ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಕರ್ನಾಟಕವು ಹಲವು ಶರಣರ ಸಂತರ ದಾರ್ಶನಿಕರ ನೆಲೆಬೀಡು.  ಸಂಪ್ರದಾಯಸ್ಥ ವಿಶ್ವ ಕರ್ಮರ  ಕುಟುಂಬದಲ್ಲಿ ಜನಿಸಿ ಅತ್ಯಂತ ವೈಚಾರಿಕತೆಯ ವಚನಗಳನ್ನು ರಚಿಸಿ ಸಾಮಾಜಿಕ ಧಾರ್ಮಿಕ ಅಂಕು ಡೊಂಕುಗಳನ್ನು ತಿದ್ದಿ ಟೀಕಿಸುವ ವಿಡಂಬಿಸುವ ತನ್ನ ಹುಟ್ಟು ಕುಲದ ಜನರನ್ನೇ ಟೀಕಿಸಿ ಎಚ್ಚರಿಸುವ ದಿಟ್ಟ ಶರಣ ಸಂಸ್ಕೃತಿಯ ವಾರಸುದಾರ ತಿಂಥಣಿ ಮೌನೇಶ್ವರ ಅಥವಾ ಮೌನಪ್ಪ ಮೌನೋದ್ದಿನ ಎಂಬ ಬೇರೆ ಬೇರೆ ಸಮುದಾಯದ ಪ್ರೀತಿಗೆ ಭಕ್ತಿಗೆ ಪಾತ್ರರಾದವರು ಮೌನೇಶ್ವರರು. ಪೌರಾಣಿಕ ಹಿನ್ನೆಲೆ ಅಂದಿನ ಗುಲಬರ್ಗಾ ಜಿಲ್ಲೆಯ ಇವತ್ತಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ  ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ  (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು ‘ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ’ ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ “ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ” ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು  ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ ಎಂಬ ಐತಿಹ್ಯ ಪೌರಾಣಿಕ ಕಥೆಗಳಿಂದ ಮೌನೇಶ್ವರನ ಚಿತ್ರಣ ವ್ಯಕ್ತವಾಗಿದೆ. ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ ಎನ್ನುವ ಐತಿಹ್ಯವೂ ಇದೆ. ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ.  16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ.  ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ತಮ್ಮ ಎಲ್ಲ ವಚನಗಳಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಹೆಸರನ್ನು ಅಂಕಿತನಾಮವಾಗಿ ಬರೆದಿರುವುದನ್ನು ಕಾಣಬಹುದು. *ಭಾವೈಕ್ಯತೆಯ ಸಂತ* ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ: “ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ ನಿಂದಿಸಿದವನೇ ಅಧಮನು” ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಸರಳ ಸಜ್ಜನಿಕೆಯ ಆಚಾರ ವಿಚಾರಗಳಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಸಾಮಾಜಿಕ ಸುಧಾರಣೆಯನ್ನು  ಮೆರೆದವರೆಂಬುದು ಇತಿಹಾಸ.  ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ- ‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್ ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||’ ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ! ಜನನ ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್​ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! *ಜೀವನ ಮತ್ತು ಬಾಲ್ಯ ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ತುಂಬಾ ಕಡಿಮೆ. ಅವರ ಬಗ್ಗೆ    ಕಥೆ ಐತಿಹ್ಯ ಏನೇ ಇದ್ದರೂ  ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ.  ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ. ಸಾಹಿತ್ಯ ಸಂಪದ ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ. *ಉಪನಯನ ವೈದಿಕ ಸಂಸ್ಕಾರ ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು. *ಸಾಹಿತ್ಯ ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ- ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ|| ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2|| ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ! ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು. ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ *ಬದುಕೆ ಅನುಭವ ಪಾಠ ಶಾಲೆ* ________________________ ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ

ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-14 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಲೇ: ಸವಿತಾ ದೇಶಮುಖ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು  ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ  ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ   ವಚನವನ್ನು ನೆನಪಿಸಿ ಕೊಡುತ್ತಿದ್ದರಂತೆ.“ಇವನಾರವ ಇವನಾರವ ಇವನಾರವ ಎಂದೇನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಎನಿಸಯ್ಯ…..” ಅನ್ನುವ ವಚನ ತಾಯಿಗೆ ಮೇಲಿಂದ ಮೇಲೆ ಹೇಳಿ ಅವರ ಮನವನ್ನು ಬದಲಾಯಿಸಿದರು ಅಂತ ತಾಯಿಯವರೇ ಸ್ವಂತ ಹೇಳುತ್ತಿದ್ದರು.  ಜಾತಿ ಮೀರಿದ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದರು.ಜಾತಿ ಭೇದವನ್ನು ಕಡಿಮೆ ಮಾಡಲು ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು.“ಪ್ರೇಮಕ್ಕೆ ಜಾತಿ ಬೇಧವಿಲ್ಲ” ಎಂಬುದನ್ನು ಅವರು ಸಮರ್ಥಿಸಿದರು. ಇಂತಹ ವಿವಾಹಗಳಿಗೆ ಸಾಮಾಜಿಕ ಒಪ್ಪಿಗೆ ಸಿಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. “ಮಾನವೀಯತೆ ಧರ್ಮಕ್ಕಿಂತ ದೊಡ್ಡ ಧರ್ಮ ಇನ್ನಾಆವುದು ಇರಲಾರದು” ಎಂಬುದು ಅವರ ಸಂದೇಶ.  ವೈಯಕ್ತಿಕ ಜೀವನದಲ್ಲಿಯೂ ಅನುಸರಿಸಿದ್ದರು .ತಮ್ಮ ಮನೆ ಬಾಗಿಲು ಎಲ್ಲರಿಗೂ ತೆರೆಯಲ್ಪಟ್ಟಿತ್ತು.ಯಾರೇ ಬಂದರೂ ಅವರ ಜಾತಿ-ಮತ ಕೇಳದೆ ಸಹಾಯ ಮಾಡುತ್ತಿದ್ದರು. ಆದರಾತಿಥ್ಯವನ್ನು ಕೊಟ್ಟು ಕಳಿಸುತ್ತಿದ್ದರು.  ಸಜೀವ ಘಟನೆಗಳನ್ನು ಉಲ್ಲೇಖ ಮಾಡಬೇಕೆಂದರೆಆ ಕಾಲದಲ್ಲಿ ಸಮಾಜದ ಮನಸ್ಸುಗಳಲ್ಲಿ ಇನ್ನೂ ಕೀಳರಿಮೆ ಮತ ಭೇದದ ನೆರಳಿನಲ್ಲಿ ನರಳುತ್ತಿತ್ತು… ಜಯದೇವಿ ತಾಯಿಯವರು … ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರೂ, ಅವರ ಹೃದಯ ಮಾತ್ರ ಮಣ್ಣಿನಂತೇ ಮೃದು….ಆ ಪ್ರದೇಶದಲ್ಲಿ “ಪಾರದೇರು” ಎನ್ನುವ ಒಂದು ಜಾತಿಯ ಜನರ ಬಗ್ಗೆ ಜನರಲ್ಲಿ ಭಯ ಇತ್ತು.“ಅವರು ಕಳ್ಳರು… ಮೋಸಗಾರರು…” ಎಂದು ಸಮಾಜದಿಂದ ಅವರಿಗೆ ದೂರ ಇಡಲ್ಪಟ್ಟಿತು.ಯಾರೂ  ಕೆಲಸ ಕೊಡುತ್ತಿರಲಿಲ್ಲ. ಅವರು ತಪ್ಪು ದಾರಿಗೆ ಹೋಗುವುದೇ ಅವರ ಬದುಕಿನ ಮಾರ್ಗವಾಗಿಬಿಟ್ಟಿತ್ತು….. ಒಂದು ದಿನ, ಆ ಸಮುದಾಯದ ಒಬ್ಬ ಮುಖಂಡನು ಜಯದೇವಿ ತಾಯಿಯವರ ಸಮಾಜಮುಖಿ  ಕೆಲಸಗಳನ್ನು ನೋಡಿ ಭೇಟಿ ಮಾಡಲು ಬಂದನು.ಅವನ ಕಣ್ಣುಗಳಲ್ಲಿ ಹತಾಶೆ… ಮನಸ್ಸಿನಲ್ಲಿ ನೋವು ಹೊತ್ತು ಬಂದಿದ್ದಾ…“ತಾಯಿ… ನಾವು ತಪ್ಪು ಮಾಡಿದ್ದೇವೆ… ಆದರೆ ನಮಗೆ ಯಾರು ಕೆಲಸ ಕೊಡಲ್ಲ… ನಾವು ಸುಳ್ಳು ತನ ಕಳ್ಳತನ ಮಾಡದೆ ಇದ್ದರೆ ನಮ್ಮ ಜನಾಂಗದವರು ಬದುಕೋದು ಹೇಗೆ?” ಎಂದು ಕೇಳಿದನು.ಆ ಮಾತು ಕೇಳಿ ತಾಯಿಯವರ ಹೃದಯ ಕದಲಿತು.  ತಾಯಿಯವರ ನಂತರ ನಿಧಾನವಾಗಿ ಹೇಳಿದರು…“ನೀವು ತಪ್ಪು ಮಾಡುವುದನ್ನು ಒಪ್ಪಿಕೊಳ್ಳುತ್ತಾ ಇದ್ದೀರಿ… ತಪ್ಪುಗಳನ್ನು ಮಾಡುತ್ತಾ ಬರುತ್ತಲೇ ಇದ್ದೀರಿ..ಆದರೆ ನೀವು ಮನುಷ್ಯರು…ನಿಮಗೆ ಅವಕಾಶ ಕೊಟ್ಟರೆ ಬದಲಾಗ ಬಹುದೇನೋ…ನೋಡೋಣ ಹಾಗಿದ್ದರೆ“ನೀವು ನನ್ನ ಹೊಲಕ್ಕೆ ಬನ್ನಿ… ಕೆಲಸ ಮಾಡಿ…” ಎಂದು ಆಹ್ವಾನಿಸಿದರು.ಹೀಗೆ ಹೊಸ ಜೀವನದ ಆರಂಭ ಪಾರದೇರು ಜನಾಂಗಕ್ಕೆ ಆಯಿತು. ಅನೇಕ ಜನರಿಗೆ ಅವರು ಕೇವಲ ಕೆಲಸ ಕೊಟ್ಟರಲ್ಲದೇ… ವಾಸಿಸಲು ಹೊಲಗಳಲ್ಲಿ ಜಾಗ ಕೊಟ್ಟರು…ನಿನ್ನೆಯವರೆಗೆ ಕಳ್ಳತನ ಮಾಡುತ್ತಿದ್ದ ಕೈಗಳು,ಇಂದು ಮಣ್ಣನ್ನು ಅಗೆದು ಬೆಳೆ ಬೆಳೆಸತೊಡಗಿದವು. ಇದನ್ನು ನೋಡಿದ ಅನೇಕ ಜನರು ಆಶ್ಚರ್ಯದಿಂದ“ಇವರು ಬದಲಾಗ್ತಾರಾ?” ಎಂಬ ಸಂಶಯಪಟ್ಟರು.ಆದರೆ ತಾಯಿಯವರ ನಂಬಿಕೆ ಗೆದ್ದಿತು.ಆ ಜನರು ತಮ್ಮ ಜೀವನವನ್ನು ಸತ್ಯದ ದಾರಿಯಲ್ಲಿ ಸಾಗಿಸಲು ಆರಂಭಿಸಿದರು. ಮುಂದೆ ಭಾರತದಲ್ಲಿ ಲ್ಯಾಂಡ್ ರಿಫಾರ್ಮ್ ಕಾಯಿದೆ ಜಾರಿಯಾದಾಗ, ಹಲವಾರು ಜಮೀನುಗಳು ರೈತರ ಹೆಸರಿಗೆ ಬರೆಯ ಆರಂಭವಾಯಿತು.ಆ ಸಮಯದಲ್ಲಿ ಜಯದೇವಿ ತಾಯಿಯವರು ದೊಡ್ಡ ನಿರ್ಧಾರ ಕೈಗೊಂಡರು.“ಈ ಭೂಮಿಯನ್ನು ಯಾರು ನಿಜವಾಗಿ ಬೆಳೆದಿದ್ದಾರೆ…ಅವರಿಗೆ ಒಪ್ಪಿಸುವಂತೆ…ಪಾದರೆಯ ಜನರು ಕೆಳ ಜಾತಿಯ ಜನರ ಹೆಸರನ್ನು ನೋಂದಾಯಿಸಿದರು.ಹೀಗೆ,ಒಮ್ಮೆ ಸಮಾಜದಿಂದ ತಳ್ಳಲ್ಪಟ್ಟ “ಪಾರದೆರು” ಜನರು,ತಾಯಿಯವರ ಕೃಪೆಯಿಂದ ತಮ್ಮದೇ ಭೂಮಿಯ ಒಡೆಯರಾಗಿದರು. ಶತಶತಮಾನಗಳಿಂದ ಆಳಾಗಿ ದುಡಿಯುತ ಬಂದವರಿಗೆ ಆ ದಿನ ಕಣ್ಣುಗಳಲ್ಲಿ ಕಣ್ಣೀರು…ಹರಿದವುಆದರೆ ಅದು ನೋವಿನಲ್ಲ ಕಣ್ಣಿರಲ್ಲ… ಗೌರವದಿಂದ ಕೂಡಿತ್ತು…“ನಮಗೆ ಜೀವನ ಕೊಟ್ಟವರು ತಾಯಿ…” ಎಂದು ಇನ್ನು ಆದರೂ ನೆನೆಯುತ್ತಾರೆ.“ಜಯದೇವಿ ತಾಯಿಯವರು ಕೇವಲ ಭೂಮಿಯನ್ನು ಕೊಡಲಿಲ್ಲ ಅವರ ಜೀವನಕ್ಕೆ ದಿಕ್ಕು ತೋರಿಸಿದ ತಾಯಿಯಾದರು…” ಮುಂದೆ….ಸಮಾಜ ಏಕತೆ, ಸಮಾನತೆ ಮತ್ತು ಚೇತನ ಶಕ್ತಿಯನ್ನು ಸಜೀವವಾಗಿ ಕಟ್ಟಲು…*ಶರಣ ಸಮಾಜ* ಸಂಘವನ್ನು ಕಟ್ಟಿದರು‌. ಗಾಂಧೀಜಿಯವರು ಕೀಳ ಜಾತಿಯವರಿಗೆ ಹರಿಜನರೆಂದು ಹೆಸರು ಕೊಟ್ಟಸಮಯ .. ಗಾಂಧೀಜಿಯವರ ಧ್ಯೇಯ- ಸದುದ್ದೇಶಕ್ಕಾಗಿ ಸ್ಪೂರ್ತಿದಾಯಕವಾಗಿ *ಶರಣ ಸಮಾಜ* ನಿರ್ಮಾಣಗೊಂಡಿತ್ತು. *ದೀನ ದಲಿತರಿಗೆ | ಹೀನ ಪಾಮರರಿಗೆತನ್ನ ಬಳಿ ಸೆಳೆದುಕೊಂಡ- ಪುಣ್ಯಜೀವಿಹರಿಜನರೆಂಬ ಹೆಸರ ಕೊಟ್ಟಗಾಂಧೀಜಿ * ಎಂದು ಗಾಂಧೀಜಿಯವರ ಬಗ್ಗೆ ತಾಯಿಯವರು ಹಾಡಿ ಹೊಗಳಿದರು.ಎಲ್ಲರೂ ಒಂದೇ ಕುಟುಂಬದವರಂತೆ ಬದುಕಬೇಕು ಜಾತಿ-ಮತ ಭೇದಗಳು ಗಟ್ಟಿಗಳ ಬೇರುಸಹಿತ ಕಿತ್ತೆಸೆಯಲು.ಭೇದಗಳ ಒಡೆಯಬೇಕೆಂದು ಜಯದೇವಿ ತಾಯಿಯವರ ಒಂದು ದೊಡ್ಡ ಕನಸು  .ಈ ಆಲೋಚನೆಯಿಂದಲೇ ಅವರು “ಶರಣ ಸಮಾಜ” ಎನ್ನುವ ಸಂಘವನ್ನು ಸ್ಥಾಪಿಸಿದರು. ಈ ಸಂಘ ಕೇವಲ ಒಂದು ಸಂಸ್ಥೆಯಂತಲ್ಲ…ಇದು ಒಂದು ಚಳವಳಿ…ಸಂಘದ ಉದ್ದೇಶವೆಂದರೆಜಾತಿ, ಮತ, ವರ್ಗ ಎಂಬ ಗೋಡೆಗಳನ್ನು ಒಡೆಯುವ ಪ್ರಯತ್ನ.ಇಲ್ಲಿ ಎಲ್ಲ ಸಮಾಜದ ಜನರು‌…ಬಡವರು, ಶ್ರೀಮಂತರು, ದಲಿತರು, ಮೇಲ್ಜಾತಿಯವರುಎಲ್ಲರೂ ಒಂದೇ ವೇದಿಕೆಯಲ್ಲಿ ಕೂತುಕೊಳ್ಳುತ್ತಿದ್ದರು. ಇಂಥ  ಮಹತ್ವದ ಕಾರ್ಯಕ್ಕೆ ಗೌರವ ನೀಡಲು, ಮುಂದಿನ ದಿನಗಳಲ್ಲಿ ತಾಯಿಯವರು ದೇಶದ ಪ್ರಮುಖ ನಾಯಕನಾದ*ಬಾಬು ಜಗಜೀವನ್ ರಾಮರನ್ನು *ಮನೆಗೆ ಆಹ್ವಾನಿಸಿ ಬೆಳ್ಳಿಯ ತಟ್ಟೆಯಲ್ಲಿ ಊಟಕ್ಕೆ ಇರಿಸಿದ್ದರು.ಆ ದಿನದ ವಾತಾವರಣ ಕಂಡು ಅತ್ಯಂತ ಉತ್ಸಾಹಭರಿತರಾದ ಜನರು, ವಿವಿಧ ಸಮುದಾಯದವರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.  ಜಯದೇವಿ ತಾಯಿಯವರನ್ನು ಉದ್ದೇಶಿಸಿಬಾಬು ಜಗಜೀವನ್ ರಾಮ್ ಅವರು ಮಾತನಾಡುತ್ತಾ ಹೇಳಿದರು:“ಸಮಾನತೆ ಎನ್ನುವುದು ಕೇವಲ ಮಾತಲ್ಲ…ಅದನ್ನು ಜೀವನದಲ್ಲಿ ಅನುಸರಿಸುವವರೇ ನಿಜವಾದ ನಾಯಕರಾಗಲು ಸಾಧ್ಯ… ಜಯದೇವಿ ತಾಯಿಯವರೊಂದು  ಆಧ್ಯಾತ್ಮಿಕ ಜೀವಿಯು  ಕೂಡಾ ಇಂಥವರು ನಿಮ್ಮ ಮಧ್ಯದಲ್ಲಿ ಇದ್ದಿದ್ದು ನಿಮ್ಮಲ್ಲರ ಪುಣ್ಯವೇ ಸರಿ”ಎನ್ನುತಅವರು ತಾಯಿಯವರ ಕಾರ್ಯವನ್ನು ಹೊಗಳಿದರು.ಆ ಮಾತುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದವು . “ಶರಣ ಸಮಾಜ”ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು..ಎಲ್ಲ ಜಾತಿಯವರಿಗೂ ಸಹಭೋಜನಶಿಕ್ಷಣ ಮತ್ತು ಜಾಗೃತಿ ಶಿಬಿರಗಳುಮಹಿಳಾ ಸಬಲೀಕರಣ ಕಾರ್ಯಕ್ರಮಗಳುದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೆರವು… ಇಲ್ಲಿ “ನಾನು–ನೀನು” ಎನ್ನುವ ಭೇದವಿಲ್ಲ…“ನಾವು” ಎನ್ನುವ ಭಾವನೆ ಮಾತ್ರ ಇತ್ತು. ಇಂಥ ಸಂಘಗಳ ಸಂಘಟನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಆರಂಭವಾಯಿತು ಅಂತ ಹೇಳಬಹುದುಜನರು ಪರಸ್ಪರ ಗೌರವದಿಂದ ನೋಡಲು ಆರಂಭಿಸಿದರು.ಒಮ್ಮೆ ದೂರ ದೂರ ಇದ್ದ ಹೃದಯಗಳು,ಸ್ವಲ್ಪಮಟ್ಟಿಗಾದರೂ ಹತ್ತಿರವಾಗತೊಡಗಿದವು.ಈ ಚಳುವಳಿಯಲ್ಲಿ ಶರಣ “ಕಂಬಳಿ ಬಾಬ” ಅವರ ಕಾರ್ಯ ಮಹತ್ವದ್ದು ಎಂದು ನೆನೆಯಬೇಕಾಗುತ್ತದೆ. ಜಯದೇವಿ ತಾಯಿಯವರು ಹೇಳ್ತಾರೆ ….*ಎಲ್ಲರೂ ತೋರಿರುವ| ಹೆದ್ದಾರಿ ಒಂದಿರಲುತಿದ್ದದಲೇ ಮನ ಬುದ್ಧಿಗಳು- ಲೋಕದಿಒದ್ದಾಡುವರು ಕೀಳು ಮೇಲೆಂದು* ಶರಣ ಸಮಾಜವು ಸಮಾನತೆಯ ಬೀಜ ಬಿತ್ತಿದ ಸಾಹಸದ ಚಳುವಳಿಯಾಗಿತ್ತು. ಹುಟ್ಟಿಗೆ ಕುಲವಿಲ್ಲ | ಬಟ್ಟೆಗೆ ಬೆಲೆ ಇಲ್ಲಮಟ್ಟ ಅರಿಬೇಕು ಆಚಾರದ- ಶಿವನಲ್ಲಿದಿಟ್ಟಿ ಇಡಬೇಕ ನಿಶ್ಚಯದಿ!! ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ವ್ಯಕ್ತಿ ಇರಲಿ ಅವನು ಹುಟ್ಟಿ ಬರುವಾಗ ಆ ಜಾತಿ ಈ ಜಾತಿ ಸೇರಿದವನಲ್ಲ …. ಹಣೆಗೆ ಪಟ್ಟಿ ಹಂಚಿಕೊಂಡು ಹುಟ್ಟಿದವನಲ್ಲ ಜನ್ಮ ತಾಳಿದ ಶಿಶುವಿಗೆ ಯಾವ ಜಾತಿ ಇದೆ ಹೇಳಿ ಯಾವ ಕುಲವಿದೆ ಗೋತ್ರವಿದೆ ?!…ಎಂದು ತಾಯಿಯವರು ಕೇಳುತ್ತಿದ್ದರು‌. ಅದೇ ರೀತಿ ಬಟ್ಟೆಗೆ ಬೆಲೆ ಇಲ್ಲ ಅಂದ್ರೆ ಬದುಕು ಮಾಡಲು ಪ್ರತಿ ಜೀವಿಯು ಕಾಯಕವನ್ನು ಮಾಡಿ ಬದುಕಬೇಕಾಗುತ್ತದೆ.ಕಾಯಕಕ್ಕೆ ಮೇಲು ಕೀಳು ಎಂಬ ತಾರತಮ್ಯ ಸಲ್ಲದು ಯಾವ ಕಾಯಕವೂ ಮಾಡಿದರೂ ಅದು ಶ್ರೇಷ್ಠವಾದದ್ದೇ ಅಂತ ಅಂದರೆ “Dignity of Labour ” ಅನ್ನು ಎತ್ತಿ ಹೇಳುತ್ತದೆ.  ಕಾಯಕ ಶ್ರೇಷ್ಠತೆಯಿಂದ  ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎನ್ನುತ್ತಾ ಸಾಮಾಜಿಕ ಕ್ರಾಂತಿಯಗೆ ತಿರುವು ಕೊಟ್ಟ ಕೀರ್ತಿ ನಮ್ಮ ಶರಣ ಸಮಾಜಕ್ಕೆ ಸಲ್ಲುವುದು ಅನ್ನುತ್ತಿದ್ದರು.  ವಿಶ್ವ ಇತಿಹಾಸದಲ್ಲಿ   ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನ ಹೆಸರು ಮೊದಲಾಗುವುದು…. ಸತ್ಯ ಶುದ್ಧ ಕಾಯಕದ ಅನುಷ್ಠಾನ ಮನುಜನ ಆದ್ಯ ಕರ್ತವ್ಯ … ಕೈಗೊತ್ತಿಕೊಂಡ ಕಾಯಕದಲ್ಲಿ ಭಕ್ತಿ ಶ್ರದ್ಧೆ ಇರಬೇಕು ಅದಕ್ಕೆ ಮೇಲು ಕೀಳ ಎಂಬ ಸೂತಕ ತಟ್ಟಬಾರದು ಅನ್ನುತ್ತಿದ್ದರು ತಾಯಿಯವರು…  ವೈಚಾರಿಕ ಆಚಾರವೆಂದರೆ ದುಡಿಮೆ ದಾನ ಏನೇ ಇದ್ದರೂ ಎಷ್ಟೇ ಇದ್ದರು ಆಚಾರ ರಹಿತ ವರ್ತನೆಯಲ್ಲಿ ಅದು ಸಂಪೂರ್ಣ ನಿರರ್ಥಕ , ಆದ್ದರಿಂದ ಆಚಾರ ಸಂಪನ್ನನಾಗಿರಬೇಕು ಮನುಷ್ಯ ಅನ್ನುತ್ತಾರೆ ಇದು ಕಾಯದಿಂದ ಬಂದ ಹಣ ಯೋಗ್ಯವಾದ  ಕರ್ಮ ಕ್ರಿಯೆಗಳಾದ ಜಂಗಮ ದಾಸೋಹಕ್ಕೆ ಗುರು ಸೇವೆಗೆ ಲಿಂಗದ ಆರಾಧನೆಯೇ ಅಂತಹ ಕೆಲಸಕ್ಕೆ ಸಲ್ಲಬೇಕು. ಸದಾಚಾರ ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಅನ್ನುತ್ತಿದ್ದರು . * ಪರಶಿವನ ಸೇವೆಯಲ್ಲಿ ಸದಾ ತೊಡಗುವುದೇ ಶಿವಾಚಾರ ನಡೆ-ನುಡಿಗಳಲ್ಲಿ ಮಡಿಯಾದವರು ಶಿವಾಚಾರ ಸಂಪನ್ನರು ಅಂತ ಹೇಳ್ತ… ಜಾತಿ ಮತ ರಹಿತ‌ಸಮಾಜ ನಿರ್ಮಿಸಲು ತಾಯಿಯವರು ಒತ್ತುಕೊಟ್ಟವರು.( ಮುಂದುವರೆಯುವುದು) ಸವಿತಾ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. *ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂದುಡಿಕಿ ಮನ ನೋಯಿಸಬೇಡಿ* ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು.ಇದನ್ನು ವಿಸ್ತಾರವಾಗಿ ನೋಡಿದರೆ ಅವರ ಜೀವನದಲ್ಲಿ ನಡೆದಂತಹ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು. ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ* ಕೆಂಜಡೆಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವನವರು  ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರು, ಕೆಳ ಜಾತಿಯ  ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛಗೊಳಿಸಿದ ನೀರನ್ನು ತುಂಬಿಡುವ ಮಡಿವಂತಿಕೆ ಅವರದಾಗಿತ್ತು .ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಕಳವಳಗೊಂಡು ಶರಣರು ಉತ್ತಿಬಿತ್ತಿ ಬೆಳೆದಂಥ   ವಚನವನ್ನು

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-20 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ರಣರಂಗ ಪ್ರವೇಶಿಸದಂತೆ ರಾಜಕುವರನನ್ನು ತಡೆದಿತ್ತು ರತಿಕಾಮನೆ    ಹಂಸಧ್ವಜ ಕಾಯುತ್ತಿದ್ದದ್ದು ಪ್ರೀತಿಯ ಮಗ ಸುಧನ್ವನ ಬರುವಿಕೆಗಾಗಿ. ಅವನು ವಿಳಂಬ ಮಾಡಿದ್ದಾನೆ ಎಂಬ ಕೋಪ ಹಂಸಧ್ವಜನಲ್ಲೀಗ ಮೂಡತೊಡಗಿತ್ತು. ರಣವೀರ ಸುಧನ್ವ ರಣರಂಗದೆಡೆಗೆ ಬರಲು ವಿಳಂಬವಾದುದಕ್ಕೆ ಸಕಾರಣವಿತ್ತು. ಸೈನಿಕರು ಯುದ್ಧಕ್ಕೆ ಸಿದ್ಧರಾಗಿ ಹೋಗುತ್ತಿದ್ದುದನ್ನು ಕಂಡ ಸುಧನ್ವ ತಾನೂ ತಯಾರಾದ. ವೇಷಭೂಷಣಗಳನ್ನು ಧರಿಸಿಕೊಂಡ. ಮನವನ್ನು ರಣಶೌರ್ಯಕ್ಕೆ ಸಿದ್ಧವಾಗಿಸಿಕೊಂಡ. ಹೋಗಿ ಸಾಷ್ಟಾಂಗ ವಂದಿಸಿದ್ದು ತಾಯಿಯ ಚರಣಕಮಲಗಳಿಗೆ. “ಕುದುರೆಯನ್ನು ಕಟ್ಟಿ ಕದನವನ್ನು ಮಾಡಹೊರಟಿರುವ ನನ್ನ ಮೇಲೆ ನಿನ್ನ ಪೂರ್ಣ ಆಶೀರ್ವಾದವಿರಲಿ ತಾಯೇ” ಎಂದು ಬೇಡಿದ.      ಮಗನ ಮನವನ್ನು ವೀರತ್ವದಿಂದ ಹರಿದಾಸತ್ವದೆಡೆಗೆ ಸೆಳೆವ ಪರಮವಾಣಿ ಮೊಳಗಿತು ಆ ಕ್ಷಣದಲ್ಲಿ ಮಾತೆಯ ಮನದಾಳದಿಂದ. “ಅರ್ಜುನನ ಯಾಗದ ಕುದುರೆಯದು ನಾಲ್ಕಡಿಯ ದೇಹವನ್ನು ಹೊಂದಿದೆಯಷ್ಟೇ. ಅದರ ಗೊಡವೆಗಿಂತಲೂ ಆ ಪೊಡವೀಪತಿ ಶ್ರೀಕೃಷ್ಣನನ್ನು ಒಲಿಸುವ ಬುದ್ಧಿಯದು ನಿನಗೆ ಒಲಿಯಬೇಕಿದೆ. ನಿನ್ನ ಸಾಹಸವನ್ನು ಮೆಚ್ಚಿ ಆ ಅಸುರಾರಿ ಇಂದು ಪ್ರತ್ಯಕ್ಷನಾದರೆ ನಾವೆಲ್ಲರೂ ಸಾಕ್ಷಾತ್ ಕಾಣಬಹುದು ಅವನ” ಎಂದಳು ಸುಧನ್ವ ಮಾತೆ.      ಮಾತೆ ಮಾತದು ಪ್ರೇರೇಪಿಸಿತು ಸುಧನ್ವನನು ಪ್ರತಿಜ್ಞಾಬದ್ಧತೆಯೊಂದರ ಕಡೆಗೆ. “ಅರ್ಜುನನಿಗೆ ನೋವಾದರೆ ಆ ಶ್ರೀಕೃಷ್ಣ ಬಾರದೇ ಇರುವನೇ! ಆಪ್ತರ ಆರ್ತನಾದವನ್ನು ಆ ಆಪದ್ಬಾಂಧವ ಸಹಿಸಿಯಾನೇ! ಇಂದ್ರಸುತನೊಡನೆ ಹೋರಾಡುವೆ ಶೌರ್ಯದಿಂದ. ತನ್ಮೂಲಕ ಆ ಹರಿಯನ್ನು ನಮ್ಮೀ ಧರಣಿಗೆ ಬರಗೊಡುವೆ. ನಂತರ ಆ ಕೃಷ್ಣನ ಮುಂದೆ ನನ್ನ ಪೌರುಷವನ್ನು ತೋರಿಸುವೆ” ಎಂದು ದಿಟ್ಟತನದಿಂದ ನುಡಿದನು ಸುಧನ್ವ.      ಶ್ರೀಕೃಷ್ಣ ಬಂದಾಗ ಮಗನೆಲ್ಲಿ ಯುದ್ಧಕ್ಕೆ ವಿಮುಖನಾಗುವನೋ ಎಂಬ ಭಾವ ಆ ತಾಯಿಯನ್ನು ಕಾಡಿತು. ಅದನ್ನೇ ಹೇಳಿದಳು ಮಗನಲ್ಲಿ. “ಕೃಷ್ಣಾಗಮನದ ಗಳಿಗೆಯಲ್ಲಿ ನೀನು ಯುದ್ಧಕ್ಕೆ ವಿಮುಖನಾದರೆ ಜನರ ಮುಂದೆ ಮರ್ಯಾದೆ ನಾಶವದು ಖಚಿತ” ಎಂಬ ಎಚ್ಚರಿಕೆ ನೀಡಿದಳು.     “ಕೃಷ್ಣನಿಗೆ ವಿಮುಖನಾಗಿ ಬಂದರೆ ನಿನ್ನ ಗರ್ಭದಲ್ಲಿ ಜನಿಸಿದವನೇ ನಾನಲ್ಲ” ಎಂಬ ಧೀರನುಡಿಯನಾಡಿದ ಸುಧನ್ವ, ಕದನದಲ್ಲಿ ಭರಪೂರ ಶೌರ್ಯವನ್ನು ತೋರಿಸುವ ಆಶ್ವಾಸನೆಯನ್ನು ಅವಳಿಗಿತ್ತನು.      ಅಷ್ಟರಲ್ಲಿ ಬಳಿಗೆ ಬಂದ ಅವನ ಸಹೋದರಿ ಕುವಲೆಯೆನ್ನುವವಳು “ಕೃಷ್ಣನಿಗೆ ವಿಮುಖನಾಗಿ ನೀನು ಬಂದರೆ ನನ್ನ ಗಂಡನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯಲಾರೆ” ಎಂದು ಹೇಳಿ, ಅಣ್ಣ ಅಸಹಾಯ ಶೌರ್ಯ ತೋರಲಿ ಎಂದು ಹಾರೈಸಿ, ಆರತಿಯನೆತ್ತಿ, ಚಂದನದ ತಿಲಕವನ್ನಿಟ್ಟು, ಕರ್ಪೂರ ವೀಳ್ಯವನ್ನು ಕೊಟ್ಟು, ಅಕ್ಷತೆಯನ್ನು ಎರಚಿ ಕಳುಹಿಸಿಕೊಟ್ಟಳು ಸುಧನ್ವನನ್ನು.     ಹೀಗೆ ಯುದ್ಧಮುಖನಾಗಿ ಅರಮನೆಯಿಂದ ಹೊರಟುನಿಂತ ಸುಧನ್ವನಿಗೀಗ ಎದುರಾದವಳು ಪ್ರಭಾವತಿ. ಅವನ ಪ್ರಿಯ ರಾಣಿ. ಚಂದ್ರಮಂಡಲದಂತಿತ್ತು ಅವಳ ವದನ. ಹೊಸತು ಬೆಳದಿಂಗಳಂತೆ ಶೋಭಿಸುವ ಅವಳ ನಗು. ರೇಷ್ಮೆಯುಡುಗೆಯನ್ನು ತೊಟ್ಟು ಮೆರೆಯುತ್ತಿದ್ದಾಳೆ. ಅವಳ ಹಣೆಯ ಮೇಲಿನ ಕೆಂಬಣ್ಣದ ಸಿಂಧೂರ ತಿಲಕವದು ಅವಳ ಚಿತ್ತದ ಅನುರಾಗವನ್ನು ಸೂಚಿಸುವಂತಿದೆ. ಸೌಂದರ್ಯವನ್ನೇ ಹೊತ್ತುನಿಂತಿದ್ದಳು ಪ್ರಭಾವತಿ.      ಮಡದಿಯ ಬೆಡಗು ಬಿನ್ನಾಣಗಳನ್ನು ನೋಡಿ ಮುಗುಳುನಗುತ ಸುಧನ್ವ “ಇಂದು ಯುದ್ಧದಲ್ಲಿ ಅರ್ಜುನನ ಬಿಂಕವನ್ನು ಕೊನೆಗಾಣಿಸುತ್ತೇನೆ. ಕೃಷ್ಣ ಪ್ರತ್ಯಕ್ಷನಾದಾಗ ಅವನ ಮುಂದೆಯೂ ನನ್ನ ಪರಾಕ್ರಮದ ಪ್ರದರ್ಶನಗೈಯ್ಯುತ್ತೇನೆ. ಗೆಲುವನ್ನು ಪಡೆಯುತ್ತೇನೆ. ಅದಾಗದಿದ್ದರೆ ವೀರಮರಣವನ್ನು ಪಡೆದು ಮುಕ್ತಿಯನ್ನು ಗಳಿಸುತ್ತೇನೆ. ನನ್ನನ್ನು ಒಲವಿನಿಂದ ಕಳಿಸಿಕೊಡು ನೀನು” ಎಂದನು.      ರಾಣಿ ಪ್ರಭಾವತಿಯ ಆಕಾಂಕ್ಷೆಯದು ಬೇರೆಯದೇ ತೆರದಲ್ಲಿತ್ತು. ಕೃಷ್ಣನಿಗೆ ಯುದ್ಧದಲ್ಲಿ ಎದುರಾದ ಬಳಿಕ ಮೋಕ್ಷವಲ್ಲದೆ ಜಯ ದೊರೆಯಲು ಸಾಧ್ಯವಿಲ್ಲ ಎಂಬ ಅರಿವಿತ್ತು ಅವಳಿಗೆ. ಗಂಡ ಯುದ್ಧಕ್ಕೆ ಹೋಗುವುದಕ್ಕೂ ಮೊದಲು ತನ್ನನ್ನು ಕೂಡಿದರೆ ಆ ಬಳಿಕ ತಾನು ಸಂತಾನರಹಿತೆ ಎನಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವಳ ಯೋಚನೆ. ಕಾಮಾಸಕ್ತಿ ಅವಳಲ್ಲಿ ಗರಿಗೆದರಿತ್ತು. ತಾಯ್ತನದ ಹಂಬಲ ಅವಳನ್ನು ಕಾಡತೊಡಗಿತ್ತು. ತನ್ನನ್ನು ತೃಪ್ತಿಗೊಳಿಸಿ ಯುದ್ಧಕ್ಕೆ ತೆರಳು ಎಂದು ಕೇಳಿಕೊಂಡಳು ಸುಧನ್ವನನ್ನು.     ಯುದ್ಧರಂಗದೆಡೆಗೆ ಮುಖಮಾಡಿದ್ದ ಹಂಸಧ್ವಜಸುತನಿಗೆ ಮಡದಿಯ ಮಾತು ಸರಿದೋರಲಿಲ್ಲ. “ಕಾಮದಾಟಕ್ಕೆ ಇದು ಸಮಯವಲ್ಲ. ಕದನಭೇರಿ ನನ್ನನ್ನು ಕರೆಯುತ್ತಿದೆ. ನನ್ನ ತಂದೆ ಈಗಾಗಲೇ ರಣಭೂಮಿಯನ್ನು ಸೇರಿಯಾಗಿದೆ. ಸರಿಯಾದ ಸಮಯದಲ್ಲಿ ನಾನಲ್ಲಿ ಇರದಿದ್ದರೆ ಕ್ರಮವನ್ನು ಮೀರಿದಂತಾಗುತ್ತದೆ. ನೀನು ನನ್ನನ್ನೀಗ ತಡೆಯುವುದು ಸರಿಯಲ್ಲ. ನನ್ನನ್ನು ಹೋಗಲು ಬಿಡು” ಎಂದು ಹೇಳುತ್ತಾ ಅವನು ಮುಂದುವರಿಯುವ ಮನಸ್ಸು ಮಾಡಿದ.     ಆಗಲೇ ಅವಳು ಅವನ ಗಲ್ಲವನ್ನು ಹಿಡಿದು, ಮುದ್ದುಮಾಡಿ, ಅವನೆಡೆಗೆ ತನ್ನ ತನುವನ್ನು ನೂಕಿದಳು. ಮನ್ಮಥನ ರಣರಂಗವನ್ನು ಪ್ರವೇಶಿಸಬೇಕಾದ ನೀನು ಕುದುರೆಯನ್ನು ಗೆಲ್ಲಬೇಕಾದ ಯುದ್ಧರಂಗಕ್ಕೆ ಹೇಗೆ ಹೋಗುವೆಯೋ ನೋಡುತ್ತೇನೆ ಎಂಬಂತೆ ಅವಳು ತನ್ನೆರಡೂ ಮೊಲೆಗಳನ್ನು ಅವನ ದೇಹಕ್ಕೆ ಒತ್ತುತ್ತಾ, ಗಾಢವಾಗಿ ಆಲಿಂಗನಗೈದು ಶೃಂಗಾರ ಚೇಷ್ಟೆಗಳನ್ನು ತೋರಿದಳು. ಹಂಸಗಳ ತುಪ್ಪಳದಿಂದ ನಿರ್ಮಿಸಲಾದ ಹಾಸಿಗೆಯೆಡೆಗೆ ಅವನನ್ನು ಸೆಳೆದೊಯ್ದಳು.     ಮಡದಿಯ ಮೋಹದಾಟಗಳು ಯುದ್ಧರಂಗದೆಡೆಗೆ ಮುಖಮಾಡಿದ್ದ ಸುಧನ್ವನ ಅಂತರಂಗವನ್ನು ಇನ್ನೊಂದು ದಿಕ್ಕಿಗೆ ಹಾಯಿಸಿದವು. ಮನದನ್ನೆಯ ಮನದ ಕಾಮನೆಯನ್ನು ತಣಿಸಿ, ರಮಿಸುವುದರಲ್ಲೇನೂ ತಪ್ಪಿಲ್ಲ ಎಂದು ತೋರಿತು ಅವನಿಗೆ. ಸರಸದ ಮಾತುಗಳನ್ನಾಡಿದ. ಚುಂಬಿಸಿದ. ಪ್ರೀತಿಯಿಂದ ಅವಳೆದೆಯಲ್ಲಿ ಒರಗಿದ. ಕಾಮಿನಿಯ ಕಾಮದ ಕಡಲಲ್ಲಿ ಮುಳುಗಿಹೋದ ಸುಧನ್ವ.                                       ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿಬದುಕಿನ ಹಿನ್ನೋಟ-34 ಮರಳಿ ಮೈಸೂರಿಗೆ ಮೈಸೂರಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನದು ಐದನೆಯ ಸಂಖ್ಯೆಯಾಗಿತ್ತು. ಖಂಡಿತ ಈ ಬಾರಿ ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ಯೂನಿಯನ್ ನವರು ಸಹ ಹೇಳಿದ್ದರು. ಈ ನಡುವೆ ಶಾಖಾಧಿಕಾರಿಗಳ ಬದಲಾವಣೆ ಆಗಿ ಸಿ ಕೆ ರವಿ ಅವರು ವರ್ಗಾವಣೆ ಹೊಂದಿ ಮೈಸೂರು ಶಾಖೆ 5 ಕ್ಕೆ ಹೋದರು. ನಮ್ಮ ನಂಜನಗೂಡು ಶಾಖೆಗೆ ಶಿವಶರಣ್ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ಮುಂದೆ ಅವರು ನಮ್ಮ ವಿಭಾಗೀಯ ಕಚೇರಿಯ ಮಾರ್ಕೆಟಿಂಗ್ ಮ್ಯಾನೇಜರ್ ಸಹ ಆದರು. ನನಗೆ ಸಾಲ ವಿಭಾಗದಿಂದ ಪಿ ಎಸ್ ಜನರಲ್ ಅಂದರೆ ಪಾಲಿಸಿ ಸೇವಾ ಸಾಮಾನ್ಯ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ವಿಭಾಗದ ಕೆಲಸಗಳೆಂದರೆ ಪಾಲಿಸಿಗಳನ್ನು ಬೇರೆ ಶಾಖೆಗಳಿಗೆ ವರ್ಗಾವಣೆ ಮಾಡುವುದು, ಪಾಲಿಸಿಗಳಿಗೆ ಸಂಬಂಧಿಸಿದ ಅಸೈನ್ ಮೆಂಟ್ ಮತ್ತು ನಾಮ ನಿರ್ದೇಶನಗಳನ್ನು ಮಾಡುವುದು, ಪಾಲಿಸಿಗಳನ್ನು ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ಬದಲಾಯಿಸುವುದು, ಅಂದರೆ ಪ್ರೀಮಿಯಮ್ ಪಾವತಿಯ ವಿಧಾನ ಬದಲಾವಣೆ ಹಾಗೂ ಕಳೆದು ಹೋದ ಬಾಂಡ್ ಗಳ ಬದಲಾಗಿ ಡುಪ್ಲಿಕೇಟ್ ಬಾಂಡ್ ಗಳನ್ನು ಮಾಡಿಕೊಡುವುದು. ಇವೆಲ್ಲಾ ಸಹ ತುಂಬಾ ಆಸಕ್ತಿದಾಯಕ ಕೆಲಸಗಳೇ ಆಗಿದ್ದವು. ಇಲ್ಲಿ ಈ ಜಾಗಕ್ಕೆ ಸಹಾಯಕರು ಇರಲಿಲ್ಲ .ನಾನೇ ಮಾಡಿದ ಮೇಲೆ ಆಡಳಿತ ಅಧಿಕಾರಿಗಳು ಪಾಸ್ ಮಾಡುತ್ತಿದ್ದರು. ನೇರವಾಗಿ ಪಾಲಿಸಿ ದಾರರ ಜೊತೆಗೆ ವ್ಯವಹರಿಸುತ್ತಿದ್ದುದರಿಂದ ಒಂದು ರೀತಿ ಕೆಲಸದಲ್ಲಿ ಸಂತೃಪ್ತಿ ದೊರಕುತ್ತಿತ್ತು. ಬೇಕಾದ ಕೆಲಸವನ್ನು ಬೇಗನೆ ಮಾಡಿಕೊಟ್ಟಾಗ ಅವರುಗಳು ಧನ್ಯವಾದ ಹೇಳಿ ಖುಷಿಯಾಗುತ್ತಿದ್ದರೆ ಅದು ಸಾರ್ಥಕ ಭಾವನೆ ಮೂಡಿಸುತ್ತಿತ್ತು. ಈ ಮಧ್ಯೆ  ಜೂನ್ ೨೦೦೩ ರಲ್ಲಿ ಒಂದು ಸಣ್ಣ ಅಪಘಾತ ಆಯಿತು. ದಿನ ಅಶೋಕಪುರಂ ರೈಲ್ವೆ ಸ್ಟೇಷನ್ಗೆ ಹೋಗಲು ರವೀಶ್ ಅವರ ಹಳೆಯ ಲೂನವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಅಂದು ಬುಧವಾರ ಜೂನ್ ತಿಂಗಳ ಕಡೆಯ ವಾರ. ಆಗ ನಮಗೆ ಜುಲೈನಿಂದ ಹೊಸ ಸಾಂದರ್ಭಿಕ ರಜೆಗಳು ಹಾಗಾಗಿ ಎರಡು ಉಳಿದಿದ್ದನ್ನು ಗುರುವಾರ ಮತ್ತು ಶುಕ್ರವಾರ ಹಾಕಿಕೊಂಡು ಬಿಡೋಣ ಅಂದುಕೊಂಡಿದ್ದೆ. ಅಂದು ಮನೆ ಬಿಡುವಾಗಲೇ ಸ್ವಲ್ಪ ತಡವಾಗಿತ್ತು. ಒಂದು ಚೂರು ವೇಗವಾಗಿಯೇ ಹೋಗುತ್ತಿದ್ದೆ ಅಲ್ಲಿ ಶಿವನ ದೇವಸ್ಥಾನದ ಹಿಂದಿನ ರಸ್ತೆಯಿಂದ ಒಂದು ಹುಡುಗಿ ಇದ್ದಕ್ಕಿದ್ದಂತೆ ಸೈಕಲ್ ನಲ್ಲಿ ಮುಖ್ಯ ರಸ್ತೆಗೆ ನುಗ್ಗಿದಳು. ನಾನು ರಭಸವಾಗಿ ಹೋಗುತ್ತಿದ್ದರಿಂದ ಇಬ್ಬರೂ ವಾಹನ ಡಿಕ್ಕಿ ಹೊಡೆದು ಬಿದ್ದೆವು. ಆ ಹುಡುಗಿಗೆ ಸ್ವಲ್ಪ ಗಾಯಗಳಾಗಿದ್ದವು ನನಗೂ ಮಂಡಿ ಮುಖ ಎಲ್ಲಾ ಕೆತ್ತಿ ಹೋಗಿತ್ತು. ಪಕ್ಕದಲ್ಲಿ ಇದ್ದ ಆಸ್ಪತ್ರೆಗೆ ಆ ಹುಡುಗಿಯನ್ನು ಕರೆದುಕೊಂಡು ಹೋದರು. ನನ್ನ ಜೊತೆ ನಂಜನಗೂಡಿಗೆ ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿ ಸುಜಾತ ಎನ್ನುವವರು ಮತ್ತು ಅವರ ತಂದೆ ರೈಲು ಸಿಗದೇ ಅದೇ ದಾರಿಯಲ್ಲಿ ವಾಪಸ್ ಬಂದರು. ನನ್ನನ್ನು ಆಟೋ ಮಾಡಿ ಮನೆಗೆ ಕಳಿಸಿ ನನ್ನ ಗಾಡಿಯನ್ನು ಅಲ್ಲೇ ಹತ್ತಿರದಲ್ಲಿದ್ದ ಅವರ ಮನೆಯಲ್ಲಿ ಇಟ್ಟುಕೊಂಡರು. ಆ ಹುಡುಗಿಯ ಮನೆಯವರು ಅಲ್ಲೇ ಇದ್ದ ಮತ್ತೊಬ್ಬರು ನನ್ನ ಗಾಡಿ ನಂಬರ್ ಕೊಟ್ಟಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಆ ಹುಡುಗಿಯದೆ ತಪ್ಪು ಆಗಿದ್ದರು ಸಹ ದೊಡ್ಡ ವಾಹನದವರ ಮೇಲೆ ತಪ್ಪು ಹೊರಿಸುವುದು ಸಹಜ ಆಗಿದ್ದರಿಂದ ನಮ್ಮನ್ನೇ ದೋಷಿಗಳನ್ನಾಗಿ ಮಾಡಿದರು. ಪೋಲಿಸಿನವರ ಜೊತೆ ಸೇರಿ ನಮ್ಮಿಂದ ಹಣ ಕಿತ್ತುಕೊಳ್ಳುವ ಹುನ್ನಾರ ಅವರದು ಕಡೆಗೆ ಪೊಲೀಸಿನವರ ಮಧ್ಯಸ್ಥಿಕೆಯಿಂದ 5000 ಅವರಿಗೆ ತೆತ್ತಬೇಕಾಯಿತು . ಪಾಪ ರವೀಶ್ ಅಬರು ಈ ಸಂಬಂಧ ಪೋಲೀಸ್ ಠಾಣೆಗೆ ಓಡಾಡಿ ಎಲ್ಲಾ ಇತ್ಯರ್ಥ ಮಾಡಿಸಿದರು. ಆಗ ತಕ್ಷಣಕ್ಕೆ ನಮ್ಮ ತಂದೆಯೇ ಹಣದ ವ್ಯವಸ್ಥೆ ಮಾಡಿಕೊಟ್ಟರು. ಆನಂತರ ನಾನು ಮತ್ತೆ ಗಾಡಿ ಓಡಿಸಲೇ ಇಲ್ಲ.ವರ್ಗಾವಣೆ ಆದೇಶಗಳು ಬಂದು ಜನವರಿ 10ನೆಯ ತಾರೀಕು ನಾನು ನಂಜನಗೂಡಿನಿಂದ ರಿಲೀವ್ ಆಗಬೇಕಿತ್ತು ಆ ಬಾರಿ ನಾನೊಬ್ಬಳೇ ವರ್ಗಾವಣೆ  ಹೊಂದುತ್ತಿದ್ದವಳು. ಹಾಗಾಗಿ ಇಡೀ  ಶಾಖೆಗೆ ಸಿಹಿ ಮತ್ತು ಖಾರದ ವಿತರಣೆ ಮಾಡಿ ಆಪ್ತ ಗೆಳತಿಯರಿಗೆ ಹೋಟೆಲ್ ರಾಮ್ ಪ್ರಸಾದ್ ನಲ್ಲಿ ಸಂಜೆ ಮಸಾಲೆ ದೋಸೆಯ ಪಾರ್ಟಿ ಕೊಟ್ಟೆ. ಸುಲೋಚನ ಮತ್ತು ಶಶಿಕಲಾ ಇಬ್ಬರು ಪ್ರತ್ಯೇಕವಾಗಿ  ಒಂದೊಂದು ಡ್ರೆಸ್ ಉಡುಗೊರೆ ಕೊಟ್ಟರು. ಮಿಕ್ಕ ಮಹಿಳಾ ಸಹೋದ್ಯೋಗಿಗಳೆಲ್ಲ ಸೇರಿ ಒಂದು ಚಿನ್ನದ ಓಲೆಯನ್ನು ಉಡುಗೊರೆ ಕೊಟ್ಟರು. ನಾನು ಅವರಿಗೆಲ್ಲ ಅಲಾರಾಂ ಗಡಿಯಾರವನ್ನು ಕಾಣಿಕೆಯಾಗಿ ಕೊಟ್ಟೆ. ಸುಲೋಚನ ಅವರ ಮನೆಗೆ ಅವರೇ ಸೂಚಿಸಿದಂತೆ ಒಂದು ಇಡ್ಲಿ ಕುಕ್ಕರ್  ಕೊಡಿಸಿದೆ. ಇನ್ನು ರೈಲಿನ ಗೆಳತಿಯರಿಗೆ ಅಂದು ಬೆಳಗಿನ ತಿಂಡಿ ನಾನು ಪಾರ್ಟಿ ರೂಪದಲ್ಲಿ ಕೊಡುತ್ತೇನೆ ಎಂದು ಹೇಳಿ ಅಮ್ಮನ ಸಹಾಯದಿಂದ ಬಿಸಿಬೇಳೆ ಬಾತ್ ಮೊಸರನ್ನ ಮಾಡಿಕೊಂಡು ಮೈಸೂರು ಪಾಕು ಹಾಗೂ ಚಿಪ್ಸ್ ಗಳೊಂದಿಗೆ ರೈಲಿನಲ್ಲಿ ನಮ್ಮ ಆಹಾರ ಪಾರ್ಟಿ ಮುಗಿಸಿದರು. ಅವರೆಲ್ಲ ಸೇರಿ ಒಂದು ಜೊತೆ ಬೆಳ್ಳಿಯ ದೀಪ ಹಾಗೂ ಊದುಬತ್ತಿ ಸ್ಟ್ಯಾಂಡನ್ನು ಉಡುಗೊರೆಯಾಗಿ ಕೊಟ್ಟರು. ಇಂದಿಗೂ ಅವುಗಳನ್ನು ಬಳಸುತ್ತಿದ್ದೇನೆ. ಅಂತೂ ಇಂತೂ ಮೈಸೂರು ಬಿಟ್ಟು 7 ವರ್ಷಗಳ ನಂತರ ಮತ್ತೆ ಮೈಸೂರಿಗೆ ವರ್ಗಾವಣೆ ಹೊಂದಿ ಸಮಾಧಾನದ ನಿಟ್ಟುಸಿರು ಬಿಟ್ಟ ಹಾಗೆ ಆಯಿತು. ಮೈಸೂರು ಶಾಖೆ 2ಕ್ಕೆ ನನ್ನ ಪೋಸ್ಟಿಂಗ್ ಆಗಿತ್ತು. ಆಗ ಅದು ಮೈಸೂರಿನ ಸಬರ್ಬ್ ಬಸ್ ಸ್ಟ್ಯಾಂಡ್ ಎದುರಿಮ ಸುಂದರ್ ಆರ್ಕೇಡ್  ಕಟ್ಟಡದಲ್ಲಿ ಇತ್ತು .೧೦ ಜನವರಿ ೨೦೦೪ ರಂದು ಶನಿವಾರ ಅಲ್ಲಿಂದ ರಿಲೀವ್ ಆಗಿದ್ದು. ಸೋಮವಾರ ಡ್ಯೂಟಿಗೆ ರಿಪೋರ್ಟ್ ಆಗಬೇಕಿತ್ತು(ಮುಂದುವರೆಯುವುದು) ಸುಜಾತಾ ರವೀಶ್

Read Post »

ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-13 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಲೇ: ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ *ಭಯವನು ಗೆದ್ದವರು ಇತಿಹಾಸವನ್ನು ರಚಿಸುವರು* ಅನ್ನುವ ಮಾತು ಸುಳ್ಳಾಗಲಿಲ್ಲ……!!! ಜಯದೇವಿ ತಾಯಿಯವರ  ನಿಜಾಮನಂಥ ಶಿಷ್ಟ ಆಳರಸನ ಆಜ್ಞೆಯನ್ನು ಉಲ್ಲಂಘಿಸಿ ಜಹೀರಾಬಾದಿನ ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನಲ್ಲಿ ಭಾಗವಹಿಸಿ ಜನಸ್ತೋಮದ ಸ್ಪೂರ್ತಿ ಉತ್ಸಾಹವನ್ನು ಉಲ್ಬಣಿಸಿದ್ದರು. ಇತಿಹಾಸವನ್ನು ರಚಿಸಿದರು.  * ಶರಣರ ಭೂಮ್ಯಾಗ ಮರಣವೆ ಲೇಸಂದು ಹರಣದ ಹಂಗ ತೊರೆದೇನ, ಕಲ್ಯಾಣದಶರಣರಿಗೆ ನೆನೆದೇನ ಮನದಾಗ * ಅಂತ ಹೇಳುತ್ತಾ ಹೈದರಾಬಾದಿನ ಜಹೇರಾಬಾದಿನಲ್ಲಿ ಗರ್ಜಿಸಿದ ಜಯದೇವಿ ತಾಯಿಯವರು ಕಲ್ಯಾಣ ಶರಣರ ಗಣಾಚಾರ ನೆನೆಯುತ ಕೆಚ್ಚದೆಯ ಧೈರ್ಯ ಸಾಹಸ ಮೇರೆದರು. ನಿಜಾಮನ ಫರ್ಮಾನ್‌ನ್ನು ಧಿಕ್ಕರಿಸಿ ಹೈದರಾಬಾದ್ ಮಣ್ಣಿಗೆ ಕಾಲಿಟ್ಟ ಜಯದೇವಿ ತಾಯಿಯವರ ಧೈರ್ಯ….. ಬ್ರಿಟಿಷರ ಗಮನ ಸೆಳೆದಿತ್ತು. ಆ ಸಮಯದಲ್ಲಿ ಎರಡನೇ ಮಹಾಯುದ್ಧ ಉಗ್ರವಾಗಿ ನಡೆಯುತ್ತಿತ್ತು.  ಯುದ್ಧದ ಹೊತ್ತಿನಲ್ಲಿ ತಮ್ಮ ಸೇನೆಗೆ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಲು ಬ್ರಿಟಿಷರು ವಿವಿಧ ಸಮಾಜಗಳ ನಾಯಕರನ್ನು ಸಂಪರ್ಕಿಸುತ್ತಿದ್ದರು.ಜಯದೇವಿ ತಾಯಿಯವರನ್ನು ಭೇಟಿ ಮಾಡಿ ವಿನಂತಿಯ ರೂಪದಲ್ಲಿ ಒಂದು ಮಾತು ಹೇಳಿದರು…. “ನೀವು ಲಿಂಗಾಯತ ಸಮಾಜದಲ್ಲಿ ಪ್ರಭಾವ ಹೊಂದಿದ್ದೀರಿ. ನಮ್ಮ ಸೈನ್ಯಕ್ಕಾಗಿ ಲಿಂಗಾಯತ ಯುವಕರನ್ನು ಕೂಡಿಸಿ, ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿ. ದೇಶ ಸೇವೆಯ ಹೆಸರಿನಲ್ಲಿ ಇದು ದೊಡ್ಡ ಕಾರ್ಯವಾಗುತ್ತದೆ. ನಿಮ್ಮ ಸೇವೆಗೆ ನಾವು ಗೌರವ ಮತ್ತು ಪ್ರಶಸ್ತಿಯನ್ನು ನೀಡುತ್ತೇವೆ.”ಎಂದರು ಆ ಮಾತು ಕೇಳಿದ ತಾಯಿಯವರು ಕ್ಷಣಕಾಲ ನಿಶ್ಶಬ್ದವಾಗಿ ನಿಂತರು.ಅವರು ನಿಧಾನವಾಗಿ ತಲೆಯನ್ನು ಎತ್ತಿ, ಕಣ್ಣಲ್ಲಿ ಸ್ಪಷ್ಟತೆ ಮತ್ತು ಧೈರ್ಯ ತುಂಬಿಸಿಕೊಂಡು ಹೇಳಿದರು….“ಇದು…. ದೇಶ ಸೇವೆಯೇ…..?? ನಮ್ಮ ಜನರನ್ನು ಪರರ ಯುದ್ಧಕ್ಕೆ ಒಪ್ಪಿಸುವ ದಾರಿ…..?”“ನನ್ನ ಜನರನ್ನು ನಿಮ್ಮ ಯುದ್ಧಕ್ಕಾಗಿ ಹುರಿದುಂಬಿಸಲಾದಿತ್ತೇ????…….  ನಾವೇಲ್ಲ ಈ ಮಣ್ಣಿನ ಮಕ್ಕಳು… ನಮ್ಮ ಶಕ್ತಿ, ನಮ್ಮ ಜೀವ…. ದೇಶದ ಸ್ವಾತಂತ್ರ್ಯಕ್ಕಾಗಿ  ಹೊರತು ವಿದೇಶಿಯರ ಯುದ್ಧಕ್ಕಾಗಿ ಅಲ್ಲ.” ಎಂದು ಸ್ಪಷ್ಟಪಡಿಸಿದರು. ಬ್ರಿಟಿಷರು ಮತ್ತೆ ಆಮಿಷಗಳನ್ನು ಮುಂದಿಟ್ಟರುಪ್ರಶಸ್ತಿ, ಕೀರ್ತಿ, ಸನ್ಮಾನ ಅಂತ……!!!ಆದರೆ ತಾಯಿಯವರ ಹೃದಯದಲ್ಲಿ ಅವುಗಳಿಗೆ ಯಾವುದೇ ಸ್ಥಳ ಇರಲಿಲ್ಲ.“ನನ್ನ ಜನರ ಭವಿಷ್ಯವನ್ನು ನಾನು ಮಾರುವುದಿಲ್ಲ,” ಎಂದು ಅವರು ದೃಢವಾಗಿ ಉತ್ತರಿಸಿದರು.  ಜಯದೇವಿ ತಾಯಿಯವರು ಪ್ರಶಸ್ತಿಗಳನ್ನು ಕೇವಲ ನಿರಾಕರಿಸಿದವರಲ್ಲ….*ಅವರು ತಮ್ಮ ಸಮುದಾಯದ ಗೌರವವನ್ನು, ದೇಶದ ಆತ್ಮಸಮ್ಮಾನವನ್ನು ಕಾಪಾಡಿದ ಮಹಾನ್ ನಾಯಕಿ ಆಗಿದ್ದರು.*ಅವರು ಹೇಳುವಂತೆ …. ಮಹಾತ್ಮ ಗಾಂಧಿಯ ಅನುಯಾಯಿಯಾಗಿ ಸ್ವದೇಶಿ ವಸ್ತ್ರವನ್ನು ಧರಿಸಿ ವಿದೇಶರಿಗೆ ಸಹಾಯ ಮಾಡುವುದೆಂದರೆ ದೇಶದ್ರೋಹವೇ ಸರಿ ಎಂದರು.ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಪಿತಮಹಾನೊಂದಿಗೆ ದೇಶ ಸೇವೆಗೆ ಕಂಕಣ ಬದ್ಧರಾಗಿ ನಿಂತರು.  ಆದರೆ ಮನೆಯಲ್ಲಿಯ ವಿರೋಧವನ್ನು ಎದುರಿಸಬೇಕಾಯಿತು ಏಕೆಂದರೆ ಬ್ರಿಟಿಷರು ಅವರ ಆಸ್ತಿಯ ಮೇಲೆ ತೆರಿಗೆಯ ಭಾರವನ್ನು ಹೇರಿದರು.  ಹೆಚ್ಚಿನ ಮೊತ್ತದ “ವಾರ್ ಫಂಡ್” ಜಯದೇವಿ ತಾಯಿಯವರು ಮನೆಯವರು ಕಟ್ಟಬೇಕಾಗಿ ಬಂತು. ತಾಯಿಯವರು ಸ್ವದೇಶಿ ಅರಿವೇ ಉಡಲು ಪ್ರಾರಂಭಿಸಿದರು.ಇದೇ ಸಮಯದಲ್ಲಿ. ಹರಡೇಕರ್ ಮಂಜಪ್ಪನವರ ನೇತೃತ್ವದಲ್ಲಿ* ಹಿಂದೂಸ್ತಾನಿ ಸೇವಾದಳ *ಸ್ಥಾಪನೆಯ ಸಂಕಲ್ಪವು ಎಲ್ಲೇಲ್ಲೂ ನಡೆದಿತ್ತು. ಆಗಿನ ಕಾರಾಗ್ರಹ ವಾಸವು ನರಕ ಸದೃಶವಾಗಿತ್ತು. ಕೆಲವು ಹಸಿಬಿಸಿ ತರುಣರು ಕಾರಾಗೃಹದಲ್ಲಿ ಇದ್ದಾಗ ಬ್ರಿಟಿಷರು ಕೊಡುತ್ತಿದ್ದ ಹಿಂಸೆಯ ತಾಳಲಾರದೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಸೆರೆಮನೆಯಿಂದ ಹೊರ ಬಂದರೆಂಬ ವಿಷಯ ಕಿವಿಗೆ ಬಿದ್ದು ಹರಡೇಕರ ಮಂಜಪ್ಪನವರು ಹಾಗೂ ಇನ್ನು ಕೆಲವು ಮುಖಂಡರು ಬಲು ನೊಂದುರು ….ವಿವೇಚನೆಯಿಂದ ದೇಶದಲ್ಲಿ ತರುಣ ಸಂಘಟನೆ ಮಾಡಿ ಅವರಿಗೆ ದೇಶ ಪ್ರೇಮದ ಕೆಚ್ಚು, ದೇಶಾಭಿಮಾನ , ಸ್ವಾಭಿಮಾನ,ಶಿಸ್ತು, ಸಂಯಮ, ಕಷ್ಟ ಸಹಿಷ್ಣತೆ, ಶರೀರ ಬಲ ವರ್ಧನೆ,  ಇವುಗಳೆಲ್ಲವನ್ನು ಮೇಳ್ಯಸಿ ವೀರ ಯುವಕರನ್ನು ನಿರ್ಮಾಣ ಮಾಡುವ ಸಂಘಟನೆಯನ್ನು ಕಟ್ಟಬೇಕೆಂದು ದೃಢ ನಿರ್ಧಾರವನ್ನು ಮಾಡಿ ಸೇವಾದಳ ಸ್ಥಾಪನೆಯನ್ನು ಅಲ್ಲಲ್ಲಿ ಮಾಡಲು ಪ್ರಾರಂಭಿಸಿದರು.  ಈ ಹಿನ್ನೆಲೆಯಿಂದಲೇ ಕರ್ನಾಟಕದಲಿ ಅತ್ಯಂತ ಭರದಲಿ ರಾಷ್ಟ್ರೀಯ ಸೇವಾದಳ ಸ್ಥಾಪನೆಗೆ ಚಾಲನೆ ದೊರಕಿತು..‌ ಇಂಥ ಸಂಘಟನೆ ಪ್ರಾರಂಭವಾದಾಗ ಇದು ಪುರುಷರಷ್ಟೇ ಪಾಲುಕೊಳ್ಳುತ್ತಿದ್ದರು. ರಾಷ್ಟ್ರ ಹಿತಕ್ಕೆ ಹೋರಾಡಲು ಮಹಿಳೆಯರು ಪುರುಷರಿಗೆ ಹೆಗಲುಕೊಟ್ಟು ನಿಲ್ಲುವ ಸಂದರ್ಭಗಳು ಬಂದೊದಗಿತ್ತು. ಅದಕ್ಕಾಗಿ  ಮಹಿಳೆಯರಿಗಾಗಿ ನಿರ್ದಿಷ್ಟವಾದಂಥ ಸಂಘಟನೆ ಯಾವುದು ಇರಲಿಲ್ಲ ….ಹೀಗಾಗಿ ಈ ಸಂಘಟನೆಯಲ್ಲಿ ಸೇರಿ ಕೊಳ್ಳುವ ಮೂಲಕ ರಾಷ್ಟ್ರೀಯ ಚಳುವಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು‌‌…. ಹಾಗೆ ಮಹಿಳೆಯರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ಪ್ರೇರೆಪಿಸುತ ರಾಷ್ಟ್ರದ ಆಗೂ ಹೋಗುಗಳ ಅರಿವು ಮೂಡಿಸಿ… ರಾಷ್ಟ್ರೀಯತೆಯನ್ನು ಉತ್ತೇಜಿಸುವ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ೧೯೪೭ರಲ್ಲಿ ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ   *ಜಯದೇವಿ ತಾಯಿಯವರು ತಮ್ಮ ಮನೆಯಾದ *ಜಯನಿಕೇತನದಲ್ಲಿ *ರಾಷ್ಟ್ರೀಯ ಸೇವಾದಳ,*ಪ್ರೌಢ ಸ್ತ್ರೀ ಶಾಖೆ*ಯನ್ನು ಆರಂಭಿಸಿದರು.  ಸೊಲ್ಲಾಪುರದಲ್ಲಿ ಪ್ರಾಂತೀಯ ಸಂಘಟಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಂಘವು ಅನುತಾಲಿಮಯೋ ಅವರಿಂದ ಉದ್ಘಾಟಿಸಲಾಯಿತು. ಇಲ್ಲಿ ಪ್ರತಿ ವಾರ ಸಭೆ ಸೇರಿ ರಾಷ್ಟ್ರೀಯ ಹಿತ ಚಿಂತನೆಗಾಗಿ ರಾಜಕೀಯ ಸಾಮಾಜಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಮಹಿಳೆಯರ ಭೌಧಿಕ-ಭೌತಿಕ ಆರೊಗ್ಯಕರ ವಿಕಾಸದೊಂದಿಗೆ ದೇಶಪ್ರೇಮ ಹಾಗೂ ಮಹಾನ್ ಆದರ್ಶ ಪುರುಷರು-ಸ್ತ್ರೀಯರ ಬಗ್ಗೆ ಅನೇಕ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು. ಜಯದೇವಿ ತಾಯಿ ಮತ್ತು *ರಾಮಕೃಷ್ಣ ಜಾಜುಜಿ* ಅಂಥವರ ಭಾಷಣದಿಂದ ಹೆಣ್ಣು ಮಕ್ಕಳು ಪ್ರೇರಿತರಾಗುತ್ತಿದ್ದರು. ಇವರೊಂದಿಗೆ ಮಹಿಳಾ ಜ್ಞಾನ ಮಂದಿರದಿಂದಲೂ ಜಯದೇವಿ ತಾಯಿಯವರು ಹೆಣ್ಣು ಮಕ್ಕಳನ್ನು ಸಂಘಟಿಸುತ್ತಿದ್ದರು. ಮಹಿಳೆಯರಲ್ಲಿ ದೇಶ ಪ್ರೇಮ ಮೂಡಿಸಿ ಸಹಕರಿಸುತ್ತಿದ್ದರು. ಸ್ವಾತಂತ್ರದ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳೆಯರಲ್ಲಿ ರಾಷ್ಟ್ರೀಯ ನಾಡ ನುಡಿಯ ಜಾಗೃತಿಯನ್ನು ಮೂಡಿಸುತ್ತಿದ್ದರು. ೧೯೪೭ ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸೂಚನೆ ಸಿಗಲಾರಂಬಿಸಿತ್ತು. ಜಯದೇವಿ ತಾಯಿಯವರು ಅಕ್ಕನ ಬಳಗ ಹಾಗೂ ಸರಸ್ವತಿ ವಿದ್ಯಾ ಮಂದಿರ, ಶ್ರಾವಿಕಾಶ್ರಮ ,ಸ್ತ್ರೀ ಶಕ್ತಿ ಹೋರಾಟಗಳು ಜೋರಾಗಿ ನಡೆಯಿತು . ಸ್ವಾತಂತ್ರ್ಯ ದೇಶದಲ್ಲಿ ಸ್ತ್ರೀಯರ ಕರ್ತವ್ಯಗಳು,  ಸ್ತ್ರೀ ಸ್ವಾವಲಂಬನೆ, ಸ್ತ್ರೀ ಆರ್ಥಿಕ ಸ್ಥಿರತೆ,ವರ್ತಮಾನ ಕಾಲದ ವೆಚ್ಚರಹಿತ ಸರಳ ವಿವಾಹಗಳ ಪದ್ಧತಿ, ಸಾಮಾಜಿಕವಾಗಿ ನಾರಿಯರು ಗೌರವದಿಂದ ಬದುಕುವ ವಿಧಾನವನ್ನು ಮುಂತಾದ ವಿಷಯಗಳ ಮೇಲೆ ವಿವಿಧ ಬಡಾವಣೆಗಳಲ್ಲಿ ಭಾಷಣ ವ್ಯಾಖ್ಯಾನ ಮಾಲೆಯನ್ನು ಏರ್ಪಡಿಸುತ್ತಿದ್ದರು ‌. ಸಂಸ್ಕೃತಿಕ ವಿದ್ಯಾವಂತ ಮಹಿಳೆಯರಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಾಯಿಯವರ ನಿಲುವಾಗಿತ್ತು. ಸುಖ ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ ,ದುಃಖಕ್ಕೆ ಕಾರಣವಾಗುವ  ಅಜ್ಞಾನ..ಬಡತನ ಮತ್ತು ವರ್ಗ ಕಲಹಗಳು ಕಾರಣವಾಗುತ್ತವೆಂದು…… ಈ ಅಜ್ಞಾನವನ್ನು ದೂರ ಮಾಡಬೇಕು ಕುಟುಂಬದ ಅನ್ಯಾಯವನ್ನು ದೂರ ಮಾಡಬೇಕಾದರೆ ಮುಖ್ಯವಾಗಿ ಮನೆಯ ಸ್ತ್ರೀ ತಾಯಿಯೂ ವಿದ್ಯಾವಂತಳು ಆಗಿರಲೇಬೇಕು  ಸ್ತ್ರೀ ಶಿಕ್ಷಣ ಅದರೊಂದರಿಂದಲೇ ಶಾಂತಿಭರಿತವಾದ‌ ಬದುಕು ಹಾಗೂ ಸಾಮಾಜಿಕೆ ಸಮಾನತೆಯ ಬೆಳವಣಿಗೆಗೆ ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. *ಅಸ್ಪೃಶ್ಯ ನಿವಾರಣೆ* ಅದೇ ಸಮಯದಲ್ಲಿ ಅಸ್ಪೃಶ್ಯರು ಎಂದು ಕರೆದ ಒಂದು ಜನ ಸಮುಹವನು‌ ಕಡೆಗಣಿಸುವ ಅತ್ಯಂತ ಹೀನ ರೀತಿಯಲ್ಲಿ ಅವರನ್ನು ನೋಡಿಕೊಳ್ಳುವ ಪದ್ಧತಿ ಸರಿ ಅಲ್ಲವೆಂದು ವಿರೋಧಿಸಿದ ಗಾಂಧೀಜಿಯವರ‌ ಕರೆಕೊಟ್ಟಂತೆ ಅಸ್ಪೃಶ್ಯರನ್ನು ಹರೀಜನರು ಎಂದು ಕರೆಯಲು ಜಯದೇವಿತಾಯಿಯವರು ಮುಂದಾದರು.ಅದೇ ರೀತಿ 12ನೇ ಶತಮಾನದ ಶರಣರು ಎಲ್ಲರಲ್ಲಿ ಸಮಾನತೆಯ ಮನಸ್ಸನ್ನು ಹುಟ್ಟು ಹಾಕಿದ್ದರು ಕಾಯಕದಿಂದ ಹುಟ್ಟಿದ ಜಾತಿಯನ್ನು ವ್ಯಯಕ್ತಿಕವಾಗಿ ಸಂಭಧ ಆರಂಭಿಸುವುದು, ಅವಮಾನ ಗೊಳಿಸುವುದು ಅಪಚಾರವೆದುಂದು ಹೇಳುತ್ತಿದ್ದರು.    ಶರಣ ಅಂಬಿಗರ ಚೌಡಯ್ಯ ಮಾದರ ಚೆನ್ನಯ್ಯರಂತೆ ಬದುಕನ್ನು ಅರಿತುಕೊಂಡ ಜಯದೇವಿ ತಾಯಿಯವರು ಶರಣರ ಆದರ್ಶವನ್ನು ಮನದಲ್ಲಿ ತುಂಬಿಕೊಂಡು ಗಾಂಧೀಜಿಯವರ ಹರೀಜನರ ಆಂದೋಲನಕೆ ಕೈಜೋಡಿಸಿದ್ದರು.ಪೂಜೆ ತೀರ್ಥ ಪ್ರಸಾದಗಳನ್ನು ಹರಿಜನರಿಗೆ ನಿರಾಕರಿಸಿದ್ದನ್ನು ಜಯದೇವಿ ತಾಯಿಯವರು ಗಾಢವಾಗಿ ವಿರೋಧಿಸುತ ಅನೇಕ ಕಡೆಭಾಷಣ ಮಾಡುತ್ತಿದ್ದರು. ಹಾಗೆ ಸ್ತ್ರೀಯರ ಆಧ್ಯ ಕರ್ತವ್ಯ ಅವರ ನಿಶ್ಚಲವಾದ ನಿರ್ಭಯತೆ ನಿರ್ಮಲತೆಯ…… ವಿಷಯಗಳ ಕುರಿತು ಕೇರಿಯ ಜನರಿಗೆ ತಿಳಿಹೇತ್ತಿದ್ದರು. ಸೊಲ್ಲಾಪುರ ಮತ್ತು ಬಾರ್ಷಿಗಳ ರಿಮೈಂಡ್ ಹೋಂ ಮತ್ತು ಹರಿಜನ ಸಂಘಗಳಿಗೆ, ಗಾಂಧಿ ಛತ್ರಾಲಯಗಳಿಗೆ ಜಯದೇವಿ ತಾಯಿಯವರು ಬೆಂಬಲ ಪ್ರೇರಣೆ ನೀಡಿದವರು. ಆಡಳಿತಗಾರರಿಗೆ ಭೇಟಿಯಾಗಿ  ಅವರ ಸಮಸ್ಯೆಗಳನ್ನು ತಿಳಿದುಕೊಂಡು ಧನ ಸಹಾಯವನ್ನು ತಕ್ಷಣವಾಗಿ ಒದಗಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟ ಹಾಗೂ ಮಹಾಪುರುಷರ ವಿಷಯಗಳು ಹಾಗೂ ಧೀರ ಮಹಿಳೆಯರು ಹೋರಾಟಗಾರರ ಬಗ್ಗೆ ವಿಸ್ತೃತಗೊಳಿಸಿ ಅವರ ಜೀವನ ಚರಿತ್ರೆಯ ಬಗ್ಗೆ ಹರಿ ಜನರಿಗೆ ತಿಳಿ ಹೇಳುತ್ತಿದ್ದರು . ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತಿದ್ದರು.ಇವರು ಆಗಾಗ ಹರಿಜನ ಕೇರಿಗೆ ಬರುವರೆಂದು ತಿಳಿದ ಕೇರಿಯವರು ಎಲ್ಲವನ್ನು ಸ್ವಚ್ಛ ಮಾಡಿ ಚಳಿ ಹೊಡೆದು ತರಿಳು ತೋರಣವನ್ನು ಕಟ್ಟಿ, ಆರತಿ ತುಂಬಿಕೊಂಡು ಜನರು ಸ್ವಾಗತಿಸುತ್ತಿದ್ದರು. ಅಸ್ಪೃಶ್ಯ ಕೇರಿಗೆ  ಇನ್ನಿತರ ಕಾರ್ಯಕ್ರಮದಲ್ಲಿ ಓಡಾಡುವ ಕಾರ್ಯಕರ್ತರು ಜಯದೇವಿ ತಾಯಿಯವರನ್ನು ಪರೀಕ್ಷಿಸಲು  ಜಯದೇವಿ ತಾಯಿಯವರನ್ನು ಅಲ್ಲಿ  ಬೋಜನೆ ಮಾಡಲು ಕೇಳಿಕೊಂಡರು …..ಅದಕ್ಕೆ ತಾಯಿಯವರು ಎಂದಿನಂತೆ ಅವರ ಪೂಜೆ ನಂತರವೇ ಪ್ರಸಾದ ತೆದುಕೊಳ್ಳುತ್ತಿದ್ದರು ಹೀಗಾಗಿ ಅವರು ತಮ್ಮ ಪೂಜೆಯನ್ನು ಮುಗಿಸಿ ಅಲ್ಲಿಗೆ ಬಂದು ಎಲ್ಲರೊಂದಿಗೆ ಪ್ರಸಾದವನ್ನು ತೆಗೆದುಕೊಂಡದ್ದು ಒಂದು ಇತಿಹಾಸವೇವಾಯಿತು.  ಹಾಗೆ ತಮ್ಮ  ಭಾಷಣ ಒಂದರಲ್ಲಿ ಹೀಗೆ ಹೇಳಿದ್ದರು ಇಂದು ನಮ್ಮಲ್ಲಿ ಬಹಳ ಜನರು ಸಾಮಾಜಿಕ ಕಾರ್ಯಗಳಲ್ಲಿ ಸಮಾಜದ ದುಡ್ಡು ದುಡಿಮೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ರೂಡಿ ಮಾಡಿಕೊಂಡಿದ್ದಾರೆ ನಮಗೆ ನಮ್ಮ ಅನ್ನವನ್ನು ತಿಂದು ಸಮಾಜ ಕಾರ್ಯ ಮಾಡುವ ಅಭ್ಯಾಸವಾಗಿದೆ ಅಂತ ಅಲ್ಲಿ ತಾಯಿಯವರನ್ನು ಸಂಘಟಿಕರಿಗೆ ಉತ್ತರ ನೀಡಿದ್ದರು. ಹೀಗೆ ತಾಯಿಯವರು ದೀನ,ದಲಿತ, ಶೋಷಿತ ಅಸ್ಪೃಶ್ಯರ ಸಲುವಾಗಿ ಅವರ ಜೀರ್ಣೋದ್ಧಾರದ ಸಲುವಾಗಿ ಶ್ರಮಿಸಿದರು. ಶರಣರು ತೋರಿದ ಸಮಾಜದ ಧಾರ್ಮಿಕ ಹಿನ್ನೆಲೆ ಅವರದಗಿತ್ತು. ಸೊಲ್ಲಾಪುರ ಬಾರ್ಸಿಗಳಲ್ಲಿದ್ದ ಹರಿಜನ ಕೇರಿಗಳಿಗೆ ಹರಿಜನ ಬೋರ್ಡಗಳಿಗೆ ಹೋಗಿ ಸಹಾಯ ಸಹಕಾರ ನೀಡುತ್ತಿದ್ದರು.ಹರಿಜನರಲ್ಲಿ ಸಾಕ್ಷರತೆ -ಸ್ವಾವಲಂಬನೆ- ಸ್ವಾಭಿಮಾನ ಮೂಡಿಬರುವಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಡಿದ ಘಟನೆಗಳನ್ನು ಜನರು ಇನ್ನೂ ಆದರೂ ನೆನೆಯುವಧನ್ನು ನೋಡಬಹುದು.ಜಯದೇವಿ ತಾಯಿಯವರಿಗೆ ಹರಿಜನರ ಬಗ್ಗೆ ಇದ್ದ ಕಳಕಳಿ ಅಪಾರವಾದದ್ದು ಎಂದು ಭಾಲ್ಕೀ  ಹಿರೇಮಠ್ ಪೂಜ್ಯ.ಚನ್ನಬಸವ ಪಟ್ಟದೇವರು, ಇಳಕಲ ಚಿತ್ತಗರಿ  ಸಂಸ್ಥಾನ ಮಠದ ಪೂಜ್ಯ ಮಹಾಂತ ಸ್ವಾಮಿಗಳು  ಮೆಚ್ಚಿಕೊಂಡು ಹರ್ಷವನ್ನು ವ್ಯಕ್ತಪಡಿಸುತಿದ್ದರು. ಅದೇರೀತಿ ಬೆಲ್ಲದಾಳ ಸಿದ್ದರಾಮ ಶರಣರನ್ನು (ಹರಿಜನ ಬಾಲಕ ವಿಠಲರು )ಶರಣನಾದದ್ದನ್ನು ಕಂಡು ಗೌರವಿಸುತ್ತಿದ್ದರು.. ಜಯದೇವಿ ತಾಯಿಯವರು ದಲಿತೋದ್ಧಾರ ಅಸ್ಪೃಶ್ಯೋದ್ಧಾರ ಬಗ್ಗೆ ಕಳಕಳಿಯಿಂದ ಕೇವಲ ಭಾಷಣ ಮಾಡಿದರೆ ಸಾಲದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ ಅವರ ಅನುಭವಿಸಿದ ನೋವನ್ನು ಕಡಿಮೆಗೊಳಿಸುವ ಪ್ರಯತ್ನದಲಿದ್ದ ತಾಯಿಯವರು ಬರಿತಾರೆ…. *ಕೀಳು  ಮೇಲುಗಳೆಂಬ ಕುಲಾಚಾರವಳಿದುಕೊಳೆ ತೊಳೆಯಲು ಕೂಡಿದರು ಸಾರುವದಕೆ ಇಳೆಯೊಳು ಮಾನವ -ಕುಲ ಒಂದೇ * *ಜಗವು ಒಂದಾಗಲಿ ನಗುತ ಕೈಗೂಡಿಸಿರಿಬಗೆಯಲಿ ಅಣ್ಣ ತಮ್ಮಂದಿರಂತೆ, ಲೋಕದಿಹಗೆಯಂಬ ಭಾವ ಅಳಿಯಲಿ*  ವಿಶ್ವವೇ ಒಂದುಗೂಡಿಸುವ ..‌ಸಾರ್ವತ್ರಿಕ ಸರ್ವಕಾಲಿಕ ವಿಶ್ವಮಾನವೀಯ ಮೌಲ್ಯಗಳ ಒಡ್ಡೋಲಗ ಎಲ್ಲೆಡೆಯೂ ಸ್ಥಾಪಿತವಾಗಲಿ ಎನ್ನುವ ಆಸೆಯ ಹೊತ್ತವರು. *ನಾನು ನೀನೆಂಬ ಭೇದ ನಮ್ಮವರಿಗಿಲ್ಲತನ್ನಂತೆ ಜಗವ ಕಂಡಾರ -ಶರಣರುಭಿನ್ನಲ್ಲ ಉನ್ನತಿ ಪಡೆದಾರ!!* ಎಂದರು ಜಯದೇವಿತಾಯಿಅವರು. ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್

ಪ್ರೀತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಹೇಳದೆ ಉಳಿದಿಹ ಮಾತು…. ನೂರಿವೆ” ಅಮ್ಮ ನಿಮ್ಮ ಕಾಲದ ಜನರು ಅದೆಷ್ಟು ಅನ್ ರೋಮ್ಯಾಂಟಿಕ್ ಅಲ್ಲವೇ ? ತಬ್ಬಿಕೊಳ್ಳುವುದು ದೂರ ಬಿಡು..ಐ ಲವ್ ಯು ಅಂತ ಹೇಳಿ ಪ್ರೀತಿಯನ್ನು ಅಭಿವ್ಯಕ್ತ ಪಡಿಸುವುದು ಅವರಿಗೆ ಗೊತ್ತೇ ಇಲ್ಲ ಎಂದು ಮಗಳು ಕೇಳಿದಾಗ ತಾಯಿ ಮೆಲ್ಲನೆ ನಸುನಕ್ಕು ಸುಮ್ಮನಾದಳು.ಕಣ್ಣರಿಯದ ಮಾತನ್ನು ಕರುಳರಿಯುತ್ತದೆ ಎಂದು ಹೇಳುತ್ತಾರೆ ಅಲ್ಲವೇ… ಹಾಗೆಯೇ ಮಾತುಗಳಲ್ಲಿ ಹೇಳಲಾಗದ ನೂರೆಂಟು ಭಾವಗಳನ್ನು ತಮ್ಮ ವರ್ತನೆಯಲ್ಲಿ ತೋರುವ ಮೂಲಕ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುವುದು ನಮ್ಮ ಹಿರಿಯರಿಗೆ ಸಿದ್ಧಿಸಿದ ಕಲೆ. ಅಲ್ಲಿ ಯಾವುದೇ ನಾಟಕೀಯ ಪ್ರದರ್ಶನವಿಲ್ಲ ನೈಜತೆಯೇ ಎಲ್ಲ. ಮನೆಯ ಹಿರಿಯರಲ್ಲಿ ನಸು ಮುನಿಸಿನ ಜಗಳಗಳನ್ನು ನೋಡಿದಾಗ ಈ ಕುರಿತು ನಮಗೆ ಅರಿವಾಗುತ್ತದೆ. ಊಟದ ಸಮಯಕ್ಕೆ ಸರಿಯಾಗಿ ಅಜ್ಜ ಊಟ ಮಾಡದೆ ಹೋದಾಗ ಮುನಿಯುವ ಅಜ್ಜಿಯ ಮನಸ್ಸಿನಲ್ಲಿ ತನ್ನ ಪತಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲಿ ಎಂಬ ಆಶಯವಿರುತ್ತದೆ. ಆದರೆ ಅದೇ ಅಜ್ಜ ದಿನವಿಡೀ ಕೆಲಸ ಮಾಡಿದ್ದೀಯ! ಕೊಂಚ ಹೊತ್ತು ಕುಳಿತು ವಿಶ್ರಾಂತಿ ಮಾಡಲಿ. ತನ್ನ ವಯಸ್ಸಿನವರ ಜೊತೆ ಮನೆಯ ಕಟ್ಟೆಯ ಮೇಲೆ ಕುಳಿತು ಇಲ್ಲವೇ ದೇವಸ್ಥಾನದ ಆವರಣದಲ್ಲಿ ಕುಳಿತು ಹರಟೆ ಹೊಡೆದು ದಣಿವಾರಿಸಿಕೊಳ್ಳಲಿ ಎಂಬ ಕಾರಣಕ್ಕೆ ಆಕೆಯನ್ನು ದೂರದರ್ಶನದಲ್ಲಿ ಬರುವ ಯಾವುದೋ ಕಾರ್ಯಕ್ರಮವನ್ನು ನೋಡಲು ಕರೆಯುತ್ತಾರೆ ಇಲ್ಲವೇ ಸಾಯಂಕಾಲದ ಸಮಯದಲ್ಲಿ ಒಂದಷ್ಟು ವಾಕಿಂಗ್ ಮಾಡಿ ಬರೋಣ ಬಾ ಎಂದು ಕರೆದುಕೊಂಡು ಹೋಗಿ ಊರ ಹೊರಗಿನ ದೇವಸ್ಥಾನದ ಬಳಿಯೋ ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮಾತನಾಡಿ ವಾಪಸ್ ಕರೆ ತರುತ್ತಾರೆ…. ಇದೆಲ್ಲದರ ಹಿಂದೆ ಇರುವುದು ಅವರ ಅನನ್ಯವಾದ ಕಾಳಜಿ. ಇಲ್ಲಿ ಅವರಿಬ್ಬರೂ ಪರಸ್ಪರರ ಕಾಳಜಿ ಮಾಡುವುದರ ಹಿಂದೆ ಇರುವುದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ರೂಪ.ಇನ್ನು ತನ್ನ ಪತ್ನಿಯ ಇಷ್ಟದ ಬಣ್ಣದ ಉಡುಪನ್ನು, ಸೀರೆಯನ್ನು ಆಗಾಗ ಪತಿ ತರುತ್ತಾನೆ. ಹೂವನ್ನು, ಸಿಹಿತಿಂಡಿಯನ್ನು ತಂದುಕೊಡುವ ಪತಿ ಮನೆಗೆ ಬಂದ ಕೂಡಲೇ ಅದನ್ನು ಆಕೆಯ ಕೈಗಿಟ್ಟು ಬೇಗ ತಟ್ಟೆಯಲ್ಲಿ ಹಾಕಿ ತಗೊಂಡು ಬಾ ನಾವೆಲ್ಲರೂ ಸೇರಿ ತಿನ್ನೋಣ ಎನ್ನುವ ಮೂಲಕ ಆಕೆಯ ಕುರಿತು ಕಾಳಜಿ ವಹಿಸುತ್ತಾನೆ. ಹೊರಗಿನಿಂದ ದುಡಿದು ದಣಿದು ಬರುವ ಪತಿ ತನ್ನಿಷ್ಟದ ತಿಂಡಿ ತಿನಿಸುಗಳನ್ನು ತಂದು ಕೊಟ್ಟಾಗ ಪತ್ನಿ ಆತನ ಅವಸರದ ಕರೆಗೆ ಓಗೊಟ್ಟು ಗಂಡ ಮಕ್ಕಳೊಡನೆ ತಾನೂ ಕುಳಿತು ತಿಂದು ನಂತರ ಕಾಫಿ ಮಾಡಿಕೊಡುತ್ತಾಳೆ. ಇದು ಕೂಡ ಪ್ರೀತಿಯೇ ಅಲ್ಲವೇ ? ನಾಲ್ಕು ಜನರ ನಡುವೆ ಹೊರಗೆ ಓಡಾಡುವ ತನ್ನ ಪತಿ ಯಾವಾಗಲೂ ಇಸ್ತ್ರಿಯಾದ ಗರಿ ಗರಿ ಬಟ್ಟೆಗಳನ್ನು ಧರಿಸಿ ಲವಲವಿಕೆಯಿಂದ ಓಡಾಡಲಿ ಎಂದು ಪತ್ನಿ ಆಶಿಸಿದರೆ, ತನ್ನ ಇಡೀ ಕುಟುಂಬದ ನಿರ್ವಹಣೆ ಮಾಡುವ ಪತ್ನಿ ಚೆನ್ನಾಗಿ ತಿಂದುಂಡು ಆರೋಗ್ಯವಾಗಿರಲಿ ಎಂದು ಪತಿ ಆಶಿಸುತ್ತಾನೆ.ಹರೆಯದಲ್ಲಿ ಪತಿಯ ಹಿಂದೆ ಮುಂದೆ ಓಡಾಡಿ ಆತನ ಕೆಲಸಗಳನ್ನು ಮಾಡಿಕೊಡುವ ಪತ್ನಿಗೆ ಮಧ್ಯ ವಯಸ್ಸಿನಲ್ಲಿ ವಯೋ ಸಹಜವಾಗಿ ಉಂಟಾಗುವ ತಲೆನೋವು, ಸೊಂಟ ನೋವುಗಳಿಗೆ ಝಂಡು ಬಾಮ್ ಹಚ್ಚಿ ಮಾಲೀಶು ಮಾಡುವ ಪತಿಗಳನ್ನು ನಾವು ಕಾಣಬಹುದು… ಮತ್ತೆ ಕೆಲವರು ಅಷ್ಟೆಲ್ಲವನ್ನು ಮಾಡದೆ ಹೋದರೂ ತಮ್ಮದೇ ಧೋರಣೆಯ ದಾಟಿಯಲ್ಲಿ ‘ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿದರೆ ಇನ್ನೇನಾದೀತು ಊಟ ಮಾಡಿ ಮಾತ್ರೆ ನುಂಗಿ ಮಲಗಿಕೋ ‘ಎಂದು ಹೇಳುವ ಮೂಲಕ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.‘ ಋಣಾನು ಬಂಧ ರೂಪೇಣ, ಪಶು ಪತ್ನಿ ಸುತಾಲಯ’ ಎಂದು ನಮ್ಮ ಹಿರಿಯರು ಹೇಳಿರುವುದು ಬಹುಶಃ ಇದೇ ಕಾರಣಕ್ಕೆ ಇರಬಹುದು. ಯಾವುದೇ ರೀತಿಯ ರಕ್ತ ಸಂಬಂಧವಲ್ಲದ ಆದರೂ ಕೂಡ ಋಣ ಮತ್ತು ಅನುಬಂಧದ ಕಾರಣದಿಂದಾಗಿ ಸತಿಪತಿಗಳಾಗಿ ಬದುಕುವ ಅವರಿಬ್ಬರೂ ತಾರುಣ್ಯದಲ್ಲಿ ವಯೋಸಹಜ ಪ್ರೇಮ ಕಾಮಗಳಲ್ಲಿ ಒಂದಾದರೂ ಮಧ್ಯ ವಯಸ್ಸಿಗೆ ಬಂದಾಗಲೂ ಕೂಡ ಮಕ್ಕಳ ಪಾಲನೆ ಪೋಷಣೆಯನ್ನು ಜೊತೆಯಾಗಿ ಮಾಡುವ ಮೂಲಕ ಕೌಟುಂಬಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ. ಇನ್ನು ವೃದ್ಧಾಪ್ಯದಲ್ಲಂತೂ ಕೇಳಲೇಬೇಡಿ ಅದುವರೆಗೂ ಅತ್ಯಂತ ಕಠಿಣ ವ್ಯಕ್ತಿ ಎಂದು ಎನಿಸಿಕೊಂಡಿರುವಾತ ಕೂಡ ತನ್ನ ಕುಟುಂಬದ ಮೂಲ ಸೆಲೆಯಾದ ತನ್ನ ಪತ್ನಿಯನ್ನು ಕಾಳಜಿ ಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಈ ಹಿಂದೆ ಕೇಳಿದರೂ ತಂದುಕೊಡದ ತಾರುಣ್ಯದ ಮೈಮರೆವನ್ನು ಹೊತ್ತು ಮೆರೆಯುತ್ತಿದ್ದ ಆತ ಇದೀಗ ಆಕೆ ಕೇಳದೆಯೂ ಆಕೆಯ ಮನದ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ. ಇನ್ನು ಆಕೆ ಏನು ಕಡಿಮೆಯೇ! ಆಕೆ ಕೂಡ ಆತನ ಆರೋಗ್ಯದ ಕಾಳಜಿಯನ್ನು ಮಾಡುತ್ತಾ ಆತನ ಒಳಿತು ಕೆಡುಕುಗಳಿಗೆ ತನ್ನನ್ನು ತಾನು ಜವಾಬ್ದಾರಿಯನ್ನಾಗಿಸಿಕೊಂಡು ಎಲ್ಲ ರೀತಿಯಲ್ಲಿಯೂ ಆತನ ಕಾಳಜಿ ಮಾಡುತ್ತಾಳೆ. . ಇದೀಗ ಕೇವಲ ಆಕೆ ಆತನ ಪ್ರೇಮದ ಕಾಮದ ಸಿಟ್ಟು ಸೆಡವನ್ನು ಹೊರುವ ಪತ್ನಿ ಮಾತ್ರವಲ್ಲ ಬದಲಾಗಿ ಆತನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಹಾಮಾತೆ. ಆತನ ಪಾಲಕರನ್ನು ಆದರಿಸಿ ಸತ್ಕರಿಸುವ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವ ಮನೆ ಯಜಮಾನಿ. ಆತನ ಮಕ್ಕಳನ್ನು ಅತ್ಯುತ್ತಮ ಶಿಕ್ಷೆ ಮತ್ತು ರಕ್ಷೆಗಳ ಜೊತೆಯಲ್ಲಿ ಉತ್ತಮ ನಾಗರಿಕರನ್ನಾಗಿಸಿ ಬೆಳೆಸುವ ಮಮತಾಮಯಿ. ಹೀಗೆ ಅವರು ಪರಸ್ಪರರನ್ನು ದೂರುವ ಮೂಲಕ ಕಾಳಜಿ ಮಾಡಿಕೊಳ್ಳಲು ಹೇಳುವ ಮೂಲಕ ಖುದ್ದು ತಾವೇ ಕಾಳಜಿ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮಧ್ಯ ವಯಸ್ಸಿನಲ್ಲಿ ಮಕ್ಕಳ ಮುಂದೆ ಅವರ ಸಂಗಾತಿಯನ್ನು ತುಸು ದೂರುವುದು ಹೆಚ್ಚೇ ಆದರೂ ಅದು ಅವರ ಅವ್ಯಕ್ತ ಪ್ರೀತಿಯ ವ್ಯಕ್ತ ಸ್ವರೂಪ.ಮಕ್ಕಳ ಮುಂದೆ ಪರಸ್ಪರರನ್ನು ದೂರಿದರು ಕೂಡ ಒಂದೊಮ್ಮೆ ಮಕ್ಕಳು ಅವರನ್ನು ತಮಾಷೆಯಾಗಿ ಅಂದು ಆಡಿದರೂ ಕೂಡ ಅದನ್ನು ಸಹಿಸದೆ ತಮ್ಮ ಸಂಗಾತಿಯನ್ನು ವಹಿಸಿಕೊಂಡು ಬರುವುದು ಹಾಗೂ ಅದಕ್ಕೂ ಮಿಗಿಲಾಗಿ ಮಕ್ಕಳು ತಮಾಷೆ ಮಾಡಿದರೆ ಅವರಿಬ್ಬರೂ ಒಂದು ಗುಂಪಾಗಿ ನಸು ಕೋಪವು ಉಗ್ರ ಕೋಪವಾಗಿ ಮಕ್ಕಳ ಮೇಲೆ ಹರಿಹಾಯುವುದು ಕೂಡ ಅವರ ಪ್ರೀತಿಯ ಮತ್ತೊಂದು ಸ್ವರೂಪ. ಆಗ ಮಕ್ಕಳು ಅಯ್ಯೋ! ಇವರಿಬ್ಬರ ಮಧ್ಯದಲ್ಲಿ ನಾವು ಸಿಲುಕಿ ಕೊಳ್ಳುವುದು ಬೇಡ ಎಂದು ತಮಾಷೆ ಮಾಡಿ ಹಿಂದೆ ಸರಿಯುವುದೂ ಉಂಟು. ಎಷ್ಟೋ ಬಾರಿ ದಂಪತಿಗಳು ಮದುವೆಯಾದ ಕೆಲ ವರ್ಷಗಳ ನಂತರ ಪರಸ್ಪರ ವಿಭಿನ್ನ ವ್ಯಕ್ತಿತ್ವಗಳು ಎಂಬಂತೆ ಕಂಡರೂ ಮುಂದಿನ ಕೆಲ ದಶಕಗಳ ಬದುಕಿನಲ್ಲಿ ಇವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಒಂದೇ ರೀತಿಯ ಮಾತುಕತೆ, ರೀತಿ ನೀತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ….. ಅವರಿಬ್ಬರೂ ಒಬ್ಬರಾಗುವ ಈ ಪ್ರಕ್ರಿಯೆಗೆ ಕಾರಣ ಹಲವಾರು ವರ್ಷಗಳ ಜೊತೆಯಾಗಿರುವಿಕೆ. ದೇಹವೆರಡು ಪ್ರಾಣ ಒಂದು, ಕಣ್ಣೆರಡು ನೋಟ ಒಂದು ಎಂಬಂತಿರುವ ಅವರ ಬದುಕುಇದಕ್ಕೆ ವ್ಯತಿರಿಕ್ತವಾಗಿಯೂ ಸಾಕಷ್ಟು ಜನ ಬದುಕಬಹುದು. ತಮ್ಮ ತಮ್ಮ ವೈಯುಕ್ತಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು. ಪರಸ್ಪರ ಗೌರವದಿಂದ ದೂರ ಸರಿದಿರಬಹುದು. ಅಂತಹ ದೂರ ಸರಿದಿರುವ ದಂಪತಿಗಳು ಕೂಡ ತಮ್ಮ ಸಂಗಾತಿಯ ಮೇಲಿನ ನಿಜವಾದ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಹಾಗೂ ತಾವು ಆ ರೀತಿ ದೂರವಾದರೂ ಕೂಡ ಒಂದೊಳ್ಳೆಯ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳುವ ಮೂಲಕ ಪರಸ್ಪರರನ್ನು ಗೌರವಿಸುತ್ತಾರೆ. ಇದು ಕೂಡ ಹೇಳದೆ ಉಳಿದಿಹ ಮಾತುಗಳಲ್ಲಿ ಒಂದಾಗಬಹುದು.ಇದಕ್ಕೆ ಉದಾಹರಣೆಯಾಗಿ ಕಿರಣ್ ಬೇಡಿ ಮತ್ತು ಆಕೆಯ ಪ್ರತಿ ಹಸ್ತ ಕಲೆಗಳ ಜನಕರು ಎಂದೆ ಹೆಸರಾದ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ಆಕೆಯ ಪತಿ ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಾಲಿವುಡ್ ಚಲನಚಿತ್ರರಂಗದ ಅಶೀಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ, ಖ್ಯಾತ ಹಿಂದಿ ಚಲನಚಿತ್ರ ತಾರೆ ಅಮೀರ್ ಖಾನ್ ಮತ್ತು ಅವರ ಪತ್ನಿ ರೀನಾ, ಹೃತಿಕ್ ರೋಷನ್ ಹಾಗೂ ಅವರ ಪತ್ನಿ ಸುಸಾನೆ ಹೀಗೆ ಹತ್ತು ಹಲವು ಜನರನ್ನು ನಾವು ಉದಾಹರಿಸಬಹುದು….. ಆದರೆ ಇಂಥವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಪ್ರತಿ ಮಾತಿಗೂ ಐ ಲವ್ ಯು ಎಂದು ಹೇಳುವ, ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುವ ಭಾವ ಮಾತ್ರ ಪ್ರೀತಿಯಲ್ಲ ಬದಲಾಗಿ ಮಾತುಗಳಲ್ಲಿ ಹೇಳದೆ ಹೋದರು ತಮ್ಮ ಕೃತಿಯಲ್ಲಿ ವ್ಯಕ್ತಪಡಿಸುವ, ವರ್ತನೆಯ ಮೂಲಕ ಅರಿವು ಮೂಡಿಸುವ ಪ್ರೀತಿ ಎಷ್ಟೋ ಮೇಲು ಅಲ್ಲವೇ ? ವೀಣಾ ಹೇಮಂತಗೌಡ ಪಾಟೀಲ್

“ಹೇಳದೆ ಉಳಿದಿಹ ಮಾತು…. ನೂರಿವೆ”ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ ‘ಗೊಗ್ಗಳೇಶ್ವರ’ ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಕೇರಳದ ಅವಳೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ‘ಧೂಪದ ಗೊಗ್ಗವ್ವೆ’ಯೆಂದೂ ಕರೆಯುವರು. ಗುಗ್ಗಳ ಧೂಪ ಸಸ್ಯದ ಒಂದು ಪ್ರಕಾರದ ಅಂಟು. ಪೂಜೆ ಸಮಾರಂಭಗಳಲ್ಲಿ ಪರಿಮಳ ಸೂಸುವ ಕಾರ್ಯಕ್ಕೆ  ಬೆಂಕಿಯಲ್ಲಿ ಈ ಧೂಪದ ಪದಾರ್ಥವನ್ನು ಹಾಕಿ ವಾತಾವರಣವನ್ನು ಪ್ರಸನ್ನಗೊಳಿಸುವ ಕೆಲಸ ಕಾಯಕವಾಗಿತ್ತು. ಈಕೆಯ ವಚನಗಳ ಅಂಕಿತ ‘ನಾಸ್ತಿನಾಥಾ’. ಗೊಗ್ಗವ್ವೆ ಜನನ ೧೨ ನೆಯ ಶತಮಾನ ಅಂಕಿತನಾಮ ನಾಸ್ತಿನಾಥಾ ಒಟ್ಟು ವಚನಗಳು. ೬ ಇವರು ೧೨ನೇ ಶತಮಾನದ ವಚನಕಾರರಲ್ಲಿ ಒಬ್ಬರು. ಇವರು ಬಾಲ್ಯದಿಂದಲೆ ಶಿವನ ಆರಾಧಕರಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದ ಅವಲೂರಿನವರು. ಇವರು ತಮ್ಮ ಮದುವೆಯ ವಯಸ್ಸಿಗೆ ಬಂದಾಗ ಮನೆಯವರು ಇವರ ಮದುವೆ ವಿಷಯದ ಪ್ರಸ್ತಾವನೆ ಇವರ ಮುಂದಿಟ್ಟರು. ಆದರೆ ಇವರಿಗೆ ಮದುವೆಯ ವೈವಾಹಿಕ ಜೀವನ ಆಸಕ್ತಿ ಇಲ್ಲದಿರುವ ಕಾರಣ ಅವರೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಅಡಗಿ ಕುಳಿತಿದ್ದರಂತೆ.‌ ಮನೆಯವರು ಎಷ್ಟೇ ಕರೆದರು ಇವೆಲ್ಲವೂ ಬೇಡವೆಂದು ಆ ದೇವಾಲಯದಲ್ಲಿಯೇ ಶಿವನಿಗೆ ಪೂಜೆ ಕೈಂಕರ್ಯಗಳನ್ನು ಮಾಡತೊಡಗಿದರು. ಶಿವನಿಗೆ ದಿನಾಲು ಧೂಪ ಹಾಕುವ ಕಾಯಕವನ್ನು ಮಾಡುತಿದ್ದರಂತೆ. ಒಂದು ದಿನ ಸಾಕ್ಷಾತ್ ಪರಶಿವನೇ ಇವರನ್ನು ಪರೀಕ್ಷಿಸಲು ಬಂದಿದ್ದರಂತೆ. ಇವರ ಬಳಿ ಬಂದು ಕೈಲಾಸಕ್ಕೆ ಹೋಗುವ ದಾರಿಯನ್ನು ಕೇಳಿದ್ದರಂತೆ. ಇವರು ಗೊಗ್ಗವ್ವೆಯವರು ಶಿವನಿಗೆ ತಮ್ಮ ಧೂಪದ ಹೊಗೆಯ ಮೂಲಕ ಶಿವನಿಗೆ ಕೈಲಾಸದ ದಾರಿ ತೋರಿಸಿದರಂತೆ. ಇಂತಹ ಒಂದು ಪುರಾಣವು ಬಸವೋತ್ತರ ಕಾಲದಲ್ಲಿ ಸೃಷ್ಟಿಯಾಗಿದ್ದು ಕಂಡು ಬರುತ್ತದೆ.  ಧೂಪ ಹಾಕುವ ಕಾಯಕವನ್ನು  ಮುಂದುವರಿದಂತೆ ಇತ್ತ ಕಲ್ಯಾಣ ಕರ್ನಾಟಕದತ್ತ ಬಂದು ಅನುಭವ ಮಂಟಪದಲ್ಲಿ ಶರಣರೊಂದಿಗೆ  ನೆಲೆಸಿದಳು. ನಾಸ್ತಿನಾಥಾ’ ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ ಇವರು ಭಾಷೆ ಗಡಿಗೂ ಮೀರಿದ ಶಿವಶರಣೆಯಲ್ಲಿ ಒಬ್ಬರು. ಇಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿ ನೆಲೆಸಿ ಭಾಷೆ ಸಾಹಿತ್ಯವನ್ನು ಅರಿತು ವಚನಗಳನ್ನು ರಚಿಸಿದರೆಂದರೆ ಇವರ ಸಾಧನೆ ಕಾಯಕ ಅಮೋಘ ಕೊಡುಗೆ.       ಧೂಪದ ಗೊಗ್ಗವ್ವೆಯ ಆರು ವಚನಗಳು ಲಭ್ಯವಾಗಿವೆ. 1 ನೆಯ ವಚನ ಅನಲಕೊಂಡ ಭೋಗಕ್ಕೆ ಪರಿ ಪ್ರಕಾರವುಂಟೇ ? ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೇ ? ಲಿಂಗ ಮುಟ್ಟಿದ ಅಂಗಕ್ಕೆ ಮತ್ತೆ ಪುಣ್ಯವುಂಟೇ ? ಹುಸಿ ನಾಸ್ತಿನಾಥಾ! 2  ವಚನ… ಉದ್ದವನೇರುವದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು, ಚಿದ್ರೋಪನರಿಯುವದಕ್ಕೆ,ಅರ್ಚನೆ,ಪೂಜೆ ನಿತ್ಯ ನಿಯಮವಿಲ್ಲದೆ ಕಾಣಬಾರದು.ಅದು ಸತ್ಯದಿಂದ ಮಾಡಿ,ಅಸತ್ಯವ ಮೆರೆದೆಡೆ ಅದೇ ಸತ್ಯವೆಂಬೆ ನಾಸ್ತಿನಾಥ॥॥ 3ನೇ ವಚನ ॥॥ ಗಂಡು ಮೋಹಿಸಿ,ಹೆಣ್ಣು ಹಿಡಿದೆಡೆ ಒಬ್ಬರ ಒಡವೆ ಎಂದರಿಯಬೇಕು.ಹೆಣ್ಣು ಮೊಹಿಸಿ,ಗಂಡು ಹಿಡಿದೆಡೆ ಉತ್ತರವಾವುದೆಂದರಿಯಬೇಕು.ಈ ಎರಡು ಉಭಯವ ಕಳೆದು ಸುಖಿ ತಾನಾಗಬಲ್ಲೆದು ನಾಸ್ತಿನಾಥನು ಪರಿಪೂರ್ಣನೆಂಬೆ॥॥ 4 ನೇ ವಚನ ಮಾರುತನಲ್ಲಿ ಬೆರೆದ ಗಂಧದಂತೆ,ಸುರತದಲ್ಲಿ ಬೆರೆದ ಸುಖದಂತೆ,ಮಚ್ಚಿನಲ್ಲಿ ಕೊಡುವ ಉಚಿತದಂತೆ ಭಕ್ತರಿಗದೆ ಹಾದಿಎಂಬೇ ನಾಸ್ತಿನಾಥ॥॥ 5 ನೇ ವಚನ ಭಕ್ತರು ಜಂಗಮರಲ್ಲಿ ಕಟ್ಟಿ ಹೋರಬೇಕೆ.. ಧೂಪದ ಹೊಗೆ ಎತ್ತೆ ಹೋದರು ಅದು ಸತ್ಯವೆಂಬೆ ನಾಸ್ತಿನಾಥ॥॥ 6 ನೇ ವಚನ ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಮಿಸೆ,ಕಾಸಿ ಬಂದೆಡೆ ಗಂಡೆಂಬರು ಈ ಎರಡು ಉಭಯವು ಹೆಣ್ಣೊ ಗಂಡೊ ಹುಸಿ ನಾಸ್ತಿನಾಥ॥॥  ಕಲ್ಯಾಣದ ಕ್ರಾಂತಿ ನಡೆದಾಗ ಎಲ್ಲ ಶಿವಶರಣರು ಚದುರಿ ಬೇರೆ ಬೇರೆ ಪ್ರದೇಶಗಳಿಗೆ ವಚನಗಳನ್ನು ಹೊತ್ತು ಹೋದರು. ಆದರೆ ಗೊಗ್ಗವ್ವೆ   ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಧೂಪತಮಾಹಾಗಾಂವ ಎಂಬ ಗ್ರಾಮದಲ್ಲಿ ಬಂದು ನೆಲೆಸಿದರು. ಇದೆ ಕಾರಣಕ್ಕೆ  ಈ ಊರಿಗೆ  ಧೂಪತಮಾಹಾಗಂವ ಎಂಬ ಹೆಸರು  ಬರಲು ಇವರೇ ಕಾರಣ. ಐಕ್ಯ ಸ್ಥಳ  ಇವರು ಧೂಪ ಉರಿಸುತಿದ್ದ ಕಾರಣ  ಊರಿನ ಇದ್ದ ಹೆಸರನ್ನು ಬದಲಿಸಿ ಧೂಪತಮಾಹಾಗಂವ ಎಂದು ಮರುನಾಮಕರಣ ಮಾಡಿದ್ದರಂತೆ ಈ ಗ್ರಾಮಕ್ಕೆ ಉಲ್ಲೇಖವಿದೆ. ಇವರು ಐಕ್ಯವಾದ ಸ್ಥಳದಲ್ಲಿ ಒಂದು ದೇವಾಲಯವು ನಿರ್ಮಾಣವಾಗಿದೆ. ಇವಾಗ ಮತ್ತೆ ಆ ದೇವಾಲಯದಲ್ಲಿ ಭವ್ಯವಾದ ತೋಟವನ್ನು ನಿರ್ಮಿಸಿದ್ದಾರೆ. ಇಲ್ಲಿ ಗೊಗ್ಗವ್ವೆ ಕೆರೆ ಎಂತಲೂ ಕೂಡ ಇದೆ.  ತನ್ನ ವಚನಗಳಲ್ಲಿ ಸ್ತ್ರೀ ಸಂವೇದನೆ ಸಮಾನತೆಯ ಮೂಲಕ ಗಂಡು ಹೆಣ್ಣು ಸಮಾನರು ಎಂದು ಪ್ರತಿಪಾದಿಸಿದ ದಿಟ್ಟ ಮಹಿಳೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಅರ್ಜುನ ಉವಾಚ ವಿಶ್ವನಾಥ್‌ ಎನ್ ನೇರಳೆಕಟ್ಟೆ ಕೃಷ್ಣದರ್ಶನದ ಹಂಬಲವದು ಕುದುರೆಯನು ಕಟ್ಟಿಸಿತು ಚಂಪಕಾನಗರಿಯ ಅರಸ ಹಂಸಧ್ವಜ. ನಿಷ್ಠೆ ನಿಯಮಗಳಿಗೆ ನಿಜಾರ್ಥದ ದೊರೆಯಾಗಿದ್ದವನು. ಇಡಿಯ ಚಂಪಕಾಪುರಕ್ಕೆ ಸರಿಹೊಂದುವ ನಿಯಮಾವಳಿಯನ್ನವನು ರೂಪಿಸಿದ್ದ. ಎಲ್ಲಾ ಪ್ರಜೆಗಳು ಏಕಪತ್ನೀವ್ರತವನ್ನು ಪಾಲಿಸಬೇಕಿತ್ತು. ಕೃಷ್ಣಪೂಜೆಯನ್ನು ಗೈಯ್ಯಬೇಕಿತ್ತು. ದಾನಧರ್ಮಗಳನ್ನು ನಡೆಸಬೇಕಿತ್ತು. ಹೀಗೆ ರಾಜಕೃತ ನಿಯಮಾವಳಿಗಳನ್ನು ಯಾರೂ ಮೀರುವುದಕ್ಕೆ ಸಾಧ್ಯವೇ ಇರಲಿಲ್ಲ. ಪ್ರಜೆಗಳ ಕೆಡುಕಿನ ವರ್ತನೆಯನ್ನು ಸಹಿಸದವನಾಗಿದ್ದ ಹಂಸಧ್ವಜ. ಹಾಗೆಂದು ಕೇವಲ ಪ್ರಜೆಗಳ ಮೇಲೆ ನಿರ್ಬಂಧ ಹೇರಿ ಸುಮ್ಮನಿರುವವನಲ್ಲ ಆತ. ಪ್ರಜೆಗಳಿಗೆ ಇವುಗಳನ್ನು ಬೋಧಿಸುವುದಕ್ಕೂ ಮೊದಲು ತಾನೇ ಪಾಲಿಸಿದವನಾಗಿದ್ದ. ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತಿನಂತೆ ಹಂಸಧ್ವಜನ ಸುಗುಣಗಳನ್ನು ಅಲ್ಲಿನ ಪ್ರಜೆಗಳಲ್ಲಿಯೂ ಕಾಣಬಹುದಾಗಿತ್ತು. ಎಲ್ಲರೂ ಏಕಪತ್ನೀವ್ರತಸ್ಥರಾಗಿದ್ದರು. ಕೃಷ್ಣಪೂಜೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ತಮ್ಮಲ್ಲಿರುವ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ಧನ್ಯಭಾವವನ್ನು ಅನುಭವಿಸುತ್ತಿದ್ದರು. ಹೀಗಿತ್ತು ಚಂಪಕಾನಗರಿ, ನಮ್ಮ ಯಾಗದ ಕುದುರೆ ಅಲ್ಲಿಯ ಧರಣಿಯ ಮೇಲೆ ಕಾಲನ್ನಿರಿಸಿದಾಗ.     ಏಳು ಮಂದಿ ತಮ್ಮಂದಿರಿದ್ದರು ಹಂಸಧ್ವಜನಿಗೆ. ಸುದರ್ಶನ, ಸುಧನ್ವ, ಸುಮನಸ, ಸುರಥ ಎಂಬ ನಾಮಾಂಕಿತ ನಾಲ್ಕು ಮಂದಿ ವೀರ ಪುತ್ರರಿದ್ದರು. ಶಂಖ ಲಿಖಿತ ಎಂಬ ಅಣ್ಣತಮ್ಮಂದಿರು ಹಂಸಧ್ವಜನ ಪುರೋಹಿತರೆನಿಸಿಕೊಂಡಿದ್ದರು. ಇವರಿಬ್ಬರಿಗೂ ಶಾಸ್ತçಪಾಲನೆಯ ವಿಚಾರ ಬಂದಾಗ ಬಾಂಧವ್ಯವಾಗಲೀ, ಆತ್ಮೀಯತೆಯಾಗಲೀ ಮುಖ್ಯವಾಗುತ್ತಿರಲಿಲ್ಲ. ಅದೊಂದು ಸಲ ಲಿಖಿತನ ಆಶ್ರಮಕ್ಕೆ ಬಂದ ಶಂಖ ಅವನಲ್ಲಿ ಕೇಳದೆಯೇ ನೆಲದಲ್ಲಿ ಬಿದ್ದಿದ್ದ ಹಣ್ಣನ್ನು ಎತ್ತಿಕೊಂಡು ತಿಂದ. ಶಂಖನ ವರ್ತನೆಯದು ದೋಷ ಎಂದು ತೀರ್ಮಾನಿಸಿದ ಲಿಖಿತ ಸಹೋದರ ಎನ್ನುವುದನ್ನೂ ಪರಿಗಣಿಸದೆ ಶಿಕ್ಷೆ ಕೊಡಿಸಲು ಹಂಸಧ್ವಜನ ಆಸ್ಥಾನಕ್ಕೆ ಕರೆತಂದಿದ್ದ. ಶಂಖನ ಕೈಗಳನ್ನು ಕತ್ತರಿಸಿಹಾಕುವ ಶಿಕ್ಷೆ ಪ್ರಕಟವಾಯಿತು ಹಂಸಧ್ವಜನ ಕಡೆಯಿಂದ. ಹೀಗೆ ಶಿಕ್ಷೆಗೆ ಒಳಗಾದ ಶಂಖನಿಗೆ ತಪೋಬಲದಿಂದ ಮತ್ತೆ ಕೈ ಮೂಡುವಂತೆ ಮಾಡಿದ ಲಿಖಿತ. ಹೀಗೆ ಸರಿ ತಪ್ಪುಗಳ ವಿವೇಚನೆಗಿಳಿದರೆ ಬೇರಾವುದಕ್ಕೂ ಎಡಗೊಡದ ಕಟ್ಟುನಿಟ್ಟಿನ ಚಿತ್ತದ ಅಣ್ಣತಮ್ಮಂದಿರು ಪುರೋಹಿತರೆನಿಸಿಕೊಂಡು ಹಂಸಧ್ವಜನಿಗೆ ಮಾರ್ಗದರ್ಶನ ನೀಡುತ್ತಿದ್ದರು.   ಕುದುರೆಯ ರಕ್ಷಣೆಗಾಗಿ ಚಂಪಕಾನಗರಿಯನ್ನು ಸೇರಿಕೊಂಡ ನಾನು ಪಟ್ಟಣದ ಜನರನ್ನೂ ಹಾಗೆಯೇ ಒಮ್ಮೆ ನೋಡಿದೆ. ಉಣ್ಣುವುದಕ್ಕೆ ಉಡುವುದಕ್ಕೆ ಯಾವ ಕೊರತೆಯೂ ಅಲ್ಲಿನ ಜನರಿಗಿರಲಿಲ್ಲ. ವಸ್ತçಭೂಷಣಗಳಿಂದ, ಅಲಂಕಾರ- ಸುಗಂಧ ದ್ರವ್ಯಗಳಿಂದ ಶೋಭಿಸುತ್ತಿದ್ದರು. ವೀರರು ಎನ್ನುವುದು ಅವರ ನಿಲುವಿನಲ್ಲಿಯೇ ಗೊತ್ತಾಗುವಂತಿತ್ತು.     ಹಾಗೆ ನಾನು ಈಕ್ಷಿಸುತ್ತಿದ್ದಾಗಲೇ ಡಂಗುರದ ದನಿ ಕೇಳಿಬಂತು. ನಮ್ಮ ಕುದುರೆಯನ್ನು ಕಟ್ಟಿಹಾಕುವ ನಿರ್ಧಾರ ಮಾಡಿದ್ದ ಹಂಸಧ್ವಜ. ಅವನು ನಮ್ಮ ಜೊತೆಗಿನ ಯುದ್ಧಕ್ಕೆ ಮನಸ್ಸು ಮಾಡಿದ್ದೇಕೆ ಎಂಬ ವಿಷಯವೂ ಸ್ವಲ್ಪ ಸಮಯದಲ್ಲಿಯೇ ನನ್ನ ಸೇವಕರ ಮೂಲಕ ತಿಳಿದುಬಂತು. ನಮ್ಮ ಯಾಗದ ಕುದುರೆ ಅವನ ನಗರಿಯನ್ನು ಪ್ರವೇಶಿಸಿದ ತಕ್ಷಣವೇ ತನ್ನ ಆಪ್ತ ಸಚಿವರ ಸಭೆಯನ್ನು ಕರೆದನಂತೆ. “ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಅರ್ಜುನನ ಜೊತೆ ಸಂಘರ್ಷಕ್ಕಿಳಿದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ನಮ್ಮ ಈ ಭೂಮಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ಇಷ್ಟರವರೆಗೂ ನಾವು ಯಾರೂ ಕೃಷ್ಣನನ್ನು ಕಂಡವರಲ್ಲ. ಈಗ ಕಾಣುವ ಸುಯೋಗ ಒದಗಿಬಂದಿದೆ. ಕೃಷ್ಣ ಪ್ರತ್ಯಕ್ಷನಾಗಿ ನಮ್ಮನ್ನು ವಿರೋಧಿಸಿದರೂ ಅದು ನಮಗೆ ಸಂತಸವೇ. ಅದಕ್ಕಾಗಿ ಕುದುರೆಯನ್ನು ಕಟ್ಟಿಹಾಕಬೇಕಿದೆ” ಎಂದನಂತೆ. ಅಂದರೆ, ಕೃಷ್ಣದರ್ಶನದ ಹಂಬಲದಿಂದಲೇ ಅವನು ನಮ್ಮ ಯಾಗದ ಕುದುರೆಯ ಚಲನೆಗೆ ತಡೆಯೊಡ್ಡಿದ್ದ. ರಾಜಾಜ್ಞೆ ಹೊರಟ ಮೇಲೆ ಯುದ್ಧ ನಿಶ್ಚಯ ಎನ್ನುವುದು ನನಗೆ ಸ್ಪಷ್ಟವಾಯಿತು.     ಅವನ ಜೊತೆಗೆ ಯುದ್ಧವನ್ನು ಆರಂಭಿಸುವುದಕ್ಕೂ ಮೊದಲು ಅವನ ಬಲಾಬಲಗಳನ್ನು ಅರಿತುಕೊಳ್ಳುವುದು ಬಲುಮುಖ್ಯ ಎನಿಸಿತು. ತಿಳಿದುಕೊಂಡೆ. ಎಪ್ಪತ್ತು ಮಂದಿ ದಳಪತಿಗಳಿದ್ದರು ಅವನ ಸೇನೆಯಲ್ಲಿ. ಒಬ್ಬೊಬ್ಬ ದಳಪತಿಗಳು ಎಪ್ಪತ್ತೊಂದು ಸಾವಿರ ರಥಗಳಿಗೆ, ಇಪ್ಪತ್ತೊಂದು ಸಾವಿರ ಆನೆಗಳಿಗೆ, ಲಕ್ಷ ಕುದುರೆಗಳಿಗೆ, ಲಕ್ಷ ಸೈನಿಕರಿಗೆ ಅಧಿಪತಿಗಳೆನಿಸಿಕೊಂಡಿದ್ದರು. ಹಿರಿದು ಸೈನ್ಯವನ್ನೇ ಎದುರುಹಾಕಿಕೊಳ್ಳಬೇಕಿದೆ ನಾವು ಎನ್ನುವುದು ದೃಢವಾಯಿತು ನನಗೆ.    ಹಂಸಧ್ವಜನೆAಬ ಪ್ರಜಾಪರ ರಾಜನ ಡಂಗುರವನ್ನು ಅಲ್ಲಿನ ಪ್ರಜೆಗಳು ಒಡನೆಯೇ ಪಾಲಿಸಿದರು. ಚತುರಂಗ ಬಲಗಳು ಸಿದ್ಧಗೊಂಡವು. ಯುದ್ಧ ನಡೆಯುವ ತಾಣದೆಡೆಗೆ ನಡೆದುಬರತೊಡಗಿದವು.    ನನಗೆ ವಿಸ್ಮಯ ಮೂಡಿದ್ದು ಯುದ್ಧಕ್ಕೆ ಬರುತ್ತಿದ್ದ ಸೈನಿಕರ ಮೊಗದ ಭಾವನೆಯನ್ನು ಕಂಡಾಗ. ಸಾಮಾನ್ಯವಾಗಿ ಯುದ್ಧಕ್ಕೆ ಬರುವ ಸೈನಿಕರಲ್ಲಿ ವೀರತ್ವ ಮನೆಮಾಡಿರುತ್ತದೆ. ಜೊತೆಗೆ ಅಂಜಿಕೆಯೂ ಇರುತ್ತದೆ. ಆದರೆ ಚಂಪಕಾನಗರಿಯ ಸೈನಿಕರ ಮೊಗದಲ್ಲಿ ಹರ್ಷಭಾವ ತುಂಬಿ ತುಳುಕುತ್ತಿತ್ತು. ಅದರ ಹಿಂದಿನ ಕಾರಣವನ್ನು ತಿಳಿದುಕೊಂಡೆ. ಕೃಷ್ಣ ಪ್ರತ್ಯಕ್ಷವಾಗದೆ ನನಗೆ ಸೋಲುವವನಲ್ಲ ಹಂಸಧ್ವಜ ಎನ್ನುವುದು ಸೈನಿಕರಿಗೆ ಖಚಿತವಾಗಿತ್ತು. ಕೃಷ್ಣದರ್ಶನ ತಮಗೆ ಲಭಿಸುತ್ತದೆ. ತಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬ ಭಕ್ತಿಭಾವದ ಶರಧಿಯಲ್ಲಿ ತೇಲುತ್ತಾ, ಸೊಗಭಾವ ಅನುಭವಿಸುತ್ತಿದ್ದರು ಆ ಸೈನಿಕರು.     ಹೀಗೆ ಯುದ್ಧರಂಗದೆಡೆಗೆ ನಡೆದುಬರುತ್ತಿದ್ದ ಸೈನಿಕರನ್ನು ನೋಡುತ್ತಿದ್ದರು ಉಪ್ಪರಿಗೆಗಳಲ್ಲಿ ನಿಂತ ಅಂಗನೆಯರು. ರಣರಂಗದ ಮೇಲಿನ ಯುದ್ಧಕ್ಕೂ ಮೊದಲು ಶಯನಗೃಹದ ಸರಸಕಾಳಗದೆಡೆಗೆ ಗಂಡನ ಮನಸ್ಸನ್ನು ಸೆಳೆದ ಅದೆಷ್ಟೋ ಕಾಮಿನಿಯರು ಯುದ್ಧ ಮಾಡುವುದಕ್ಕೆ ಬೇಕಾದ ಭರಪೂರ ಉತ್ಸಾಹವನ್ನು ಅವರಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದರು.     ಯುದ್ಧಕ್ಕೆ ಸಿದ್ಧವಾಗಿ ನಾವೂ ನಿಂತೆವು. ಹಂಸಧ್ವಜನ ಸೇನೆಯೂ ನಿಂತಿತು. ಯಾರದೋ ಆಗಮನಕ್ಕೆ ಕಾಯುತ್ತಿರುವಂತೆ, ಅವನೇಕೆ ಇನ್ನೂ ಬಂದಿಲ್ಲ ಎಂದು ಅತ್ತಿತ್ತ ನೋಡುತ್ತಿರುವಂತೆ ಹಂಸಧ್ವಜನ ವರ್ತನೆಯಿತ್ತು. ರಣಕಹಳೆ ಇನ್ನೂ ಮೊಳಗಿರಲಿಲ್ಲ. ಯಾರಿಗಾಗಿ ಕಾಯುತ್ತಿದ್ದಾನೆ ಹಂಸಧ್ವಜ?! ನನಗೆ ಅರ್ಥವಾಗಲಿಲ್ಲ.                                                  ಡಾ. ವಿಶ್ವನಾಥ ಎನ್ ನೇರಳಕಟ್ಟೆ     

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಯುದ್ದಕಾಲೇ ವಿಪರೀತ ಬುದ್ದಿ. ನಮ್ಮ ಕಡಿ ಬಿಸಿಲಿನ ಕಾವು ಏರಲತರ ಆ ಕಡಿ ಯುದ್ದದ ಕಾವು ಎರಲತದ.ಯುದ್ದ ಅಂದ್ರ ನಾವು ಸಣ್ಣವರಾಗಿದ್ದಾಗ ಪುಸ್ತಕದಾಗ ಓದಿದ್ದು ಒಬ್ಬ ರಾಜ ಮತ್ತೊಬ್ಬ ರಾಜನ ಮ್ಯಾಲ ಯುದ್ದ ಮಾಡಿ ಅವನ ರಾಜ್ಯ ವಶಪಡಿಸಿಕೊಳ್ಳೊದು ಅಂತ ಓದಿದ್ದೆವು. ಕಲ್ಪನೆ ಮಾಡಕೊಳ್ಳಕೊ ಆಗದ ವಯಸ್ಸು ಅದು. ಆಮ್ಯಾಲ ರಾಮಾಯಣ ಮಹಾಭಾರತ ಧಾರಾವಾಹಿಗಳದಾಗ ಯುದ್ದ ಅಂದ್ರ ಹಿಂಗಿರತದ ಅಂತ ತಿಳಕೊಂಡೆವು.ಆ ಕಡೆಯಿಂದ ಸಾವಿರಾರು ಜನ ಈ ಕಡಿಯಿಂದ ಸಾವಿರಾರು ಜನ , ಯಾರು ಯಾರಿಗಿ ಹೊಡಿಲತಾರ ಕಡಿಲತಾರ ಎಂದು ತಿಳಕೊಳ್ಳೊವಷ್ಟರಲ್ಲಿ ಯುದ್ದ ಮುಗಿದಿರತಿತ್ತು. ಕತ್ತಿ , ಚೂರಿ , ಕೊಡಲಿ ಇಂತಹ ಆಯುಧಗಳಿಂದ ಯುದ್ದ ಮಾಡತಾರ ಅಂದಕೊಂಡಿದ್ದೆವು.ಪೌರಾಣಿಕ ಸಿನಿಮಾದೊಳಗ , ಇತಿಹಾಸ ತಿಳಸೋ ಸಿನಿಮಾದೊಳಗೆಲ್ಲ ಇಂತಹ ಯುದ್ದ ತೊರಿಸ್ತಿದ್ರು. ಮತ್ತ ನಮೂನಿ ನಮೂನಿ ಬಿಲ್ಲು ಬಾಣಗಳು.ರಾಮಾಯಣ ಮಹಾಭಾರತ ಧಾರಾವಾಹಿದೊಳಗ ಅದೇಷ್ಟು ನಮೂನಿ ಬಾಣಗಳು ತೊರಿಸ್ತಿದ್ರು ಅಂದ್ರ , ಬೆಂಕಿ ಉಗೊಳೋ ಬಾಣಗಳು , ಕಬ್ಬಿಣದ ಮಳಿ ಉಗೊಳೊ ಬಾಣಗಳು , ಹುಲಿ ಮುಖದ ಬಾಣಗಳು , ಹಾವಿನ ಮುಖದ ಬಾಣಗಳು. ಅವುಗಳನ್ನು ನೋಡ್ತ ಎಷ್ಟು ಕೂತುಹಲದಿಂದ ಕೂಡ್ತಿದ್ದಿವಂದ್ರ ಧಾರಾವಾಹಿ ಮುಗದ ಮ್ಯಾಲ ಬಾಳ ಬ್ಯಾಸರ ಆಗ್ತಿತ್ತು. ಹೈಸ್ಕೂಲ್ ಗೆ ಬಂದ ಮ್ಯಾಲ ಸಮಾಜ ವಿಜ್ಞಾನ ಪಠ್ಯ ದಾಗ ಓದಿದ ಯುದ್ದಗಳ ಕಲ್ಪನೆ ಸ್ವಲ್ಪ ಅಪ್ಗ್ರೆಡ್ ಆಗಿತ್ತು.ಮೊದಲನೆ ಮಹಾಯುದ್ದದಲ್ಲಿ ಮೊಟ್ಟಮೊದಲ ಬಾರಿಗೆ ಯುದ್ದ ವಿಮಾನಗಳು,  ಯುದ್ದ ನೌಕೆಗಳು , ಟ್ಯಾಂಕರ್ ಗಳು , ಜಲಾಂತರ್ಗಾಮಿ ಗಳು ಬಳಸಲಾಯಿತು . ಅಲ್ಲಿವರೆಗೂ ಯುದ್ದಗಳೆಂದರೆ ಎರಡು ಪಡೆಗಳು ಕೈಯಿಂದ ಹೊಡೆದಾಡಿಕೊಳ್ಳುವದು ಎಂದು ತಿಳಿದಿದ್ದ ನಮಗೆ ಹೊಸ ಯುದ್ಧ ರೀತಿ ತಿಳಿಯಿತು. ಒಂದನೆ ಮಹಾಯುದ್ದ , ಎರಡನೇ ಮಹಾಯಯದ್ದ , ಹಿರೋಷಿಮಾ ನಾಗಾ ಸಾಕಿ ಮೇಲೆ ಹಾಕಿದ ಅಣುಬಾಂಬ್ ಅದರ ಪರಿಣಾಮಗಳು ಇವೆಲ್ಲವೂ ಪಠ್ಯ ದಲ್ಲಿ ಓದಿ ತಿಳಿದ ವಯಸ್ಸಿನಲ್ಲಿ ಯುದ್ದ ಯಾತಕ್ಕಾಗಿ ಮಾಡ್ತಾರೆ ಎಂಬ ಯೋಚನೆ ಅಷ್ಟು ಕಾಡ್ತಿರಲಿಲ್ಲ. ಯುದ್ದ ಮಾಡುವದರ ಮುಖ್ಯ ಉದ್ದೇಶ ಮಹತ್ವಾಕಾಂಕ್ಷೆ ಮತ್ತು ಹಕ್ಕಿನ ಹೋರಾಟಕ್ಕಾಗಿ.ಎರಡೂ ಪಡೆಗಳು ತಮ್ಮ ತಮ್ಮ ಜಾಗದಾಗ ಸರಿ ಅಂತ ನಿರ್ಣಯಿಸಿದ ಮ್ಯಾಲ ಯುದ್ದಕ್ಕ ಮಾಡ್ಲಕ್ಕ ಕಾರಣಗಳು ಬೇಕಾದಷ್ಟು ಸಿಗತಾವ. ನಮ್ಮ ಮನುಕುಲಕ್ಕ ಅಣುಬಾಂಬ್ ಯಾಕ್ ಬೇಕು.ಇದರಿಂದ ಉಪಯೋಗ ಏನು. ಇದು ಜಗತ್ತಿಗಿ ಘಾತಕ ಅಂತ ಗೊತ್ತಿದ್ರು ದೇಶಗಳು ಇದನ್ನು ಯಾಕ ತಯ್ಯಾರಿಸ್ತಾರ. ಎಲ್ಲಾ ದೇಶದವ್ರಿಗೂ ತಮ್ಮ ತಮ್ಮ ದೇಶದ ಬಲ ತೋರಿಸಿಕೊಳ್ಳಕ್ಕ.ದೊಡ್ಡಸ್ತಿಕೆಗಾಗಿ ಮಾತ್ರ. ಒಂದು ದುರ್ಬಲ ಸಂದರ್ಭದಲ್ಲಿ ಅಣುಬಾಂಬ್ ಪ್ರಯೋಗಿಸಿದ್ರು ಅಂತಿಟ್ಟಕೊಳ್ಳೊಣ.ಅದರ ಪರಿಣಾಮ ಎಲ್ರಿಗೂ ಗೊತ್ತು.ಜಪಾನಿನ ನಾಗಾಸಾಕಿ ಪ್ರದೇಶ ಇನ್ನೂ ಆ ಘಟನೆಯಿಂದ ಚೇತರಿಸಿಕೊಳ್ಳತಿಲ್ಲ.ಎಷ್ಟು ತಲೆಮಾರು ದಾಟಿದ್ರು ಅಂಗವಿಕಲತೆ ತೊಲಗಸಲ್ಕಿಕ್ಕೆ ಆಗತಿಲ್ಲ. ಇಂತಹ ಒಡಲೊಳಗೆ ಕೆಂಡ ಇಟ್ಟಕೊಂಡ ದೇಶಗಳು ಎನನ್ನ ಸಾಧಿಸಬಹುದು. ಯುದ್ದಗಳು ನಮ್ಮ ಜಗತ್ತಿನ ಪ್ರಗತಿಯನ್ನು ಐವತ್ತು ವರ್ಷ ಹಿಂದಕ್ಕ ದೂಡತಾವ.ಮನುಷ್ಯ ತನ್ನ ಬುದ್ದಿ ಉಪಯೋಗಿಸಿ ಏನೆಲ್ಲ ಸಾಧಿಸಿ ಗಳಿಸಿದ್ದ ಎಲ್ಲವೂ ಯುದ್ದ ನಾಶ ಮಾಡ್ತದ.ಆದ್ರು ದೇಶಗಳಿಗೆ ತಮ್ಮ ಪ್ರತಿಷ್ಟೆ ಮುಖ್ಯ. ಒಬ್ಬರ ಮೇಲೊಬ್ಬರು ಬಾಂಬ್ ಎಸೆದು ಎಲ್ಲಾ ನೆಲಸಮ ಮಾಡಿ ಹೆಮ್ಮೆಯಿಂದ ಬೀಗತಾರ.ಅದು ಪರಿಣಮ ಬೀರೋದು ಜನಸಾಮಾನ್ಯರ ಮ್ಯಾಲ. ನೆಲ ಆಸ್ತಿ ಜೀವ ಕಳಕೊಂಡವರ ಪಾಡು ಯಾರಿಗೂ ಕಾಣಲ್ಲ.ಬರೀ ದೇಶಗಳ ಸೋಲು ಗೆಲವು ಮಾತ್ರ ವಿಷಯ ಆಗ್ತದ. ಈ ವಿಶ್ವ ಸಂಸ್ಥೆ ಇರುವದು ಎಲ್ಲಾ ದೇಶಗಳು ಪರಸ್ಪರ ಶಾಂತಿ ಸಹಬಾಳ್ವೆಯಿಂದ ತಂಟೆ ತಕರಾರು ಇಲ್ಲದೆ ಬದುಕಲು ತಿಳಿಸುವದಕ್ಕಾಗಿ ಇರತದ. ಈಗ ಈ ಸಂಸ್ಥೆ ಏನು ಮಾಡ್ತಿದೆ ಅಂತ ಪ್ರಶ್ನೆ ಕಾಡತದ.ಒಂದಿಲ್ಲೊಂದು ಯುದ್ದ ನಡಿತಾನೆ ಅವ. ಸುಮ್ಮನೆ ಇದ್ದ ಇರಾನ್ ಮ್ಯಾಲ್ ಅದ್ಯಾಕ ಅಮೇರಿಕಾ ಕಾಲಕೆರಕೊಂಡು ಜಗಳಕ್ಕ ನಿಂತು. ಅಣುಬಾಂಬ್ ಇರಾನ ದೇಶದಾಗಷ್ಟೆ ಅದ ಏನು. ಬೇರೆ ಅದೇಷೋ ದೇಶಗಳದಾಗೂ ಅವ.ಇಸ್ರೆಲ್ , ಪ್ಯಾಲೆಸ್ಟೈನ್ ಜಗಳಕ್ಕ ಒಂದು ಕಾರಣ ಇತ್ತು.ಸಮರ್ಥನೆ ಅವರವರು ಯಾವಾಗ್ಲೂ ಮಾಡಿಕೊಳ್ಳತಾನೆ ಇರತಾರ.ಇದು ಎಲ್ಲಾ ಜಗಳದಾಗೂ ಇರತದ . ಆದ್ರ ಸ್ವಲ್ಪ ವಿವೇಚನೆ ಯಿಂದ ವಿಚಾರ ಮಾಡ್ದರ ಪ್ರಬಲರು ದುರ್ಬಲರ ಮ್ಯಾಲ ಯುದ್ದ ಮಾಡೋದು ಪೌರುಷ ಅನಿಸಿಕೊಳ್ಳಲ್ಲ.ಭಯೋತ್ಪಾದಕ ದಂತ ಕೃತ್ಯ ತಡೆಗಟ್ಟಬೇಕಾದ್ರ ಕೆಲವೊಮ್ಮೆ ಮಾರಕ ನಿರ್ಣಯ ಗಳನ್ನು ತಗೋಬೇಕಾಗತದ.ಭಯೋತ್ಪಾದ ನೆ ತಡೆಗಟ್ಟಲು ಪ್ರಯತ್ನಿಸತಿದ್ದರಂದ್ರೆ ಬೆಂಬಲಿಸೊಣ. ಆದ್ರ ಈ ಅಮೇರಿಕಾ ಕಾಲ ಕೆರದು ಜಗಳಕ್ಕ ಬರೊದು ಖಂಡಿಸಲೇಬೇಕು. ಯುದ್ದ ಗಳು ಎರಡು ದೇಶದ ನಡುವೆ ನಡೆದ್ರು ಪರಿಣಾಮ ಇಡೀ ಜಗತ್ತು ಎದುರಿಸಬೇಕಾಗತದ.ದೇಶಗಳು ಖಂಡಗಳು ದೂರ ದೂರ ಇದ್ರೂ ಗಾಳಿ ಬೆಳಕು ಎಲ್ಲ ಕಡೆ ಹಬ್ಬಿದಂಗ ನಮ್ಮ ದೈನಂದಿನ ಕೆಲಸಗಳಿಗಿ ಬೇಕಾದ ವಸ್ತುಗಳು ಇಡೀ ಜಗತ್ತಿನ ಎಲ್ಲಾ ಭಾಗಗಳಿಗೂ ಹರಿದಾಡತಾವ.ಯುದ್ದಗಳಿಂದ ಇಂತಹ ವಸ್ತು ಗಳ ಆಮದು ರಪ್ತು ಕಾರ್ಯಗಳು ನಿಂತು ಜನಸಾಮಾನ್ಯರು ಹೈರಾಣ ಆಗಬೇಕಾಗತದ. ಯುದ್ದ ನಡಿತಿರೋ ದೇಶಗಳ ಚಿತ್ರಣ ನೋಡಿದ್ರ ಮನಸ್ಸು ವಿಷಾದ ಆಗತದ.ಎಂತೆಂಥ ದೊಡ್ಡ ದೊಡ್ಡ ಕಡ್ಡಡಗಳೆಲ್ಲ ನೆಲಸಮ ಮಾಡ್ತಿದ್ದಾರ.ಈಗ ಒಂದು ಸಮಾಧಾನ ಅಂದ್ರ ಯುದ್ದದ ಸೂಚನೆ ಸಿಗ್ತಂದ್ರ ಜನರಿಗೆ ತಾವಿರುವ ಸ್ಥಳ ಖಾಲಿ ಮಾಡ್ಸಿ ಬ್ಯಾರೆ ಸುರಕ್ಷಿತ ಸ್ಥಳ ಕ್ಕ ಕಳ್ಸತಾರಂತ.ಜೀವ ಉಳದ್ರ ಸಾಕು ಅನ್ನಕೊಂಡ್ರ ತಮ್ಮ ಎಲ್ಲಾ ಜೀವಮಾನದ ಗಳಿಕಿ ಕಳಕೊಂಡು ಅವ್ರ ಬದುಕು ಉಹಿಸಿಕೊಳ್ಳಕ್ಕ ಆಗಲ್ಲ.ಕ್ಷೀಪಣಿಗಳು ಒಬ್ಬರ ದೇಶದ ಮ್ಯಾಲ ಒಬ್ಬರು ಹಾರಿಸಿ ಇಡೀ ಊರೆಲ್ಲ ನೆಲಸಮ ಮಾಡೊದ್ರಾಗ ಯಾವ ಪುರುಷಾರ್ಥ ಅದ..ಸಣ್ಣ ಮಕ್ಕಳು ಕಲಿಯೋ ಸಾಲಿಮ್ಯಾಲ್ ಬಾಂಬ್ ಹಾಕಿ ಮಕ್ಕಳ ಸಾವಿಗಿ ಕಾರಣ ಆಗೊ ದೇಶಗಳ ವಿಕೃತಿಗೆ ಧಿಕ್ಕಾರ. ಅಲ್ಲೆಲ್ಲೊ ಯುದ್ದ ಆಗತಿದ್ರ ಅದರ ಪರಿಣಾಮ ನಮ್ಮ ದೇಶದವ್ರು ಅನುಭವಿಸಬೇಕಾಗ್ಯಾದ.ಬರಿ ನಮ್ಮ ದೇಶ ಅಷ್ಟೇ ಅಲ್ಲ. ಇಡೀ ಮನುಕುಲಕ್ಕೆ ತೊಂದರೆ ಆಗಲತದ.ನಮ್ಮ ಜನರು ಸಿಲಿಂಡರ್ ಸಲುವಾಗಿ ಕಷ್ಡಪಡತಿದ್ದಾರ.ಕಾಡು ಕಡದು ಕಟ್ಟಿಗಿ ಉಪಯೊಗಿಸಿ ಕಾಡು ಹಾಳು ಮಾಡಬ್ಯಾಡ್ರಿ ಅಂತ ಕಾಡಿನ ಅಕ್ಕಪಕ್ಕದ ಜನಕ್ಕ ಸರ್ಕಾರ ಉಚಿತ ಗ್ಯಾಸ ಸಿಲಿಂಡರ್ ವ್ಯವಸ್ಥೆ ಮಾಡಿತ್ತು. ಈಗ ಬಹುತೇಕ ಮನಿ ಗಳಲ್ಲಿ ಕಟ್ಟಗಿ ಉಪಯೋಗಿಸೋದು ಕಮ್ಮಿ ಆಗ್ಯಾದ  ಈ ಯುದ್ದದ ಪರಿಣಾಮದಿಂದ ಗ್ಯಾಸ್ ಅಭಾವವಾಗಿ ಮತ್ತ ಜನ ಕಟ್ಟಿಗಿಗಿ ಮೊರೆ ಹೋಗಬೇಕಾಗ್ಯಾದ.ಈಗ ಮತ್ತೊಮ್ಮೆ ಕೋವಿಡ್ ದಾಗ ಅನುಭವಿಸಿದ ಸಂಕಟ ನೆನಪಿಗೆ ಬರಲತದ.ಈ ಯುದ್ದಗಳು ಹಿಂಗ ಮುಂದುವರೆದ್ರ ಇನ್ನೂ ಎನೇನು ಅಭಾವ ಎದುರಿಸಬೇಕೋ ಎನೋ. ಈ ಯುದ್ದಗಳಿಂದ ಜಗತ್ತಿಗೆ ಉಪಯೋಗ ಇಲ್ಲ.ಆದ್ರೂ ಮತ್ತೊಬ್ಬರ ಜೋಡಿ ಜಗಳ ಆಡೋದೇ ದೊಡ್ಡಸ್ತಿಕೆ ಅನ್ನಕೊಳ್ಳೋ ಮೂರ್ಖರು ಇರೊ ತನಕ ಇವು ಹಿಂಗ ನಡಿತಾವ.ಎಲ್ಲೊ ಕುಂತು ಯುದ್ದಕ್ಕ ಪ್ರೇರಣೆ ನಿಡೋರು ಸುರಕ್ಷಿತ ವಾಗೆ ಇರತಾರ.ಸಾಮಾನ್ಯರ ಪಾಡು ಅನ್ನಲಕ್ಕ ಆಗಲ್ಲ ಆಡಲಕ್ಕ ಆಗಲ್ಲ.ದೇಶಗಳು ದೊಡ್ಡಸ್ತಿಕಿಯಿಂದ ಬೆನ್ನತಟ್ಟಕೊಳ್ಳತಾವ , ದೇಶವಾಸಿಗಳು ಯುದ್ಧದ ಕಾರ್ಮೊಡದೊಳಗ ಕಾಣೆಯಾಗತಾರ. ಜ್ಯೋತಿ , ಡಿ.ಬೊಮ್ಮಾ. ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ–32 ನಮ್ಮ ಆಫೀಸಿನ ಮುಂದಿನ ರಸ್ತೆಯಲ್ಲಿಯೇ ಒಂದು ಎಂಟು ನಿಮಿಷ ನಡೆದರೆ ಸಂತೆ ನಡೆಯುವ ಸಂತೆ ಮಾಳ ಅಥವಾ ಬಯಲು. ನಾವು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಬೇಗ ಬೇಗ ಊಟ ಮುಗಿಸಿ ಸಂತೆಗೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ನಾನು ಇಂದುಮತಿ ಮತ್ತು ಶಶಿಕಲಾ ಹೋಗುತ್ತಿದ್ದೆವು.. ನಂತರ ಗಂಗಾ ಮತ್ತು ಫಾತಿಮಾ ವರ್ಗವಾಗಿ ಬಂದಮೇಲೆ ಅವರೂ ಬರುತ್ತಿದ್ದರು.ಮೊದಲಿಗೆ ಸಂತೆಯಲ್ಲಿದ್ದ ಮೂರು ನಾಲ್ಕು ಸಾಲುಗಳನ್ನು ಒಂದು ಬಾರಿ ಕಣ್ಣಾಡಿಸಿ ಬರುವುದು. ನಂತರ ಎಲ್ಲಿ ಚೆನ್ನಾಗಿದೆಯೋ ಹಾಗೂ ಬೆಲೆ ಕಡಿಮೆ ಇರುತ್ತದೆಯೋ ಅಲ್ಲಿ ತೆಗೆದುಕೊಳ್ಳುವುದು.. ನಾನು ಅಮ್ಮನ ಮನೆಗೂ ಸೇರಿಸಿ ತರಕಾರಿ ತೆಗೆದುಕೊಂಡು ಬರುತ್ತಿದ್ದೆ .ಸಾಮಾನ್ಯ ನನ್ನ ಬ್ಯಾಗ್ ತೂಕವಾಗಿ ಇರುತ್ತಿತ್ತು. ಈಗಾದರೆ ಅಷ್ಟು ಭಾರ ಹೊತ್ತು ಎಂಟು ನಿಮಿಷ ನಡೆಯಲು ಆಗುತ್ತಿತ್ತೋ ಇಲ್ಲವೋ ಹಾಗಂತು ನಿರಾಯಾಸವಾಗಿ ತೆಗೆದುಕೊಂಡು ಬರುತ್ತಿದ್ದೆವು. ಸಂಜೆ ಮಾತ್ರ ಆಟೋ ಹಿಡಿದು ಹೋಗುತ್ತಿದ್ದೆವು. ಸಾಮಾನ್ಯ ಅಲ್ಲಿ ತರಕಾರಿ ಬೆಳೆದವರೇ ತಂದು ಮಾರುತಿದ್ದುದರಿಂದ ತುಂಬಾ ತಾಜಾ ಆಗಿಯೂ ಇರುತ್ತಿತ್ತು ಅಲ್ಲದೆ ಮೈಸೂರಿಗಿಂತ ಬಹಳ ಕಡಿಮೆ ದರದಲ್ಲಿಯೇ ಸಿಗುತ್ತಿದ್ದುದಿ ಒಂದು ಕಾರಣ. ಸೊಪ್ಪಂತೂ ತುಂಬಾ ಚೆನ್ನಾಗಿರುತ್ತಿತ್ತು. ಆದರೆ ನಾವು ಸಂತೆಯಲ್ಲಿ ಸೊಪ್ಪನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ ತೆಗೆದುಕೊಂಡು ಸಂಜೆಯ ವೇಳೆಗೆ ಬಾಡಿ ಹೋಗುತ್ತದೆ ಎನ್ನುವುದು ಒಂದು ಕಾರಣವಾದರೆ ರೈಲ್ವೆ ಸ್ಟೇಷನ್ ಪಕ್ಕದಲ್ಲಿಯೇ ಒಂದು ತರಕಾರಿ ಮಾರುಕಟ್ಟೆ ಇತ್ತು. ಅಲ್ಲಿ ತುದಿಯಲ್ಲಿಯೇ ಒಂದು ಅಜ್ಜಿ ಸೊಪ್ಪು ಮಾರುತ್ತಾ ಕುಳಿತಿರುತ್ತಿತ್ತು. ಸಾಮಾನ್ಯ ಆಕೆಯ ಬಳಿಯೇ ತೆಗೆದುಕೊಂಡು ರೈಲು ಹತ್ತುತ್ತಿದ್ದುದು. ಅದು ಶುಕ್ರವಾರ ಮಾತ್ರ ಸೊಪ್ಪು ತೆಗೆದುಕೊಳ್ಳದೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುತ್ತಿದ್ದೆವು.. ಕಸಿ ಮಾಡಿದ ದೊಡ್ಡ ಗಾತ್ರದ ಬದನೆಕಾಯಿ ಒಳಗೆ ಒಂದು ಬೀಜವು ಇರದೆ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು. ಎಳೆ ಹುರಳಿ ಕಾಯಿ ಗೋರಿಕಾಯಿ ಹೀರೆಕಾಯಿಗಳು ನೋಡಿದರೆ ತಿನ್ನುವಷ್ಟು ಆಸೆ ಆಗುತ್ತಿತ್ತು. ಕ್ಯಾರೆಟ್ ಸಹ ಚೆನ್ನಾಗಿಯೇ ಸಿಗುತ್ತಿತ್ತು. ಹೀಗಾಗಿ ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅವರೇ ಕಾಯಿ ಮತ್ತು ಸೊಪ್ಪು ಮಾತ್ರ ರೈಲ್ವೆ ಸ್ಟೇಷನ್ ಬಳಿಯಲ್ಲಿಯೇ ತೆಗೆದುಕೊಳ್ಳುತ್ತಿದ್ದು ಹೊತ್ತುಕೊಂಡು ಹೋಗಬೇಕಲ್ಲ ಎನ್ನುವುದು ಒಂದಾದರೆ ಅಲ್ಲೂ ಸಹ ಇದೇ ದರದಲ್ಲಿ ಸಿಗುತ್ತಿದ್ದುದು ಮತ್ತೊಂದು ವಿಶೇಷ. ಮತ್ತೊಂದು ಬಾರಿ ವರ್ಗಾವಣೆ ಚಕ್ರ ಉರುಳಿತು. ಈ ಬಾರಿ ಸುಲೋಚನಾ ಅವರಿಗೆ ಚಾಮರಾಜನಗರದಿಂದ ನಂಜನಗೂಡಿಗೆ ವರ್ಗ ಸಿಕ್ಕಿತ್ತು .ಅದರ ಜೊತೆಯಲ್ಲಿ ಈ ಮೊದಲು ನನ್ನ ಜೊತೆ ವಿಭಾಗೀಯ ಕಚೇರಿಯಲ್ಲಿ ಇದ್ದ ಸುಮಾ ಸಹ ಕೆಆರ್ ಪೇಟೆಯಿಂದ ನಂಜನಗೂಡಿಗೆ ವರ್ಗವಾಗಿ ಬಂದಳು. ನಮ್ಮ ರೈಲಿನಲ್ಲಿ ಓಡಾಡುವ ಬಳಗಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಯಿತು. ಫಾತಿಮಾ ಹಾಗೂ ವೈದೇಹಿ ಅವರು ಅದರ ಮುಂದಿನ ಸುತ್ತಿನಲ್ಲಿ ವರ್ಗವಾಗಿ ಬಂದರು. ಅವರಿಬ್ಬರೂ ಬಸ್ ನಲ್ಲಿ ಓಡಾಡುತ್ತಿದ್ದರು.ಸುಲೋಚನ ಬಂದದ್ದು ಒಂದು ಅನುಕೂಲ ಏನಾಯಿತೆಂದರೆ ಮೈಸೂರಿನಿಂದ ನೀರು ಹೊತ್ತುಕೊಂಡು ಹೋಗುವುದು ತಪ್ಪಿತು. ಅವರ ಮನೆಯಿಂದ ಆಟೋದಲ್ಲಿ ಬರುತ್ತಿದ್ದುದರಿಂದ  ದಿನಾ ನಾನೇ ನೀರು  ತರುತ್ತೇನೆ ಎಂದು ಹೇಳಿದ್ದರು. ರಜೆ ತೆಗೆದುಕೊಳ್ಳದ ಚಿಕ್ಕ ಪುಟ್ಟ ಹಬ್ಬಗಳು ನಂಜನಗೂಡಿನ ದೊಡ್ಡ ಜಾತ್ರೆ ಇಂತಹ ದಿನಗಳೆಲ್ಲ ಅವರ ಮನೆಗೆ ಆಟೋದಲ್ಲಿ ಹೋಗಿ ಊಟ ಮಾಡಿ ಬರುತ್ತಿದ್ದೆವು. ಅವರಿಗೆ ಕಚೇರಿ ಸೇವಾ ವಿಭಾಗವನ್ನು ಕೊಟ್ಟಿದ್ದರು. ಸುಮಾಗೆ ಲೆಕ್ಕ ಪತ್ರ ವಿಭಾಗ. ಈ ಸುತ್ತಿನಲ್ಲಿ ನನಗೆ ಮೊದಲೇ ಹೇಳಿದಂತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಕೊಟ್ಟರು .ಅಲ್ಲಿ ನಾನು ಲೋನ್ಸ್ ಅಂದರೆ ಸಾಲ ವಿಭಾಗಕ್ಕೆನಿಯುಕ್ತಳಾದೆ. ಅಲ್ಲಿ ಆಗ ನಾರಾಯಣಸ್ವಾಮಿ ಅವರು ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದರು. ಆಗೆಲ್ಲ ಒಂದೇ ಸಾವಿರದ ಒಳಗೆ ಸಾಲ ಇದ್ದಾಗ ಅದನ್ನು ನಗದು ರೂಪದಲ್ಲಿಯೇ ಕೊಡುತ್ತಿದ್ದರು .ಹಾಗಾಗಿ ಒಂದು ರೀತಿಯ ಒತ್ತಡದಲ್ಲಿಯೇ ಕೆಲಸ ಮಾಡಬೇಕಿತ್ತು ಆದರೂ ಖುಷಿ ಕೊಡುತ್ತಿತ್ತು. ತುಂಬಾ ಅನಿವಾರ್ಯ ಸ್ಥಿತಿಯಲ್ಲಿ ಸಾಲ ಬೇಕಾದವರಿಗೆ ತಕ್ಷಣ ಮಾಡಿಕೊಟ್ಟಾಗ ಅವರು ತೋರಿಸುತಿದ್ದ ಕೃತಜ್ಞತಾ ಭಾವ ಸಾರ್ಥಕ ಭಾವನೆ ಮೂಡಿಸುತ್ತಿತ್ತು. ಹೋದ ಕೆಲವು ದಿನಗಳಲ್ಲೇ ಅಲ್ಲಿನ ನಿಯತಕಾಲಿಕೆಗಳ ವಿತರಣೆ ಕೆಲಸ ಮತ್ತೆ ಈ ಶಾಖೆಯಲ್ಲಿಯೂ ನನ್ನನ್ನೇ ಅರಸಿ ಬಂದಿತ್ತು ಅದು ತುಂಬಾ ಇಷ್ಟದ ಕೆಲಸವಾದ್ದರಿಂದ ಒಪ್ಪಿಕೊಳ್ಳಲು ನಿರಾಕರಿಸಲಿಲ್ಲ.  ಆಗ ಪಾಲಿಸಿ ಸೇವಾ ವಿಭಾಗದಲ್ಲಿನ ನಮ್ಮ ತಂಡ ತುಂಬಾ ಚೆನ್ನಾಗಿತ್ತು ನಾಗಮಣಿ ಗಿರಿಜಾ ಮತ್ತು ನಾನು ಉನ್ನತ ದರ್ಜೆ ಸಹಾಯಕಿಯರು.  ಈ ಸಮಯದಲ್ಲಿ ತುಂಬಾ ದುಃಖಕರ ಘಟನೆ ಒಂದು ನಡೆಯಿತು .ಹೊಸ ವ್ಯವಹಾರ ವಿಭಾಗದಲ್ಲಿ ನನ್ನ ಜೊತೆಗೆ ಸಹಾಯಕರಾಗಿ ಇದ್ದ ಮಹಾದೇವನ್ ಅವರ ಆಘಾತಕಾರಿ ಸಾವು. ಉತ್ತರ ಭಾರತಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿದ್ದಾಗ ಗಂಗಾನದಿಯ ನೀರಿನ ಸೆಳೆತಕ್ಕೆ ಅವರ ಪತ್ನಿ ಕೊಚ್ಚಿ ಹೋದರು .ಅವರನ್ನು ಹಿಡಿಯಲು ಇವರು ಅವರ ಹಿಂದೆಯೇ ಧುಮುಕಿದರು. ಬೇರೆ ನುರಿತ ಈಜುಗಾರರು ಅವರಿಬ್ಬರನ್ನು ದಡಕ್ಕೆ ಎಳೆದು ತರುವಷ್ಟರ ಮಹದೇವನ್ ಅವರ  ಪ್ರಾಣ ಹೋಗಿಬಿಟ್ಟಿತ್ತು. ನಂತರ ಅವರ ಪತ್ನಿಗೆ ಅವರ ಕೆಲಸ ಸಿಕ್ಕಿತು ಇತ್ತೀಚೆಗೆ ಅವರ ಮಗಳ ಮದುವೆಯೂ ಆಯಿತು. ಆದರೂ ಬಹಳ ದಿನಗಳ ಕಾಲ ಕಾಡಿದ ಸಾವು ಅದು. ಮತ್ತೆ ಸಂತೆಯ ವಿಷಯಕ್ಕೆ ಬರುತ್ತೇನೆ. ಈ ಮೊದಲೇ ಹೇಳಿದಂತೆ ಹುಲ್ಲಹಳ್ಳಿ ಸರ್ಕಲ್ ನಿಂದ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ನಮ್ಮ ಆಫೀಸ್ ಇರುವುದು. ಸಂತೆ ನಡೆಯುತ್ತಿರುವುದು ಶುಕ್ರವಾರ. ನಮ್ಮ ಶಾಖೆಯಲ್ಲಿ ಮಹಿಳೆಯರ ಶೌಚಾಲಯ ಕ್ಯಾಶ್ ಕೌಂಟರ್ ನ ಎದುರಿಗೆ ಎಲ್ಲರ ಕಣ್ಣಿಗೆ ಬೀಳುವಂತೆಯೇ ಇತ್ತು .ಸಂತೆಯ ದಿನ ಸಂತೆಗೆ ಹೋಗುವ ಹೆಂಗಸರು ಸಂತೆಯ ಮಾರಾಟಗಾರ್ತಿ ಹೆಂಗಸರು ಎಲ್ಲರಿಗೂ ನಮ್ಮ ಶಾಖೆಯ ಶೌಚಾಲಯ ಒಂದು ಸಾರ್ವಜನಿಕ ಶೌಚಾಲಯದ ತರಹ ಆಗಿ ಹೋಗಿತ್ತು. ಸದಾ ತೆರೆದೇ ಇರುತ್ತಿದುದರಿಂದ ಮುಂಬಾಗಿಲಿನಿಂದ ಪ್ರವೇಶಿಸಿ ನೇರ ಅಲ್ಲಿಗೆ ಹೋಗಿ ಬಿಡುತ್ತಿದ್ದರು .ಪ್ರವೇಶ ನಿಷೇಧ ಎಂಬ ಬೋರ್ಡ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ. ಮಕ್ಕಳನ್ನು ಕರೆದುಕೊಂಡು ಬಂದು ತುಂಬಾ ಗಲೀಜು ಮಾಡಿ ಇಡೀ ಮಧ್ಯಾಹ್ನ ನಮಗೂ ಅದನ್ನು ಉಪಯೋಗಿಸಲು ಸಾಧ್ಯವಾಗದೆ ಮಹಡಿಯ ಮೇಲಿದ್ದ ಬೇರೊಂದು ಶೌಚಾಲಯವನ್ನು ನಾವು ಸಿಬ್ಬಂದಿಯವರು ಉಪಯೋಗಿಸಿಬೇಕಾಗಿತ್ತು. ಮಾರನೆಯ ದಿನ ಬಂದ ಸ್ವಚ್ಛತಾ ಸಿಬ್ಬಂದಿಯವರು ಶಾಖಾಧಿಕಾರಿಗಳ ಬಳಿ ಅದನ್ನು ಹೇಳಿ ನಂತರದಲ್ಲಿ ಅಲ್ಲಿಗೆ ಬೀಗ ಹಾಕಿ ಬೀಗದ ಕೈ ಸಿಬ್ಬಂದಿಗಳಿಗೆ ಮಾತ್ರ ಗೊತ್ತಿರುವ ಜಾಗದಲ್ಲಿ ಇಡಿಸಲಾಯಿತು .ಒಂದೆರಡು ಮೂರು ವಾರ ಬಂದವರು ಮುಚ್ಚಿದ ಬಾಗಿಲನ್ನು ನೋಡಿ ನಮ್ಮನ್ನು ಕೇಳಿದರು .ಆದರೆ ಅದು ಎಲ್ಲರ ಉಪಯೋಗಕ್ಕೆ ಅಲ್ಲ ಎಂದು ತಿಳಿದ ಮೇಲೆ ನಂತರದಲ್ಲಿ ಜನ ಹಾಗೆ ಬರುವುದು ಕಡಿಮೆಯಾಯಿತು. ಆದರೆ ನಾನು ವಾಪಸ್ ಮೈಸೂರಿಗೆ ಬರುವವರೆಗೂ ಶುಕ್ರವಾರದ ದಿನ ಅದಕ್ಕೆ ಬೀಗ ಹಾಕಿಯೇ ಇಡುತ್ತಿದ್ದೆವು.ಅದು ತಪ್ಪು ನಾವು ಹಾಗೆ ಮಾಡಬಾರದಿತ್ತು ಎಂದೆನಿಸಿದರೂ ಬಂದವರು ಕನಿಷ್ಠ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ ತುಂಬಾ ಗಲೀಜು ಮಾಡಿ ಬಿಡುವುದರಿಂದಲೂ, ಮಧ್ಯಾಹ್ನದ ವೇಳೆ ನಾವು ಆ ಮಹಿಳಾ ಕೊಠಡಿಯಲ್ಲಿ ಊಟ ಮಾಡಬೇಕಾಗಿದ್ದರಿಂದ ಆ ಕೊಳಕನ್ನು ಸಹಿಸಲು ಸಾಧ್ಯವಾಗದಿದ್ದುದು ಈ ನಡೆಗೆ ಕಾರಣವಾಗಿತ್ತು .‌ನಂತರ ಸ್ವಚ್ಛತಾ ಸಿಬ್ಬಂದಿ ವಿರೋಧ ಬಂದ ಮೇಲಂತೂ ನಮ್ಮ ಅಪರಾಧಿ ಮನೋಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ನಾವು ಮಹಿಳಾ ಬೋಗಿಯಲ್ಲೇ ದಿನ ಓಡಾಡುತ್ತಿದ್ದುದು ಎಂದು ಹೇಳಿದೆನಲ್ಲ ಅಲ್ಲಿ ನಮಗೆ ಬೇರೆ ಬ್ಯಾಂಕಿನ ಮತ್ತು ರಾಜ್ಯ ಸರ್ಕಾರಿ ನೌಕರಿಯ ಗೆಳತಿಯರು ಸಿಕ್ಕಿದರು. ಕೆನರಾ ಬ್ಯಾಂಕಿನ ನನ್ನದೇ ಹೆಸರಿನ ಸುಜಾತ ಎನ್ನುವವರು ಅಲ್ಲದೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನ ಗೀತಾ ಮತ್ತು ಸರಸ್ವತಿ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದ ಉಮಾ ಮತ್ತು ಇನ್ನೊಬ್ಬರು ಹೆಸರು ಮರೆತು ಹೋಗಿದೆ. ಮತ್ತೆ ಕಡ ಕೊಳದ ಹಿಟ್ಟಿನ ಕಾರ್ಖಾನೆಯಲ್ಲಿ ಕೆಲಸದಲ್ಲಿದ್ದ ಪೂರ್ಣಿಮಾ ಮತ್ತು ಅನಿತಾ  ನಾವೆಲ್ಲ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಉಮಾ ಅವರ ಮನೆಯಲ್ಲಿ ಜಾಜಿ ಹೂ  ಬಿಡುತ್ತಿದ್ದುದರಿಂದ ಅವರು ತರುತ್ತಿದ್ದರು. ಆದರೆ ಕಟ್ಟಲು ಸಮಯವಾಗುತ್ತಿರಲಿಲ್ಲ . ದಿನಾ ರೈಲಿನಲ್ಲಿ ನಾನೇ ಕಟ್ಟಿಕೊಡುತ್ತಿದ್ದೆ . ನನಗೂ  ಅದರಲ್ಲಿ ಪಾಲು ಇರುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ನಾನು ಮನೆಯಲ್ಲಿ ತಿನ್ನಲು ಸಮಯವಾಗದಿದ್ದದರಿಂದ ಹಾಗೂ ಬೇಗ ಆಗುತ್ತಿದುದರಿಂದ ತಿಂಡಿಯನ್ನು ಸಹ ರೈಲಿನಲ್ಲಿ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ. ಆ ಸಮಯದಲ್ಲಿ ಪೂರ್ಣಿಮಾ ಅವರು ಗರ್ಭಿಣಿಯಾಗಿದ್ದರು. ಅವರಿಗೆ ನಮ್ಮ ಮನೆಯ ಮೆಂತ್ಯದ ಹಿಟ್ಟಿನ ಗೊಜ್ಜು ಹಾಗೂ ಹುಳಿ ಅನ್ನ ತುಂಬಾ ಇಷ್ಟವಾಗುತ್ತಿತ್ತು. ಸಾಮಾನ್ಯ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವರು ಹೆರಿಗೆ ರಜೆ ಹೋಗುವ ಮೊದಲು ನಾವು ನಮ್ಮ ಬೋಗಿಯಲ್ಲಿ  ಅವರಿಗೆ ಒಂದು ಸೀರೆ ಬಳೆ ಮಲ್ಲಿಗೆ ಹೂವು ಕೊಟ್ಟು ಅಂದಿನ ದಿನ ಸಿಹಿ ತಿನಿಸು ಮಾಡಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆನಂತರದಲ್ಲಿ ಅವರು ನನ್ನ ತಂಗಿಯ ಪತಿ ಮುರಳಿ ಅವರ ಸಂಬಂಧಿ ಎಂದು ತಿಳಿಯಿತು. ಈಗಲೂ ಅವರ ಸಂಪರ್ಕ ಇದೆ ಸರಸ್ವತಿ ಅವರ ಮಗನ ಮದುವೆಗೆ ಆಹ್ವಾನಿಸಿದ್ದರು. ಅದಕ್ಕೂ ಹೋಗಿದ್ದೆ .ಈಗ ಅವರು ಎಲ್ಲ ನಿವೃತ್ತರಾಗಿರಬಹುದು. ಇತ್ತೀಚೆಗೆ ನನ್ನ ಗೆಳತಿ ಸಹೋದ್ಯೋಗಿ ಮಂಗಳಾಂಬ ಅವರ ಮಗನ ಮದುವೆಯಲ್ಲಿ ಉಮಾ ಮತ್ತು ಪರಮೇಶ್ವರ ಅವರು ಸಿಕ್ಕಿದ್ದರು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು ಈಗ ಅವರು ಸಹ ಸಂಪರ್ಕದಲ್ಲಿ ಇದ್ದಾರೆ.ತುಂಬಾ ಚೆನ್ನಾಗಿ ಬಾಂಧವ್ಯ ಇತ್ತು. ರೈಲಿನಲ್ಲಿ ಓಡಾಡುವುದೆಂದರೆ ತುಂಬಾ ಸಂತೋಷವಾಗುತ್ತಿತ್ತು. ಗೆಳತಿಯರು ಅಷ್ಟೇ ಅನ್ಯೋನ್ಯವಾಗಿದ್ದೆವು. ಅದನ್ನೆಲ್ಲ ನೆನೆದರೆ ತುಟಿ ಅಂಚಿನಲ್ಲಿ ಮುಗುಳ್ನಗೆ ಬಿರಿಯುತ್ತದೆ. ಖುಷಿಯ ಕ್ಷಣಗಳು ನೆನಪಾಗುತ್ತದೆ. ಸವಿ ನೆನಪುಗಳು ಬೇಕು ಸವಿಯಲೀ ಬದುಕು ಅಲ್ಲವೇ?(ಮುಂದುವರೆಯುವುದು) ಸುಜಾತಾ ರವೀಶ್

Read Post »

You cannot copy content of this page

Scroll to Top