ಅನುರಾಧಾ ರಾಜೀವ್ ಅವರ ಗಜಲ್
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು ಕರಗಿ ಹೋಗುವಉತ್ಕಟ ಬಯಕೆಬೆರೆತ ಕನಸಿಗೆ ಮೊಳಕೆ ಚಿಗುರಿಮೇಲಕೆ ಹಾರಲಿ ನಿತ್ಯವೂ ಆರಾಧನೆ ಗುಡಿಯ ಒಳಗೆವಿರಾಜಿಪ ದೇವಗೆಸತ್ಯದ ನಿವೇದನೆ ರಾಧೆಯ ಬಾಳಲಿಶುಭವ ಕೋರಲಿ ಅನುರಾಧಾ ರಾಜೀವ್
ಅನುರಾಧಾ ರಾಜೀವ್ ಅವರ ಗಜಲ್ Read Post »









