ಧಾರಾವಾಹಿ ಸಂಗಾತಿ- ಒಂಭತ್ತು ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ- ಒಂಬತ್ತುಜಯದೇವಿ ತಾಯಿಯ ಜೀವನ ವೃತ್ತಾಂತ ಜಯದೇವಿ ತಾಯಿಯವರ ಒಂದು ಅಪೂರ್ಣ ಕನಸು ……ನನಸಾಗಿತ್ತು…!!ಕಷ್ಟ ಕಾರ್ಪಣ್ಯಗಳನ್ನು ಮೌನವಾಗಿ ಸಹಿಸುತಮನದಾಳದ ಕಿಚ್ಚಿನಲಿ ಮಂಥನಗೊಂಡು ಉಲ್ಬಣಗೋಳ್ಳುತ್ತಿದ್ದ ಭಾವನೆಗಳನ್ನು ಮೊದಲ ಬಾರಿಗೆ ಕನ್ನಡ ಭಾಷೆಲ್ಲಿ ಬರೆದಾಗ ಆದ ಆನಂದ ಹೇಳತಿರದಾಗಿತ್ತು…..,!!. ಕನ್ನಡ ನುಡಿಗಳು ಅವರಿಗೊಂದು ಹೊಸ ಲೋಕದ ಬಾಗಿಲು ತೆರೆದವು. ವರ್ಷಗಳ ಕಾಲ ಮನದೊಳಗೆ ಸಂಗ್ರಹವಾಗಿದ್ದ ನಿಶ್ಶಬ್ದ ನೋವುಗಳು, ಪ್ರಾರ್ಥನೆಗಳು,ಮಾತನಾಡಲಾಗದ ಮಾತುಗಳು ಪದಗಳಾಗಿ ಹರಿಯಲಾರಂಭೀಸಿದವು….!! ಅವರು ಕನ್ನಡವನ್ನು ಅಪ್ಪಿಕೊಂಡದ್ದು ಕೇವಲ ಕಲಿಕೆಯ ಕಥೆಯಲ್ಲ,ಇದು ಸಾಹಿತ್ಯ ಲೋಕದ ವಿಜಯಗಾಥೆ! ಹೊಸ ಬೆಳಗಿನ ಉದಯ ಗಾಥೆ..!! ಕನ್ನಡ ಭಾಷೆಯನು ಗಾಢವಾಗಿ ಪ್ರೀತಿಸುತ್ತ….ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ನಡೆದರು ಕರ್ನಾಟಕ ವಿಶ್ವವಿದ್ಯಾಲಯವೇ ಅವರ ಬಳಿ ಬಂದು ಡಾಕ್ಟರೇಟ್ ಪದವಿಯನ್ನು ಕೊಡಮಾಡಿತು. ಸರ್ವಜ್ಞ ನಂತರ ಪ್ರಥಮ ಬಾರಿಗೆ ತ್ರಿಪದಿಯಲ್ಲಿ ಪುರಾಣವನ್ನು ನಿರ್ಮಿಸಿದರು… ಕನ್ನಡ ಸರಸ್ವತ ಲೋಕದ ಅನಘ್ನ ರತ್ನರಾಗಿ ಖ್ಯಾತಿ ಪಡೆದುಕೊಂಡವರು. ಕನ್ನಡ ಭಾಷೆಯನ್ನು ಕಲಿತ ಜಯದೇವಿ ತಾಯಿಯವರು ಅತ್ಯಂತ ವೇದಾವಿ ಭಾಷಣಕಾರ್ತಿಯಾಗಿ ಹೊರಹೊಮ್ಮಿದರು. ನಾಡಿನ ಮೂಲೆ ಮೂಲೆಗಳಿಂದ ಸುತ್ತಮುತ್ತಲು ಹಳ್ಳಿಗಳಿಂದ ಅವರಿಗೆ ಅವ್ಹಾನ ಬರಲು ಆರಂಭಿಸಿತು . ತಮ್ಮ ಮಾತುಗಳಿಂದ ಜನರ ಮನವನ್ನು ಪರಿವರ್ತಿಸಲಾರಂಭಿಸಿದರು. ಜೊತೆ ಜೊತೆಗೆಪತಿ ಮತ್ತು ಅತ್ತೆ ಸಂತಸದಿಂದ ಸಹಕರಿಸಲಾರಂಭಿಸಿದರು. ಸರಸ್ವತಿ ಮಂದಿರ ಸ್ಥಾಪನೆಯೊಂದಿಗೆ ಸ್ತ್ರೀಯರಿಗೆ ಶಿಕ್ಷಣ ಕೊಡಲು ಸೊಲ್ಲಾಪುರದಲ್ಲಿ ಪ್ರಾರಂಭಿಸಿದ್ದು.. ಅದು ಮಂದಗತಿಯಲ್ಲಿ ನಡೆದಿತ್ತು….ಆದರೆ ಜಯದೇವಿ ತಾಯಿಯವರು ಅಧ್ಯಕ್ಷತೆಯನ್ನು ವಹಿಸಿದ ಮೇಲೆ ಮೊದಲು ಸ್ತ್ರೀ ಶಿಕ್ಷಣದ ಅವಶ್ಯಕತೆಯನ್ನು ಹೆಚ್ಚು ಒತ್ತು ಕೊಡಲಾರಂಭಿಸಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ *ಒಂದೆರಡು ಭಾಷೆಗಳನ್ನು ಮಾತನಾಡಲು ಕಲಿಯುವುದು ಮಾತ್ರವಲ್ಲ ನಿತ್ಯ ಜೀವನದಲ್ಲಿ ಉಪಯೋಗವಾಗುವಂತಹ ಗೃಹ ಜ್ಞಾನ..ಸಾಯನ್ಯಕಲಿಕಯೊಂದಿಗೆ …,ಉಚ್ಚ ಶಿಕ್ಷಣವು ಮಹಿಳೆಗೆ ಸಿಗಬೇಕು. ಇಂಗ್ಲೀಷರು ತಮ್ಮ ಅನುಕುಲಕ್ಕೆ ಹಾಕಿದ ಗಿಳಿ ಪಾಠದ ಪದ್ಧತಿಯ ಶಾಲೆ ಬದಲಾಗಬೇಕು. ಸುಸಂಸ್ಕೃತ ಜೀವನ ನಡೆಸುವಂತಹ ಶಿಕ್ಷಣ ಸಿಗಬೇಕು. ಜೀವನದ ಎಲ್ಲಾ ಹಂತಗಳ ಅಧ಼ಃಪತನಕ್ಕೆ ಕಾರಣವಾದ ಅಜ್ಞಾನವನ್ನು ಹೊಡೆದು ಓಡಿಸಲು …..ಸಾಕ್ಷರತೆಯ ಅಸ್ತ್ರದಿಂದಲೇ ಸಾಧ್ಯ. ಹಸಿರು ಕ್ರಾಂತಿ ಹೊಟ್ಟೆಯ ಹಸಿವನ್ನು ಹಿಂಗಿಸಿದರೆ ಅಕ್ಷರದ ಕ್ರಾಂತಿಯು ಬುದ್ಧಿ ಹಸಿವನ್ನು ಅಡಗಿಸುವದೆಂದು*ಅಭಿಪ್ರಾಯ ಪಡುತ್ತಿದ್ದರು. 1930ರ ಸಮಯದಲ್ಲಿ ಸೊಲ್ಲಾಪುರದ ಕೋರ್ಟ್ ಮಾರ್ಷಲ್ ನಡೆದಿತ್ತು… ಹಲವಾರು ಜನರು ಬ್ರಿಟಿಷರ ಗುಂಡಿಗೆ ಬಲಿಯಾಗಿದ್ದರು. ಇದರಲ್ಲಿ ಮಹಿಳೆಯರು ಸೇರಿದ್ದರು. ಎಲ್ಲಿ ನೋಡಿದರಲ್ಲಿ ಅಸಹಕಾರ ಚಳುವಳಿಗೆ ಸಂಬಂಧಿಸಿದ ಗಲಭೆ ನಡೆದಿದ್ದವು . ಇಬ್ಬರು ಪೊಲೀಸರು ಹತರಾಗಿದ್ದರೆಂದರೆ ಕೇಳಬೇಕೆ.,… ಬ್ರಿಟಿಷರ ಕ್ರೌರ್ಯವೂ ಹೇಳತೀರದಾಗಿತ್ತು . ಧನಶೆಟ್ಟಿ ಹಾಗೂ ಇನ್ನು ಮೂರು ಜನರ ಮೇಲೆ ಮೊಕದಮೆ ಹುಡಿ ಗಲ್ಲಿಗೆರಿಸಲಾಗಿತ್ತು.ಈ ಶಿಕ್ಷೆಯನ್ನು ವಿರೋಧಿಸಿ ಪುಣೆ ಮುಂಬೈ, ಕನ್ನಡ ನಾಡಿನಲ್ಲಿಯೂ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆದಿದ್ದವು. ಈ ಹೋರಾಟಗಳಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನ ಜೊತೆ ತಾಯಿಯವರು ಬೆಂಬಲಿಸಿ ಉಗ್ರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 1932 ರಲ್ಲಿ ಬ್ರಿಟಿಷ್ ಸೈನಿಕರು ರಾಷ್ಟ್ರಧ್ವಜವನ್ನು ಅಪಮಾನಿಸಿದ್ದರಿಂದ ದ್ವಜ ಸತ್ಯಾಗ್ರಹ ನಡೆದು ಅಲ್ಲಿ ದೇಶದ ವಿವಿಧ ಪ್ರಾಂತಗಳ ಜನರು ಸೇರಿದ್ದರು ಅಲ್ಲಿ ನಡೆದ ಗಲಿಬಿಯಲ್ಲಿ ನೂರಾರು ಜನ ಕನ್ನಡಿಗರು ಬಂದಿತ್ತರಾಗಿದ್ದರು. ಈ ಸಂಘಟನೆಯು ಆರಂಭದಲ್ಲಿ ಹೆಚ್ಚಾಗಿ ಪುರುಷರೇ ಪಾಲ್ಗೊಳ್ಳುತ್ತಿದ್ದು ರಾಷ್ಟ್ರದ ಹಿತಕ್ಕಾಗಿ ಹೋರಾಡುವ ಮಹಿಳೆಯರಿಗೆ ಒಂದು ನಿರ್ದಿಷ್ಟವಾದ ಸಂಘಟನೆ ಇರ್ಲಿಲ್ಲ ನಂತರ ಮಹಿಳೆಯರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಜಯದೇವಿತಾಯಿ ಹಾಗೂ ಇನ್ನಿತರರು ರಾಷ್ಟ್ರೀಯ ಚಳುವಳಿ ತರಬೇತಿ ನೀಡುವ ಗುರಿಯನ್ನು ವಿಸ್ತರಿಸಿದರು . 1934ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷಣೆಯಾಗಿ ಹೋದರು. 1939 ರಲ್ಲಿ ಜಯದೇವಿ ತಾಯಿಯವರು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷರಾದರು 1938 ರಲ್ಲಿ ಜಯದೇವಿ ತಾಯಿಯವರು ಸೊಲ್ಲಾಪುರ .ಹುಬ್ಬಳ್ಳಿ ಧಾರವಾಡಗಳಲ್ಲಿ ಅಕ್ಕನ ಬಳಗವನ್ನು ಸ್ಥಾಪಿಸಿದರು ಆ ಮೂಲಕ ಶರಣರ ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಪ್ರಾರಂಭಿಸಿದರು. ಶರಣರ ಸಾಹಿತ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾ ಸಮಾಜದವರೊಂದಿಗೆ ಅದನ್ನು ತಿಳಿಹೇಳುತ್ತ ಅನುಭವ ಪಥದಲ್ಲಿ ಸಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ರಾಷ್ಟ್ರದ ಆಗು-ಹೋಗುಗಳ ಅರಿವು ಮೂಡಿಸಿ ರಾಷ್ಟ್ರೀಯತೆಯನ್ನು ಉತ್ತೇಜಿಸಲು ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ಜಯದೇವಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲಿಸಲು 1947ರಲ್ಲಿ ತಮ್ಮ ಮನೆಯಾದ ಜಯನಿಕೀತನದಲ್ಲಿ ಸೇವಾ ದಳದ ಪ್ರೌಢ ಶಾಖೆಯನ್ನು ಆರಂಭಿಸಿದರು. ಎರಡನೆ ಮಹಾ ಯುಧ್ಧದ ಸಂದರ್ಭದಲ್ಲಿ ಬ್ರಿಟಿಷರಿಗೆ ಸೈನಿಕರ ಅವಶ್ಯಕತೆ ಎದುರಾದಾಗ ದೇಶದಾದ್ಯಂತ ಬೆಟಾಲಿಯನ್ ಕಟ್ಟಲು ಜನರನ್ನು ಮತ್ತು ಪ್ರಮುಖರನ್ನು ಪ್ರೋತ್ಸಾಹಿಸುತ್ತಿದ್ದರು. ಇದರ ಪರಿಣಾಮವಾಗಿ ವಾರದ ಮಲ್ಲಪ್ಪನವರಿಗೆ ರಾವ್ ಬಹದ್ದೂರ್ ಪದವಿ ಕೊಟ್ಟರೆ….ಮಡಿಕೆ ಚನ್ನಬಸಪ್ಪನವರಿಗೆ ಮ್ಯಾಜಿಸ್ಟ್ರೇಟ್ ಪದವಿಯನ್ನು ಕೊಟ್ಟರು. ಸೊಲ್ಲಾಪುರದಲ್ಲಿ ಲಿಂಗಾಯತರು ಹೆಚ್ಚು ಇರುವುದರಿಂದ ಲಿಂಗಾಯತ ಬೆಟಾಲಿಯನ್ ಕಟ್ಟಲು ಪ್ರೇರೇಪಿಸಿದರು ಬ್ರಿಟಿಷರು .ಅಲ್ಲಿಯ ಸ್ಥಳೀಯ ಮುಖಂಡರಾದ ವಾರದ, ಮಡಕಿ ಲಿಗಾಡೆ,ತಂಬಾಕಿ ಮನೆತನಗಳ ಮೇಲೆ ಒತ್ತಾಯ ಬೀರಲು ಪ್ರಯತ್ನಿಸಿದರು. ಅದೇ ರೀತಿಯಾಗಿ ಲಿಗಾಡೆ ಅವರ ಆಸ್ತಿಯ ಮೇಲೆ ಋಣ ಭಾರ ಹೇರಿದ್ದೇವೆಂದು ಇದಕ್ಕಾಗಿ ಜಯದೇವಿ ತಾಯಿಯವರು ತಮ್ಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.ಅಂದಿನ ದಿನಗಳಲ್ಲಿ ಪ್ರಭಾವಿ ಭಾಷಣ ಕಾರ್ತಿ ,ಪ್ರಸಿದ್ಧಸಮಾಜ ಸೇವೆವಕಿಯಾದ ತಾಯಿಯವರು ಲಿಂಗಾಯತರನ್ನು ಇಂಗ್ಲಿಷ್ ಸೇನಾ ಪಡೆಗೆ ಸೇರಿಸಲು ಹುರಿದುಂಬಿಸುವಂತೆ ಭಾಷಣ ಮಾಡಲು ಕೇಳಿಕೊಂಡರು…… ಬ್ರಿಟಿಷ್ ಸರ್ಕಾರವು ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರಿಗೆ ವ್ಯಾಪಾರದ ಋಣಭಾರ ಕಡಿಮೆ ಮಾಡುವುದಾಗಿ ಆಮಿಷೆ ಒಡ್ಡಿತು…. ಪತ್ನಿ ಜಯದೇವಿ ತಾಯಿಯವರು ಲಿಂಗಾಯೆತರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರಯತ್ನಿಸುವಂತೆ ಕೇಳಿಕೊಂಡರು….. ಕೊನೆಗೆ ಲಿಂಗಾಯೆತರನ್ನು ಸಂಘಟಿಸಲೇಬೇಕೆನ್ನುವ ಆದೇಶವಿತ್ತರು ..!!!! ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು ….. ಬಲಾಡ್ಯ ಬ್ರಿಟಿಷರ ವಿರುದ್ಧ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ … ದೇಶಪ್ರೇಮವೆನೋ ನಿಜ…..ದೇಶ ಸ್ವಾಭಿಮಾನ ,ದೇಶಮಾತೆಗಾಗಿ ಬಲಿದಾನ-ತ್ಯಾಗ ಇವೆಲ್ಲ ದುಷ್ಟ ಬ್ರಿಟಿಷರ ಎದುರು ನಿರರ್ಥಕ … ಬ್ರಿಟಿಷರ ಬಲದ ಎದುರು ನಾವು ತೃಣ ಸಮಾನರು ವಿವೇಕತನವೆಂದರೆ ನಮ್ಮ ವ್ಯಾಪಾರವನ್ನು ನಮ್ಮ ಮನೆತನವನ್ನು ಉಳಿಸಿಕೊಳ್ಳುವುದರಲ್ಲಿ ಜಾಣತನವಿರುವದು ಇಲ್ಲದ್ದಿದರೆ ಹೇಳು ಹೆಸರಿಲ್ಲದಂತೆ ನಾಶವಾಗಿ ಹೋಗುವುದು ಖಚಿತ ಅನ್ನೋದು ದೃಢವಾಗಿ ನಂಬಿದವರು….ಹೀಗಾಗಿ ವೈಯಕ್ತಿಕ ಹಿತಾಸಕ್ತಿಯುತರಾಗಿದ್ದರು, ತನ್ನ ವ್ಯಾಪಾರದತ್ತ ಹೆಚ್ಚು ಗಮನವನ್ನು ಕೊಡುತ್ತಿದ್ದರು. ಹಾಗೆ ಜಯದೇವಿತಾಯಿಯವರಿಗೆ ಸೈನ್ಯ ಕಟ್ಟುವುದಕ್ಕಾಗಿ ಕೇಳಿಕೊಂಡಿದ್ದರು ಕೂಡಾ ಪತಿ ಚೆನ್ನಲ್ಲಪ್ಪನವರು. ಬ್ರಿಟಿಷರು ಜಯದೇವಿ ತಾಯಿಯವರಿಗೆ ಕೇಸರಿ-ಇ- ಹಿಂದ್ ಪದವಿಯನ್ನು ಕೊಡುವುದಾಗಿ ಮುಂದೆ ಬಂದರು. ಇದ್ಯಾವದಕ್ಕೂ ಅವರು ವಿಚಲಿತರಾಗಲಿಲ್ಲ. ಅದಕ್ಕಾಗಿ ದೊಡ್ಡ ಮೊತ್ತದ *ವಾರ್ ಫಂಡ*ನ್ನು ಕಟ್ಟಬೇಕಾಯಿತು. ಮನೆಯವರ ಯಾವ ಒತ್ತಡಕ್ಕೂ ಮಣಿಯದ ತಾಯಿಯವರು ರಾಷ್ಟ್ರೀಯ ಪ್ರೇಮ ಅಚಲವಾಗಿತು.. ಬ್ರಿಟಿಷರ ಆಮಿಷದ ಪ್ರಸ್ತಾವನೆ, ಹೊರಗೆ ನೋಡಲು ಗೌರವದ ಹೊದಿಕೆ ಹೊದ್ದಿದ್ದರೂ, ಒಳಗೆ ದೇಶದ ಏಕತೆಯನ್ನು ಕುಗ್ಗಿಸುವ ಕುಯುಕ್ತಿಯೇ ಆಗಿತ್ತು…!!ಆ ಕ್ಷಣದಲ್ಲಿ ಜಯದೇವಿ ತಾಯಿಯವರು ಮೌನವಾಗಿರಲಿಲ್ಲ.ಅವರಲ್ಲಿ ಹೊತ್ತಿ ಉರಿದದ್ದು ರಾಷ್ಟ್ರಪ್ರೇಮದ ಜ್ವಾಲೆ.“ಕೇಸರಿ-ಇ -ಹಿಂದ್” ಎಂಬ ಹೆಸರಿನಲ್ಲಿ ಅವರ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ಕುತಂತ್ರ ಅರಿತವರಾಗಿದ್ದರು. ದೇಶದ ಧ್ವಜಕ್ಕೆ ತೋರುವ ಆದರವು ತ್ಯಾಗದ ಸಂಕೇತ, ಧೈರ್ಯದ ಪ್ರತೀಕ, ತಾಯ್ನಾಡಿನ ಗೌರವ.ಬ್ರಿಟಿಷರು ಅಧಿಕಾರದ ಸಿಂಹಾಸನವನ್ನು ತೋರಿಸಿದರು,ಸ್ಥಾನಮಾನಗಳ ಸಿಹಿ ಮಾತುಗಳನ್ನು ಹೇಳಿದರೂ ತಾಯಿಯ ಹೃದಯಕ್ಕೆ ಕೇಳಿಸಿಕೊಂಡದ್ದು ಒಂದೇ ಶಬ್ದ —“ಭಾರತಮಾತೆಯ ಹಿತಾಸಕ್ತಿ….“ನನ್ನ ದೇಶದ ಏಕತೆಯನ್ನು ಮಸುಕುಗೊಳಿಸುವ ಯಾವ ಒಪ್ಪಂದಕ್ಕೂ ನಾನು ಸಮ್ಮತಿಸುವುದಿಲ್ಲ,”ಎಂದು ಅವರು ಅಟಲ ಧೈರ್ಯದಿಂದ ಹೇಳಿದರು. ಆ ನಿರಾಕರಣೆ ಸಾಮಾನ್ಯ ಪದವಿರೋಧವಲ್ಲ —ಅದು ಮಣ್ಣಿನ ಮಗಳು ತನ್ನ ತಾಯ್ನಾಡಿಗೆ ಕೊಟ್ಟ ಶಪಥ.ಆ ದಿನ ಅವರು ಆಮಿಷವನ್ನು ತಳ್ಳಿಹಾಕಿದಾಗ,ದೇಶಪ್ರೇಮಿಗಳು ಸಾಕ್ಷಿಯಾಗಿ ನಿಂದರು. ಅವರ ಎತ್ತಿದ ಧ್ವನಿಯಲ್ಲಿ ರಾಷ್ಟ್ರಪ್ರೇಮವು ಘೋಷವಾಗಿ ಪ್ರತಿಧ್ವನಿಸಿತು.ಅವರು ತೋರಿಸಿದ ಧೈರ್ಯ —ನಿಜವಾದ ದೇಶಭಕ್ತಿ ….ಹೃದಯದ ಆಳದಿಂದ ಹೊರಹೊಮ್ಮುವ ನಿಷ್ಠೆ; ಧೇಶಮಾತೆಗೆ ತೋರಿದ ಗೌರವ. . *ಬ್ರಿಟಿಷರ ಇಂಥ ಆಸೆ ಆಮಿಷಕ್ಕೆ ಒಳಗಾಗದೆ ಜಾತಿಯ ಹೆಸರಿನಲ್ಲಿ ಸೇನೆ ಕಟ್ಟುವುದು ದೇಶದ ಅಹಿತಕ್ಕೆ ಕಾರಣವಾಗುವುದೆಂದು…ಯಾವುದೇ ಭೀತಿಗೂ ತಲೆಬಾಗಲಿಲ್ಲ. ಬ್ರಿಟಿಷರ ಪ್ರತ್ತಸ್ಸಾವನೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರು . *ನಡೆಯಣ್ಣ ಇಡು ಹೆಜ್ಜೆ ಮುಂದೆ ದೃಢತನದಿಂದೆ!! ಕದಳಿಯ ಬನಹೊಕ್ಕು ಚಣ ಮಜಗಜದ ತಾಣಎದುರಿಗೆ ಬರುವದು ಕಾಡಕೋಣ ತೆಗೆಯಲು ಪ್ರಾಣ ಕದಡಿಯ ಎಂಟು ದಿಕ್ಕು ಎಂಟಾನೇಗಳ ಸೊಕ್ಕು ಕಾನನದೊಳಗೆ ಪಕ್ಕು ಮುರಿಯಬೇಕಾದರೆ ಸೊಕ್ಕುಹೀಗೆ ಬ್ರಿಟಿಷರ ಸೊಕ್ಕನ್ನು ಮುರಿಯಬೇಕು ಅನ್ನುವ ಕರೆಯನ್ನು ಸಾರ್ವಜನಿಕರಿಗೆ ಕೊಡುತ್ತಿದ್ದರು *ನಡೆದಾರಿಗೆ ಅಡ್ಡ ಬಂದಿತಣ್ಣ ಹೆಡೆ ತೆಗೆದಾಚಣ ಬಿಡುವದು ತನ್ನು ಕೆಂಪುಗಣ್ಣ ಅದುವೆ ನಾಗಣ್ಣ ನಂಜೀನ ಅಂಜಿಕೆ ಹೊಲ್ಲ ಕೆಂಜೆಡೆಯವನ ಚಲ್ವ ಸಂಜೀವನಿ ಮದ್ದು ಬಲ್ಲ ಹಿಂಜರಿಯುವುದೇಕೆ ಇನ್ನು ಹಸಿದು ಹುಲಿ ಬರುವ ದಲ್ಲಿ ತಾಯಿ, ಪಸರಿಸಿ ಬಾಯಿ ವಸುಧೆ ನಡುಗುವ ಗುಡುಗಿನ ಛಾಯೆ ಅದುವೆ ಮಹಾಮಾಯಿ ಜಯ ಸಿದ್ದರಾಮನ ಸಿದ್ದಿ ಮಂತ್ರದ ಧ್ಯಾನ ಶುದ್ಧ ಮನದಿಂದಲೇ ಸಾಧನ ಇದ್ದುಗೆದೆ ಕದಳಿಯ ಬನ* ಹಸಿದು ಬರುವ ಬ್ರಿಟಿಷರನ್ನು ಬಗ್ಗು ಬಡಿಯಲೆಂದೆ ಅಂಜದೇ ಅಳುಕದೇ ಕೆಂಜಡಿಯವನ ಸಂಜೀವಿನಿ ಮದಿನ ಮೇಲೆ ನಂಬಿಕೆ ಇಟ್ಟು ಮುಂದೆ ನಡೆ ಅಂತ ಜನರಿಗೆ ಕರೆ ಕೊಡುತ್ತಿದ್ದರು. ಭಾರತೀಯ ಸ್ವಾತಂತ್ರ ಹೋರಾಟ ಹಾಗೂ ಇನ್ನಿತರ ಚಳುವಳಿಗಳಲ್ಲಿ ಪುರುಷರೇ ಮುಖ್ಯ ಎದುರಿಸುತ್ತ ಬಂದಿದ್ದರು .ಅವರಿಗೆ ಭೌತಿಕವಾಗಿ ಮಹಿಳೆಯರ ಬೆಂಬಲವೂ ಇದ್ದಿತು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಅದಾಗಲೇ ಸಾಮಾಜಿಕ ಸುಧಾರಣೆ ಸ್ವಾತಂತ್ರ ಹೋರಾಟ ಶೈಕ್ಷಣಿಕ ಬೆಳವಣಿಗೆ ಹಾಗೂ ಮಹಿಳಾ ದಿನಾಚರಣೆ ಅಂತ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಯಲ್ಲಿ ಬಂದಿದ್ದರು. ಇದರೊಂದಿಗೆ ಗ್ರಾಮೀಣ ಭಾಗದ ಮಹಿಳೆಯರು ಸಹ ತಮ್ಮ ಮನೆಯ ಪುರುಷರಿಗೆ ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ನೈತಿಕ ಹಾಗೂ ಭೌತಿಕ ಬೆಂಬಲವನ್ನು ನೀಡುತ್ತಿದ್ದರು. ತಮ್ಮ ಮನೆಯವರ ಬೆಂಬಲದಿಂದ ರಾಷ್ಟ್ರೀಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು .ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕೆಂಬುದೇ ಬಹು ಮುಖ್ಯ ಉದ್ದೇಶ ವಾಗಿತ್ತು..ಪುರುಷರು ಸೆರೆವಾಸವನ್ನು ಅನುಭವಿಸಿದಾಗ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಮಹಿಳೆಯರ ಮೇಲಿತ್ತು .ಸತ್ಯಾಗ್ರಹ ರಚನಾತ್ಮಕ ಕಾರ್ಯಕ್ರಮಗಳು…ಚಳುವಳಿಯ ರೂಪರೇಷೆಗಳು ಮಹಿಳೆಯರ ಮನೋಬಲಕ್ಕೆ ಸೂಕ್ತವಾಗಿದ್ದು ಎಂದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಭೆಗಳನ್ನು ಕರೆಯಲು ಹೇಳುತ್ತಿದ್ದರು .ಅಂತಹ ಸಮಿತಿಗಳಲಿ ಜಯದೇವಿ ತಾಯಿಯವರು ಮುಂಚೂಣಿಯಲ್ಲಿ ಇರುತ್ತಿದ್ದರು ಈ ಚಳುವಳಿಯ ಸಂದರ್ಭದಲ್ಲಿ ಮಹಿಳೆಯರು ಗೋಖಲೆ ,ಮಾರ್ಗರೇಟ್ ಕಸಿನ್ಸ ಹಾಗೂ ಅನಿಬೆಸೆಂಟರ ಪ್ರಭಾವಕ್ಕೆ ಒಳಗಾಗಿದ್ದನ್ನು ನಾವು ಗಮನಿಸಬಹುದಾಗಿದೆ.ಬಹು ವರ್ಷಗಳಿಂದ ಮಹಿಳೆಯರು ತಮ್ಮ ಆರಂಭದ ಹೋರಾಟವನ್ನು ರಚನಾತ್ಮಕ ಕಾರ್ಯಗಳಿಗೆ ಸೀಮಿತಗೊಳಿಸಿಕೊಂಡಿದ್ದರು ನಂತರ ತಮ್ಮ ಕಾರ್ಯ ವ್ಯಾಪ್ತಿಯನ್ನು ಉಪ್ಪಿನ ಸತ್ಯಾಗ್ರಹ ಸ್ವದೇಶಿ ಚಳುವಳಿ ಮಧ್ಯಪಾನ ನಿಷೇಧ ದಂತ ಚಟುವಟಿಕೆ ವಿಸ್ತರಿಸಿದರು. ಕಾನೂನು ಭಂಗ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳದ ಕುರಿತು ರಾಷ್ಟ್ರೀಯ ನಾಯಕ ಯೋಚಿಸುವಂತಾಯಿತು. ಕರ್ನಾಟಕದಲ್ಲಿ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖ ಮಹಿಳೆಯರಲ್ಲಿ ಜಯದೇವಿತಾಯಿ ಲಿಗಾಡೆಯವರು ಒಬ್ಬರು ಇವರೊಂದಿಗೆ ಹಲವು ಮಹಿಳೆಯರು ಪಾಲ್ಗೊಂಡಿದ್ದರು…… ಮುಖ್ಯವಾಗಿ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ, ಕೃಷ್ಣ ಬಾಯಿ ಪಣಜಿ ಕರ್, ಅವರಂಥ ಮಹಿಳೆಯರು ತಮ್ಮ ಚಟುವಟಿಕೆಗಳನ್ನು ಪ್ರೆಸಿಡೆನ್ಸಿಯಾಚೆ ವ್ಯಾಪಕಗೊಳಿಸಿದರು. ಇದರಿಂದಾಗಿ ಕರ್ನಾಟಕದ ಪ್ರತಿ ಭಾಗಗಳಿಂದಲೂ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸಹತ್ತಿದರು ಬಳ್ಳಾರಿ ಸಿದ್ದಮ್ಮ, ನಾಗಮ್ಮ ಪಾಟೀಲ, ಸುಬ್ಬಮ್ಮಾ ಜೋಯಿಸ್, ಟಿ. ಸುನಂದಮ್ಮ, ಯಶೋದಮ್ಮ ದಾಸಪ್ಪ, ನಾಗರತ್ನಮ್ಮ ಹಿರೇಮಠ, ಪದ್ಮಾವತಿ ಬಿದರಿ, ಜಯದೇವಿತಾಯಿ ಲಿಗಾಡಿ ಶಕುಂತಲಾ ಕುರ್ತುಕೋಟಿ, ಚೆನ್ನಮ್ಮ ಹಳ್ಳಿಕೇರಿ ಇನ್ನೂ ಅನೇಕ ಮಹಿಳೆಯರು ರಾಜಕೀಯ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ
ಧಾರಾವಾಹಿ ಸಂಗಾತಿ-113 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಎರಡನೇ ಮಗಳು ತನ್ನ ಬಟ್ಟೆ ಬರೆ ಪುಸ್ತಕಗಳು ಹಾಗೂ ತನಗೆ ಅತ್ಯವಶ್ಯಕವಾಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಅನಾಥಾಶ್ರಮಕ್ಕೆ ಹೊರಡಲು ಅನುವಾದಳು. ಸುಮತಿ ಹಾಗೂ ಮೂರನೇ ಮಗಳು ಒಲ್ಲದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟರು. ಏಕೋ ಮಗಳನ್ನು ಬೀಳ್ಕೊಡುವಾಗ ಸುಮತಿಯ ಮನಸ್ಸು ಬಹಳ ಭಾರವಾಯಿತು. ಏನೋ ಅವ್ಯಕ್ತವಾದ ನೋವೊಂದು ಅವಳ ಹೃದಯವನ್ನು ಹಿಂಡಿತು….”ವಾರಕ್ಕೊಮ್ಮೆ ನಾನು ಬರುತ್ತೇನೆಲ್ಲವೇ ಅಮ್ಮಾ …. ವಾರದಲ್ಲಿ ಒಂದು ದಿನ ನಿಮ್ಮ ಜೊತೆ ಕಳೆಯುತ್ತೇನೆ….ದಯವಿಟ್ಟು ನೊಂದುಕೊಳ್ಳದೆ ನಸುನಗುತ್ತಾ ನನ್ನನ್ನು ಕಳುಹಿಸಿ ಕೊಡು”…. ಎಂದು ಮಗಳು ಹೇಳಿದಾಗ, ಅವಳನ್ನು ಅಪ್ಪಿ, ಹಣೆಗೊಂದು ಹೂಮುತ್ತನ್ನು ಕೊಟ್ಟಳು. ತಂಗಿಯು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಸ್ವಲ್ಪ ಹೊತ್ತು ಹಾಗೇ ನಿಂತು ಬಿಟ್ಟಳು. ಗೇಟಿನ ಬಳಿ ಡ್ರೈವರ್ ಬಂದು….”ಬಾ ಮಗು ಹೊರಡೋಣ”…. ಅಮ್ಮ ಅಲ್ಲಿ ಕಾಯುತ್ತಿದ್ದಾರೆ… ಎಂದು ಹೇಳಲು, ಮಗಳು ಅವರ ಜೊತೆ ಹೊರಟಳು. ಮೆಟ್ಟಿಲುಗಳನ್ನು ಏರುತ್ತಾ ಅಮ್ಮನನ್ನು, ತಂಗಿಯನ್ನು ನೋಡಿ ಕೈಬೀಸಿದಳು. ಮಗಳು ಹೊರಟು ಹೋದ ನಂತರ ಸುಮತಿ ಮನೆ ಒಳಗೆ ಬಂದು ಕೆಲವು ನಿಮಿಷಗಳ ಕಾಲ ಸುಮ್ಮನೆ ಕುಳಿತುಬಿಟ್ಟಳು. ಮೂರನೇ ಮಗಳು ಸುಮತಿಯ ಪಕ್ಕ ಬಂದು ಕುಳಿತು ಹೆಗಲ ಮೇಲೆ ಕೈ ಇಟ್ಟು ತಾಯಿಗೆ ಸಮಾಧಾನ ಮಾಡುವಂತೆ ಹೆಗಲನ್ನು ತಟ್ಟಿದಳು. ದಿನಗಳು ಉರುಳಿದವು. ನಾಲ್ಕನೇ ಮಗಳು ಬೇಸಿಗೆ ರಜೆಯಲ್ಲಿ ಮನೆಗೆ ಬಂದಳು. ಅವಳು ಬಂದ ಮೇಲೆ ಮೂರನೇ ಮಗಳು ಲವಲವಿಕೆಯಿಂದ ಇರುವಂತೆ ಆಯ್ತು. ಸುಮತಿಯ ಜೊತೆ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಶಾಲೆಯ ಕೆಲಸದಲ್ಲಿ ಮತ್ತು ಮನೆಯ ಕೆಲಸಗಳಲ್ಲಿ ಸುಮತಿಗೆ ಸಹಾಯ ಮಾಡುತ್ತಿದ್ದರು. ಇತ್ತೀಚೆಗೆ ಯಾಕೋ ಸುಮತಿ ಇನ್ನೂ ಹೆಚ್ಚು ಬಳಲಿದಂತೆ ತೋರುತ್ತಿದ್ದಳು. ಶನಿವಾರ ಸಂಜೆಯಾದರೆ ಬಸ್ಸು ಬರುವ ವೇಳೆಗೆ ಮಗಳನ್ನು ಕಾಯುತ್ತಾ ಗೇಟಿನ ಬಳಿ ಇರುವ ಕಲ್ಲಿನ ಮೆಟ್ಟಿಲಿನ ಮೇಲೆ ಕುಳಿತುಕೊಳ್ಳುವಳು…. “ಅಮ್ಮಾ….ಅಕ್ಕ ಇಲ್ಲಿಗೇ ಬರುತ್ತಾಳಲ್ಲವೇ?…. ಮತ್ತೇಕೆ ನೀನು ಅಲ್ಲಿ ಗೇಟಿನ ಬಳಿ ಕುಳಿತಿರುವೆ…. ಬಾ ಒಳಗೆ”…. ಎಂದರೂ ಕೇಳದೇ ಸಂಜೆಯ ಬಸ್ಸು ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುವಳು. ಬಸ್ಸು ಬರುವುದು ಕೊಂಚ ತಡವಾದರೂ ಚಡಪಡಿಸುವಳು. ಎಷ್ಟು ಬೇಗ ಮಗಳನ್ನು ನೋಡುವೆನೋ ಎನ್ನುವ ಕಾತರದಲ್ಲಿ ಅವಳ ಕಣ್ಣುಗಳು ಕಾಯುತ್ತಿದ್ದವು. ಬಸ್ಸು ಬಂದು ನಿಂತ ಕೂಡಲೇ ಎದ್ದು ನಿಂತು ಜನರು ಇಳಿಯುದನ್ನೇ ನೋಡುತ್ತಾ, ಮಗಳು ಇಳಿದು ಬಂದ ಕೂಡಲೇ ಅವಳನ್ನು ಅಪ್ಪಿಕೊಂಡು ಅವಳೊಂದಿಗೆ ನಿಧಾನವಾಗಿ ಮೆಟ್ಟಿಲು ಇಳಿಯುವಳು. ಅಕ್ಕ ಬಂದಿದ್ದು ತಿಳಿದುಕೊಡಲೆ ತಂಗಿಯರು ಒಳಗಿನಿಂದ ಓಡೋಡಿ ಬಂದು ಖುಷಿಯಿಂದ ಅಕ್ಕನನ್ನು ಅಪ್ಪಿಕೊಳ್ಳುತ್ತಿದ್ದರು. ಅವಳು ಸಕಲೇಶಪುರದಿಂದ ಬರುವಾಗ ತಂಗಿಯರಿಗಾಗಿ ತಿಂಡಿ ಮತ್ತು ಅಮ್ಮನಿಗೆ ಹಣ್ಣುಗಳನ್ನು ತರುವಳು. ಅವಳು ಬಂದಳೆಂದರೆ ಮನೆಯಲ್ಲಿ ಹಬ್ಬದಂತೆ ಸಂಭ್ರಮ ಪಡುವರು. ರಾತ್ರಿ ಎಲ್ಲಾ ನಿದ್ರೆ ಮಾಡದೆ ನಾಲ್ವರೂ ಕುಳಿತು ಮಾತನಾಡುವರು. ಅವಳ ಕೆಲಸದ ಬಗ್ಗೆ, ಅವಳ ಓದಿನ ಬಗ್ಗೆ ಕೇಳಿ ತಿಳಿದುಕೊಳ್ಳುವರು. ಇವಳು ಕೂಡ ಎಲ್ಲರ ದಿನಚರಿಗಳನ್ನು ಕೇಳಿ ತಿಳಿದುಕೊಳ್ಳುವಳು. ಅಮ್ಮ ಇತ್ತೀಚೆಗೆ ಕ್ಷೀಣಿಸುತ್ತಿರುವುದನ್ನು ಗಮನಿಸಿ….. ಏಕಮ್ಮಾ… ಏನಾಯ್ತು?… ನಾನು ನಾಡಿದ್ದು ಹೊರಡುವಾಗ ನನ್ನ ಜೊತೆ ಬನ್ನಿ…. ನಾನು ಆಸ್ಪತ್ರೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ…. ಎಂದರೆ, ನನಗೇನೂ ಆಗಿಲ್ಲಪ್ಪಾ…. ಸ್ವಲ್ಪ ಆಯಾಸ ಇದೆ ಅಷ್ಟೇ…, ಎಂದಿನಂತೆ ಪಥ್ಯದಲ್ಲಿದ್ದೇನೆ… ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ನನಗೇನಾಗಿದೆ? ನೀವು ಮೂವರೂ ನನ್ನ ಜೊತೆ ಇದ್ದರೆ ಅದೇ ನನಗೆ ಸ್ವರ್ಗ…. ಅದಕ್ಕಿಂತ ಹೆಚ್ಚಿನದು ನನಗೇನು ಬೇಡ…. ಎನ್ನುವಳು ಸುಮತಿ. ಅವಳ ತಂಗಿ….ಹೌದು ಅಕ್ಕ… ಅಮ್ಮ ಈ ನಡುವೆ ಮೊದಲಿನಂತೆ ಲವಲವಿಕೆಯಿಂದ ಇಲ್ಲ….ಯಾಕೋ ತುಂಬಾ ಆಯಾಸವಾದಂತೆ ಕಾಣಿಸುತ್ತಾರೆ…. ಶಾಲೆಗೆ ಹೋಗುವಾಗಲೂ ಅಷ್ಟೇ, ಇಲ್ಲಿಂದ ಅಷ್ಟು ದೂರ ಹೋಗಬೇಕು…. ನಾವು ಅಲ್ಲೇ ಇದ್ದಿದ್ದರೆ ಚೆನ್ನಾಗಿತ್ತು…. ಅಮ್ಮ ಅಷ್ಟೊಂದು ದೂರ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತಿದೆ… ಅಲ್ಲಿ ಗುಡ್ಡ ಹತ್ತಿ ಬರುವಾಗ ಉಸಿರಾಡಲು ತುಂಬಾ ಕಷ್ಟಪಡುತ್ತಾರೆ…. ಸ್ವಲ್ಪ ಹೊತ್ತು ಅಲ್ಲಿ ದೇವಸ್ಥಾನದ ಆ ಮಾವಿನ ಮರದ ನೆರಳಲ್ಲಿ ಕುಳಿತು ದಣಿವಾರಿಸಿಕೊಂಡು ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾರೆ”…. ಎಂದು ತಂಗಿ ಹೇಳಿದ್ದನ್ನು ಕೇಳಿ ಅವಳ ಮುಖ ಬಾಡಿತು…. ಇನ್ನೂ ಸ್ವಲ್ಪ ದಿನ ಅಷ್ಟೇ… ನನ್ನ ಓದು ಮುಗಿಯಲಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸಿಗುತ್ತದೆ…. ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದು ಬೇಡ….ನಿಮ್ಮೆಲ್ಲರನ್ನು ನಾನು ನೋಡಿಕೊಳ್ಳುತ್ತೇನೆ….. ಎಷ್ಟೊಂದು ವರ್ಷಗಳಿಂದ ಅಮ್ಮ ಕಷ್ಟ ಪಟ್ಟು ದುಡಿದು ನಮ್ಮನ್ನು ಸಾಕುತ್ತಿದ್ದಾರೆ. ಈಗ ನೀನು ಅಮ್ಮನ ಜೊತೆ ಇರುವುದು ನನಗೆ ದೊಡ್ಡ ಸಮಾಧಾನ…. ಅಮ್ಮನ ಸಹಾಯಕ್ಕೆ ಜೊತೆಗೆ ನೀನಿರುತ್ತೀಯ ಎನ್ನುವ ಧೈರ್ಯ….. ಇನ್ನೂ ಒಂದೆರಡು ವರ್ಷಗಳಷ್ಟೇ…. ನನ್ನ ಡಿಗ್ರಿ ಮುಗಿಯಲಿ….. ಸರ್ಕಾರಿ ಕೆಲಸ ಸಿಗಲಿ ಎಂದು ನಾನು ಕಾಯುವುದಿಲ್ಲ…. ಯಾವುದಾದರೂ ಸಣ್ಣ ಸಂಸ್ಥೆಯಲ್ಲಿ ಕಡಿಮೆ ಸಂಬಳ ಸಿಕ್ಕರೂ ಸೇರಿಕೊಳ್ಳುತ್ತೇನೆ…. ನಂತರ ನೀನು ಕಾಲೇಜಿಗೆ ಹೋಗುವೆಯಂತೆ…. ಕೆಲವು ವರ್ಷಗಳಲ್ಲಿ ನೀನೂ ದುಡಿಯಲು ಪ್ರಾರಂಭಿಸುತ್ತೀಯಾ…. ಆಗ ಅಮ್ಮನಿಗೆ ಸಂಪೂರ್ಣ ವಿಶ್ರಾಂತಿ ಸಿಕ್ಕಂತಾಗುತ್ತದೆ….. ಇವಳೂ ಕೂಡ ನವೋದಯ ಶಾಲೆಯಲ್ಲಿ ಪಿಯುಸಿ ಯವರೆಗೂ ವಿದ್ಯಾಭ್ಯಾಸ ಮುಗಿಸಿ ಬಂದರೆ, ನಂತರ ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ನಾವಿಬ್ಬರೂ ಇರುತ್ತೇವೆ…. ಎಂದು ಮಗಳು ಹೇಳಿದಾಗ, ಸುಮತಿ ಮೂವರು ಮಕ್ಕಳನ್ನು ಅಪ್ಪಿಕೊಂಡು,….”ನೀವಿರುವಾಗ ನನಗೇನು ಚಿಂತೆ ಮಕ್ಕಳೇ….. ನನ್ನ ಕೈಲಿ ಆಗುವರೆಗೂ ನಾನು ದುಡಿಯುತ್ತೇನೆ…. ನಿಮ್ಮ ಈ ಮಾತುಗಳನ್ನು ಕೇಳಿ ನನ್ನ ಹೃದಯ ಹಗುರವಾಯಿತು…. ಇಷ್ಟು ವರ್ಷ ಕಷ್ಟಪಟ್ಟಿದ್ದು ಸಾಕಾಗಿದೆ…. ನಿಮ್ಮ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯಿಂದ ಕಳೆಯುವಂತಾದರೆ ಸಾಕು…. ಬನ್ನಿ ಎಲ್ಲರೂ ಊಟ ಮಾಡೋಣ…. ನಿಮಗೆಲ್ಲರಿಗೂ ಇಷ್ಟವಾದ ಅಡುಗೆಯನ್ನು ಮಾಡಿದ್ದೇನೆ”…. ಎಂದು ಹೇಳಿ ಸುಮತಿ ಅಡುಗೆ ಮನೆಯ ಕಡೆ ನಡೆದಳು. ಮೂವರು ಹೆಣ್ಣುಮಕ್ಕಳೂ ಅಮ್ಮನನ್ನು ಹಿಂಬಾಲಿಸಿದರು.
ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಪುಣೆ
ಶರಣರ ಸಂಗಾತಿ “ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು ಬಸವೋತ್ತರ ಕಾಲದ ಹತ್ತೊಂಬತ್ತನೆಯ ಶತಮಾನದ ಮಹಾತಪಸ್ವಿ ಶ್ರೀ ಅಥಣಿಯ ಮುರುಗೇಂದ್ರ ಸ್ವಾಮಿಗಳ ಪಡಿನೆರಳು ಅವರ ಕೃಪಾಕಟಾಕ್ಷದಲ್ಲಿ ಲಿಂಗ ಹಸ್ತದ ಆಶೀರ್ವಾದದಿಂದ ಜಗವ ಬೆಳಗುವ ಧೈತ್ಯ ಚೇತನ ರಾಜಯೋಗಿ ಬೀಳೂರು ಗುರುಬಸವ ಸ್ವಾಮಿಗಳು. ಕಲಬುರ್ಗಿ ಸಮೀಪದ ಹತ್ತಿರವಿರುವ ಹಂಗರಗಿ ಎಂಬ ಊರು ಇದೆ ಆ ಊರಿನ ಶ್ರೇಷ್ಠ ಸದ್ಗುಣ ಮಣಿಯಾದ ರಾಮನಗೌಡ ಮತ್ತು ಚೆನ್ನಮ್ಮ ಎಂಬ ಲಿಂಗಾಯತ ಬಣಜಿಗ ದಂಪತಿಗಳ ಉದರದಿಂದ ಜನಿಸಿ ಬಂದ ಶಿಶುವೇ ಶ್ರೀ ಗುರುಬಸವ ಶಿವಯೋಗಿಗಳು.1843ರಲ್ಲಿ ರಾಮನಗೌಡ ಮತ್ತು ಚೆನ್ನಮ್ಮನ ಉದರದಿಂದ ಜನಿಸಿದ ಮಗುವಿನ ಮೊದಲ ಹೆಸರು. ಈ “ಜೀವಪ್ಪ” ಎಂಬ ಮಗು ಬಡ ಕುಟುಂಬದಲ್ಲಿ ನಾಲ್ಕನೆಯವ. ಈ ಮಗು ಅತ್ಯಂತ ಚಿರದ್ರೂಪಿ, ಸುಗುಣ ಚಾಣಾಕ್ಷ ದಷ್ಟ ಪುಷ್ಟ ಚುರುಕಾಗಿದ್ದನು. ನೋಡುವವರ ಕಣ್ಮನಗಳನ್ನು ಸೆಳೆಯುವ ಆಕರ್ಷಕ ಬಾಲಕ ಜೀವಪ್ಪನದು. ಬಾಲ್ಯ ಮತ್ತು ಬಡತನ ——————- ಬಾಲಕ ಜೀವಪ್ಪನು ಉಂಡು ತಿಂದು ಅಡ್ಡಾಡುವ ವಯಸ್ಸಿನಲ್ಲಿ (4-5 ವರ್ಷ) ಹಂಗರಗಿ ಗ್ರಾಮದಲ್ಲಿ ಭೀಕರ ಬರಗಾಲ ಕಾಲಿಟ್ಟಿತು. ಆ ಭಾಗದಲ್ಲಿಯ ಜೀವಿಗಳಿಗೆ ಊಟಕ್ಕೆ ಆಹಾರ ಇಲ್ಲದಾಯಿತು ಕುಡಿಯಲು ನೀರಿಲ್ಲದಾಯಿತು. ಅನ್ನ ನೀರಿಲ್ಲದೆ ಜೀವ ಬಿಡುವ ಪ್ರಸಂಗ ಬಂದೊದಗಿತು. ಆ ಬರಗಾಲ ಅತ್ಯಂತ ಭೀಕರವಾಗಿತ್ತು ಜನತೆಗೆ ಅನ್ನ, ನೀರು ಆಹಾರ ದೊರೆಯದೆ ಕೆಲವರು ಪ್ರಾಣ ಕಳೆದುಕೊಂಡರು,ಹಲವರು ಊರು ಬಿಟ್ಟು ಹೋದರು. ಊರು ಬಿಟ್ಟು ಹೊರಟವರಲ್ಲಿ ರಾಮನಗೌಡರು ಒಬ್ಬರು, ಮಡದಿ ಮಕ್ಕಳನ್ನು ಕರೆದುಕೊಂಡು ಊರೂರ ಅಲೆಯುತ್ತಾ ಅಫ್ಜಲಪುರಕ್ಕೆ ಬಂದು ನೆಲಿಸಿದರು. ಅಲ್ಲಿ ಕೆಲವು ದಿನ ಕಾಲ ಕಳೆದು, ಮತ್ತೆ ಕೆಲಸ ಹುಡುಕುತ್ತ ಹೊಟ್ಟೆ ಪಾಡಿಗಾಗಿ ಮತ್ತೆ ಊರು ಅಲೆಯುತ್ತಾ ಸಿಂದಗಿ ಊರಿಗೆ ಬಂದು ತಲುಪುತ್ತಾರೆ. ಸಿಂದಗಿಯ ವಿರಕ್ತಮಠದ ಅಧಿಪತಿಗಳಾದ ಶ್ರೀ ಷಣ್ಮುಖ ಸ್ವಾಮಿಗಳು ನೀವು ಯಾರು ಏತಕ್ಕಾಗಿ ಬಂದಿರಿ ಎಲ್ಲ ಸಮಾಚಾರವನ್ನು ವಿಚಾರಿಸಿ ತನ್ನಲ್ಲೇ ಕೆಲವು ದಿನ ಉಳಿಯಲು ಹೇಳಿದರು. ಶ್ರೀಗಳ ಆಶ್ರಯ ಪಡೆದ ರಾಮನಗೌಡರು ನಾಲ್ಕಾರು ದಿನ ಇದ್ದು ಜೀವನದ ಮುಂದಿನ ದಾರಿಯನ್ನು ಚಿಂತಿಸುತ್ತಾ ಚೆನ್ನಮ್ಮನಿಗೆ ಹೇಳುತ್ತಾರೆ ಈ ಚಿಕ್ಕ ಮಗ ಜೀವನ ಈ ಅಲೆದಾಟ ಮತ್ತು ಕಷ್ಟದ ಜೀವನವನ್ನು ಹೇಗೆ ಸಹಿಸಿಯಾನು ಆದ್ದರಿಂದ ಅವನನ್ನು ಈ ಮಠದಲ್ಲಿಯೇ ಬಿಟ್ಟು ನಾವು ಮುಂದೆ ಹೋಗೋಣ ಎಂದು ಹೇಳುತ್ತಾರೆ ಆಗ ಒಪ್ಪದ ತಾಯಿ ಕರುಳಿನ ಕುಡಿಯನ್ನು ಬಿಟ್ಟು ಹೋದ ಮಹಾ ಪಾಪಿ ನಾನಾಗುವುದೇ ಎಂದು ಬಿಕ್ಕಿ ಬಿಕ್ಕಿ ಅತ್ತಳು.ಕೊನೆಗೆ ತನ್ನ ನನ್ನ ಮಗ ಎಲ್ಲಿಯಾದರೂ ಇರಲಿ ಸುಖವಾಗಿರಲಿ ಎಂದು ಗಂಡನ ನಿರ್ಧಾರವನ್ನು ಒಪ್ಪಿ ಮಲಗಿದ ಕಿರಿ ಮಗನನ್ನು ಮಠದಲ್ಲಿ ಬಿಟ್ಟು ಮಕ್ಕಳೊಂದಿಗೆ ಮುಂದೆ ಹೊರಟು ಹೋದರು. ಇತ್ತ ಮರುದಿನ ಜೀವಪ್ಪ ತನ್ನ ಕುಟುಂಬದವರು ತಂದೆ ತಾಯಿ ಕಾಣದಾಗಲು ಹೆದರಿ ಮಠದಲ್ಲಿ ಹುಡುಕುತ್ತಾ ಅಳತೊಡಗಿದನು. ಅಂದಿನ ಮಠದೊಡೆಯರಾದ ಅಧಿಪತಿಗಳು ಶ್ರೀ ಷಣ್ಮುಖ ಸ್ವಾಮಿಗಳು ಸಂತೈಷಿ ಸಮಾಧಾನಪಡಿಸಿ ಕೆಲಸಕ್ಕೆ ಬೇರೆ ಕಡೆಗೆ ಹೋಗಿದ್ದಾರೆ ಎಂಟು ದಿನಗಳಲ್ಲಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಸಮಾಧಾನ ಪಡಿಸಿ ತಮ್ಮ ಶ್ರೀ ಮಠದಲ್ಲಿ ಇರಿಸಿಕೊಂಡರು. ಕೆಲವು ದಿನ ಕಳೆದ ನಂತರ ಮಗು ಜೀವಪ್ಪ ಗುರುವಿನ ಸೇವೆಯಲ್ಲಿ ತಂದೆ ತಾಯಿಗಳನ್ನು ಮರೆತು ಅಕ್ಷರ ಜ್ಞಾನ ಕಲಿಕೆ ಓದುವಿನಲ್ಲಿ ಕಾಲ ಕಳೆಯುತೊಡಗಿದನು. ಸುಂದರವಾದ ಜೀವಪ್ಪನನ್ನು ಚಿಕ್ಕವನಾಗಿದ್ದ ಕಾರಣ ಅವನ ಪಾಲನೆ ಪೋಷಣೆಗೆಂದು ಗುರುಗಳು ಊರಿನ ಸೆಟ್ಟರ (ಪಟ್ಟಣಶೆಟ್ಟಿ )ಅವರ ಮನೆತನದವರಿಗೆ ಜೀವಪ್ಪನ ಜವಾಬ್ದಾರಿ ಹೊರೆಯನ್ನು ವಹಿಸುತ್ತಾರೆ. ಮುಂದೆ ಜೀವಪ್ಪ ಪಟ್ಟಣಶೆಟ್ಟಿಯವರ ಮನೆಯಲ್ಲಿ ಸುಖದಿಂದ ಬೆಳೆಯುತ್ತಾನೆ. ಮಠಗಳ ಉಸ್ತುವಾರಿ —————- ಜೀವಪ್ಪಾ ದೊಡ್ಡವನಾದನೆಂದು, ಮತ್ತು ಶ್ರೀ ಷಣ್ಮುಖಸ್ವಾಮಿಗಳಿಗೆ ವಯಸ್ಸಾಯಿತು ಎಂದು ತಮ್ಮ ಜೊತೆಗೆ ಜೀವಪ್ಪನನ್ನು ಮಠಗಳ ವ್ಯವಹಾರವನ್ನು ಕೊಡಲು ನಿರ್ಧರಿಸಿದರು. ಜೀವಪ್ಪನನ್ನು ಮುಂದೆ ಇತ್ತು ಕೊಂಡು ಪ್ರಶಸ್ತವಾದ ಹೊಸ ಕಲ್ಮಠದ ಕಟ್ಟಡ ಕೆಲಸ ಸಂಪೂರ್ಣ ಮುಗಿಸುತ್ತಾರೆ. ಕಲ್ಮಠವು ಪೂರ್ಣವಾದ ಮೇಲೆ ಹಲವಾರು ಮಠದ ಕೆಲಸಗಳಿಗೆ ಜೀವಪ್ಪನನ್ನು ಸ್ವಾಮಿಗಳು ಉಸ್ತುವಾರಿಗೆಂದು ನೇಮಿಸುತ್ತಾರೆ. ಗುರುಗಳು ಹೇಳಿದ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಶ್ರದ್ಧೆಯಿಂದ ಜೀವಪ್ಪ ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿದ ಸಿಂಧಗಿ ಊರಿನ ಭಕ್ತರು ನೀಬ್ಬೆರಗಾಗಿ ಜೀವಪ್ಪನ ಕಾಯಕವನ್ನು ಶ್ಲಾಘಿಸುತ್ತಿದ್ದರು. ಗುರುಬಸವ ನಾಮಕರಣ ——————————- ಜೀವಪ್ಪನ ಗುಣ ಸ್ವಭಾವವನ್ನು ಕಂಡು ಸಂತಸಗೊಂಡ ಪೂಜ್ಯರು ಅವನಲ್ಲಿ ಅತ್ಯಂತ ಪ್ರೀತಿಯ ಅದರ ಭಾವದಿಂದ ಕಾಣಲಾರಂಭಿಸಿದರು. ಈಗ ಜೀವಪ್ಪನಿಗೆ 12 ವರ್ಷ . 12 ವರ್ಷದ ಬಾಲಕನನ್ನು ಗೆಳೆಯ ರಾಚಯ್ಯನ ಜೊತೆಗೆ ಷಣ್ಮುಖ ಸ್ವಾಮಿಗಳು ಸಂಖದ ಗುರುಗಳ ಕಡೆಗೆ ಕಳುಹಿಸಿಕೊಡುತ್ತಾರೆ ಗೆಳೆಯ ರಾಚಯ್ಯನೊಂದಿಗೆ ಬಂದ ಜೀವಪ್ಪನವರು ಇಂದಿನ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಂಖ ಗ್ರಾಮದಲ್ಲಿರುವ ವಿರಕ್ತಮಠದಲ್ಲಿ ಗುರುಗಳ ಅಣತಿಯಂತೆ ಗುರು ದಿಕ್ಷೆಯನ್ನು ಪಡೆದು ಗುರು ಸೇವೆಯಲ್ಲಿ ತೊಡಗಿದರು. ಇವರ ಸೇವಾ ಮನೋಭಾವವನ್ನು, ಕಾಯಕ ನಿಷ್ಠೆ ಗುರುಭಕ್ತಿಯನ್ನು ಕಂಡು ಸಂಕದ ಗುರುಗಳು “ಗುರುಬಸವ” ಎಂದು ಹೊಸ ನಾಮಕರಣ ಮಾಡಿದರು. ಮತ್ತು ಮಠದ ಅಧಿಕಾರವನ್ನು ತೆಗೆದುಕೋ ಎಂದು ಗುರುಬಸವರಿಗೆ ಹೇಳಿದರು. ಆಗ ಸ್ವತಃ ಗುರುಬಸವರೇ ಮಠದ ಅಧಿಕಾರವನ್ನು ರಾಚಯ್ಯನಿಗೆ ಕೊಡಿರಿ ಎಂದು ನಸುನಗುತ್ತಾ ಹೇಳಿದರು. ಎಳೆ ಹರಿಯದ ಆ ಗುರುಬಸವ ದೇವರು ತನ್ನ ಗೆಳೆಯನಿಗಾಗಿ ಮಾಡಿದ ಉದಾರತೆಯ ನಿಷ್ಕಾಮ ಭಾವ,ವಿರಕ್ತತೆ , ತ್ಯಾಗದ ವಿಷಯವನ್ನು ಅರಿತ ಸಂಖದ ಊರಿನ ಸಮಸ್ತರು ಆಶ್ಚರ್ಯದಿಂದ ಬೆರಗಾದರು. ಗೆಳೆಯ ರಾಚಯ್ಯನಿಗೆ ಮಠದ ಅಧಿಕಾರವನ್ನು ಒಪ್ಪಿಸಿ ಗುರುಗಳ ಆಜ್ಞೆಯಂತೆ ಮುಚ್ಚಂಡಿ ಮತ್ತು ಬೀಳೂರಿಗೆ ಹೋಗುತ್ತಾರೆ. ಮೊದಲು ಮುಚ್ಚಂಡಿಯಲ್ಲಿ ಕೆಲವು ದಿನ ಇದ್ದು, ಮುಂದೆ ಬೀಳೂರಿಗೆ ಹೋಗುತ್ತಾರೆ. ಬೀಳೂರಿನಲ್ಲಿ ವಿರಕ್ತಮಠ ಹಾಳು ಬಿದ್ದಿರುತ್ತದೆ ಅದಕ್ಕೆಂದೆ ಬೀಳೂರು( ಬಿದ್ದ ಊರು – ಹಾಲು ಬಿದ್ದ ಮಠವೊಂದಿತ್ತು ) ಎಂದು ಹೇಸರು ಬಂದಿರಬಹುದು, ಹಾಳು ಬಿದ್ದ ವಿರಕ್ತ ಮಠವನ್ನು ಅತ್ಯಂತ ಸುಪ್ರಸಿದ್ಧ ಮಾಡುವಲ್ಲಿ ಶ್ರೀ ಗುರುಬಸವ ಸ್ವಾಮಿಗಳು ಹಗಲಿರುಳು ಅತ್ಯಂತ ಪರಿಶ್ರಮ, ಕಷ್ಟಪಟ್ಟು ಕಂತಿ ಭಿಕ್ಷೆ ಬೇಡಿ, ಹೊಲ ಮೇಯುವ ಕೆಲಸ ಮಾಡಿ, ಅಲ್ಲಿಯ ಹಲವಾರು ಶರಣರ, ಶರಣೆಯರ ಸಹಕಾರ ಸಹಾಯದಿಂದ ಒಂದು ಹೆಸರಾಂತ ವಿರಕ್ತಮಠವನ್ನಾಗಿ ಮಾರ್ಪಡಿಸುತ್ತಾರೆ ಶ್ರೀ ಗುರುಬಸವ ಸ್ವಾಮಿಗಳು. ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಂಪರ್ಕದಲ್ಲಿ —————————————————————————- ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮಕಾಲೀನರಾದ ಶ್ರೀ ಗುರುಬಸವ ಸ್ವಾಮಿಗಳು ಸಮಾಜದ ಏಳಿಗೆಗಾಗಿ ಸಮಾಜದ ಉದ್ಧಾರಕ್ಕಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವಲ್ಲಿ ಸೈ ಎನಿಸಿಕೊಂಡ ಶ್ರೀ ಗುರುಬಸವ ಶಿವಯೋಗಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈಯುವದರ ಮೂಲಕ ಕಾರ್ಯ ಮಾಡುವುದನ್ನು ಕಂಡು ಅವರನ್ನು ಗಚ್ಚಿನ ಮಠಕ್ಕೆ ಬರ ಹೇಳುತ್ತಾರೆ. ಅಂದು ಅಥಣಿಯ ಗಚ್ಚಿನ ಮಠವೆಂದರೆ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮ್ಮುಖದಲ್ಲಿ ನಿತ್ಯ ಶಿವಯೋಗ ಅನುಭಾವ ಚಿಂತನಾ ಗೋಷ್ಠಿಗಳು ಜರುಗುತ್ತಿದ್ದವು. ಬಿದರಿ ಶಿವಕುಮಾರಸ್ವಾಮಿಗಳು, ಹುಲ್ಯಾಳ ಶ್ರೀಗಳು, ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಅವರ ತಂಡದಲ್ಲಿ ದೊಡ್ಡ ಧಡೂತಿ ಮೈಕಟ್ಟನ್ನು ಹೊಂದಿದ ಶ್ರೀ ಗುರು ಬಸವ ಸ್ವಾಮಿಗಳು ಸೇರಿಕೊಳ್ಳುತ್ತಾರೆ. ಶ್ರೀ ಗುರುಬಸವರ ದೈವಿಕ ಶಕ್ತಿಗೆ ಮಾರುಹೋದ ಭಕ್ತರು ಬೀಳೂರಿನ ಮೂರ ಅಂಕಣದ ಕೋಣೆಯ ಮುಂದೆ ಒಂದು ಮಠವನ್ನು ಕಟ್ಟಿಸುತ್ತಾರೆ. ಇವರ ಪ್ರಭಾವ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಬೆಳೆದಂತೆ ಇವರಿಗಾಗಿ ಕಟ್ಟಿಸಿದ ಮಠ ಸಣ್ಣದಾಗುತ್ತದೆ. ಅಥಣಿಯ ಮುರುಗೇಂದ್ರ ಶ್ರೀಗಳ ಮಾರ್ಗದರ್ಶನದ ಮೇರೆಗೆ ಭವ್ಯವಾದ ಮಠವನ್ನು ಕಟ್ಟಿಸುತ್ತಾರೆ. ಜತ್ತ ಮತ್ತು ಉಮರಾಣಿಯ ಸಂಸ್ಥಾನಿಕರು ಹತ್ತಾರು ಎಕರೆ ಭೂಮಿಗಳನ್ನು ಬೀಳೂರು ಮಠಕ್ಕೆ ದತ್ತಿಯಾಗಿ ಕೊಟ್ಟು ಪುನೀತರಾಗುತ್ತಾರೆ . ಅಸೂಹೆಯ ಕಿಚ್ಚು ಆರಿತು ————————————— ಬೀಳೂರು ಶ್ರೀ ಗುರುಬಸವವರ ಸ್ವಾಮಿಗಳ ಸಾಧನೆಯನ್ನು ಕಂಡು ದ್ವೇಷ ಮತ್ಸರದ ವ್ಯಕ್ತಿ ಗಣಪತಿಯೆಂಬುವನು ಶ್ರೀ ಗುರುಬಸವರು ಒಬ್ಬರೇ ಮಠದಲ್ಲಿದ್ದಾಗ ಗುರುಬಸವವರ ಚಾರಿತ್ರ್ಯಕ್ಕೆ ಕುಂದುಂಟು ಮಾಡಲು ಚೆನ್ನವ್ವ ಎಂಬ ವೇಶ್ಯೆಗೆ ಹಣ ಕೊಟ್ಟು ಗುರುಬಸವರಿರುವ ಕೋಣೆಗೆ ಕಳುಹಿಸಿದ. ಆ ವೇಶ್ಯೆಯ ಕೈಗಳ ಬಳೆಯ ಸಪ್ಪಳವನ್ನು ಆಲಿಸಿದ ಶ್ರೀ ಗುರುಬಸವವರು ಯಾರು ತಾಯಿ ಅಲ್ಲಿಯೇ ನಿಲ್ಲು ನಾನೇ ಹೊರಗೆ ಬರುತ್ತೇನೆ ಅವ್ವ ಎಂದರಂತೆ . ವೇಶ್ಯೆಯನ್ನು ತಾಯಿಯಾಗಿ ಸಂಭೋಧಿಸಿದಾಗ ತಾನು ತಪ್ಪು ದಾರಿ ತುಳಿಯುತ್ತಿದ್ದೇನೆ ಎಂದು ಚೆನ್ನವ್ವ ನಿಧಾನವಾಗಿ ಹೆದರಿ ದೈವದ ತೇಜೋವಧೆಗೆ ಹೊರಟಿರುವುದು ತಪ್ಪು ಎಂದು ತಿಳಿದು ಪರಿತಪಿಸಿ ಹಿಂದೆ ಸರಿದಳು. ಮುಂದೆ ವೇಶ್ಯೆಯ ಕಣ್ಣು ಹೋಗಿ ಭಿಕ್ಷೆ ಬೇಡಿ ಬದುಕುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ವೇಶ್ಯೆಯನ್ನು ಕಳಿಸಿದ ಆಗರ್ಭ ಶ್ರೀಮಂತ ಗಣಪತಿಯೆಂಬುವನ ವಂಶವು ನಿರ್ನಾಮವಾಯಿತು. ಗಣಪತಿಯ ಮಕ್ಕಳು ಅವನ ಕಣ್ಣ ಮುಂದೆ ತೀರಿಹೋದರು. ಬ್ರಹ್ಮ ರಾಕ್ಷಸ ಬಡೆದುಕೊಂಡ ಬಾಲಕನಿಂದ ಪಾಠ ಕಲಿತ ಶ್ರೀ ಗುರುಬಸವರು ———————————————————————————————- ಒಂದೊಮ್ಮೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ತಮ್ಮ ಜೊತೆಗೆ ಬಿದರಿ ಶಿವ ಕುಮಾರಶಿವಯೋಗಿಗಳು ಮತ್ತು ರಾಜಯೋಗಿ ಬೀಳೂರು ಶ್ರೀ ಗುರುಬಸವ ಸ್ವಾಮಿಗಳನ್ನು ಕರೆದುಕೊಂಡು ಅಥಣಿಯ ಪಕ್ಕದ ಹಳ್ಳಿಗೆ ಶ್ರಾವಣ ಮಾಸದ ಶಿವಾನುಭವ ಪ್ರವಚನಕ್ಕೆ ಹೋಗಿರುತ್ತಾರೆ. ಪ್ರವಚನ ಮುಗಿಸಿ ಮರಳಿ ಅಥಣಿಗೆ ಬರುವಾಗ ಕೃಷ್ಣಾ ನದಿ ತುಂಬಿ ಹರಿಯುತ್ತಿರುತ್ತದೆ. ಎತ್ತು ಮತ್ತು ಬಂಡಿಯಲ್ಲಿದ್ದ ಸ್ವಾಮಿಗಳು ಕೊಂಚ ದಿಗ್ಭ್ರಾಂತರಾಗುತ್ತಾರೆ . ನದಿ ಹೇಗೆ ದಾಟುವುದು. ಕೆಲ ಹೊತ್ತ ದಡದಲ್ಲಿಯೇ ಕುಳಿತು ಕೊಳ್ಳುತ್ತಾರೆ. ಏನೋ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಚಕ್ಕಡಿಯನ್ನು ಅಲ್ಲಿಯೇ ದಡದಲ್ಲಿ ಬಿಟ್ಟು ನದಿಯನ್ನು ದಾಟೋಣ ಎನ್ನುತ್ತಾರೆ. ಆಗ ಬಿದರಿ ಶ್ರೀಶಿವಕುಮಾರ ಸ್ವಾಮಿಗಳು ಮತ್ತು ಇತರ ಶಿಷ್ಯರು ಅಥಣಿಯ ಶ್ರೀ ಮುರುಗರೇಂದ್ರ ಸ್ವಾಮಿಗಳ ಮಾತಿಗೆ ಸಮ್ಮತಿಸಿ ಅವರ ಹಿಂದೆ ಹೋಗಲು ನಿರ್ಧರಿಸುತ್ತಾರೆ. ಆದರೆ ಮೈತುಂಬ ರೇಷ್ಮೆ ಬಟ್ಟೆ ಪೇಠಾ ಬಂಗಾರ ಹೊಂದಿದ ರಾಜಯೋಗಿ ಶ್ರೀ ಗುರುಬಸವ ಸ್ವಾಮಿಗಳು ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಜೊತೆಗೆ ಹೋಗುವದಿಲ್ಲ, ಚಕ್ಕಡಿಯ ಮಾಲಕನೊಂದಿಗೆ ದಡದಲ್ಲಿಯೇ ಕುಳಿತು ಮಧ್ಯ ರಾತ್ರಿ ಕೃಷ್ಣ ನದಿಯು ಇಳಿದ ಮೇಲೆ ಅಥಣಿಗೆ ಬಂದು ತಲುಪುತ್ತಾರೆ. ಬೆಳಿಗ್ಗೆ ಎಂದಿನಂತೆ ಎದ್ದು ಶ್ರೀಗಳ ಜೊತೆಗೆ ಕುಶಲೋಪರಿ ಮಾತನಾಡಿ ಬಹಿರ್ದೆಸೆಗೆ ಹೊರಟು ನಿಲ್ಲುತ್ತಾರೆ. ಆಗ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಅಪ್ಪವರೆ ನಿನ್ನೆ ನಿಮಗೆ ಅಸ್ತವ್ಯಸ್ತವಾಗಿದೆ ಬೇಗ ಹೋಗಿ ಬನ್ನಿ,ಸ್ನಾನ ಪೂಜೆ ಮುಗಿಸಿ ಪ್ರಸಾದವನ್ನು ಮಾಡೋಣ ಎನ್ನುತ್ತಾರೆ. ಆಗಲಿ ಎಂದು ಒಬ್ಬ ಸೇವಕನೊಂದಿಗೆ ಊರ ಹೊರಗೆ ಹೊರಟು ನಿಲ್ಲುತ್ತಾರೆ. ದಾರಿಯಲ್ಲಿ ಹೋಗುವಾಗ ಬೆಳಿಗ್ಗೆ ಆರರ ಮುಂಜಾವು ಶ್ರಾವಣದ ತುಂತುರ ಮಳೆ ಹನಿಯ ತಂಪು, ಆಗ ಒಂದು ಬಂಡಿಯಲ್ಲಿ ಹಿಂದೆ ಕುಳಿತಿದ್ದ ಬಾಲಕ ಶ್ರೀ ಬೀಳೂರು ಗುರುಬಸವ ಸ್ವಾಮಿಗಳನ್ನು ನೋಡಿ ಅವಹೇಳನ ಮಾಡುತ್ತಾ ಕಿಸಿಕಿಸಿ ನಗುತ್ತಾನೆ, ಶ್ರೀಗಳು ಹೆಚ್ಚಿನ ಮಹತ್ವವನ್ನು ನೀಡದೆ ಮುಂದೆ ಸಾಗುತ್ತಾರೆ, ಆಗ ಹುಡುಗ ಮತ್ತೆ ಇವರತ್ತ ಕೇಕೆ ಹಾಕಿ ನಗುತ್ತಾನೆ, ಸ್ವಲ್ಪ ಮಟ್ಟಿಗೆ ವಿಚಲಿತರಾದ ಪೂಜ್ಯರು ಅಲ್ಲಿರುವ ಜನರನ್ನು ವಿಚಾರಿಸುತ್ತಾರೆ, ಸಿಟ್ಟಿನ ಗುರುಬಸವ ಸ್ವಾಮಿಗಳು ಜನರು ಅಂಜುತ್ತಲೇ ಅಪ್ಪಾರಾ ಹುಡುಗ ಗಾಳಿ ಶಕ ಆಗೈತಿ, ಬ್ರಹ್ಮ ರಾಕ್ಷಸ ಮೈಯೊಳಗ ಹೊಕ್ಕಾನ ಏನು ಮಾಡಿದರೂ
ಧಾರಾವಾಹಿ-15 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಕುಟುಂಬ ಕಲಹವದು ಕುದುರೆ ಕದನದಿಂದ… ಕುಟುಂಬ ಕಲಹವದು ಕುದುರೆ ಕದನದಿಂದ… ಸೂರ್ಯನಿನ್ನೂ ಉದಯಿಸಿರಲಿಲ್ಲ. ನನ್ನೊಳಗೆ ಕದನ ಸೆಳೆತ ಉದಯಿಸಿಯಾಗಿತ್ತು. ಮಾಹಿಷ್ಮತಿಯ ಸೇನೆಗೆ ಸಾಧ್ಯವಾದಷ್ಟು ಶೀಘ್ರ ಸೋಲುಣಿಸುತ್ತೇನೆ ಎಂಬ ತವಕ ತಲೆಯೇರಿ ಕುಳಿತಿತ್ತು. ನೇಸರನ ನಸುಬೆಳಕು ಮಾಹಿಷ್ಮತಿಯ ಬುವಿನಾರಿಯನ್ನು ಸ್ಪರ್ಶಿಸುವ ಮಧುರ ಗಳಿಗೆಗೂ ಮೊದಲೇ ಕುದುರೆಯನ್ನು ಕಟ್ಟಿಹಾಕಿದ್ದ ಕಟ್ಟಾಳುಗಳನ್ನು ಕದನದಲ್ಲಿ ಕೊನೆಗಾಣಿಸುವ ರುಧಿರ ಗಳಿಗೆ ನನ್ನನ್ನಪ್ಪಿತು.ನಮ್ಮ ಚತುರಂಗ ಬಲ ಮಾಹಿಷ್ಮತಿ ಪಟ್ಟಣಕ್ಕೆ ಮುತ್ತಿಗೆ ಹಾಕಿತು. ಎರಡೂ ಪಡೆಗಳ ಮಧ್ಯೆ ಬಿಡುವಿರದ, ಎಡೆಯಿರದ ಕಾದಾಟ. ಕಂಡ ಕಂಡ ಕಡೆಯಲ್ಲೆಲ್ಲಾ ಬಾಣಗಳ ಆರ್ಭಟ. ಆನೆ ಕುದುರೆ ರಥಗಳ ಎಡೆಬಿಡದ ಓಡಾಟ. ಯಮರಾಜನಿಗದೋ ಸೈನಿಕರ ಸಾವಿನ ರಸದೂಟ.ನಾನಂತೂ ಯಾವುದಕ್ಕೂ ಅಳುಕದವನಾಗಿದ್ದೆ. ಇಂದಂತೂ ಜಯ ನಮ್ಮ ಸೈನ್ಯಕ್ಕೆ ಒದಗಲೇಬೇಕು ಎಂಬ ಹಠ ನನ್ನೊಳಗಿತ್ತು. ನನ್ನ ಈ ಬಗೆಯ ವೀರಾವೇಶ ನೀಲಧ್ವಜನ ಅರಿವಿಗೂ ಬಂದಿತ್ತು. ನನ್ನ ರಭಸವನ್ನು ತಾಳಿಕೊಳ್ಳುವ ತ್ರಾಣವದು ಅವನ ಸೇನೆಗೆ ಅದೆಲ್ಲಿತ್ತು!ಸೈನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಲೇ ಇದ್ದರು. ರಥಗಳು ಮುರಿದವು. ಗಜಶಿರಗಳು ಒಡೆದವು. ಕುದುರೆಗಳು ಧರಾಶಾಯಿಯಾದವು.ಅನಾಥಪ್ರಜ್ಞೆ ನೀಲಧ್ವಜನನ್ನು ಬಂದು ಅಪ್ಪಿದ್ದು ಆ ಗಳಿಗೆಯಲ್ಲಿ, ಸಹೋದರ ಸುತರನ್ನು ಕಳೆದುಕೊಂಡ ಹೀನ ಕ್ಷಣದಲ್ಲಿ. ಕುಗ್ಗಿಹೋದ ನೀಲಧ್ವಜ. ಹಿಂದಣ ಯುದ್ದದಲ್ಲಿ ಕಾಣದ ಹತಾಶೆ ಅವನೊಳಗೆ. ಯುದ್ಧವೇ ಬೇಡ ಎಂಬ ವೈರಾಗ್ಯ ಆತನಲ್ಲಿ ಮೂಡಿದಂತೆನಿಸಿತು ನನಗೆ. ಕೆಲವೊಮ್ಮೆ ಹಾಗೆಯೇ. ಬಂಧುಗಳಿರುವಾಗ, ನಮ್ಮವರೆನಿಸಿಕೊಂಡವರು ನಮ್ಮ ಜೊತೆಗೇ ಇರುವಾಗ ಅವರ ಮೌಲ್ಯ ನಮ್ಮರಿವಿಗೆ ದಕ್ಕುವುದಿಲ್ಲ. ಆದರೆ ಅವರನ್ನು ಕಳೆದುಕೊಂಡಾಗ ಇಡಿಯ ಬದುಕೇ ಪೂರ್ಣಶೂನ್ಯವಾಗಿ ನಮ್ಮನ್ನು ಆವರಿಸಿ ಕಾಡತೊಡಗುತ್ತದೆ. ಅದೇ ಬಗೆಯ ಭಾವತೀವ್ರತೆ ನೀಲಧ್ವಜನಲ್ಲಿ ಮೂಡಿಬಂತು. ಅದು ನನ್ನ ತಿಳಿವಳಿಕೆಗೆ ನಿಲುಕಿತು.ಇದ್ದಕ್ಕಿದ್ದಂತೆಯೇ ರೋಷಾತಪ್ತನಾದ ಮಾಹಿಷ್ಮತಿಯ ಅರಸ. ಮಡಿದ ತನುಜ ಅನುಜರ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಅವನಲ್ಲಿ ಮೂಡಿದ್ದಿರಬೇಕು. ಕೆರಳಿನಿಂತ. ಕಿಡಿಕಿಡಿಯಾದ. ವಿಚಿತ್ರವಾದ ಆವೇಶದಲ್ಲಿ ನನ್ನೊಡನೆ ಹೋರಾಟಕ್ಕಿಳಿದ. ನನ್ನಲ್ಲಿ ಈಗಲೂ ಕದನದ ಉಮೇದು ಅಳಿದಿರಲಿಲ್ಲ. ಬಾಣವನ್ನು ನಿರಂತರವಾಗಿ ಪ್ರಯೋಗಿಸಿದೆ. ಅದೊಂದು ಕ್ಷಣದಲ್ಲಿ ನೀಲಧ್ವಜ ಪೂರ್ಣಪ್ರಜ್ಞೆಯಿಂದ ವಿಮುಕ್ತನಾದ. ಮೂರ್ಛೆ ಹೋದ. ರಥದಲ್ಲಿಯೇ ಕುಸಿದು ಕೂತ. ಅವನ ಸಾರಥಿಗೆ ದೊರೆಯ ಸ್ಥಿತಿ ಮನದಟ್ಟಾಯಿತು. ರಥವನ್ನಲ್ಲಿಂದ ಓಡಿಸಿ ಅರಮನೆಯ ಬಳಿಗೆ ಒಯ್ದ.ರಾಜನೇ ಇಲ್ಲವಾದ ಮಾಹಿಷ್ಮತಿ ಸೇನೆಯಲ್ಲಿ ಗೊಂದಲ, ತಳಮಳ. ಒಡೆಯನಿಲ್ಲವಾದ ಸೈನಿಕರು ದೆಸೆದೆಸೆಗೆ ಓಡಿದರು. ಅವರ ಕಳವಳದ ಬೊಬ್ಬೆಯದು ನಮ್ಮ ಗೆಲುವನ್ನು ಸಾರಿಹೇಳುವ ವಿಜಯಘೋಷವಾಯಿತು. ನಾವು ಗೆದ್ದೆವು.ಅರಮನೆಯಲ್ಲಿ ಎಚ್ಚರಗೊಂಡ ನೀಲಧ್ವಜನಿಗೆ ಸೋಲಿನ ವಿಚಾರ ತಿಳಿಯಿತು. ಅವಮಾನವಾಯಿತು. ಮೊದಲೇ ಸಂಧಾನದ ಮೂಲಕ ಗೌರವಯುತವಾಗಿ ಕುದುರೆಯನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದವನು ತಾನು. ಆದರೆ ಆ ಬಳಿಕ ಕದನಕ್ಕಿಳಿದು ಉಳಿಸಿಕೊಂಡ ಮರ್ಯಾದೆಯನ್ನು ಮಣ್ಣುಪಾಲು ಮಾಡಿಕೊಂಡೆ ಎಂಬ ಅಪಮಾನಸುಳಿ ಅವನನ್ನು ಕೀಳರಿಮೆ ಕೊಳದಲ್ಲಿ ಮುಳುಗಿಸಿತು. ಅದಕ್ಕೆ ಕಾರಣಳಾದ ರಾಣಿ ಜ್ವಾಲೆಯ ಮೇಲೆ ಕೋಪ ಉಕ್ಕಿಬಂತು. “ನಿನ್ನೆಯೇ ಕುದುರೆಯನ್ನು ಪಾರ್ಥನಿಗೆ ಬಿಟ್ಟುಕೊಡುವ ನಿರ್ಣಯ ತಳೆದವನು ನಾನು. ಬಿಡಬೇಡ ಎಂಬ ತಪ್ಪು ಸಲಹೆ ಕೊಟ್ಟು ನನ್ನನ್ನು ಹಾಳುಮಾಡಿದೆಯಲ್ಲಾ! ನಿನ್ನ ಮಾತು ಕೇಳಿ ನನ್ನವರನ್ನು ಕಳೆದುಕೊಂಡೆ. ದುಷ್ಟೆ ನೀನು. ನಿಕೃಷ್ಟೆ ನೀನು. ಅತಿಕಷ್ಟ ಕೊಟ್ಟೆಯೆನಗೆ” ಎಂದು ಅವಳನ್ನು ಪರಿಪರಿಯಾಗಿ ಜರಿದ. “ನನ್ನ ಅರಮನೆಯಲ್ಲಿ ನೀನು ಇರಕೂಡದು” ಎಂದು ಆಜ್ಞಾಪಿಸಿದ.ಹೀಗೆ ಜ್ವಾಲೆಯೊಂದಿಗೆ ಜಗಳವಾಡಿ ಅವಳೊಂದಿಗಿನ ಬಂಧವನ್ನು ಮುರಿದ ನೀಲಧ್ವಜ ಬಂದದ್ದು ನನ್ನ ಬಳಿಗೆ. ನಮ್ಮ ಗೆಲುವನ್ನವನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡ. ಅಖಿಲ ವಸ್ತುಗಳನ್ನು ಸಮರ್ಪಿಸಿದ. ಅಶ್ವಮೇಧ ಯಾಗಕ್ಕಾಗಿ ಸಂಪದವನ್ನಿತ್ತ. ಬಗೆಬಗೆಯ ಧವಸಧಾನ್ಯಗಳನ್ನು ಬಂಡಿಬಂಡಿಗಳಲ್ಲಿ ತುಂಬಿಸಿ ತರಿಸಿ ಎದುರಿಗಿರಿಸಿದ. ಪಾಂಡವ ಸಾರ್ವಭೌಮತ್ವವನ್ನವನು ಸ್ವೀಕರಿಸಿದ. ಒಲವಿನಿಂದ ನನ್ನ ಬಳಿಗೆ ಬಂದು ನಮ್ಮದು ನಿಜ ಗೆಲುವು ಎನ್ನುವುದನ್ನು ಮನ್ನಿಸಿದ.ನನಗಂತೂ ಸಂತಸವಾಗಿತ್ತು. ಅಗ್ನಿಯ ಸಂಧಾನಕ್ಕೆ ಅನುಸಾರವಾಗಿ ಅವನು ಕುದುರೆಯನ್ನು ಬಿಟ್ಟು ಕಳುಹಿಸಿಕೊಟ್ಟಿದ್ದರೆ ಈ ಬಗೆಯ ಸಂಭ್ರಮ ಖಂಡಿತವಾಗಿಯೂ ನನ್ನದಾಗುತ್ತಿರಲಿಲ್ಲ. ಶಕ್ತಿಯನ್ನು ಪ್ರದರ್ಶಿಸಿ, ನೋವು ಬೇಗೆಗಳನ್ನು ದರ್ಶಿಸಿ ಪಡೆದ ಗೆಲುವಾದ್ದರಿಂದ ಇದಕ್ಕೆ ಮಹತ್ವ ಅಧಿಕ ಎನಿಸಿತು.ಆದರದಿಂದ ನೀಲಧ್ವಜನಿಗೆ ನಮಿಸಿದೆ. ಅಲ್ಲಿಂದ ಹೊರಡುತ್ತೇನೆಂದೆ. ಅವನೂ ನಮ್ಮ ಜೊತೆಗೆ ಬರುವುದಕ್ಕೆ ಸಿದ್ಧನಿದ್ದ. ಅವನನ್ನೂ ಜೊತೆಮಾಡಿಕೊಂಡು ನಾವು ಮುಂದೆ ಮುಂದೆ ಹೋದೆವು. ಹಯವದು ಚಲಿಸುತ್ತಿತ್ತು ನಮ್ಮ ಮುಂದೆ. ದಕ್ಷಿಣ ದಿಶೆಯೆಡೆಗೆ ಮುಖಮಾಡಿ ಹೊರಟಿತು ಆ ಕುದುರೆ.ನೀಲಧ್ವಜನಿಂದ ತಿರಸ್ಕೃತಳಾದ ಜ್ವಾಲೆಯೊಡಲಲ್ಲಿ ಅವಮಾನದ ಜ್ವಾಲೆಯೆದ್ದಿತ್ತು. ಇಷ್ಟೊಂದು ಅವಮಾನ ಮಾಡಿಸಿಕೊಂಡು ಇಲ್ಲಿರುವುದಾದರೂ ಏತಕ್ಕೆ ಎಂಬ ಭಾವ ತಳೆದ ಅವಳು ಅರಮನೆಯನ್ನು ಆ ಕ್ಷಣವೇ ತೊರೆದಳು. ಉನ್ಮುಖ ಹೆಸರಿನ ಸಹೋದರನಿದ್ದ ಅವಳಿಗೆ. ಅವನ ಮನೆಗೆ ಹೋದಳು.ಅಕ್ಕನನ್ನು ಅಕ್ಕರೆಯಿಂದ ಆದರಿಸಿದ ಉನ್ಮುಖ. ಅಕ್ಕನ ಆಕಸ್ಮಿಕ ಆಗಮನದ ಕಾರಣವೇನೆಂದು ಕೇಳಿದ. ನನ್ನೆದುರಿಗೆ ಕದನದಲ್ಲಿ ಮಕ್ಕಳನ್ನು ಕಳೆದುಕೊಂಡುದನ್ನು ತಮ್ಮನಿಗೆ ತಿಳಿಸಿದಳು. ಪತಿ ನೀಲಧ್ವಜ ಗೆಲುವಿಗೆ ಅಧಿಪತಿಯಾಗದಿರುವುದನ್ನು ನೋವಿನಿಂದ ಉಸುರಿದಳು. ತನ್ನ ಕುಟುಂಬದ ಹೀನಸ್ಥಿತಿಗೆ ಕಾರಣನಾದ ಅರ್ಜುನನ ಶಿರವನ್ನು ಕತ್ತರಿಸಿಹಾಕಬೇಕು ನೀನು ಎಂದು ಮನವಿ ಮಾಡಿಕೊಂಡಳು ತಮ್ಮನನ್ನು.ತನ್ನ ರೋಷದ ನುಡಿಗೆ ಅವನು ಸ್ಪಂದಿಸಿಯಾನು ಎಂಬ ನಿರೀಕ್ಷೆಯಿತ್ತು ಅವಳಲ್ಲಿ. ನಿರುಕಿಸಿದಳು ಜ್ವಾಲೆ ಉನ್ಮುಖನ ಮೊಗವನ್ನು “ನರನ ಶಿರವನ್ನು ನಾನು ತಂದೊಪ್ಪಿಸುವೆ ನಿನಗೆ” ಎಂಬ ಮಾತು ಅವನಿಂದ ಹೊರಹೊಮ್ಮುತ್ತದೆಂಬ ಭಾವದಲ್ಲಿ… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-30 ಸುಜಾತಾ ರವೀಶ್ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೩೦ ಬುಕ್ ಮಾಡಿದ್ದ ಬೈಕ್ ಬಂದಿದ್ದು ಅಷ್ಟರೊಳಗೆ ಪರ್ಮನೆಂಟ್ ಲೈಸೆನ್ಸ್ ಸಹ ಸಿಕ್ಕಿತ್ತು . ಆದರೆ ನನಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಬೈಕ್ ಪೂಜೆ ಮಾಡಿಸಿ ಮೈಸೂರಿನಿಂದ ರವೀಶ್ ಬೈಕ್ ಓಡಿಸಿಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಕೆಲವೊಮ್ಮೆ ಹಾಗೆ ಶುಕ್ರವಾರ ಸಕಲೇಶಪುರಕ್ಕೆ ಬರುತ್ತಿದ್ದರು ಶನಿವಾರ ಮಧ್ಯಾಹ್ನ ಆಫೀಸ್ ಮುಗಿದ ನಂತರ ಅವರ ಊರಿಗೆ ಬೈಕ್ ನಲ್ಲೆ ಹೋಗುತ್ತಿದ್ದೆವು. ಕೆಲವೊಮ್ಮೆ ಅವರು ಮೊದಲೇ ಬಂದು ಮೈಸೂರಿಗೆ ಸಹ ಬೈಕ್ ನಲ್ಲಿ ನಾಲ್ಕು ಐದು ಬಾರಿ ಬಂದಿದ್ದೇವೆ .ಹಾಗೆ ಬರುವಾಗ ಒಮ್ಮೆ ಸಕಲೇಶಪುರದಿಂದ ರಾಮನಾಥಪುರದ ಬಳಿ ಇರುವ ಇವರ ಊರಿನ ತನಕವೂ ಒಂದೇ ಸಮ ಮಳೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ಆ ಅನುಭವ ಇಂದಿಗೂ ಮರೆಯಲಾಗದಷ್ಟು ಮನಸ್ಸಿನಲ್ಲಿ ನಿಂತುಬಿಟ್ಟಿದೆ.ಇನ್ನು ಸಕಲೇಶಪುರದ ಮಳೆಯ ಬಗ್ಗೆ ಹೇಳದಿದ್ದರೆ ಖಂಡಿತ ಆಗುವುದಿಲ್ಲ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ ಕೆಲವೊಮ್ಮೆ ರಭಸ ಕೆಲವೊಮ್ಮೆ ಮೆತ್ತಗೆ ಅಷ್ಟೇ ದಿನವಿಡೀ ಸುರಿಯುತ್ತಲೇ ಇರುತ್ತಿತ್ತು ಮಳೆ ಅಂದರೆ ಪ್ರಾಣ ಬಿಡುವ ನನಗಂತೂ ಅಲ್ಲಿದ್ದ ಎರಡು ವರ್ಷವೂ ಒಂದು ರೀತಿ ಖುಷಿ ಕೊಟ್ಟಿತ್ತು. ಆದರೆ ಬಟ್ಟೆಗಳು ಒಣಗುತ್ತಿರಲಿಲ್ಲ ಒರೆಸಿಕೊಂಡ ಟವಲ್ ಹರವದಿದ್ದರೆ ಸಂಜೆಯ ವೇಳೆಗೆ ಕಪ್ಪಗೆ ಬೂಸ್ಟು ಬರುತ್ತಿತ್ತು .ಸಾಮಾನುಗಳಂತೂ ಸ್ವಲ್ಪವೇ ತೆಗೆದುಕೊಂಡು ಬರಬೇಕಿತ್ತು. ಅಕಸ್ಮಾತ್ ಊರಿಗೆ ಹೋಗಿ ಬಿಟ್ಟರೆ ಬರುವ ವೇಳೆಗೆ ಅವೆಲ್ಲ ಬೂಸ್ಟ್ ಹಿಡಿದದ್ದೇ ಹೌದು. ತರಕಾರಿಗಳು ಅಷ್ಟೇ ಆಗ ಫ್ರಿಜ್ ಸಹ ಇರಲಿಲ್ಲ .ತಂದ ತರಕಾರಿಗಳನ್ನು ಕ್ಲೀನಾಗಿ ಒರೆಸಿ ಒಂದಕ್ಕೊಂದು ತಾಗದಂತೆ ಹರವಿ ಇಟ್ಟರೆ ಬಚಾವ್. ಇಲ್ಲದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳ್ಳನೆಯ ಬೂಸ್ಟು ಅವುಗಳನ್ನು ಅಲಂಕರಿಸಿ ಬಿಟ್ಟಿರುತ್ತಿತ್ತು.ಆ ಮಳೆಯ ಆರ್ಭಟಕ್ಕೆ ಎಲ್ಲೋ ಬಿದ್ದ ಮರ ವಿದ್ಯುತ್ ತಂತಿ ಕಟ್ಟಾಗಿ ದಿನವಿಡೀ ಏನು! ವಾರವಿಡೀ ವಿದ್ಯುತ್ ಸರಬರಾಜು ಬಂದಾಗುತ್ತಿತ್ತು. ಆಗೆಲ್ಲಾ ನೀರು ಹೊತ್ತು ಹೊತ್ತು ಸಾಕಾಗುತ್ತಿತ್ತು. ಮಹಡಿಯ ಮೇಲಿನ ಮನೆ ಎಂದು ಹೇಳಿದ್ದೆ ಅಲ್ಲವೇ ಆ ಮೆಟ್ಟಲುಗಳು ಸಹ ಪಾಚಿ ಕಟ್ಟಿಕೊಂಡು ಬಿಡುತ್ತಿದ್ದವು. ಸದ್ಯ ಒಂದು ಬಾರಿಯೂ ಬಿದ್ದಿಲ್ಲ ಅದು ನನ್ನ ಪುಣ್ಯ.ಈ ಎಲ್ಲಾ ತೊಂದರೆಗಳ ಮಧ್ಯೆಯೂ ಆ ಜಿಟಿ ಜಿಟಿ ಸುರಿಯುವ ಮಳೆಯ ಸದ್ದು ಒಂದು ರೀತಿ ಜೋಗುಳದ ಹಾಗೆ ಕೇಳಿಸುತ್ತಿತ್ತು. ಸದಾ ಕಚೇರಿಗೆ ಹೋಗುವಾಗ ಬರುವಾಗ ಛತ್ರಿ ಎಡೆಬಿಡದ ಆಪ್ತ ಸಂಗಾತಿಯಾಗಿ ಬಿಟ್ಟಿತ್ತು. ಆದರೆ ಮೈಸೂರಿನಲ್ಲಿ ಇದ್ದಾಗ ಆಗಾಗ ಕಾಡುತ್ತಿದ್ದ ಮೈಗ್ರೇನ್ ಸಕಲೇಶಪುರಕ್ಕೆ ಹೋದಮೇಲೆ ಎಲ್ಲೋ ಮಾಯವೇ ಆಗಿಬಿಟ್ಟಿತ್ತು . ಆ ಚಳಿ ಪ್ರದೇಶದಲ್ಲಿ ತಲೆನೋವು ಇನ್ನೂ ಹೆಚ್ಚಾಗಬಹುದು ಎಂದ ಎಂದು ಹೆದರಿದ್ದ ನನಗೆ ಇದೊಂದು ನಿರಾಳತೆ.ಊರಿನಿಂದ ಆಚೆ ಒಂದೆರಡು ಕಿಲೋಮೀಟರ್ ಹೋದರೆ ಸಾಕಿತ್ತು ಕಣ್ಣಿಗೆ ರಾಚುವಷ್ಟು ಹಸಿರು .ತುಂಬಾ ಸುಂದರ ವಾತಾವರಣ ಬೈಕಿನಲ್ಲಿ ಸುತ್ತೆಲ್ಲಾ ಓಡಾಡಿದ್ದೆವು.ಹೀಗೆ ಬಂದು ಶನಿವಾರ ಸುಲೋಚನಾ ಅವರು ಮೈಸೂರಿಗೆ ಹೋಗಿದ್ದರು. ರವೀಶ್ ಸಕಲೇಶಪುರಕ್ಕೆ ಬಂದು ನಾವು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರೋಗ್ರಾಮ್ ಆಗಿತ್ತು ಆದರೆ ಆ ಬುಧವಾರವೇ ನನಗೆ ಮದ್ರಾಸ್ ಐ ಬಂದು ವಕ್ಕರಿಸಿ ಬಿಟ್ಟಿತ್ತು. ಆಫೀಸಿನ ಬಳಿಯೇ ಇದ್ದ ಒಂದು ಡಾಕ್ಟರ್ ಶಾಪ್ ಗೆ ತೋರಿಸಿ ಔಷಧಿ ಅಯಿಂಟ್ಮೆಂಟ್ ತೆಗೆದುಕೊಂಡಿದ್ದೆ. ಅದೇನೋ ಭಂಡ ಧೈರ್ಯದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಬಸ್ಸಿನಲ್ಲೇ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೆವು. ಅಲ್ಲೇ ಒಂದು ಮೂಲೆಯಲ್ಲಿ ಕುಟೀರದಂತೆ ಇದ್ದ ಹೋಟೆಲ್ ನಲ್ಲಿ ತಿಂದ ಮಂಗಳೂರು ಬಜ್ಜಿಯ ರುಚಿ ಇನ್ನು ಸ್ಮೃತಿ ಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಸಂಜೆಯ ವೇಳೆಗೆ ಸಕಲೇಶಪುರಕ್ಕೆ ವಾಪಸಾಗಿದ್ದೆವು. ಸುಬ್ರಹ್ಣಣ್ಯದ ಅವಲಕ್ಕಿ ತುಂಬಾ ಫೇಮಸ್. ತುಂಬಾ ರುಚಿಕರ ಕೂಡ. ಕಟ್ಡಿಸಿಕೊಂಡು ಬಂದಿದ್ದೆವು.ಒಂದು ಬಾರಿ ಮೈಸೂರಿಗೆ ಬಂದಾಗ ಅಮ್ಮನನ್ನು ಸ್ವಲ್ಪ ದಿನ ಇರಲು ಕರೆದುಕೊಂಡು ಬಂದಿದ್ದೆ ಬೆಂಗಳೂರಿಗೆ ಹೋಗಿದ್ದ ನಮ್ಮ ತಂದೆ ಅಲ್ಲಿಂದ ನೇರವಾಗಿ ಬಂದರು. ನಮ್ಮ ಸುಮಿತ್ರ ದೊಡ್ಡಮ್ಮ ಅವರ ಪತಿ ಶಿವಾನಂದ್ ದೊಡ್ಡಪ್ಪ ಸಹ ಬಂದು ನಮ್ಮೊಡನೆ ಹದಿನೈದು ದಿನಗಳ ಕಾಲ ಇದ್ದಿದ್ದು ನಿಜಕ್ಕೂ ಮರೆಯಲಾಗದ ಒಂದು ಸುಂದರ ನೆನಪು.ಬಂದು ರಿಪೋರ್ಟ್ ಮಾಡಿಕೊಂಡ ಮಾರನೆಯ ದಿನವೇ ಅಲ್ಲೇ ಮುಖ್ಯರಸ್ತೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ 2 ಸದಸ್ಯ ಕಾರ್ಡುಗಳನ್ನು ಮಾಡಿಸಿಕೊಂಡಿದ್ದೆವು ಅಲ್ಲಿನ ಗ್ರಂಥಪಾಲಕರು ಚಂದ್ರಶೇಖರ್ ಧೂಲೇಕರ್ ಅನ್ನುವವರು. ಅವರು ಸಹ ಲೇಖಕರು. ನಮ್ಮ ಆಸಕ್ತಿ ನೋಡಿ ಅವರಿಗೂ ಖುಷಿಯಾಗಿತ್ತು. ಕೆಲವೊಮ್ಮೆ ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಾಗ ಮಾಡಲು ಬೇರೆ ಕೆಲಸವಿಲ್ಲದೆ ಓದುವುದೊಂದೇ ಹವ್ಯಾಸ. ಪ್ರತಿದಿನ ಪುಸ್ತಕ ಬದಲಾಯಿಸಿ ಕೊಂಡು ಬರುತ್ತಿದ್ದೆವು. ಬಹಳಷ್ಟು ಪುಸ್ತಕಗಳನ್ನು ಅಲ್ಲಿ ಓದಿದ್ದೇವೆ. ಹಾಗೆಯೇ ಕಚೇರಿಯ ನಿಯತಕಾಲಿಕೆಗಳು ಸಹ ಬಸ್ಟ್ಯಾಂಡ್ ಎದುರಿಗೆ ಇದ್ದ ಒಂದು ಗೂಡಿನ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದು ಒಂದು ಪುಸ್ತಕ ಇಟ್ಟು ಅದರಲ್ಲಿ ಎಂಟ್ರಿ ಮಾಡಿಸಿ ಸಹಿ ಹಾಕುತ್ತಿದ್ದು ಅಷ್ಟೇ, ಅಲ್ಲಿಯೂ ಬಹಳ ಜನ ಪುಸ್ತಕ ಓದುತ್ತಿದ್ದು ಒಂದು ರೀತಿ ಸಾಹಿತ್ಯಕ ವಾತಾವರಣ ಇತ್ತು. ಇನ್ನು ಸುಲೋಚನಾ ನಾನು ಅಂತೂ ಸರಿ ಒಂದೇ ತರಹದ ಪುಸ್ತಕದ ಹುಳುಗಳು ತುಂಬಾ ಚೆನ್ನಾಗಿತ್ತು. ಈ ವಿಷಯದಲ್ಲಿ ನಿಮ್ಮಿಬ್ಬರಿಗೂ ಒಂದೇ ಗುಣ ಎಂದು ಹೇಳಿ ಪದೋನ್ನತಿ ತೆಗೆದುಕೊಳ್ಳಲು ಕಾರಣರಾದ ಟಿ ಎಂ ಪರಶಿವಮೂರ್ತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.ಸುಲೋಚನಾ ಅವರು ಅಷ್ಟೇ ತುಂಬಾ ಹೊಂದಾಣಿಕೆಯ ಗುಣದವರು. ನಮ್ಮಿಬ್ಬರಿಗೂ ಒಂದೇ ಒಂದು ಬಾರಿಯಾದರೂ ಬಿನ್ನಾಭಿಪ್ರಾಯ ಬರಲಿಲ್ಲ. ಕಡೆಯವರೆಗೂ ಮೊದಲ ದಿನದ ಸ್ನೇಹ ಮುಂದುವರೆದುಕೊಂಡು ಬಂದಿತು. ನಿಜಕ್ಕೂ ಅವರ ಅಗಲಿಕೆ ನನಗಂತೂ ಒಂದು ತುಂಬಲಾರದ ನಷ್ಟ .ಇದುವರೆಗೂ ಅವರ ಬಗ್ಗೆ ಬರೆಯಲೇ ಸಾಧ್ಯವಾಗಿರಲಿಲ್ಲ ಈಗಲೇ ಅವರ ವಿಷಯ ಕಣ್ಣೀರಿಲ್ಲದೆ ಬರೆಯಲು ಸಾಧ್ಯವಾಗುತ್ತಿರುವುದು.ನಮ್ಮ ಮನೆಯಿದ್ದ ಕುಶಾಲನಗರ ಬಡಾವಣೆ ಎತ್ತರದಲ್ಲಿ ಇದ್ದುದರಿಂದ ಊರಿನ ದೇವಸ್ಥಾನ ನದಿ ತೀರ ಎಲ್ಲಾ ಕಿಟಕಿಯಿಂದಲೇ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು ಆ ಹಸಿರು ಮೇಲೆ ಜಿಟಿಪಿಟಿ ಮಳೆ ಕಿಟಕಿಯ ಬಳಿ ಕುಳಿತರೆ ಸಾಕು ಒಳ್ಳೆಯ ಸುಮನೋಹರ ದೃಶ್ಯ.ಅಲ್ಲಿದ್ದಾಗಲೇ ಸೆಪ್ಟೆಂಬರ್ 1998ರಲ್ಲಿ ನನ್ನ ತಂಗಿ ವೈಶಾಲಿಯ ಮಗ ನಿಶ್ಚಯ್ ಹುಟ್ಟಿದ್ದು ಆ ಸಮಯದಲ್ಲಿ ನಾನು 15 ದಿನ ರಜೆ ಹಾಕಿ ಮೈಸೂರಿಗೆ ಬಂದಿದ್ದೆ. ನಮ್ಮ ಮನೆಯ ಮೊಟ್ಟ ಮೊದಲ ಮೊಮ್ಮಗು ಅವನು ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಗರ್ಭಿಣಿಯಾಗಿದ್ದಾಗ ವೈಶಾಲಿ ಒಮ್ಮೆ ಅವಳ ಪತಿಯೊಂದಿಗೆ ಬೈಕ್ ನಲ್ಲೆ ಸಕಲೇಶಪುರಕ್ಕೆ ಬಂದಿದ್ದಳು ಎಲ್ಲರಿಂದ ಬೈಗುಳಗಳನ್ನು ತಿಂದಿದ್ದಳು.ಇನ್ನು ಫೆಲೋಶಿಪ್ ಪರೀಕ್ಷೆಗಳ ವಿಷಯಕ್ಕೆ ಬಂದರೆ ಓದಲು ಮನಸೇ ಬಂದಿರಲಿಲ್ಲ ಆದರೆ ಮೂರು ಪರೀಕ್ಷೆಗಳನ್ನು ತೆಗೆದುಕೊಂಡಾಗ ಮಧ್ಯೆ ಸಕಲೇಶಪುರಕ್ಕೆ ಹೋಗಲು ಸಾಧ್ಯವಿರದ ಕಾರಣ ರಜೆ ಸಿಗುತ್ತಿತ್ತು ಹಾಗಾಗಿ ಒಂದು ವಾರ ಮೈಸೂರಿನಲ್ಲಿ ಇರಬಹುದು ಎಂಬ ಆಸೆಗೆ ಅಲ್ಲಿದ್ದ ಎರಡು ವರ್ಷವೂ ನಾಮಕಾವಸ್ತೆಗೆ ಪರೀಕ್ಷೆ ತೆಗೆದುಕೊಂಡು ಬಂದು ಅರ್ಧ ಗಂಟೆ ಪರೀಕ್ಷೆ ಅಟೆಂಡ್ ಮಾಡಿ ವಾಪಸ್ ಹೋಗುತ್ತಿದ್ದುದು.ಹೀಗೇ ನಡೆದುಕೊಂಡು ಹೋಗುವಾಗ ನಾವಿದ್ದ ಮನೆಯ ಓನರ್ ರಾಜಮ್ಮ ಅವರ ಕಿರಿಕ್ ಆರಂಭವಾಯಿತು ಯಾರೋ ಅವರಿಗೆ ಆಫೀಸಿನಿಂದ ಮನೆಯನ್ನು ಲೀಸ್ ಮಾಡಿಸಿದರೆ ಎಲ್ ಐ ಸಿ ಇಂದಲೇ ಬಾಡಿಗೆ ಪಾವತಿ ಆಗುತ್ತದೆ. ಈಗ ಇರುವವರು ಬಿಟ್ಟರೂ ತಕ್ಷಣ ಮತ್ತೆ ಎಲ್ಐಸಿಯವರೆ ಬರಬಹುದು ಎಂಬ ವಿಷಯ ತಿಳಿದಿತ್ತು .ಹಾಗಾಗಿ ಮನೆಯನ್ನು ಲೀಸ್ ಮಾಡಿಸಿ ಎಂದು ಒಂದೇ ವರಾತ ಹಚ್ಚಿದರು. ಹಾಗೆ ಲೀಸ್ ಮಾಡಿಸಿದರೆ ನಮಗೆ ತೊಂದರೆ ಆಗುತ್ತಿತ್ತು. ನಾವು ಕೊಡುವ ಬಾಡಿಗೆಗಿಂತ ಮನೆಭತ್ಯ ಹೆಚ್ಚು ಬರುತ್ತಿತ್ತು .ಆರ್ಥಿಕವಾಗಿ ನಷ್ಟವಾಗುತ್ತಿತ್ತು. ಆದರೆ ಅವರಿಗೆ ಬರುವ ಹಣಕ್ಕಂತೂ ಏನು ವ್ಯತ್ಯಯ ಆಗುತ್ತಿರಲಿಲ್ಲ ನಾವು ಕೊಟ್ಟರೆ ಏನು ಎಲ್ಐಸಿ ಇಂದ ಬಂದರೆ ಏನು? ಆದರೆ ಆಕೆ ಕೇಳಲೇ ಸಿದ್ಧವಿರಲಿಲ್ಲ. ಲೀಸ್ ಮಾಡಿಸದಿದ್ದಲ್ಲಿ ಮನೆ ಬಿಟ್ಟುಬಿಡಿ ಎಂದು ಖಡಾ ಖಂಡಿತವಾಗಿ ಹೇಳಿದರು .ಮತ್ತೆ ಮಾಡುವುದೇನು ಬೇರೆ ಮನೆಯ ಹುಡುಕಾಟಕ್ಕೆ ತೊಡಗಿದೆವು. ಈ ಬಾರಿ ರವೀಶ್ ಅವರೇ ಬಂದು ಮನೆ ಹುಡುಕಲು ಸಹಾಯ ಮಾಡಿದರು.ಸಕಲೇಶಪುರದ ದೇವಸ್ಥಾನದ ಬೀದಿ ಸಂತೆಗೆ ಹತ್ತಿರದ ಗಾಯತ್ರಿ ಟೆಂಟ್ ಪಕ್ಕದ ಬಿಲ್ಡಿಂಗ್. ಮುಖ್ಯರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದವರು ಈ ಮನೆಯನ್ನು ಕಟ್ಟಿಸಿದ್ದರು .ಎರಡನೆಯ ಅಂತಸ್ತಿನಲ್ಲಿ ಎರಡು ಮನೆಗಳು. ಎದುರು ಬದುರು. ಅದರಲ್ಲಿ ಬೀದಿಯ ಕಡೆಗೆ ಮುಖ ಮಾಡಿದ ಮನೆಗೆ ನಾವು ಹೋಗುವುದು ಎಂದು ನಿರ್ಧಾರವಾಯಿತು ಹೊಸ ಮನೆ ಚೆನ್ನಾಗಿತ್ತು. ಹೋಗುತ್ತಲೇ ಇದ್ದ ಹಾಲ್ ವರಾಂಡದಷ್ಟೇ ಚಿಕ್ಕದಿತ್ತು .ಒಂದು ರೂಮ್ ಸ್ವಲ್ಪ ಪರವಾಗಿಲ್ಲ ಅಡುಗೆ ಮನೆ ಮಾತ್ರ ಹಾಲ್ ನಷ್ಟೇ ದೊಡ್ಡದಾಗಿ ಇತ್ತು. ಪಾತ್ರೆ ತೊಳೆಯಲು ಸಿಂಕ್ ಕಟ್ಟೆ ಎಲ್ಲಾ ಒಂದು ರೀತಿ ಚೆನ್ನಾಗಿ ಅನುಕೂಲಕರವಾಗಿ ಈಗಿರುವ ಮನೆಗಿಂತ ಚೆನ್ನಾಗಿಯು ಇತ್ತು. ಮೈಸೂರಿನಿಂದ ಬರುವಾಗ ದೇವಸ್ಥಾನದ ಬಳಿಯೇ ತಿಳಿದುಕೊಂಡರೆ ಮನೆಗೆ ಹೋಗಿ ನಂತರ ಆಫೀಸಿಗೆ ಬರಲು ಅನುಕೂಲವಾಗಿತ್ತು. ಇಲ್ಲಿ ಕೊಡುತ್ತಿದ್ದಷ್ಟೇ ಬಾಡಿಗೆ ಅಷ್ಟೇ ಅಡ್ವಾನ್ಸ್ ಇದ್ದಿದ್ರಿಂದ ಆರ್ಥಿಕವಾಗಿಯೂ ಏನು ತೊಂದರೆ ಅನಿಸಲಿಲ್ಲ. ಮನೆ ಬಿಡುತ್ತೇವೆ ಎಂದು ಹೇಳಿದಾಗ ಆಕೆಗೆ ಒಂದು ತರಹ ಆಯಿತು ನಾವು ಅವಳು ಹೇಳಿದಂತೆ ನಡೆಯಲಿಲ್ಲ ಎಂದು ಬೇಸರ ಇದ್ದರೂ ತೋರ್ಪಡಿಸಿಕೊಳ್ಳದೆ ಅಡ್ವಾನ್ಸ್ ಅನ್ನು ಸಕಾಲಕ್ಕೆ ಕೊಟ್ಟು ಸಹಕರಿಸಿದರು ಪಾಪ. ಆದರೆ ಅವರ ಲೆಕ್ಕಾಚಾರ ತಪ್ಪಿತಲ್ಲ ನಮಗೆ ಬೇಗ ಮನೆ ಸಿಕ್ಕಿತಲ್ಲ ಅದು ನಮ್ಮ ಪುಣ್ಯ. ಈ ಮನೆಗೆ ರಸ್ತೆಯ ಕಡೆ ಒಂದು ಸಣ್ಣ ಬಾಲ್ಕನಿ ಸಹ ಇದ್ದು ಸಂಜೆಯ ವೇಳೆ ಕುಳಿತುಕೊಳ್ಳಲು ಅಲ್ಲೇ ಕುಳಿತು ಓದಲು ಎಲ್ಲಾ ಅನುಕೂಲವಿತ್ತು. ಆದರೆ ಕರೆಂಟು ಇಲ್ಲದಿದ್ದಾಗ ಮಾತ್ರ ಎರಡೆರಡು ಅಂತಸ್ತು ನೀರು ಬರಬೇಕಾಗಿದ್ದು ಮಾತ್ರ ದೊಡ್ಡ ಪನಿಶ್ಮೆಂಟ್. 3 _ 4 ಬಾರಿ ಆ ರೀತಿ ವಿದ್ಯುತ್ ನಿಲುಗಡೆಯಾಗಿ ನೀರು ಹೊರುವಂತಾಗಿತ್ತು. ಈ ಸಮಯದಲ್ಲಿ ನಮ್ಮ ತಂದೆಯವರಿಗೆ 60 ವರ್ಷ ತುಂಬಿತು ಷಷ್ಠ್ಯಬ್ದಿ ಸಮಾರಂಭವನ್ನು ಸಹ ಮೈಸೂರಿನಲ್ಲಿ ನಾವು ಮೂರು ಜನ ಅಕ್ಕ-ತಂಗಿಯರು ಸೇರಿ ಆಚರಿಸಿದೆವು. ವೈಶಾಲಿ ಆಗ ೩ ತಿಂಗಳ ಬಾಣಂತಿ. ನಮ್ಮ ತಾಯಿಗಂತೂ ತುಂಬಾ ಸಂತೋಷವಾಗಿತ್ತು.ಆನಂತರ ನಿಶ್ಚಯ್ ನಾಮಕರಣ. ಹೀಗೆ ಒಂದರ ಹಿಂದೊಂದು ಶುಭ ಸಮಾರಂಭಗಳು ನಡೆಯುತ್ತಿದ್ದವು. ನಮ್ಮ ಸೋದರತ್ತೆಯ ಮಗ ಶ್ರೀನಾಥನ ಮದುವೆ ಆಗಲೇ ನಡೆದದ್ದು. ಆ ಸಮಯದಲ್ಲಿ ನಮಗೆ ಆಡಿಟ್ ನಡೆಯುತ್ತಿದ್ದುದರಿಂದ ನಾನು ಮದುವೆಗೆ ಹೋಗಲಾಗಲಿಲ್ಲ. ಸೋದರಮಾವ ಸೋಮುಮಾವನ ಮಗಳು ನಂದಿನಿ ಮದುವೆಗೆ ಅಮ್ಮ ಹೋಗಲೇಬೇಕಿತ್ತು. ನನ್ನ ತಂಗಿ ಬಾಣಂತಿ. ನಾನು ರಜೆ ಹಾಕಿ ಮೈಸೂರಿಗೆ ಹೋಗಿ ಅಮ್ಮನನ್ನು ಮದುವೆಗೆ ಕಳಿಸಿದೆ.ಚಿಕ್ಕಪ್ಪನ ಮಗ ಸಂಜೀವನ ಮದುವೆ ಬೆಂಗಳೂರಲ್ಲಿ ಆಯಿತು. ಶನಿವಾರ ಮಧ್ಯಾಹ್ನ ಆಫೀಸು ಮುಗಿಸಿ ಹೊರಟಿದ್ದು. ಗೊತ್ತಾಗದೆ ಷಟಲ್ ಬಸ್ನಲ್ಲಿ ಕೂತು ತಡವಾಗಿ ಬೆಂಗಳೂರು ತಲುಪಿದ್ದೊಂದು ದೊಡ್ಡ ಸಾಹಸ. ನಮ್ಮ ನಿಗಮದಲ್ಲಿ ಹೊಸದಾಗಿ ಪದೋನ್ನತಿ ಹೊಂದಿದವರಿಗೆ ತರಬೇತಿ ಕಾರ್ಯಕ್ರಮ ಇರುತ್ತದೆ .ಹೀಗಾಗಿ ನನಗೆ 25 5 98 ರಿಂದ 28 5 98ರ ವರೆಗೆ ಹೈದರಾಬಾದಿನ ಡೆಕ್ಕನ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತರಬೇತಿಗೆ ಕರೆ ಬಂದಿತ್ತು .ನನ್ನೊಂದಿಗೆ ನಂದ ಶ್ರೀ ಕಟ್ಟಿ ಅಂದರೆ ಈ ಮುಂಚೆ ವಿಭಾಗೀಯ ಕಚೇರಿಯಲ್ಲಿ ನನ್ನ ಜೊತೆಗಿದ್ದ ನನ್ನದೇ ಬ್ಯಾಚ್ನ ಗೆಳತಿ. ಅವಳಿಗೆ ಮದುವೆಯಾಗಿ ಬೆಳಗಾವಿಗೆ
ಧಾರಾವಾಹಿ ಸಂಗಾತಿ ಕಂತು-ಎಂಟು ಸವಿತಾ ದೇಶಮುಖ ಅವರಿಂದ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್ ಚೇತನ ಲೇ-ಸವಿತಾ ದೇಶಮುಖಜಯದೇವಿತಾಯಿಲಿಗಾಡೆಯವರ ಮೊಮ್ಮಗಳು ೧೯೩೨ರ ಸಮಯ….. ಜಯದೇವಿ ತಾಯಿಯವರು ತಮ್ಮ 20ನೆಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು…… ಮೂರು ಮಕ್ಕಳ ತಾಯಿಯಾಗಿ ಜೀವನದ ಕೆಲವು ಹಂತಗಳಲ್ಲಿ ತೇರ್ಗಡೆಯಾದ ನಂತರ…ಮನೆ, ಮಕ್ಕಳು, ಜವಾಬ್ದಾರಿಗಳ ಮಧ್ಯೆ … ಬಿಡುವಿನ ಸಮಯ ಸಿಕ್ಕಾಗಲೆಲ್ಲ ಜಯದೇವಿತಾಯಿಯ ಹೃದಯದಲ್ಲಿ ಒಂದು ಹೊಸ ಆಸೆ ಮೊಳಕೆಯೊಡೆದು ಅದು ಫಲ ಕೊಡುವ ಕಾಲ ಬಂದಿತ್ತು …ಮರಾಠಿ ಭಾಷೆ ಬರೆಯಲು ಓದಲು ಕಲಿತವರಾಗಿದ್ದರು .ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದವರು,ಹಾಡುವರು.. ಮನೆಯ ಕೆಲಸ ಆಳುಗಳ ವಹಿವಾಟುವೂ ಕನ್ನಡದಲ್ಲಿ ನಡೆದಿರುತ್ತಿತ್ತು.ಮಕ್ಕಳೊಂದಿಗೂ ಕನ್ನಡ ಭಾಷೆಯಲಿ ಮಾತನಾಡುತಿದ್ದರು……. ಆದರೆ ಮನದೊಳಗೊಂದು ಅತಿ ದೊಡ್ಡ ಕೊರಗು —“ಕನ್ನಡ ಭಾಷೆ ಓದಲು ಬರೆಯಲು ಬರದ ಕೊರಗು ….??!! ಆ ಸಮಯದಲ್ಲಿ ಪ್ರತಿದಿನ “ವಾರದ” ಪಾಠಶಾಲೆಯಿಂದ ಇಬ್ಬರು ಜಂಗಮರು ಪ್ರಸಾದಕ್ಕೆ ಎಂದು ಮನೆಗೆ ಬರುತ್ತಿದ್ದರು. ಜಂಗಮ ವಿದ್ಯಾರ್ಥಿಳಿಗೆ ತಮಗೆ ಕನ್ನಡ ಭಾಷೆಯ ಜ್ಞಾನವನ್ನು ಕೊಡಬೇಕು ಎಂದು ಕೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು . *ಕೇವಲ ಎಂಟು ದಿನಗಳಲ್ಲಿ ಕನ್ನಡದ ಅಕ್ಷರ ಮಾಲೆಗಳನ್ನು ಅವರು ಕಲಿತರು ಮೂರು ಮಕ್ಕಳು ಆದ ನಂತರ…!!!* “ಜಂಗಮರು ಹಾಕಿ ಕೊಡುತ್ತಿದ್ದ ಅಕ್ಷರವನ್ನು ಬಹಳ ಸರಾಗವಾಗಿ, ಸರಳ- ಸಹಜವಾಗಿ ಕನ್ನಡವನ್ನು ನಾನು ಕಲಿತೆ ಅದು ನನ್ನ ತಾಯಿ ಭಾಷೆಯ ಮರ್ಮ…. ಬಲು ಬೇಗ ಒತ್ತಕ್ಷರಗಳನ್ನು ವರ್ಣಮಾಲೆಗಳನ್ನು ಬರೆಯಲು ಪ್ರಾರಂಭಿಸಿದೆ” ಅಂತ ಹೇಳ್ತಿದ್ದರು. ಕಲಿತ ಕನ್ನಡ ಭಾಷೆಯನ್ನು ಅದೆಷ್ಟು ಸಂಭ್ರಮಿಸಿದರು ಅಂದರೆ ಕೈಗೆ ಸಿಕ್ಕ ಎಲ್ಲ ವಚನಗಳ ಪುಸ್ತಕಗಳನ್ನು ತೆಗೆದುಕೊಂಡು ಓದಲು ಶುರು ಮಾಡಿದರು ಅವುಗಳನ್ನು ಚೆನ್ನಾಗಿ ಓದುತ್ತಿದ್ದೇನಾ ಇಲ್ಲವಾ ಅನ್ನೋದನ್ನ ತಿಳಿದುಕೊಳ್ಳಲು ಬಹಳ ಸಮಯವೇನು ಬೇಕಾಗಲಿಲ್ಲ ಅಂತ ಹೇಳುವರು… ಮೊದಲ ದಿನ ಕನ್ನಡದ “ಅ” ಅಕ್ಷರವನ್ನು ಬರೆಯುವಾಗ ಅವರ ಕೈ ಕಂಪಿಸಿತು…ವಯಸ್ಸು ಅಡ್ಡಬಂತು…ಮಕ್ಕಳು ನಗಬಹುದು ಅತ್ತೆ ಗಂಡ ಮುನಿಸಿಕೊಳ್ಳಬಹುದು ಎನ್ನುವ ಭಯವೂ ಬಂದಿತು…ಆದರೆ ಹೃದಯದ ಉತ್ಸಾಹ ಆ ಭಯಕ್ಕಿಂತ ದೊಡ್ಡದಾಗಿತ್ತು.“ಸಿದ್ದರಾಮ” ಎಂಬ ಪದವನ್ನು ಕನ್ನಡದಲ್ಲಿ ಓದಿದಾಗಅವರು ಕಣ್ಣೀರಿಟ್ಟರು…ಅದು ಕೇವಲ ಪದವಲ್ಲ,ಅದು ಅವರ “ಗುರುವಿನ ನಾಮ”…. “ಭಕ್ತಿಯ ರೂಪ ಒಡಮೂಡಿ ಕನ್ನಡ ಭಾಷೆಯಲ್ಲಿ ನೋಡಿ ಸಂತೋಷವಾಯಿತು…..ಆ ದಿನ ಅವರು ಮತ್ತೆ ಒಂದು ಬಾಲಕಿ ಆಗಿದ್ದರು —ಹೊಸ ಅಕ್ಷರಗಳ ಮುಂದೆ ಕುತೂಹಲದಿಂದಪ್ರತಿ ಪದವು ಮುತ್ತಿನಂತೆ ಸಂಗ್ರಹಿಸುತ್ತಿದ್ದರು.ಕನ್ನಡದಲ್ಲಿ ಮೊದಲ ಅಕ್ಷರ ಮಾಲೆಗಳ ನೋಡಿ ಕ್ಷಣಅವರ ಮುಖದಲ್ಲಿ ಮೂಡಿದ ಆ ನಗುಮಕ್ಕಳು ಹುಟ್ಟಿದಾಗ ಕಂಡ ನಗುವಿನಷ್ಟೇ ಪವಿತ್ರವಾಗಿತ್ತು.ಅದು ಕೇವಲ ಭಾಷೆ ಕಲಿತ ಸಂತಸವಲ್ಲ…ಅದು ತನ್ನ ಆತ್ಮವನ್ನು ಶರಣ ಸಂಸ್ಕೃತಿಗೆ- ಜೋಡಿಸಿದ ಸಂತಸ,ವಚನಗಳ ಹೆದ್ದಾರಿ,ತನ್ನ ಅನುಭಾವದ ಬಾಗಿಲು ತೆರೆದ ಸಂತಸ,…..ತಾನು ತಾಯಿಯಾಗಿದ್ದರೂ ತಾನೂ ಇನ್ನೂ ಕಲಿಯಬಲ್ಲೆ ಎಂಬ ಆತ್ಮವಿಶ್ವಾಸದ ಜಯಘೋಷ ಸಾರಿತ್ತು. ….ಅದೇಷ್ಟೋತ್ತು ಕಂಬನಿ ಸುರಿದವು ಅಂತ ಅಭಿಮಾನದಿಂದ ಹೇಳುತಿದ್ದರು.ಕಣ್ಣೀರಿನಲ್ಲಿ ಹೆಮ್ಮೆ ಇತ್ತು. ಮರಾಠಿಯ ಮಗಳಾಗಿ,,ಕನ್ನಡದ ಸೊಸೆಯಾಗಿ….,ಎರಡು ಭಾಷೆಗಳ ಸೇತುವೆಯಾದರು ಮುಂದೆ ….ಕನ್ನಡಿಗರ ತಾಯಾಗಿ ನಿಂದರು ಅಂತೇನು ಹೇಳಬೇಕಾಗಿ ಆಗಿಲ್ಲವೇ..!! ಎಲ್ಲ ಬಲ್ಲವಳೆಂಬ /ಇಲ್ಲವದು ಭ್ರಮೆಯೆನಗೆಬಲ್ಲವರ ಪಾದಹಿಡಿಯುವೆ -ಬಲ್ಲಿದರುಕಲಿಸಿರಿ ಮತ್ತು ನುಡಿಸಿರಿ!! ಅಂತ ಹೇಳತಾಬಲ್ಲವರಿಂದ ಕಲಿಯುತ ಮುಂದೆ ನಡೆದರು. 16-09-1895 ರಲ್ಲಿ ಸೊಲ್ಲಾಪುರದ ಮಹಾದಾನಿಯಾದ ರಾವ್ ಬಹದ್ದೂರ್ ಮಲ್ಲಪ್ಪ ವಾರದರು “ಸರಸ್ವತಿ ಸದನ “.ಎಂಬ ಶೈಕ್ಷಣಿಕ ಸಂಸ್ಕೃತಿಕ ಸಂಸ್ಥೆ ಸ್ಥಾಪನೆ ಮಾಡಿದ್ದರು . ಸರಸ್ವತಿ ಸದನ ಇಲ್ಲಿ ಮಹಿಳೆಯರಲ್ಲಿ ಸ್ವಾವಲಂಬಿ ಜೀವನದ ಅರಿವು, ಶಿಕ್ಷಣದ ಮಹತ್ವ,ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿತ್ತು. ೧೯೧೦ ರಲ್ಲಿ ಸರಸ್ವತಿ ಸದನ ಮೂರು ವಿಭಾಗದಲ್ಲಿ ತನ್ನ ಕೆಲಸ ಹಮ್ಮಿಕೊಂಡಿತ್ತು. ಕನ್ನಡ ಮಾತನಾಡುವವರಿಗಾಗಿ ವಾರದ ಮಲ್ಲಪ್ಪನವರ ಮನೆಯಲ್ಲಿ “ವೀರಶೈವ ಮಹಿಳಾ ಜ್ಞಾನ” ಮಂದಿರ ಕಟ್ಟಲಾಗಿತ್ತು. ಇನ್ನು ಮರಾಠಿ ಮಾತನಾಡುವವರಿಗಾಗಿ ಶ್ರೀ ಶಂಕರ ರಾವ ದೇವಾಂಕರ್ ಅವರ ಮನೆಯಲ್ಲಿ “ಸರಸ್ವತಿ ಮಂದಿರ “ಕಟ್ಟಲಾಗಿತ್ತು . ಗುಜರಾತಿ ಭಾಷಿಕರಿಗಾಗಿ ಹಿರಾಚಂದ್ರ ನೇಮಿಚಂದ್ರ ಮನೆಯಲ್ಲಿ ಶ್ರಾವೀಕಾಶ್ರಮ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು.ಮಹಿಳೆಯರ ಒಳತಿಗಾಗಿ ಪ್ರತಿ ವಾರಕ್ಕೊಮ್ಮೆ ಸಭೆ ಸೇರಿ.. ಮೊದಮೊದಲಿಗೆ ಅರಿಶಿಣ ಕುಂಕುಮ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.ಎಡಬಿಡದೆ ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಿ ಪ್ರಾರ್ಥನೆ, ಕೀರ್ತನೆ ,ಪುರಾಣ ಪ್ರವಚನ ಸಂಪ್ರದಾಯ ಮಡಿ-ಮೈಲಿಗೆ ಅಂಥ ಮೂಢ ನಂಬಿಕೆಗಳಿಂದ ಮುಕ್ತರಾಗಿ ..ಧಾರ್ಮಿಕ ಸರಿಯಾದ ತಿಳುವಳಿಕೆ ಕೊಡುವುದು…ಅವರ ಕಾಳಜಿ ಅವರೇ ವಹಿಸುವುದನ್ನು ಕಲಿಸುತ್ತಿದ್ದರು. ಸ್ವಾವಲಂಬನೆಯ ಜೀವನ ನಡೆಸುವುದು ಬಗ್ಗೆ ತಿಳುವಳಿಕೆಯನ್ನು ಹೇಳಿಕೊಡಲಾಗುತ್ತಿತ್ತು .ವಾರದ ಮಲ್ಲಪ್ಪನವರ ಪತ್ನಿಯರಾದ ಗೌರವ್ವಬಾಯಿ ಮತ್ತು ಬಸವ್ವಬಾಯಿ ಹಾಗೂ ಅವರ ಮಗಳು ಸಂಗವ್ವನವರು ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ತಾಯಿಯೊಂದಿಗೆ ಜಯದೇವಿ ತಾಯಿಯವರು ಸರಸ್ವತಿ ಸದನದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಮುಂದೆ 1932 ರಲ್ಲಿ ಮಹಿಳಾ ಜ್ಞಾನ ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಏಕೆಂದರೆ ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರು ತಾಯಿಯವರ ಹೆಸರ ಮೇಲೆ ಜಗವನ್ನು ಖರೀದಿಸಿ ತಾಯಿಯವರ ಹೆಸರಿನಲ್ಲಿಯೇ ಕನ್ಯಾ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯು ಸೊಲ್ಲಾಪುರದಲ್ಲಿ 25 ವರ್ಷಗಳ ಕಾಲ ತಾಯಿಯವರ ಹೆಸರಿನಲ್ಲಿಯೇ ನಡೆದಿತ್ತು. ತಾಯಿಯವರು ಈ ಶಾಲೆ ಗೆ ಸಿದ್ದರಾಮನ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದರು. “ಸಿದ್ದೇಶ್ವರ” ಶಾಲೆಯಾಗಿ ಪರಿವರ್ತನೆಗೊಂಡಿತು. ಈ ಶಾಲೆಯಲ್ಲಿ ಅವಿಶ್ರಾಂತವಾಗಿ ಓದುವುದನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿಸಿಕೊಂಡರು. ಸಿದ್ದೇಶ್ವರ ಕನ್ಯಾ ಪಾಠಶಾಲೆ ಸಿದ್ದೇಶ್ವರ ಕನ್ಯಾ ಪಾಠಶಾಲೆ ಜಯದೇವಿತಾಯಿಯವರ ಕಾರ್ಯ ಮಾಡುವ ಮುಖ್ಯವಾದ ಕಾರ್ಯ ಕ್ಷೇತ್ರಗಳು ಅಂದರೆ …ವಾರದ ಸಂಸ್ಕೃತ ಪಾಠಶಾಲೆ ,ಮಹಿಳಾ ಜ್ಞಾನ ಮಂದಿರ, ಸರಸ್ವತಿ ಸದನ ಹಾಗೂ ಸಿದ್ದೇಶ್ವರ ಕನ್ಯಾ ಶಾಲೆ, ಬಾಲ ಶ್ರಾವಿಕಾಶ್ರಮ ಮಂದಿರ ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ದುಡಿದರು .ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಮಹಿಳೆಯರಲ್ಲಿ ಶಿಕ್ಷಣದ ಅರಿವು ,ರಾಷ್ಟ್ರೀಯ ಚಿಂತನೆ ,ನಾಡ ನುಡಿ ಪ್ರಜ್ಞೆ ಸಮಾಜದ ಚಟುವಟಿಕೆಯ ಮೂಲಕ ಸ್ವಾವಲಂಬನೆಯ ಬದುಕು, ದೇಶಿಯ ಚಿಂತನೆಗಳನ್ನು ಬೆಳೆಸುತ್ತಿದ್ದರು. ಈ ಕಾಲಕ್ಕೆ ಗಾಂಧೀಜಿಯವರು ಭಾರತಾರದಾದ್ಯಂತ ಸ್ವಾತಂತ್ರ್ಯದ ಹೋರಾಟದಲ್ಲಿ ಜನರನ್ನು ಒಂದು ಗುಡಿಸುತ್ತಿದ್ದರು ಅವರ ಅಹಿಂಸಾವಾದ ,ಸ್ವದೇಶಿ ಚಿಂತನೆಯ ಚಟುವಟಿಕೆಗಳಲ್ಲಿ ಜಯದೇವಿ ತಾಯಿಯವರು ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಗಾಂಧೀಜಿ ಚಿಂತನೆಗಳು ಜಯದೇವಿಯವರಿಗೆ ತುಂಬಾ ಆಕರ್ಷಣೆ ಮಾಡಿದ್ದವು . ಇದೇ ಕಾಲಕ್ಕೆ ತಿಲಕರು ಸ್ವದೇಶಿ ಚಳುವಳಿಯ ನಾಲ್ಕು ಅಂಕಗಳಾದ ಸ್ವರಾಜ್ಯ ,ರಾಷ್ಟ್ರೀಯ ಶಿಕ್ಷಣ, ಸ್ವದೇಶಿ ಚಳುವಳಿ ,ವಿದೇಶಿ ಬಹಿಷ್ಕಾರ …..ಮೌಲ್ಯಗಳ ಪ್ರಚಾರಕ್ಕಾಗಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರುಆ ಕಾಲದಲ್ಲಿ ತಿಲಕರು ವಾರದವರ ಮನೆತನದಲ್ಲಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಿರುವುದನ್ನು ನೋಡಿ ತಿಲಕರು ಸಾಮೂಹಿಕವಾಗಿ ಈ ರೀತಿಯಲ್ಲಿ ಗಣೇಶನನ್ನು ಪೂಜಿಸಿದರೆ ಸ್ವಾತಂತ್ರ ಹೋರಾಟದಲಿ ಎಲ್ಲ ಮತೀಯರು ಎಲ್ಲ ಜಾತಿಯವರು ಒಂದು ಸೇರಿ ಭಾರತೀಯರು ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಬಹುದು ಎನ್ನುವ ವೈಚಾರಿಕತೆಯನ್ನು ಪಡೆದುಕೊಳ್ಳುತ್ತಾರೆ. ಭಾರತದಾದ್ಯಂತ ಗಣೇಶ ಉತ್ಸವವನ್ನು ಪ್ರಾರಂಭಿಸುವುದನ್ನು ಶುರು ಮಾಡಿದರು. ತಿರಕರು ವಾರದ ಮಲ್ಲಪ್ಪನವರಿಗೆ ಧನ್ಯವಾದ ಹೇಳಿರುವ ಆಕರ ಲಭ್ಯವಾಗಿವೆ. ಅಂತೆಯೇ ಜಯದೇವಿ ತಾಯಿಯವರು ಕೂಡ ಗಣೇಶನ ಪೂಜೆಯನ್ನು ಅತಿ ಸಂಭ್ರಮದಿಂದ ಅನುಸರಿಸುತ್ತಿದ್ದರು ಹಾಗೆ ಗಾಂಧೀಜಿಯವರ ಆಚಾರ ವಿಚಾರಗಳನ್ನು ಕಾರ್ಯರೂಪದಲ್ಲಿ ತರುತ್ತಿದ್ದರು .ಅವರಲ್ಲಿಯ ರಾಷ್ಟ್ರ ಪ್ರೇಮವು ಉತ್ಕಟವಾಗಿತ್ತು. ರಾಷ್ಟ್ರೀಯ ಚಟುವಟಿಕೆ ಹಾಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು . ಕರ್ನಾಟಕದಲ್ಲಿ ಸುಮಾರು 48 ರಾಷ್ಟ್ರೀಯ ಶಾಲೆಗಳದ್ದವು. ಜಯದೇವಿ ತಾಯಿಯವರು ರಾಷ್ಟ್ರೀಯ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದ್ದರು… ಸೊಲ್ಲಾಪುರದಲ್ಲಿ ಬಾಲ “ವಿದ್ಯಾ ಮಂದಿರ, ಶ್ರಾವಿಕಾಶ್ರಮ ಶಾಲೆ ,ಹುಬ್ಬಳ್ಳಿಯಲ್ಲಿ ‘ಭಾರತೀಯ ಹೈಸ್ಕೂಲ್,” ಧಾರವಾಡದಲ್ಲಿ “ಜಯದೇವಿತಾಯಿ ಲಿಗಾಡೆ” ಹೈಸ್ಕೂಲ್ ಶಾಲೆಗಳನ್ನು ಆರಂಭಿಸಿದ್ದರು. ಅಲ್ಲಿ ರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. *ಸರಸ್ವತಿ ವಿದ್ಯಾ ಮಂದಿರ* ತಾಯಿ ಸಂಗವ್ವ ಮಡಿಕೆ ,ಭಾಗೀರಥಿಬಾಯ್, ಪಂಚವ್ವಬಾಯಿ ಅವರು ಅಸಹಕಾರ ಚಳುವಳಿಯಲ್ಲಿ ಧುಮುಕಿದ್ದರೂ ಅದೇ ರೀತಿಯಾಗಿ ತಾಯಿಯವರು ಗಂಡನ ಮನೆಯಲ್ಲಿ ಇದ್ದುಕೊಂಡು ಗಾಂಧೀಜಿಯವರು ಕರೆ ಕೊಡುತ್ತಿದ್ದ ಎಲ್ಲ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಕನ್ನಡವನ್ನು ಕಲಿಯುತ್ತಲೇ ಮುಂದೆ ಕನ್ನಡದ ವೇಧಾವಿ ಭಾಷಣಕಾರ್ತಿಯಾಗಿ ಪರಿವರ್ತಿಸಿದರು.ಮೊಟ್ಟ ಮೊದಲ ಬಾರಿ ಜಯದೇವಿ ತಾಯಿಯವರು ಭಾಷಣವನ್ನು ಮಾಡಿದ ನೆನಪನ್ನು ಮಾಡಿಕೊಳ್ಳುತ್ತಿದ್ದರು…… *ಮೊಟ್ಟ ಮೊದಲ ಬಾರಿ ಭಾಷಣ ಮಾಡಿದ ವಾರದ ವಾಡೆ* ಮೊದಲಸಲ ಬಾಷಣ ಮಾಡಿದ ವಾಡೆ ಮನೆಯ ಎದುರುಗಡೆ ಸ್ಥಿತವಾದ ವಾರದವರ ಮನೆಯಲ್ಲಿ ತಿಂಗಳಿಗೊಮ್ಮೆ ಅಕ್ಕಮಹಾದೇವಿಯ ಪುರಾಣ ಪಠಣ ಮಾಡಿದ ಗುರುಗಳು ಜಯದೇವಿ ತಾಯಿಯವರನ್ನು ಕರೆದು “ನಾಳೆ ನೀನೇ ಭಾಷಣವನ್ನು ಮಾಡಿ ಪುರಾಣದ ಸಮಾಪ್ತಿಯನ್ನು ಮಾಡಬೇಕು “ಎಂದು ಕೇಳಿಕೊಂಡರು… ಜಯದೇವಿ ತಾಯಿಯವರಿಗೆ ಕೈ ಕಾಲು ಕಂಪಿಸಿದವು ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂಗ ಆಯಿತುಅಂತ ಹೇಳುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಭಾಷಣ ಮಾಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ ಏಕೆಂದರೆ ಕೇವಲ ತಾಯಿ ಭಾಷಣ ಮಾಡುವುದನ್ನು ಕೇಳುತ್ತಿದ್ದರು… ಆದರೆ ಭಾಷಣ ಮಾಡಿದವರಾಗಿರಲಿಲ್ಲ.. ತಂದೆಯ ಹತ್ತಿರ ಹೋಗಿ ಏನನ್ನು ಮಾತನಾಡಬೇಕು ಅನ್ನೋದನ್ನ ಸುಮಾರು 9 -10 ಪುಟಗಳಷ್ಟು ಭಾಷಣವನ್ನು ಬರೆದುಕೊಂಡು ಬಂದು…. ಪುಟಗಳಲ್ಲಿನ ಒಂದು ಅಕ್ಷರವನ್ನು ಕೂಡ ಬಿಡದಂತೆ ಮರು ದಿವಸವೇ ಭಾಷಣ ಮಾಡಿದರು.ಆ ಭಾಷಣವು ಎಲ್ಲರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಹಾಗೂ ಪೂರ್ತಿಯಾಗಿ ಎಲ್ಲರ ಮನ ಗೆದ್ದಿದ್ದರು.ತಾಯಿಯವರು ಮಾಡುತ್ತಿದ್ದ ಭಾಷಣವನ್ನು ಕೇಳಿದ ತಂದೆ ಕಣ್ಣುನೀರು ಉರಿದವು… ತಾಯಿ ಮಗಳನ್ನು ತಬ್ಬಿಕೊಂಡಿದ್ದರು .ಹಾಗೆ ಗೌರವ್ವಬಾಯಿಯು ಬೆರಳುಗಳಿಂದ ನಿವಾಳಿಸಿ ಲಟ್ಟಿ ಮುರದಿದ್ದರು.ಇನ್ನೂ ಸಮಾಜದ ಸ್ತ್ರೀಯರೆಲ್ಲರೂ …ಬಂದಂತಹ ಎಲ್ಲ ಅತಿಥಿಗಳು ಅತ್ಯಂತ ಹೆಮ್ಮೆಯಿಂದ ನೋಡುತ್ತಿರುವ ದೃಶ್ಯ ಮನಸ್ಸಿಗೆ ಬಹಳ ಪ್ರಫುಲ್ಲತೆ ತಂದಿದ್ದು ….. ಮನದಲ್ಲಿ ಸಾವಿರ ಬಾರಿ ಸಿದ್ದರಾಮಯ್ಯನವರು ನೆನೆಸಿ ಧನ್ಯವಾದಗಳು ಹೇಳಿದ್ದರು.ಹಾಗೆ ಅತ್ತೆಯು ಭಾಷಣಗಾರತೀಯ ಮಗಳು ಅಂತ ಅಣುಕಿಸುತ್ತಿರುವ ಮಾತುಗಳು ಕೂಡ ನೆನಪಿಗೆ ಬಾರದೇ ಇರಲಿಲ್ಲ ಅಂತ ಹೇಳಿದರು. ಮುಂದೆ ಪ್ರಯಾಗಬಾಯಿ ಅತ್ತೆಯು ಕೂಡ ತಾಯಿಯವರು ಮಾಡುವ ಭಾಷಣದ ಅಭಿಮಾನಿಗಳಾದರು.ಗಂಡ ಚೆನ್ನಮಲ್ಲಪ್ಪನವರು ತುಂಬಾ ಅಭಿಮಾನ ಪಡುವಂತ ಆಯ್ತು. *ಶರಣರ ಕರುಣೆಯು ಕಾಸರಕವಲೊಡೆದು ಹರೆದು ಹಾಯದಿತ್ತಎನ ಮೇಲೆ ಸಿದ್ದನ ವರವಾಗಿತ್ತು ..*… ಮುಂದೆ ಅವರ ಜನಜಾಗೃತಿಯ ಕಾರ್ಯ-ಭಾಷಣ ಗಾರ್ತಿಯ ಪಯಣ ಸಾಗುತ್ತಲೇ ನಡೆಯಿತು. ಅಲ್ಲಲ್ಲಿ ಎಲ್ಲ ಸಮಾಜದಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ಸುತ್ತಲಿನ ಹಳ್ಳಿಗಳಿಂದ ಊರುಗಳಿಂದ ಭಾಷಣ ಮಾಡುವುದಕ್ಕಾಗಿ ಆಮಂತ್ರಣ ಬರಲಾರಂಸಿದವು .ಅನೇಕ ಶರಣ ಅನುಭಾವಿಗಳ ಒಡನಾಟ ಬೆಳೆಯ ಲಾರಂಭಿಸಿತು. ಕನ್ನಡ ಮೇರು ಸಾಹಿತ್ಯದ ಅಧ್ಯಯನ, ಶರಣ ಸಂಸ್ಕೃತಿಯ ಪರಂಪರೆಯ ಆಚರಣೆಮಾಡುತ್ತಾ ನಾಡಿನ ಮೂಲೆ ಮೂಲೆಗಳಲ್ಲಿ ಹೋಗಿ ಭಾಷಣವನ್ನು ಕೊಡುವುದು ಸಮಾಜದ ಸೇವೆಯನ್ನು ಮಾಡುವುದು ರಾಜ್ಯದ ರಾಷ್ಟ್ರದ ಅನೇಕ ಸಂತರು ಮಹಾತ್ಮರು, ಶಿವಯೋಗಿಗಳು, ಮಹಾನುಭಾವರೊಂದಿಗೆ ಜೊತೆ ಗೂಡಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳಲಾರಂಬಿಸಿದರು. ಜಯದೇವಿ ತಾಯಿ ಅವರ ಸರ್ವತೋಮುಖ ಸಮಾಜದ ಕಾರ್ಯಗಳಿಗೆ ಹೇಗೆ ಮುಂದುವರೆದವು ಅನ್ನುವದ ಮುಂದಿನ ವಾರ ನೋಡೋಣ ಬನ್ನಿ….. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-112 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅನಾಥಾಶ್ರಮದ ಕೆಲಸಕ್ಕೆ ಹೊರಟ ಮಗಳು ಬಂಗಲೆಯಿಂದ ಇಬ್ಬರೂ ಮನೆಗೆ ಬಂದ ನಂತರ ಮೂರನೇ ಮಗಳ ಜೊತೆಗೆ ಕುಳಿತು ಅಮ್ಮ ಹೇಳಿದ ವಿಷಯದ ಬಗ್ಗೆ ಚರ್ಚಿಸಿದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅನಾಥಾಶ್ರಮದ ಮಕ್ಕಳ ಮೇಲ್ವಿಚಾರಣೆ ನನ್ನ ಮಗಳಿಂದ ಸಾಧ್ಯವೇ? ಕಲಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಅವಳು ಖಂಡಿತ ಅಲ್ಲಿನ ಮಕ್ಕಳ ಶಾಲೆಯ ಪಠ್ಯ ವಿಷಯಗಳ ಕಲಿಕೆಯ ಸಹಾಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದರೆ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಮಕ್ಕಳ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರಲು ನನ್ನ ಮಗಳು ಸಮರ್ಥಳೇ? ಈ ಚಿಕ್ಕ ಹುಡುಗಿಯ ಮಾತನ್ನು ಅಲ್ಲಿನ ಮಕ್ಕಳು ಅನುಸರಿಸಿಯಾರೇ? ಆ ಮಕ್ಕಳ ನಡುವೆ ಈಕೆಯು ಕೂಡ ಮಕ್ಕಳಂತೆ ಅಲ್ಲವೇ? ಅಲ್ಲಿನ ಖರ್ಚು- ವೆಚ್ಚ, ಉಳಿತಾಯ ಇತರೆ ವಿಷಯಗಳ ಬಗ್ಗೆ ಇವಳಿಗೆ ಯಾವುದೇ ಅರಿವಿಲ್ಲ. ಅಮ್ಮ ಹೇಳಿದಂತೆ ಅವಳಿಗೆ ಸಹಾಯಕ್ಕಾಗಿ ಅಲ್ಲಿ ಎಲ್ಲರೂ ಇರುತ್ತಾರೆ. ಅವಳು ಕೂಡ ಅಲ್ಲಿ ಇದ್ದುಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಮೂರು ವರ್ಷದ ಪದವಿ ತರಗತಿಯನ್ನು ಮುಗಿಸಿದ ನಂತರ ಅವಳಿಗೆ ಯಾವುದಾದರೂ ಒಳ್ಳೆಯ ಕೆಲಸ ಸಿಗಬಹುದು. ಬಿ ಎಡ್ ತರಬೇತಿ ಪಡೆದು ಹೈ ಸ್ಕೂಲ್ ಶಿಕ್ಷಕಿಯೂ ಆಗಬಹುದು. ಅಲ್ಲದೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಟೈಪಿಂಗ್ ಸಹ ಕಲಿತಿದ್ದಾಳೆ. ನಮಗೂ ಈಗ ಹಣದ ಅಗತ್ಯವಿದೆ. ಇವಳಿಗೊಂದು ಒಳ್ಳೆಯ ಕೆಲಸ ಸಿಕ್ಕರೆ ಮುಂದೆ ನಾವು ಒಳ್ಳೆಯ ದಿನಗಳನ್ನು ನೋಡಬಹುದು. ನನಗೆ ಸಹಾಯ ಮಾಡುವುದಕ್ಕಾಗಿ ನನ್ನ ಮಕ್ಕಳು ಯಾವುದೇ ರೀತಿಯ ಕೆಲಸವನ್ನು ಮಾಡಲು ತಯಾರಿದ್ದಾರೆ. ಹೈಸ್ಕೂಲ್ ಹಂತದಲ್ಲಿರುವಾಗಲೇ ತಮಗೆ ರಜೆ ಇದ್ದಾಗ ಕಾಫಿ ತೋಟಕ್ಕೆ ಹೋಗಿ, ಕಾಫಿ ಹಣ್ಣುಗಳನ್ನು ಕೊಯ್ದು ತಮಗೆ ಸಾಧ್ಯವಾದಷ್ಟು ಹಣವನ್ನು ಗಳಿಸಿ ನನ್ನ ಕೈಲಿಟ್ಟಿದ್ದಾರೆ. ನಾವು ಓದುತ್ತಿರುವ ಮಕ್ಕಳು ಎನ್ನುವ ಅಹಂಭಾವವಿಲ್ಲದೆ ಸೊಂಟಕ್ಕೆ ಗೋಣಿ ಚೀಲವನ್ನು ಕಟ್ಟಿ, ನಾನು ತುಂಬಿಸಿಕೊಟ್ಟ ಊಟದ ಬುತ್ತಿಯನ್ನು ತೆಗೆದುಕೊಂಡು ಹೋಗಿ, ಹಣ್ಣು ಕೊಯ್ಯುವ ಅಭ್ಯಾಸ ಇಲ್ಲದಿದ್ದರೂ ಕೂಲಿ ಕೆಲಸಗಾರರ ಜೊತೆ ಸೇರಿ ಹುಮ್ಮಸ್ಸಿನಿಂದ ನನ್ನ ಮೂವರು ಮಕ್ಕಳೂ ಅವರ ಜೊತೆ ಹಣ್ಣುಗಳನ್ನು ಕೊಯ್ದು ದೊಡ್ಡ ಚೀಲದಲ್ಲಿ ತುಂಬಿಸಿ ಟ್ರ್ಯಾಕ್ಟರ್ ಗೆ ಹಾಕಿ, ಕಾಫಿ ಕಣದಲ್ಲಿ ಅವರ ಚೀಲಗಳನ್ನು ಗುರುತಿಸಿ ತೆಗೆದು ಅದನ್ನು ತೂಕ ಹಾಕಿಸಿ, ಪಲ್ಪರ್ ಮಾಡುವಲ್ಲಿಗೆ ತೆಗೆದುಕೊಂಡು ಹೋಗಿ ಕೊಟ್ಟು ಸಂಬಳವನ್ನು ಪಡೆದು ಖುಷಿಯಿಂದ ತಮ್ಮ ಸಂಪಾದನೆಯನ್ನು…. ‘ಅಮ್ಮಾ…..ನೋಡು…. ನಾವೆಷ್ಟು ಸಂಪಾದನೆ ಮಾಡಿದ್ದೇವೆ…. ಎಂದು ಕಣ್ಣರಳಿಸಿ ಸಂತೋಷದಿಂದ ನನ್ನ ಕೈಲಿಟ್ಟಿದ್ದಾರೆ….. ಒಂದು ಬಿಡಿಗಾಸನ್ನು ಕೂಡಾ ನಮಗಾಗಿ ಕೊಡಿ ಎಂದು ಆ ಮಕ್ಕಳು ಕೇಳಿಲ್ಲ….”ಬೇಡ ಮಕ್ಕಳೇ ನಿಮಗಿದು ಅಭ್ಯಾಸವಿಲ್ಲದ ಕೆಲಸ…. ನೀವಿನ್ನೂ ಚಿಕ್ಕವರು…..ತೋಟದ ಗಿಡಗಳ ನಡುವೆ ಇಳಿಜಾರಿನಲ್ಲಿ ಕೂಡ ಇಳಿದು ಹಣ್ಣುಗಳನ್ನು ಕೊಯ್ಯಬೇಕು…. ನಿಮ್ಮಿಂದ ಇದು ಸಾಧ್ಯವಾಗದು…. ಎಂದು ನಾನು ಹೇಳಿದಾಗ…. ಏನು ಆಗೋದಿಲ್ಲ ಅಮ್ಮಾ… ಅಲ್ಲಿ ಕೆಲಸ ಮಾಡುವ ಕೆಲಸಗಾರರು ನಮಗೆ ಪರಿಚಿತರಲ್ಲವೇ?…. ರೈಟರ್ ಕೂಡ ಹೇಗೆ ಹಣ್ಣುಗಳನ್ನು ಕೊಯ್ಯಬೇಕೆಂದು ನಮಗೆ ತಿಳಿಸುತ್ತಾರೆ”…. ಎಂದು ಹೇಳಿ ನನ್ನ ಸಮ್ಮತಿಯನ್ನು ಪಡೆದುಕೊಂಡು ಹಣ್ಣು ಕೊಯ್ಯುವ ಕೆಲಸಕ್ಕೆ ಕೂಡ ಹೋಗಿದ್ದಾರೆ. ಆದರೆ ಅನಾಥಾಶ್ರಮದ ಕೆಲಸ ಹೆಚ್ಚು ಜವಾಬ್ದಾರಿಯುತವಾದದ್ದು. ಇದನ್ನು ನಿಭಾಯಿಸಲು ನನ್ನ ಈ ಮಗಳ ಕೈಲಿ ಸಾಧ್ಯವೇ? ಇವಳಿಂದೇನಾದರೂ ಪ್ರಮಾದವಾದರೆ ಕಷ್ಟವಲ್ಲವೇ? ನಾನು ‘ಹೂಂ’ ಅಂದರೆ ಇವಳು ಖಂಡಿತ ಈ ಕೆಲಸಕ್ಕೆ ಹೋಗುತ್ತಾಳೆ. ನೋಡೋಣ ಅವಳ ತೀರ್ಮಾನ ಏನೆಂದು ಎಂದು ಯೋಚಿಸುತ್ತಾ…. ಮಗಳೇ, ನೀನು ಅಮ್ಮ ಹೇಳಿದ ಈ ಕೆಲಸವನ್ನು ಮಾಡಬಲ್ಲೆಯೇ? ನಿನ್ನಿಂದ ಇದು ಸಾಧ್ಯವೇ? ಎಂದು ಸುಮತಿ ಕೇಳಿದಾಗ…. ಅಮ್ಮಾ …ಸ್ವಲ್ಪ ದಿನ ಹೋಗಿ ಅಲ್ಲಿ ಇದ್ದು ಕೆಲಸ ಮಾಡಿ ನೋಡುತ್ತೇನೆ…. ಸಾಧ್ಯವಾದರೆ ಮುಂದುವರೆಸುತ್ತೇನೆ… ಇಲ್ಲದಿದ್ದರೆ ಆ ಕೆಲಸವನ್ನು ಬಿಟ್ಟು ಬಂದು ಇಲ್ಲಿ ನಿನ್ನ ಜೊತೆ ಇರುತ್ತೇನೆ….. ನನ್ನ ಡಿಗ್ರಿ ಮುಗಿದ ಕೂಡಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಸೇರಿಕೊಂಡು ನಿನ್ನ ಜವಾಬ್ದಾರಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವ ಹಂಬಲ ನನಗೆ ಇದೆ ಅಮ್ಮ…. ನಾನು ಅನಾಥಾಶ್ರಮಕ್ಕೆ ಹೋಗುತ್ತೇನೆ …. ಹೇಗಿದ್ದರೂ ಅದು ನಾನು ಕಳೆದ ಪರಿಸರವಲ್ಲವೇ? ವಾರಕ್ಕೊಮ್ಮೆ ಬಂದು ನಿನ್ನನ್ನು ನೋಡಬಹುದಲ್ಲವೇ?…. ಎಂದಾಗ ಸುಮತಿ ಮಗಳನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳು ತುಂಬಿ ಬಂತು. ಈ ಮಗಳು ನನ್ನ ಜೊತೆ ಇದ್ದಿದ್ದೇ ಕಡಿಮೆ. ಇವಳಿಗೆ ನಾಲ್ಕುವರೆ ವರ್ಷವಿದ್ದಾಗ ಅನಾಥಾಶ್ರಮಕ್ಕೆ ಸೇರಿದ ಹುಡುಗಿ, ಎಂಟನೇ ತರಗತಿಯಿಂದ 10ನೇ ತರಗತಿವರೆಗೂ ನನ್ನ ಹಿರಿಯ ಮಗಳ ಮನೆಯಲ್ಲಿದ್ದಳು. ಈಗ ಒಂದೆರಡು ವರ್ಷದಿಂದ ನನ್ನ ಜೊತೆ ಇದ್ದಾಳಷ್ಟೇ…. ಹೆಣ್ಣು ಮಕ್ಕಳು ಹೇಗಿದ್ದರೂ ಮುಂದೆಯಾದರೂ ನನ್ನನ್ನಗಲಿ ಇನ್ನೊಬ್ಬರ ಮನೆಗೆ ಹೋಗಬೇಕಾದವರೇ…. ಆದರೆ ಅಲ್ಲಿಯವರೆಗೂ ನನ್ನ ಜೊತೆಗಿರುವ ಅದೃಷ್ಟವಿಲ್ಲವೇ ದೇವರೇ?…. ಮಗಳ ಜೊತೆ ಇದ್ದು ಆಸೆ ಪೂರೈಸಿಲ್ಲ…. ಇಷ್ಟು ಬೇಗ ಮತ್ತೊಮ್ಮೆ ಅಗಲಿಕೆಯೇ? ಎಂದು ತನ್ನಲ್ಲೇ ಸ್ವಗತ ಹೇಳಿಕೊಂಡಳು. ತನ್ನ ಮಗಳನ್ನು ಅನಾಥಾಶ್ರಮದಲ್ಲಿ ಕೆಲಸಕ್ಕೆ ಕಳುಹಿಸದೆ ಬೇರೆ ದಾರಿ ಇರಲಿಲ್ಲ. ಅಕ್ಕನ ತೀರ್ಮಾನ ಕೇಳಿದಾಗ ತಂಗಿಗೆ ಬಹಳ ದುಃಖವಾಯಿತು. ಏಕೆಂದರೆ ಅಕ್ಕ ಎಂದರೆ ಅವಳಿಗೆ ಬಹಳ ಪ್ರೀತಿ. ಅಕ್ಕನ ಜೊತೆ ಕಾಲ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತೋಷ. ಅಕ್ಕನ ಜೊತೆ ಕಳೆದ ಕ್ಷಣಗಳು ಅವಳ ಅತ್ಯಂತ ಸಂತೋಷದ ಸಮಯವಾಗಿದ್ದವು. ಕೊನೆಯ ತಂಗಿಯು ಜೊತೆಯಲ್ಲಿಲ್ಲ ಅವಳು ದೂರದ ನವೋದಯ ಶಾಲೆಯಲ್ಲಿ ಓದುತ್ತಿರುವಳು. ವಾರ್ಷಿಕ ರಜೆ ಇದ್ದಾಗ ಮಾತ್ರ ಮನೆಗೆ ಬರುವಳು. ಈಗ ಅಕ್ಕ ಅನಾಥಾಶ್ರಮದ ಮೇಲ್ವಿಚಾರಕಿ ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾಳೆ. ತಾಯಿಯ ಜೊತೆ ಇರುವುದೆಂದರೆ ಅವಳಿಗೆ ಸಂತೋಷದ ವಿಚಾರವೇ, ಆದರೂ ಸಣ್ಣ ವಯಸ್ಸಿನಿಂದ ಅಕ್ಕನ ಜೊತೆ ಅಕ್ಕನ ಪ್ರೀತಿಯಲ್ಲಿ ಕಳೆದ ಅವಳಿಗೆ ಈಗ ಅವಳು ಮತ್ತೆ ದೂರ ಹೋಗುತ್ತೇನೆ ಎಂದಾಗ ಸಂಕಟವಾಯಿತು. ಆದರೂ ಅವಳಿಗೂ ತಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ಕಾರಣ ಏನೂ ಮಾತನಾಡದೆ ಸಮ್ಮತಿ ಸೂಚಿಸಿದಳು. ಸುಮತಿ ಬಂಗಲೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿ, ನನ್ನ ಮಗಳು ಅನಾಥಾಶ್ರಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದಾಳೆ ಎನ್ನುವ ವಿಚಾರವನ್ನು ಅಮ್ಮನಿಗೆ ತಿಳಿಸಿದಳು. ವಿಷಯ ತಿಳಿದು ಅಮ್ಮನಿಗೆ ಸಂತೋಷವಾಯಿತು. ಶಾಲೆ ಪ್ರಾರಂಭವಾಗುವ ಮೊದಲೇ ಆದಷ್ಟು ಬೇಗ ಮುಂದಿನ ವಾರವೇ ಅಲ್ಲಿಗೆ ಹೋಗುವ ತಯಾರಿಯನ್ನು ಮಾಡಿಕೊಳ್ಳಲು ಮಗಳಿಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು.
ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ” ದೇಶವುಕಂಡ ಅಪರೂಪದ ಶ್ರೇಷ್ಠ ನೀರಾವರಿ ತಜ್ಞ ಕರ್ನಾಟಕಕ್ಕೆ ನೀರಿನ ಹಕ್ಕಿನ ಹಕ್ಕಿನ. ಬಗ್ಗೆ ನಿರಂತರ ಹೋರಾಟ ಮಾಡುತ್ತಲೆ ನ್ಯಾಯ ಒದಗಿಸುತ್ತಿದ್ದ ಉತ್ತರ ಕರ್ನಾಟಕದ ಬೆಳಗಾವಿ ಮೂಲದ ಲಿಂಗೈಕ್ಯ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರು. ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ ಎಸ್. ಜಿ. ಬಾಳೆಕುಂದ್ರಿಯವರು ಕರ್ನಾಟಕದ ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರರು. ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆ ಇವುಗಳಿಗಾಗಿ ಬಾಳೆಕುಂದ್ರಿಯವರು ಕರ್ನಾಟಕದಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದಾರೆ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ. ಉತ್ತರ ಕರ್ನಾಟಕದ ಮಹಾದಾಯಿಯ ಬಗ್ಗೆ ಕೂಡ ಆಲೋಚನೆ ಅಧ್ಯಯನ ಮಾಡಿದ್ದರು. ಜನನ ಶಿವಪ್ಪ ಬಾಳೆಕುಂದ್ರಿಯವರು 1922 ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಅಕ್ಕಿಹೊಂಡದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ ಮುಗಿಸಿ, ಕೊಪ್ಪೀಕರ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು, ತರವಾಯ ಬೆಳಗಾವಿಯ ಸರದಾರ ಹೈಸ್ಕೂಲ್ ಸೇರಿದರು. ಲಿಂಗರಾಜ ಕಾಲೇಜಿನಿಂದ ಇಂಟರ ಸಾಯನ್ಸ್ ವಿಷಯದ ಮೇಲೆ ಅಧ್ಯಯನ ನಡೆಸಿ ತೇರ್ಗಡೆಯಾದರು. ಆ ಬಳಿಕ ಪುಣೆಯಲ್ಲಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1947 ರಲ್ಲಿ ಎಡಿನ್ಬರೊ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಪದವಿ ಸಂಪಾದಿಸಿಕೊಂಡರು. ವೃತ್ತಿ ಮತ್ತು ಉದ್ಯೋಗ 1945 ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಹಾಲಂಡ್, ಸ್ವಿಡನ್, ಮತ್ತು ಇತರ ಕೆಲವು ಬಾಲ್ಟಿಕ್ ರಾಜ್ಯಗಳನ್ನು ಸಂದರ್ಶಿಸಿದರು. ವಿದೇಶದಿಂದ ಹಿಂದಿರುಗಿದ ನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನುನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ ಮಾಡಿದರು. ಆ ಬಳಿಕ ಧೂಲಿಯಾ ಆಣೆಕಟ್ಟು ಮತ್ತು ಅಹ್ಮದ ನಗರ ವಿಭಾಗದ ಉಸ್ತುವಾರಿ ನಿರ್ವಹಿಸಿದರು. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ನಂತರ ಕರ್ನಾಟಕಕ್ಕೆ ಬಂದ ಬಾಳೆಕುಂದ್ರಿಯವರು ಕೆಲಕಾಲ ಉಪಪ್ರಧಾನ ಇಂಜನಿಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿ ಇವರು ಭಾರತ ಸರಕಾರದ ಪ್ಲ್ಯಾನಿಂಗ್ ಕಮಿಶನ್ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕರಾಗಿಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಮರಳಿ ಕರೆಯಿಸಿಕೊಂಡರು. 1959 ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು. 1964 ರಲ್ಲಿ ಮುಖ್ಯ ಇಂಜನಿಯರ ಆಗಿ ಪದೋನ್ನತಿ ಪಡೆದು, ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1967 ರಿಂದ 1972 ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನಿಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಾಳೆಕುಂದ್ರಿಯವರು ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು. 1974 ರಿಂದ 1976 ರ ವರೆಗೆ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಹಾಗು 1976 ರಿಂದ 1977ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, 1977 ಮೇದಲ್ಲಿ, ಅಂದರೆ ತಮ್ಮ 55 ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರವೂ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆಸಲ್ಲಿಸಿದರು. (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 1-4-1998 ರಲ್ಲಿ ಸಾಕಾರಗೊಂಡಿತು). ದುರಂತ ಮರಣ ದಿನಾಂಕ 4-1-1993 ರಂದು ಸಂಜೆ ಬಾಳೆಕುಂದ್ರಿಯವರು ವಾಯುವಿಹಾರಕ್ಕೆ ಹೋದ ಸಮಯದಲ್ಲಿ ಬೇಜವಾಬ್ದಾರಿ ಆಟೊ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಅಸ್ಪತ್ರೆಗೆ ಸೇರಿಸಲ್ಪಟ್ಟರು. 1993 ಜನೆವರಿ 8 ರಂದು ಅದೇ ಅವಸ್ಥೆಯಲ್ಲಿಯೆ ಬಾಳೆಕುಂದ್ರಿಯವರು ಕೊನೆಯುಸಿರೆಳೆದರು. ಬಡ ವಿದ್ಯಾರ್ಥಿಗಳಿಗಾಗಿ ಶಿವಕಮಲ ಟ್ರಸ್ಟ್ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ, ವಿಶೇಷತಃ ತಾಂತ್ರಿಕ ಶಿಕ್ಷಣದಲ್ಲಿ ಧನಸಹಾಯ ಮಾಡಲು ಒಂದು ಟ್ರಸ್ಟ ಅನ್ನು ರೂಪಿಸುವದು ಶ್ರೀ ಬಾಳೆಕುಂದ್ರಿ ಹಾಗು ಶ್ರೀಮತಿ ಬಾಳೆಕುಂದ್ರಿಯವರ ಕನಸಾಗಿತ್ತು. ಶ್ರೀಬಾಳೆಕುಂದ್ರಿಯವರ ನಿಧನದ ನಂತರ ಶ್ರೀಮತಿ ಕಮಲಾ ಬಾಳೆಕುಂದ್ರಿಯವರು “ ಶಿವಕಮಲ ಟ್ರಸ್ಟ್ ” ಸ್ಥಾಪಿಸುವ ಮೂಲಕ ತಮ್ಮೀರ್ವರ ಕನಸನ್ನು ನನಸಾಗಿಸಿದರು. ಗೌರವ ಸನ್ಮಾನ ತಮ್ಮ ಪ್ರತಿಭೆ, ದಕ್ಷತೆ ಹಾಗು ಸಚ್ಚಾರಿತ್ರ್ಯದಿಂದ ಬಾಳೆಕುಂದ್ರಿಯವರು ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ ಹಾಗು ಕರ್ನಾಟಕ ನೀರಾವರಿ ಇಲಾಖೆಯಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದಾರೆ. ಮಲಪ್ರಭಾಎಡದಂಡೆಕಾಲುವೆಗೆಬಾಳೆಕುಂದ್ರಿಕಾಲುವೆಎಂದುಹೆಸರಿಟ್ಟುಸರಕಾರಇವರನ್ನುಗೌರವಿಸಿದೆ. 1987 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು. 1998 ರಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಎದುರಿನ ವೃತ್ತಕ್ಕೆ ಬಾಳೆಕುಂದಿ ವೃತ್ತ ಎಂದು ನಾಮಕರಣ ಮಾಡಲಾಯಿತು. 1999ರಲ್ಲಿಘಟಪ್ರಭಾಜಲಾಶಯದಲ್ಲಿಬಾಳೆಕುಂದ್ರಿಯವರಪ್ರತಿಮೆಯನ್ನುಅನಾವರಣ ಮಾಡಲಾಯಿತು. 2004 ರಲ್ಲಿ ಧಾರವಾಡದ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಮುಂದಿನ ರಸ್ತೆಗೆ ಎಸ್.ಜಿ.ಬಾಳೆಕುಂದ್ರಿ ಮಾರ್ಗ ಎಂದು ಹೆಸರಿಡಲಾಯಿತು. ಕರ್ನಾಟಕಸರಕಾರವು 2001 ರಿಂದ ಪ್ರತಿ ವರ್ಷನೀರಾವರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಲಾಖೆಯ ಇಂಜನಿಯರರಿಗೆ ಬಾಳೆಕುಂದ್ರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. 5 ಮೇ , 2006 ರಂದು ಅಂದರೆ ಬಾಳೆಕುಂದ್ರಿಯವರ 85 ನೆಯ ಜನ್ಮದಿನದಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟಿನ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ಆಣೆಕಟ್ಟು ನಿರ್ಮಾಣದಲ್ಲಿ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರ ಪಾತ್ರ ಬಹಳ ದೊಡ್ದದು. ಸಮಗ್ರಹಸಿರುಕ್ರಾಂತಿಯಹರಿಕಾರನೀರಾವರಿಯತಜ್ಞಸಾಮಾಜಿಕಚಿಂತಕಎಸ್ಜಿಬಾಳೆಕುಂದ್ರಿ ಅವರಿಗೆ ನಮ್ಮ ನೂರು ನಮನಗಳು. ________________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಧಾರಾವಾಹಿ ಸಂಗಾತಿ-14 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಅನಲ ಅಳಿಯನಾದ ಬಗೆ ಹೀಗೆ ಅನಲ ಅಳಿಯನಾದ ಬಗೆ ಹೀಗೆ‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನುಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.ನನಗಾದದ್ದು ಅಚ್ಚರಿ.ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನುಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿಉದಯಿಸಿತು.ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿಮದುವೆ ಆದವಳು.ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನುಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆತೋರುತ್ತ.ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನುತೊರೆದುಹೋದಳು.ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂಮೂಡಿತು.ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ! ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್ ಗೌಡ ಪಾಟೀಲ್ ಬದುಕಿನ ಪಯಣ ಬದುಕು ಒಂದು ರೀತಿಯ ರೈಲು ಗಾಡಿಯ ಪಯಣ ಇದ್ದಂತೆ. ರೈಲುಗಾಡಿಯಲ್ಲಿ ಹತ್ತಿ ಕುಳಿತುಕೊಳ್ಳುವ ನಾವುಗಳು ಮಾರ್ಗ ಮಧ್ಯದಲ್ಲಿ ಹತ್ತುವ-ಇಳಿಯುವ, ನೂರಾರು ಜನರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸುತ್ತೇವೆ ಅವರವರ ನಿಲ್ದಾಣ ಬಂದಾಗ ಅವರವರು ಇಳಿದು ಹೋಗುತ್ತಾರೆ….. ಅಂತೆಯೇ ನಾವು ಕೂಡನಮ್ಮ ಬದುಕಿನ ಪಯಣ ಕೂಡ ಹಾಗೆಯೇ…. ಆದರೆ ಈ ಪಯಣ ಅನಿರೀಕ್ಷಿತ ಸಂತೆಗಳ ಆಗರ.ಇದಮಿತ್ಥಂ ಎಂದು ಹೇಳುವ ಹಾಗೆಯೇ ಇಲ್ಲ. ನಮ್ಮ ಮುಂದಿನ ನಿಲ್ದಾಣ ಯಾವುದು ಎಂಬುದು ನಮಗೆ ಗೊತ್ತಿರುವುದಿಲ್ಲ.ತಂದೆ ತಾಯಿಯ ಕೈ ಹಿಡಿದು ಬದುಕಿನ ಪಯಣವನ್ನು ಆರಂಭಿಸುವ ನಾವು ನಮ್ಮ ಜೀವಿತದ ಕೊನೆಯವರೆಗೂ ಅವರು ನಮ್ಮೊಂದಿಗೆ ಇರುತ್ತಾರೆ ಎಂಬ ಭರವಸೆಯ ಜೊತೆಗೆ ಜೀವಿಸುತ್ತೇವೆ…. ಆದರೆ ತಮ್ಮ ಪ್ರಯಾಣ ಪೂರೈಸುವ ಅವರು ಯಾವ ಘಳಿಗೆ ಯಲ್ಲಾದರೂ ನಮ್ಮನ್ನು ಬಿಟ್ಟು ಹೊರಟು ಹೋಗಬಹುದು ಹಾಗೂ ಅವರಿಲ್ಲದೆ ನಾವು ನಮ್ಮ ಬದುಕಿನ ಪಯಣವನ್ನು ಮುಂದುವರಿಸಬೇಕು ಎಂಬ ನಿಷ್ಟುರ ಸತ್ಯದ ಅರಿವಿದ್ದು ಕೂಡ ಅರಿವಿಲ್ಲದ ರೀತಿಯಲ್ಲಿ ನಾವು ಬಾಳುತ್ತೇವೆ.ಆದರೂ ಕೂಡ ಯಾವುದೇ ಸೀಟುಗಳು ಖಾಲಿ ಉಳಿಯುವುದಿಲ್ಲ. ನಮಗೆ ಸ್ವಲ್ಪ ಹಿಂದು ಮುಂದಾಗಿ ನಮ್ಮ ಒಡಹುಟ್ಟಿದವರು, ಸ್ನೇಹಿತರು, ಸಂಬಂಧಿಗಳು ಹಾಗೂ ನಾವು ಪ್ರೀತಿಸುವ ಬದುಕಿನಲ್ಲಿ ನಮ್ಮೊಂದಿಗೆ ಇರಲಿ ಎಂದು ಬಯಸುವ ಹತ್ತು ಹಲವು ಸಂಗತಿಗಳು ನಮ್ಮೊಂದಿಗೆ ಬದುಕಿನ ಪಯಣದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ತಮ್ಮ ತಮ್ಮ ಪಯಣ ಮುಗಿಸಿ ಕೆಲವರು ನಿರೀಕ್ಷಿತ ಸಮಯಕ್ಕೆ ಇಳಿದು ಹೊರಟು ಹೋದರೆ ಮತ್ತೆ ಕೆಲವರು ನಮ್ಮ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುವ ನಮ್ಮಲ್ಲಿ ಖಾಲಿತನವನ್ನುಹುಟ್ಟು ಹಾಕುವ ರೀತಿಯಲ್ಲಿ ಕಣ್ಮರೆಯಾಗುತ್ತಾರೆ…. ಮತ್ತೆ ಕೆಲವರ ನಿರ್ಗಮನ ಅದೆಷ್ಟು ಅನಿರೀಕ್ಷಿತವಾಗುತ್ತದೆ೦ದರೆ ಅದನ್ನು ಅರಗಿಸಿಕೊಳ್ಳುವುದು ಬಹಳವೇ ಕಷ್ಟ .ಈ ಪಯಣವು ಸುಖ ದುಃಖಗಳ ಏರಿಳಿವುಗಳ ಮೇಲೆ ತೂಗುಯ್ಯಾಲೆಯಂತೆ ಭಾಸವಾಗುತ್ತದೆ. ಕೆಲ ಭೇಟಿಗಳು ಮನಸ್ಸನ್ನು ಪ್ರಫುಲ್ಲಗೊಳಿಸಬಹುದು ಎಷ್ಟೋ ಬಾರಿ ಭರವಸೆಗಳು ಹುಸಿಯಾಗಬಹುದು…. ವಿದಾಯಗಳು ಎದೆಯ ಭಾರವನ್ನು ಹೆಚ್ಚಿಸಬಹುದು ಕೆಲವರ ಜೊತೆಯು ಸಂತಸವನ್ನು ಉಂಟುಮಾಡಿದರೆ ಮತ್ತೆ ಕೆಲವರ ಸಾಂಗತ್ಯ ರೇಜಿಗೆಯನ್ನುಂಟು ಮಾಡಬಹುದುಬದುಕಿನಲ್ಲಿ ಪಯಣದಲ್ಲಿ ಚೆನ್ನಾಗಿ ಬದುಕುವುದು ಎಂದರೆ ನಮ್ಮ ಜೊತೆಗಿರುವ ಸಹ ಪ್ರಯಾಣಿಕರ ಕುರಿತು ಒಳ್ಳೆಯ ಅರಿವನ್ನು ಹೊಂದಿರಬೇಕು. ಉತ್ತಮ ಸಂವಹನವನ್ನು ಹೊಂದಿರಬೇಕು…. ಅದರಲ್ಲೂ ಮುಖ್ಯವಾಗಿ ನಮ್ಮ ಬದುಕಿನ ಹೊರೆಗಳನ್ನು ಹಂಚಿಕೊಂಡಿರುವವರೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನು ಮುಂದುವರಿಸಬೇಕು ಜೀವನದ ಪಯಣದಲ್ಲಿ ನಮ್ಮ ಪಯಣದ ಆರಂಭದ ಸಮಯದಲ್ಲಿ ನಮಗೆ ನೀಡಲಾದ ಟಿಕೇಟಿನಲ್ಲಿ ಆರಂಭಿಸಿದ ಸಮಯ ದಿನ, ತಿಂಗಳು ವಾರ ಮತ್ತು ವರ್ಷಗಳನ್ನು ನಮೂದಿಸುತ್ತದೆ ನಿಜ ಆದರೆ ಯಾವಾಗ ನಾವು ಜೀವನದ ಪಯಣ ಮುಗಿಸಿ ಇಳಿಯಬಹುದು ಎಂಬ ಸಣ್ಣ ಸುಳಿವು ಕೂಡ ನಮಗೆ ಇರುವುದಿಲ್ಲ. ನಮ್ಮ ಪಯಣದ ಹಾದಿಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಬದುಕಿನ ಗುಣಮಟ್ಟವನ್ನು ಅಳೆಯಬಹುದು.. ನಾವು ದೇವರನ್ನು ಪ್ರೀತಿಸಬೇಕು ಅತ್ಯಂತ ಸರಳವಾಗಿ ಕ್ಷಮಿಸಬೇಕು ಜೊತೆಗೆ ನಮ್ಮ ನೈಜತೆಯನ್ನು ಹೊರ ಹಾಕಬೇಕು.ಅಂತಿಮ ಪಯಣದ ಸಮಯದಲ್ಲಿ ನಮಗೆ ದೊರೆಯುವ ಸಂಜ್ಞೆಗಳನ್ನು ಗುರುತಿಸಿ ಮೆಲ್ಲಗೆ ಹೊರಟು ಬಿಡಬೇಕು. ಮರದ ಗೊಂಬೆಯನ್ನು ಆಶ್ರಯಿಸಿದ ಹಕ್ಕಿ ಒಂದೇ ಏಟಿಗೆ ರೆಕ್ಕೆಗಳನ್ನು ಅಗಲಿಸಿ ಹಾರಿ ಹೋಗುವಂತೆ ನಾವು ಕೂಡ ಬದುಕಿನ ಈ ಪಯಣವನ್ನು ಮುಗಿಸಿ ಹೊರಟು ಬಿಡಬೇಕು.. ಉಳಿದವರ ಬದುಕಿನ ಅತ್ಯಂತ ಸುಂದರ ನೆನಪಾಗಿ ನಾವು ಉಳಿದುಕೊಳ್ಳಬೇಕೆ ಹೊರತು ಅವರ ಚಿತ್ತವನ್ನು ಕಲಕಿ ಮಾನಸಿಕ ಸ್ವಾಸ್ಥ್ಯವನ್ನು ಕದಡುವ, ನಮ್ಮ ನೆನಪು ಅವರಲ್ಲಿ ಬೇಸರ ಹುಟ್ಟಿಸುವ ರೀತಿಯಲ್ಲಿ ಬದುಕಬಾರದು.ಬದುಕಿನ ಪ್ರಯಾಣದಲ್ಲಿ ಸಂತೋಷ, ತೃಪ್ತಿ,ನೆಮ್ಮದಿ ಇಂತಹ ಹಗುರವಾದ ಭಾವಗಳನ್ನು ನಮ್ಮ ಲಗೇಜ್ ಗಳನ್ನಾಗಿ ಕೊಯ್ಯಬೇಕೇ ಹೊರತು ಮನಸ್ಸನ್ನು ಭಾರವಾಗಿಸುವ ನೋವು ನಿರಾಶೆ ಅತೃಪ್ತಿ ಆ ಸಂತೋಷಗಳೆಂಬ ಭಾರವಾದ ವಸ್ತುಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದೆ ಹೊರಡಬೇಕು.ಲೆಸ್ ಲಗೇಜ್ ಮೋರ್ ಕಂಫರ್ಟ್ ಎಂಬ ಮಾತು ಬದುಕಿನ ಪಯಣಕ್ಕೂ ಸೂಕ್ತವಾಗಿದೆ.ನಮ್ಮ ಬದುಕಿನಲ್ಲಿ ನಾವು ಬಹು ದೂರ ಸಾಗಬೇಕಾದ ಪರಿಸ್ಥಿತಿಯಲ್ಲಿ ನಮ್ಮೊಂದಿಗೆ ಹೆತ್ತವರು, ಒಡಹುಟ್ಟಿದವರು, ಸಂಗಾತಿ, ಮಕ್ಕಳುಸಂಬಂಧಿಗಳು ಸ್ನೇಹಿತರು ಜೊತೆ ಇರಬೇಕು. ನಮ್ಮ ಹೆಗಲ ಮೇಲೆ ನಾವು ಮಲಗಲು ಸಾಧ್ಯವಿಲ್ಲ…. ನಮ್ಮ ಮನದ ಭಾವನೆಗಳನ್ನು ಹಂಚಿಕೊಂಡು ಹಗುರವಾಗಲು ನಮಗೆ ಬೇರೊಬ್ಬರ ಹೆಗಲು ಬೇಕೇ ಬೇಕು.ನಮ್ಮ ಬದುಕಿನ ಉದ್ದೇಶ ಮತ್ತು ಗುರಿಗಳು ಸ್ಪಷ್ಟವಾಗಿದ್ದು ತಲುಪುವ ಗಮ್ಯದ ಅರಿವು ನಮಗಿರಬೇಕು….. ಅಂದರೆ ನಮ್ಮ ಪಯಣ ಅತ್ಯಂತಸುರಕ್ಷಿತ ಹಾಗೂ ತೃಪ್ತಿದಾಯಕವಾಗಿರುತ್ತದೆ. ಏನಂತೀರಾ ಸ್ನೇಹಿತರೇ?….. ನೀವು ಕೂಡ ನಿಮ್ಮ ಬದುಕಿನ ಪಯಣವನ್ನು ಅತ್ಯಂತ ಸರಳ ಹಾಗೂ ಸುಂದರವಾದ ಬದುಕಿನ ಪಯಣ ನಿಮ್ಮದಾಗಿರಲಿ ವೀಣಾ ಹೇಮಂತ್ ಗೌಡ ಪಾಟೀಲ್







