ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು”

ಕಾವ್ಯ ಸಂಗಾತಿ ಶ್ಯಾಮಿಲಿ ಪ್ರವೀಣ್ “ಭಾವಚಿತ್ರಗಳು” ಕೈಲೆರಡು ಭಾವಚಿತ್ರಗಳು|ಒಂದು ಬಣ್ಣದ್ದು; ಮತ್ತೊಂದು ಕಪ್ಪು-ಬಿಳುಪು;ಎರಡರಲ್ಲೂ ಒಂದೊಂದು ಭಾವಗಳು|ನಗು-ಅಳು; ಸುಖ-ದುಃಖ ಮಸುಕು-ಹೊಳಪು||ಕೆದಕಲು ಸಮಯವೂ ಬೇಕು;ನೋಡುತ್ತಾ-ನೋಡುತ್ತಾ ತಾಳೆಹಾಕುತ್ತಾ ಕೂರಲು!! ಕಪ್ಪು-ಬಿಳುಪಿನಂತಲ್ಲ ಬಣ್ಣದ್ದು;ನೋಡಿದರೆ ನೇರ-ಹಸಿರು; ದೂರ ದೃಷ್ಠಿಯ ಹಂಗಿಲ್ಲದ್ದು!ಇದ್ದವರು ಇದ್ದಾರೆ; ಇಲ್ಲದವರು ಇಲ್ಲ!ಮಾಸಿದವಲ್ಲ; ಪಕ್ಕನೆ ಗುರುತು ನೆನಪು ಎಲ್ಲಾ!! ಆದರೆ…ಬಣ್ಣದಂತಲ್ಲ ಕಪ್ಪು-ಬಿಳುಪಿನವು;ಅವು ನಿನ್ನೆಗಳು ಆಳ ಕಾಣದ ತಳದವು|ನೆನಪಾಗಲು ಗುರುತಿರಬೇಕು;ಗುರುತಾಗಲು ನೆನಪಿರಬೇಕು| ಬಣ್ಣದವು ಬದಲಾದರೂ-ಸುಣ್ಣದವು ಬದಲಾಗದು|ನಾಳೆಗಳು ಬರುತ್ತಾದರೂ; ನಿನ್ನೆಗಳು ಬರಲಾಗದು|ಹೊಸತರ ಬೇರಿನ್ನೂ ಹಳತರಲ್ಲೇ ಇದೆ|ಬಣ್ಣಕ್ಕೆ ಕಪ್ಪು-ಬಿಳುಪೇ ಮೂಲವೆಂಬಂತೆ!! ಶ್ಯಾಮಿಲಿ ಪ್ರವೀಣ್

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು” Read Post »

ಕಾವ್ಯಯಾನ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ “ಮುಂದೆ ಹೋಗಲು ದಾರಿ ಬಿಡಿ”

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ “ಮುಂದೆ ಹೋಗಲು ದಾರಿ ಬಿಡಿ” ಬಾನಂಗಳದಿ ಸ್ವಚ್ಚಂದವಾಗಿ ಹಾರಲು ಹೊದರೆ ರೆಕ್ಕೆ ಕತ್ತರಿಸಿ ಬಿಡುವಿರಿ ಮನಸಾರೆ ಈಜಲು  ಹೋದರೆಜಲದಾಳದಲ್ಲೆ ಸಿಡಿಮದ್ದು ಸಿಡಿಸುವಿರಿ  ನೆಲೆದಗಲ  ಹಬ್ಬಲು ಹೋದರೆ ಅಡ್ಡ ಬೇಲಿ ಹಾಕಿ ತಡೆಯುವಿರಿ ಬೆಳೆದು ಹೆಮ್ಮರವಾಗಲು ಹೋದರೆಬುಡಕ್ಕೆ ಬೆಂಕಿ ಹಚ್ಚುವಿರಿಅ  ಅಡೆತಡೆಯಿಲ್ಲದೆ ಓಡಬೇಕೆಂದರೆಗಡಿರೇಖೆ ಹಾಕಿ ನಿಲ್ಲಿಸಿಬಿಡುವಿರಿ ಹೀಗಾದರೆ ನಾವು ನೆಲೆ ಕಾಣುವುದು ಹೇಗೆ? ಬದುಕಿನ ಗುರಿ ಸಾಧಿಸುವುದಾದರೂ  ಹೇಗೆ ವಿಶ್ವಮಾನವನಾಗುವದಿರಲಿಮಾನವತೆಯುಳ್ಳ ಮನುಷ್ಯನಾಗಲಾದರೂನಮ್ಮನ್ನು ಬಿಟ್ಟು ಬಿಡಿ ,ಬಿಟ್ಟು ಬಿಡಿ ಲಕ್ಷ್ಮೀದೇವಿ ಪತ್ತಾರ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ “ಮುಂದೆ ಹೋಗಲು ದಾರಿ ಬಿಡಿ” Read Post »

ಕಾವ್ಯಯಾನ

ನಿನ್ನನ್ನು ಪ್ರೀತಿಸುವುದಕ್ಕಿಂತ…ಪೃಥ್ವಿರಾಜ್ ಟಿ ಬಿ

ಕಾವ್ಯ ಸಂಗಾತಿ ಪೃಥ್ವಿರಾಜ್ ಟಿ ಬಿ ನಿನ್ನನ್ನು ಪ್ರೀತಿಸುವುದಕ್ಕಿಂತ… ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದುಪದಗಳಲ್ಲಿ ಹೇಳಲು ನನಗೆ ಬರುವುದಿಲ್ಲ…ಆದರೆ ಒಂದು ಸತ್ಯ ಮಾತ್ರ ಹೇಳಬಲ್ಲೆ—ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ,ನಿನ್ನನ್ನು ಗೌರವಿಸುತ್ತೇನೆ. ನಿನ್ನ ಕೆನ್ನೆಯನ್ನು ಮುಟ್ಟುವ ಆಸೆಗಿಂತ,ನಿನ್ನ ಮನಸ್ಸನ್ನು ನೋಯಿಸದಿರಬೇಕೆಂಬ ಭಯ ನನಗೆ ಹೆಚ್ಚು… ನಿನ್ನ ಕೈ ಹಿಡಿಯುವ ಹಕ್ಕಿಗಿಂತ,ಆ ಕೈಯನ್ನು ಜೀವನಪೂರ್ತಿಗೌರವದಿಂದ ಹಿಡಿದು ನಡೆಯುವ ಆಸೆ ನನಗೆ ಹೆಚ್ಚು… ನಿನ್ನ ಕಣ್ಣಲ್ಲಿ ಕಣ್ಣಿಟ್ಟು“ನೀನು ನನ್ನವಳು” ಎನ್ನುವುದಕ್ಕಿಂತ,ನಿನ್ನ ಕಣ್ಣಲ್ಲಿ ಒಂದೇ ಒಂದು ಕಣ್ಣೀರು ಬಂದರೂ“ಅದಕ್ಕೆ ಕಾರಣ ನಾನು ಆಗಬಾರದು”ಎಂಬುದೇ ನನ್ನ ಪ್ರಾರ್ಥನೆ… ನಿನ್ನ ಕೆನ್ನೆಗೆ ಮುತ್ತಿಡುವುದುನನ್ನ ಪ್ರೀತಿಯ ಒಂದು ಸಣ್ಣ ಭಾಗ ಮಾತ್ರ…ಆದರೆ ನಿನ್ನ ಪಾದಕ್ಕೆ ಮುತ್ತಿಟ್ಟು“ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ”ಎಂದು ಹೇಳಲು ನಾನು ಸಿದ್ಧ. ನಿನ್ನ ಸೌಂದರ್ಯಕ್ಕೆ ಮಾತ್ರ ನಾನು ಮಾರುಹೋಗಿಲ್ಲ…ನಿನ್ನ ನಗು, ನಿನ್ನ ಮಾತು,ನಿನ್ನ ಕೋಪ, ನಿನ್ನ ಮೌನ,ನಿನ್ನ ಒಳ್ಳೆಯತನ, ನಿನ್ನ ಸಣ್ಣ ಸಣ್ಣ ಹಠಗಳು—ಇವೆಲ್ಲವನ್ನೂ ಸೇರಿಸಿಕೊಂಡುನಿನ್ನನ್ನೇ ಪ್ರೀತಿಸಿದ್ದೇನೆ. ನಾಳೆ ನಿನ್ನ ಸೌಂದರ್ಯ ಬದಲಾಗಬಹುದು,ಕಾಲ ನಿನ್ನ ಕೂದಲಲ್ಲಿ ಬೆಳ್ಳಿಯನ್ನು ತುಂಬಬಹುದು…ಆದರೆ ನನ್ನ ಕಣ್ಣಲ್ಲಿನೀನು ಆಗಲೂ ಇದೇ ಹುಡುಗಿ—ನನ್ನ ಹೃದಯಕ್ಕೆ ಒಮ್ಮೆ ಬಂದವಳು,ಮತ್ತೆಂದೂ ಹೊರಗೆ ಹೋಗದವಳು. ನಿನ್ನನ್ನು ಪಡೆಯಬೇಕು ಎಂಬ ಆಸೆಗಿಂತನಿನ್ನನ್ನು ಕಳೆದುಕೊಳ್ಳಬಾರದು ಎಂಬ ಭಯವೇ ಹೆಚ್ಚು… ನಿನ್ನ ಜೊತೆ ಜೀವನ ಕಳೆಯಬೇಕು ಎಂಬ ಕನಸಿಗಿಂತ,ನಿನ್ನ ಜೀವನದಲ್ಲಿಒಳ್ಳೆಯ ಮನುಷ್ಯನಾಗಿ ಉಳಿಯಬೇಕುಎಂಬ ಆಸೆ ನನಗೆ ಹೆಚ್ಚು. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ…ನನ್ನ ಬದುಕಿನಲ್ಲಿ ನೀನು ಸಿಕ್ಕೆ. ಆದರೆ ಈ ಜನ್ಮದಲ್ಲಿನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎನ್ನುವುದಕ್ಕಿಂತಒಂದು ಮಾತು ಮಾತ್ರ ನಿನಗೆ ಕೊಡುವೆ— ನಿನ್ನನ್ನು ನನ್ನ ಪ್ರೀತಿಯಿಂದ ಬಂಧಿಸುವುದಿಲ್ಲ,ನನ್ನ ಗೌರವದಿಂದ ಕಾಪಾಡುತ್ತೇನೆ. ನೀನು ನನ್ನ ಕೈ ಹಿಡಿದರೆಅದನ್ನು ಎಂದಿಗೂ ಬಿಡುವುದಿಲ್ಲ…ನೀನು ನನ್ನ ಜೊತೆ ನಡೆದರೆನಿನ್ನ ಹೆಜ್ಜೆಗೆ ಹೆಜ್ಜೆ ಹಾಕುತ್ತೇನೆ…ಒಂದು ದಿನ ನೀನು ಹಿಂದೆ ತಿರುಗಿ ನೋಡಿದಾಗ,“ನನ್ನನ್ನು ಇಷ್ಟು ಪ್ರೀತಿಸಿದವನುನನ್ನ ಜೀವನದಲ್ಲಿ ಇದ್ದ”ಎಂಬ ನೆನಪು ನಿನ್ನ ಕಣ್ಣಂಚಿನಲ್ಲಿಒಂದು ಸಣ್ಣ ಕಣ್ಣೀರಾಗಿಯಾದರೂ ಉಳಿದರೆ… ಅದೇ ನನ್ನ ಪ್ರೀತಿಯ ಗೆಲುವು.  ಪೃಥ್ವಿರಾಜ್ ಟಿ ಬಿ

ನಿನ್ನನ್ನು ಪ್ರೀತಿಸುವುದಕ್ಕಿಂತ…ಪೃಥ್ವಿರಾಜ್ ಟಿ ಬಿ Read Post »

ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ಉಸಿರು ಅರಸಿ ದಣಿದ ನಿಟ್ಟುಸಿರುಗಳಿವೆ ನನ್ನೊಂದಿಗೆಮನದ ಚೆಲುವ ಕಾಣದೆ ಸೋತ ಕಂಗಳಿವೆ ನನ್ನೊಂದಿಗೆ ಹಾದಿಯ ತುಂಬಾ ಕೆಂಗುಲಾಬಿಗಳಿವೆ ಎಂದು ಭ್ರಮಿಸಿದೆನಡೆದು ನಡೆದು ಕೆಂಪೇರಿದ ಪಾದಗಳಿವೆ ನನ್ನೊಂದಿಗೆ ಆಸೆ ಪಡಬೇಡ ಎಂಬ ಬುದ್ಧನ ಮಾತಿಗೆ ಕಿವಿಗೊಡಲಿಲ್ಲನಾನು ಇಷ್ಟವು ಕೈಗೂಡದೆ ಸಮಾಧಿಯಾದ ಕನಸುಗಳಿವೆ ನನ್ನೊಂದಿಗೆ ಲೋಕದ ಡೊಂಕಿಗೆ ಮನ ಕಳವಳಿಸಿ ತಲ್ಲಣಿಸಿದೆ ದೇವಾಕಣ್ಣಲಿ ಮನೆ ಮಾಡಿದ ಕಣ್ಣೀರ ಮೋಡಗಳಿವೆ ನನ್ನೊಂದಿಗೆ ನನ್ನವರಾರು ಪರರು ಯಾರೆಂದು ತಿಳಿಯುತಿಲ್ಲ ಭಾಗ್ಯಜನಿಸಿದ ಕ್ಷಣದಲ್ಲೆ ಮಸಣ ಸೇರಿದ ಭಾವಗಳಿವೆ ನನ್ನೊಂದಿಗೆ ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಎಸ್.ವಿ.ಹೆಗಡೆ ಅವರ ಕವಿತೆ “ನಂಟು”

ಕಾವ್ಯ ಸಂಗಾತಿ ಎಸ್.ವಿ.ಹೆಗಡೆ “ನಂಟು” ಒಂಟಿಕಾಲಲಿ ನಿಂತು ಬೇಟೆಗೆಕಾದು ಕುಳಿತ ಬಕಪಕ್ಷಿಗೆಯಾವುದೋ ಕೆರೆಯ ನಂಟುಸವೆದು ಹೋದ ಚಪ್ಪಲಿಗೆಬೀದಿನಾಯಿಯ ನಂಟುರೆಕ್ಕೆ ಬಿಚ್ಹಿ ನಲಿದಾಡುವ ನವಿಲಿಗೆಮೂಡಿ ಕಣ್ಮರೆಯಾಗುವಮೋಡದ ಚಿತ್ತಾರದ  ನಂಟುಕೊಕ್ಕು ಪುಕ್ಕವ ಕುಣಿಸಿಇಂಚರ ಹಾಡುವ ಹಕ್ಕಿಗಳಿಗೆವಿದ್ಯುತ್ ಸರಿಗೆಯ ನಂಟು ॥॥ಯಾರದೋ ತೋಟದಲಿ ಯಾರೋಬೆವರು ಸುರಿಸಿ ಬೆಳೆದ ದವಸ ದಾನ್ಯಕ್ಕೆತಂದು ತಿಂದವರ ನಂಟುಬೆಳೆವ ಬಸಲೆ ಬಳ್ಳಿಗೆ ಬೇಲಿ ಚಪ್ಪರದ ನಂಟು ಸುಡುಬಿಸಿಲ ಡಾಂಬರು ರಸ್ತೆಯಲಿಕೊಯ್ದು ಮಡಗಿದ ರಾಗಿಯ ತೆನೆಗಳಿಗೆಯಾರದೋ ವಾಹನದ ಟಾಯರಿನ ನಂಟು॥॥ ಆಡುವ ಮಾತು ಬೇರಾದರೇನು ಉಡುಗೆ ತೊಡುಗೆ ಊಟ ತಿಂಡಿ ಹಲವಾದರೇನುಸೂರ್ಯ ಸಂಜೆ ಸೇರುವ ಸಾಗರದ ತಳವೊ ಮಂಜು ಮುಸುಕಿದ ಕಾಡು ಶಿಖರವೋಯಾವುದೋ  ರೇಕಾಂಶ ಅಕ್ಷಾಂಶದಲಿ ಬಿದ್ದರವಿಯಕಿರಣಗಳ ಆಲಿಂಗನದ ನಂಟು .ರಕ್ತ ಸಂಬಂಧಕ್ಕೂ ಮೀರಿ ನೆರೆಯಾಗುವ ಮರೆಯಲಾಗದ  ಗೆಳೆತನದ ನಂಟು.  ॥॥ ಮದುವೆಯಾರಿದಾದರೇನು ಸತ್ತವರ ಆತ್ಮ ಎಲ್ಲಿ ಹೋದರೇನು. ಮೃಷ್ಠಾನ್ನ ಭೋಜನದನಂಟು ಹೋಗಿ ಉಂಡವರಿಗುಂಟು. ॥॥ ನಿಂತ ನೀರಿನ ಕೆಸರು ಕೊಳದೊಳಗೆ ತಾವರೆಯ  ನಂಟು. ಹರಿದು ಸಾಗರವ ಸೇರುವ ಹೊಳೆ ಹಳ್ಳಕ್ಕೆ ಕಲ್ಲುಬಂಡೆಗಳ ನಂಟು.ನನ್ನೊಳಗೆ ನಾ ಸೇರಿದರೆಜೀವಕ್ಕೆ ಆತ್ಮದ  ನಂಟು. ನಿನ್ನ ನೀ ಮರೆತಾಗ ಸಂಸಾರದ ನಂಟು॥॥ ಎಸ್ ವಿ ಹೆಗಡೆ

ಎಸ್.ವಿ.ಹೆಗಡೆ ಅವರ ಕವಿತೆ “ನಂಟು” Read Post »

ಕಾವ್ಯಯಾನ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ

ಪುಸ್ತಕ ಸಂಗಾತಿ ಗಂಗಾ ಚಕ್ರಸಾಲಿ ಶ್ರೀ ಕಿರಣ ಗಣಾಚಾರಿ ಬೆಳಕಿನ ಹೊಳೆಯ ಪ್ರವಾಹ ಬದುಕಿನಪ್ರವಾಹದಲ್ಲಿಮಿಂದೆದ್ದ ಕವಿತೆಗಳು ಪುಸ್ತಕ: ಬೆಳಕಿನ ಹೊಳೆಯ ಪ್ರವಾಹಲೇಖಕರು: ಶ್ರೀ ಕಿರಣ ಗಣಾಚಾರಿಬೆಲೆ:೧೦೦ ರೂಪ್ರಕಾಶನ: ಸಂಭ್ರಮ ಫೌಂಡೇಶನ್ ಶ್ರೀ ಕಿರಣ ಗಣಾಚಾರಿಯವರ ಎರಡನೇ ಕವನ ಸಂಕಲನ ಬೆಳಕಿನ ಹೊಳೆಯ ಪ್ರವಾಹ. ಕವಿಯಾದವನು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಕಿವಿಯಾಗುತ್ತಾನೆ, ಕಣ್ಣಾಗುತ್ತಾನೆ ಕೊನೆಗೆ ವಿಮರ್ಶಕನೂ ಆಗುತ್ತಾನೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ಐವತ್ತು ಕವಿತೆಗಳು ಪ್ರಸ್ತುತ ಸಮಾಜ, ರಾಜಕೀಯ, ಶೈಕ್ಷಣಿಕ, ಮಾನವೀಯ ಸಂಬಂಧಗಳ ನೆಲೆಯೊಳಗೆ ಓದುಗನಿಗೆ ಭಾವನಾತ್ಮಕವಾಗಿ ಪ್ರವಾಹವನ್ನೇ ಹರಿಸುತ್ತವೆ.ಹುಲಿಜೊತೆ ಚಿಗುರೆಯೊಂದು ಸಂವಾದಿಸಿದಂತೆಅಪ್ಪನೆಂದರೆ ಭಯದ ಬಕಾಸುರನಂತೆನಿಸಿದ್ದೇ ಹೆಚ್ಚುಅಪ್ಪನ ಕುರಿತಾದ ಭಯ, ನಡುಕ ೮೦- ೯೦ ರ ದಶಕದಲ್ಲಿ ತುಸು ಹೆಚ್ಚಾಗಿಯೇ ಇತ್ತು. ಅಪ್ಪನೆಂದರೆ ಅರ್ಥವಾಗದವನಾಗಿದ್ದನು. ಪ್ರತಿಯೊಂದು ಜವಾಬ್ದಾರಿಯೊಳಗೆ ಮುಳುಗೆದ್ದ ಅಪ್ಪ ಮೌನದ ಪರ್ವತವೇ ಆಗಿದ್ದ. ಆಗಾಗ ಒಂದೆರೆಡು ಮಾತುಗಳು ಗುಡುಗಿನಂತೆ ಸದ್ದಾದರೂ , ಅವನ ಹೃದಯದಲಿ ಪ್ರೀತಿ ಕಾಳಜಿಯ ತೊರೆಯು ಮಾತ್ರ ಬತ್ತುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಬಂದ ಈ ಕವಿತೆ ಓದುಗನನ್ನು ತನ್ನ ಬಾಲ್ಯಾವಸ್ಥೆಗೆ ಕರೆದೊಯ್ದು ಕಣ್ಣಹನಿ ಜಾರಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರಭಾವಿಸುವವರೆಂದರೆ ಅಮ್ಮ, ಅಪ್ಪ, ಗೆಳೆಯ. ಈ ನೆಲೆಯೊಳಗೆ ಅಪ್ಪನೆಂಬ ಪ್ರಶ್ನೆಗಳ ಹುತ್ತ, ಪ್ಲೀಸ್…ಅಮ್ಮ, ಮುದ್ದು ಕಂದ, ಅವ್ವ ಮತ್ತು ಧೂಳು, ಗೆಳೆಯ ಬದಲಾಗಿದ್ದಾನೆ ಕವಿತೆಗಳು ಮನವನ್ನು ಕದಡುತ್ತವೆ.ವರ್ತಮಾನದಲ್ಲಿ ಬದುಕುತ್ತಿರುವ ನಾವುಗಳು ಅಂದು ಇಂದು ಎಂಬ ಪದಗಳ ಜರಡಿಯೊಳಗೆ ಸಮಾಜವನ್ನು ನೋಡುತ್ತೇವೆ. ಕವಿಯಾದವನು ತುಸು ಹೆಚ್ಚೇ ಈ ಬದಲಾವಣೆಗಳನ್ನು ಗಮನಿಸುತ್ತಾನೆ. ಈ ಬದಲಾವಣೆಯ ಪರದೆಯೊಳಗೆ ಹಲವು ಕವಿತೆಗಳು ಮೂಡಿಬಂದಿವೆ. ಎಂದಿನಂತೆ ನಾನಿಲ್ಲ, ಒಪ್ಪಿಕೊಳ್ಳಲಾರದ ವಾಸ್ತವ, ಬೆಳಕಿನ ಹೊಳೆಯ ಪ್ರವಾಹ, ಅಮವಾಸ್ಯೆ ಹೊದ್ದವರು, ಇಶಾರೆ, ಸೆರೆಯಾಗದ ಭಾವಚಿತ್ರ, ಹೇ! ಸಮಯವೇ…, ಕೊಡು ಕೊಳ್ಳುವಾಟ ಹೀಗೆ ಹಲವು ಕವಿತೆಗಳು ಇಂದಿನ ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತಾ ನಮ್ಮೊಳಗಿನ ನಮ್ಮತನವನ್ನು ಬಡಿದೆಬ್ಬಿಸುತ್ತವೆ. ಬೆಳಕಿನ ಹೊಳೆ ಹರಿಸುತ್ತಿದ್ದೇವೆಂದುಅದೆಷ್ಟು ಕಲ್ಲು ಮಣ್ಣು ಕಸ ಕಡ್ಡಿಹಾಕುತ್ತಿದ್ದೇವೆನೀವೇ ಹೇಳಿ…ನೋಡೋಣ ! ಈ ಪುಸ್ತಕದ ಶೀರ್ಷಿಕೆಯ ಈ ಕವಿತೆ ಇಂದಿನ ಮಾನವರ ಅತಿಯಾದ ಬಯಕೆ, ಅಹಮ್ಮಿನ ಫಲಶೃತಿಯನ್ನು ಕಣ್ಣಮುಂದೆ ತೆರೆದಿಡುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಸವೆದುಹೋದ, ಕ್ಲೀಷೆಗೊಳಗಾದ, ಜೀರ್ಣಗೊಂಡ, ಶಿಥಿಲಗೊಂಡ, ಸಡಿಲವಾದ ಬದುಕಿನ ಸಾಮಾನ್ಯ ಸಹಜ ನಿಯಮಗಳು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳದೆ, ಹೊಸ ಜಗತ್ತನ್ನು ಧ್ಯೇನಿಸುತ್ತಿರುವ ಸತ್ಯವನ್ನು ಹೊರಹೊಮ್ಮಿಸುತ್ತವೆ ಎಂಬ ಪ್ರೊ. ಎಸ್‌ ಎಂ ಗಂಗಾಧರಯ್ಯನವರ ಮುನ್ನುಡಿ ಮಾತು ಅರ್ಥಪೂರ್ಣವಾಗಿದೆ. ಹಳತಾದ ಬಣ್ಣಗೆಟ್ಟ ಗೋಡೆಗಳುನಮ್ಮ ಬದುಕ ಬಣ್ಣವಾಗಿಸಿವೆಹರಕಲು ಮುರುಕಲು ಮಾಳಿಗೆನಮ್ಮ ಬಾಳ ನೆಟ್ಟಗಾಗಿಸಿವೆ ಸರಕಾರಿ ಶಾಲೆ ಕವಿತೆಯಲ್ಲಿ ಮೂಡಿಬಂದ ಈ ಸಾಲುಗಳು ಸರ್ಕಾರಿ ಶಾಲೆಯ ಮಹತ್ವವನ್ನು ಸಾರುತ್ತವೆ. ಬಹುತೇಕರು ಆಗ ಸರ್ಕಾರಿ ಶಾಲೆಯಲ್ಲಿಯೇ ಓದಿ ಈಗ ಬಹಳಷ್ಟು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಂತಹ ಈ ಸಂದರ್ಭದಲ್ಲಿ ಅದರ ಮಹತ್ವ ಸಾರುವ ಈ ಕವನ ಸಕಾಲಿಕವಾಗಿದೆ. ಇದೇ ರೀತಿ ಶಾಲೆಗೆ ಸಂಬಂಧಿಸಿದಂತೆ ಬರೆದ ಇನ್ನಷ್ಟು ಕವಿತೆಗಳೆಂದರೆ ಪಾಟಿ ಚೀಲ , ಪುಸ್ತಕ ಮತ್ತು ನಿನಗೆ ಕಲಿಸಿದ ಮಾಸ್ತರ ಯಾರು? ಕವಿತೆಗಳು.ಇಂದು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಪರಿಸರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ಪ್ರಕೃತಿಯಲ್ಲಿಯ ಹಸಿರು ನಾಶವಾಗಿ, ಜೀವಸಂಕುಲಗಳು ತೊಂದರೆಗೊಳಗಾಗಿವೆ. ಇಂತಹ ನೋಡಿದ ಕೇಳಿದ ಘಟನೆಗಳ ಹಿನ್ನೆಲೆಯಲ್ಲಿ ಹಲವು ಕವಿತೆಗಳು ಮೂಡಿಬಂದಿವೆ. ಈ ಜಾಗ ನಂದೈತಿ, ನಂಬಿಕೆ ಪಟ್ಟ ಕಟ್ಟಿದವರಾರು? , ಸಹಿಸಿಕೊಂಡಿರುವೆ ಕವನಗಳು ಆ ಚಿತ್ರಣವನ್ನು ಕಟ್ಟಿಕೊಡುತ್ತವೆ. ಸಖ್ಯ ಬೆಳೆಸಿಕೊ, ಸುಖ ನೀಡುವೆನಂಬು, ಇಂಬನೀಯುವೆಕಡೆಗಣಿಸಿದರೆ ನಡುಗಣ್ಣ ತೆರಯುವೆ .. ಇಂತಹ ಸಾಲುಗಳು ಮಾನವನಿಗೆ ತಿಳುವಳಿಕೆ ನೀಡುವ ಜೊತೆಗೆ ಮುಂದೆ ಆಗುವ ಆನಾಹುತವನ್ನು ತಿಳಿಸಿಕೊಡುತ್ತವೆ. ಕವಿಗಿರುವ ಪರಿಸರ ಪ್ರೇಮವನ್ನು ಅರಿಯಬಹುದಾಗಿದೆ. ಇಷ್ಟೇ ಅಲ್ಲದೇ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತಹ ಕವಿತೆಗಳು ಕನ್ನಡತನವನ್ನು ಜಾಗೃತಿಗೊಳಿಸುತ್ತವೆ. “ ಕನ್ನಡ ಭಾಷೆ ನಾಲಿಗೆಯಲಿ ಉಲಿಯದೆ ಗಂಟಲಲ್ಲಿ ಸಿಕ್ಕಾಕಿಕೊಂಡಂತಿರುವ ಭಯ “ ಈ ಸಾಲು ಅನ್ಯಭಾಷೆಯ ಹಾವಳಿಯನ್ನು ಸೂಚ್ಯವಾಗಿ ಹೇಳುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹಬ್ಬಗಳು ಇವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಬರೆದ ಹಲವು ಕವಿತೆಗಳು ಭೂತ ವರ್ತಮಾನದ ಸಂಗತಿಗಳನ್ನು ಕಟ್ಟಿಕೊಡುತ್ತವೆ.ಕವಿ ಎಂದರೆ ಭಾವತೀವ್ರ ವೇದನೆಗಳನು ಹೊರುವ, ಹೆರುವ ಸೃಜನಶೀಲ ಗರ್ಭಸ್ಥ ಸ್ಥಿತ ಪ್ರಜ್ಞ ಎಂದು ಹೇಳುವ ಕಿರಣ ಅವರ ಮಾತಿಗೆ ಪೂರಕವಾಗಿಯೇ ಹಲವು ಕವಿತೆಗಳು ಭಾವನೆಗಳನ್ನು ಹೊದ್ದು ನಿಂತಿವೆ. ಪ್ರತಿಯೊಂದು ಕವನಗಳನ್ನು ಓದುವಾಗಲೂ ಇಂದಿನ ನೋವು, ವೇದನೆಗಳ ಚಿತ್ರಣ ಕಣ್ಮುಂದೆ ಸುಳಿದು ಬದಲಾದ ಮನುಷ್ಯನ ವ್ಯಕ್ತಿತ್ವಗಳನ್ನು ತೋರಿಸುತ್ತವೆ. ಇವರ ಮೊದಲ ಕವನ ಸಂಕಲನಕ್ಕಿಂತ ಈ ಕವನ ಸಂಕಲನ ಸಂಪೂರ್ಣವಾಗಿ ಭಿನ್ನ ಸಂಗತಿಗಳನ್ನು ಓದುಗರಿಗೆ ತರೆದಿಡುತ್ತದೆ. ಕಾಲದ ಸುಳಿಯಲ್ಲಿ ಮಾಗಿದ ಕವಿತೆಗಳು ಈ ಬೆಳಕಿನ ಪ್ರವಾಹದಲ್ಲಿ ಮಿಂದೆದ್ದಿವೆ. ಇವರಿಂದ ಮತ್ತಷ್ಟು ಮತ್ತಷ್ಟು ಕವನಸಂಕಲನಗಳು ಹೊರ ಬರಲೆಂದು ಆಶಿಸುವೆ. ಗಂಗಾ ಚಕ್ರಸಾಲಿ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ Read Post »

ಕಾವ್ಯಯಾನ

“ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ ನನಗೆಜಗತ್ತನ್ನೇ ಮರೆಯುವ ಆಸೆ ಎನಗೆಮೂಲೆ ಮೂಲೆಯಲ್ಲಿ ಪುಸ್ತಕಗಳ ರಾಶಿಅದರ ನಡುವೆ ನನ್ನದೇ ಒಂದು ಪ್ರಪಂಚ ಸೃಷ್ಟಿ. ಬೆರಳುಗಳು ಸೋಕಿದ ಪುಟಗಳ ಗಂಧಅದೆಷ್ಟೋ ಲೇಖಕರ ಉಸಿರಿನ ಸ್ಪಂದಕೆಲವು ಪುಟಗಳಲ್ಲಿ ಪ್ರೀತಿಯ ಕಥೆಕೆಲವುಗಳಲ್ಲಿ ಅದೆಷ್ಟೋ ಯುದ್ಧದ ವ್ಯಥೆ. ಕಿಟಕಿಯಿಂದ ಬೀಳುವ ಸಂಜೆಯ ಬೆಳಕುಧೂಳಿನ ಕಣಗಳಲ್ಲಿ ತೇಲುವ ಸಾಲು ಸಾಲುಸದ್ದು ಮಾಡದ ಮೌನದ ಮಾತುಗಳುಪುಸ್ತಕಗಳು ಆಡುವ ನಿಶ್ಯಬ್ದದ ಸವಿಗನಸುಗಳು. ಯಾರೂ ಹುಡುಕದ ಹಾಗೆ ಕಳೆದು ಹೋಗಬೇಕುನನಗೆ ನಾನೇ ಮತ್ತೆ ಸಿಗುವವರೆಗೆ ಹುಡುಕದಿರಿ ನನ್ನನುಒಂದು ಕವನದಿಂದ ಇನ್ನೊಂದು ಕವನಕ್ಕೆಒಂದು ಜೀವನದಿಂದ ಇನ್ನೊಂದು ಜೀವನಕ್ಕೆ. ಸಮಯ ಇಲ್ಲದ ಜಾಗ ಅದುಮುಚ್ಚಿದರೂ ತೆರೆದಿರುವ ಬಾಗಿಲದುಹೊರಗಿನ ಜಗತ್ತು ಕಾಯಲಿ ಸ್ವಲ್ಪ ಹೊತ್ತುನಾನು ಇಲ್ಲೇ ಇರ್ತೀನಿ ಈ ಅಕ್ಷರಗಳೆ ನನ್ನ ಸ್ವತ್ತು. ನಾವಾಗಿಯೇ ಕಳೆದು ಹೋಗಬೇಕಿದೆಮನಸ್ಸಿನಿಂದ ಮನೆಯೊಂದ ಮಾಡಬೇಕಿದೆನೀವು ಎಷ್ಟೊತ್ತಾದ್ರೂ ಇರಬಹುದು ಇಲ್ಲಿಪ್ರತಿ ಪುಸ್ತಕದಲ್ಲೂ ನಿಮ್ಮನ್ನು ನೀವು ಕಾಣಬಹುದು ಇಲ್ಲಿ. ನನಗೆ ಅತಿ ಇಷ್ಟದ ತಾನವಿದುಮನೆಯೊಳಗೊಂದು ಗ್ರಂಥಾಲಯ ಮಾಡುವುದುನನ್ನ ಬದುಕಿನ ಮಹದಾಸೆಯದುಮನ ನಿತ್ಯವೂ ಕಳೆದು ಹೋಗೆಂದಿಹುದು.. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಗ್ರಂಥಾಲಯದಲ್ಲಿ ಕಳೆದು ಹೋಗುವಾಸೆ…” ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ “ರಾಜಕೀಯ” ಕವಿತೆ

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ರಾಜಕೀಯ” ನಿನ್ನಕೈಯಲ್ಲಿದ್ದ ಕಲ್ಲಿಗೆಅಭಿವೃದ್ಧಿಯ ಫಲಕ ತೊಡಿಸಿದೆ! ನಿನ್ನಬಾಯಲ್ಲಿದ್ದ ಸುಳ್ಳಿಗೆಭರವಸೆ ಬಣ್ಣಗಳ ಬಳಿದೆ! ನಿನ್ನಜೇಬು ತುಂಬಿದ ಹಣಕ್ಕೆಜನಸೇವೆಯ ಹೆಸರು ನೀಡಿದೆ! ನಿನ್ನಕುರ್ಚಿಯ ಮೇಲಿನ ಮೋಹಕ್ಕೆಜನಹಿತದ ಮುಖವಾಡ ಹಾಕಿದೆ! ನಿನ್ನಜಾತಿಯ ಮೆಟ್ಟಿಲೇರಿ ನಿಂತುಸಮಾನತೆಯ ಭಾಷಣ ಮಾಡಿದೆ! ನಿನ್ನಧರ್ಮದ ಗೋಡೆ ಕಟ್ಟಿಕೊಂಡುಸೌಹಾರ್ದತೆಯ ಧ್ವಜ ಹಾರಿಸಿದೆ! ನಿನ್ನಚುನಾವಣೆಯ ಗೆಲುವಿಗೆಬಡವರ ಕಣ್ಣೀರಿಗೆ ಬೆಲೆ ಕಟ್ಟಿದೆ! ನಿನ್ನಮತ ಕೇಳುವ ಮನಸಿಗೆವರ್ಷಗಳ ಅಧಿಕಾರದ ಅಮಲಿದೆ! ನಿನ್ನವಿರೋಧಿಯಾದ ಮತಗಳಕುರ್ಚಿಯ ಆಮಿಷದಿ ಮಿತ್ರರಾಗಿಸಿದೆ! ನಿನ್ನಜನರು ಬದಲಾಗುತ್ತಾರೆಂದುಪ್ರತಿ ಚುನಾವಣೆಯಲ್ಲೂ ಹೇಳಿದೆ! ನಿನ್ನಜನ ಮತ್ತದೇ ಚುನಾವಣೆಯಲ್ಲಿಬದಲಾಯಿಸುತ್ತಾರೆಂಬುದ ಮರೆತೆ!ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ “ರಾಜಕೀಯ” ಕವಿತೆ Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಬರೆಯಬೇಕು ಕವನ” ಬರೆಯಬೇಕು ಕವನನೋವು ಮರೆತು ನಲಿಯಲುಜೀವ-ಭಾವ ಬೆಸೆಯಲುಸ್ನೇಹ-ಪ್ರೀತಿ ಹಂಚಲುತನು-ಮನಗಳು ತಣಿಯಲುಸೃಷ್ಟಿ ಸೊಬಗ ಸವಿಯಲುಬಚ್ಚಿಟ್ಟ ಬಯಕೆ ಬಿಚ್ಚಿಡಲುಮಧುರ ಮಿಲನವಾಗಲುವಿಚಾರಧಾರೆ ಹರಿಸಲುಕನಸಗಳು ನನಸಾಗಲುಅಂತರಾಳವ ಅರಿಯಲುಅಭಿವ್ಯಕ್ತಿ ಅನಾವರಣವಾಗಲುಮನದಾಳದ ಮೌನ ಮಾತಾಗಲುತಲ್ಲಣಗಳ ಕೊನೆಗೊಳಿಸಲುವಿರಹ ವೇದನೆ ಮರೆಯಲುಭೇದ-ಭಾವ ಅಳಿಯಲುಅಜ್ಞಾನ ಅಂಧಕಾರ ಕಳೆಯಲುಸಮರಸ ಸಮಾಜ ಉಳಿಯಲುಸ್ವಾಸ್ಥ್ಯ ಸಾಹಿತ್ಯ ಸೃಷ್ಟಿಸಲುಸೃಜನಶೀಲತೆ ಬೆಳೆಸಲುಶಾಂತಿ ಸಮತೆ ಸಾರಲುಶಬ್ದಗಳ ಪೋಣಿಸಿ ಸಂಭ್ರಮಿಸಲುಬರವಸೆಯ ಬಾಳು ಬೆಳಗಲುಬರೆಯಬೇಕು ಕವನ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ” Read Post »

ಕಾವ್ಯಯಾನ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ”

ಕಾವ್ಯ ಸಂಗಾತಿ ನಿಶಾ ಹೆಚ್ ಕಾಮತ್ “ನಿರಾಸೆ” ನನಸಾಗದ ಕನಸೆಂದು ತಿಳಿದೂ  ಮನದ ಮೂಲೆಯಲೊಂದು ಆಸೆನಾನೂ ಮನಸ ಬಳಿ ಮಾತನಾಡುವೆ  ಆಡದೇ ಯಾವುದೇ ಭಾಷೆ ಇಂದೋ ನಾಳೆಯೊ ತಿಳಿಯದ ಅಂತ್ಯಮಾಡಿದ್ದೆಲ್ಲವೂ ವ್ಯರ್ಥಕಣ್ಣೆದುರಲ್ಲೇ ಜೀವನ ಮರಣನಮ್ಮಲ್ಲೇಕಿದೆ ಸ್ವಾರ್ಥ ? ತಿಳಿಯದೆ ಏನೂ ವರ್ತಿಸುವುದೇಕೆತಿಳಿದವರಂತೆ ನಾವುತಿಳಿದರೆ ತಿಳಿಸಿ ತೆಗೆವುದು  ಹೇಗೆಮಾನವ ಕುಲದ ನೋವು? ಬೆಳೆಸಿದಿರೇಕೆ ಗಿಡವನು ಅಂದುಆಸೆಯ ಬೀಜವ ನೆಟ್ಟು?ಈ ದಿನ ನಾನು ತಡೆಯಲಿ ಹೇಗೆಜನಗಳ ಕೊಡಲಿಯ ಪೆಟ್ಟು ? ಗುರುತಿಸದಿದ್ದರೂ ನೋವಿರಲಿಲ್ಲನಾನು ಮಾಡಿದ ಸಾಧನೆತಿಳಿದು ಕೊಳ್ಳಲು ಪ್ರಯತ್ನಿಸಬಾರದೆನನ್ನ ಮನಸಿನ ಭಾವನೆ ನಿಶಾ ಹೆಚ್ ಕಾಮತ್ ಕಿನ್ನಿಗೋಳಿ

ನಿಶಾ ಹೆಚ್ ಕಾಮತ್ ಕಿನ್ನಿಗೋಳಿ ಕವಿತೆ “ನಿರಾಸೆ” Read Post »

You cannot copy content of this page

Scroll to Top