“ಭಾವನೆಯ ಬೇಲಿ” ಲತಾ ಎ ಆರ್ ಬಾಳೆಹೊನ್ನೂರು
ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಭಾವನೆಯ ಬೇಲಿ” ಹೃದಯದೊಳಗೆ ನೋವ ಹಿಡಿದಿಡಲಾರೆಮನದ ಅಳಲು ಸಹಿಸಲಾರೆಹಿಂಡುವ ವೇದನೆಯ ಭರಿಸಲಾರೆಮೂಖ ವ್ಯಥೆ ಯಲಿ ಬದುಕಿರಲಾರೆ ಎಷ್ಟೆoದು ನೋವಿನಲಿ ಬೇಯುತಿರುವೆತಿರುವುಗಳ ಜೀವನವ ನೋಡುತ್ತಿರುವೆಯಾರ ಬರುವಿಕೆಗಾಗಿ ಕಾಯುತಿರುವೆಕ್ಷಣ ಕ್ಷಣ ನೋವ ತಿಂದು ಸಾಯುತಿರುವೆ ಭಾವನೆಯ ಬೇಲಿಯಲಿ ಬಂಧಿಯಾದೆಚುಚ್ಚು ಮಾತಿನಲಿ ಗಟ್ಟಿಯಾದೆಬದುಕಲು ಬಿಡದ ಸಮಾಜವಿದೆಬದುಕಿದ್ದು ಜೀವನದಲ್ಲಿ ಸಮಾಧಿಯಾದೆ ಕಾಣದ ಕೈಗಳು ಸೂತ್ರ ಹಿಡಿದಂತೆಆಡಿಸಿದಂತೆ ಆಡಿದ ಗಾಳಿಪಟದಂತೆಎಳೆಯಲು ದಾರ ತುಂಡರಿಸಿದಂತೆಬದುಕಿನ ಯಾತ್ರೆ ಲೋಕದಿ ಮುಗಿದಂತೆ ಲತಾ ಎ ಆರ್ ಬಾಳೆಹೊನ್ನೂರು
“ಭಾವನೆಯ ಬೇಲಿ” ಲತಾ ಎ ಆರ್ ಬಾಳೆಹೊನ್ನೂರು Read Post »









