ಎ.ಹೇಮಗಂಗಾ ಅವರ ಗಜಲ್
ಕಾವ್ಯ ಸಂಗಾತಿ ಎ.ಹೇಮಗಂಗಾ ಅವರ ಗಜಲ್ ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋಕೊಂಚವೂ ದಯೆಯಿರದೇ ತುಳಿದು ಹೋದೆ ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !ತೋರಿದ ಅಸೀಮ ಒಲವನು ಜರೆದು ಹೋದೆ ನನಸಾಗದ ಕನಸುಗಳ ನೀ ಕಾಣದಿರು *ಹೇಮ*ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ ಎ. ಹೇಮಗಂಗಾ
ಎ.ಹೇಮಗಂಗಾ ಅವರ ಗಜಲ್ Read Post »









