ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ”
ಕಾವ್ಯಸಂಗಾತಿ ಲಲಿತಾ ಪ್ರಭು ಅಂಗಡಿ ಮುಂಬೈ “ಎಂದೊಹಾಡಿದ ಭಾವಕೆ” ಎಂದೊ ಹಾಡಿದ ಭಾವಕೆಇಂದು ತಾಳತೀಡಿಮಧುರ ನೆನಪು ಕಾಡಿದೆ ಹೃದಯ ತಂತಿ ಮೀಟಿದೆಸ್ವರ ಭಾವನೆಗಳಿಗೆಆಲಾಪ ಹಚ್ಚಿ ಗುನುಗುತಿದೆ ಕಟ್ಟಿ ಹಾಕಿದ ಬಿಗಿಗಂಟುಸಡಿಲಿಸಿ ಸನಿಹ ಬಂದುಸರಿಗಮಪದ ಸವಿಜೇನಿಂದ ಸನಿದಪ ಹೇಳುತಿದೆಭಾವನೆಗಳಿಗೆ ಬಣ್ಣ ಹಚ್ಚಿ ಹಾಡಬಯಸಿದೆ ರೆಕ್ಕೆ ಬಿಚ್ಚಿ ಹಾರಾಡಬಯಸಿದನೆನಪಿನ ದೋಣಿಯ ಆ ಹಾಡುಕಾಡಿ ಕಾಡಿ ಕುಣಿಯುತಿದೆಗೆಜ್ಜೆಯ ಗುಂಗಿಗೆತಾಳ ಹಾಕಿ ತಕದಿಮಿ ಹೇಳುತಿದೆಹಾಡಿ ಆಲಾಡಿತೇಲಾಡಬಯಸಿದೆ ಕೊಚ್ಚಿ ಹೋಗುವ ಆಸೆಗಳಿಗೆಆಸರೆಯಾಗಿ ಕೈಹಿಡಿದುದಿಕ್ಸೂಚಿಯಂತೆ ಬಾಳ ಬಳ್ಳಿಬೆಳಗುವ ಉತ್ಸಾಹಕೆಮತ್ತೆ ಚಿಗುರಿ ಚೈತ್ರಗೀತೆ ಹಾಡಿದೆ ಒಣಗಿದರೂ ಕೊಸರಿ ಉಸುರಿಸುವಜೀವನೋತ್ಸಹಕೆ ಪಲ್ಲವಿ ಬರೆದುಕತೆಯ ಬದುಕಿಗೆಸುಂಗಧ ತೀಡಿಕಾವ್ಯ ಲಹರಿಯಾಗಿಹಾಡಾಗಿ ಒಡಮೂಡಿದೆ. ಲಲಿತಾ ಪ್ರಭು ಅಂಗಡಿ.
ಲಲಿತಾ ಪ್ರಭು ಅಂಗಡಿ ಮುಂಬೈ ಅವರ ಕವಿತೆ “ಎಂದೊಹಾಡಿದ ಭಾವಕೆ” Read Post »









