ಮಾಲಾ ಚಲುವನಹಳ್ಳಿ ಅವರ ಗಜಲ್
ಕಾವ್ಯ ಸಂಗಾತಿ ಮಾಲಾ ಚಲುವನಹಳ್ಳಿ ಗಜಲ್ ನಡೆಯುವ ಹಾದಿಯಲ್ಲಿ ಹೂವು ಚೆಲ್ಲಿ ಕೈ ಹಿಡಿದು ನಡೆಸುವೆನು ಸಖತಡೆಯುತ ಅಡೆತಡೆಯ ಸಹಬಾಳ್ವೆಗೆಹೂ ಮಳೆಯ ಸುರಿಸುವೆನು ಸಖ ಸಮ್ಮತಿ,ಅಸಮ್ಮತಿಗಳ ಅಸಮತೋಲನಸಂಸಾರದಲ್ಲಿ ಸಹಜವಲ್ಲವೇನುನಮ್ಮದೇ ನಿಸ್ವಾರ್ಥದ ಚೌಕಟ್ಟಿನಲ್ಲಿನಿನ್ನ ಮೈ ಮರೆಸುವೆನು ಸಖ ಹರೆಯವೆಂದರೆ ಬಣ್ಣದ ಚಿತ್ತಾಕರ್ಷಕಅರಿಯದ ಮೂಢನಲ್ಲ ನೀಕರೆಯುವ ಕಾಮನೆಗಳ ಜೊತೆ ಪ್ರೇಮ ಸೌಧದಿ ನಿನ್ನ ಇರಿಸುವೆನು ಸಖ ಶಬ್ದವಾಗಲಾರದ ಭಾವಗಳು ಅದೆಷ್ಟೋಎದೆಯೊಳಗೆ ನಗಾರಿಯಾಗಿವೆಸ್ಥಬ್ಧವಾದ ಮಾತುಗಳೂ ತಾಕಲಾಟವನಡೆಸುವುದ ಅರ್ಥೈಸುವೆನು ಸಖ ಭವಿಷ್ಯದ ಹಾದಿ ತೆರೆದುಕೊಂಡಿರುವಈ ಘಳಿಗೆ ತವಕ ನೂರಾಗಿದೆನವಿರಾದ ಕನಸುಗಳು ಮಾಲಾಳ ಎದೆಯಹಾಡಾಗಿರುವುದ ತಿಳಿಸುವೆನು ಸಖ ಮಾಲಾ ಚೆಲುವನಹಳ್ಳಿ
ಮಾಲಾ ಚಲುವನಹಳ್ಳಿ ಅವರ ಗಜಲ್ Read Post »









