ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು.  ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ  ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು.  ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು  “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ  ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು.  ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ.  ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ  ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ  ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ  .

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-29 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್‌ ಚೇತನ ಕನ್ನಡ ಕೋಟಿ ಪ್ರಕಾಶನ ನಿರ್ಮಾಣ ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು.  ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು.  ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು. ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ  ಪ್ರಕಾಶನವನ್ನು ಪ್ರಾರಂಭಿಸಿದರು.ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು. ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು. ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು. ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ. “ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.“ನಮ್ಮವರು ಕಲಿಸಿದರು ಸರಳ ಶೈಲಿಯನು”  ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು. ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು.  ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು. ಜಯದೇವಿ ತಾಯಿಯವರಿಗೆ ಕನ್ನಡವೆಂದರೆ  ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು. ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ  ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು. ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು  ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ  ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ  ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ. “ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |ಜೇನು ಸವಿದಂತೆ ತುಂಬಿದ – ಪದಗಳದನಿ ದನಿಗೂಡಿಸಿ ಹಾಡುವೆನು || ಎನ್ನುತ ಜಯದೇವಿ ತಾಯಿಯವರುಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.(ಮುಂದುವರೆಯುವುದು) ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಹೈದರಾಬಾದ ಕರ್ನಾಟಕ ವಿಮೋಚನಾ ಸಂಘಟನೆ   ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು. ಈ ನಾಯಕರಿಗೆ  ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು. ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ, ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.*ಕನ್ನಡ ಮಕ್ಕಳು ಕನವರಿಸಿ ಕರೆದಾಗಇನ್ನಾವ ನೆವ ಹೇಳದೆ ನನ ಮನತನ್ನಿಂದ ತಾನೇ ಎಳದಿತ್ತ* ಎಂದೆನ್ನುತ ಜಯದೇವಿತಾಯಿ ಅವರುಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ. ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು  ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ.  ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು  ವ್ಯಕ್ತಪಡಿಸುತ್ತವೆ. ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು.  ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು  ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು. ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ||  ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ  ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ. ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು ಮೊಸರು ಕಡಿತ ಸಿಗಲಿಲ್ಲ -ರೈತಣ್ಣಉಸ್ಸೆಂದಾನ ತನ್ನ ಬಾಳೇಕ|| ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ. ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ.  ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು.  ಜಯದೇವಿ ತಾಯಿಯವರು  ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ. ಸವಿತಾ ದೇಶಮುಖ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ–27 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *ನಿಜಾಂ ಪ್ರಾಂತಿಕ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡವಚನ ಸಾಹಿತ್ಯದ ಜಾಗೃತಿ* ಹನ್ನೆರಡನೇ ಶತಮಾನದ ಶರಣರ ವಚನಗಳು  ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದವು. ಈ ವಚನಗಳ ಪ್ರಭಾವವು ಇಂದಿನ ಕಲ್ಯಾಣ ಕರ್ನಾಟಕ ಹೈದರಾಬಾದ ಕರ್ನಾಟಕ ಪ್ರದೇಶದ ಗಡಿಭಾಗಗಳಲ್ಲಿಯೂ ಆಳವಾಗಿ ಬೇರೂರಿತ್ತು.ನಿಜಾಂ ಆಡಳಿತದ ಕಾಲದಲ್ಲಿ ಕನ್ನಡ ಭಾಷೆ ಮತ್ತು ವಚನ ಸಾಹಿತ್ಯಕ್ಕೆ ಸೂಕ್ತ ಪ್ರೋತ್ಸಾಹ ದೊರೆಯದಿದ್ದರೂ, ಕನ್ನಡಾಭಿಮಾನಿಗಳು ಮತ್ತು ಶರಣ ತತ್ವದ ಅನುಯಾಯಿಗಳು ಈ ಪರಂಪರೆಯನ್ನು ಜೀವಂತವಾಗಿಡಲು ನಿರಂತರವಾಗಿ ಶ್ರಮಿಸಿದರು. ಅದೇ ಸಮಯದಲ್ಲಿ ೧೯೩೪ ರಲ್ಲಿ ಹರಡೇಕರ್ ಮಂಜಪ್ಪನವರು ವಚನ ಧರ್ಮ ಗ್ರಂಥವೆಂದು ವಚನ ಸಪ್ತಾಹವನ್ನು ಪ್ರಾರಂಭಿಸಿದ್ದರು.ಬೀದರ ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ತುಂಬಾ ವ್ಯಾಪಕವಾಗಿತ್ತು.ಪ್ರಭುರಾಜ ಕಂಬಳಿ ಬಾಬಾ, ಸಂಗ್ರಾಮಪ್ಪ ವಕೀಲ ಹಾಗೂ ಜಯದೇವಿ ತಾಯಿಯವರು ಒಂದಾಗಿ “ನಿಜಾಂ ಪ್ರಾಂತಿಕ ಪರಿಷತ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. *ಕತ್ತಲೆಯೆಂಬ ಅಜ್ಞಾನ |ಭ್ರಾಂತಿಎಂಬೋ ಭೂತರಾತರಿ ಹಗಲು ಕುಣಿದಿತ್ತು- ಲೋಕದಪ್ರೇತಗಳೆಲ್ಲ ಭೂತಾಗಿ ಕೂಣಿದಿತ||* ಎನ್ನುವಂತೆ….  ಜಗದಿ ಅಜ್ಞಾನವೆಂಬುವುದು ಭೂತ ಪ್ರೇತವಾಗಿ ಕುಣಿಯುವ ಸಮಯದಲ್ಲಿ ವಚನಗಳನ್ನು ಶರಣರು ನಮ್ಮ ಕೈಯಲ್ಲಿ ಇಟ್ಟರು. ಇಂಥ ಅಮೂಲ್ಯವಾದ ಜ್ಞಾನವನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವದುಕ್ಕೆ ಕರೆ ನೀಡಿದರು….ಜಯದೇವಿತಾಯಿಯವರು .  ಪರಿಷತ್ತಿನ ಪ್ರಮುಖ ಧ್ಯೇಯ ಕನ್ನಡ ಭಾಷೆ, ಶರಣರ ವಚನ ಸಾಹಿತ್ಯ ಮತ್ತು ಬಸವ ತತ್ವಗಳನ್ನು ಜನಸಾಮಾನ್ಯರಲ್ಲಿ ಹರಡುವುದಾಗಿತ್ತು.ಪರಿಷತ್ತಿನ ಆಶ್ರಯದಲ್ಲಿ ಒಂದು ವಾಚನಾಲಯ  ಸ್ಥಾಪಿಸಲಾಯಿತು. ಅಲ್ಲಿ ಬಸವ ಸಾಹಿತ್ಯ, ವಚನ ಸಂಕಲನಗಳು ಹಾಗೂ ಕನ್ನಡದ ಅಮೂಲ್ಯ ಕೃತಿಗಳನ್ನು ಸಾರ್ವಜನಿಕರ ಓದಿಗಾಗಿ ಲಭ್ಯವಾಗುವಂತೆ ಮಾಡಲಾಯಿತು. ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ವಾಚನಾಲಯ ಪ್ರಮುಖ ಕೇಂದ್ರವಾಯಿತು.ಅಷ್ಟೇ ಅಲ್ಲದೆ, ಜಗಜ್ಯೋತಿ ಬಸವೇಶ್ವರ, ಅಕ್ಕ ಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣ ಮಹಾತ್ಮರ ಜಯಂತಿಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.ಜಯಂತಿ ಕಾರ್ಯಕ್ರಮಗಳಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು.ಈ ರೀತಿಯಾಗಿ ನಿಜಾಂ ಪ್ರಾಂತಿಕ  ಪರಿಷತ್ತು ಕನ್ನಡ ಭಾಷೆಯ ಉಳಿವು, ವಚನ ಸಾಹಿತ್ಯದ ಪ್ರಸಾರ ಮತ್ತು ಶರಣ ಸಂಸ್ಕೃತಿಯ ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. *ಅಪರೂಪವಾದ |ಅಪರಮಿತ ಜ್ಞಾನವಿಪರೀತ  ಅಜ್ಞಾನದ ಮಾಯೆ ನುಂಗಿದವುವಚನಗಳು, ರೂಪಿಸಿ ಶರಣರ ಲೋಕವ || *ಎಂದು ಸಾರುತ….. ಜಯದೇವಿ ತಾಯಿಯವರ ನೇತೃತ್ವ ಮತ್ತು ಸಹೋದ್ಯೋಗಿಗಳ ಸೇವಾಭಾವದಿಂದ ಈ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಮತ್ತು ವಚನ ಚಳವಳಿಗೆ ಹೊಸ ಚೈತನ್ಯವನ್ನು ನೀಡಿತು. ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಬಸವತತ್ವದ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸಿತು…..ಇಂಥ ಉದ್ದೇಶಕ್ಕಾಗಿ ಮೈಸೂರು ಮತ್ತು ಬೆಂಗಳೂರಿನಂತಹ ಕನ್ನಡದ ಸಾಂಸ್ಕೃತಿಕ ಕೇಂದ್ರಗಳಿಂದ ಖ್ಯಾತ ಸಾಹಿತಿಗಳು, ಚಿಂತಕರು ಮತ್ತು ಉಪನ್ಯಾಸಕರನ್ನು ಆಹ್ವಾನಿಸಿ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು.ಅಂತಹ ಪ್ರಮುಖ ಅತಿಥಿಗಳಲ್ಲಿ…. ತಾ.ರಾ.ಸು. ಮತ್ತು ಅ.ನಾ.ಕೃ ಮೊದಲಾದ ಪ್ರಸಿದ್ಧ ಸಾಹಿತಿಗಳೂ ಭಾಗವಹಿಸಿ, ಕನ್ನಡ ಸಾಹಿತ್ಯ, ಶರಣರ ವಚನಗಳು ಮತ್ತು ಬಸವ ತತ್ವಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಈ ಸಂಘಟನೆಯ ಕಾರ್ಯಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಜನಪರ ಚಳವಳಿಯಾಗಿದ್ದವು.  ಕಾರ್ಯಕರ್ತರು ಹಳ್ಳಿಹಳ್ಳಿಗೆ ತೆರಳಿ ಬಸವತತ್ವದ ಸಮಾನತೆ, ಕಾಯಕ, ದಾಸೋಹ, ಜಾತ್ಯಾತೀತತೆ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದರು. ಸಮಾಜದಲ್ಲಿ ಅಸಮಾನತೆ, ಅಜ್ಞಾನ ಮತ್ತು ಸಾಮಾಜಿಕ ಬೇಧಭಾವವನ್ನು ನಿವಾರಿಸಿ, ಸಮಾನತೆಯ ಸಮಾಜ ನಿರ್ಮಾಣವೇ ಅವರ ಪ್ರಮುಖ ಧ್ಯೇಯವಾಗಿತ್ತು. *ನೆಲದ ಸತ್ವದ ಮೇಲೆ |ಹೊಲ ಬೆಳೆಯುವಂತೆಮೂಲ ತನ್ನ ಅರುವಿನ ಬೀಜ- ಬೆಳೆದಿತ್ತುಸಕಲ  ಶರಣ ತತ್ವ ಪ್ರಪಂಚ ವಿಸ್ತಾರ||* ತನ್ನರಿವನ್ನೇ ಗುರುವನ್ನಾಗಿಸಿ ದೇಹವನ್ನೇ  ದೇಗುಲುಮಾಡಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಕರೆ ಕೊಡುವ ವಚನಗಳನ್ನು ಪ್ರಚಾರಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ರೀತಿಯ ಕಾರ್ಯಕ್ರಮಗಳಿಗೆ ನಿಜಾಂ ಸರ್ಕಾರದಿಂದ ಹಲವು ರೀತಿಯ ಪ್ರತಿರೋಧ ಮತ್ತು ನಿರ್ಬಂಧಗಳು ಎದುರಾದರೂ, ಪರಿಷತ್ತಿನ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ.ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಚನ ಸಪ್ತಾಹವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದರು. ಈ ಸಪ್ತಾಹದಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರಣರ ಆದರ್ಶಗಳ ಕುರಿತು ವಿಶೇಷ ಪ್ರವಚನಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆದು, ಕನ್ನಡ ಭಾಷೆ, ಶರಣ ಸಂಸ್ಕೃತಿ ಮತ್ತು ಶರಣ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೂ ಯಶಸ್ವಿಯಾಗಿ ತಲುಪಿಸಲಾಯಿತು. ವಚನ ಸಪ್ತಾಹ ಮತ್ತು ಕನ್ನಡ ಜಾಗೃತಿಯ ಕಾರ್ಯಕ್ರಮಗಳು ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ವಚನ ಸಪ್ತಾಹವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಯ ಮಹೋತ್ಸವವಾಗಿತ್ತು. *ನಿಮ್ಮಅಡಿಗಳು ದೊರೆತು|ಹಮ್ಮು ಜರಿದು ಹೋಯ್ತು ನೆಮ್ಮದಿಯಿತು ಎನ ಮನಕ್ಕೆ -ಬಸವಣ್ಣ ಒಮ್ಮನವಾಯಿತು ನಿಮ್ಮಲ್ಲಿ||*ಎಂದು ಬಸವಣ್ಣನನು ಹಾಡಿ ಹೊಗಳುತ್ತಾ ತತ್ವಗಳನ್ನು ಪ್ರಚಾರ ಮಾಡಲಾರಂಭಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಖ್ಯಾತ ವಿದ್ವಾಂಸರು, ಧಾರ್ಮಿಕ ಮುಖಂಡರು, ಸಾಹಿತಿಗಳು ಹಾಗೂ ಸಮಾಜ ಸುಧಾರಕರು ಆಗಮಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.ಈ ಕಾರ್ಯಕ್ರಮಗಳಲ್ಲಿ ತರಳಬಾಳು ಸ್ವಾಮಿಗಳು, ಎಸ್ ನಿಜಲಿಂಗಪ್ಪ, ಎಂ.ಆರ್ ಶ್ರೀನಿವಾಸ್ ಮೂರ್ತಿ, ಸ್ವಾಮಿ ರಮಾನಂದ ತೀರ್ಥರು, ಮಾನ್ವಿ ನರಸಿಂಹರಾಯರು, ಸಿದ್ದಯ್ಯ ಪುರಾಣಕ, ಬಾಮಣಗಾವ್ಕರ್ ಅಮರಾವತಿ ,ಬಸಪ್ಪ ಮಂಡಗಿ ವಕೀಲರು ,ಚನ್ನಬಸವ ಪಟ್ಟದೇವರು, ವಿಶ್ವನಾಥ್ ರೆಡ್ಡಿ ಮುದನ್ನಾಳ, ವಿದ್ಯಾಧರ್ ಗುರೂಜಿ, ಬಿ. ಮಹದೇವಪ್ಪ, ಭೀಮಣ್ಣ ಖಂಡ್ರೆ  ಮೊದಲಾದ ದಿಗ್ಗಜರನ್ನು  ಕರೆಯಿಸಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು ಹಾಗೂ ಸಮಾಜದ ಗಣ್ಯರು ಭಾಗವಹಿಸುತಿದ್ದರು. ಶರಣರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿತ್ತು. ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಾಮ ವಾಚನಾಲಯಗಳ ಸ್ಥಾಪನೆ, ಕನ್ನಡ ಶಾಲೆಗಳ ಆರಂಭ ಹಾಗೂ ಕನ್ನಡ ಶಿಕ್ಷಣದ ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿತ್ತು.ಈ ಎಲ್ಲಾ ಚಟುವಟಿಕೆಗಳ ಮೂಲ ಉದ್ದೇಶ ಕನ್ನಡ ಭಾಷೆಯನ್ನು ಬೆಳೆಸುವುದು, ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆಯುವುದು ಮತ್ತು ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹದ ತತ್ವಗಳ ಆಧಾರದ ಮೇಲೆ ಜಾತಿ–ಧರ್ಮ ಭೇದವಿಲ್ಲದ, ಪ್ರಗತಿಪರ ಸಮಾಜವನ್ನು ನಿರ್ಮಿಸುವುದಾಗಿತ್ತು.ನಿಜಾಂ ಆಡಳಿತದ ಪರಿಸ್ಥಿತಿಯಲ್ಲಿಯೂ ಈ ಕಾರ್ಯಗಳು ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆಯನ್ನು ನೀಡಿದವು. ಸೋಲಾಪುರ ಗಡಿಭಾಗ, ಕನ್ನಡಿಗರ ಆಶಯ ಮತ್ತು ಕರ್ನಾಟಕ ಸೇರ್ಪಡೆಗೆ ನಡೆದ ಚಳವಳಿ ೧೯೪೯ರ ಸಮಯ….ಸೋಲಾಪುರ ಪ್ರದೇಶವು ಭಾಷೆ, ಸಂಸ್ಕೃತಿ ಮತ್ತು ಆಡಳಿತದ ದೃಷ್ಟಿಯಿಂದ ಪ್ರಮುಖ ಚರ್ಚೆಯ ಕೇಂದ್ರವಾಗಿತ್ತು.ಆ ಕಾಲದಲ್ಲಿ ಸೋಲಾಪುರ ತಾಲೂಕನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ದಕ್ಷಿಣ ಸೋಲಾಪುರ ಮತ್ತು ಉತ್ತರ ಸೋಲಾಪುರ ಎಂದು ವಿಭಜಿಸಲಾಯಿತು. ವಿಭಜನೆಯು ಆಡಳಿತಾತ್ಮಕವಾಗಿದ್ದರೂ, ಆ ಭಾಗದಲ್ಲಿ ವಾಸಿಸುತ್ತಿದ್ದ ವಿವಿಧ ಭಾಷಿಕ ಸಮುದಾಯಗಳ ಆಶಯಗಳಿಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿತು.ಅದೇ ಅವಧಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸಂಘಟನೆಯನ್ನು ಯುವಜನರ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದವು.೧೯೪೯ರಲಿ ಜವಹರಲಾಲ್ ನೆಹರು  ಸೋಲಾಪುರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಜನರ ಪಾತ್ರ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅವರು ಕರೆ ನೀಡಿದರು.  ಈ ಪ್ರದೇಶದ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಸೂಕ್ತ ಆಡಳಿತ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕನ್ನಡ ಭಾಷೆಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಮರ್ಪಕ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆಯನ್ನು ಅವರು ರಾಷ್ಟ್ರೀಯ ನಾಯಕರ ಮುಂದಿಟ್ಟರು. ಸೋಲಾಪುರ ಮತ್ತು ಅದರ ಸುತ್ತಮುತ್ತಲಿನ ಗಡಿಭಾಗಗಳಲ್ಲಿ ಕನ್ನಡಿಗರ ಜೊತೆಗೆ ಮರಾಠಿ ಭಾಷಿಕರೂ ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಕನ್ನಡ ಮಾತನಾಡುವ ಜನ ೪೮%  ಇದ್ದರೆ ೩೪% ಅಷ್ಟು ಜನ ಮರಾಠಿ ಮಾತನಾಡುವರು ಹಾಗೂವಿಜಯಪುರ ಅಂದಿನ ಬಿಜಾಪುರ ಮತ್ತು ಅಕ್ಕಲಕೋಟಿನ ಜನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನಂಟು ಹೊಂದಿದ್ದ ಅನೇಕ ಗಡಿಭಾಗಗಳ ಜನರು ತಮ್ಮ ಪ್ರದೇಶವು ಕರ್ನಾಟಕದೊಂದಿಗೆ ಸೇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಭಾಷಾವಾರು ರಾಜ್ಯಗಳ ಪರಿಕಲ್ಪನೆ ಬಲವಾಗುತ್ತಿದ್ದ ಸಂದರ್ಭದಲ್ಲಿ, ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಬೇಕು ಎಂಬ ಅಭಿಪ್ರಾಯವೂ ಬೆಳೆಯತೊಡಗಿತು.ಇಂಥ ಚಳವಳಿಗಳು ನಂತರ ಭಾಷಾವಾರು ರಾಜ್ಯಗಳ ಪುನರ್ರಚನೆ ಕುರಿತ ರಾಷ್ಟ್ರೀಯ ಚರ್ಚೆಗೆ ಪೂರಕವಾದವು. ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಮತ್ತು ಆಡಳಿತಾತ್ಮಕ ನ್ಯಾಯಕ್ಕಾಗಿ ನಡೆದ ಈ ಪ್ರಯತ್ನಗಳು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹಿನ್ನೆಲೆಯಾಗಿ ಪರಿಣಮಿಸಿದವು. (ಮುಂದುವರೆಯುವುದು) ಸವಿತಾ ದೇಶಮುಖ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-26 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕನ್ನಡಾಬಿಮಾನ *ಗಡಿ ಭಾಗವೆಂದರೆ |ಕಡಿಮೆ ಇಲ್ಲ ಕನ್ನಡಕೆ ಉಡಿಯ ತುಂಬುವೆ ಕನ್ನಡ -ತಾಯಿಗೆಒಡವೆಯ ಇಡಿಸುವೆ ಪದಗಳ||*ಅಂತ ಹಾಡುತ ಜಯದೇವಿ ತಾಯಿಯವರು ಗಡಿಭಾಗದಲ್ಲಿರುವ ಕನ್ನಡಿಗರ ಕನ್ನಡಾಭಿಮಾನವನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾರೆ.  ಗಡಿಭಾಗದಲ್ಲಿ ವಾಸಿಸುವುದರಿಂದ ಕನ್ನಡದ ಮೇಲಿನ ಪ್ರೀತಿ, ಗೌರವ ಅಥವಾ ನಿಷ್ಠೆ ಕಡಿಮೆಯಾಗುವುದಿಲ್ಲ  ಸ್ಪಷ್ಟಪಡಿಸುತ್ತ* ಉಡಿಯ ತುಂಬುವೆ ಕನ್ನಡ ಪದಗಳ …ಎಂಬುದು ಸಾಂಕೇತಿಕವಾಗಿದೆ. ಮುತ್ತೈದೆಯಾದ ಕನ್ನಡಾಂಬೆಯ ಉಡಿಯನ್ನು ಕನ್ನಡದ ಮಧುರ ಪದಗಳು, ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯಿಂದ ತುಂಬಿಸಿ ಅವಳನ್ನು ಗೌರವಿಸುವ ಸಂಕಲ್ಪವನ್ನು ವ್ಯಕ್ತಪಡಿಸುತ್ತ…. *ಒಡವೆ ಇಡಿಸುವೆ ಕನ್ನಡ ಪದಗಳ* ಎಂಬುದು ಕನ್ನಡದ ಸುಂದರ ಪದಗಳೇ ಕನ್ನಡ ತಾಯಿಗೆ ಧರಿಸುವ ಅಮೂಲ್ಯ ಆಭರಣಗಳೆಂಬ ಭಾವವನ್ನು ತಿಳಿಸುತ್ತದೆ. ಬಂಗಾರ, ಬೆಳ್ಳಿ ಅಥವಾ ರತ್ನಗಳಿಗಿಂತ  ಶ್ರೇಷ್ಠ ಕನ್ನಡದ  ಪದಗಳು…. ಸಾಹಿತ್ಯ ಮತ್ತು ಸಂಸ್ಕೃತಿಯೇ ಕನ್ನಡಾಂಬೆಯ ನಿಜವಾದ ಅಲಂಕಾರವೆಂದು ಸಾರುವ ತ್ರಿಪದಿ ಗಡಿಭಾಗದ ಕನ್ನಡಿಗರ ಅಚಲ ಕನ್ನಡಾಭಿಮಾನವನ್ನು, ಕನ್ನಡ ತಾಯಿಯನ್ನು ಪದಗಳ ಮೂಲಕ ಆರಾಧಿಸುವ ಮನೋಭಾವವನ್ನು ಹಾಗೂ ಕನ್ನಡ ಭಾಷೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮತ್ತಷ್ಟು ಶ್ರೀಮಂತಗೊಳಿಸುವ ಸಂಕಲ್ಪವನ್ನು ಸುಂದರವಾಗಿ ಅಭಿವ್ಯಕ್ತಿಸುತ್ತ… ಮನದಾಳಕ್ಕೆ ಇಳಿಯುವಂತಹ ತ್ರಿಪದಿಗಳು ರಚಿಸಿದರು…. ಗಡಿನಾಡಿನಲ್ಲಿ ಬದುಕಿದ ತಾಯಿಯವರು‌…ನಿಸರ್ಗದ ಮಡಿಲಿನಲ್ಲಿ ಹುಟ್ಟಿದ ನದಿಯೊಂದು ತನ್ನ ತಾಯಿನಾಡನ್ನು ತೊರೆದು ಹರೆವಂತೆ ಕನ್ನಡದ ಅಸ್ಮಿತೆಯನ್ನು ಎಲ್ಲೆಡೆ ಹರಡಿದವರಲ್ಲಿ ಒಬ್ಬರಾದರು!!!  ಜಯದೇವಿ ತಾಯಿಯವರ ಹೃದಯವೂ ಕನ್ನಡದ ನೆಲ, ಕನ್ನಡದ ಜನ ಮತ್ತು ಕನ್ನಡದ ಸಂಸ್ಕೃತಿಯನ್ನು ಎಂದಿಗೂ ಬಿಟ್ಟು ದೂರವಾಗಲಿಲ್ಲ.ಬೆಟ್ಟಗಳಂತೆ ಅಚಲವಾದ ಅವರ ಕನ್ನಡ ಪ್ರೇಮ, ಸಾಗರದಷ್ಟು ವಿಶಾಲವಾಗಿತ್ತು. ಮಳೆಯ ಹನಿಗಳು ಭೂಮಿಗೆ ಜೀವ ತುಂಬುವಂತೆ, ಅವರ ಕನ್ನಡದ ಪ್ರೀತಿ ಸಾವಿರಾರು ಜನರ ಮನಗಳಲ್ಲಿ ಭಾಷೆಯ ಮೇಲಿನ ಗೌರವವನ್ನು ಅರಳಿಸಿತು.ವಸಂತ ಬಂದಾಗ ಮರಗಳು ಹೊಸ ಚಿಗುರು ಬಿಡುವಂತೆ, ತಾಯಿಯವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರ ಮನದಲ್ಲೂ ಕನ್ನಡದ ಹೊಸ ಚೈತನ್ಯ ಮೊಳೆಯುತ್ತಿತ್ತು. ಪರಿಮಳವನ್ನು ಎಲ್ಲೆಡೆ ಹರಡುವ ಹೂವಿನಂತೆ, ಅವರ ಕನ್ನಡದ ಅಭಿಮಾನ ಎಲ್ಲೆಡೆ ಪಸರಿಸಿತು. ಅವರು ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ನೋಡದೆ, ಬದುಕಿನ ಮೌಲ್ಯಗಳನ್ನು ಬೆಳೆಸುವ ಸಂಸ್ಕೃತಿಯ ಭಾಷೆಯಾಗಿ ಕಂಡರು. ಜಯದೇವಿ ತಾಯಿಯವರಿಗೆ ಕನ್ನಡವೇ ಉಸಿರು, ಅವರ ಆತ್ಮ, ಅವರ ಬದುಕಿನ ಧ್ಯೇಯವಾಗಿತ್ತು….  ಕನ್ನಡವನ್ನೇ ಬದುಕಿದರು…!!!ಅವರ ಪ್ರತಿಯೊಂದು ಮಾತಿನಲ್ಲಿ ಕನ್ನಡದ ಲಾಲಿತ್ಯ,ಪ್ರತಿಯೊಂದು ಬರಹದಲ್ಲಿ ಕನ್ನಡದ ಸೌಂದರ್ಯ, ಪ್ರತಿಯೊಂದು ಕಾರ್ಯದಲ್ಲಿ ಕನ್ನಡದ ಪರಿಮಳ ತುಂಬಿಕೊಂಡಿತ್ತು. ಅವರ ದೃಷ್ಟಿಯಲ್ಲಿ ಕನ್ನಡ ಎಂದರೆ ಕರುಣೆ, ಸಂಸ್ಕಾರ, ಶರಣ ತತ್ವಗಳ ಪ್ರತಿಪಾದನೆ, ಜ್ಞಾನ ಮತ್ತು ಆತ್ಮಗೌರವದ ಪ್ರತೀಕ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಓದಬೇಕು, ಕನ್ನಡದಲ್ಲೇ ಯೋಚಿಸಬೇಕು ಎಂಬ ಆಶಯವನ್ನು ಅವರು ತಮ್ಮ ಬದುಕಿನ ಮೂಲಕವೇ ಸಾರಿದರು. ಅವರಿಗೆ ಕನ್ನಡ ತಾಯಿ ಎಂದರೆ ದೇವತೆ. ತಾಯಿಯ ಮಡಿಲು ಮಗುವಿಗೆ ಹೇಗೆ ಸುರಕ್ಷಿತ ಆಶ್ರಯವೋ, ಹಾಗೆಯೇ ಕನ್ನಡ ಭಾಷೆ ಕನ್ನಡಿಗರಿಗೆ ಆತ್ಮೀಯ ನೆಲೆ ಎಂದು ಅವರು ನಂಬಿದ್ದರು. ಆ ಕಾರಣಕ್ಕಾಗಿಯೇ ಕನ್ನಡದ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ಕೂ ಅವರು ತಮ್ಮ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿದರು. ಕನ್ನಡದ ಮೇಲಿನ ಅವರ ಪ್ರೀತಿ ಆಕಾಶದಷ್ಟು ಅಪಾರ, ಭೂಮಿಯಷ್ಟು ಸಹನಶೀಲ, ನದಿಯಷ್ಟು ನಿರಂತರ, ವಟವೃಕ್ಷದಷ್ಟು ಆಶ್ರಯದಾಯಕವಾಗಿತ್ತು. ಕನ್ನಡದ ಗೌರವ ಕುಂದಿದಾಗ ಅವರ ಮನ ನೋಯುತ್ತಿತ್ತು, ಕನ್ನಡದ ಕೀರ್ತಿ ಹೆಚ್ಚಾದಾಗ ಅವರ ಮುಖ ಅರಳಿದ ಹೂವಿನಂತೆ ಸಂತೋಷದಿಂದ ಕಂಗೊಳಿಸುತ್ತಿತ್ತು.ಜಯದೇವಿ ತಾಯಿಯವರ ಕನ್ನಡಾಭಿಮಾನ ಇಂದು ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶ. ಭಾಷೆಯನ್ನು ಪ್ರೀತಿಸುವುದು ಎಂದರೆ  ಭಾಷೆಯ.. ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ಕನ್ನಡಾಭಿಮಾನ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾರಿ ತೋರಿಸಿದರು.  *ಶರಣ ಸಾಹಿತ್ಯವು ….ಕನ್ನಡಾಂಬೆಯ ದಿವ್ಯ ಬೆಳಕು*ಶರಣ ಸಾಹಿತ್ಯವು ಕನ್ನಡ ನಾಡಿನ ಆತ್ಮ, ಕನ್ನಡ ಭಾಷೆಯ ದಿವ್ಯ ಬೆಳಕು, ಕನ್ನಡಾಂಬೆಗೆ ಬೆಳಗುವ ಅಮರ ದೀಪವಾಗಿದೆ. ಇದು  ಬದುಕನ್ನು ಬೆಳಗಿಸುವ ಜ್ಞಾನಜ್ಯೋತಿ. ಅಜ್ಞಾನ, ಅಂಧಶ್ರದ್ಧೆ, ಜಾತಿ-ಮತದ ಸಂಕೋಲೆಗಳನ್ನು ಕಳಚಿ ಸಮಾನತೆ, ಪ್ರೀತಿ, ಕರುಣೆ, ಸತ್ಯ ಮತ್ತು ನೈತಿಕತೆಯ ದಾರಿಯನ್ನು ತೋರಿದ ಮಹಾನ್ ಚಳುವಳಿ ನಡೆದದ್ದು ವಚನ ಸಾಹಿತ್ಯದ ಮೂಲಕ ಕನ್ನಡದಲ್ಲಿ ಅಂತ ಹೇಳುತ್ತಿದ್ದರು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಕನ್ನಡವನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದರು. ಅರಮನೆಯ ಭಾಷೆಯಾಗಿದ್ದ ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ ರೂಪಿಸಿದರು. ಅವರ ವಚನಗಳು ಇಂದಿಗೂ ದಾರಿದೀಪಗಳಾಗಿ ಹೊಳೆಯುತ್ತಿವೆ. ಆದ್ದರಿಂದ ಶರಣ ಸಾಹಿತ್ಯವನ್ನು ಕನ್ನಡದ ದಿವ್ಯ ಬೆಳಕು ಎಂದು ಕರೆಯುವುದು ಅತ್ಯಂತ ಸಮಂಜಸ. *ಕತ್ತಲನ್ನು ಓಡಿಸುವ ಸೂರ್ಯನ ಕಿರಣಗಳಂತೆ, ಶರಣ ಸಾಹಿತ್ಯವು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಹರಡುವದೆಂದು ಜಯದೇವಿ ತಾಯಿಯವರು ಅಭಿಮಾನದಿಂದ ನುಡಿಯವರು * ಮಳೆಯು ಭೂಮಿಯನ್ನು ಹಸನಾಗಿಸುವಂತೆ, ಈ ಸಾಹಿತ್ಯವು ಮನಸ್ಸುಗಳನ್ನು ಪ್ರೀತಿ, ಸಹಾನುಭೂತಿ ಮತ್ತು ಮಾನವೀಯತೆಯಿಂದ ಹಸನಾಗಿಸಿದೆಂದು.  ಕನ್ನಡಿಗರ ಅಮೂಲ್ಯ ಸಂಪತ್ತಾಗಿ….ಇಡೀ ಮಾನವಕುಲಕ್ಕೆ ಸ್ಫೂರ್ತಿಯಾಗಿರುವ ಶ್ರೇಷ್ಠ ಪರಂಪರೆಯಾಗಿದೆ. ಶರಣ ಸಾಹಿತ್ಯದ ಬೆಳಕು ಎಂದಿಗೂ ಆರದು. ಅದು ಪ್ರತಿಯೊಂದು ಕನ್ನಡಿಗನ ಹೃದಯದಲ್ಲಿ ಸತ್ಯದ ಜ್ಯೋತಿಯಾಗಿ, ಸಮಾನತೆಯ ಸಂದೇಶವಾಗಿ, ಮಾನವೀಯತೆಯ ಮಹಾಪ್ರಕಾಶವಾಗಿ ಶಾಶ್ವತವಾಗಿ ಬೆಳಗುತ್ತಲೇ ಇರುತ್ತದೆ. ಕನ್ನಡ ಇರುವವರೆಗೆ, ಕನ್ನಡದ ದಿವ್ಯ ಬೆಳಕಾಗಿ ಶರಣ ಸಾಹಿತ್ಯವು ಅನಂತ ಕಾಲದವರೆಗೆ ಜನಮನಗಳನ್ನು ಪ್ರಕಾಶಮಾನಗೊಳಿಸುತ್ತಲೇ ಇರುತ್ತದೆ. ಎಂದು ರಾಜಾರೋಷವಾಗಿ ಎಲ್ಲ ಭಾಷಣಗಳಲ್ಲಿ ತಾಯಿಯವರು ಸಾರುತ್ತಿದ್ದರು. *ಕನ್ನಡದ ದಿವ್ಯ ಬೆಳಕಾದ ಶರಣ ಸಾಹಿತ್ಯವು ಕನ್ನಡವನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿತು ಅಂತ ಜಯದೇವಿ ತಾಯಿಯವರು ನುಡಿಯುತ್ತಿದ್ದರು…!!! ಹನ್ನೆರಡನೇ ಶತಮಾನದಲ್ಲಿ ಶರಣರ ವಚನ ಕ್ರಾಂತಿಯು ಇಡೀ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿತ್ತು. ಆದರೆ ಕಾಲಕ್ರಮೇಣ, ವಿಶೇಷವಾಗಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಹಲವು ಶತಮಾನಗಳ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಿಂದ ತೆಲುಗು, ಮರಾಠಿ ಹಾಗೂ ಉರ್ದು ಭಾಷೆಗಳ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮವಾಗಿ ಕನ್ನಡ ಭಾಷೆಯ ಬಳಕೆ, ಅದರ ಬಳಕೆ ಮತ್ತು ಶರಣ ಸಾಹಿತ್ಯದ ಅರಿವು ಅನೇಕ ಪ್ರದೇಶಗಳಲ್ಲಿ ಕ್ಷೀಣಿಸತೊಡಗಿತು. ಇಂತಹ ಸಂದರ್ಭದಲ್ಲಿ, ಕನ್ನಡದ ಆತ್ಮಸ್ವರೂಪವಾಗಿರುವ ಶರಣ ಸಾಹಿತ್ಯದ ಜ್ಯೋತಿಯನ್ನು ಮತ್ತೆ ಜನಮನಗಳಲ್ಲಿ ಪ್ರಜ್ವಲಿಸುವ ಮಹತ್ತರ ಸಂಕಲ್ಪವನ್ನು ಜಯದೇವಿ ತಾಯಿಯವರು ಕೈಗೊಂಡರು. ವಚನ ಸಾಹಿತ್ಯವನ್ನು ಮನೆಮನೆಗೆ, ಮನಸ್ಸುಮನಸ್ಸಿಗೆ ತಲುಪಿಸುವ ಮೂಲಕ ಕನ್ನಡದ ಆತ್ಮಗೌರವವನ್ನು ಮರುಜಾಗೃತಗೊಳಿಸಿದರು. ಅವರ ಪ್ರಯತ್ನವು ಸಾಹಿತ್ಯದ ಪ್ರಸಾರ ಮಾಡುತ…  ಕನ್ನಡದ ಮೆರುಗನ್ನು ಪುನರುಜ್ಜೀವನಗೊಳಿಸುವ ಶರಣರ ಮೌಲ್ಯಗಳ ಪುನರ್‌ಸ್ಥಾಪನೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಮಹಾಯಜ್ಞವಾಗಿತ್ತು. ಸತ್ಯಶರಣರ ಪಾದವ ನೆನೆದರೆ |ಚಿಂತೆ ಚಿತೆಯು ಶಮನಾಗುವದು ||ಶಾಂತ ಚಿತ್ತ ನಿಜ ಹಂತವನೇರುತ |ತಸಂತಸದಿ ನಲಿದಾಡುವದು||ಎನ್ನುತ…..ಶರಣರ ವಚನಗಳನ್ನು ಜನಜೀವನದೊಂದಿಗೆ ಬೆಸೆದು, ಕನ್ನಡದ ದಿವ್ಯ ಬೆಳಕನ್ನು ಮತ್ತೆ ಪ್ರಜ್ವಲಿಸಿದ ಸಾಂಸ್ಕೃತಿಕ ಸಾಧಕಿಯಾಗಿ ಜಯದೇವಿ ತಾಯಿಯವರು ಚಿರಸ್ಮರಣೀಯರಾಗಿದ್ದಾರೆ. ಅವರ ಸೇವೆಯಿಂದ ಶರಣ ಸಾಹಿತ್ಯವು ಮತ್ತೊಮ್ಮೆ ಜನಮನಗಳಲ್ಲಿ ಜ್ಞಾನಜ್ಯೋತಿಯಾಗಿ ಹೊಳೆಯಿತು…. ಕನ್ನಡದ ಹೊಳಪು ಹೊಸ ಉತ್ಸಾಹದಿಂದ ನಾಡಿನಾದ್ಯಂತ ಹರಡಿತು. ಜಯದೇವಿ ತಾಯಿಯವರಲ್ಲಿ ಶರಣ ಸಾಹಿತ್ಯದ ಮೇಲಿನ ಅಭಿರುಚಿ ಬಾಲ್ಯದಲ್ಲಿಯೇ ಮೊಳಕೆಯೊಡೆದಿತ್ತು. ವಚನಗಳಲ್ಲಿದ್ದ  ಮೌಲ್ಯಗಳು, ಸಮಾನತೆಯ ಸಂದೇಶ ಮತ್ತು ಸರಳವಾದ ಜೀವನದರ್ಶನವು ಅವರ ಮನಸ್ಸನ್ನು ಆಳವಾಗಿ ಸೆಳೆದಿತ್ತು.ವಚನಗಳನ್ನು ಓದಿ ಅರ್ಥೈಸಬೇಕೆಂಬ ಅಪಾರ ಜಿಜ್ಞಾಸೆಯೇ ಅವರಿಗೆ ಕನ್ನಡ ಕಲಿಯುವ ಪ್ರೇರಣೆಯಾಯಿತು.ಅಕ್ಷರಜ್ಞಾನವನ್ನು ಗಳಿಸುವುದಕ್ಕಾಗಿಯೇ,  ಶರಣರ  ವಚನಗಳ  ಅಮೃತ ಸತ್ವವನ್ನು ಆಸ್ವಾದಿಸುವ ಮಹದಾಸೆಯಿಂದ ಅವರು ಕನ್ನಡವನ್ನು ಅಭ್ಯಾಸ ಮಾಡಿದರು. ಕನ್ನಡ ಭಾಷೆಯನ್ನು  ಸಂವಹನದ ಮಾಧ್ಯಮವಾಗಿ..ಶರಣರ ಚಿಂತನೆಗಳ ಅಪೂರ್ವ ಲೋಕಕ್ಕೆ ಕರೆದೊಯ್ಯುವ ಪವಿತ್ರ ಸೇತುವೆಯೆಂದು ಭಾವಿಸಿದರು.ವಚನಗಳ ಮೇಲಿನ  ಅಪಾರ ಪ್ರೀತಿ, ಅಧ್ಯಯನಶೀಲತೆ ಮತ್ತು ಕನ್ನಡಾಭಿಮಾನವೇ ಮುಂದೆ ಅವರನ್ನು ಶರಣ ಸಾಹಿತ್ಯದ ಪ್ರಚಾರಕಿ, ಕನ್ನಡ ಸಂಸ್ಕೃತಿಯ ಮುಂಚೂಣಿ ಸೇವಕಿ ಹಾಗೂ ವಚನ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಮಹಾನ್ ಸಾಧಕಿಯನ್ನಾಗಿ ರೂಪಿಸಿತು.(ಮುಂದುವರೆಯುವುದು) ಸವಿತಾ ದೇಶಮುಖ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-25 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ನೇತ್ರ ಚಿಕಿತ್ಸೆ ಶಿಬಿರ ೧೯೫೦ ಮತ್ತು೧೯೫೧ ರ ಸಮಯ…….ಈ ಅವಧಿಯಲ್ಲಿ ಜಯದೇವಿ ತಾಯಿಯವರು ಕೈಗೊಂಡ ನೇತ್ರ ಚಿಕಿತ್ಸಾ ಶಿಬಿರಗಳು ಆ ಕಾಲದ ಸಾಮಾಜಿಕ ಸೇವೆಯ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗಿ ಉಳಿದವು.  ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದ ಸಾವಿರಾರು ಬಡಜನರಿಗೆ ಚಿಕಿತ್ಸೆ ದೊರೆಯುವುದು ಅತ್ಯಂತ ಕಷ್ಟಕರವಾಗಿದ್ದ ಸಮಯ ಅಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಪ್ರಸಿದ್ಧ ನೇತ್ರತಜ್ಞರಾದ ಡಾ.ಎಮ.ಸಿ.ಮೋದಿ ಅವರನ್ನು ಆಹ್ವಾನಿಸಿ ಬೃಹತ್ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದರು. ಆ ಕಾಲದಲ್ಲಿ ಕಾಚಬಿಂದು, ಮೇಲ್ವಿಂದು, ಕಣ್ಣಿನ ಸೋಂಕುಗಳು, ಓರೆಕಣ್ಣು ಹಾಗೂ ಇತರ ನೇತ್ರ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕ ಜನರು ಚಿಕಿತ್ಸೆಯ ಕೊರತೆಯಿಂದ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಈ ನೋವನ್ನು ಅರಿತ ಜಯದೇವಿ ತಾಯಿಯವರು *ಜನಸೇವೆಯೇ ದೇವಸೇವೆ* ಎಂಬ ಧ್ಯೇಯದೊಂದಿಗೆ ಈ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದರು. ಒಂದು ವಾರ ಕಾಲ ನಡೆದ ಈ ಬೃಹತ್ ಶಿಬಿರದಲ್ಲಿ ಸುಮಾರು ,೩000 ಜನರಿಗೆ ಕಾಚಬಿಂದು, ಮೇಲ್ವಿಂದು, ಹೂತುಂಬುವಿಕೆ ಹಾಗೂ ಓರೆಕಣ್ಣು ಸರಿಪಡಿಸುವಂತಹ ಚಿಕಿತ್ಸೆಗಳು ನೀಡಲಾಯಿತು. ಅಲ್ಲದೆ ೨,000ಕ್ಕೂ ಹೆಚ್ಚು ಜನರಿಗೆ ನೇತ್ರ ಪರೀಕ್ಷೆ, ಔಷಧೋಪಚಾರ ಮತ್ತು ಸಲಹೆಗಳನ್ನು ಒದಗಿಸಲಾಯಿತು. ಕಣ್ಣಿನ ತೊಂದರೆಗಳಿಂದ ನರಳುತ್ತಿದ್ದ ಜನರಿಗೆ ಈ ಶಿಬಿರ ಹೊಸ ಆಶಾಕಿರಣವಾಗಿ ಪರಿಣಮಿಸಿತು. ತೀವ್ರ ಸಮಸ್ಯೆ ಹೊಂದಿದ್ದ ೪೫ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಷ್ಟೇ ಅಲ್ಲದೆ ೩೭೫ ಜನರಿಗೆ ವಿವಿಧ ರೀತಿಯ ಪ್ರಮುಖ ಶಸ್ತ್ರಚಿಕಿತ್ಸೆಗಳೂ ನೆರವೇರಿಸಲ್ಪಟ್ಟವು. ಆ ಕಾಲದ ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಕಿತ್ಸಾ ಕಾರ್ಯ ನಡೆಯುವುದು ನಿಜಕ್ಕೂ ಅಸಾಧಾರಣ ಸಾಧನೆಯಾಗಿತ್ತು.ಈ ಮಹತ್ಕಾರ್ಯದಲ್ಲಿ ಶ್ರೀ ಎಂ.ಪಿ. ಪಾಟೀಲರು ಹಾಗೂ ಶ್ರೀ ಪಠಣೆ ಅವರು ಜಯದೇವಿ ತಾಯಿಯವರೊಂದಿಗೆ ಕೈಜೋಡಿಸಿದರು. ಶಿಬಿರಕ್ಕೆ ಆಗಮಿಸಿದ ರೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಒಟ್ಟು ೫೭೮೦ ಜನರಿಗೆ ಹಾಸಿಗೆ, ಹೊದಿಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು.  ದೂರದ ಊರುಗಳಿಂದ ಬಂದ ಜನರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.ಅದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಯಾವುದೇ ಕೊರತೆ ಉಂಟಾಗದಂತೆ ಜಯದೇವಿ ತಾಯಿಯವರು ಸ್ವತಃ ಮೇಲ್ವಿಚಾರಣೆ ವಹಿಸಿದ್ದರು. ರೋಗಿಗಳು, ಅವರ ಸಂಬಂಧಿಕರು, ವೈದ್ಯರು ಹಾಗೂ ಸ್ವಯಂಸೇವಕರಿಗೆ ಅಗತ್ಯವಾದ ಆಹಾರ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಯಿತು. ಸೇವಾಭಾವ, ಸಂಘಟನಾ ಸಾಮರ್ಥ್ಯ ಮತ್ತು ಮಾನವೀಯ ಕಾಳಜಿಯ ಅಪೂರ್ವ ಉದಾಹರಣೆಯಾಗಿ ಈ ಶಿಬಿರಗಳು ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿದವು.  ನೇತ್ರ ಚಿಕಿತ್ಸಾ ಶಿಬಿರಗಳ ಮೂಲಕ ಸಾವಿರಾರು ಜನರು ಮತ್ತೆ ಬೆಳಕನ್ನು ಕಂಡರು. ಅನೇಕರ ಜೀವನದಲ್ಲಿ ಹೊಸ ಆಶಾಭರವೂ ಮೂಡಿತು. ಜಯದೇವಿ ತಾಯಿಯವರ ಜನಪರ ಕಾಳಜಿ, ದಯೆ ಮತ್ತು ಸೇವಾ ಮನೋಭಾವದ ಜೀವಂತ ಸಾಕ್ಷಿಯಾಗಿ ಈ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ. (ಸಹಕಾರ ಚಳುವಳಿ)೧೯೫೧ರ ಸಮಯದಲಿ‌‌… ಇನ್ನೊಂದಡೆ ಭಾರತವು ಸ್ವಾತಂತ್ರ್ಯವಾಗಿ   ರಾಜಕೀಯವಾಗಿ ಸ್ವತಂತ್ರವಾಗಿದ್ದರೂ, ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಭಾಷೆ, ಧರ್ಮ, ಜಾತಿ, ವೃತ್ತಿ ಹಾಗೂ ಪ್ರಾಂತಗಳ ಆಧಾರದ ಮೇಲೆ ಜನರು ವಿಭಜಿತರಾಗಿದ್ದರು. ಒಂದೇ ದೇಶದ ಪ್ರಜೆಗಳಾಗಿದ್ದರೂ ಪರಸ್ಪರ ಭಿನ್ನಾಭಿಪ್ರಾಯಗಳು, ಪ್ರಾಂತೀಯತೆ ಮತ್ತು ಮತೀಯ ಭಾವನೆಗಳು ಸಮಾಜದಲ್ಲಿ ಬೇರೂರಿದ್ದವು. ಇಂತಹ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಾಮರಸ್ಯ ಅತ್ಯಗತ್ಯ ಎಂಬುದನ್ನು ಜಯದೇವಿ ತಾಯಿಯವರು ಮನಗಂಡರು.ಈ ಹಿನ್ನೆಲೆಯಲ್ಲಿ ಅವರು *ಸಹಕಾರ ಚಳುವಳಿ* ಯನ್ನು ಜನಜಾಗೃತಿಯ ಸಾಧನವಾಗಿ ಬಳಸಿದರು. “ನಾವು ಮೊದಲು ಭಾರತೀಯರು, ನಂತರ ಭಾಷಿಕರು, ಮತೀಯರು ಅಥವಾ ಪ್ರಾಂತೀಯರು” ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿದರು. ವಿವಿಧ ಸಮುದಾಯಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆತಂದು ಸಂವಾದಗಳನ್ನು ನಡೆಸಿದರು. *ಸಹಕಾರವಿರೆ ಮನೆಯು | ಸಹಕಾರವಿದೆ ಮಠವುಸಹಕಾರವಿದೆ ಬದುಕು ಬಾಳುವೆ – ತಿಳಿಯಣ್ಣ,ಸಹಕಾರದಿಂದಲೇ ಸರ್ಕಾರವು.||* ಈ ಅರ್ಥಪೂರ್ಣ ವಚನವನ್ನು ಜಯದೇವಿ ತಾಯಿಯವರು ತಮ್ಮ ಜೀವನದ ಆದರ್ಶವನ್ನಾಗಿಸಿಕೊಂಡಿದ್ದರು. ಮನುಷ್ಯನ ಬದುಕಿನಲ್ಲಿ ಸಹಕಾರಕ್ಕೆ ಪರ್ಯಾಯವೇ ಇಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಒಂದು ಕುಟುಂಬ ಸುಖವಾಗಿ ನೆಮ್ಮದಿಯಿಂದ ಇರಬೇಕಾದರೆ ಪರಸ್ಪರ ಸಹಕಾರ ಅಗತ್ಯ. ಒಂದು ಮಠ, ಸಂಘ ಅಥವಾ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ನಡುವೆ ಅನ್ಯೋನ್ಯತೆ ಮತ್ತು ಒಗ್ಗಟ್ಟು ಇರಬೇಕು.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಜನರ ಸಹಕಾರ, ಪರಸ್ಪರ ವಿಶ್ವಾಸ ಮತ್ತು ಒಮ್ಮತದ ಮೇಲೆ ನಿಂತಿರುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ಪ್ರೇರಿತನಾಗಿ, ಪ್ರಾಮಾಣಿಕನಾಗಿ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡುತ್ತಿದ್ದರು. ವ್ಯಕ್ತಿಯ ಉದಾತ್ತ ಗುಣಗಳೇ ಸಂಘಟನೆಗಳ ಶಕ್ತಿಯಾಗುತ್ತವೆ ಎಂದು ಅವರು ನಂಬಿದ್ದರು. ಅಹಂಕಾರ, ಸ್ವಾರ್ಥ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಕೈಜೋಡಿಸಿದಾಗ ಮಾತ್ರ ಯಾವುದೇ ಸಂಘ ಅಥವಾ ಸಂಸ್ಥೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವೆಂದು ತಿಳಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಅದು ಹೃದಯಗಳನ್ನು ಜೋಡಿಸುವ ಮಾನವೀಯ ಮೌಲ್ಯ. ಒಬ್ಬರ ದುಃಖದಲ್ಲಿ ಮತ್ತೊಬ್ಬರು ಭಾಗಿಯಾಗುವುದು, ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಬೆನ್ನೆಲುಬಾಗುವುದು, ಸಮಾಜದ ಹಿತಕ್ಕಾಗಿ ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು…. ಇವೆಲ್ಲವೂ ಸಹಕಾರದ ನಿಜವಾದ ರೂಪಗಳೆಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದಲೇ ಅವರು ಸಹಕಾರ ಚಳವಳಿಯ ಬೆಳವಣಿಗೆಯನ್ನು ಕಂಡು ಹರ್ಷಿಸುತ್ತಾ, *”ಒಂದಕ್ಕೆ ಹತ್ತಾಗಿ, ಹತ್ತಕ್ಕೆ ನೂರಾಗಿ,ನೂರಕ್ಕೆ ಸಾವಿರಾರು ಸಹಕಾರದ ಬಳ್ಳಿ ಹಬ್ಬಲಿ!* ಎಂದು ಹೃದಯಪೂರ್ವಕವಾಗಿ ಹಾರೈಸುತ್ತಿದ್ದರು. ಸಹಕಾರದ ಬೀಜವು ಪ್ರತಿಯೊಂದು ಮನಸ್ಸಿನಲ್ಲಿ ಮೊಳಕೆಯೊಡೆದು, ಅದರ ಬಳ್ಳಿ ಊರುಗಳಿಂದ ನಗರಗಳಿಗೆ, ಕುಟುಂಬಗಳಿಂದ ಸಮಾಜಕ್ಕೆ, ಸಮಾಜದಿಂದ ರಾಷ್ಟ್ರದವರೆಗೆ ವ್ಯಾಪಿಸಲಿ ಎಂಬುದು ಅವರ ಕನಸಾಗಿತ್ತು. ಒಗ್ಗಟ್ಟು, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದಲೇ ಸಮೃದ್ಧ ಸಮಾಜ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಸಹಕಾರ ಸಂಘಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕೆಂದು ಒತ್ತಿಹೇಳಿದರು.ಆ ಸಮಯದಲ್ಲಿ ದೇಶದ ಗಡಿಭಾಗಗಳ ಸಮಸ್ಯೆಗಳು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿದ್ದವು. ಆದ್ದರಿಂದ ತಾಯಿಯವರು ಜನರಿಗೆ, “ಮೊದಲು ದೇಶದ ಗಡಿಗಳನ್ನು ಭದ್ರಗೊಳಿಸಿ, ರಾಷ್ಟ್ರೀಯ ಏಕತೆಯನ್ನು ಬಲಪಡಿಸೋಣ. ನಂತರ ಭಾಷಿಕ ಪ್ರಾಂತಗಳ ಬೇಡಿಕೆಗಳನ್ನು ಶಾಂತಿಯುತವಾಗಿ ಚರ್ಚಿಸೋಣ” ಎಂದು ಕರೆ ನೀಡಿದರು. ಭಾಷೆಯ ಹೆಸರಿನಲ್ಲಿ ಸಂಘರ್ಷ ಮಾಡುವುದಕ್ಕಿಂತ ದೇಶದ ಹಿತಾಸಕ್ತಿಯನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದು ತಿಳಿಸಿದರು.ಅವರು ನಡೆಸಿದ ಸಭೆಗಳಲ್ಲಿ ಕನ್ನಡಿಗರು, ಮರಾಠಿಗರು, ತೆಲುಗಿಗರು, ಉರ್ದು ಭಾಷಿಕರು ಸೇರಿದಂತೆ ವಿವಿಧ ಸಮುದಾಯದ ಜನರು ಭಾಗವಹಿಸುತ್ತಿದ್ದರು. ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೋಧಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿದರು. ಸಹಕಾರ ಸಂಘಗಳ ಮೂಲಕ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರನ್ನು ಒಗ್ಗೂಡಿಸಿ, ಸಮುದಾಯದ ಸಮಸ್ಯೆಗಳನ್ನು ಸಮೂಹವಾಗಿ ಪರಿಹರಿಸುವ ಮಾರ್ಗವನ್ನು ತೋರಿಸಿದರು. ಜಯದೇವಿ ತಾಯಿಯವರ ಈ ಪ್ರಯತ್ನಗಳು   ರಾಷ್ಟ್ರ ನಿರ್ಮಾಣದ ಕಾರ್ಯವಾಗಿತ್ತು. ವಿಭಜನೆಯತ್ತ ಸಾಗುತ್ತಿದ್ದ ಸಮಾಜವನ್ನು ಒಗ್ಗಟ್ಟಿನ ದಾರಿಯಲ್ಲಿ ನಡೆಸುವ ಅವರ ಸಂಕಲ್ಪವು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಭಾಷೆ, ಧರ್ಮ ಮತ್ತು ಜಾತಿಯ ಭೇದಗಳನ್ನು ಮೀರಿ ಮಾನವೀಯತೆ ಹಾಗೂ ರಾಷ್ಟ್ರೀಯತೆಯ ಭಾವನೆಗಳನ್ನು ಬಲಪಡಿಸಿದ ಅವರ ಸೇವೆ ಇಂದಿಗೂ ಆದರ್ಶಪ್ರಾಯವಾಗಿದೆ. “ಹಾಗೆಯೇ ಅವರಿಗೆ ತಾಯಿ ಭಾಷೆಯ ಮೇಲಿನ ಪ್ರೇಮವೂ ಅಪಾರವಾಗಿತ್ತು. ವಿಶೇಷವಾಗಿ ಕನ್ನಡದ ಮೇಲಿನ ಅವರ ಅಭಿಮಾನ ಮತ್ತು ತಾಯ್ನುನುಡಿ ಮೇಲಿನ ಗೌರವ ಅಚಲವಾಗಿತ್ತು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೆಂದು ಅವರು ನಂಬಿದ್ದರು. ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ, ಕನ್ನಡದ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.  ಕನ್ನಡವೆಂದರೆ ಅವರಿಗೆ ಜೀವದಷ್ಟೇ ಪ್ರೀತಿ. ಕನ್ನಡದ ಸೊಗಡು, ಸಂಸ್ಕೃತಿ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿ ಅವರ ಹೃದಯದಲ್ಲಿ ಸದಾ ಜಾಗೃತವಾಗಿತ್ತು. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ ಎಂಬ ದೃಢ ನಂಬಿಕೆಯೊಂದಿಗೆ ಅವರು ಭಾಷಾ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. *ಜಯದೇವಿ ತಾಯಿಯವರಿಗೆ ಕನ್ನಡ ಅವರ ಉಸಿರಾಗಿದ್ದರೆ, ಇತರ ಭಾಷೆಗಳು ಅವರ ಹೃದಯದ ಆತ್ಮೀಯ ಅತಿಥಿಗಳಾಗಿದ್ದವು.* ಕನ್ನಡವನ್ನು ಅವರು ಎಷ್ಟು ಪ್ರೀತಿಸುತ್ತಿದ್ದರೋ, ಅಷ್ಟೇ ಗೌರವ ಮತ್ತು ಆದರವನ್ನು ಮರಾಠಿ ಹಾಗೂ ಹಿಂದಿ ಭಾಷೆಗಳಿಗೂ ನೀಡುತ್ತಿದ್ದರು. ಆ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿ, ಅವುಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಆಸ್ವಾದಿಸುತ್ತಿದ್ದರು. ಆದರೆ ತಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಇತರ ಭಾಷೆಗಳನ್ನು ತಿರಸ್ಕರಿಸುವುದಲ್ಲ ಎಂಬುದನ್ನು ಅವರು ಸದಾ ಹೇಳುತ್ತಿದ್ದರು. ‘ಪ್ರತಿಯೊಬ್ಬರಿಗೂ ಅವರ ತಾಯಿಭಾಷೆ ತಾಯಿಯಂತೆಯೇ. ಕನ್ನಡಿಗನಿಗೆ ಕನ್ನಡ ಹೇಗೆ ಅಮೂಲ್ಯವೋ, ಮರಾಠಿಗನಿಗೆ ಮರಾಠಿ, ಹಿಂದಿ ಭಾಷಿಕನಿಗೆ ಹಿಂದಿಯೂ ಅಷ್ಟೇ ಅಮೂಲ್ಯ. ತಮ್ಮ ತಾಯಿಭಾಷೆಯನ್ನು ಗೌರವಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಅವರು ಪ್ರೀತಿಯಿಂದ ತಿಳಿಸುತ್ತಿದ್ದರು. *ಭಾಷೆಗಳು ಮನುಷ್ಯರನ್ನು ಬೇರ್ಪಡಿಸಲು ಅಲ್ಲ, ಹೃದಯಗಳನ್ನು ಜೋಡಿಸಲು* ಎಂಬುದು ಅವರ ನಂಬಿಕೆಯಾಗಿತ್ತು. ನುಡಿ ಭಾಷೆಯ ಮೇಲೆ ಹೆಮ್ಮೆ ಇಟ್ಟುಕೊಂಡು, ಇತರರ ತಾಯ್ನುಡಿಯನ್ನು ಸಹ ಗೌರವಿಸುವ ವಿಶಾಲ ಮನೋಭಾವವನ್ನು ಅವರು ಜೀವನದುದ್ದಕ್ಕೂ ಪಾಲಿಸಿದರು. ಭಾಷೆಗಳ ನಡುವೆ ಗೋಡೆಗಳನ್ನು ಕಟ್ಟದೆ, ಪ್ರೀತಿ ಮತ್ತು ಪರಸ್ಪರ ಗೌರವದ ಸೇತುವೆಗಳನ್ನು ನಿರ್ಮಿಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತು.( ಮುಂದುವರೆಯುವುದು) ಸವಿತಾ ದೇಶಮುಖ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ24 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನ ಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಮಹಾನ್‌ ಚೇತನ *ಜಯದೇವಿ ತಾಯಿಯವರ ಸಮಾಜಮುಖಿ, ಸಾಹಿತ್ಯಿಕ ಹಾಗೂ ಭಕ್ತಿಮಯ ಬದುಕು*  ಜಯದೇವಿ ತಾಯಿಯವರ ವ್ಯಕ್ತಿತ್ವವು ಕೇವಲ ಕುಟುಂಬದ ಚೌಕಟ್ಟಿನೊಳಗೆ ಸೀಮಿತವಾಗಿರಲಿಲ್ಲ.   ಸಂಸಾರದ ಹೊಣೆ ಹೊತ್ತು… ಸಿದ್ದರಾಮೇಶ್ವರರ ಶ್ರೇಷ್ಠ ಭಕ್ತಿಯಾಗಿ, ತ್ರಿಭಾಷಾ ಪಾಂಡಿತ್ಯವನ್ನು ಪಡೆದು ,ಕನ್ನಡ ಸರಸ್ವತ ಲೋಕದ ಕಣ್ಣಾಗಿ, ಕನ್ನಡಿಗರ ತಾಯಿಯಾಗಿ , ಶ್ರೇಷ್ಠ ಶಿವಶರಣಿಯಾಗಿ ಬದುಕಿ… ಜನಮನಗಳಲ್ಲಿ ಅಳಿಯದ ಛಾಪು ಮೂಡಿಸಿದ ಮುಂದಿನ ಬದುಕನ್ನು ನೋಡೋಣ ಬನ್ನಿ …… *ಸವಿಧಾನ ಜೀವನ| ನೋವು ನಾವುಗೆಲಿದು ಪಾವನ ಬದುಕಿ -ನಂದನವನಲಿದು ಬೇವು ಬೆಲ್ಲಾಗಿ ಸವಿದೇನ*|| ಎನ್ನುತ ಸಮಾಜದ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಜಯದೇವಿ ತಾಯಿಯವರು ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಡವರು, ನಿರ್ಗತಿಕರು, ಮಹಿಳೆಯರು ಹಾಗೂ ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಶಿಕ್ಷಣ ಮತ್ತು ಸಂಸ್ಕಾರಗಳು ಬೆಳೆಯಬೇಕು ಎಂಬ ಆಶಯದಿಂದ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ಜೀವನದ ಅನುಭವಗಳು, ಭಕ್ತಿ, ಸಾಮಾಜಿಕ ಚಿಂತನೆಗಳು ಮತ್ತು ಸ್ತ್ರೀ ಸಂವೇದನೆಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸಿದರು. ಅವರ ಬರಹಗಳು ಕೇವಲ ಓದಿಗಾಗಿ ಅಲ್ಲ, ಬದುಕಿಗೆ ದಾರಿದೀಪವಾಗುವಂತಿದ್ದವು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿಯು ಅನೇಕ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾಯಿತು. *ಬರದೇನೆನ್ನುವ ಭಾವ| ಬರಿತಾಯ್ತೆನಗವ್ವ ಕರೆದೇನೆನ್ನುವ ಭಕುತಿ ಬಯಲಾಯ್ತ- ತಾಯವ್ವಕೊರಗೇನೆಂಬುವ ಮನ ಮಾಯಾಯಿತು||* ಎನ್ನುತ  ಶ್ರೀ ಸಿದ್ದರಾಮೇಶ್ವರಲಿ ಅಪಾರ ಭಕ್ತಿಯ ಲೀನರಾಗಿದ್ದರು. ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ, ಸಮಾಜ ಸೇವೆಯೇ ನಿಜವಾದ ದೇವರ ಸೇವೆ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು .*ಕೃಪೆ ಮಾಡಿ ಎನಗೆ | ಶ್ರೀಪಾದವ ತೋರಿದನುಉಪಮೀಸ ಬಾರದ ಸಂತಸ -ಗೊಳಿಸಿದಆ ಪರಬ್ರಹ್ಮನಿಗೆ ಶರಣೆಂಬೆ||* ಎನ್ನುವಂತೆ ಸಮಾಜ ಸೇವೆಯೇ ದೇವರ ಸೇವೆಯಂತೆ ಸ್ವೀಕರಿಸಿದರು.ಸಿದ್ದರಾಮರ ಆದರ್ಶಗಳಾದ ದಾಸೋಹ, ಕಾಯಕ, ಸಮಾನತೆ ಮತ್ತು ಮಾನವ ಪ್ರೇಮವನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು.  ಈಗ ಒಂದೊಂದಾಗಿ ತಿಳಿದುಕೊಳ್ಳೋಣ. ಅವರ ಬದುಕಿನ ಅಧ್ಯಾಯಗಳು ನಿಸ್ವಾರ್ಥ ಸೇವೆ, ಆಧ್ಯಾತ್ಮಿಕತೆ ಮತ್ತು ಜನಪರ ಕಾಳಜಿಯ ಅಮೂಲ್ಯ ಕಥನಗಳಾಗಿವೆ.ಆದರ್ಶ ಗೃಹಿಣಿ, ಸಮಾಜಸೇವಕಿ, ಸಾಹಿತಿ ಮತ್ತು ಶ್ರೇಷ್ಠ ಭಕ್ತೆಯಾಗಿ ಜಯದೇವಿ ತಾಯಿಯವರು ನಡೆಸಿದ ಬದುಕು ಬಹುಮುಖ ಸಾಧನೆಯ ಪ್ರತೀಕವಾಗಿದೆ. *ಬಿಂಕಿನ ಮಾತಿಲ್ಲ ಕೊಂಕೀನ ನುಡಿಯಲ್ಲಕಿಂಕರಳ ಕೂಗು ಕೇಳಿರಿ,- ಶರಣರಲೆಂಖಿನ ನಾ ನೋಡಿ ನಂಬೀದ* ಎನ್ನುತ ಕಿಂಕರರಲಿ ಕಿಂಕರಳಾಗಿ ಕನ್ನಡಾಂಬೆಯ   ಸೇವೆಯಲ್ಲಿ ಜನಸೇವೆಯಲ್ಲಿ ತೊಡಗಿದರು.  ೧೯೪೯ರಲ್ಲಿ ಕಲ್ಬುರ್ಗಿಯಲ್ಲಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ೩೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು* ಶ್ರೀ ಉತ್ತಂಗಿ ಚನ್ನಪ್ಪನವರು* ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ತಾಯಿಯವರು ಮಹಿಳಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದರು. ೧೯-೨-೧೯೫೦ ರಂದು ಸೊಲ್ಲಾಪುರದಲ್ಲಿ ೩೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು ಇಲ್ಲಿ ಶ್ರೀ ಎಂ ಆರ್ ಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಮಹಿಳಾಪರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಂದೆ ೨೫-೧೨-೧೯೫೦ರಂದು ಮುಂಬೈಯಲ್ಲಿ ೩೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಇಲ್ಲಿ ರಾಷ್ಟ್ರಕವಿ* ಶ್ರೀ ಮಂಜೇಶ್ವರ ಗೋವಿಂದ ಪೈ *ಅವರು ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೂ ಕೂಡ ಮಹಿಳೆಯರ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದರು.ಈ ಮೂರು ಸಮ್ಮೇಳನಗಳ ಮಹಿಳಾ ಗೋಷ್ಟಿಯಲ್ಲಿ ಜಯದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಜಯದೇವಿ ತಾಯಿಯವರ ಶಿಕ್ಷಣ ಕ್ರಾಂತಿ  ಸೊಲ್ಲಾಪುರದ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ.೧೯೪೯ನೇ ವರ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇನ್ನೂ ಕೆಲವು ವರ್ಷಗಳಷ್ಟೇ ಆಗಿದ್ದವು. ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ನಿರಕ್ಷರತೆ ವ್ಯಾಪಕವಾಗಿದ್ದ ಕಾಲ ಅದು. ವಿಶೇಷವಾಗಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಾಗೂ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಜೀವನೋಪಾಯಕ್ಕಾಗಿ ದಿನವಿಡೀ ದುಡಿಯಬೇಕಾಗಿದ್ದ ಕಾರಣ ಅವರಿಗೆ ಶಾಲೆಯ ಮುಖವೇ ಕಾಣುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಜಯದೇವಿ ತಾಯಿಯವರು ಸಮಾಜದ ತಳಮಳವನ್ನು ಕಂಡು “ಶಿಕ್ಷಣವೇ ಬದುಕಿನ ಬೆಳಕು” ಎಂಬ ದೃಢ ನಂಬಿಕೆಯೊಂದಿಗೆ ಅವರು ಒಂದು ಮಹತ್ತರ ಸಾಮಾಜಿಕ ಚಳವಳಿಗೆ ಚಾಲನೆ ನೀಡಿದರು….. ಯಾವುದೇ ದೊಡ್ಡ ಕಟ್ಟಡವಿಲ್ಲ, ಸರ್ಕಾರದ ನೆರವಿಲ್ಲ. ಆದರೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಮತ್ತು ಮಾನವೀಯತೆ ಅವರಲ್ಲಿತ್ತು.ತಮ್ಮ ಮನೆಯ ಆವರಣದಲ್ಲಿಯೇ ಒಂದು ಸಣ್ಣ ಶಾಲೆಯನ್ನು ಆರಂಭಿಸುವ ಮೂಲಕ ಅವರು ಶಿಕ್ಷಣ ಯಜ್ಞಕ್ಕೆ ನಾಂದಿ ಹಾಡಿದರು. ಗಿರಣಿಯಲ್ಲಿ ದುಡಿಯುತ್ತಿದ್ದ ಸುಮಾರು ೩೦,೦೦೦ ಕಾರ್ಮಿಕರ ಕುಟುಂಬಗಳ ಮಕ್ಕಳು ಹಾಗೂ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕನಸನ್ನು ಕಂಡರು.ಆರಂಭದಲ್ಲಿ ಕೆಲವು ಅಡೆತಡೆಗಳು ಬಂದರೂ ತಾಯಿಯವರ ಪ್ರೀತಿ, ತಾಳ್ಮೆ ಮತ್ತು ಸೇವಾ ಭಾವದಿಂದ ಆ ಪ್ರಯತ್ನ ಬೇಗನೆ ಜನಮನ ಗೆದ್ದಿತು. ನಂತರ* ಕಾರ್ಮಿಕ ಸಾಕ್ಷರತಾ ಸಮಿತಿಯ* ಸಹಯೋಗದೊಂದಿಗೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು. ಮೊದಲಿಗೆ ೨೫ ಕೇಂದ್ರಗಳು ಆರಂಭವಾದವು.  ಕೇಂದ್ರಗಳಲ್ಲಿ ಮಕ್ಕಳ ಜೊತೆಗೆ ಅಕ್ಷರಜ್ಞಾನವಿಲ್ಲದ ಕಾರ್ಮಿಕರಿಗೂ ಓದು-ಬರಹ ಕಲಿಸಲಾಗುತ್ತಿತ್ತು. ಶಿಕ್ಷಣವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಬೇಕು ಎಂಬುವದು ಅವರ ಉದ್ದೇಶವಾಗಿತ್ತು. ತಾಯಿಯವರ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಈ ಚಳವಳಿ ದಿನದಿಂದ ದಿನಕ್ಕೆ ವಿಸ್ತರಿಸಿತು. ೨೫ ಕೇಂದ್ರಗಳಾಗಿದ್ದವು ಮುಂದೆ ೧೨೫  ಶಿಕ್ಷಣ ಕೇಂದ್ರಗಳಾಗಿ ಬೆಳೆದವು. ಸಾವಿರಾರು ಮಕ್ಕಳು ಮತ್ತು ವಯಸ್ಕರು ಈ ಕೇಂದ್ರಗಳ ಮೂಲಕ ಅಕ್ಷರಜ್ಞಾನ ಪಡೆದರು. ಶಿಕ್ಷಣದ ಬೆಳಕು ಮನೆಮನೆಗೂ ಹರಡಿತು.ಈ ಕಾರ್ಯ  ಶಾಲೆಗಳನ್ನು ಆರಂಭಿಸಿದ ಸಾಧನೆಯೊಂದಿಗೆ….*ಅದು ಸಮಾಜ ಪರಿವರ್ತನೆಯ ಚಳವಳಿಯಾಗಿತ್ತು. * ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಹೊಸ ಭವಿಷ್ಯಕೆ ದಾರಿ ಮಾಡಿಕೊಟ್ಟರು  ಬಡವರ ಮನೆಗಳಲ್ಲಿ ಆಶಾಕಿರಣ ಮೂಡಿಸಿದ ಪ್ರಯತ್ನವಾಗಿತ್ತು. ಅನೇಕ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿಸಿದ ಮಹಾನ ಸೇವೆಯಾಗಿತ್ತು.ಆದ್ದರಿಂದಲೇ ಜಯದೇವಿ ತಾಯಿಯವರು ಕೈಗೊಂಡ ಶೈಕ್ಷಣಿಕ ಅಭಿಯಾನ ಸೊಲ್ಲಾಪುರದ ಶೈಕ್ಷಣಿಕ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿ ಗುರುತಿಸಲ್ಪಟ್ಟಿದೆ.  ಒಬ್ಬ ಮಹಿಳೆ ತನ್ನ ಮನೆಯ ಆವರಣದಲ್ಲಿ ಆರಂಭಿಸಿದ ಸಣ್ಣ ಶಿಕ್ಷಣ ಸೇವೆ ಮುಂದೆ ೧೨೫ ಕೇಂದ್ರಗಳ ಮಹಾ ಚಳವಳಿಯಾಗಿ ಬೆಳೆದು ಸಾವಿರಾರು ಜನರ ಬದುಕನ್ನು ಬೆಳಗಿಸಿತು ಎಂಬುದು ನಿಜಕ್ಕೂ ಅಪೂರ್ವ ಸಾಧನೆ.ಜಯದೇವಿ ತಾಯಿಯವರ ಈ ಕಾರ್ಯ ನಮಗೆ ಶಿಕ್ಷಣದ ಮಹತ್ವವನ್ನು ಯಾವ ರೀತಿಯಲ್ಲಿ, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಇತಿಹಾಸವನ್ನೇ ಬದಲಾಯಿಸಬಲ್ಲದು ಎಂಬುದನ್ನೂ ಸಾರುತ್ತದೆ. ಅವರ ಜೀವನವು ಸೇವೆ, ತ್ಯಾಗ ಮತ್ತು ಶಿಕ್ಷಣದ ಮೂಲಕ ಸಮಾಜೋತ್ಥಾನ ಮಾಡಿದ  ಆದರ್ಶದ ಪ್ರತೀಕವಾಗಿದೆ. ಶಿಕ್ಷಣವು ಎಲ್ಲರಿಗೂ ಲಭಿಸಬೇಕು, ಸಮಾನತೆಯನ್ನು ಮೂಡಿಸಬೇಕು ಅನ್ನುವ ಉದ್ದೇಶ ಶಿಕ್ಷಣದ ತಳಹದಿಯಾಗಿರಬೇಕು ಅನ್ನುತ್ತಿದ್ದರು. *ಜಗವು ಒಂದಾಗಲಿ |ನಗುತ ಕೈಗೂಡಿಸಿರಿಬಗೆಯಲಿ ಅಣ್ಣತಮ್ಮರಂತೆ ಲೋಕದಿಹಗೆ ಎಂಬ ಭಾವ ಅಳಿಯಲಿ||* (ಮುಂದುವರೆಯುವುದು) ಸವಿತಾ ದೇಶಮುಖ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-23 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜಯದೇವಿ ತಾಯಿಯವರ ಜೀವನವೆಂಬ ಮಹಾಗ್ರಂಥದಲ್ಲಿ ಅವರ ಮಕ್ಕಳು ಒಂದೊಂದು ಅಮೂಲ್ಯ ಅಧ್ಯಾಯಗಳಾಗಿದ್ದರೆ…. ಮುಖ್ಯ ಪಾತ್ರಧಾರಿಯಾಗಿ ಆಗಮಿಸಿದ ಅಳಿಯ ಡಾ. ಶಂಕರಣ್ಣ ಮೂಗಿ ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು (ನನ್ನ ತಂದೆ). ಜಯದೇವಿ ತಾಯಿಯವರ ಪಡೆದ ಹಿರಿಯ ಮಗನಾಗಿ ಪಾತ್ರವನ್ನು ವಹಿಸಿದ್ದು ಅತ್ಯಂತ ವಿಶಿಷ್ಟವಾದುದು. ತಾಯಿಯ ಬದುಕಿನ ಕಷ್ಟ-ಸುಖಗಳ ನಡುವೆ ಮಗನಾಗಿ, ತಾಯಿಯ ನೆರಳಾಗಿ, ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿ ನಿಂತವರು.ಗಂಡನ ವಿಯೋಗದ ನಂತರ ಮನೆಯ ಜವಾಬ್ದಾರಿಗಳ  ಭಾರವು ಹೇರಿಕೊಳ್ಳಲಾರದಷ್ಟು ಭಾರವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸಿದ್ದವು…. ಆ ಸಮಯದಲ್ಲಿ “ಶಿವಯೋಗಿ ಸಿದ್ದರಾಮನು ಕಳಿಸಿಕೊಟ್ಟ ಕೈಯಾಗಿ ಶಂಕರಣ್ಣನವರು.. ಬಂದರೆಂದು” ತಾಯಿ ಯಾವಾಗಲು ಹೇಳುತಿದ್ದರು. ಡಾ. ಶಂಕ್ರಣ್ಣ. ಡಿ .ಮೂಗಿ.ಸುಪ್ರೀಂ ಕೋರ್ಟ್ ನ್ಯಾಯವಾದಿಗಳು (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು) ಶಂಕರ ಮೂಗಿ ಅವರದು ಬೈಲ್ಹೊಂಗಲದ ಪ್ರತಿಷ್ಠಿತ ಮನೆತನ ಹಾಗೂ ಕಿತ್ತೂರು ಇತಿಹಾಸದ ಮೊದಲ ಇತಿಹಾಸಕಾರೆಂದು ಪ್ರಸಿದ್ಧಿಗೊಂಡ ಶ್ರೀ ದೊಡ್ಡಭಾವೆಪ್ಪ ಚನ್ನಬಸಪ್ಪ ಮೂಗಿಯವರ ಮಗನಾಗಿದ್ದರು… ಕಾರಣಾಂತರದಿಂದ ಬೈಲ್ಹೊಂಗಲವನ್ನು ಬಿಟ್ಟು ಸೊಲ್ಲಾಪುರದಲ್ಲಿ ಕೆಲಸಕ್ಕಾಗಿ ಬರಬೇಕಾದ ಸಂದರ್ಭ ಬಂತು… ಸೊಲ್ಲಾಪುರದ ಗಡಿನಾಡಿನ ಮಣ್ಣಿನಲ್ಲಿ ಕನ್ನಡದ ಕಂಪು ಹರಡುತ್ತಿದ್ದ ದಿನಗಳಲ್ಲಿ, “ಜಯದೇವಿ ತಾಯಿ” ಎಂಬ ಹೆಸರೇ ಅನೇಕರ ಹೃದಯದಲ್ಲಿ ಗೌರವದ ಸ್ಥಾನ ಪಡೆದಿತ್ತು. ಕನ್ನಡ ನಾಡು, ನುಡಿ, ಸಂಸ್ಕೃತಿಯ ಮೇಲಿನ ಅವರ ಅಪಾರ ಪ್ರೀತಿ, ಸಮಾಜಸೇವೆಯಲ್ಲಿನ ಅವರ ತ್ಯಾಗ ಮತ್ತು ಸಂಕಷ್ಟಗಳ ಎದುರು ತಲೆಬಾಗದ ಧೈರ್ಯವು ಎಲ್ಲೆಡೆ ಹರಡಿತ್ತು.ಅಂತಹ ಸಮಯದಲ್ಲಿ, “ಗಡಿನಾಡಿನಲ್ಲಿ ಜಯದೇವಿ ತಾಯಿ ಎಂಬ ಕನ್ನಡತಿ ಇದ್ದಾರೆ. ನಿಷ್ಠಾವಂತೆ, ಧೈರ್ಯವಂತೆ, ಜನರ ಕಷ್ಟಗಳಿಗೆ ಸ್ಪಂದಿಸುವ ಅಪರೂಪದ ಮಹಿಳೆ” ಎಂಬ ಮಾತುಗಳನ್ನು ಕೇಳಿದ ಶಂಕರಣ್ಣನವರ ಮನಸ್ಸಿನಲ್ಲಿ ಅವರನ್ನು ಒಮ್ಮೆ ಭೇಟಿಯಾಗಬೇಕೆಂಬ ಹಂಬಲ ಮೂಡಿತು. ಶಂಕ್ರಣ್ಣ ಮತ್ತು ಲಲ್ಲೇಶ್ವರಿಯವರ ಮದುವೆ ಸಂದರ್ಭ ಒಂದು ದಿನ ಅವರು ಜಯದೇವಿ ತಾಯಿಯವರನ್ನು ಕಾಣಲು ಬಂದರು. ಮೊದಲ ಭೇಟಿಯಲ್ಲಿಯೇ ಅವರ ಸರಳತೆ, ವಿನಯತೆ, ದೃಢ ಸಂಕಲ್ಪ ಮತ್ತು ಕನ್ನಡದ ಮೇಲಿನ ಅಭಿಮಾನ ಕಂಡು ಮಂತ್ರ ಮುಗ್ಧರಾದರು.ತಾಯಿಯವರ ಮಾತುಗಳಲಿ ಬದುಕಿನ ಅನುಭವಗಳಿದ್ದವು. ಅವರ ನಗುವಿನಲ್ಲಿ  ಸೌಮ್ಯತೆ ಇತ್ತು ದೈವಿ ಖಳೆಯಿತು …..ಸಾವಿರ ನೋವುಗಳ ಗೆದ್ದ ಆತ್ಮವಿಶ್ವಾಸವಿತ್ತು.ತಾಯಿಯವರು ಸಮಾಜದ ಏಳಿಗೆಗಾಗಿ ನಡೆಸುತ್ತಿದ್ದ ಕಾರ್ಯಗಳು, ಬಡವರ ಮತ್ತು ನಿರ್ಗತಿಕರ ಪರವಾಗಿ ತೋರಿಸುತ್ತಿದ್ದ ಕಾಳಜಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಾಡುತ್ತಿದ್ದ ಸೇವೆಯನ್ನು ಕಂಡು ಶಂಕರಣ್ಣನವರು ತುಂಬಾ ಸಂತೋಷಪಟ್ಟರು.“ಇಂತಹ ಮಹಿಳೆಯರು ಒಂದು ಕುಟುಂಬಕ್ಕೆ‌ ಅಷ್ಟೇ ಇಡೀ ಸಮಾಜದ ಆಸ್ತಿ” ಎಂದು ಅವರು ಮನಸಾರೆ ಹೊಗಳಿದರು ಹಾಗೂ ತಾಯಿಯವರ ಕೈಜೋಡಿಸಲು ಪ್ರಾರಂಭಿಸಿದರು.ಅಂದಿನ ಭೇಟಿ  ಕನ್ನಡ ಪ್ರೀತಿ, ಸಮಾಜಸೇವೆ ಮತ್ತು ಮಾನವೀಯತೆಯ ಎರಡು ಮಹಾನ ಮನಸ್ಸುಗಳ ಸಂಗಮವಾಗಿತ್ತು.ಗಡಿನಾಡಿನಲ್ಲಿ ಕನ್ನಡದ ದೀಪವನ್ನು ಆರದಂತೆ ಕಾಪಾಡುತ್ತಿರುವ ಜಯದೇವಿ ತಾಯಿಯವರ ಜೊತೆಯಾದರು…. ಕಿರಿಯ ಮಗಳು ಲಲ್ಲೇಶ್ವರಿತಾಯಿ ಮೂಗಿ(ಲೇಖಕಿ)  ಜಯದೇವಿ ತಾಯಿಯವರ ವ್ಯಕ್ತಿತ್ವವನ್ನು ಕಂಡ ಶಂಕರಣ್ಣನವರು, “ಧೈರ್ಯ, ನಿಷ್ಠೆ ಮತ್ತು ಭಕ್ತಿ ಎಲ್ಲವು ರೂಪ ತಾಳಿದರೆ ಅದು ಜಯದೇವಿ ತಾಯಿಯವರ ರೂಪವಾಗುತ್ತದೆ” ಎಂದು ಪ್ರಶಂಸಿಸಿದ್ದರೆ ಅಚ್ಚರಿಯೇನಿಲ್ಲ. ತಾಯಿಯಲಿ ಮೂಡುತ್ತಿದ್ದ ಆತಂಕವನ್ನು ಅರ್ಥಮಾಡಿಕೊಂಡು, ಅವರ ಮನಸ್ಸಿಗೆ ಧೈರ್ಯದ ಮಾತುಗಳನ್ನು ತುಂಬುತ್ತಿದ್ದರು. ತಾಯಿಯ ಕನಸುಗಳು ಕುಸಿಯದಂತೆ, ಅವರ ಸಂಕಲ್ಪಗಳು ಮಂಕಾಗದಂತೆ ಎಚ್ಚರಿಕೆಯಿಂದ ಕಾಪಾಡುತ್ತಿದ್ದರು.ಸಾಹಿತ್ಯ ಸೇವೆಯಲ್ಲಿ ಜಯದೇವಿ ತಾಯಿಯವರು ಬೆಳಗುತ್ತಿದ್ದ ದೀಪವಾದರೆ, ಆ ದೀಪಕ್ಕೆ ಎಣ್ಣೆ ಸುರಿದು ಬೆಳಕು ಕಡಿಮೆಯಾಗದಂತೆ ನೋಡಿಕೊಂಡವರು… ಶಂಕರಣ್ಣನವರು.  ಅವರ ಹಿರಿಯ ಮಗನಂತೆ ತಾಯಿಯ ಬರಹಗಳು, ವಿಚಾರಗಳು, ಸಮಾಜಮುಖಿ ಚಿಂತನೆಗಳು ಜನರಿಗೆ ತಲುಪಲು ಬೇಕಾದ ಎಲ್ಲ ಸಹಕಾರವನ್ನು ನೀಡುತ್ತಿದ್ದರು. ತಾಯಿಯ ಪ್ರತಿಯೊಂದು ಸಾಧನೆಯನ್ನು ತಮ್ಮದೇ ಸಾಧನೆಯೆಂದು ಭಾವಿಸಿ ಹೆಮ್ಮೆಪಡುತ್ತಿದ್ದರು.ಆಸ್ತಿಯ ಸಂರಕ್ಷಣೆಯ ವಿಷಯದಲ್ಲಿಯೂ ಅವರ ಪಾತ್ರ ಅಪಾರ. ಪೂರ್ವಜರು ಕಟ್ಟಿದ ಆಸ್ತಿಯನ್ನು  ಸಂಪತ್ತು……..ಅದು ಕುಟುಂಬದ ಗೌರವ ಮತ್ತು ಪರಂಪರೆಯ ಸಂಕೇತವೆಂದು ಭಾವಿಸಿ ಅತ್ಯಂತ ಪ್ರಾಮಾಣಿಕತೆಯಿಂದ ಕಾಪಾಡಿದರು. ಅನೇಕ ಸವಾಲುಗಳು ಎದುರಾದರೂ ಧೈರ್ಯ ಕಳೆದುಕೊಳ್ಳದೆ, ವಿವೇಕದಿಂದ ಎಲ್ಲವನ್ನು ನಿರ್ವಹಿಸಿದರು. ತಾಯಿಯ  ಮಾತಿಗೆ ಓಗೊಟ್ಟು, ಬಂದ ಸಂಕಟಗಳಿಗೆ ಪರಿಹಾರವಾಗಿ ನಿಂತ ಮಗನಾದರು.ಜಯದೇವಿ ತಾಯಿಯವರ ಹೆಜ್ಜೆ ಗುರುತುಗಳು ಸಮಾಜದಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ತಮ್ಮ ಶಕ್ತಿ, ಸಮಯ ಮತ್ತು ಜೀವನವನ್ನೇ ಸಮರ್ಪಿಸಿದ ಅಪರೂಪದ ಪಡೆದ ಪುತ್ರರಾದರು ಡಾ. ಶಂಕರಣ್ಣ ಮೂಗಿಯವರು. ತಾಯಿಯ ಜೀವನದ ರಥ ಎರಡು ಚಕ್ರಗಳ ಮೇಲೆ ಸಾಗಿದ್ದರೆ, ಒಂದು ಚಕ್ರ ತಾಯಿಯ ಅಚಲ ಸಂಕಲ್ಪವಾಗಿದ್ದರೆ, ಮತ್ತೊಂದು ಚಕ್ರ ಅವರ ಪಡೆದ ಮಗನ ನಿಸ್ವಾರ್ಥ ಸಹಕಾರವಾಗಿತ್ತು.ತಾಯಿಯ ಯಶಸ್ಸಿನ ಹಿಂದೆ ಕಾಣದ ಶಕ್ತಿಯಾಗಿ, ಮಾತಿಲ್ಲದ ತ್ಯಾಗಿಯಾಗಿ, ಅಚಲ ಬೆಂಬಲವಾಗಿ ನಿಂತ ಅವರ ಪಾತ್ರ ಸದಾ ಸ್ಮರಣೀಯ.ಅವರಂತಹ ಅಪರೂಪದ ವ್ಯಕ್ತಿ ದೊರೆತದ್ದು ನನ್ನ ಪುಣ್ಯ ವೆಂದು,…..ತಾಯಿಯವರು ಹೇಳು ವರು…ಅಂತಹ ತಾಯಿಗೆ ಸೇವೆ ಸಲ್ಲಿಸುವುದು ನನ್ನ ಭಾಗ್ಯ ಎಂದು ಶಂಕರಣ್ಣನವರು ಹೇಳುವರು…..!!! ಶಂಕರಣ್ಣನವರ ಒಡನಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಅವರ ಸರಳತೆ, ಸಜ್ಜನಿಕೆ, ಹಿರಿಯರ ಮೇಲಿನ ಗೌರವ, ಸಮಾಜದ ಬಗ್ಗೆ ಇರುವ ಕಾಳಜಿ ಹಾಗೂ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳವ ಗುಣಗಳನ್ನು ಜಯದೇವಿ ತಾಯಿಯವರು ಹತ್ತಿರದಿಂದ ಗಮನಿಸುತ್ತಿದ್ದರು.ಅವರ ಮಾತಿನಲ್ಲಿ ವಿನಯವಿತ್ತು, ನಡವಳಿಕೆಯಲ್ಲಿ ಸಂಸ್ಕಾರವಿತ್ತು, ಹೃದಯದಲ್ಲಿ ಸಾಹಿತ್ಯ ಪ್ರೇಮವಿತು.. , ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿಪ್ರಖಂಡ ಪಾಂಡಿತ್ಯವನ್ನು ಹೊಂದಿದ್ದರು ಇಂತಹ ಗುಣವಂತ ಯುವಕನನ್ನು ಕಂಡ ತಾಯಿಯವರ ಮನಸ್ಸಿನಲ್ಲಿ ಒಂದು ಆಶಯ ಮೂಡಿತು.ಒಂದು ದಿನ ಪ್ರೀತಿಯಿಂದ ಶಂಕರಣ್ಣನವರನ್ನು ಕರೆದು, “ನನ್ನ ಕಿರಿಯ ಮಗಳು ಲಲ್ಲೇಶ್ವರಿಯನ್ನು ನಿಮಗೆ ಕೊಡಲು ನನ್ನ ಮನಸ್ಸಿದೆ. ನೀವು ನಮ್ಮ ಕುಟುಂಬದ ಮಗನಾಗಬೇಕು” ಎಂದು ಹೇಳಿದರು. ತಾಯಿಯವರ ಮಾತು ಕೇಳಿದ ಶಂಕರಣ್ಣನವರ ಮುಖದಲ್ಲಿ ಸಂತಸದ ಹೊಳಪು ಮೂಡಿತು. ಅದು ಅವರಿಗೆ ಸಿಕ್ಕ ಅತ್ಯಂತ ದೊಡ್ಡ ಆಶೀರ್ವಾದವಾಗಿತ್ತು. ತಾಯಿಯವರು ಈ ವಿಷಯವನ್ನು ಲಲ್ಲೇಶ್ವರಿ ತಾಯಿಯವರ ಮುಂದೆ ಹೇಳಿದಾಗ, ತಾಯಿಯ ಮಾತೇ ದೇವರ ಮಾತು ಎಂದು ಭಾವಿಸುತ್ತಿದ್ದ ಲಲ್ಲೇಶ್ವರಿ ತಾಯಿಯವರು ವಿನಮ್ರವಾಗಿ ತಲೆಬಾಗಿದರು.*ನುಡಿಸಿದಂತೆ ನುಡೆವೆನ| ನಡಿಸಿದಂತೆ ನಡೆವೆನನೀ ಇರಿಸಿದಂತೆ ಇರುವೆನ -ನನ್ನವ್ವನಿನ್ನ ಪಾದದ ಧೂಳಿಯಾಗಿ ಹಾರೈನ||* ಎನ್ನುತ ತಮ್ಮ ಜೀವನದ ನಿರ್ಧಾರವನ್ನು ತಾಯಿಯವರ ಕೈಯಲ್ಲಿ ಇಟ್ಟಿದ್ದ ಅವರು, “ನೀವು ಹೇಳಿದಂತೆ ಆಗಲಿ ತಾಯಿ” ಎಂದು ಗೌರವದಿಂದ ಒಪ್ಪಿಗೆ ಸೂಚಿಸಿದರು. ಶುಭ ಸುದ್ದಿ ಎರಡು ಕುಟುಂಬಗಳಲ್ಲೂ ಸಂತಸದ ಅಲೆಯನ್ನು ಹರಡಿಸಿತು. ನಂತರ ಬೈಲಹೊಂಗಲದಲ್ಲಿ ಮದುವೆಯ ಸಿದ್ಧತೆಗಳು ಆರಂಭವಾದವು. ಊರಿನ ಬೀದಿಗಳು ಹಬ್ಬದ ವಾತಾವರಣದಿಂದ ಕಂಗೊಳಿಸಿದವು. ಬಂಧು-ಬಳಗ, ಸ್ನೇಹಿತರು, ಶರಣರು, ಭಕ್ತರು ಎಲ್ಲರೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ಮದುವೆಯ ದಿನ ಬೈಲಹೊಂಗಲವೇ ಒಂದು ಪುಣ್ಯಕ್ಷೇತ್ರದಂತೆ ಕಂಗೊಳಿಸುತ್ತಿತ್ತು. ನಾದಸ್ವರದ ಮಧುರ ಸ್ವರಗಳು ಗಾಳಿಯಲ್ಲಿ ತೇಲುತ್ತಿದ್ದವು. ಮಂಗಳ ವಾದ್ಯಗಳ ಘೋಷದ ನಡುವೆ ವಧುವರರು ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಲಲ್ಲೇಶ್ವರಿ ತಾಯಿಯವರು ಸಾಂಪ್ರದಾಯಿಕ ವಸ್ತ್ರಾಭರಣಗಳಲ್ಲಿ ಲಕ್ಷ್ಮೀದೇವಿಯಂತೆ ಕಂಗೊಳಿಸುತ್ತಿದ್ದರು. ಶಂಕರಣ್ಣನವರು ಗಂಭೀರತೆ ಮತ್ತು ವಿನಯದ ಪ್ರತಿರೂಪವಾಗಿ ಕಾಣುತ್ತಿದ್ದರು.ಹಿರಿಯರ ಆಶೀರ್ವಾದಗಳ ನಡುವೆ ಮಂಗಳಸೂತ್ರ ಧಾರಣೆ ನಡೆದ ಕ್ಷಣದಲ್ಲಿ ಎಲ್ಲರ ಕಣ್ಣಲ್ಲೂ ಸಂತಸದ  ಮಿನುಗಿತು. ಜಯದೇವಿ ತಾಯಿಯವರ ಹೃದಯವು ಆನಂದದಿಂದ ತುಂಬಿ ತುಳುಕಿತು. ತಮ್ಮ ಮಗಳ ಜೀವನ ಒಬ್ಬ ಸಜ್ಜನನ ಕೈಯಲ್ಲಿ ಸುರಕ್ಷಿತವಾಗಿದೆ ಎಂಬ ಸಮಾಧಾನ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಆ ಮದುವೆ ಕೇವಲ ಇಬ್ಬರ ಹೃದಯಗಳ…ಎರಡು ಸಂಸ್ಕಾರವಂತ ಕುಟುಂಬಗಳ , ಆದರ್ಶಗಳ ಪವಿತ್ರ ಮಿಲನವಾಗಿತ್ತು. ಬೈಲಹೊಂಗಲದ ಜನರು ಇಂದಿಗೂ ಆ ಕಲ್ಯಾಣ ಮಹೋತ್ಸವವನ್ನು ನೆನಪಿಸಿಕೊಂಡು, “ಅದು ನಿಜವಾಗಿಯೂ ದೇವರ ಅನುಗ್ರಹದಿಂದ ನಡೆದ ದಿವ್ಯ ವಿವಾಹ” ಎಂದು ಭಾವಪೂರ್ಣವಾಗಿ ಹೇಳಿಕೊಳ್ಳುತ್ತಾರೆ. ಅತಿಥಿಗಳ ಆತಿಥ್ಯವೂ ಅಷ್ಟೇ ಅದ್ದೂರಿಯಾಗಿತ್ತು. ಬಂದ ಪ್ರತಿಯೊಬ್ಬರನ್ನೂ ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಊಟೋಪಚಾರ ಮಾಡಲಾಯಿತು. ಮದುವೆ ಮುಗಿದ ನಂತರವೂ ಹಲವಾರು ದಿನಗಳ ಕಾಲ ಬೈಲಹೊಂಗಲದ ಜನರು ಆ ವಿವಾಹದ ಬಗ್ಗೆ ಮಾತನಾಡುತ್ತಲೇ ಇದ್ದರು.“ಮದುವೆ ಅಂದರೆ ಹೀಗೆ ಇರಬೇಕು! ನಾವು ಇಂತಹ ವಿಜೃಂಭಣೆಯ ಕಲ್ಯಾಣವನ್ನು ಜೀವನದಲ್ಲಿ ನೋಡಿಲ್ಲ!” ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆ ದಿನವನ್ನು ಕಂಡವರು ಇಂದಿಗೂ ನೆನಪಿಸಿಕೊಂಡಾಗ ಅವರ ಕಣ್ಮುಂದೆ ಹೂವಿನ ತೋರಣಗಳಿಂದ ಸಿಂಗರಿಸಲ್ಪಟ್ಟ ಬೈಲಹೊಂಗಲದ ಓಣಿ ಓಣಿಯ ತುಂಬಾ ಕಟ್ಟಿದ ಹಂದರಗಳ ನೆನಪು ಬಾರದೇ ಇರದು.. ಸತಿಪತಿಗಳ ಪವಿತ್ರ ಬಂಧವನ್ನು  ಗೌರವಿಸಿ,   ಪ್ರೀತಿ, ಕಾಳಜಿ ಮತ್ತು ಸೇವಾಭಾವದಿಂದ ನಡೆದುಕೊಂಡರು. ಸುಖದಲ್ಲೂ ದುಃಖದಲ್ಲೂ ಅವರ ನೆರಳಾಗಿ ನಿಂತು, ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಗಿದ್ದು, ಆದರ್ಶ ದಂಪತಿಗಳಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದರು.ಅವರಿಬ್ಬರ ಜೀವನವು ಪರಸ್ಪರ ತ್ಯಾಗ ಮತ್ತು ಧರ್ಮನಿಷ್ಠೆಯ ಪ್ರತೀಕವಾಗಿತ್ತು.ಜೀವನದ ಎಲ್ಲಾ ಏಳುಬೀಳುಗಳನ್ನು ಕೈಹಿಡಿದು ದಾಟಿದರು.ಅತ್ಯಂತ ವೈಶಿಷ್ಟ ಪೂರ್ಣ ಜೀವನವು ಇವರದಾಗಿತ್ತುಶಂಕ್ರಣ್ಣ ಮೂಗಿ ಹಾಗೂ ಲ‌ಲ್ಲೇಶ್ವರಿ ತಾಯಿಯವರು ಜೀವನದ ಒಂದು ಹಂತದಲ್ಲಿ ಸಂಸಾರದ ಬಂಧನಗಳನ್ನು ಮೀರಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಆ ಬಳಿಕ ಅವರು ದಾಂಪತ್ಯ ಜೀವನದ ಭಾವನೆಗಿಂತಲೂ ಉನ್ನತವಾದ ಆಧ್ಯಾತ್ಮಿಕ ಸಂಬಂಧವನ್ನು ಅಳವಡಿಸಿಕೊಂಡರು. ಒಬ್ಬರನ್ನೊಬ್ಬರು  ತಂದೆ-ತಾಯಿಯರಂತೆ ಗೌರವದಿಂದ ಕಾಣುತ್ತಿದ್ದರು. ಲಲ್ಲೇಶ್ವರಿ ತಾಯಿಯವರು ಕೈಯಲ್ಲಿ ರುದ್ರಾಕ್ಷಿ ಕಂಕಣವನ್ನು ಕಟ್ಟಿಕೊಂಡರು.ಸಂಬಂಧದಲ್ಲಿ ಮೋಹ ಮರೆತು ಮಮತೆ, ನಿಸ್ವಾರ್ಥ ಸೇವೆಯಲಿ ತೊಡಗಿದರು. ಪರಸ್ಪರರ ಯೋಗಕ್ಷೇಮವನ್ನು ಕಾಪಾಡುತ್ತ, ತಾಯಿ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದರು.  ಅವರ ಪ್ರತಿಯೊಂದು ಹೆಜ್ಜೆಯೂ ಶರಣ ತತ್ವದ ಪ್ರತಿಬಿಂಬವಾಗಿತ್ತು.ಸನ್ಯಾಸ ಮಾರ್ಗದಲ್ಲಿ ನಡೆದು, ಭಕ್ತಿ, ಜ್ಞಾನ ಮತ್ತು ಸೇವೆಯ ಮೂಲಕ ತಮ್ಮ ಅಂತರಂಗವನ್ನು ಶುದ್ಧಗೊಳಿಸಿಕೊಂಡರು. ಅಂತಿಮವಾಗಿ ನಿರ್ವಾಣದತ್ತ ಪಯಣ ಬೆಳೆಸಿದರು. ಅವರ ಜೀವನವು ಸಂಸಾರಿಕ ಮಿತಿಯನ್ನು ದಾಟಿ, ಆತ್ಮಮದ ಶ್ರೇಷ್ಠ ಮಟ್ಟವನ್ನು ತಲುಪಿದ ಉದಾತ್ತ ಉದಾಹರಣೆಯಾಗಿದೆ. ತಾಯಿಯನ್ನೇ  ಗುರುವಾಗಿ ಸ್ವೀಕರಿಸಿ  ಶರಣರ ವೈರಾಗ್ಯವನ್ನು ಕಂಡ ಮಹಾತ್ಮರಾದರು” ಎಂದು ಭಕ್ತಿಭಾವದಿಂದ ಸ್ಮರಿಸ ಬಹುದಾಗಿದೆ.ಅವರ ಜೀವನಗಾಥೆ ಇಂದಿಗೂ ಸೇವೆ, ತ್ಯಾಗ ಮತ್ತು ಆಧ್ಯಾತ್ಮಿಕ ಸಾಧನೆಯ ಆದರ್ಶವಾಗಿ ಉಳಿದಿದೆ. *ಸತಿಪತಿಯ ಭಾವ| ತೊರೆದು ನಿರತಸತೀಶರಣ ಲಿಂಗಪತಿ ಬಾವದಿ- ರಮಿಸಿಭಕ್ತಿ ಭವನದ ವಾಸವಾದೆವು|| * ಎನ್ನುತ ನಂತರ ಬಸವಕಲ್ಯಾಣದಲ್ಲಿ ಜಯದೇವಿ ತಾಯಿಯವರೊಂದಿಗೆ ಶರಣರು ನಡೆದಾಡಿದ ಭೂಮಿಯಲ್ಲಿ ಅವರು ವಾಸವಿದ್ದು, ತಮ್ಮ ಆಧ್ಯಾತ್ಮಿಕ ಮತ್ತು ಸಾಹಿತ್ಯ ಸೇವೆಯನ್ನು ಮುಂದುವರಿಸಿದರು. *ಕರೆದ್ಧ್ಯೊದರು ಕೈಹಿಡಿದು| ಅರಮನೆ ಆಧ್ಯಾತ್ಮಚಿರ ಪರ ಪದವೀಯ ಅರಿತು ನೀಡಿ-ಪತಿದೇವ ಶರಣರ ನಿಜ ನಿವಾಸಕ್ಕೆ ಕರೆದರು ||* ಗಂಡ ಹೆಂಡಂದಿರು ಇಬ್ಬರು ಸನ್ಯಾಸತ್ವವನ್ನು ಪಡೆದು ಬಸವಭೂಮಿಯಲ್ಲಿ ನೆಲೆಸಿದರು ಸತಿಪತಿಗಳ ಜೀವನದ ಕೊನೆಯ ಅಧ್ಯಾಯವೂ ಅವರ ಬದುಕಿನಂತೆಯೇ ಸೇವೆ, ಭಕ್ತಿ ಮತ್ತು ತ್ಯಾಗದ ಸುಗಂಧದಿಂದ ತುಂಬಿಕೊಂಡಿತ್ತು. ಕಿರಿ ಮಗಳು ಮತ್ತು ಅಳಿಯನೊಂದಿಗೆ ಜಯದೇವಿ ತಾಯಿಯವರು ಅನೇಕ ವರ್ಷಗಳ ಕಾಲ ಸಮಾಜಸೇವೆ, ಶರಣ ಸಂಸ್ಕೃತಿಯ ಪ್ರಚಾರ ಮತ್ತು ಮಾನವೀಯ ಮೌಲ್ಯಗಳ ಬಿತ್ತನೆ ಮಾಡುತ್ತಾ ಬದುಕಿದರು.ಬಸವಣ್ಣನವರ ಪವಿತ್ರ ಭೂಮಿಯಾದ ಬಸವಕಲ್ಯಾಣದಲ್ಲಿ ಈ ಮಹನೀಯರು ತಮ್ಮ ಉಸಿರಿನವರೆಗೂ ಧರ್ಮದ ದಾರಿಯಲ್ಲಿ ನಡೆದರು. ಕಾಲಚಕ್ರದ ನಿಯಮದಂತೆ ದೇಹವು ಮಣ್ಣಿನಲ್ಲಿ ಲೀನವಾದರೂ, ಅವರು ಬಿತ್ತಿದ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಬಸವಣ್ಣನವರ ಪಾವನ ಮಣ್ಣಿನಲ್ಲಿ ಈ ಮೂವರು ಮಹಾತ್ಮರು ಮಣ್ಣಲ್ಲಿ ಮಣ್ಣಾಗಿ, ಶಿವನಲ್ಲಿ ಶಿವವಾಗಿ ಲೀನರಾದರು. ಬಸವಕಲ್ಯಾಣದಲ್ಲಿ ಅವರ ಸಮಾಧಿಗಳನ್ನು ಕಾಣಬಹುದಾಗಿದೆ.ಬಸವಕಲ್ಯಾಣದಲ್ಲಿ ಅವರ ಜೀವನದ ನೆನಪುಗಳನ್ನು ಸಾರುವ ಮೂರು ಸಮಾಧಿಗಳು ಭಕ್ತರ ಕಣ್ಮನ ಸೆಳೆಯುತ್ತವೆ. ಆ ಸಮಾಧಿಗಳು  ಅವು ಅವರ ತ್ಯಾಗ, ಸೇವೆ, ಶರಣ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಗಳಾಗಿವೆ.ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರ

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-22 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜನ ಸೇವೆಯೇ ಜೀವನದ ಧ್ಯೇಯವಾಗಿದ್ದ ಜಯದೇವಿ ತಾಯವರ ಜೀವನವು ತ್ಯಾಗ, ಸೇವೆ ಮತ್ತು ಮಾತೃತ್ವದ ಅದ್ಭುತ ಸಂಗಮ.ಅವರು ತಮ್ಮ ವೈಯಕ್ತಿಕ ಸುಖದುಃಖಗಳನ್ನು ಮರೆತು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ….. ಬಡವರು, ನಿರ್ಗತಿಕರು ಹಾಗೂ ಸಹಾಯದ ನಿರೀಕ್ಷೆಯಲ್ಲಿದ್ದ ಜನರಿಗೆ ಆಶಾಕಿರಣವಾಗಿದ್ದರು. ಪತಿಯ ವಿಯೋಗದ ನಂತರ ಜೀವನದ ಭಾರ ಇನ್ನಷ್ಟು ಹೆಚ್ಚಾದರೂ ಅವರು ಎಂದಿಗೂ ಕುಗ್ಗಲಿಲ್ಲ…ಐದು ಮಕ್ಕಳನ್ನು ಬೆಳೆಸಿ ಅವರಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಮಕ್ಕಳ  ಮನಸ್ಸುಗಳಲಿ ಪ್ರೀತಿ, ಕರುಣೆ ಮತ್ತು ಮಾನವೀಯತೆಯತೆ ತುಂಬಿಸಿದರು. ತಾಯಿಯವರ ಮನೆ ಎಂದರೆ…. ನೆರವು ಕೇಳಿ ಬರುವವರಿಗೆ ಸದಾ ತೆರೆದ ಬಾಗಿಲಾಗಿತ್ತು. ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ಧೈರ್ಯ, ನಿರಾಶೆಯಲ್ಲಿರುವವರಿಗೆ ಆಶ್ವಾಸನೆ ನೀಡುವುದು ಅವರ ಸಹಜ ಗುಣವಾಗಿತ್ತು. ಊರಿನಲ್ಲಿ ಯಾರಿಗಾದರೂ ಕಷ್ಟ ಬಂದರೆ ಮೊದಲು ನೆನಪಾಗುತ್ತಿದ್ದ ಹೆಸರು ಜಯದೇವಿ ತಾಯಿಯವರದ್ದೇ.ತಮ್ಮ ಮಕ್ಕಳಿಗೆ  ತಮ್ಮ ಜೀವನದ ಮೂಲಕವೇ ಪಾಠ ಕಲಿಸಿದರು. “ಮನುಷ್ಯನ ಬದುಕಿನ ನಿಜವಾದ ಅರ್ಥ ಇನ್ನೊಬ್ಬರ ಕಣ್ಣೀರು ಒರೆಸುವುದರಲ್ಲಿ ಇದೆ” ಎಂಬ ಸಂದೇಶವನ್ನು ತಮ್ಮ ನಡೆನುಡಿಗಳ ಮೂಲಕ ತೋರಿಸಿದರು. ಮಕ್ಕಳಲ್ಲು ಕೂಡ ಸೇವಾಭಾವವನ್ನು ಜೀವನದ ಮೌಲ್ಯವಾಗಿ ಅಳವಡಿಸಿದರು. ಅವರ ಜೀವನ  ಶಕ್ತಿಯ, ಸಹನೆಯ ಮತ್ತು ನಿಸ್ವಾರ್ಥ ಪ್ರೀತಿಯ ಮಹಾಕಾವ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಅರ್ಪಿಸಿದ ಅವರು ನಿಜಕ್ಕೂ “ತಾಯಿ” ಎಂಬ ಪದಕ್ಕೆ ಅರ್ಥ ತುಂಬಿದ ಮಹನೀಯರು. *ಬೇಡಿಲ್ಲ ಫಲ ಪದವಿ |ಬೇಡಿಲ್ಲ ಸ್ಥಾನಮಾನಬೇಡಿಲ್ಲ ಮಂತ್ರಿ ತಂತ್ರಿಯಾಗಲು -ಜಯದೇವಿತಾಯಿ ಆದಳು ಕನ್ನಡದ* || ಎನ್ನುವಂತೆ ಕನ್ನಡದ ತಾಯಿಯಾಗಿ ನಿಸ್ಸಹಾಯಕರ ಬಂಧುವಾಗಿ,ತಮ್ಮ ಮಕ್ಕಳಿಗೆ ನೆರಳಾಗಿ ನಿಂತ ತಾಯಿ, ಸಮಾಜದ ನೋವಿಗೆ ಮದ್ದಾಗಿ ಬದುಕಿದ ತಾಯಿ!!!!,  ಇನ್ನೂ ಜಯದೇವಿ ತಾಯಿಯವರ ಮೂರನೇ ಮಗ *ಬಸವರಾಜ* ಚಿಕ್ಕಂದಿನಿಂದಲೇ ಎಲ್ಲರಲ್ಲೂ ವಿಭಿನ್ನವಾಗಿದ್ದರು. ಮನೆಯಲ್ಲಿದ್ದ ಇತರ ಮಕ್ಕಳಂತಲ್ಲ…..ಮಗುವಾಗಿದ್ದಾಗ ಶಾಂತವಾಗಿ ಮಲಗಿರುತ್ತಿದ್ದರು ಹಸಿವೆ ಆದಾಗ ಮಾತ್ರ ಅಳುತ್ತಿದ್ದರು ಹೀಗಾಗಿ ತಾಯಿಯವರಿಗೆ ಹೆಚ್ಚಾಗಿ ಮಗನ ಕಾಳಜಿ ಮಾಡದು ಬೇಕಾಗಿ ಬರಲಿಲ್ಲ ಅಂತ ಹೇಳುತಿದ್ದರು. ಡಾ. ಬಸವರಾಜ್ ಲಿಗಾಡಿ ಮಧ್ಯದಲ್ಲಿ ಲಲ್ಲೇಶ್ವರಿ ತಾಯಿ, ಬಸವರಾಜರ ಧರ್ಮಪತ್ನಿ ಡಾ. ಮಧುಮಾಲ ಇತರರಂತೆ ಗಲಾಟೆ, ಹಠ, ಆಟ-ಪಾಟಗಳಲ್ಲಿ ಮುಳುಗದೆ ಶಾಂತವಾಗಿದ್ದರು. ಅವರ ಕಣ್ಣುಗಳಲ್ಲಿ ಒಂದು ವಿಚಿತ್ರ ಶಾಂತಿ ಇತ್ತು. ಮುಖದಲ್ಲಿ ಸದಾ ಮೃದುವಾದ ನಗು. ತಾಯಿಯವರು ಎಷ್ಟೇ ದುಃಖದಲ್ಲಿದ್ದರೂ ಬಸವರಾಜನ ಆ ಶಾಂತ ವದನವನ್ನು ನೋಡಿದ ಕ್ಷಣ ಮನಸ್ಸಿಗೆ ಒಂದು ನೆಮ್ಮದಿಗೆ ಇಳಿಯುತ್ತಿದ್ದರು. ಮನೆಯಲ್ಲಿ ಯಾರಿಗಾದರೂ ನೋವಾದರೆ ಮೊದಲಿಗೆ ಓಡಿ ಹೋಗಿ “ಏನಾಯ್ತು?” ಎಂದು ಕೇಳುವ ಕರುಣೆ ಅವರೋಳಗೆ ಬೆಳೆದಿತ್ತು.  ಚಿಕ್ಕವರಿದ್ದಾಗಲೇ “ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಬೇಕು… ನೋವಿನಲ್ಲಿರುವ ಮಕ್ಕಳನ್ನು ಉಳಿಸಬೇಕು…” ಎಂದು ತಾಯಿಯವರ ಬಳಿ ಹೇಳುತ್ತಿದ್ದ. ಅವರ ಆಟಿಕೆಯ ಸಾಮಾನುಗಳೆಂದರೆ ಇಂಜೆಕ್ಷನ್ ತೆತಸ್ಕೋಪ್ಗಳೇ ಆಗಿದ್ದವು ಅಂತ ತಾಯಿಯವರು ಹೇಳುತ್ತಿದ್ದರು.ನಾವು ಬಯಸಿದ್ದನ್ನೇ ಮುಂದೆ ಆಗುತ್ತೇವೆ ಅನ್ನುವದು‌ ಬಲು ಸತ್ಯ ಎನ್ನುವರು!!…..ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕತೆಯಿಂದಾಗಲಿ ನಾವು ಏನನ್ನು ಬಯಸುತ್ತೇವೋ ಜೀವನದಲ್ಲಿ ಅದೇ ಆಗುವದು ಅನ್ನುವ ಸ್ಥಿತಿ ಗತಿಗಳ ‌ಬಗ್ಗೆ ಹೇಳುಲು.. ಈ ಉದಾಹರಣೆಯನ್ನು ಹೇಳುತ್ತಿದ್ದರು. ಬಸವರಾಜರು ಬೆಳೆದಂತೆ , ವೈದ್ಯಕೀಯ ಶಿಕ್ಷಣಕ್ಕೆ ಸೇರಿದರು..ಆ ದಿನ ತಾಯಿಯವರು ಸಂತೋಷದಿಂದ  “ನನ್ನ ಮಗ ಇನ್ನು ಜೀವ ಉಳಿಸುವ ದೇವರ ಕೈ ಆಗ್ತಾನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಡಾ. ಬಸವರಾಜರ ಇನ್ನೋರ್ವ ಪತ್ನಿ ಮಧ್ಯದಲ್ಲಿ ಶೈಲಜಾ  ಮುಂದೆ ಬಸವರಾಜ ಮಕ್ಕಳು ಆಗದವರಿಗೆ ಉಪಚಾರವನ್ನು ಮಾಡಲಾರಂಭಿಸಿದರು. ಬಂಜೆತನ ನಿವಾರಣೆ ತಜ್ಞರಾದರು. *ನುಡಿಗಳ ಸ್ಮರಿಸುವೆ| ನಡೆಯಲಿ ಅಳವಡಿಸಿ ಎಡವಿದರೆ ಕೈಹಿಡಿದೆತ್ತು – ಹಡೆದವ್ವದಡೆಗೆ ಕರೆದೊಯ್ಯೇ ಮಗುವಿಗೆ*||ಎನ್ನುವ  ಮನೋಭಾವವನ್ನು ಬಸವರಾಜರು ಹೊಂದಿದ್ದರುಅಂತೇಯೇ ಜಯದೇವಿ ತಾಯಿಯವರ ವೃದ್ಧಾಪ್ಯದಲ್ಲಿ ಬಸವರಾಜರು ನೆರಳಾಗಿ ನಿಂತರು. ತಾಯಿಯವರಿಗೆ ನೋವಾಗದಂತೆ ಪ್ರತಿಯೊಂದು ಹೆಜ್ಜೆಯಲ್ಲೂ ಕಾಳಜಿ ವಹಿಸಿದರು. ರಾತ್ರಿ ಎಷ್ಟೇ ಕೆಲಸ ಇದ್ದರೂ ತಾಯಿಯ ಕೋಣೆಗೆ ಹೋಗಿ “ಅಮ್ಮ ಆರೋಗ್ಯ ಹೇಗಿದೆ?” ಎಂದು ಕೇಳದೇ ನಿದ್ರೆ ಮಾಡುತ್ತಿರಲಿಲ್ಲ. *ಹೊತ್ತು ಇಳಿಯುತಿದ್ದಂತೆ |ಗೊತ್ತು ಗುರಿಕಾಣು ಮತ್ತೆ ಹುಟ್ಟಿ ಬರದು- ಜನುಮಹೆತ್ತವ್ವನ ಬಿಡದೆ ಜಪಿಸು* ||ಎನ್ನುವಂತೆ ತಾಯಿಯವರ ಕೊನೆಯ ದಿನಗಳಲ್ಲಿಯೂ ಬಸವರಾಜ ಅವರ ಕೈ ಹಿಡಿದುಕೊಂಡೇ ಇದ್ದರು. ಮಗನ ಆ ಮಮತೆಯ ಸ್ಪರ್ಶದಲ್ಲಿ ಜಯದೇವಿ ತಾಯಿಯವರು ತಮ್ಮ ಜೀವನದ ಎಲ್ಲಾ ಹೋರಾಟಗಳಿಗೂ ಅರ್ಥ ಸಿಕ್ಕಂತಾಗಿತ್ತು. *ತಾಯಿಯೇ ದೇವರು| ತಾಯಿಯೇ ಗುರಿತಾಯಿ ಕಲಸಿದರು ನಡೆ ನುಡಿ -ಚೆನ್ನಆಯಿತು ಅದು ಮುಕ್ತಿಯ ಧಾಮ *|| ಎನ್ನುವಂತೆ ಬದುಕಿದವರು ಲಲ್ಲೇಶ್ವರಿ ತಾಯಿಯವರು (ನನ್ನ ತಾಯಿ) ತಾಯಿಯವರ ನೆರಳಲಿ ಬದುಕಿದ ಬಾಳಿದ ಮಗಳ ಮಹಾ ಸೇವೆಯ ಬಗ್ಗೆ ಜಯದೇವಿ ತಾಯಿಯವರು ಎಲ್ಲರೆದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರ ಉಸಿರಾಗಿ, ಅವರ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಬದುಕಿದವರು ಕೊನೆಯ ಮಗಳು ಲಲ್ಲೇಶ್ವರಿ ತಾಯಿ. ತಾಯಿಯಲ್ಲಿಯೇ ತಮ್ಮ ಲೋಕವನ್ನು ಕಂಡವರು. *ಅಂದಾಜು ಮೃದ ನುಡಿ |ಚಂದಾದ ಮುಖಮಂದಿರ ಮಂದಮತಿಗೆ -ಲಭಿಸಿ ಸೇವೆಮಾತಾಯಿ ಎಂದೆಂದೂ ಬಿಡೇನು ಪಾದ*|| ಎನ್ನುತ ಲಲ್ಲೇಶ್ವರಿಯವರಿಗೆ ತಾಯಿಯ ಒಂದು ಕಣ್ಣೋಟ ಸಾಕು, ಅವರ ಮನದ ಮಾತನ್ನು ಅರಿಯುತ್ತಿದ್ದರು.  ಏನನ್ನೂ ಕೇಳುವ ಮುನ್ನವೇ ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ತಾಯಿಯವರ ನಗು ಅವರ ಸಂತೋಷವಾಗಿತ್ತು; ಅವರ ನೋವು ಅವರ ಹೃದಯದ ನೋವಾಗಿತ್ತು. ಹಗಲು ರಾತ್ರಿ ಎನ್ನದೆ, ಸುಖ ದುಃಖ ಎನ್ನದೆ, ತಮ್ಮ ಬದುಕನ್ನೇ ತಾಯಿಯ ಸೇವೆಗೆ ಅರ್ಪಿಸಿಕೊಂಡಿದ್ದರು. *ತನು ಮನದ ಸೇವೆ| ಉಸಿರಿರುವ ತನಕಬೇಸರವಿಲ್ಲ ಕಿಂಚಿತ್ತ -ಹಡೆದವ್ವಉಸಿರು ಹಾಕಲಾರೆ ಕಡೆ ತನಕ* || ಎನ್ನುತ್ತಿದ್ದರು ನನ್ನ  ತಾಯಿ ಲಲ್ಲೇಶ್ವರಿಯವರುತಾಯಿಯವರು. ಪ್ರತಿ ಘಳಿಗೆಯಲ್ಲೂ ಅವರ ಕೈ ಹಿಡಿದು ನಡೆಸುತ್ತಿದ್ದರು. ತಾಯಿಯವರು ಆಯಾಸಗೊಂಡಾಗ ತಮ್ಮ ಮಡಿಲನ್ನೇ ಆಸರೆಯನ್ನಾಗಿ ಮಾಡುತ್ತಿದ್ದರು. ತಾಯಿಯವರ ಆರೋಗ್ಯದಲ್ಲಿ ಏರಿಳಿತಗಳು ಬಂದಾಗ, ಅವರ ಕಣ್ಣಲ್ಲಿ ನಿದ್ರೆ ಇರುತ್ತಿರಲಿಲ್ಲ… ಒಂದೇ ಸಮನೆ ದೇವರಲ್ಲಿ ತಾಯಿಗೆ ನೋವು ಕೊಡಬೇಡವೆಂದು  ಬೇಡಿಕೊಳ್ಳುತ್ತಿದ್ದರು. *ಅರೆ ನಿಮಿಷ ಬಿಟ್ಟಿಲ್ಲ |ನೆರಳಾಗಿ ಬೆಳೆದೆವುಬೇರೆ ಸ್ವತಂತ್ರ ಪಡೆದಿಲ್ಲ -ತಾಯಿಯಹರಣ ಒಂದು ದೇಹವೆರಡು*|| ಎನ್ನುವಂತೆ ಲಲ್ಲೇಶ್ವರಿಯವರು ತಾಯಿ ಇಲ್ಲದೆ ಒಂದು ಕ್ಷಣವೂ ಬದುಕಿರಲಾರಿ ಅನ್ನುವ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದರು.ತಾಯಿಯವರ ಕೊನೆಯ ದಿನಗಳಲ್ಲಿ ಲಲ್ಲೇಶ್ವರಿ ತಾಯಿಯವರ ಸೇವೆ ಇನ್ನಷ್ಟು ಅಪೂರ್ವವಾಯಿತು. ಅವರು ಮಗಳಾಗಿ , ತಾಯಿಗೆ ತಾಯಿಯಾಗಿ ಮಗುವನ್ನು ನೋಡಿಕೊಳ್ಳುವಂತೆ ಮಮತೆಯಿಂದ ಜಯದೇವಿ ತಾಯಿಯವರನ್ನು ನೋಡಿಕೊಂಡರು. ಔಷಧಿ ನೀಡುವುದರಿಂದ ಹಿಡಿದು, ಊಟ ಮಾಡಿಸುವವರೆಗೂ, ರಾತ್ರಿ ನಿದ್ರೆಯಲ್ಲೂ ಎಚ್ಚರವಿದ್ದು ಅವರ ಆರೋಗ್ಯವನ್ನು ಗಮನಿಸುತ್ತಿದ್ದರು. *ಅಹೋರಾತ್ರಿ ನೆನೆದೆ| ಮಹಾತಾಯಿ ಸೇವೆಇಹಪರವ ಗೆಲಿದೆ ಕಟಾಕ್ಷ -ಸೇವೆಯಲಿಗೆಲಿದೆ ಜನನ ಮರಣವನು* ||ಎನ್ನುತ್ತಿದ್ದರು ಲಲ್ಲೇಶ್ವರಿಯವರು. ಇಲ್ಲಿ ಜಯದೇವಿ ತಾಯಿಯವರು ಒಂದು ಘಟನೆಯನ್ನು ಯಾವಾಗಲೂ ನೆನಪಿಸುತ್ತಿದ್ದರು . ಆಗ ಲಲ್ಲೇಶ್ವರಿ ಅವರಿಗೆ ಕೇವಲ ಮೂರು ಅಥವಾ ನಾಲ್ಕು ವರ್ಷಗಳಿರಬಹುದು…..ಜಯದೇವಿ ತಾಯಿಯವರ ಆರೋಗ್ಯ ಹುಷಾರಿಲ್ಲದೆ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆದ  ದಿನಗಳಲ್ಲಿ ನಡೆದ ಈ ಘಟನೆ ಕೇಳಿದರೆ ಹೃದಯವೂ ಕರಗುತ್ತದೆ.ಆಸ್ಪತ್ರೆಯ ಹಾಸಿಗೆಯ ಮೇಲೆ ಜಯದೇವಿ ತಾಯಿಯವರು ಅಸಹನೀಯ ನೋವಿನಿಂದ ನರಳುತ್ತಿದ್ದರು. ದೇಹದ ಯಾತನೆ ಹೆಚ್ಚಾದಾಗ  ಆ ಕ್ಷಣದಲ್ಲಿ  ತಮ್ಮನ್ನು ತಾವು ಮರೆತು, ಪುಟ್ಟ ಮಗುವಿನಂತೆ,“ಅವ್ವಾ… ಅವ್ವಾ…”ಎಂದು ತಮ್ಮ ಜನ್ಮದಾತೆಯನ್ನು ಕರೆಯುತ್ತಿದ್ದರು. ಆ ಕರೆಯಲ್ಲಿ ನೋವಿತ್ತು, ಹಂಬಲವಿತ್ತು, ತಾಯಿಯ ಮಡಿಲಿಗಾಗಿ ಹಾತೊರೆಯುವ ಮಗುವಿನ ಹೃದಯವಿತ್ತು. ಆ ದೃಶ್ಯವನ್ನು ಕಂಡ ಲಲ್ಲೇಶ್ವರಿಯವರ ಹೃದಯ ಕರಗಿತು. ಆ ಕ್ಷಣದಲ್ಲಿ  ತಾಯಿಯಾಗಿ ನಿಂತರು..ತನ್ನ ತಾಯಿಯ ಕಣ್ಣೀರನ್ನು ಒರೆಸುತ್ತಾ, ತಲೆಯನ್ನು ಮೃದುವಾಗಿ ಸವರುತ್ತಾ, ಮೂರು ವರ್ಷದ ಮಗುವೊಂದು ತನ್ನ ತಾಯಿಯನ್ನು ಸಮಾಧಾನಪಡಿಸಲು ಮುಗ್ಧತೆಯಿಂದ,“ಅವ್ವಾ, ಅಳಬೇಡ. ನಿನ್ನ ತಾಯಿ ಬರುವವರೆಗೂ ನಾನೇ ನಿನ್ನ ತಾಯಿಯಾಗಿರುತ್ತೇನೆ. ಏನು ಬೇಕಾದರೂ ನನಗೆ ಹೇಳು…”ಎಂದು ಹೇಳಿದರು.ಆ ಮಾತು ಕೇಳಿದಾಗ ಅಲ್ಲಿ ಇದ್ದವರ ಕಣ್ಣುಗಳಲ್ಲೂ ನೀರು ತುಂಬಿತು…. ಸಂಬಂಧಗಳೆಲ್ಲ ತಲೆಕೆಳಗಾಗಿದ್ದವು. ತಾಯಿ ಮಗುವಾಗಿದ್ದರು,ಮಗಳು ತಾಯಿಯಾಗಿದ್ದರು.ಲಲ್ಲೇಶ್ವರಿ ತಾಯಿಯವರು ತಮ್ಮ ಕೈಯಿಂದ ನೀರು ಕುಡಿಸಿದರು. ನೋವಿನಿಂದ ನಲುಗಿದ್ದ ತಾಯಿಯ ಬೆವರನ್ನು ಒರೆಸಿದ್ದರು. ಅಂದಿನ‌ದಿನದಿಂದ ಕೊನೆಯ ದಿನ ವರೆಗೂ ತಾಯಿಯಾಗಿಯೇ ಅವರು ಜಯದೇವಿ ತಾಯಿಯವರಿಗೆ ಆಸರೆಯಾದರು.ಅವರ ಪ್ರತಿಯೊಂದು ಸ್ಪರ್ಶದಲ್ಲೂ ಮಮತೆಯಿರುತಿತ್ತು.ಪ್ರತಿಯೊಂದು ಮಾತಿನಲ್ಲೂ ಧೈರ್ಯವಿತ್ತು,  ಸೇವೆಯಲ್ಲೂ ಭಕ್ತಿಯಿತ್ತು.ಒಂದು ಸಮಯದಲಿ ಜಯದೇವಿ ತಾಯಿಯವರು ಲಲ್ಲೇಶ್ವರಿಯನ್ನು ಮಡಿಲಲ್ಲಿ ಹೊತ್ತು ಬೆಳೆಸಿದ್ದರು. ಈಗ ಕಾಲಚಕ್ರ ತಿರುಗಿ, ಲಲ್ಲೇಶ್ವರಿಯವರೇ ಜಯದೇವಿ ತಾಯಿಯವರನ್ನು ಮಮತೆಯ ಮಡಿಲಲ್ಲಿ ಹೊತ್ತುಕೊಂಡಿದ್ದರು. *ತನು ಸವಿಸಿ ಸೇವೆಯಲ್ಲಿ| ಮನನಿಲಿಸಿ ಧ್ಯಾನದಿ ತನುಮನ ಒಂದಾಗಿ ದುಡಿಸಿದೆ -ನನ್ನವ್ವನಾನೆಂಬುದು ಅಳಿದು ನೀನಾದೆ*|| ತಾಯಿಯ ನೋವನ್ನು ತಮ್ಮ ನೋವನ್ನಾಗಿ, ತಾಯಿಯ ಕಣ್ಣೀರನ್ನು ತಮ್ಮ ಕಣ್ಣೀರನ್ನಾಗಿ, ಪ್ರತಿ ಉಸಿರಿನ  ಪ್ರಾರ್ಥನೆಯಾದರು. *ಕಡೆತನ ಭಂಗ |ಬರದೇ ಅಡಿಗಡಿಗೆ ಎಚ್ಚರಬಿಡದಂತೆ ತವ ಸೇವೆ -ನನ್ನವ್ವಮೂಡಿಗೆ ಧರಿಸಿರಿ ತವ ಪಾದ*|| ಜನ್ಮ ನೀಡಿದ ತಾಯಿಗೆ ಮರಳಿ ತಾಯಿಯಾಗುವ ಭಾಗ್ಯ ಕೆಲವೇ ಆತ್ಮಗಳಿಗೆ ಸಿಗುತ್ತದೆ.  ಅಪರೂಪದ ಭಾಗ್ಯವನ್ನು ಲಲ್ಲೇಶ್ವರಿ ತಾಯಿಯವರು ತಮ್ಮ ಪ್ರೀತಿ, ಸೇವೆ ಮತ್ತು ತ್ಯಾಗದ ಮೂಲಕ ಸಾರ್ಥಕಗೊಳಿಸಿದರು. ಜಯದೇವಿ ತಾಯಿಯವರ ಕೊನೆಯ ದಿನಗಳಲ್ಲಿ ಮಮತೆಯ ಮೂರ್ತಿ, ಸೇವೆಯ ಮಗಳಾಗಿ,  ತಾಯಿಯ ಬದುಕಿನ  ಆಶ್ರಯವಾಗಿದ್ದರು. ಅವರ ಜೀವನವನ್ನು ನೋಡಿದಾಗ, “ಮಗಳು ಎಂದರೆ ಕೇವಲ ಜನ್ಮ ನೀಡಿದ ಸಂತಾನವಲ್ಲ….ತಾಯಿಯ ಹೃದಯದ ತುಂಡು” ಎಂಬ ಮಾತು ನೆನಪಾಗುತ್ತದೆ.ತಾಯಿಯವರ ಜೀವನದ ಕೊನೆಯ ಕ್ಷಣಗಳಲ್ಲೂ ಲಲ್ಲೇಶ್ವರಿ ತಾಯಿಯವರ ಕಾಳಜಿ ಮತ್ತು ಸೇವೆ ಗಂಗೆಯಂತೆ ನಿರಂತರವಾಗಿ ಹರಿಯುತ್ತಿತ್ತು… ಅಪಾರ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯಿಂದ ಮೂಡಿದ ಅಮೃತಧಾರೆ.*ನೀನಿಲ್ಲದ ತಾಣ |ಇಲ್ಲ ಇನ್ನೆಲ್ಲಿನೀನೆ ತುಳುಕಿರುವೆ ಒಳ ಹೊರಗೆ -ತಾಯವ್ವನಾನು ನೀನು ಬೆರೆತು ಒಂದಾಗಿ*|| ಎನ್ನುವಂತೆ ಜಯದೇವಿ ತಾಯಿಯವರು  ಮತ್ತು ಲಲ್ಲೇಶ್ವರಿ ತಾಯಿಯವರ ನಡುವಿನ ಬಾಂಧವ್ಯ ಸಾಮಾನ್ಯ ತಾಯಿಮಗಳ ಸಂಬಂಧವಾಗಿರಲಿಲ್ಲ. ಅದು ಎರಡು ದೇಹಗಳಲ್ಲಿ ನೆಲೆಸಿದ್ದ ಒಂದೇ ಆತ್ಮದ ಪ್ರೀತಿಯಾಗಿತ್ತು. ಕೊನೆಯ ದಿನಗಳಲ್ಲಿ ಜಯದೇವಿ ತಾಯಿಯವರ ಆರೋಗ್ಯ ಹದಗೆಟ್ಟ ದಿನಗಳಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಅವರ ಹತ್ತಿರದವರು ಒಂದು ವಿಷಯವನ್ನು ಗಮನಿಸಿದ್ದರು. ಲಲ್ಲೇಶ್ವರಿ ತಾಯಿಯವರ ಜೀವನವೇ ಜಯದೇವಿ ತಾಯಿಯವರ ಸುತ್ತ ಸುತ್ತುತ್ತಿತ್ತು. .ಆ ಕಾರಣದಿಂದಲೇ ತಾಯಿಯವರ ಸ್ಥಿತಿಯನ್ನು ಕಂಡ ವೈದ್ಯರು ಕೂಡ ಒಂದು ತುರ್ತು ಸಭೆ ಕರೆದು“ತಾಯಿಯವರ ಬಗ್ಗೆ ನಮ್ಮ ಕಾಳಜಿ ಎಷ್ಟಿದೆಯೋ, ಅಷ್ಟೇ ಕಾಳಜಿ ಲಲ್ಲೇಶ್ವರಿ ತಾಯಿಯವರ ಬಗ್ಗೆಯೂ ಇದೆ. ಇವರಿಬ್ಬರ ಪ್ರೀತಿ ಎಷ್ಟು ಆಳವಾಗಿದೆ ಎಂದರೆ, ತಾಯಿಯವರ ಅಗಲಿಕೆಯ ಆಘಾತವನ್ನು ಅವರು ಹೇಗೆ ತಡೆದುಕೊಳ್ಳುತ್ತಾರೆ ಎಂಬ ಚಿಂತೆ ನಮಗಿದೆ. ಅವರನ್ನು ಸ್ವಲ್ಪವಾದರೂ ಮಾನಸಿಕವಾಗಿ ಸಿದ್ಧಗೊಳಿಸಬೇಕು…”ಎಂದು ಮಾತನಾಡಿದ್ದರೆಂದು ಕೇಳಿದಾಗ ಅನೇಕರಿಗೆ ಆಶ್ಚರ್ಯವಾಗುತ್ತಿತ್ತು.ಅದು ಸಾಮಾನ್ಯ ಪ್ರೀತಿಯಲ್ಲ…ಅದು ಉಸಿರಿಗೂ ಉಸಿರಿನ ಸಂಬಂಧವಾಗಿತ್ತು.ಜಯದೇವಿ ತಾಯಿಯವರು ಕೂಡ ಈ ವಿಷಯವನ್ನು ಅರಿತಿದ್ದರು. ಆದ್ದರಿಂದ ಅವರು ಆಗಾಗ ಲಲ್ಲೇಶ್ವರಿ ತಾಯಿಯವರನ್ನು ಕರೆದು ಪ್ರೀತಿಯಿಂದ,“ಮಗಳೇ, ನಾನು ಯಾವಾಗಲೂ ದೇಹದಲ್ಲಿ ಇರಲಾರೆ. ನಾನು ಹೋದ ಮೇಲೂ ನೀನು ಕುಗ್ಗಬಾರದು. ಗಟ್ಟಿಯಾಗಿ ನಿಲ್ಲಬೇಕು. ನಮ್ಮ ಪರಂಪರೆಯನ್ನು, ನಮ್ಮ ಮೌಲ್ಯಗಳನ್ನು, ನಮ್ಮ ಸೇವೆಯ ಮಾರ್ಗವನ್ನು ಮುಂದುವರಿಸಬೇಕು…”ಎಂದು ಹೇಳುತ್ತಿದ್ದರು.ಆದರೆ ಆ ಮಾತು ಕೇಳಿದ ಕೂಡಲೇ ಲಲ್ಲೇಶ್ವರಿ ತಾಯಿಯವರ ಮನಸ್ಸು ತಲ್ಲಣಗೊಳ್ಳುತ್ತಿತ್ತು.“ಅವ್ವಾ, ಆ ಮಾತು ಹೇಳಬೇಡ! ನೀನು ಇಲ್ಲದಿರುವುದನ್ನು ನಾನು

Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-21 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು  ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು  ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು. ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯಸಚ್ಚಿದಾನಂದನ ಸ್ಮರಿಸೂತ||*B ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು…    ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು. ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ  ಹೇಳುತ್ತಿದ್ದರು.  ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ  ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು‌ . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು. ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು‌ ‌.ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ… ಹಿರಿಯ ಮಗ ಶ್ರೀಕಂಠ ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು. ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು. ಎರಡನೆ ಮಗ ಪ್ರಭುರಾಜ ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು) ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು  ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತುಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!ಪ್ರಿಯ ಓದುಗರೆಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು…… *ಕಣ್ಣೊಳಗಿನ ಕ‌ಸ  |ಸಣ್ಣಾಗಿದ್ದರೆ ಏನುಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯುಸಣ್ಣಲ್ಲ ಕಣ್ಣಿನ ವಿಸ್ತಾರ ||* ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು… *ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿಒಳ್ಳೆತನದಿ  ಗಟ್ಟಿತನವು ಬೆಳೆಯಲಿ||* ಎನ್ನುತ….. ಹೀಗೆ ಬರೆದರು“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು. *ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿಹರಕೆ ಕೊಡುವವರು ನಿನಗೆ -ಈ ಮಾತುಪರಕಿಸಿ ನೋಡು ಬಾಳಲಿ ||*ಎನ್ನುವಂತೆ ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್  ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು. ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ,  ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು…. ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ  ತಮ್ಮ ಬದುಕನ್ನು ಬದುಕಿ ತೋರಿಸಿದರು.ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು. *ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರುಸುಖ ಬಂದಿತ್ತೆಂದು ಹಿಗ್ಗದಿರು -ಮನವೇಸುಖ ದುಃಖ ಅರ್ಪಿಸು ಶಿವನಡಿಗೆ ||*ಎಂದು ಬಾಳನು ಆರಂಭಿಸಿದರು. ಸವಿತಾ ದೇಶಮುಖ್

Read Post »

You cannot copy content of this page

Scroll to Top