪಟ್ಟೆ ತಕರಾರು ಮಾಡುತ್ತಿದ್ದ, ಓದ್ಲಿ ಬಿಡು ಓದಾ ಹುಡುಗರಿಗ್ಯಾಕೆ ಬಾದೆ ಇಕ್‌ತ್ತೀಯಾ? ನಿನ್ ಕುರಿ ಬೇಕಾದ್ರೆ ನಾನ್ ಮೇಸ್‌ತ್ತೀನಿ. ನಾವಂತು ಓದ್‌ಲಿಲ್ಲ, ಅವರಾದ್ರು ಓದ್ಲಿ ಅಂತೇಳಿದ ಅವ್ವ. ಅಪ್ಪ ನೆಚ್ಚಿಕೊಂಡಿದ್ದ ಹತ್ತು ಹದಿನೈದು ಕುರಿಗಳನ್ನ ಹೊಡುಕಂಡು. ಹೊಲಗಳ ಬದುಗಳಲ್ಲಿ ಮೇಯಿಸಿಕೊಂಡು ಬಂದು, ಮನೇಲಿ ಕಸ-ಮುಸುರೆ, ಹಿಟ್ಟು ಸಾರು, ಅಂತ ಸವೆದು-ಸವೆದು ಸೋತವಳು. ಅಪ್ಪ ದಿನವು ಬೆಳಗ್ಗೆ ಎದ್ದೋಗಿ, ಮರಿ ಮೇವು ತರೋದೊಂದು ಬಿಟ್ರೆ. ಇನ್ನು ಯಾವ ಇಳುವು ಬಳುವೆನ್ನುವ, ಬದುಕನ್ನ ಸೋಕಿಸಿಕೊಳ್ಳದಾದ. ಅಮ್ಮ ಹೊತ್ತೊತ್ತಿಗೆ ಮಾಡಿದ್ದು ಉಂಡುಂಡು, ಊರಾಚೆಯ ವಂಗೆ ತೋಪಿನೊಳಗೆ, ಇಸ್ಪಿಟಾಟ ಆಡಿ ಬರುತ್ತಿದ್ದ. ಅಂಗೆ ಸುಮ್ಮನೆ ಬರುತ್ತಿರಲಿಲ್ಲ. ಕೈಲಿದ್ದ ಪುಡಿಗಾಸನ್ನೆಲ್ಲ ಕಳುಕೊಂಡು ಬರುತ್ತಿದ್ದ, ಮನೆಗೆ ಬಂದವನು ತೆಪ್ಪಗೆ ಸುಮ್ಮನಿರಾಕಾಗ್‌ದೆ. ನಾನೆ ಬದ್ದನೆಂದು, ನಾನೆ ಈಮನೆಗೆ ಗನಂದಾರಿ ಯಜಮಾನನೆಂದು. ನೀವೇ ಅಪರಾದಿಗಳೆಂದು, ಮನೇಲಿ ಅಮ್ಮ ಮತ್ತೆ ನಮ್ಮಗಳ ಮ್ಯಾಲೆಲ್ಲ ಕೂಗಾಡ್‌ತಾ. ಮೈಮ್ಯಾಲೆ ದೇವ್ರು ಬಂದೋನಂಗೆ ಬಾದೆ ಬೀಳ್‌ತಿದ್ದ. ಇಂತ ತಾಳ್ಮೆ ಇಲ್ಲದ ಗಂಡನ ಕೂಟೆ. ಕಾಲವರಣೆ ಮಾಡಿದ ಅಮ್ಮನ. ಮತ್ತು ನಮ್ಮ ಮುಂದೆ ಅಪ್ಪ ಅಲ್ಲಿಗೆ ಸುಮ್ಮನಾಗದೆ. ಅಮ್ಮ ಬಾದೆ ಬಿದ್ದು ಮೇಯಿಸುತ್ತಿದ್ದ. ಒಂದೊಂದೆ ಕುರಿಗಳನ್ನು ಕದ್ದು ಮುಚ್ಚಿ ಮಾರಾಟಕ್ಕೆ ನಿಂತು ಬುಟ್ಟ.ಅಷ್ಟಾದರು ಅಮ್ಮ ಕೂಲಿನಾಲಿ ಮಾಡಿ ನಮ್ಮನ್ನು ಚೆನ್ನಾಗಿ ಓದಿಸಿದ್ದಳು. ಅವಳು ಆವತ್ತು ಓದಿಸಿದ ಫಲವೆ, ಅಣ್ಣ ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾನೆ.ಅಲ್ಲೇ ಮನೆ ಗಿನೆ ಕಟ್ಟಿಸಿಕೊಂಡು ನನಗಿಂತ ಚೆನ್ನಾಗಿದ್ದಾನೆ. ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾದ್ಯಾಪಕನಾದೆ. ಇನ್ನೇನು ಬೇಕು ನನಗೆ ಒಳ್ಳೆ ಹೆಂಡತಿ ಮಕ್ಕಳು ಮನೆಯು ಕಟ್ಟಿಸಿದೆ ಮಗ ಈ ವರ್ಷದ ಸೆಮ್‌ಗಳನ್ನೆಲ್ಲ ಮುಗಿಸಿ, ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೋಗುತ್ತಿದ್ದಾನೆ.ಮಗಳು ಈಗ ಪಿ ಯು ಸಿ ಗೆಂದು ಕಾಲೇಜಿಗೆ ಸೇರಿಕೊಂಡಳು, ಸದ್ಯಕ್ಕೆ ಯಾವುದೆ ಸಮಸ್ಯೆಯಿಲ್ಲ.ಆದರೆ ನನ್ನ ಹೃದಯಕ್ಕಂಟಿರುವಂತ ನೋವು, ಆ ನೋವನ್ನ ಯಾರು ಬಗೆ ಹರಿಸಲಾರರು. ಅದು ನನಗ್ ನಾನೆ ಪರಿಹರಸ್ಕಳ್‌ಬೇಕು, ನನ್ನನ್ನ ಹೆತ್ತು ಹೊತ್ತು, ಈ ಭೂಮಿಯೆಂಬ ತತ್ವಗಳ ಮ್ಯಾಲೆ, ಒಬ್ಬ ಮನುಷ್ಯನಾಗುವ ತನಕ ಹಪ-ಹಪಿಸಿದ್ದ ಅಮ್ಮನನ್ನು. ಬೆಂಗಳೂರಲ್ಲೆ ನನ್ನ ಮನೆಗೆ ಕರೆದುಕೊಂಡೋಗಿ ಹತ್ತು ವರ್ಷಗಳಾದವು. ಅಂಗೆ ಕರೆದುಕೊಂಡು ಹೋದ, ಎರಡು ವರ್ಷದ ತನಕ, ಅಮ್ಮ ಮತ್ತು ಹೆಂಡತಿ ಚೆನ್ನಾಗಿದ್ದವರು. ಆಮೇಲಾಮೇಲೆ ಸಣ್ಣ ಪುಟ್ಟದ್ದಕ್ಕೆಲ್ಲಾ, ದೊಡ್ಡ ಅಸಮಾದಾನಗಳ ಗೋಡೆ ಕಟ್ಟಿಕೊಳ್ಳಲಾರಂಬಿಸಿದ್ದರು, ನಾನು ಇಬ್ಬರ ಮಾತುಗಳಿಗು ಕಿವಿ ಕೊಡದಂಗೆ, ಯಾರ ವಿಚಾರವನ್ನು ಅತಿ ಮಾಡ್‌ಕಳದಂಗೆ ಕಾಲವರಣೆ ಮಾಡುತ್ತಿದ್ದವನು. ಇಷ್ಟುದಿನ ಯಾರಿಗು ಹೇಳ್‌ದಂಗೆ ಸುಮ್ಮನಿದ್ದೆ, ಯಾಕೆಂದರೆ ಇತ್ತೀಚೆಗಂತು ನಮ್ಮ ಅಮ್ಮನನ್ನು ಮನೆಯ ಸದಸ್ಯರು ವಿಪರೀತ ತಿರಸ್ಕರಿಸುತ್ತಿದ್ದರು. ಅಮ್ಮ ಏನೊಂದು ಮಾತನಾಡದೆ.ಮೌನವಾಗಿ ನುಂಗುತ್ತಿದ್ದಳು. ಇಂತದ್ದೊಂದು ನೋವನ್ನ ನುಂಗಿಕೊಂಡು ಬಂದಿರುವ ನನ್ನ ಮುಂದೆ. ಈ ನಾಗನ ಮುಲಾಜುಗಳಾಚಿಗೆನ ಮಾತುಗಳನ್ನ ಕೇಳುತ್ತಿದ್ದರೆ.ನಾನೆ ಮಹಾ ದೊಡ್ಡ ಅಪರಾಧಿಯೆನ್ನುವಂತಾಯಿತು.ನನ್ನ ಅಮ್ಮ ತಬ್ಬಲಿಯಾಗುವ
ಕಥಾ ಸಂಗಾತಿ ಡೊಂಕು ವಿಜಯಾಮೋಹನ್ : ಅಕ್ಕಯ್ಯನೆದೆಯೊಳಗೆ ಬಗೆ ಬಗೆದು ಬಿತ್ತಿದ್ದ ಚಿಂತೆಗಳೆಂಬ ತರಾವರಿ ಬೀಜಗಳು, ಅವು ಒಂದಲ್ಲ ಎರಡಲ್ಲ, ಮೂರು ಸಂಗತಿಗಳು ಮೊಳಕೆಯೊಡಕೊಂಡು. ಪೈರುಗಳಾಗಿ ಬೆಳೆಯುವಾಗ, ಅವುಗಳನ್ನ ಬುಡ ಸಮೇತ ಕಿತ್ತೆಸೆಯಲಾಗದೆ, ಅವಳೊಳಗವಳು ಖಿನ್ನಳಾಗುತ್ತ ಕುಂತು, ಇಂಗೆ ಗರ ಬಡದೋನಂಗೆ ಕುಂತಿರುವ ಮಗನನ್ನು ನೋಡುತ್ತಿದ್ದರೆ. ಬೆಳಗಾ ಸಂಜೇಲಿ ಆ ಚಿಂತೆಯ ಪೈರುಗಳಿಗೆ ನೋವೆಂಬ ನೀರು ಜಿನುಗುತ್ತಿತ್ತು. ಅವಳ ಮನೇಲಿ ಅವಳಿಗಿದ್ದದ್ದು ಒಂದೇ ಒಂದು ಗಂಡುಡಗ. ನೆಲಕ್ಕೆ ಬಿಟ್ಟರೆ ಎಲ್ಲಿ ಮಣ್ಣಾಗ್‌ತ್ತಾನೊ? ಅನ್ನುವಂತ ನಯಾ-ನಾಜೋಕಿನೊಳಗೆ ಸಾಕಿದ್ದಳು. ಅವನು ಅಂಗೆ ಅಷ್ಟೇ ಭಯ-ಭಕುತಿಯಿಂದ ಬೆಳೆದು ವಯಸ್ಸಿಗೆ ಬಂದು ನಿಂತ ಹುಡುಗ. ನಾನೆಂದರೆ ನನ್ನ ಇರುವೆಂದರೆ ಎಲ್ಲೂ ಮುಕ್ಕಾಗಬಾರದು. ಅನ್ನುವಂತ ಮಗನನ್ನ ಪಡೀಬೇಕಾದ್ರೆ. ಅಕ್ಕಯ್ಯ ಕೂಡ ಯಾವ ಜನುಮದಲ್ಲಿ? ಯಾವ್‌ದೇವ್ರಿಗೆ? ಅದೆಂತ ಹೂವ್ವಾ ಮುಡಿಸಿದ್ಲೋ ಏನೊ? ಅಂತ ಮಗನ ಹೆಸರು ಪ್ರಸನ್ನ, ಹೆಸರಿಗೆ ಸರಿಯಾಗಿ ತೂಕವಾದ ಹುಡುಗ, ಅಂತವನು ಕೂಡ ಅವಳ ಜೊತೇಲಿ ಹಿಟ್ಟು ನೀರು, ನಿದ್ದೆ ನಿಲುವು ಅನ್ನುವುದನ್ನೆ ಬಿಟ್ಟು. ಚಿಂತೆಯ ಸಂತೇಲಿ ಕುಂತು- ಮಕನಾಗೆ ಕುಂತು ಬಿಡಂಗಾದ, ಅದು ಯಾಕೆನ್ನುವ ಪ್ರಶ್ನೆಗಳು, ಅಕ್ಕಯ್ಯ ಮತ್ತು ಪ್ರಸನ್ನನ ಎದೆಯೊಳಗೆ ಗುಂಗೆ ಹುಳುವಾಗಿ ಕೊರಿಯಾಕಿಡಿದವು. ಬ್ಯಾರೆಯವರಿಗೆ ಅಷ್ಟಾಗಿ ಗೊತ್ತಾಗ್‌ಲಿಲ್ಲ, ಪ್ರಸನ್ನ ಹುಟ್ಟಿ-ಬೆಳೆದ ಇಷ್ಟೊರುಷದಲ್ಲಿ, ಯಾರ್ ತಂಟಿಗು ಹೋಗದ ಹುಡುಗ. ಈಗ ಐದಾರು ವರ‍್ಷದಿಂದ ಈಚೆಗೆ, ಅದು ಯಂತ ಶನಿ ಎಗಲೇರಿಬಿಡತೊ ಏನೊ? ಅವನು ಮಾಡದ ತಪ್ಪುಗಳೆಲ್ಲ ಅವನಿಗೆ ತಿರುಗಿಸಿ ಛಾಟಿಯಂತೆ ಬೀಸಾಕಿಡದ್‌ವು. ಅಂಗಾಗೆ ಅವನು ಕುಂತು ಮಕನಾಗೆ ಕುಂತಿದ್ದ. ಅವನ ಮುಂದೆ ಬಾಯಿ ಬಿಟ್ಟುಕೊಂಡು ಉರಿಯುತ್ತಿರುವ ಸೂರ‍್ಯನು ಇದ್ದ. ಕವ-ಕವನೆಂದು ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಕತ್ಲೇನು ಇತ್ತು. ಆದರೆ ಇದ್ಯಾವುದುನ್ನು ನಿಗಾ ಮಾಡಲಾರದಂತ ಮನಸ್ಸಿನೊಳಗೆ ಮನಸ್ಸಿಲ್ಲದ ಪ್ರಸನ್ನನೆಂಬುವನನ್ನು.ನೋಡಿದ-ಮಕನಾಗಿ ನೋಡುತ್ತಿರುವ ಅಕ್ಕಯ್ಯನ ಎದೆಯೊಳಗೆ. ಆ ಚಿಂತೆಯ ಪೈರುಗಳು ತರಾವರಿಯಾಗಿ ತೂಗಾಡುತ್ತಿದ್ದವು. ಇದ್ಯಾಕಲ ಪ್ರಸನ್ನ ಕೆಲಸಿಲ್ಲ ಕಾರ‍್ಯವಿಲ್ಲ, ಬರಿ ಕುಂತು ಮಕನಾಗೆ ಸುಮ್ಮನೆ ಕುಂತಿದ್ದೆ ಆಯಿತಲ್ಲಲೆ? ಎಂದು ಆ ಪಕ್ಕದ ಮನೆ ಮಲ್ಲೇಶನ ಮಾತೆನ್ನುವುದು. ಆಗತಾನೆ ಅವನ ಮೊಣಕಾಲಿನವರೆಗು ಮೊಡಚಿಕೊಂಡಿದ್ದ ಮಾಸಲು ಲುಂಗಿಯನ್ನ. ಕಾಲಿನ ಪಾದದವರೆಗೆ ಇಳಿಯ ಬಿಟ್ಟು, ಅವನ ಎದೆ ತಳ್ಳಿ ಬಂದ ದೊಡ್ಡುಸಿರು ಕಕ್ಕಿ, ಆ ಕಲ್ಲು ಬೆಂಚಿನ ಮ್ಯಾಲೆ ಕುಂಡಿ ಊರಿದ್ದ ಪ್ರಸನ್ನನ ಕಿವಿಗೆ ತಾಕತು. ರಭ-ರಭನೆ ಯಾರೊ ಕೆನ್ನೆಗೆರಡು ಬಾರಿಸಿದಂತಾಯಿತು. ಲೇ ನಾನ್ ನಮ್ಮನೆ ಬಾಗ್ಲಲ್ಲಿ ಕುಂತಿದ್ರೆ ನಿನಗೇನಲ ಇಕ್ಕಟ್ಟು? ಏನ್ ನಿನ್ ಪಂಚೆ ಬಾಗ್ಲಿಗೇನಾರ ಬಂದು ಕುಂತಿದ್ದಿನೇನಲ? ಪ್ರಸನ್ನನ ಬಾಯೊಳಗೆ ಬಂದ ಮಾತು ಅಷ್ಟೇ ಗಡುಸಾಗಿ ಇತ್ತು. ಎಂದು ಯಾವತ್ತು ಅವನ ಬಾಯಲ್ಲಿ ಅಂತ ಗಡುಸಿನ ಮಾತುಗಳೆ ಬರ್‌ತಿರಲಿಲ್ಲ. ಕೆಲಸಿಲ್ಲ-ಕಾರ‍್ಯವಿಲ್ಲದಂಗೆ ಕುಂತುಬಿಟ್ಟಲ್ಲೊ? ಎಂದ ಪಕ್ಕದ ಮನೆ ಮಲ್ಲೇಶನ ಮಾತು ದಿಟದಲ್ಲಿ ದಿಟವಾದ ಸುಳ್ಳು. ಯಾಕೆಂದರೆ ಪ್ರಸನ್ನನನ್ನು ಹುಡುಗನಿಂದಲು ಹೆತ್ತು ಹೊತ್ತು ಸಾಕಿರುವ. ನಮ್ಮ ಅಕ್ಕಯ್ಯನಿಗೆ ಗೊತ್ತು. ಯಾವತ್ತು ಅವನು ಕೆಲಸ ಕಾರ‍್ಯವಿಲ್ಲದೆ ಅಷ್ಟು ಸಲೀಸಾಗಿ ಹಿಟ್ಟುಂಡ ಹುಡುಗನೆ ಅಲ್ಲ. ಅಂತ ಸೊಂಬೇರಿ ಊಟವೆನ್ನುವುದು ನನ್ ಮನಸ್ಸಿಗೆ ಹಿಡಿಯೋದು ಇಲ್ಲ, ನನ್ ಮೈಗೆ ದಕ್ಕೋದು ಇಲ್ಲ, ಎಂದು ಸದಾ ಹೇಳುತ್ತಿದ್ದ ಪ್ರಸನ್ನ. ಬೆಳಕರಿದು ಎದ್ದರೆ ಸಾಕು ಏನಾದರೊಂದು ಕೆಲಸವನ್ನ ಹುಡುಕೇ ಹುಡುಕ್‌ತ್ತಿದ್ದ. ಅಕಸ್ಮಾತ್ತಾಗಿ ಆವತ್ತೇನು ಕೆಲಸಿಲ್ಲವೆಂದ್ರೆ ನಿಂತಿರೊ ಕಂಬಾನಾದ್ರು ಸುತ್ತುತೀನಿ ಬಿಡಮ್ಮ, ಅನ್ನುವಂತ ಉಮ್ಮಸ್ಸಿನ ಹುಡುಗ. ಅಂತವನು ಇದ್ದೂರಿನ ಏಳನೇ ಕ್ಲಾಸಿನ್‌ವರೆಗು ಅಷ್ಟೇ ಚೆನ್ನಾಗಿ ಓದಿ, ಪಕ್ಕದೂರಿನ ಮುದ್ದೇನಹಳ್ಳಿ ಐಸ್ಕೂಲಿನಲ್ಲು, ನೂರಕ್ಕೆ ಎಂಬತ್ತು ಪರ‍್ಸೆಂಟು ನಂಬರ್ ತಗದು. ಎಸ್.ಎಸ್.ಎಲ್.ಸಿ ಪಾಸ್ ಮಾಡಿಕೊಂಡಿದ್ದ. ಜೊತೆಗೆ ಮನೆಯ ದನಕರುಗಳನ್ನ ಮೇಯಿಸುತ್ತಿದ್ದ. ಸೊಪ್ಪು-ಸೌದೆ ಹುಲ್ಲು ನೀರೆನ್ನುವ ಉಸಿರುಳಿಯುವ ಆದಾರಗಳನ್ನು ಆ ಮನೆಗಾಗಿ ಹೊಂಚಿಕೊಡುತ್ತಿದ್ದ. ಅಂಗೆ ಬ್ಯಾಸಿಗೆ ರಜ ದಸರ ರಜೆಯೊಳಗೆಲ್ಲ, ಯಾವ ನೆಂಟ್ರು ಗಿಂಟ್ರು ಊರುಗಳಿಗೆ ಹೋಗ್‌ದಂಗೆ. ತೆಂಗಿನ ತೋಟಗಳಲ್ಲಿ ಕಾಯಿ ಕೀಳುವ ನಿಪುಣನಾಗಿದ್ದ. ಯಾರು ಎಷ್ಟೊತ್ತಿನಲ್ಲಿ ಕರದ್ರು ಹೋಗಿ,ಕಾಯಿಗಳನ್ನು ಕಿತ್ತುಕೊಡುತ್ತಿದ್ದ ಮಗನನ್ನು ಕಂಡು. ಲೇ ನೀನು ಬರಿ ಕಾಯಿ ಕೀಳದ್ರಲ್ಲೆ ಕಾಲ ನೂಕ್‌ಬ್ಯಾಡವೊ? ಮುಂದಕ್ಕೆ ಇನ್ನೇನಾದ್ರು ದೊಡ್‌ದಾಗಿ ಓದ್‌ಬೇಕ್ ಕಣಪ್ಪ ಎಂದು ಕೊರಗುತ್ತಿದ್ದ. ಅಮ್ಮನ ಮಾತನ್ನು ಅಂಗೆ ಮನಸ್ಸಿಗಾಕಿಕೊಂಡ. ಅವನ ಜೊತೆಗಾರರು ಮೇಷ್ಟುç ಟ್ರೆöನಿಂಗ್ ಮುಗಿಸಿಕೊಂಡಿದ್ದವರು ಕೆಲಸಕ್ಕು ಸೇರ್ ಕಂಡ್ರು, ನಾನು ಸುಮ್ಮನಿದ್ರೆ ಆಗಲ್ಲ? ಇಂತಾ ಮೇಷ್ಟ್ರು ಆಗ್‌ಬೇಕೆಂಬ ಛಲ ಅವನಲ್ಲು ಬಂತು, ಎರಡೊರುಷ ಸಿ.ಪಿ.ಎಡ್ ಟ್ರೈನಿಂಗ್ ಅನ್ನೊದನ್ನ ಮುಗಿಸಿಕೊಂಡು ಬಂದ, ಬರಿ ಒಂದರಿಂದೆ ಒಂದು ಮೂರು ಹೆಣ್ಣುಮಕ್ಕಳನ್ನೆ ಸಾಕಿ ಬೆಳಸಿದ್ದ. ಅವನ ಸ್ವಾದ್ರಮಾವ ಸರ‍್ವೆ ಅಪೀಸೊಂದರಲ್ಲಿ ಕೆಲಸದಲ್ಲಿದ್ದವನು. ಅವನ ಕಣ್ಣೇಂಬೋವು ಜನವನ್ನಾಗ್‌ಲಿ-ನೆಲವನ್ನಾಗ್‌ಲಿ ಅಷ್ಟಾಗಿ ನೋಡ್‌ತಿರಲಿಲ್ಲ. ಅಂತ ದಿಮಾಕಿನ ಮಾವನ ಮುಂದೆ, ಅಣ್ಣಯ್ಯ ನಿಮ್ಮುಡುಗುರು ಮಾತ್ರ ಜಾಸ್ತಿ-ಜಾಸ್ತಿ ಓದ್‌ಕಂತಾ ಅವರೆ. ನನ್ನುಡುಗನ ಬದುಕು ಬರಿ ಕೂಲಿ ನಾಲಿ ಅನ್ನೋದರಲ್ಲೆ ಮುಗಿಬೇಕಾ? ಎಂದು ಯಾವಾಗ್‌ಲು ಮುಖಾ ಕಿವುಚಿಕೊಂಡು ಮಾತಾಡ್‌ತಿದ್ದ. ಪ್ರಸನ್ನನ ಅಮ್ಮನ ಮಾತಿಗೆ. ಅಣ್ಣನೆಂಬೋನು ಕಟ್ಟು ಬಿದ್ದು. ಒಳ್ಳೆ ಪ್ರವೇಟ್ ಇಸ್ಕೂಲಿಗೆ ಪ್ರಸನ್ನನನ್ನು ಪಿ.ಟಿ ಮೇಷ್ಟ್ರಾಗಿ ಕೆಲಸಕ್ಕೆ ಸೇರಿಸಿಬಿಟ್ಟಿದ್ದ. ಅಂತ ಇಸ್ಕೂಲು ಮುಂದೊಂದು ದಿನ ಪರಮ್‌ನೆಂಟು ಸಂಬಳ ಕೊಡುತ್ತೆ ಕಣಮ್ಮ, ಎಂದು ನೆಚ್ಚಿಕೊಂಡಿದ್ದ ಪ್ರಸನ್ನನ ಭರವಸೆಯ ಮಾತಿಗೆ. ಅವಳು ನಮ್ಮಕ್ಕಯ್ಯನಿಗಿದ್ದ ಬಂಗಾರ್‌ದಂತ ಅರ‍್ದ ಎಕರೆ ಹೊಲಾನು ಮಾರಿ. ಲಕ್ಷದ ಇಪ್ಪತ್ತು ಸಾವಿರ ದುಡ್ಡು ಕಟ್ಟೀಳು. ಇನ್ನೂರರಿಂದ ಇನ್ನೂರೆಂಬತ್ತರವರೆಗು ಸ್ಟ್ರೆಂತ್ ಇದ್ದ ಮಕ್ಕಳ ಇಸ್ಕೂಲಿನೊಳಗೆ. ಮೇಷ್ಟ್ರು ಮೇಡಮ್‌ಗಳು ಇವನಿಗಿಂತ ಒಂದು ನಾಕೆಜ್ಜೆ ಲೆವಲ್ಲಾಗಿದ್ದವರು. ಇವನು ದಿನಾ ತೊಡೊ ಬಟ್ಟೆಯಿಂದ ಹಿಡುಕೊಂಡು, ಅವನು ಮಧ್ಯಾಹ್ನ ತಿನ್ನೊ ಊಟದ್‌ವರ್‌ಗು, ಒಂತರ ವಿಚಿತ್ರವಾಗಿ ನೋಡ್‌ತಿದ್ರು. ಪ್ರಸನ್ನ ಇಂತೊರ್ ಬಗ್ಗೆ ಯಾವತ್ತು ತಲೆ ಕೆಡಸಿಕೊಂಬೊ ಹುಡುಗನಾಗಿರಲಿಲ್ಲ, ಅವನಾಯಿತು ಅವನ ಇಸ್ಕೂಲಿನ ಬದುಕಾಯಿತು ಅನ್ನಂಗಿದ್ದವನು. ಇವನು ಅಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಇಸ್ಕೂಲಿನ ಕಾಂಪೋಂಡು, ಬಾತ್‌ರೂಮುಗಳು, ತರಗತಿ ರೂಮುಗಳನ್ನ ನಿಗಿ ನಿಗಿಯನ್ನಂಗೆ ಸ್ವಚ್ಚವಾಗಿಟ್ಟುಕೊಂಡ. ಬರಿ ಡ್ರಿಲ್ಲು, ಕಬ್ಬಡಿ, ಕೊಕ್ಕೊ, ಎಂಬ ಆಟಗಳಲ್ಲಿ ಕಾಲ ಕಳೆಯದೆ. ಅವುಗಳ ಜೊತೆಗೆ ಎಂಟರಿಂದ ಹತ್ತನೆ ತರಗತಿ ಹುಡುಗುರುಗೆ, ಹಿಂದಿ ಪಾಠವನ್ನ ಮಾಡ್‌ತಿದ್ದ. ಹುಡುಗುರು ತೊಡೊ ಯೂನಿ ಫಾರಮ್ಮಿನಿಂದ ಹಿಡುಕೊಂಡು. ಇಡಿ ಹುಡುಗರ ನಯಾ-ನಾಜೋಕು, ಶಿಸ್ತು ಅನ್ನೋದನ್ನ ಕಣ್ಣಾಗೆ ಕಣ್ಣಿಟ್ಟು ನೋಡ್‌ಕಳತಿದ್ದ. ಅವತ್ತೇನಾದ್ರು ರೀತಿ ನೀತಿಯ ಬದುಕು, ಭೋದನೆ, ಅನ್ನೋದು ದಕ್ಕಿದರೆ ಅಪಾರ್‌ವಾಗಿ ಆನಂದ ಪಡತಿದ್ದ. ಒಟ್ಟಿನಲ್ಲಿ ಪ್ರಸನ್‌ಮೇಷ್ಟ್ರಿಗೆ ಇಸ್ಕೂಲೆ ಸರ‍್ವಸ್ವವಾಗಿತ್ತು,ಮ್ಯಾನೇಜ್ಮೆಂಟಿನವರು ಕೂಡ ಇವನ್ ಕಂಡ್ರೆ ಒಳ್ಳೇ ಮೇಷ್ಟ್ರು ಸಿಕ್ಕೀರು ಅನ್ನೊ ಖುಷಿಯಲ್ಲಿದ್ರು. ಇಂಗಾಗೆ ಇರ್‌ಬೇಕು, ಆ ಇಸ್ಕೂಲಿನಲ್ಲಿದ್ದ ಒಂದಿಬ್ರು ಮೇಷ್ಟ್ಗರುಗಳಿಗೆ ಇವನ್ ಮ್ಯಾಲೆ ಯಾವಾಗ್‌ಲು ಒಂದು ವಕ್ರದ ಕಣ್ಣು ಬಿಟ್ಟಿದ್ದರು, ಅವರು ಕನ್ನಡ ಮತ್ತೆ ಸಮಾಜ ಪಾಠ ಮಾಡೊ ಮೇಷ್ಟ್ರುಗಳು, ಬೆಲ್ಲಿಗೆ ಸರಿಯಾಗಿ ಬರ್‌ತ್ತಿದ್ದವರು,ಬಿಲ್ಲುಗಳು ಯಾವಾಗ ಆಗ್‌ತ್ತಾವಂತೊ? ಎಂದು ಲೆಕ್ಕಾಚಾರದಲ್ಲಿದ್ದ ಆ ಇಬ್ಬರಿಗು. ಪ್ರಸನ್ನನನ್ನು ಕಂಡರೆ ಮೈಯ್ಯಿ ಮನಸ್ಸುಗಳು ನವೆಯಾಗತೊಡಗಿದವು. ಪ್ರಸನ್ನ ಇಸ್ಕೂಲನ್ನ ಕುರುತು, ಪ್ರಗತಿಯನ್ನ ಕುರುತು, ಮಕ್ಕಳನ್ನ ಕುರುತು,ಮಾತಾಡಕಂತೇನಾರ ಬಾಯಿತಗದ್ರೆ, ಓಹೊ ಇವನೊಬ್‌ನೆ ದೇಶ ಉದ್ದಾರ ಮಾಡಂಗ್ ಕಾಣ್‌ತಾನಲ, ಓಹೊ ಇವನಿಂದಾನೆ ಇಸ್ಕೂಲ್ ನಡಿತಾದೇನೊ? ಇವನಿಲ್ಲದಿದ್ರೆ ಸ್ಕೂಲೇ ಇಲ್ಲವೇನೊ? ಅಂಬಂಗಾಡ್‌ತಾನ್ ಕಣ್ರಿ. ಎಂದು ಸದಾ ಪ್ರಸನ್ನನ ಬೆನ್ನಿಂದೆ ಬೈಕಳತಿದ್ರು. ಈ ಕಾಲ ಈ ಜನ ಇರೋದೆ ಇಂಗೆ, ಮುಂದುವರಿಯೋರನ್ನ ಕಂಡ್ರೆ ಮೂಗು ಮುರಿತಾರೆ. ಪ್ರಸನ್ನ ಇಂತ ಯಾವ ಅಸೂಯೆಗಳಿಗು ತಲೆ ಕೆಡಿಸಿಕೊಂಡವನಲ್ಲ. ಅವರ ಇಸ್ಕೂಲಿನೊಳಗೆ ಕನ್ನಡ ಪಾಠ ಮಾಡ್‌ತಿರೊ ಮೇಷ್ಟ್ರು ಹರೀಶನೆನ್ನುವವನು, ದಿನ ಸಂಜೆ ಸ್ಪೆಷಲ್ ಕ್ಲಾಸ್ ಮಾಡ್‌ತಿದ್ದ. ಅಲ್ಲಿ ರಮ್ಯ ಎಂಬೊ ಒಂಬತ್ತನೇ ತರಗತಿ ಹುಡುಗಿ ಜೊತೆ, ಕದ್ದು ಮುಚ್ಚಿ ಚೆಲ್ಲಾಟ್‌ವಾಡ್‌ತ್ತಾನೆ ಅನ್ನುವ ಸುದ್ದಿ ಗೊತ್ತಾಗಿ. ಸುಮ್ಮನಿರಲಾರ್‌ದ ಪ್ರಸನ್ನ ಒಂದಿನ ಆ ಹುಡುಗೀನ ಪ್ರವೇಟಾಗಿ ಕರ್‌ದು ಬುದ್ದಿ ಮಾತೇಳ್‌ದ. ಅಲ್ಲೆ ನೋಡ್ರಿ ಪ್ರಸನ್ನನಿಗೆ ಬಲವಾದ ಪರ್‌ಪಾಟಾಗಿದ್ದು, ಮಾರ್‌ನೆ ದಿನ ಹುಡುಗಿಯ ಅಪ್ಪ ಅಮ್ಮ, ಊರಿನ್ ಜನವೆಲ್ಲ ಇಸ್ಕೂಲಿನ್ ಕಾಂಪೋಂಡಿನ ತುಂಬ ಜಮಾಯಿಸಿ ಬುಟ್ರು. ಹುಡುಗಿಯ ಅಪ್ಪ ಪ್ರಾಣಿ ಕುಲದವನಿರ್‌ಬೇಕು. ಪ್ರಸನ್ನನ ಕೊಳ್ಳು ಪಟ್ಟಿ ಹಿಡುಕೊಂಡು, ಏನಲೇ ಮುಠ್ಠಾಳ, ನನ ಮಗಳನ್ನ ರೂಮಿಗೆ ಕರದು ಕೈ ಮೈ ಮುಟ್ಟಿಕೊಂಡು, ಕೆಡಸಾಕ್ ನೋಡ್‌ದಂತಲ್ಲಲೇ? ಎಂದು ಹಿಗ್ಗಾ-ಮುಗ್ಗಾ ಚಚ್ಚಿ ಬಿಟ್ಟ,ಯವ್ವ ಯವ್ವ ಇಂತ ಸುಳ್ಳೇಳಿರುವ ಮೊಗುವಿನ ಮಾತನ್ನೇ ಇಸ್ಕೂಲಿನವರು, ಊರ್‌ನವರು, ಅಧಿಕಾರಿಗಳು, ಎಲ್ಲಾರು ನಂಬಿಬಿಟ್ಟ್ರು. ಅವನು ಯಾರ್ ಕಡೆ ಕೈ ಮುಗುದು ಎಂಗ್ ಬೇಡ್‌ಕಂಡ್ರು ಯಾರು ನಂಬಲಿಲ್ಲ. ಅದೇ ದಿವಸ ಬಿ.ಇ.ಓ ಸಾಯಬ್ರು ಮ್ಯಾನೇಜ್ ಮೆಂಟಿನವರು ಸೇರ್‌ಕಂಡು. ಪ್ರಸನ್ನನ್ನು ಕೆಲಸದಿಂದ ಕಿತ್ತೇ ಬುಟ್ರು. ಪೇಪರ್‌ನವರು ವಿದ್ಯಾರ‍್ಥಿನಿಗೆ ಲೈಂಗಿಕ ಕಿರುಕುಳ. ಮೇಷ್ಟ್ತಿಗೆ ಗೂಸ ಅಂತ ವರ‍್ಣನೆಯಾಗಿ ಬರ್‌ದೇ ಬುಟ್ರು. ಅವನು ಮಾಡದೇ ಇರೋ ತಪ್ಪಿಗೆ ಅಪಾರ್‌ವಾದ ಅವಮಾನ ಸೋಲು, ಯಾರಿಗೆ ತಾನೆ ಮನಸ್ಸಿನೊಳಗೆ ಮನಸಿದ್ದಾತು? ಅಂಗಾಗೆ ಹಿಟ್ಟು ನೀರು ಬಿಟ್ಟು ಮಕ್ಕೊಂದು ಬಟ್ಟೆ ಹೊದ್ದುಕೊಂಡು ಕುಂತುಬುಟ್ಟ. ಆವತ್ತು ಅಕ್ಕಯ್ಯನ ದುಃಖ ಕೇಳೊವರಿರಲಿಲ್ಲ. ಯಾವ್ ಬಂದು ಬಳಗವು ಹತ್ತಿರಕ್ಕೆ ಬಂದಿರ್‌ಲಿಲ್ಲ. ಅದೇ ನೆಲ ಕಾಣ್‌ದಿರೊ ಸ್ವಾದ್ರ ಮಾವನ ಮುಂದೆ. ಅನ್ಯಾಯವಾದ ಇಂತ ಕಥೆನ ಹೇಳ್‌ಕಂಡು, ಅಮ್ಮ-ಮಗ ಗಳ-ಗಳನೆ ಅತ್ತು ಬುಟ್ರು. ಇನ್ನು ಕುಂತು-ಕಡೇನೆ ಕುಂತು ಬುಟ್ಟು, ತಲೆ ಕೆಡಿಸಿಕೊಂಡ ಪ್ರಸನ್ನ ನನ್ನ ಕೈಯಿಗೆ ಸಿಗದಂಗಾಗ್ ಬುಡತ್ತಾನೆ. ಎಂದ ಅಕ್ಕಯ್ಯನ ಸಂಕಟವನ್ನ ಅರ‍್ಥೈಸಿಕೊಂಡ ಅವಳ ಅಣ್ಣನಾದವನು. ಬೆಂಗಳೂರಿನ ಯಾವುದೊ ಪ್ಯಾಕ್ಟ್ರೀಲಿ ಲೆಕ್ಕ ಬರೆಯೊ ಕೆಲಸ ಕೊಡಿಸಿದ್ದ. ಅವನ ಹೆಂಡತಿ ಕಡೆಯ ನೆಂಟರ ಮನೇಲಿ ವಾಸವಿರಲಿ ಅಂತ ಬಿಟ್ಟುಬಂದ. ಅಕ್ಕಯ್ಯನಿಗು ನಿರಾಳವಾಗಿತ್ತು, ಅವಳು ಎಂಗಾದ್ರು ಮಾಡಿ ಅವನನ್ನು ಒಂದು ದಡಾ ಸೇರಿಸುವ ಹಂಬಲದವಳು. ಅಂತದ್ದೊಂದು ಪ್ಯಾಕ್ಟ್ರಿ ಕೆಲಸಕ್ಕೆ ಸೇರ್‌ಕಂಡ ಮ್ಯಾಲೆ, ಪ್ರಸನ್ನ ದಿನ ಕಳದಂಗ್ ಕಳದಂಗೆ ದುಃಖವೆಂಬ ದೂಳಿಡುಕೊಂಡಿದ್ದ ಮನಸನ್ನ, ಕಾಲವೆಂಬ ಕಡ್ಡಿಯೊಳಗೆ ಕೊಡವಿ ಕೊಂಡ. ಹೊಸ ಬೆಂಗಳೂರು, ಹೊಸ ಕೆಲಸ, ಹೊಸ ಅಕ್ಕ ಬಾವನ ಮನೆ, ಹೊಸ ಹೊಸ ನೂರಾರು ತರಾವರಿ ಮಖಗಳು, ಊರಿಂದ ಬರುವಾಗ ಬಸ್ಸಿನೊಳಗೆ ಜೊತೇಲಿ ಕುಂತಿದ್ದ ಮಾವ, ಅಲ್ಲವಲ ನಿನ್ ಮಖ ನೀನ್ ತೊಳಕಳಾದ್ ಬುಟ್ಟು, ಆ ಹುಡುಗಿ ಮಖ ಯಾಕ್ ತೊಳಿಯಾಕೋಗಿದ್ದಲ? ಇದು ಬ್ಯಾರೆಯವರಿಗೆ ಬುದ್ದಿ ಹೇಳೊಂತ ಕಾಲ್‌ವಲ್ಲ ಕಣೊ? ಎಂದ ಮಾವನ ಮಾತಿಗೆ. ಇನ್ನೊಂದ್‌ಸಲ ಯಾರೊ ಕೆನ್ನೆಗೆರೆಡು ಪಟ-ಪಟನೆ ಹೊಡೆದಂತಾಯಿತು. ಅದಿಕ್ಕೆ ಇರ್‌ಬೇಕು ಹನ್ನೆರಡನೇ ಶತಮಾನದ ಬಸವಣ್ಣನೆಂಬ ಪುಣಾತುಮ. ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ-ನಿಮ್ಮ ಮನವ ಸಂತೈಸಿಕೊಳ್ಳಿ, ಅಂತ ಘಂಟೆ ಬಾರ್‌ಸ್‌ದಂಗೆ ಹೇಳವರೆ. ಆದ್ರು ನಮಗೆ ಬುದ್ದಿ ಬರ್‌ಲಿಲ್ಲ, ಅವನ ಕಣ್ಣಂಚಲ್ಲಿ ಉದುರಿದ ಬೆಚ್ಚಗಿನ ಕಣ್ಣೀರು. ಇನ್ನೆಂದು ತೊಟ್ಟಿಕ್ಕಬಾರದು, ಅಂಬೊ ಭರವಸೇನ ಭದ್ರವಾಗಿಡುಕೊಂಡು. ಮಾವ ತೋರಿಸಿದ ಕೆಲಸಕ್ಕೋದವನು, ಅಚ್‌ಕಟ್ಟಾಗಿ ನೆಂಟರ ಮನೇಲಿ ಇರಂಗಾದ. ಜೊತಿಗೆ ಯಾರ್ ಯಾವೋಳ್ ಕತ್ತನ್ನಾರ ಇಸಗಲಿ, ನಾನಿನ್ನು ಕಣ್ಣೆತ್ತಿಯು ನೋಡಲ್ಲ ಅಂದುಕೊಂಡು ಅವನೊಳಗವನು ಶಪತ ಮಾಡ್‌ಕಂಡ. ಪ್ಯಾಕ್ಟ್ಯರಿಯ ಲೆಕ್ಕ ಪತ್ರಗಳ ಜವಾಬ್ದಾರಿ ಕೆಲಸವನ್ನ ಹಸನಾಗಿ ಮಾಡ್‌ತಿದ್ದ. ಅವನಿಗೆ ಆಶ್ರಯ ಕೊಟ್ಟಿರುವ ಅಕ್ಕ ಬಾವನ ಜೊತೇಲಿ ಆನಂದ್‌ವಾಗಿ ಹೊಂದಿಕೊಂಡ. ಅವರು ಪ್ರಸನ್ನನಿಗು ದೂರದ ಸಂಬಂದಿಕರು, ಆದ್ರು ಈ ಹುಡುಗನ್ನ ಅಕ್ಕರೆಯಿಂದಾನೆ ನೋಡ್‌ಕಳತಿದ್ರು, ಅವನು ಅಷ್ಟೇ ಪುಗಸಟ್ಟೆ ಉಣುತ್ತಿರ್‌ಲಿಲ್ಲ. ಅವನಿಗೆ ಬರೊ
You cannot copy content of this page