ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”
ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”
ಚಂದ್ರನ ಬೆಳಕಲಿ
ಬೆಳ್ಳಿ ತರಂಗ,
ಸೂರ್ಯ ಕಿರಣದಲ್ಲಿ
ಚಿನ್ನದ ಹೊಳಪು
ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ” Read Post »
ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”
ಚಂದ್ರನ ಬೆಳಕಲಿ
ಬೆಳ್ಳಿ ತರಂಗ,
ಸೂರ್ಯ ಕಿರಣದಲ್ಲಿ
ಚಿನ್ನದ ಹೊಳಪು
ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ” Read Post »
ಕಾವ್ಯ ಸಂಗಾತಿ ಜಯಂತಿ ಕೆ ವೈ “ಸಾವಿನ ಮನೆ ಸೇರುವ ಸತ್ಯ” ಯಾರೂ ಬರೆಯದ ಕತೆಯ ಲೇಖಕಿಯಾಗುವ ಉಮೇದಿನಲಿಅಕ್ಷರಗಳ ಹೆಕ್ಕುವಾಗ ಆಸೆಯೇ ಇಲ್ಲವೆಂದ ಪದಗಳಿಗೆ ಪ್ರಶಸ್ತಿಗಳ ಆಮಿಷವೊಡ್ಡಿದೆ! ಕಾರಣವೇ ಇಲ್ಲದೆ ಕತೆಯಾಗುವಸುಳ್ಳಿನ ಬಲೆಯೊಳಗೆ ಸಿಲುಕುವಬೇಡವೆಂದರೂ ಬೇಕೆನಿಸುವಬಯಕೆ ಬಿಸಿಯ ಕಾವಿಗೆಪದಗಳು ಕರಗಿದವು. ಅದೆಲ್ಲೋ ಕುಳಿತ ಪುಟ್ಟ ಹಕ್ಕಿಯ ಶಿಳ್ಳೆಕೂಗುಎದೆಹಾಡಿಗೆ ಸ್ವರ ಕೂಡಿಸುವ ವೇಳೆಗೆಅಲ್ಲೊಂದು ಕಥಾನಕದ ಅನಾವರಣ ಸುಳ್ಳು ಸತ್ಯವಾಗಿಸತ್ಯ ಸುಳ್ಳಾಗಿ ಹೇಳುವವರ ಬಾಯಲ್ಲಿಹೊರಳಾಡುತ್ತಾ ಹೊರಬಿದ್ದವು ಮಾತಾಗಿದಾಖಲಾದವು ಮಸಿಯಾಗಿ. ಹೇಳಲೇನಿದೆ ಕೇಳಿದವರಿಗೆಲ್ಲಒಂದೇ ಪ್ರಶ್ನೆಉತ್ತರವೇ ಇಲ್ಲದಮಾರುತ್ತರ ಬಯಸದ ಹಾಗೆದಿಕ್ಕೆಡಿಸುವಂತೆ ಪದಗಳ ನದಿ ಹರಿದಂತೆಕತೆಗಾರಳಾಗುವ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿತ್ತು! ಅಲ್ಲೊಂದು ದಿವ್ಯಮೌನರೆಕ್ಕೆಬಿಚ್ಚಿದ ಕನಸಿನ ಹಕ್ಕಿಗಾಗೇ ಕಾಯುತ್ತಿತ್ತುಮೌನ ಮಾತನಾಡಿತು‘ನ ಬ್ರೂಯಾತ್ ಸತ್ಯಮಪ್ರಿಯಮ್’ಸತ್ಯ ಸಾವಿನಮನೆ ಸೇರಿತುಪದಗಳಾಗುವ ಆಸೆಯೇಇಲ್ಲದ ವರ್ಣಮಾಲೆಯ ಅಕ್ಷರಗಳಲ್ಲಿಮೂಡಿತ್ತು ಮಂದಹಾಸ!! ಜಯಂತಿ ಕೆ ವೈ
ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ” Read Post »
ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ “ಒಲುಮೆಯ ಸಾಂಗತ್ಯ” ಇರಬೇಕು ಒಲುಮೆಯ ಸಾಂಗತ್ಯಮಧುರ ಭಾವಗಳು ಬೆಸೆದುಒಲವಿನ ಹೊನಲು ಹರಿಸಲು ಇರಬೇಕು ಒಲುಮೆಯ ಸಾಂಗತ್ಯಮಾತುಗಳು ನೂರಿದ್ದರೂಮೌನದ ಭಾಷೆ ಅರಿಯಲು ಇರಬೇಕು ಒಲುಮೆಯ ಸಾಂಗತ್ಯಬಯಕೆಯ ಬಳ್ಳಿಗೆಆಸರೆಯಾಗಿ ನಿಲ್ಲಲು ಇರಬೇಕು ಒಲುಮೆಯ ಸಾಂಗತ್ಯತಪ್ಪು ಒಪ್ಪುಗಳ ನಡುವೆತಿದ್ದಿ ಸರಿದಾರಿ ತೋರಲು ಇರಬೇಕು ಒಲುಮೆಯ ಸಾಂಗತ್ಯಪ್ರೀತಿ ಸ್ನೇಹಗಳ ಸಮ್ಮಿಲನಮನದಂಗಳದಿ ಅರಳಲು ಇರಬೇಕು ಒಲುಮೆಯ ಸಾಂಗತ್ಯಮನದ ಮಧುರ ಮಿಲನಕೆಅಮೃತಧಾರೆ ಹರಿಸಲು ಇರಬೇಕು ಒಲುಮೆಯ ಸಾಂಗತ್ಯಸಮಸ್ಯೆ ಸವಾಲುಗಳಿಗೆಭರವಸೆ ಬಾಳು ಬೆಳಗಲು ಇರಬೇಕು ಒಲುಮೆಯ ಸಾಂಗತ್ಯದೂರ ದಾರಿಯ ಪಯಣಕೆಸದಾಕಾಲ ಸಿಹಿ ಸ್ಪರ್ಶ ನೀಡಲು ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ” Read Post »
ಕಾವ್ಯ ಸಂಗಾತಿ ಎನ್. ಜಯಚಂದ್ರನ್ “ನೆರಳು ದಾಟಿದ ಹೆಜ್ಜೆ.” ಬಾಳ ಹಾದಿಯಲಿ ನಡೆದು ಬಂದಹಾದಿಯ ಗುರುತುಗಳೆಲ್ಲಾ ಕಥೆಗಳಾದವು,ನಗುವಿನ ಹನಿಗಳು ಮುತ್ತಾಗಿ ಮೂಡಿನೆನಪಿನ ಮಡಿಲಲ್ಲಿ ಶಾಶ್ವತವಾದವು. ಕಳೆದ ದಿನಗಳ ಸುವರ್ಣ ಕ್ಷಣಗಳುಕನಸಿನಂತೆ ಮನದೊಳಗೆ ಉಳಿದವು,ಸ್ನೇಹದ ಸ್ಪರ್ಶದ ಸಿಹಿ ಮಾತುಗಳುಹೃದಯದ ತಂತಿಗಳಲಿ ಹಾಡಾದವು. ಬಿರುಗಾಳಿಗಳ ನಡುವೆ ನಿಂತ ಧೈರ್ಯಜೀವನದ ಪಾಠವಾಗಿ ಬೆಳೆದಿತು,ಸೋಲಿನ ನೆರಳನ್ನು ದಾಟಿದ ಹೆಜ್ಜೆಗೆಲುವಿನ ಬೆಳಕಾಗಿ ಅರಳಿತು. ತಾಯಿಯ ಮಮತೆ, ತಂದೆಯ ಆಶೀರ್ವಾದಬಾಳ ದಾರಿಯ ದೀಪಗಳಾದವು,ಗುರುವಿನ ಜ್ಞಾನ, ಗೆಳೆಯರ ಪ್ರೀತಿಮನದ ಸಂಪತ್ತಾಗಿ ನೆಲೆಗೊಂಡವು. ಕಾಲದ ಚಕ್ರವು ಮುಂದೆ ಸಾಗಿದರೂಆ ಕ್ಷಣಗಳು ಹಿಂದೆ ಮರೆಯಾಗಲಿಲ್ಲ,ಸಾರ್ಥಕ ಬದುಕಿನ ಸುಂದರ ನೆನಪುಗಳುಮನದ ತೋಟದಲ್ಲಿ ಎಂದೂ ಒಣಗಲಿಲ್ಲ. ಕೊನೆಗೆ ಉಳಿಯುವುದು ಸಂಪತ್ತು ಅಲ್ಲ,ಹೆಸರಿನ ವೈಭವವೂ ಅಲ್ಲ,ಪ್ರೀತಿಯಿಂದ ಬದುಕಿದ ಕ್ಷಣಗಳೇಜೀವನದ ನಿಜವಾದ ಹಬ್ಬವಾಗುವವು. ಸಾರ್ಥಕ ಬದುಕಿನ ನೆನಪುಗಳುಸಂಜೆಯ ಸೂರ್ಯನ ಕಿರಣಗಳಂತೆ,ಅಸ್ತವಾಗುವ ಹೊತ್ತಿನಲ್ಲಿಯೂ ಸಹಮನದ ಆಕಾಶವನ್ನು ಬೆಳಗಿಸುವವು.ನೆರಳು ದಾಟಿದ ಹೆಜ್ಜೆ. ಎನ್. ಜಯಚಂದ್ರನ್
ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.” Read Post »
ಕಾವ್ಯ ಸಂಗಾತಿ ಮಧು ವಸ್ತ್ರದ ಮುಂಬಯಿ “ವಸಂತನ ಅಳಲು” ಮಾಮರದ ಚಿಗುರೆಲೆ ಅದೇಕೋ ಅತ್ತಿತ್ತಅಲ್ಲಾಡದಾಗಿಹುದುಮಧು ಹೀರಿ ಹಾರುವ ದುಂಬಿ ಝೇಂಕಾರಮಾಡದಾಗಿಹುದುಕೋಗಿಲೆ ಹಾಡುವುದ ಮರೆತು ಮೌನದಲಿಕುಳಿತಿಹುದುನವಿಲು ನರ್ತಿಸದೆ ಮುಗಿಲೆಡೆ ದೈನ್ಯದಿಂದನೋಡುತಿಹುದು ತೆಂಗು ಬಾಳೆ ಅಡಿಕೆ ಶುಭಕಾರ್ಯಗಳಿಲ್ಲದೆಮಂಕಾಗಿಹವುಮಲ್ಲಿಗೆ ಸಂಪಿಗೆ ಹೂಗಳು ಒಣಗಿ ಮೊಗವಬಾಡಿಸಿಹವುಪ್ರಾಣಿಸಂಕುಲ ಮನುಜನಾಟಕೆ ಸಿಕ್ಕಿ ತತ್ತರಿಸಿಹೋಗಿಹುದುಪಶುಗಳೆಲ್ಲವೂ ನಿನ್ನ ಕ್ರೂರ ಆರ್ಭಟಕೆ ಬೆದರಿಕಂಗಾಲಾಗಿಹವು ಬೀಸುಗಾಳಿಯಲಿ ಕಲುಷಿತ ವಿಷದ ದುರ್ಗಂಧಬರುತಿಹುದುಹರಿವ ನದಿಗಳಲಿ ಮನುಜ ಬಿಸುಟಿದ ಕೊಚ್ಚೆಕಸ ಬೆರೆತಿಹುದುಮಲಿನ ಕೆಸರು ನೀರಿನಲ್ಲಿ ಜಲಚರಗಳ ಜೀವಬರಡಾಗಿಹುದುಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವವಿಲ್ಲದೆ ಕಾಡುಬರಿದಾಗಿಹುದು. ಪ್ಲಾಸ್ಟಿಕ್, ಕಸ, ಕಾಗದ ಉರಿದು ಹೊಗೆ ಏರಿಬಾನು ಕಪ್ಪಾಗಿಹುದುನಿನ್ನ ಸ್ವಾರ್ಥದಾಟಕೆ ಸಿಲುಕಿ ಹಸಿರು ಕಾನನ ಬೋಳಾಗಿಹುದುನಿನ್ನಹಂಕಾರ ನೋಡಿ ಸಹಿಸದೆ ಸಮುದ್ರರಾಜ ಕೋಪದಿ ಗರ್ಜಿಸಿಹನುತನ್ನಲೆಗಳ ಬೀಸಿ ಭೂತಾಯಿಯ ಬಾಚಿ ತಬ್ಬುತ ಸಾಂತ್ವನ ನೀಡಿಹನು ಇಳೆಯ ಸಿಂಗರಿಸಿ ನಲಿಯಲು ಬಂದ ಋತುವಸಂತ ಬೆಚ್ಚಿಹನುಪೃಥ್ವಿಯ ಮೇಲಿನ ದಾರುಣ ಸ್ಥಿತಿಯ ಕಂಡುಮರುಗಿ ಹೋಗಿಹನುಸ್ವಚ್ಛತೆ ನಿರ್ಮಲತೆ ಕಾಪಾಡುತ ಎಚ್ಚರದಿಂದಇರಿ ಎಂದಿಹನುನಿಸರ್ಗದ ಕಾಳಜಿ ವಹಿಸುತ ಸುಖದಿ ಬಾಳಿರಿಎಂದು ಹರಸಿಹನು.. ಮಧು ವಸ್ತ್ರದ ಮುಂಬಯಿ
ಮಧು ವಸ್ತ್ರದ ಮುಂಬಯಿ “ವಸಂತನ ಅಳಲು” Read Post »
ಕಾವ್ಯ ಸಂಗಾತಿ ವಿಮಲಾರುಣ ಪಡ್ಡಂಬೈಲು “ಬಣ್ಣದ ಧಿರಿಸು” ಬಚ್ಚಿಟ್ಟ ಬಣ್ಣದ ಧಿರಿಸಿಗೆಹಚ್ಚಿಟ್ಟ ಹಣತೆಯ ಕಣ್ಣವನುಸಾಲು ದೀಪಗಳಹೊನ್ನ ಕಿರಣದ ತಾರೆ ತಂದವನುತನ್ನ ಮನದಲ್ಲಿ ಭಿತ್ತಿದ ಭಾವಗಳ ಹಸೆಗೆಸಾವಿರ ಚುಕ್ಕೆಗಳ ಇಟ್ಟವನು. ಹಸಿರುಸಿರ ಸೀರೆಯೊಳುನೂತ ನೂಲುಗಳೇ ಸಾಕುಚಿತ್ತಾರ ತಂದಭಾವಭಿತ್ತಿಯ ಬಣ್ಣಗಳ ಹೇಳಲು. ಬಿದ್ದ ಮಳೆಗೆ ಮೊಳೆತ ನೆಲದಹಸಿ ಪ್ರೀತಿಯಂಥವನಮೋಹಕ್ಕೋ ಮೋದಕ್ಕೋಒಲುಮೆಗೋ ನಲುಮೆಗೋಪ್ರೀತಿ ಪ್ರೇಮದ ಅರ್ಥವ ಹೇಳಲುಯಾವ ಹೆಸರಿಡಲಿ? ಸುಳಿ ಮಿಂಚ ಮಿಣುಕು ಕಂಗಳಮಾಯಕಾರನಮೊಗದಲ್ಲಡಗಿದ ಕೋಲ್ಮಿಂಚಮುಗುಳು ನಗೆಯನೇನೆಂದು ಬಣ್ಣಿಸಲಿ? ಉಜ್ವಲ ಬದುಕಿನಅನಂತ ಕ್ಷಣಗಳ ಸಾಕ್ಷೀಕರಿಸಲುಸಂತಸ ಹಂಚಿಸಮೀಪ ಬರಲು ತವಕಿಸುವಜೀವದುಜ್ಜೀವದಲಿನಾನಿರುವೆನೆಂದುಹೇಗೆ ಹೇಳಲಿ? ಉಟ್ಟ ಸೀರೆಯ ಅಂಚಿನಲಿಸೆರಗ ಸಿಕ್ಕಿಸಿಕೊಂಡಂತಿರುವಮುಚ್ಚಿಟ್ಟ ಮನ ನನ್ನದುಎಲ್ಲವು ಬಚ್ಚಿಟ್ಟ ಭಾವದೊಳಡಗಿವೆಎಂದು ಹೇಳದಿದ್ದರೂಜೊತೆಗಿರುವ ಭಾವ ಕೊಡುವ ಭರದಲಿಸೋತು ಹೋದವಳು…. ವಿಮಲಾರುಣ ಪಡ್ಡoಬೈಲು
ವಿಮಲಾರುಣ ಪಡ್ಡಂಬೈಲು “ಬಣ್ಣದ ಧಿರಿಸು” Read Post »
ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಮನಸ್ಸಿನ ಸೇತುವೆ” ನಮ್ಮದೆನ್ನುವ ಪುಟ್ಟಮನಸ್ಸು ಪುಟ್ಟ ದೋಣಿಯಂತೆವಿಹಾರ ಹೊರಡುತ್ತದೆಬದುಕಿನುದ್ದಕ್ಕೂಎಲ್ಲರ ಮನದಿ ಮಲ್ಲಿಗೆಯಾಗಿಬಳ್ಳಿಯಂತೆ ಹಬ್ಬಿನಿಂತಿರುವ ಬದುಕಿಗೆಚಲನೆಯಾಗುತ್ತದೆವಿಶಾಲ ಆಗಸದ ಬಾನಂಚುಮುಟ್ಟುವ ಹಕ್ಕಿಯರೆಕ್ಕೆಯ ಬಡಿತವಾಗಿಮನಸ್ಸು ತುಂಬುತ್ತದೆಗೂಡಂಗಡಿಯ ಮರದಬೆಂಚುಗಳ ಮೇಲೆಕುಳಿತು ಅವಲಕ್ಕಿತಿನ್ನುವಾಗ ಅರಿವಿನ ಮೂಲಕ್ಕೊಂದು ಅಡಿಪಾಯದಚಿತ್ರ ಬರೆಯುತ್ತದೆಹೂವಿನಂದದ ಮಗುವಿನ ನಗುಕವಿತೆಯಾಗಿ ಸಾಲುಗಳಬರೆದು ಬೆಟ್ಟವಾಗುತ್ತದೆಬೆಟ್ಟದ ತುದಿಯಿಂದಹರಿದು ಬಂದ ಝರಿಯೊಂದುಜೀವವಾಗಿ ಊರತುಂಬಾ ಹರಿಯುತ್ತದೆಬೆಳಗು ನಗುವ ಹೂಗಳಕಂಪಿನ ನಡುವೆ ನಿಂತುಗಾಳಿಯಲ್ಲಿ ಸುಳಿದಾಡುತ್ತದೆಮನಸಿನ ಸೇತುವೆ ಮೇಲೆಅನ್ನ ನೀರಿನ ಘನತೆಮನಸು ಮುಟ್ಟುತ್ತದೆಸುಮ್ಮನೇ ಸೈಕಲ್ ಮೇಲೆಕುಳಿತು ಹೋದ ಹಿರಿಯನಹಿಂದೆ ಇರುವ ಭತ್ತದ ಸಸಿಗಳಲ್ಲಿ ಮತ್ತೊಂದುಸೇತುವೆಯ ಮಾತುನೆಲದನಿಯಾಗಿ ಕೇಳುತ್ತದೆಮನಸಿನ ಮನಸಿಗೆಮಾತೇ ಸೇತುವೆಯಾಗಿಮನಸ್ಸು ದಾಟಿಸುತ್ತದೆಮನದ ಖುಷಿಗೆಬಣ್ಣ ತುಂಬಿಮಾಯವಾಗುತ್ತದೆ…….. ನಾಗರಾಜ ಬಿ. ನಾಯ್ಕ
ನಾಗರಾಜ ಬಿ. ನಾಯ್ಕ “ಮನಸ್ಸಿನ ಸೇತುವೆ” Read Post »
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ನಾಚಿದ ಬೆಳದಿಂಗಳು” ಅಸುನೀಗುತಿದ್ದ ಬೆಳದಿಂಗಳಿಗೆನನ್ನವಳ ಕುರಿತಾಗಿ ಹೇಳುತಿದ್ದೆಒಂಚೂರು ನಗದೆ ಇತ್ತು ಕೊಂಚವೂ ಆಸೆ ತೋರದೆನನ್ನನೇ ನಿರ್ಲಕ್ಷ್ಯ ಮಾಡುತಿತ್ತುಇವನೊಬ್ಬ! ಎನ್ನುತಿತ್ತು ನನ್ನದೇ ನನಗೆ ಹೇಳುವುದೆಷ್ಟೋಉಳಿದಿದೆ ಕೇಳಿಸಿಕೊಳ್ಳುವರಿಲ್ಲಕಗ್ಗತ್ತಲೆಯು ಹಂಗಿಸಿ ನಗುತಿದೆ ಬೆಳದಿಂಗಳ ಮನದಮಾತಿಗೆ ಕಿವಿಯಾದರೂ ಚಂದಿರನಬರುವಿಕೆಯತ್ತಲೆ ಅದರೊಲವಿತ್ತು ನಾನು ನನ್ನ ಒಲವಿನ ದಾರಿ ಹಿಡಿದೆಬೆಳದಿಂಗಳು ನೋವ ಮರೆತುನಸುನಗುತಿತ್ತು ನಾಚುತಿತ್ತು. ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ “ನಾಚಿದ ಬೆಳದಿಂಗಳು” Read Post »
ಕಾವ್ಯಸಂಗಾತಿ ಮಧು ವಸ್ತ್ರದ ಮುಂಬಯಿ “ಮಾನವನಾಗು” ಪುಟ್ಟ ಗಲ್ಲಿಯಾಗು, ಚಿಕ್ಕ, ಚೊಕ್ಕ ಹಳ್ಳಿಯಾಗು, ಹೃದಯಹೀನ ನಗರವಾಗದಿರುಎಳೆಯ ಬಿಸಿಲಾಗು, ನಗುವ ಮುಸ್ಸಂಜೆಯಾಗು,ನೆತ್ತಿ ಉರಿಸುವ ಬಿಸಿಲಾಗದಿರುಹರಿವ ನದಿಯಾಗು, ಭೋರ್ಗರೆವ ಅಬ್ಧಿಯಾಗು, ನಿಂತ ನೀರಂತೆ ಜಡ ಆಗದಿರುಸುಗಂಧದ ಧೂಪವಾಗು, ಬೆಳಕಿನ ದೀಪವಾಗು, ಅಜ್ಞಾನದ ಅಂಧಕಾರ ಆಗದಿರುಹೂವನೀವ ಗಿಡವಾಗು, ತಂಪನೀವ ವೃಕ್ಷವಾಗು, ಕಡಿಯುವ ಕೊಡಲಿ ಆಗದಿರುಪಥಿಕನಾಗು, ಮಾರ್ಗದರ್ಶಿಯಾಗು ಗುರಿಯನು ಹೊಂದದ ಅಲೆಮಾರಿ ಆಗದಿರುಕೋಪವಾಗು, ಮೌನವಾಗು ಮಾತಾಗು ಕಠೋರ ಮಾತಿನ ಪರನಿಂದಕ ಆಗದಿರುಶಕ್ತನಾಗು ಭಕ್ತನಾಗು,ಸಾತ್ವಿಕ ಹೃದಯವಂತನಾಗುನಯವಂಚಕ ಆಗದಿರುಶ್ರಮಿಕನಾಗು ಪ್ರಾಮಾಣಿಕನಾಗು, ಮಾನವನಾಗು, ಅಹಂಕಾರಿ ದಾನವನಾಗದಿರು.. ಮಧು ವಸ್ತ್ರದಮುಂಬಯಿ
ಮಧು ವಸ್ತ್ರದ ಮುಂಬಯಿ “ಮಾನವನಾಗು” Read Post »
ಕಾವ್ಯ ಸಂಗಾತಿ “ಬೈಸಿಕಲ್ಲು” ವಿಶ್ವ ಸೈಕಲ್ ಸುಜಾತಾ ರವೀಶ್ ಮೈಸೂರು ಹಿಂದೊಂದು ಕಾಲದ ಪ್ರತಿಷ್ಠೆಯ ಲಾಂಛನಇಂದು ಹೆಸರೇ ಇದರದು ಬಡವರ ವಾಹನಗಾಲಿಯ ಆವಿಷ್ಕಾರದೊಂದಿಗೆ ಇದರ ಉಗಮಸೈಕಲೇರಿದರೆ ಎಷ್ಟು ಮಜಾ! ಆಹಾ ಆರಾಮ! ಬೇಡದು ಹೆಚ್ಚಿನ ಖರ್ಚಿನ ಇಂಧನಕೇಳದು ದುಬಾರಿ ಸರ್ವೀಸು ಉಸ್ತುವಾರಿಗಳತುಳಿದು ತುಳಿದು ರಟ್ಟೆ ಕಾಲುಗಳಿಗೆ ಬಲಹತ್ತಿರ ಸುಳಿಯದು ಬೊಜ್ಜು ರೋಗ ರುಜಿನ ಇಲ್ಲ ಸೈಕಲ್ ಸವಾರಿ ಮಾಡಲು ಬಯಸದ ಮನಸುಕೆಲವರಿಗಂತೂ ಉಳಿದೇ ಬಿಟ್ಟಿದೆ ಇದಾಗಿ ಕನಸುಅಗೆಯುತ್ತಾ ಹೋದರೆ ಬಾಲ್ಯದ ನೆನಪುಗಳ ಗಣಿಸಿಗುವುದು ಎಲ್ಲರಿಗೂ ಸೈಕಲ್ ಕಲಿಕೆಯ ಮೆಲುಕ ಮಣಿ ಆಗುತ್ತಾ ಹೋದಂತೆ ಮನುಜರು ಸೋಮಾರಿವಿರಳವಾಯಿತು ಸೈಕಲ್ ಉಪಯೋಗ ಸವಾರಿವ್ಯಾಯಾಮ ಆರೋಗ್ಯ ನೀಡುತ್ತಿದ್ದ ಆ ಉಪಕಾರಿಈಗ ತುಕ್ಕು ಹಿಡಿದ ಕಂಬಿಗಳ ಆಸ್ತಿಪಂಜರ ಬರೀ. ಸಮಯದ ಪರಿವರ್ತನೆಯ ನಿಯಮಗಳಸಾರುವಂತಿದೆ ನಶ್ವರ ಜೀವನದ ತತ್ವಗಳಹೇಳುತ್ತಲಿದೆ ಏಳು ಬೀಳುಗಳ ಪಾಠಗಳವಿಪರ್ಯಾಸಗಳ ವೈಚಿತ್ರ್ಯ ವೈರುಧ್ಯಗಳ ಕಥೆಗಳ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಇದು ವರಕಾಣದ ಕೇಳದ ರೋಗಗಳಿಗೆ ಕೊಡುವ ಉತ್ತರಬನ್ನಿ ಎಲ್ಲಾ ಉಪಯೋಗಿಸೋಣ ಸೈಕಲ್ಲುಕಡಿಮೆ ಮಾಡೋಣ ಪೆಟ್ರೋಲು ಡಾಕ್ಟರ ಬಿಲ್ಲು ಸುಜಾತಾ ರವೀಶ್ ಮೈಸೂರು
“ಬೈಸಿಕಲ್ಲು” ವಿಶ್ವ ಸೈಕಲ್ ದಿನಕ್ಕೊಂದು ಕವಿತೆ ಸುಜಾತಾ ರವೀಶ್ ಮೈಸೂರು Read Post »
You cannot copy content of this page