ಒಳ್ಳೆಯ ದಿನವೆಂದರೆ…
ವಿಲಿಯಂ ಬ್ಲೇಕ್ ನ Holy Thursday ಅನುವಾದ: ವಿಠ್ಠಲ ದಳವಾಯಿ ಕಂಪಿಸುವ ದನಿಯು ಹಾಡೇ?ಅದು ಸಂತಸದ ಪದವಾಗಿ ಬದಲಾದೀತೆ?ಬಹುಪಾಲು ಮಕ್ಕಳು ಮೂಳೆ ಚಕ್ಕಳವಾದರೆಇದು ಬಡವರ ಭೂಮಿಯೇ ಹೌದು! ಅವರ ಮಗನ ಕಣ್ಣು ಎಂದೂ ಹೊಳೆಯುವದಿಲ್ಲಬರದಿಂದ ಬಣ್ಣಗೆಟ್ಟು ಒಣಗಿಯೇ ಇವೆ ಹೊಲಬದುಕು ಪೂರಾ ಕಲ್ಲು ಮುಳ್ಳಿನ ಹಾದಿಎಂದಿಗೆ ಕೊನೆ ಮಾಗಿ ಚಳಿಯ ತೇದಿ? ಒಂದು ಸಿರಿವಂತ, ಫಲವತ್ತಾದ ಭೂಮಿಯಲ್ಲಿಅತ್ತು ಅತ್ತು ಸತ್ತು ಹೋಗುವ ಕಂದಮ್ಮಗಳಿಗೆತುತ್ತು ಉಣಿಸಲೂ ಕೈಯೇಳದಿದ್ದರೆಈ ನೆಲ ಭವ್ಯ, ಪವಿತ್ರ ಎನ್ನಬಹುದೇ? ಎಲ್ಲೆಡೆಗೂ ಸೂರ್ಯನ ಬೆಳಗು ಬಂದರೆಎಲ್ಲೆಡೆಗೂ ಭೋರ್ಗರೆದು ಮಳೆ ಸುರಿದರೆಎಂದೂ ಹಸಿವಿನಿಂದ ದಿಗಿಲಾಗೋದಿಲ್ಲ ಪರಿವಾರಆಗ ಕರೆಯಬಹುದು ಅದು ಪವಿತ್ರ ಗುರುವಾರ ****************************************









