ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ”

ಕಾವ್ಯ ಸಂಗಾತಿ ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” ಮಸೀದೆಯ ಅಜಾನ್ಚರ್ಚ್ ನಲ್ಲಿ  ಕೇಳಬೇಕು ಚರ್ಚ್ ನಲ್ಲಿಯ ಪ್ರಾರ್ಥನೆಮಂದಿರ ದಲ್ಲಿ  ಜರುಗಬೇಕು ಮಂದಿರ ದಲ್ಲಿ ಸೇರಿದ ಜನಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ನನ್ನ ಕಾಯಕರ್ಪುರ ವಾಗಬೇಕು ಮಂದಿರ ಮಸೀದೆಚರ್ಚ್ ನಲ್ಲಿ ಬೆಳಗಬೇಕು ನರನಾಡಿಗಳುನೀಲಾಂಜನಕೆ ಬತ್ತಿ ಯಾಗಬೇಕು ರಕುತ ಎಣ್ಣಿಯಾಗಬೇಕುಮನಸು ಬೆಣ್ಣಿಯಂತೆ ಕರಗಬೇಕು ಆ ಕಾಲಕ್ಕಾಗಿ ನನ್ನಕಣ್ಣುಗಳು ಕಾಯಬೇಕು ಎ.ಎಸ್. ಮಕಾನದಾರ ಗದಗ

ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” Read Post »

ಕಾವ್ಯಯಾನ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಶ್ರೀಶೈಲ ಮಾದಣ್ಣವರ ಗಜಲ್ ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲುಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳುಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರಬಾಳು ತೆನೆಗಟ್ಟಿಸಿದವರಾರು ಬದುಕು ಈಗ ಬಲು ಸರಾಗ ಡಾ. ಶ್ರೀಶೈಲ ಮಾದಣ್ಣವರ

ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ವಿದಾಯ ಹೇಳಲೇ ಕವಲೊಡೆದ ದಾರಿಗೆದೂರ ಸರಿಯಲೇ ಒಲವಿರದ ದಾರಿಗೆ ಘಮವಿಲ್ಲದ ಪಾರಿಜಾತ ನೊಂದಿದೆಕಳಚಿ ಹೋಗಲೇ ನಾಕವಿರದ ದಾರಿಗೆ ಪಡೆದುದೆಲ್ಲ ನಶ್ವರವಾಗಿ ಮೌನವಾದೆಮರೆತು ಬಿಡಲೇ ಸುಖವಿರದ ದಾರಿಗೆ ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆಹರಿದು ತೊರೆಯಲೇ ನಲಿವಿರದ ದಾರಿಗೆ ತಪ್ಪಿದೆ ಯಾನದ ಹರಿಗೋಲು ಮಾಜಾಕಳೆದು ಕೂಡಲೇ ಕರುಣೆವಿರದ ದಾರಿಗೆ ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

‌ ಕಾವ್ಯ ಸಂಗಾತಿ. ಜ್ಯೋತಿ ಮಾಳಿ ಬೆಳಗಾವಿ ಗಜಲ್ ಕುಳಿತು ಮಾತನಾಡಿಸಿ ಎದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆನಕ್ಕು ನಗಿಸಿ ಮನವನು ಗೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೋದರೆ ಹೋಗಿ ನಿಮಗೂ ಏನೊ ಅನಿವಾರ್ಯತೆಗಳುಇರಬಹುದುಭಾವ ಬಸಿದ ಕವಿತೆಗಳನು ಕದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ನೊಂದು ಬೆಂದು ನರಳಿದ ಗಾಯಗಳ ಗುರುತು ಸಿಗದಂತೆಅಳಿಸಿ ಹಾಕಿದಿರಿಕಲಕಿದ ಕೊಳ ತಿಳಿಯಾಗಿಸಿ ಇದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಬೇಸರಗೊಂಡ  ಜೀವಗಳಿಗೆ ಎಡೆಯ ತುಂಬ ಸಂತಸವನುಮನದಿ ಬಡಿಸಿದಿರಿಹಾಲುಣಿಸಿ ಹಾಲಾಹಲ ಮೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೃದಯ ಹೃದಯಗಳನು ಬೆಸೆದು ಹಂದರವನು ಹಾಕಿ ಕರೆದುಕೂರಿಸಿದಿರಿಜ್ಯೋತಿ ಬೆಳಕಿನಲಿ ತಮವು ಬಿದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಸುಕನಸು ಅವರ‌ ಗಜಲ್

ಕಾವ್ಯ ಸಂಗಾತಿ ಸುಕನಸು ಗಜಲ್ ಬಾ ಅಪರಿಚಿತರಾಗೊಣ  ಮತ್ತೊಮ್ಮೆ ಗೆಳೆಯನೀ ಮರೆತು ಸಹ ಸಿಗದಿರು ಇನ್ನೊಮ್ಮೆ ಗೆಳೆಯ ಸದಾ ನಿನ್ಹೆಸರ ಜಪಿಸುವ ಮನಕೇನು ಸಂತೈಸಲಿನೆನಪುಗಳ ಕೊಂದ್ಹೋಗೂ ಬಂದೊಮ್ಮೆ ಗೆಳೆಯ ಜೊತೆ ಇಟ್ಟ ಹೆಜ್ಜೆಗಳ ಲೆಕ್ಕ ಎಲ್ಲಿದೆ ಸಂತೃಪ್ತಿಯಷ್ಟೆಮುಂದೆಂದೂ ಸಿಗದಂತೆ ಶಪಥ ಮಾಡೊಮ್ಮೆ ಗೆಳೆಯ ಮನ ತಬ್ಬಿಬಾಗಿದೆ ತಳ್ಳಿ ಹೋದ ಕಾರಣ ತಿಳಿಯದೆತೊರೆದು ಹೋದ ನೆಪ ಹೇಳಿ ಹೋಗೊಮ್ಮೆ ಗೆಳೆಯ ಸುಮದ ಪರಿಮಳವೆ ಅಪಾರವಾಯಿತು ನವಿರಲ್ಲವಒಲವಿಲ್ಲ ಲಾಲಶೆಯಷ್ಟೆಯೆಂದು ಹೇಳೊಮ್ಮೆ ಗೆಳೆಯ ಸುಕನಸು

ಸುಕನಸು ಅವರ‌ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” ಬದುಕಿದ್ದಾಗ…ಅವನ ಮನೆಯ ಬಾಗಿಲು ತಟ್ಟಿದರೂತೆರೆದದ್ದು ಯಾರ ಮನಸ್ಸೂ ಅಲ್ಲ. ಹಸಿವೆಂದು ಕೈ ಚಾಚಿದಾಗಒಂದು ತುತ್ತು ಅನ್ನಕ್ಕೂ ಲೆಕ್ಕ ಹಾಕಿದ ಜನ,ದುಃಖವೆಂದು ಕಣ್ಣೀರು ಸುರಿಸಿದಾಗಒಂದು ಹೆಗಲನ್ನೂ ನೀಡದ ಬಂಧುಗಳು. ಅವನ ಉಸಿರು ಇರುವಾಗಅವನ ಮಾತಿಗೆ ಬೆಲೆ ಇರಲಿಲ್ಲ;ಉಸಿರು ನಿಂತ ಕ್ಷಣದಿಂದಲೇಅವನ ಮೌನಕ್ಕೆ ಬೆಲೆ ಕಟ್ಟಲು ಹೊರಟರು. ಚಿತೆಯ ಬೆಂಕಿ ಹೊತ್ತಿತು…ದೇಹ ಬೂದಿಯಾಯಿತು…ಆದರೆ ಸುಟ್ಟು ಹೋದದ್ದು ದೇಹವಲ್ಲ—ಸಮಾಜದ ಕಪಟ ಮುಖವಾಡ. ಅಂತ್ಯಸಂಸ್ಕಾರಕ್ಕೆಸಾವಿರ ಜನ ಸೇರಿದರು;ಬದುಕಿನ ದಾರಿಯಲ್ಲಿಅವನೊಂದಿಗೆ ನಡೆದದ್ದುಅವನ ನೆರಳು ಮಾತ್ರ. ಮೂರನೇ ದಿನ…ಹತ್ತನೇ ದಿನ…ವಾರ್ಷಿಕ…ನಂತರ ಜಾತ್ರೆ… ವೇದಿಕೆ ಕಟ್ಟಿದರು.ಹೂವಿನ ಹಾರ ಹೊದಿಸಿದರು.ಅವನ ಹೆಸರಿನಲ್ಲಿ ಧ್ವಜ ಹಾರಿಸಿದರು.ನಿನ್ನೆ ಅವನನ್ನು ತಿರಸ್ಕರಿಸಿದವರೇಇಂದು ಹೊಗಳಿಕೆಯ ಹೊಳೆ ಹರಿಸಿದರು. “ಅವನು ಮಹಾನ್…” ಎಂದರು.“ಅವನು ಸಮಾಜದ ಬೆಳಕು…” ಎಂದರು.“ಅವನಂತವರು ಅಪರೂಪ…” ಎಂದರು. ಆ ಮಾತುಗಳನ್ನು ಕೇಳಿಕಾಲವೇ ಕಹಿಯಾಗಿ ನಕ್ಕಿತು. ಏಕೆಂದರೆ—ಅವನು ಬದುಕಿದ್ದಾಗಈ ಒಂದು ಮಾತನ್ನಾದರೂಅವನ ಕಿವಿಗೆ ಹೇಳಿರಲಿಲ್ಲ! ಜಾತ್ರೆಯ ದಿನಹೊಟ್ಟೆತುಂಬ ಊಟ,ಕೈತುಂಬ ಕಾಣಿಕೆ,ವೇದಿಕೆಯ ಮೇಲೆ ಭಾಷಣ,ಕೆಳಗೆ ಚಪ್ಪಾಳೆ… ಜಾತ್ರೆ ಮುಗಿದ ಮೇಲೆ? ಹೂವು ಒಣಗಿತು.ವೇದಿಕೆ ತೆರವಾಯಿತು.ಜನರು ಮರೆಯಾದರು.ಅವನ ಹೆಸರೂಮತ್ತೊಮ್ಮೆ ಧೂಳಿನೊಳಗೆ ಮಲಗಿತು. ಇದೇನಾ ಸಂಸ್ಕಾರ? ಸಂಸ್ಕಾರವೆಂದರೆಸತ್ತವನಿಗೆ ಚಂದನ ಹಚ್ಚುವುದಲ್ಲ;ಬದುಕಿರುವವನ ಗಾಯಕ್ಕೆಒಂದು ಮುದ್ದಾದ ಮದ್ದು ಹಚ್ಚುವುದು. ಸಂಸ್ಕಾರವೆಂದರೆಚಿತೆಗೆ ಬೆಂಕಿ ಕೊಡುವುದಲ್ಲ;ಜೀವಂತ ಹೃದಯದಲ್ಲಿಭರವಸೆಯ ದೀಪ ಹಚ್ಚುವುದು. ಸಂಸ್ಕಾರವೆಂದರೆಸಾವಿನ ನಂತರದ ಜಾತ್ರೆಯಲ್ಲ;ಜೀವನದೊಳಗಿನ ಮಾನವೀಯತೆ. ಕೊರಡಿಗಿಲ್ಲಿ ಸಂಸ್ಕಾರಮರಣದ ನಂತರದ ಆಡಂಬರವಲ್ಲ—ಬದುಕಿರುವಾಗಲೇಮನುಷ್ಯನನ್ನು ಮನುಷ್ಯನಾಗಿ ಕಾಣುವಕರುಣೆಯ ಕಣ್ಣು. ಇಲ್ಲದಿದ್ದರೆ… ಪ್ರತಿ ವರ್ಷ ಜಾತ್ರೆ ನಡೆಯುತ್ತದೆ,ಪ್ರತಿ ವರ್ಷ ಭಾಷಣಗಳು ಮೊಳಗುತ್ತವೆ,ಪ್ರತಿ ವರ್ಷ ಹೊಗಳಿಕೆಯ ಹೂವುಗಳು ಬೀಳುತ್ತವೆ. ಆದರೆ… ಬದುಕಿದ್ದಾಗ ಕಡೆಗಣಿಸಿದಒಬ್ಬ ಮನುಷ್ಯನ ನಿಟ್ಟುಸಿರುಆ ಚಪ್ಪಾಳೆಗಳಿಗಿಂತ ದೊಡ್ಡದು. . -ಎನ್.ಜಯಚಂದ್ರನ್ .ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” Read Post »

ಕಾವ್ಯಯಾನ

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು “ಅವಳಿಗೆ” ಅವಳಿರಬೇಕಿತ್ತು ಅಲ್ಲಿಅವನ ಜೊತೆಯಲ್ಲಿಅವನ ಬದುಕಲ್ಲಿಅವನ ಬಾಳಿನಲ್ಲಿ  ಆಗಬೇಕಿತ್ತು ಅವಳಿಗೆಅವನ ಮಗನ ತಾಯಿಯಾಗಿಅವನ ಬಾಳ ಸಂಗಾತಿಯಾಗಿಅವನ ಹೃದಯದ ಬಡಿತವಾಗಿ ಬಯಕೆಯಿತ್ತು ಅವಳಿಗೆಬಾಹುಗಳಲ್ಲಿ ಬಂಧಿಯಾಗಲುಸುಖ ದುಃಖಗಳಲಿ ಜೊತೆಯಾಗಲುಅವನ ತುಟಿಗಳ ನಗುವಾಗಲು ಕನಸಿತ್ತು ಅವಳಿಗೆಅವನ ಕನಸಿಗೆ ಜೀವ ತುಂಬಲುಅವನ ಕವಿತೆಗೆ ಪದವಾಗಲುಮಧುಮಂಚದ ವದುವಾಗಲು ಅಂತರಂಗದ ಭಾವನೆಗಳುಹೊರಬರಲಾರದ ಕನಸುಗಳುಬಲಿಪಶುವಾದ ಹೂಗಳುಅವಲೊಳಗಿನ ಅವಶೇಷಗಳು ಪರಿಮಳ ಐವರ್ನಾಡು

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಮ್ಮ ನೆತ್ತರಿನ ಬಣ್ಣ ಒಂದೇಯಾಗಿದ್ದರೂಉತ್ತರ ಆಶೋತ್ತರಗಳು ಬೇರೆ ಬೇರೆಅಡಿ ಇಡುವ ನೆಲವು ಒಂದೇಯಾಗಿದ್ದರೂಗಮ್ಯ ತಾಣ ನಿಲ್ದಾಣಗಳು ಬೇರೆ ಬೇರೆ ಬುದ್ಧಿಶಕ್ತಿಯ ಲವಲೇಶವಿರದ ಪ್ರಾಣಿಗಳುಸಹಬಾಳ್ವೆಗೆ ತಮ್ಮನ್ನು ಒಡ್ಡಿಕೊಂಡಿವೆಸುತ್ತ ಸುಳಿವ ಗಾಳಿ ಒಂದೇಯಾಗಿದ್ದರೂಒಳ ನೋಟ ಒಕ್ಕೂಟಗಳು ಬೇರೆ ಬೇರೆ ಭಾಷಣ ಬರವಣಿಗೆಯಲ್ಲಷ್ಟೇ ಸಮತೆಯಹೂರಣ ತೋರಣಗಳನ್ನು ಕಂಡಿದ್ದೇವೆಕುಡಿಯುವ ಜಲವು ಒಂದೇಯಾಗಿದ್ದರೂಯೋಚನೆ ಯೋಜನೆಗಳು ಬೇರೆ ಬೇರೆ ಒಡಹುಟ್ಟಿದವರೇ ಬೆಳೆದೊಡನೆ ಕಾದಾಡಿದಾಯಾದಿಗಳಾಗುವುದಿಲ್ಲಿ ಮಾಮೂಲಿಭಾರತೀಯರೆಂದೂ ಒಂದೇಯಾಗಿದ್ದರೂಇಲ್ಲಿ ಆಚಾರ ವಿಚಾರಗಳು ಬೇರೆ ಬೇರೆ ಸರ್ವಜನಾಂಗದ ತೋಟದಲ್ಲಿ ಕುಂಬಾರಶಾಂತಿ ಹುಡುಕಿ ಹುಡುಕಿ ಸೋತಿದ್ದಾನೆಭಾವೈಕ್ಯದ ಬಾವುಟ ಒಂದೇಯಾಗಿದ್ದರೂಜಾತಿ ಜೆಂಡಾ ಅಜೆಂಡಾಗಳು ಬೇರೆ ಬೇರೆ ಎಮ್ಮಾರ್ಕೆ

ಎಮ್ಮಾರ್ಕೆ ಗಜಲ್ Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಕವಿತೆ “ಸ್ವಪ್ನ ಸುಂದರಿ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಸ್ವಪ್ನ ಸುಂದರಿ” ನನ್ನ ಕನಸಲ್ಲಿ ಬಂದವಳು ನೀನು,  ಹೆಸರಿಲ್ಲ, ಊರಿಲ್ಲ,ಆದರೂಎಷ್ಟು ಹತ್ತಿರ ಇರುವೆ ನೀನುಕಣ್ಣಲ್ಲಿ ನಕ್ಷತ್ರ, ನಗುವಲ್ಲಿ ಹುಣ್ಣಿಮೆ,  ಮಾತಲ್ಲಿ ಮಲ್ಲಿಗೆ ಪರಿಮಳವನುಹೊತ್ತು ತಂದಿರುವೆ ಏನು.? ನೀನು ನಡೆದರೆ ಹೂವು ಅರಳಿಹುದುನೀನು ನೋಡಿದರೆ ಮಳೆ ಬರುವುದು  ಸುಮ್ಮನೆ ಒಮ್ಮೆ ನೀ ಕೈ ಬೀಸಿದರೂ  ನನ್ನ ಇಡಿ ದಿನ ಹಬ್ಬವಾಗುವದು. ವಾಸ್ತವದಲ್ಲಿ ಸಿಗಲಾರೆನೋ ಗೊತ್ತಿಲ್ಲಆದರೂ ಕನಸಲ್ಲಿ ಪ್ರತಿ ರಾತ್ರಿಭೇಟಿಯಾಗುವೆನು ನಿನ್ನನು“ನೀನೆ ನನ್ನ ಸ್ವಪ್ನ ಸುಂದರಿ”ನಿದ್ದೆಯಲ್ಲೆ ಪದೇ ಪದೇ ಹೇಳುವೆ ರಿ. ನೀನು ಕನಸೆ ಆದರೂನನಸಾಗಿಸಲು ಬರದೆ ಇರುವೆ ಏನು?ಆದರೂ ಆ ಕನಸೆ ನನ್ನ ಬದುಕಿಗೆ ಬೆಳಕುಒಂದು ದಿನ ಆ ಕನಸುನಿಜವಾಗುವುದಲ್ಲವೇನು!ಆಗಲೆಂದು ಆ ದೇವರಲ್ಲಿಕೇಳುತ್ತಿರುವೆನು ನಾನು. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಕವಿತೆ “ಸ್ವಪ್ನ ಸುಂದರಿ” Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಎತ್ತ ಸಾಗುತ್ತಿದೆ” ಎತ್ತ ಸಾಗುತ್ತಿದೆ ನವ ಸಮಾಜಸಮಾನತೆ ಗಾಳಿಗೆ ತೂರಿನಾಗರಿಕತೆಯ ಕುರುಹುಗಳ ಅರಿಯದೆಮಾನವೀಯತೆಯ ಬೆತ್ತಲಾಗಿಸಿದೆ . ಅರೆಬೆತ್ತಲೆ ಮೈ ಮನಮನಸಾ ಇಚ್ಛೆಯ ಮೆರವಣಿಗೆಸಾಮರಸ್ಯ ಕುರುಡಾಗಿಸಿವಿಕೃತ ಮನಸ್ಸಿನ ಅನಾವರಣ. ನಶೆಯ ಗುಂಗಲಿಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದುಜವಾಬ್ದಾರಿ ಮರೆತುಕರುಳ ಕುಡಿಗಳು ಹೊಂಚು ಹಾಕುತ್ತಿವೆ. ಬಿಕೋ ಎನ್ನುತ್ತಿವೆ ಹಳ್ಳಿ ಹಾಡುಹೂಬಳ್ಳಿ ಗಳು ಮುಳ್ಳು ಮೊನಚಾಗಿಹಿರಿಯ ಜೀವಗಳು ಹಪಹಪಿಸುತ್ತಿವೆಜೀವ ಕೊಂಡಿ ಕಳಚುತಿದೆ. ಎಲ್ಲೆಂದರಲ್ಲಿ ಕಾರ್ಖಾನೆಕೆಲಸದ  ಆಸೆಗೆ ಭೂಮಿ ಮಾರಿಕೊಂಡುಉಸಿರಾಡಲು ಕಲುಷಿತ ಗಾಳಿಹೊಟ್ಟೆ ಹೊರೆಯಲು ಜೀತದಾಳು. ರಕ್ತ ಸಂಬಂಧಕೆ  ಆಗುಂತಕರಾಗಿತಮ್ಮವರನೆ ಹೆಣವಾಗಿಸಿಮನೆಯಲ್ಲಿ ಹೂಳುವರೆಲ್ಲವಿಕೃತ ಮನಸುಗಳು. ಉಡ್ವೇಗಕೆ ತಲೆದೂಗಿಹಸುಳೆಗಳು ನರಳಾಟಕಾಮಂಧತೆಯ ಅನಾವರಣಅಕ್ರಮ ದಂದೆಗಳ ತಾಣ. ಮದ್ದು ಗುಂಡುಗಳ ಹಾವಳಿಕೆಂಡ ಮಂಡಲ ವಾಗಿಸಿದೆನೆತ್ತರು ಹರಿಸಿಒತ್ತರಿಸಿದ ನೋವು ಕೇಳುವವರಾರು. ಪ್ರಾರ್ಥನೆಯಲು ಹಿಂಸಾಚಾರಬೋಧನೆಯಲು ಭಿನ್ನಾಚಾರಉಂಡ ಮನೆಗೆ ಕನ್ನ ಹಾಕುವ ವಿಚಾರ ತಿಳಿಯುತ್ತಿಲ್ಲ ನವ ಸಮಾಜಕೆಹರುಕ ಬಟ್ಟೆ ತೊಟ್ಟುಮೈ ತೋರಿಸುತಬದ್ಧತೆ ಇಲ್ಲದ ಪರಿಪಾಠತರಾವರಿ ಮೋಹಕೆ ಬಲಿಯಾಗುತಿದೆ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ” Read Post »

You cannot copy content of this page

Scroll to Top