ಇಮಾಮ್ ಮದ್ಗಾರ ಅವರ ಕವಿತೆ,ಹೊಸತೇನಿಲ್ಲ
ಕಾವ್ಯ ಸಂಗಾತಿ ಇಮಾಮ್ ಮದ್ಗಾರ ಹೊಸತೇನಿಲ್ಲ ಸಾವಿರಾರು ಪಟಾಕಿಗಳ ಘರ್ಜನೆಯಲಿ ಪರಿಸರದಪರಿಗಮನವೂ ಇಲ್ಲದೇ..ನೂರಾರು ಜೀವಿಗಳ (ಮಾಂಸ)ತಿಂದು ತೇಗುತ್ತಾ..ನಶೆಯಲ್ಲಿ ನಿರ್ಗಮಿಸುತ್ತಾನಶೆಯಲ್ಲಿಯೇ ಆಗಮಿಸುವಹೊಸ ವರುಷವೇ ನಿನಗೆ ಸ್ವಾಗತ ಹೊಸತನದ ಆಶೆಯಷ್ಟೇ ಹನ್ನೆರಡು ತಿಂಗಳ ತುಂಬು ಗರ್ಭದಲಿ ಮತ್ತೊಂದು ಜನನಜನನ ೨೦೨೬ ಹೊಸತೇನಿಲ್ಲ !ಮತ್ತೇರಿದ ಮಸ್ತಕದಲ್ಲಿಹೊಸತನದ ಆಶೆಯಹೊತ್ತುಹಳೆಯ ನೋವುಗಳ ಹೊಸಕಿಹಾಕುತ್ತಾ ಬರುವ ಹೊಸವರುಷವೇ ನಿನಗೆ ಸ್ವಾಗತ ಹೊಸತನದ ಬಯಕೆ ಅಷ್ಟೇ ಕಳೆದ ಸಾಲಿನ ಸಂಕಟಸಡಗರವಾಗಿ ಬದಲಾಗಿ ಹೋದವರುಷದ ಸಂಭ್ರಮ ಸವೆಯದೇ ಗಟ್ಟಿಯಾಗಿರಿಸುತ್ತಾ ಬಂದುಬಿಡು ಹೊಸತನವೇ ನಿನಗೆ ಸ್ವಾಗತ ಹೊಸತನದ ಕನಸಷ್ಟೇ ಗತಕಾಲದ ನೆನಪುಗಳುನಶಿಸಿ ನೋವುಗಳ ನಶೆಯ ಅಳಿಸಿ ಕಂಡ ಕನಸುಗಳ ನನಸಾಗಿಸಲು ಬರುತ್ತಿರುವನವ ನವೀನ ವರುಷವೇ ನಿನಗೆ ಸ್ವಾಗತ ಹೊಸತೇನಿಲ್ಲ !ಹೊಸತನದ ಆಶೆಯಷ್ಟೇ… ಹಳೆಬೇರು ಹೊಸಚಿಗುರುಹೂವಾಗಿ ಕಾಯಿ ಫಲಿಸಿಹಣ್ಣಾಗಲಿದೆಂಬ ಭರವಸೆಯಷ್ಟೇ… ಹರುಷದ ಹೊನಲು ಹರಿಸಿಬಾಂಧವ್ಯ ಗಳ ಬೆಸೆಯುತ್ತಾಜಾತಿ ವಿಜಾತಿಗಳ ಹೊಲಸುತೊಳೆಯುತ್ತಾ ಎಲ್ಲರೊಂದೇಎಂಬ ಭಾವ ಪಸರಿಸುತ್ತಾಬಂದುಬಿಡು ಹೊಸವರುಷವೇನಿನಗೆ ಸ್ವಾಗತ ಆಯುಷ್ಯದಲ್ಲಿ ಮತ್ತೊಂದುವರುಷ ಕಡಿತವಾಗಿದೆ ಮತ್ತೇನಿಲ್ಲ ಹೊಸತೇನಿಲ್ಲಹೊಸತನದ ಆಶೆಯಷ್ಟೇ… ಇಮಾಮ್ ಮದ್ಗಾರ
ಇಮಾಮ್ ಮದ್ಗಾರ ಅವರ ಕವಿತೆ,ಹೊಸತೇನಿಲ್ಲ Read Post »









