ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು” ಬೆಳಕಿನ ಹಾದಿಯಲಿನೀ ಜೊತೆಯಾಗಿ ನಡೆವೆ,ಕತ್ತಲೆಯ ಕೋಣೆಯಲಿಮೌನವಾಗಿ ಅಡಗುವೆ.ಸುಖದ ದಿನಗಳಲಿನೀಳವಾಗಿ ಬೆಳೆಯುವೆ,ಕಷ್ಟದ ದಿನಗಳಲಿನಿನ್ನೊಳಗೆ ಕರಗುವೆ.ಮೌನಕ್ಕೆ ಜಾರುವೆ ನಾ ನಕ್ಕರೆ ನೀ ನಗುವೆ ,ನಾ ಅತ್ತರೆ ನೀ ಮರುಗುವೆ .ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ,ಸಾಗುವೆ ನೀನು ನನ್ನಒಲವಿನ ದನಿ.ಬಿಸಿಲಿಗೆ ಬೆಂದುಮಳೆಗೆ ನೆನೆದುಚಳಿಯಲ್ಲಿ ಕೊರಗುವೆಒಳಗೆ ನೊಂದು ಜಗದ ಜನ ಕೈಬಿಟ್ಟರೂ ,ನೀನು ಜೊತೆ ಇದ್ದೆಪ್ರತಿ ಘಳಿಗೆ.ನನ್ನದೇ ಪ್ರತಿಬಿಂಬ,ನನ್ನದೇ ಒಡನಾಡಿ,ನೀನೇ ನನ್ನ ಪ್ರಾಣಸಾರ್ವಕಾಲಿಕ ಗೆಳೆಯ,ನಿತ್ಯ ಹಿಂಬಾಲಿಸುವಓ ನನ್ನ ನೆರಳು! ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನನ್ನ ನೆರಳು” Read Post »

ಕಾವ್ಯಯಾನ

ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)”ಸ್ನೇಹ ದಿನಕ್ಕೊಂದಷ್ಟು ಸಾಲುಗಳು”

ಕಾವ್ಯ ಸಂಗಾತಿ ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ) “ಸ್ನೇಹ ದಿನಕ್ಕೊಂದಷ್ಟು ಸಾಲುಗಳು” ಸ್ನೇಹ ಅಂದ್ರೆ ಏನಂತಿರಾ?ಸ್ಕೂಲ್ ಬೆಲ್ ಹೊಡೆದ ತಕ್ಷಣ  “ಊಟ ತಂದ್ಯಾ?” ಅಂತ ಕೇಳೋದು. ಸ್ನೇಹ ಅಂದ್ರೆ ನೀನು ಫೇಲ್ ಆದಾಗ“ಪರವಾಗಿಲ್ಲ ಕಣೇ/ಣೋ” ಅಂತ  ನಿನಗಿಂತ ಜೋರಾಗಿ ಬೇಜಾರುಮಾಡಿಕೊಳ್ಳುವುದು.  ನೀನು ಪಾಸ್ ಆದಾಗ ನಿನಗಿಂತಜೋರಾಗಿ ಚಪ್ಪಾಳೆ ತಟ್ಟೋದು. ಸ್ನೇಹ ಅಂದ್ರೆ  ಅರ್ಧ ರಾತ್ರಿ “ನಿದ್ದೆ ಬರ್ತಿಲ್ಲ” ಅಂದ್ರೆ  ಎರಡು ಗಂಟೆ ಮಾತಾಡಿ “ಮಲ್ಕೊ” ಅಂತ ಹೇಳೋದು. ಜಗಳ ಆಡಿ, ಮತ್ತೆ ಐದುನಿಮಿಷದಲ್ಲಿ ತಪ್ಪಿರದಿದ್ದರೂ “ಸಾರಿ ಕಣೇ” ಅನ್ನೋದುಬೇಜಾರು ಮಾಡೋದೆ ಇರದು. ಅದು ರಕ್ತದ ಸಂಬಂಧ ಅಲ್ಲ,  ಆದ್ರೂ ರಕ್ತಕ್ಕಿಂತ ಗಟ್ಟಿ.  ಅದು ಮಾತಿನ ಒಪ್ಪಂದ ಅಲ್ಲ,  ಆದ್ರೂ ಮಾತಿಲ್ಲದೆ ಅರ್ಥ ಆಗೋ ಬಂಧ. ಸ್ನೇಹ ಇದ್ರೆ ಬದುಕು ಸುಲಭ.  ಬೀಳುವಾಗ ಹಿಡಿಯೋ ಕೈ,  ನಗುವಾಗ ಜೊತೆಗಿರುವ ನೆರಳು,  ಅಳುವಾಗ ಒರಗಲೊಂದು ಭುಜಕಣ್ಣೀರೊರೆಸುವ ನಿಷ್ಕಲ್ಮಶ ಹೃದಯಗಳು. ನಿನ್ನ ಬದುಕಲ್ಲಿ ಅಂತಹ ಒಬ್ಬ ಸ್ನೇಹಿತಇದ್ದಾನಾ?/ಳಾ?ಅವರಿಗೆ ಈಗಲೇ “ಥ್ಯಾಂಕ್ಸ್ ಕಣೆ/ಣೊ”ಅಂತ ಹೇಳ್ಬಿಡು ಮನಸಾರೆ ಶರಣೆಂದು ಬಿಡು.ಇಂದೊಂದಿನಕ್ಕೆ ಸೀಮಿತ ಅಲ್ಲ ಈ ಜನುಮ ಪ್ರತಿ ಜನುಮದಲ್ಲೂ ಜೊತೆಯಾದ ಸ್ನೇಹಕ್ಕೆ. ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)

ಕಲ್ಪನಾ ಎಸ್ ಅಣೆಪ್ಪನವರ (ಪಾಟೀಲ)”ಸ್ನೇಹ ದಿನಕ್ಕೊಂದಷ್ಟು ಸಾಲುಗಳು” Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” ಅಮ್ಮನ ಮಡಿಲ ಅಗಲಿಶಾಲೆಯಂಗಳದಿ ಕಾಲಿಟ್ಟಾಗನನ್ನಂತೆ ಅಳುವ ಅವನ ನೋಡಿಸಮಾನ ದುಃಖಿಗಳೆಂದು..ಗೆಳೆಯರನ್ನು ಕೂಡಿಸುತ್ತಾ ಹೋದೆವುಗೆಳೆತನದ ಅರ್ಥ ತಿಳಿದೆವು… ಶಾಲೆ.. ಕಾಲೇಜುಗಳಲ್ಲಿಪಾಠಗಳಿಗಿಂತಲೂ…ನಮ್ಮನ್ನು ಹಿಡಿದಿಟ್ಟಿದ್ದುಇದೇ ಬಾಂಧವ್ಯವಲ್ಲವೇ..ಅದನ್ನು ಗುಣಿಸಿ ಗುಣಿಸಿವಿಶಾಲಾರ್ಥವ ನೀಡಿದೆವು… ಅದೇಕೋ.. ಜವಾಬ್ದಾರಿಯಮೂಸೆಯೊಳಗೆ..ಒತ್ತಡ,ಸಮಯದಭಾವ ಪದಗಳ ನೂಕಿಸ್ನೇಹ ಬಂಧವನು ಕಳೆಯುತ್ತಾ..ಅದರ ಸೊಗಸನು ಮನದ ಮೂಲೆಗೆ ತಳ್ಳಿಬಿಟ್ಟೆವು… ಇಳಿವಯಸ್ಸಿನ ಸಂಜೆಯೊಳುಅದೇ ಬಾಲ್ಯಾವಸ್ಥೆಯ ಸ್ನೇಹದ ನೆನಪುಮನಸ್ಸಿಗೆ ರಂಗು ತುಂಬಲು ಹಾತೊರೆಯುತ್ತದೆ..ಆದರೆ ಭಾಗಾಕಾರದ ಲೆಕ್ಕದಲಿ..ನಾವು ಶೇಷವಾಗಿರುತ್ತೇವೆ ಅಷ್ಟೇ…ಸ್ನೇಹವೂ ಒಂದು ಲೆಕ್ಕ..ಅಲ್ಲವೇ… ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಸ್ನೇಹದ ಹಬ್ಬ” ಅಮ್ಮನ ಪ್ರೀತಿ ಮಮತೆಯ ನೆರಳುಅಪ್ಪನು ಕೊಟ್ಟ ಧೈರ್ಯದ ಬೆಳಕುಶಾಲೆಯಿಂದಲೇ ಸಾವಿರಾರು ನೆನಪುಗೆಳೆಯರೇ ನೀವು ನಮ್ಮ ಸಂಪತ್ತುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಬೆಂಚು ಹಂಚಿ ಕೂತ ದಿನಗಳುಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳುಅಳುವಿನಲ್ಲೂ ನಗುವಿನಲ್ಲೂಜೊತೆಯಾಗಿ ನಿಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಆಟದ ಮೈದಾನದಿ ಓಡಿದವರುಸೋತಾಗಲೆಲ್ಲ ಕೈಹಿಡಿದವರುಗೆದ್ದಾಗಲೆಲ್ಲ ಚಪ್ಪಾಳೆ ತಟ್ಟಿದವರುಅಂತರಂಗದ ಮಿತ್ರರೆ ನೀವೆಲ್ಲರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಪುಸ್ತಕಗಳ ಪಾಠಗಳನ್ನೆಲ್ಲ ಕಲಿತುಜೀವನದಿ ಸರಿದಾರಿಯಲ್ಲಿ ನಡೆದುಒಳ್ಳೆಯ ಮಾತುಗಳನ್ನು ಕಲಿತುಒಡನಾಡಿಯಾಗಿ ನಾವು ಬೆಳೆದವರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಮಳೆ ಬಂದಾಗಲೆಲ್ಲ ಛತ್ರಿಯಾದೆಸುಡುಬಿಸಿಲ ಧಗೆಗೆಲ್ಲ ನೆರಳಾದೆಕತ್ತಲಿಗೆ ಬೆಳಗೊ ದೀಪವಾದನೀವೆಂದು ಬದುಕಿನ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕಷ್ಟ ಬಂದಾಗ ಧೈರ್ಯ ತುಂಬಿನೋವು ಬಂದರೆ ಭುಜವ ನೀಡಿಬೀಳುವ ಕ್ಷಣಗಳಲ್ಲಿ ಕೈಹಿಡಿದುಭುಜಕ್ಕೆ ಭುಜವಾದ ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಜಾತಿ ಮತಗಳ ಗೋಡೆ ಮೀರಿಬೇಧ ಭಾವನೆಗಳ ದೂರ ಮಾಡಿಸ್ನೇಹ ಪ್ರೀತಿಯ ಸೇತುವೆ ಕಟ್ಟಿದಸೌಹಾರ್ದತೆ ಮೆರೆದ ಸ್ನೇಹಿತರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಗಿಡಮರಗಳ ಬೆಳೆಸುವ ಕೈಗಳಾಗಿನೀರು ಉಳಿಸುವ ಮನಗಳಾಗಿನಮ್ಮ ಭೂಮಿ ಕಾವಲುಗಾರರಾಗಿಜೊತೆಗೂಡಿ ಕಲಿತಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಸುಳ್ಳು ಹೇಳದಂತ ಸತ್ಯದ ಹಾದಿದುಷ್ಟತನ ದೂರ ಮಾಡುವ ನೀತಿಒಳ್ಳೆಯ ಬದುಕು ಕಟ್ಟುವ ದಾರಿತೋರಿದಂತ ಆತ್ಮಬಂಧು ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ನಿಮ್ಮ ನಗುವೆ ನಮ್ಮ ಸಂತೋಷನಿಮ್ಮ ಗೆಲುವಿನಲ್ಲಿ ನಮ್ಮ ಹರ್ಷಜೀವನವೆಂಬ ನಿಲ್ಲದ ಪಯಣದಲ್ಲಿದಾರಿ ಮರೆಯದೆ ಜೊತೆಯಿರೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕೈ ಕೈ ಹಿಡಿದುಕೊಂಡು ಸಾಗೋಣಹೊಸ ಕನಸುಗಳನ್ನು ಸಾಧಿಸೋಣಸ್ನೇಹವೆಂಬ ಅಮೃತಧಾರೆಯಲ್ಲಿಸುಂದರ ಸಮೃದ್ಧ ಲೋಕ ಕಟ್ಟೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಸ್ನೇಹವೆಂದರೆ” ಸ್ನೇಹವೆಂದರೆ ಅದುದೈವ ಬೆಸೆದ ಬಂಧ ,ಜಾತಿ , ಗೋತ್ರ , ಮತ ,ಪಂಥ ಕೇಳದ ಅನುಬಂಧ. ಕೃಷ್ಣ – ಸುಧಾಮ , ಕರ್ಣ – ದುರ್ಯೋದನಚಿರ ಸ್ನೇಹಕೆ ಹೆಸರಾದವರುಸ್ನೇಹ ಎನ್ನುವ ಆಮ್ಲಜನಕನಮ್ಮನ್ನು ಬದುಕುಳಿಸುತ್ತದೆಸುಮಾರು ಬಾರಿ. ಸ್ನೇಹದ ನೌಕೆ ತೇಲುತಿರಲುಬಾಳ ಸಾಗರದಿ,ತೀರ ಸೇರುವ ಭರವಸೆಇರುವುದು ಯಾವಾಗಲೂ. ಸ್ನೇಹ ಒಂದು ಭಾವದ ಕೊಳಲ ದನಿಸದಾ ಕೇಳುವುದು ಇಂಪಾದ ನಿನಾದಸ್ನೇಹ ವೀಣೆ ಮಿಡಿಯುತಿರೆಅಪಸ್ವರದ ಭಯವೆಲ್ಲಿ. ಯಾವ ರಕ್ತ ಸಂಭಂದ ಇರದಿದ್ದರುನೋವಿಗೆ ಮರುಗುವಕರುಳ ಬಂಧವೆ ಅಲ್ಲದೆ ಇದ್ದರುಕರುಣೆ ತೋರುವುದೆ ಸ್ನೇಹ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ” Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳುಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡುಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು ಅರಳಿದ ಹೂಗಳ ಪರಿಮಳ ಸುತ್ತ  ಆವರಿಸಿ ಘಮಘಮಿಸಿದೆಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು. ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ”

ಕಾವ್ಯ ಸಂಗಾತಿ ವೆಂಕಟೇಶ್ ಈಡಿಗರ “ಮೌನ ಯಾನ” ಮೌನವದು ಸ್ಪಷ್ಟತೆ ಇಲ್ಲದಅನರ್ಥಗಳ ನಿರ್ಭಾವ  ಸ್ಥಿತಿಸಮ್ಮತಿಯೂ  ಅಲ್ಲದಅಸಮ್ಮತಿ ಸೂಚಿಸದ ದ್ವಂದ್ವ ನೀತಿ ಮನಸ್ಸು ಬಲವಾದಾಗ ಪ್ರತಿಕಾರದುರ್ಬಲವೆಂದರೆ ಅಂಗಿಕಾರಇಲ್ಲದಿರೆ ನಪುಂಸಕತೆಯ ನಿರಾಕಾರವಿವರಿಸಲಾಗದ ಅನಿರ್ಧಿಷ್ಟವಧಿ  ಮುಷ್ಕರ ಮನದಿಂಗಿತಗಳನು ಬಲಿಕೊಟ್ಟುಒಳಬೇಗುದಿಯಲ್ಲಿ ಬೇಯುವನೋಯುವ ನಿಶಕ್ತ ರೂಪವದುತನ್ನತನವ ದಹಿಸಿಕೊಂಡು ಬಂದುದ್ದನ್ನುಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು ಜ್ಞಾನವೋ ಅಜ್ಞಾನವೋ ಎಂದರುಹಲುಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವದಿವ್ಯ ರೂಪ   ದೃಢತೆಯ ಅಪರೂಪಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ ಮೌನವದು  ವಿಶ್ವರೂಪಹೊಸ ಮನ್ವಂತರಕೆ ಮುನ್ನುಡಿಬರೆಯಲುಮೈದಾಳಿದ ಮಹಾ ಸಂಕಲ್ಪˌಇದಕಾಗಿ ಇರಬೇಕು ಆತ್ಮಬಲದಜ್ಞಾನದೀಪˌ  ಅದುವೇ ಅವನಜೀವನದ ಮುನ್ನಡೆಗೆ ದಾರಿದೀಪ ಮತಿಗೆಡದಿರಲಿ ಮನದ ಮೌನದೃತಿಗೆಡದೆ ಮುನ್ನಡೆಯಲಿ ಜ್ಞಾನಮೌನದಲ್ಲಿಯೂ ಧ್ಯಾನಸ್ಥನಾಗಿಬೆಳಗಲಿ ಲೋಕದೊಳಿತಿನ ಸುಜ್ಞಾನಉಳಿಸಿ ಬೆಳೆಸಲಿ ಮಾನ ಸಮ್ಮಾನಮೌನವೇ ಧ್ಯಾನವಾಗಿˌ ಜ್ಞಾನವಾಗಿಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ. ವೆಂಕಟೇಶ್ ಈಡಿಗರ

ವೆಂಕಟೇಶ್ ಈಡಿಗರ ಅವರ ಕವಿತೆ “ಮೌನ ಯಾನ” Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ”

ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ “ನಕ್ಕಿತು ಕನ್ನಡಿ” ಕಂಡದ್ದು ಕಂಡಹಾಗೆತೋರಿದರೆಕೆಂಡದಂತ ಕೋಪಕನ್ನಡಿ ಸರಿಗಿಲ್ಲಭೂತಗನ್ನಡಿ ಎನ್ನುವಭೂತಗಳ ಕಂಡು ನಿಜವನರಿಯದ ನಿತ್ಯನಡೆವ ನಾಟಕದ ರೂವಾರಿಗಳ ಕಂಡುರಾವುಗನ್ನಡಿಯ ಹಿಂದೆಮನದ ಕನ್ನಡಿ ಮುಚ್ಚಿದ ವಿಚಾರವಾದಿಗಳ ಕಹಿಸತ್ಯವ ಕಂಡು ಜನಸಾಮಾನ್ಯರನು ಮಳ್ಳುಮಾಡುವ ವಿವೇಕಿಗಳಅವಿವೇಕತೆಯ ಕಂಡುವಿವೇಕ ಇದ್ದರೂ ತಪ್ಪನ್ನುತಪ್ಪೆಂದು ಒಪ್ಪದವರ ಕಂಡು ಅವರಿವರನು ಬಳಸಿಕೊಂಡುಶಾಂತಿ ನೆಮ್ಮದಿ ಸೌಹಾರ್ದಹಾಳು ಮಾಡುವ ಮತಿಹೀನರ ಮಂಗನಾಟದಲಿಮುಗ್ಧಜನರ ಬಲಿಪಶು ಕಂಡು ಇದ್ದದ್ದು ಇದ್ದಂಗ ತೋರಿದರೂ ಮತ್ತೊಂದು ಬಣ್ಣ ಹಚ್ಚಿ ಕನ್ನಡಿಯ ಬಿಂಬ ಸರಿಯಿಲ್ಲ ಎನ್ನುವ ಸೈಲೆಂಟ ಕಿಲ್ಲರ್  ಮನಸುಗಳ ವಿಕ್ರತ ಮನಸು ಕಂಡುಮುಸು ಮುಸು ಕನ್ನಡಿ ನಕ್ಕಿತುಕನ್ನಡಿ ನಕ್ಕಿತುಲಲಿತಾ ಪ್ರಭು ಅಂಗಡಿ ಮಂಬಯಿ.

ಲಲಿತಾ ಪ್ರಭು ಅಂಗಡಿ ಅವರ ಕವಿತೆ “ನಕ್ಕಿತು ಕನ್ನಡಿ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ‌ “ನೆರೆ-ಬರ” ಇದೋ ನೋಡಿ ….ಈ ವರ್ಷದ ಸೋಜಿಗ ,ಒಂದು ಕಡೆ ನೆರೆ , ಇನ್ನೊಂದು ಕಡೆ ಬರ .ಇರುವುದೊಂದೇ ಬಾನು , ಇರುವುದೊಂದೇ ಭುವಿನಡುವೆ ಎನೀ  ಅಂತರ….. ? ಒಂದೆಡೆ ಬರಗಾಲದ ಭೀತಿ ,ಇನ್ನೊಂದೆಡೇ  ಪ್ರವಾಹಕೆ ಆಹುತಿಬೇಡವೆಂದು ಗೋಳಾಡಿದರು , ಮುನಿದ ಮಾರಿಯ ಹಾಗೆ ಸುರಿಯುತಿಹುದು ಬಿಡದೆ ಮಹಾಮಳೆ ,ಕಣ್ಣು ಮಿಟುಕಿಸಿದ್ದೆ ತಡ , ಕಂಡಿದ್ದೆಲ್ಲವು ಅವಶೇಷ ,ಸುತ್ತ ನೋಡಿದರೂ ಜಲ ದಿಗ್ಬಂಧನ…… ಜೀವಮಾನದ ಗಳಿಕೆ ಕೊಚ್ಚಿ ಹೋಯಿತು ,ಗಳಿಸಿದ ಧನ ಕನಕಕ್ಕೆಇಲ್ಲದ ಹಾಗಾಯಿತು ಕಿಮ್ಮತ್ತುನಾನು , ನನ್ನವರು , ನನ್ನದು ಎನ್ನುವ ಮೋಹ ಪಾಶಸಡಿಲಗೊಂಡು ,  ನಶ್ವರ ಜಗದ ಸತ್ಯ ದರ್ಶನ….. ಕಾಳಿಲ್ಲದೆ , ಕೂಳಿಲ್ಲದೆ  ಕಂಗೆಟ್ಟ ಜೀವ ಕುಲನೀರಿಲ್ಲದೆ ಸೊರಗುತ್ತಿದೆ ಹಸಿರ ಬಸಿರುವರುಣದೇವನ ಕೃಪೆಗೆ ನಡೆದಿವೆ ಹಲವು ಪುಜೆಗಳು…. ಸುರಿಯುವ ಸುಳಿವೇ ಕೊಡದ ಮಳೆರಾಯಆಡುತಿರುವ ನಮ್ಮೊಡನೆ  ಜೂಟಾಟಹಸಿವು , ದಾಹಕೆ  ಅದೆಷ್ಟು ಬಲಿ  ಬಿಳುವುದೊ ತಿಳಿಯದು , ….. ತಾಪಮಾನದ ಹೆಚ್ಚಳಕೆ  ಪುರಾಣ ಐತಿಹ್ಯದ ಕೇದಾರನಾಥನೆ ಕರಗುತ್ತಿದ್ದಾನೆಭೂ ಲೋಕವಿಗ ಅಸುರ ಲೋಕ ,ಸತ್ಯ ಮಿತ್ಯದಲೆಕ್ಕದಲ್ಲಿ ಸತ್ಯ ಶೂನ್ಯವಾಗಿದೆ .ಸೃಷ್ಠಿ ಕರ್ತನ ಅಣತಿ ಮೀರಬಹುದೆ?ಪುಣ್ಯದ ದಿನಗಳು ಕಳೆದಾಗ ,ಉಳಿಯುವ ಶೇಷವೆ ಕರ್ಮ ….. ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ‌ ಅವರ ಕವಿತೆ “ನೆರೆ-ಬರ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಕಾವ್ಯ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಕಾವ್ಯ” ಕಾವ್ಯ ನನ್ನಲ್ಲಿದೆ ನಿನ್ನಲ್ಲಿದೆ ಕಾವ್ಯ ಮನದ ಮಿಡಿತಲ್ಲಿದೆಹೃದಯದ ತುಡಿತದೊಳಿದೆಎದೆ ಕದದ ಬಡಿತದಲ್ಲಿದೆ. ಕಾವ್ಯ ಬೀಸುವ ಕಲ್ಲಿನ ಸದ್ದೊಳುಕೇರುವ ಮರದ ಕಾಳಿನಲ್ಲಿಹುದುಬಿಂದಿಗೆ ಬಾವಿಯೊಳು ಮುಳುಗವುದರಲ್ಲಿದೆ. ಕಂದನ ಹಸಿವಿನ ಅಳುವಿನಲಿತಾಯಿ ರಮಿಸಲು ಹಾಡುವ ರಾಗದೊಳುಕಾವ್ಯ ಅಪ್ಪನ ಅಗಾಧ ಪ್ರೀತಿಯಲ್ಲಿದೆ. ರೈತನುಳುವ ನೇಗಿಲದ ಹದದಲ್ಲಿಕುಂಟಿ ಕೂರಗಿಯ ತಾಳದಲಿಕಾವ್ಯಕೂ ಜನನವಿಹುದಲ್ಲಿ ಹಲ್ಲುದುರಿ ಹಣ್ಣಾದ ಅಜ್ಜ ಅಜ್ಜಿಯ ನಗುವಲಿಕೈಗಾಸರೆಯಾದ ಕೋಲಿನಲಿದೆ ಕಾವ್ಯಹಿರಿಯರ ಹರಕೆಯೊಳಿದೆಬದುಕಿನ ಬವಣೆಯೊಳಿದೆ. ಕಾವ್ಯದ ಕಟ್ಟುವವರ ಮನದಲಿದೆಸುಪ್ತ ಮನಸ್ಸಿನಾಳದಲಿ ಹುದುಗಿದೆಹುಟ್ಟಿನಲಿದೆ ಗುಟ್ಟಿನಲ್ಲಿದೆಸಾವಿನಂಚಿನಲ್ಲಿಯೂ ಇದೆ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಕಾವ್ಯ” Read Post »

You cannot copy content of this page

Scroll to Top