ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ರವಿ ಸರ್ ಅವರ ಗಜಲ್ ಒಂದರಿಂದ ಪ್ರೇರಿತ ) ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆಲೋಪಗಳಿವೆಯೆಂದು ನಾ ಜರಿವ ಜಗದೊಳಗೂ ತುಸು ಚಂದವಿದೆ ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳುಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ ವರ್ಣನೆಗೂ ನಿಲುಕದ ಮಾತುಗಳಿಗಿಲ್ಲಿ ಬರವಿಲ್ಲ ನಿಜಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿನೋವು ತುಂಬಿದ ನಯನದೊಳಗೂ ತುಸು ಚಂದವಿದೆ ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »









