ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ ಗಜಲ್ ಒಡಲ ಈ ಉಸಿರಿನ ಒಲುಮೆ ನನ್ನದೆಂದು ಹೇಗೆ ಹೇಳಲಿಉದಿಸಿದ ಪ್ರೀತಿಯ ಬಲುಮೆ ನನ್ನದೆಂದು ಹೇಗೆ ಹೇಳಲಿ ಮಣ್ಣ ಒಳಗಿನ ಬೇರು ನೀನು ಹೂ ಕಾಣದೇ ಹೋದೆಅಮೃತ ನಿನ್ನೊಲವ ಚಿಲುಮೆ ನನ್ನದೆಂದು ಹೇಗೆ ಹೇಳಲಿ ಹೊರಡುವಾಗ ಒಂದು ಮಾತು ಹೇಳದಾದೆ ಒಲವೇಎದೆಯ ಗಾಯದ ನಲುಮೆ ನನ್ನದೆಂದು ಹೇಗೆ ಹೇಳಲಿ ಎಲ್ಲ ಮರೆತು ನಟಿಸಿ ನಕ್ಕು ಬಿಡಬಹುದು ಸುಮ್ಮನೆನೀನಿರದ ಭಾವದ ಗರಿಮೆ ನನ್ನದೆಂದು ಹೇಗೆ ಹೇಳಲಿ ದೇವರಿತ್ತ ಪ್ರಸಾದ ಎಂದೇ ಒಲವ ಕಣ್ಣಿಗೊತ್ತಿಕೊಂಡೆ ನಾನುವಿರಹದುರಿ ಚಿಮ್ಮಿಸುವ ಕುಲುಮೆ  ನನ್ನದೆಂದು ಹೇಗೆ ಹೇಳಲಿ ಕಳೆದ ರಸಗಳಿಗೆಗೆ ಕೆರೆ ಕಟ್ಟೆ ಮರದ ಎಲೆಗಳು ಸಾಕ್ಷಿ ಸಖಿಪ್ರೇಮಿಗಳಿಗಿದು ಶಾಪ ಈ ಹಿರಿಮೆ ನನ್ನದೆಂದು ಹೇಗೆ ಹೇಳಲಿ ಬೆರಳ ಬಿಡಿಸಿಕೊಂಡು ಎದ್ದು ಹೋದೆ ಶೂನ್ಯದೆಡೆಗೆ ನೀನುಫೈಜ್ ಬದುಕಿದ್ದಾನೆ ಈ ಮಹಿಮೆ ನನ್ನದೆಂದು ಹೇಗೆ ಹೇಳಲಿ ಸಂತೆಬೆನ್ನೂರು ಫೈಜ್ನಟ್ರಾಜ್ 

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ರೇಣುಕಾತಾಯಿ ಸಂತಬಾ ರೇಮಾಸಂತ  ಗಜಲ್

ಕಾವ್ಯಸಂಗಾತಿ ಡಾ ರೇಣುಕಾತಾಯಿ ಸಂತಬಾ ರೇಮಾಸಂತ  ಗಜಲ್ ಎಂಥಾ ಚೆಲುವಿ ಅದಾಳ ಈಕೀ ಹ್ಯಾಂಗ ವರ್ಣಿಸಲಿ.ಮಾತ ಮಾತಿಗೂ ನಗುವಾಕೀ ಹ್ಯಾಂಗ ಹಿಡಿದಿಡಲಿ.ll ಕಾಲಿಗೆ ಗೆಜ್ಜಿ ಕಟಗೊಂಡ ಘಲ್ ಘಲ್ ಕುಣಿಸುವಾಕೀ,ಎದ್ಯಾಗ ಪ್ರೀತಿನ ಪುಟಿಸುವಾಕೀ ಹ್ಯಾಂಗ ಮುಚ್ಚಿಡಲಿ.ll ಎಲ್ಲಾರು ಬೆರಗಣ್ಣಾಗ  ನೋಡುವಂಗ ಮಿಂಚುವಾಕೀ,ಕಂಡವರ ಮನಸ್ಸ ಕದಿಯುವಾಕೀ ಹ್ಯಾಂಗ ಸುಮ್ಮಿರಲಿ.ll ಬೆಳಕಿನ ಸೀರೆ ಉಟ್ಗೊಂಡು ಬೆಳದಿಂಗಳ ಆದಾಕೀ,ಮಂಜಿನ ಹಾಂಗ ಕರಗುವಾಕೀ ಹ್ಯಾಂಗ ಕಾಪಾಡಲಿ.ll ತಾಯಿ ದೇವಿ ಗರ್ಭಗುಡಿ ದೀಪದಂಗ ಶಾಂತ ಈಕೀ,ರಾಗದಾಗ ಇರು ಸ್ವರದಂತಾಕೀ ಹ್ಯಾಂಗ ಹಾಡಲಿ.ll ಡಾ ರೇಣುಕಾತಾಯಿ ಸಂತಬಾ ರೇಮಾಸಂತ 

ಡಾ ರೇಣುಕಾತಾಯಿ ಸಂತಬಾ ರೇಮಾಸಂತ  ಗಜಲ್ Read Post »

ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು ಕವಿತೆ “ಎಲ್ಲಾ ವಿದಾಯವೂ ಅಂತ್ಯವೇನಲ್ಲ!”

ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು “ಎಲ್ಲಾ ವಿದಾಯವೂ ಅಂತ್ಯವೇನಲ್ಲ!” ಎಲ್ಲಾ ವಿದಾಯವೂ ಅಂತ್ಯವೇನಲ್ಲ! ಆ ಮಾಯಗಾರನಿಲ್ಲಿಹಾದಿಯ ಮೇಲೆ ಬಿಳಿ ಬಿಳಿ ಹೂವಿನಕ್ಷರಗಳಹರಡಿ ಬರೆದು ಹೋಗಿದ್ದಾನೆ—ಪತ್ರಗಳಓದಲು ಬಾರದ ಭಾಷೆಯಲ್ಲಿಕಣ್ಣಿನಾಳದ  ಕನ್ನಡಕ ತೆರೆದು ಓದುವವರಿಗಾಗಿ ಮರದ ಕೊಂಬೆಗಳಲ್ಲಿಇನ್ನೂ ಹಸಿರಾಗಿಯೇ ಇದೆ ಬದುಕು;ಆದರೆ ಅದರ ಕೆಳಗೆಎಷ್ಟು ಪುಟ್ಟ ವಿದಾಯಗಳ ಪಕಳೆಗಳುಈ ವಿದಾಯವನ್ನು ಕಾಣಲುಕಣ್ಣಿದ್ದರೆ ಸಾಲದು—ಹೂವು ತೊಟ್ಟು ಕಳಚಿದ ಶಬದವನ್ನೂಮೌನದಲ್ಲಿ ಆಲಿಸಬಲ್ಲಅಂತ:ಕರಣ ಬೇಕು! ಯಾವ ಶಬ್ದವೂ ಸಿಡಿಯದೆಪರಿಮಳ ಮಾಯವಾಗದೆಯಾವ ಕೈಯೂ ಬೀಳಿಸದೆಯಾರ ಕೈಗೂ ಸಿಗದೆಯಾರಿಗೂ ತಿಳಿಯದಂತೆ ಇಳಿಯುತ್ತಲೇ ಸಾಗಿದೆಕೆಲವು ಸಂಬಂಧಗಳು ಹೀಗೆಯೇ ನಿರಂತರವಾಗಿ ಬದುಕಿನಿಂದ ಕಳೆದು ಹೋಗುತ್ತಾರೆಒಮ್ಮೆ ನೆರಳಾಗಿದ್ದವರುಒಂದು ದಿನ ನೆನಪಾಗುತ್ತಾರೆ;ಆಪ್ತರೆನಿಸಿದ್ದವರುಮನೆಯ ದಾರಿಯಲ್ಲೇಅಪರಿಚಿತರಂತೆ ಕಾಣುತ್ತಾರೆ. ಆದರೆ ಈ ನೆಲ ಮಾತ್ರಬಿದ್ದದ್ದನ್ನೂ ತನ್ನದಾಗಿಸಿಕೊಳ್ಳುತ್ತದೆ,ಯಾರನ್ನೂ ಪ್ರಶ್ನಿಸುವುದಿಲ್ಲ!ಮಣ್ಣಿಗೆ  ಬಿದ್ದಿದ್ದನ್ನು ತನ್ನದಾಗಿಸಿಕೊಂಡುಕಾಪಿಟ್ಟು ಕೊಳ್ಳುತ್ತದೆ ಬದುಕಿನ ದೊಡ್ಡ ಸತ್ಯ ಇದೇನಮ್ಮಿಂದ ದೂರವಾದದ್ದೆಲ್ಲನಾಶವಾಗಿರುವುದಿಲ್ಲಅದು ನಮ್ಮೊಳಗೆಬೇರೆ ರೂಪದಲ್ಲಿ ಮುಂದುವರಿಯುತ್ತಿರುತ್ತದೆಈ ಹೂವುಗಳಂತೆಕೆಲವರು ನಮ್ಮ ಬದುಕಿನಿಂದ ಕಳಚಿಕೊಂಡರೂಅವರನ್ನು ಹುಡುಕಲಾಗುವುದಿಲ್ಲಾ ಅವರುನಡೆದುಹೋದ ಹೆಜ್ಜೆಗಳಲ್ಲಿರುವುದಿಲ್ಲನಮ್ಮ ಮೌನದೊಳಗೆ ಕುಳಿತಿರುತ್ತಾರೆ.ಮನಸ್ಸಿನೊಳಗೆ ಮಾತಾಡುತ್ತಾರೆನೆನಪಿನಲ್ಲಿ ಕಥೆಯಾಗುತ್ತಾರೆ ಇಂದು ಈ ಬಯಲು ಕೇವಲಹೂವುಗಳಿಂದ ತುಂಬಿಲ್ಲ ಹಲವುರೂಪಾಂತರದಿಂದಹಿಂದೆ ಯಾರೋ ಇದ್ದರುಎಂಬ ನೆನಪುಗಳಿಂದ ತುಂಬಿದೆ. ಮೇಲಿನ ಕೊಂಬೆತನ್ನ ಖಾಲಿತನವನ್ನು ನೋಡುತ್ತಿಲ್ಲ—ಹೊಸ ಮೊಗ್ಗಿಗಾಗಿಮೌನವಾಗಿ ಕಾಯುತ್ತಿದೆಮುಗ್ಧತೆಯ ಹುಟ್ಟುಸಂಭ್ರಮದಲ್ಲಿ ಮುನ್ನುಗ್ಗಿ ಬರುತ್ತಿದೆ. ಆದರೆ ಮರದ ಮೇಲಿರುವ ಈ ಹೂವುಗಳುನಮಗೆ  ಕೇಳುತ್ತಿವೆ:“ಬದುಕಿನಿಂದ ಹೊರಟುಹೋಗುವುದೇ ಅಂತ್ಯವೇ?ಅಥವಾನಮ್ಮನ್ನು ಬಿಟ್ಟುಹೋದ ನಂತರವೂನಮ್ಮೊಳಗೆ ಬದುಕುತ್ತಲೇ ಇರುತ್ತಾರೆಯೇ ಆಪ್ತರು  ನೋಯಿಸಿದವರು ಪ್ರೀತಿಕೊಟ್ಟವರು ದ್ವೇಷಿಸಿದವರೂ .. ಪ್ರಕೃತಿ ಪ್ರತಿದಿನಹುಟ್ಟುವುದನ್ನೂ ಕಳಚುವುದನ್ನೂಒಂದೇ ಸೌಂದರ್ಯದಿಂದಸಂಭ್ರಮದಿಂದಆಚರಿಸುತ್ತಿರುತ್ತದೆ;ನಾವು ಮಾತ್ರಉಳಿದದ್ದನ್ನು ಬದುಕು ಎಂದೂ,ಉದುರಿದ್ದನ್ನು ಅಂತ್ಯವೆಂದೂತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ. ವನಜಾಕ್ಷಿ ಬೆಟ್ಟದಾಲೂರು

ವನಜಾಕ್ಷಿ ಬೆಟ್ಟದಾಲೂರು ಕವಿತೆ “ಎಲ್ಲಾ ವಿದಾಯವೂ ಅಂತ್ಯವೇನಲ್ಲ!” Read Post »

ಕಾವ್ಯಯಾನ

 ಸುಹಾಸ್ ಶ್ರೀವತ್ಸ ಅವರ ಭಾವಗೀತೆ

ಕಾವ್ಯ ಸಂಗಾತಿ  ಸುಹಾಸ್ ಶ್ರೀವತ್ಸ ಭಾವಗೀತೆ ಈ ಬದುಕ ಬದುಕುವುದ ಕಲಿಯಲು ಈ ಬದುಕು ಸಾಕೇ?ಈ ಬದುಕ ಸವಿಯ ಸವಿಯಲು ಈ ಬದುಕು ಸಾಕೇ? ನಿನ್ನ ಜೀವನವೇ ಒಂದು ಹಾಡು,ಅದರ ಸಾಲು ಬರೆದವರಾರು?ಅರಿಯದ ಪದಗಳಿಗೂ ಅರ್ಥವಿದೆ,ಲಯದಲಿ ಹಾಡಿದರೆ ಹಿತವಿದೆ. ಹಾಡಿನ ಭಾಷೆಯೇ ಬೇರಾದರೂ,ಭಾವಕ್ಕೆ ಬೇಕಿಲ್ಲ ಭಾಷಾಂತರ;ಇದ್ದರೂ ಬದುಕಿನಲ್ಲಿ ಎಷ್ಟೇ ಅಂತರ,ನಿನ್ನ ಬದುಕನ್ನು ಪ್ರೀತಿಸು ನೀ ನಿರಂತರ. ಯಾರದೋ ರಾಗಕ್ಕೆ, ಯಾರದೇ ತಾಳಕ್ಕೆ,ನಿನ್ನ ಸ್ವರವನ್ನು ಶ್ರುತಿಯಲಿ ಸೇರಿಸು;ಜೀವವು ಜನನಿಯದು,ಜೀವನ ನಿನ್ನದು.  ಸುಹಾಸ್ ಶ್ರೀವತ್ಸ

 ಸುಹಾಸ್ ಶ್ರೀವತ್ಸ ಅವರ ಭಾವಗೀತೆ Read Post »

ಕಾವ್ಯಯಾನ

ಬಾಗೇಪಲ್ಲಿ ಅವರ ಗಜಲ್‌ ಜುಲ್ ಖಾಫಿಯಾ ರದೀಫ್ ಸಹಿತ

ಕಾವ್ಯ ಸಂಗಾತಿ ಬಾಗೇಪಲ್ಲಿ ಅವರ ಗಜಲ್‌ ಜುಲ್ ಖಾಫಿಯಾ ರದೀಫ್ ಸಹಿತ ನಿನ್ನಂದವ ನೋಡುವ ಭಾಗ್ಯ ಸಾಕೆನಗೆ ಅಪ್ಪುಗೆ ಬೇಕಿಲ್ಲತುಟಿ ಹೊರಡಿಸುವ ಸುಹಾಸ ಬೇಕೆನಗೆ ಸಲಿಗೆ ಬೇಕಿಲ್ಲ ಹೃದಯಾಂತರಾಳದಿ ಚೂರು ಸ್ಥಾನವ ನನಗೆ ಕಾಯ್ದಿರಿಸುನಿನ್ನ ಸನಿಹ ಇರುವ ಸುಖ ಮಾತ್ರ ನೀಡೆನಗೆ ಹೆಚ್ಚಿಗೆ ಬೇಕಿಲ್ಲ “ನಾನಿನ್ನ ಪ್ರೀತಿಸುವೆ” ಎಂಬ ಉಲಿ ಕೇಳಲು ಕಾತುರ ನಾನುಬಿಗಿ ಬಾಹು ಬಂಧನದ ಸಖ ಬೇಡೆನಗೆ ಹುಸಿನಗೆ ಬೇಕಿಲ್ಲ ನಿನ್ನೂಂದಿಗೆ ಸಹ ಬಾಳ್ವೆ ಎಂದಿಗೂ ಊಹಿಸಿ ಆಸೆ ಪಟ್ಟಿಲ್ಲಸಣ್ಣೊಂದು ಪ್ರೀತಿಯ ಕುಡಿನೋಟ ಬೀರೆನಗೆ ಕಾಡಿಗೆ ಬೇಕಿಲ್ಲ ಕೃಷ್ಣಾ! ಗರತಿ ರಾಧೆ ಸದಾ ರಮಿಸಿದಳು ಮಧುರೆಯಲಿ ನಿನ್ನಅಯ್ಯೋ ಪಾಪವೆ ಎನುತ ದಯೆ ತೋರೆನಗೆ ಮೈಲಿಗೆ ಬೇಕಿಲ್ಲ. ಬಾಗೇಪಲ್ಲಿ  

ಬಾಗೇಪಲ್ಲಿ ಅವರ ಗಜಲ್‌ ಜುಲ್ ಖಾಫಿಯಾ ರದೀಫ್ ಸಹಿತ Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ನಿಜವನರಿತು ನಿಶ್ಚಿಂತನಾಗಿರು”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ನಿಜವನರಿತು ನಿಶ್ಚಿಂತನಾಗಿರು” ಹೆದರದಿರು ಮನವೆ ಬೆದರದಿರು ತನುವೆನಡೆ-ನುಡಿಯೊಳಗೊಂದಾಗಿಹಮ್ಮು ಬಿಮ್ಮುಗಳ ಬಿಟ್ಟುನಿಶ್ಚಿಂತನಾಗಿರು ಸತ್ಯ-ಶುದ್ಧ ಕಾಯಕದೊಳೊಂದಾಗಿತ್ರಿವಿಧ ದಾಸೋಹ ಗೈಯುತ ನಿಶ್ಚಿಂತನಾಗಿರು ಅರಿವು ಅನುಭಾವದಳೊಂದಾಗಿಅಂಧಶೃದ್ಧೆ ಆಡಂಬರ ಅಳಿಸುತ  ನಿಶ್ಚಿಂತನಾಗಿರು ಮನುಷ್ಯ ಮನುಷ್ಯರೊಂದಾಗಿಜಾತಿ ಜಾಡ್ಯವ ತೊಲಗಿಸುತ ನಿಶ್ಚಿಂತನಾಗಿರು ನೋವು-ನಲಿವುಗಳಲೊಂದಾಗಿಮಧರ ಮನವ ಅರಳಿಸುತ ನಿಶ್ಚಿಂತನಾಗಿರು ಬಡವ-ಬಲ್ಲಿದರೊಳಗೊಂದಾಗಿಮಾನವೀಯತೆ ಮೆರೆಯುತ ನಿಶ್ಚಿಂತನಾಗಿರು ಆಚಾರ-ವಿಚಾರಗಳಲೊಂದಾಗಿನಿಜವನರಿತು ನಿಶ್ಚಿಂತನಾಗಿರು ಡಾ.ಗೀತಾ ದಾನಶೆಟ್ಟಿಬಾಗಲಕೋಟೆ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ನಿಜವನರಿತು ನಿಶ್ಚಿಂತನಾಗಿರು” Read Post »

ಕಾವ್ಯಯಾನ

ಡಾ.ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಕನಸಿನ ಹಂದರ ಹರವಲು”

ಕಾವ್ಯ ಸಂಗಾತಿ ಡಾ.ಸುಮಂಗಲಾ ಅತ್ತಿಗೇರಿ “ಕನಸಿನ ಹಂದರ ಹರವಲು”  ಅವಳೊಂದು ಬಿಂದುಆ ಬಿಂದು ಕೇಂದ್ರವಾಗಿರಿಸಿಒಂದೇ ಪರಿಧಿಯಲ್ಲಿಸುತ್ತುತ್ತಿದ್ದಾಳೆ ನಿತ್ಯ ಅವಳೆದೆಯ ಬಿಕ್ಕಳಿಕೆಅಂತರಂಗದ ಅಳಲುತವಕ ತುಡಿತಗಳುಕನಸು ಕಲ್ಪನೆಗಳುಆ ವೃತ್ತದ ಪರೊಧಿಯೊಳಗೆಗಿರಕಿಹೊಡೆಯುತ್ತಿವೆ ತಾನೇ ಇಚ್ಛೆಯಿಂದಹೆಣೆದ ಗೂಡದುಮರಿ ಹಕ್ಕಿಗಳಿಗೆಗುಟುಕಿಡುವಹಾರುವ ರೆಕ್ಕೆಗಳಬಲಗೊಳಿಸುವಹೊಸ ಕನಸುಗಳ ಬೆಳಕಿಗೆಗರಿಬಿಚ್ಚಿಕೊಳ್ಳುವತರಬೇತಿ ತಾಲೀಮಿನಲ್ಲಿಅವಳೀಗ ಬ್ಯುಸಿ ಆಗಿದ್ದಾಳೆ ಅವಳ ಹಗಲು ರಾತ್ರಿಗಳೆಲ್ಲಕರಗುತ್ತಿವೆಹೀಗೆ ಬಂದು ಹಾಗೆ ಮಾಯವಾದಂತೆ! ಒಂದಿಷ್ಟು ದಣಿವಾಗುತ್ತಿರಬಹುದುಆಕೆಗೆಕಾಲಚಕ್ರದ ವೇಗಕ್ಕೆತನ್ನ ಕನಸು ಮತ್ತು ವಾಸ್ತವಗಳಬದುಕು ಮತ್ತು ಕಾಯಕದಚಿತ್ತಾರವನ್ನು ಹೆಣೆದುಕೊಳ್ಳಲು ಇಲ್ಲ.. ಇಲ್ಲ..ಅವಳ ಕಣ್ಣುಗಳಲ್ಲಿ ಕಾಂತಿಮನದೊಳಗೆ ಮಹತ್ವಾಕಾಂಕ್ಷೆಮುಖದೊಳಗೆ ಮಂದಹಾಸವಿದೆ ಅವಳಿಗೆತನ್ನ ಕನಸುಗಳಿಗೆಇನ್ನಷ್ಟು ಬಣ್ಣ ತುಂಬಬೇಕೆಂಬತುಡಿತವಿದ್ದಂತಿದೆಈಗಿರುವ ಚಿತ್ತಾರವನ್ನುಒಂದಿಷ್ಟು ವಿಸ್ತರಿಸಬೇಕೆಂಬಚಿತ್ತವಿದ್ದಂತಿದೆ ಈಗೀಗ ಮತ್ತೆಇಣುಕುತ್ತಿವೆಅವಳ ಕಣ್ಣುಗಳುಕಿಟಕಿ ಬಾಗಿಲುಗಳಾಚೆಯಬೆಳಕು ಸವಿಯಲುಬಯಲೊಳಗಿನಸದ್ದು ಗದ್ದಲಗಳ,ಉರುಳುತ್ತಿರುವ ಚಕ್ರಗಳಆ ವೇಗವನ್ನುಸ್ಮರಣೆಗೆ ತಂದುಕೊಳ್ಳುತ್ತಅವಳು ಹೆಜ್ಜೆ ಹಾಕುತ್ತಿದ್ದಾಳೆಮತ್ತೆ ಮತ್ತೆಬದುಕಿನ ಬಡ್ತಿ ಮತ್ತುಮುಂಬಡ್ತಿಗಾಗಿ ಸಾಲದಾಗಿದೆ ಅವಳಿಗೆಓಡುತ್ತಿರುವಆ ರಾತ್ರಿ ಹಗಲುಗಳಕಾಲ ಮಿತಿಅವಳ ಕನಸಿನಹಂದರ ಹರವಲು ಡಾ.ಸುಮಂಗಲಾ ಅತ್ತಿಗೇರಿ

ಡಾ.ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಕನಸಿನ ಹಂದರ ಹರವಲು” Read Post »

ಕಾವ್ಯಯಾನ

 ಶಶಿಕಲಾ ಚಂದ್ರಶೇಖರ ಅವರ ಕವಿತೆ “ನೀಲಾಗಸದ ಕನಸು”

ಕಾವ್ಯ ಸಂಗಾತಿ  ಶಶಿಕಲಾ ಚಂದ್ರಶೇಖರ “ನೀಲಾಗಸದ ಕನಸು” ಹಿಂದೆಂದಿನಂತೆ ನೀಲಿ ಚಪ್ಪರದಲ್ಲಿಚುಕ್ಕಿ-ಚಂದ್ರಮರ ತೋರಣ ಕಟ್ಟಿ,ಕಾಮನಬಿಲ್ಲಿನ ರಂಗೋಲಿ ಹಾಕಿ,ಕುಣಿವ ಮುಂಗಾರಿನ ಕೋಲ್ಮಿಂಚುಗಳಿಗೆಬೆಳ್ಳಿ ಒಡ್ಯಾಣವ ತೊಡಿಸಿ ಸಂತೈಸಿ,ಕರಿಮೋಡ ಬಳಿ ಕರೆದು ಕನಿಕರದಿಮಳೆ ಸುರಿಸೆಂದು ಬಿನ್ನವಿಸಿದೆ. ಮುತ್ತಿನ ಮಳೆ ಸುರಿಯಲು ಗುಬ್ಬಿ,ಬೆಳ್ಳಕ್ಕಿಗಳ ನೆಂಟರುಬರುವರೆಂದು ಕಾದು ಕುಳಿತಾಗ,ಬಡಿಯಿತು ಬರಸಿಡಿಲು!! ಹೇ ಕೃತಘ್ನ, ಅರಿವಾಗದೆ ನಮ್ಮಪ್ರೀತಿ ಸೌಹಾರ್ದಗಳ ಅಂತರಾಳ,ನಿನ್ನ ಡೈನಮೈಟ್ ಸದ್ದಿಗೆ, ಮುಸುಕಿದ ಕಾರ್ಮೋಡಕೆ,ನೀನಿಟ್ಟ ಕೊಳ್ಳಿಗೆ ಮೈ ಸುಟ್ಟ ಭೂತಾಯಿನೋಡಿ,ಮುಂಗಾರಿನ ಸಿಡಿಲಿಗೂ ಹೆದರದವನಿನ್ನ ಅಟ್ಟಹಾಸಕೆ ನಡುಗಿ ಹೋದೆ!!ಆಗರಿವಾಯಿತು –ಇದು ರಕ್ಕಸರ ನಾಡು! ಮತಾಂಧರ ಬೀಡು! ಎಂದು, ಗುಡ್ಡ ಕುಸಿದು ರಕ್ತ ಬಸಿದು, ಇಟ್ಟ ಕೊಳ್ಳಿಯಲಿಬೆಂದ ಕಂದಮ್ಮಗಳ ಭಸ್ಮ ಧರಿಸಿ, ಆಣೆ ಮಾಡಿ ಹೇಳುವೆ,ಖಂಡಿತ ಇದು ಒಳಿತಿಗಲ್ಲ, ಅವಸಾನದ ಕಾಲ.ಅದರಾಚೆಗೆ.. ಹಾ.. ಕೇಳಿಲ್ಲಿ… ನಾ ಕಾಣುತ್ತಿರುವ ಕನಸಿನ ಮಾತನು,ಖಂಡಿತ ನೀ ಸುಟ್ಟಭೂತಾಯಿಯ ಹೊಟ್ಟೆಯಿಂದಮತ್ತೆ ಹುಟ್ಟಿ ಬರುವರು, ರಕ್ಷಿಸಲು ಬಸವೇಶ, ಕಾರಂತರಂತ ಪುಣ್ಯಾತ್ಮರು,ಆಗ ಮತ್ತೆ ಚಿಗುರುವ ಹಸಿರು,ಮತ್ತ ಕೋಗಿಲೆಗಳ ಋತುಗಾನ,ಓಹ್!!ಮತ್ತೆ ಕಾಣುವೆ ಈ ನೀಲಾಗಸದ ಹಸಿರು ಬೆಟ್ಟದಡಿಆ ಕಾಮನಬಿಲ್ಲಿನ ಅದೇ ಬೆಳ್ಳಿ ದಿಗಂತದಚಂದ್ರ-ತಾರೆಗಳ ಮೋಹಕ ದಿಬ್ಬಣ!! ಶಶಿಕಲಾ ಚಂದ್ರಶೇಖರ, ಶಿವಮೊಗ್ಗ

 ಶಶಿಕಲಾ ಚಂದ್ರಶೇಖರ ಅವರ ಕವಿತೆ “ನೀಲಾಗಸದ ಕನಸು” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು”

ಕಾವ್ಯ ಸಂಗಾತಿ ಮಾಯಾ ಜಿಂಕೆ ಓಡುತಿರು ಡಾ.ಹೆಚ್.ನಟರಾಜ್‌ ಆರ್ಯ ಮಾಯಾ ಜಿಂಕೆ ಓಡುತಿರುಮೈ ಮಿನುಗಿ ಮಿಂಚಿನಂತೆ;ಮನದ ಕಾಡು ದಾಟುತಿರು,ಮೌನದೊಳ ಮಾತಿನoತೆ . ಹೆಜ್ಜೆಯಲಿ ಗಾಳಿಯ ಗೆಜ್ಜೆ,ಕಣ್ಣೊಳ ಕಾಡಿನ ಕನ್ನಡಿ;ಕೊಂಬಲಿ ಚಂದ್ರನ ಬಿಲ್ಲು,ಮೈಮೇಲೆ ಹೊನ್ನಿನ ಹೊಳಪು. ಹಸಿರು ಹಾಸಿಗೆ ತುಳಿದು,ಹೊನ್ನಿನ ನೆರಳು ಸೀಳಿ;ಎಲೆಗಳ ಗುಟ್ಟು ಆಲಿಸಿ,ಮಿಂಚಿಗೇ ದಾರಿ ತೋರಿಸು. ಆ ಹೊಳಪೇ ಕನಸಾಗಿ,ಸೀತೆಯ ಕಣ್ಣನು ಸೆಳೆಯಿತು;ಮಾರೀಚನ ಮೈಯಲಿ ಮಾಯೆ,ಮನದೊಳ ಮೋಹವಾಯಿತು. ರಾಮನ ಹೆಜ್ಜೆ ತಿರುಗಿಲಕ್ಷ್ಮಣರೇಖೆ ನಡುಗಿತು;ಕಾಣುವುದೆಲ್ಲ ಸತ್ಯವಲ್ಲಕನಸಿಗೂ ನೆರಳುಂಟು. ಅಂದೊಂದು ಬಾಣ ಬೆನ್ನಟ್ಟಿತು,ಇಂದೊಂದು ಗುಂಡು ಬೆನ್ನಟ್ಟುತ್ತದೆ;ಕಾಲ ಮಾತ್ರ ಬದಲಾಗಿದೆ,ಬೇಟೆಯ ಕಣ್ಣು ಬದಲಾಗಿಲ್ಲ. ಗಾಳಿಯ ಗುಟ್ಟು ಅರಿತು,ಗುಂಡಿಗಿಂತ ಮುಂಚೆ ಚಿಮ್ಮು;ಹಿಡಿದರೆ ದೂರವಾಗು,ಬಿಗಿದರೆ ಗಾಳಿಯಾಗು. ಪ್ರೀತಿ ಹತ್ತಿರ ಬಂದಾಗ,ನಿಶ್ಶಬ್ದವಾಗಿ ನಿಂತು ನೋಡು;ಭಯ ನೆರಳಾಗಿ ಬಂದರೆ,ಬಯಲಿನ ಎದೆ ದಾಟು. ಬಂಡೆಯ ಅಂಚು ಜಿಗಿದು,ಭೀತಿಯನ್ನು ಹಿಂದೆ ಬಿಟ್ಟು;ಭವಿಷ್ಯದ ಕಡೆಗೆ ಓಡು,ಬದುಕಿನ ಹಠ ಹೊತ್ತು. ನಿನ್ನ ಓಟ ಕೇವಲ ಓಟವಲ್ಲಮುಕ್ತಿಯ ಜೀವಭಾಷೆ;ಮಾಯಾ ಜಿಂಕೆ ಓಡುತಿರು,ಯಾರ ಕೈಗೂ ಸಿಗದಂತೆ….. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು” Read Post »

ಕಾವ್ಯಯಾನ

ಗೊರೂರು ಅನಂತರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತರಾಜು ಹನಿಗವನಗಳು ಇದು ಸರಿಯೇ..? ಹುಡುಗಿಈ ಭೂಮಿಗೆಗುರುತ್ವಾಕರ್ಷಣಿ ಶಕ್ತಿಇರುವಂತೆ ನಿನ್ನಲ್ಲೂ ಇದೆಇದು ಸರಿಯೇ..? ಹುಡುಗಕೈ ಹಿಡಿಯುವುದಾಗಿ ನಂಬಿಸಿ ನನ್ನ ಬಯಕೆಗಳಿಗೆಬೆಂಕಿ ಸುರಿದು  ಈಗ ಸಾರಿ ಎಂದುತಣ್ಣೀರು ಸುರಿಯುತ್ತಿರುವೆ ಇದು ಸರಿಯೇ..? ಹುಡುಗಿನನ್ನ ಬಾಳೇ ಗಾಳಿಗೋಪುರ ಇನ್ನೂ ನಿನ್ನ ಪ್ರೀತಿಗಾಗಿತಾಜ್ ಗೋಪುರ ಕಟ್ಟಿಸಲುಕೇಳುವೆಯಲ್ಲಾಇದು ಸರಿಯೇ..? ಹುಡುಗನೀನಿದ್ದ ಮನೆಗೆನಮ್ಮಪ್ಪನಿಗೆ ಬಾಡಿಗೆ ನೀಡಿದೆಆದರೆ  ನನ್ನ ಮನದಲ್ಲಿನೆಲೆಸಿದ್ದಕ್ಕೆ ಬಾಡಿಗೆನೀಡದೆ ಓಡಿಹೋದೆಇದು ಸರಿಯೇ..? ಹುಡುಗಿಆ ಶ್ರೀಕೃಷ್ಣ ತನ್ನ ಭಕ್ತನಿಗೆ ಗೋಡೆ ಒಡೆದು ದಶ೯ನ ಭಾಗ್ಯ ಕರುಣಿಸಿದನಿನ್ನ  ಭಕ್ತ ಈ ಕರುಣಾಕರನಿಗೆಮನೆಯ ಕಿಟಕಿ ತೆರೆದುಮುಖ ತೋರದೆ  ಕಾಡಿಸುವೆಯಲ್ಲಾಇದು ಸರಿಯೇ…? ಹುಡುಗಮದುವೆಗೆ ಮೊದಲು ನೀ ನನಗೆ ಗುರಿಯಿಟ್ಟೆಈಗ  ನನ್ನ ದಾರದಬುಗುರಿ ಆಗಿಬಿಟ್ಟೆಯೆಲ್ಲಾಇದು ಸರಿಯೇ…? ಗೊರೂರು ಅನಂತರಾಜು,

ಗೊರೂರು ಅನಂತರಾಜು ಅವರ ಹನಿಗವನಗಳು Read Post »

You cannot copy content of this page

Scroll to Top