ಟಿ.ಪಿ.ಉಮೇಶ್ ಅವರ “ನೀ ನನ್ನ ಅಪೂರ್ಣ ಕವಿತೆ!”
ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ನೀ ನನ್ನ ಅಪೂರ್ಣ ಕವಿತೆ!” ನಿನ್ನನ್ನು ನಿನ್ನನ್ನಷ್ಟೇ ಬರೆಯಲುಎಷ್ಟೋ ಕವಿತೆಗಳು ನನ್ನೊಳಗೆ ಕಾಯುತ್ತಿವೆ!ಪ್ರತಿ ಬಾರಿಯುಭಾವನೆಗಳು ಎದೆಯ ತುಂಬಿಕಣ್ಗಳ ಅರಳಿಸಿ ಬೆರಳಿಗೆ ತಾಗಿಅಕ್ಷರಗಳಾಗದೆ ನಿಂತು ಬಿಡುತ್ತವೆ!ನೀನಿಲ್ಲದ ಪ್ರತಿ ದಿನದಮನೆಯ ಒಳಗಿನ ಮೌನದಂತೆ! ನೀನು ದೂರವಾದ ಮೇಲೆಚಂದ್ರನಿದ್ದರೂ ಇರುಳಿಗೆ ಬೆಳಕಿಲ್ಲ!ಮಳೆಯಾದರೂ ಮಣ್ಣಿನ ಪರಿಮಳವಿಲ್ಲ!ಹೂವು ಅರಳಿದರೂ ಸುಗಂಧವಿಲ್ಲ! ನನ್ನ ಮನೆಯ ದಾರಿಯಲ್ಲಿಪ್ರತಿಕ್ಷಣವೂ ಹಾದುಹೋಗುವ ಗಾಳಿನಿನ್ನ ಹೆಜ್ಜೆಗಳ ಸುದ್ದಿಯನ್ನೇ ಹೊತ್ತು ತರಬಹುದೆಂದುಮನಸ್ಸು ಇನ್ನೂ ಕಾಯುತ್ತಾ ಇಣುಕಿ ನೋಡುತ್ತಿದೆ! ವಿರಹನೀನು ಇಲ್ಲದಿರುವುದಕ್ಕಿಂತ!ನೀನು ಇದ್ದ ಮೈಮನ ಈ ಮನೆಯೆಲ್ಲನಿನ್ನ ನೆನಪಿನಿಂದ ತುಂಬಿಹೋಗಿರುವುದು! ಗಾಢ ಮೌನನನ್ನ ಹಗಲು ರಾತ್ರಿಗಳ ಮೇಲೆಇಳಿಯದ ಮಳೆಯ ಮೋಡದಂತೆ!ಮಳೆ ಸುರಿಯದೆ ಆಕಾಶವೆಲ್ಲಭಾರವಾಗಿಯೇ ಉಳಿದಂತೆ! ನಿನ್ನನ್ನು ಮರೆಯಲು ಹೊರಟಪ್ರತಿ ಆಲೋಚನೆಯು ಪ್ರತಿ ನಡೆಯುಮತ್ತೆ ನಿನ್ನ ನೆನಪಿನ ಬಳಿಗೇ ಬಂದು ನಿಲ್ಲಿಸುತ್ತದೆ!ದಾರಿ ತಪ್ಪಿದ ನದಿಯೊಂದು ಹುಚ್ಚು ಕುದುರೆಯಾಗಿಸಮುದ್ರವನ್ನೇ ಹುಡುಕುವಂತೆ! ಒಮ್ಮೆ ನೀನುನನ್ನೆಲ್ಲ ದಿನಗಳ ಬೆಳಗಾಗಿದ್ದೆ!ಈಗ ಅದೇ ದಿನಗಳುಸೂರ್ಯೋದಯವನ್ನೇ ಮರೆತಿರುವದೀರ್ಘ ಸಂಜೆಯಂತಾಗಿ ಸುದೀರ್ಘ ಇರುಳಂತಿವೆ! ನಿನ್ನ ಹೆಸರನ್ನು ಬರೆದಾಗಪೆನ್ನಿನ ಮಸಿ ಮಾತ್ರ ಕಾಗದದ ಮೇಲೆ ಮೂಡುವುದಿಲ್ಲ!ನನ್ನೊಳಗೆ ಮೌನವಾಗಿ ಉಳಿದಿರುವವಿರಹದ ಕಣ್ಣೀರುಸಾಲುಸಾಲುಗಳಾಗಿ ಜಾರಿ ಮನ ಹಗುರಾಗಬೇಕಿದೆ! ನಿನ್ನನ್ನು ಒಂದೇ ಕವಿತೆಯಲ್ಲಿ ಬರೆಯಲು ಸಾಧ್ಯವಿಲ್ಲನೀನು ಕೇವಲ ಒಂದು ನೆನಪಲ್ಲ!ನನ್ನ ಉಸಿರು ಉಸಿರಿನಲ್ಲೂಮತ್ತೆ ಮತ್ತೆ ಹುಟ್ಟುವನನ್ನದೇ ಅಪೂರ್ಣ ಕವಿತೆ! ಟಿ.ಪಿ.ಉಮೇಶ್
ಟಿ.ಪಿ.ಉಮೇಶ್ ಅವರ “ನೀ ನನ್ನ ಅಪೂರ್ಣ ಕವಿತೆ!” Read Post »









