ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ”
ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಇಂಗದ ಬಾಯಾರಿಕೆ” ಬಿಸಿಲ ಶಲಾಕೆಇಳಿದು ಚುಚ್ಚಿದೆಹೃದಯದಟ್ಟದ ಆಳಕೆ;ಬತ್ತಿಸಿ ಪ್ರಾಣದ ಒರತೆಯಉಳಿದಿದೆ— ಇಂಗದ ಬಾಯಾರಿಕೆ. ಅರಿಯದ ನೋವುಅಸ್ಥಿ-ಮಾಂಸವ ಕೊರೆಯಲು;ಬೆವರಿನ ನದಿಯಲಿಹುಡುಕುವ ಹಾದಿಯೇಬಸವಳಿದ ಮನಕೆ ಕಿರು ಆಸರೆ. ಹೆಜ್ಜೆಗಳು ಭಾರವಾಗಿ,ಬೆಳಕೇ ಬೆಂಕಿಯ ಮಳೆಯಾಗಿ;ದಿಗಂತದಲಿ ನಿಂತುಜೀವ ಹಿಂಡುವಾಗ—ಸೋಲೊಪ್ಪದೆ ವಿಧಿಯಿಲ್ಲವೇ? ನಿರಂಜನ ಕೇಶವ ನಾಯಕ
ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ” Read Post »









