ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟನೋಟ ~ ೨೦ ಮೊಗೆದಷ್ಟೂ ನೆನಪುಗಳು. ಹೀಗೆ ಸ್ನೇಹಿತರೊಂದಿಗೆ ಜಾಲಿಯಾಗಿ ಪ್ರಯಾಣ ಮಾಡುತ್ತಾ ಆಫೀಸಿನಲ್ಲಿ ಹೊಸ ವ್ಯವಹಾರ ವಿಭಾಗದಲ್ಲಿ ಕೆಲಸ ಕಲಿಯುತ್ತಾ ದಿನಗಳು ಬಹಳ ಬೇಗನೆ ಓಡಿ ಹೋದ ಹಾಗೆ ಅನಿಸುತ್ತಿತ್ತು. ಆಗ ಬಹಳ ಜನ ಅವಿವಾಹಿತ ಸಹೋದ್ಯೋಗಿಗಳು ಇದ್ದುದರಿಂದ ಅವರ ಮದುವೆ ಸಮಾರಂಭಗಳು ಆಗಾಗ ಆಗುತ್ತಿದ್ದವು. ಅಲ್ಲದೆ ಅವರ ಸೋದರ ಸೋದರಿಯರ ಮದುವೆಗಳು ನಡೆಯುತ್ತಿದ್ದವು .ಹಾಗೆ ನಂಜನಗೂಡಿನಲ್ಲಿ ಇದ್ದಾಗ ಹೋದ ಮದುವೆ ಸಮಾರಂಭಗಳಲ್ಲಿ ಮೊದಲನೆಯದು ಗಾಯತ್ರಿ ದೇವಿ ಅವರ ಅಕ್ಕನ ಮದುವೆ. ಅಂದು ಭಾನುವಾರವಾಗಿದ್ದರಿಂದ ಎಲ್ಲರೂ ಮಾತನಾಡಿಕೊಂಡು ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಮತ್ತೊಂದು ಬಸ್ನಲ್ಲಿ ಹೋಗಿ ಮದುವೆ ಸಮಾರಂಭ ಮುಗಿಸಿ ಬಂದಿದ್ದೆವು. ಈ ಮೊದಲೇ ಹೇಳಿದ ಹಾಗೆ ಮಂಡ್ಯದಲ್ಲಿ ಸಹೋದ್ಯೋಗಿಯಾಗಿದ್ದು ಈಗ ನಂಜನಗೂಡಿಗೆ ಬಂದಿದ್ದ ಮಂಜುಳಾ ಅವರ ಮದುವೆ ನಮ್ಮದೇ ಶಾಖೆಯ ರೇವಣ್ಣ ಅವರೊಂದಿಗೆ ನಿಶ್ಚಯವಾಗಿದ್ದು ಮೈಸೂರಿನಲ್ಲಿ ಮದುವೆ ಇತ್ತು. ಅದು ಜುಲೈ ಒಂದರಂದು. ನಮಗೆ ಆಗ ಸಾಂದರ್ಭಿಕ ರಜೆ, ಜುಲೈನಿಂದ ಆರಂಭವಾಗಿ ಜೂನ್ ಗೆ ಕೊನೆಗೊಳ್ಳುತ್ತಿತ್ತು ಹಾಗಾಗಿ ಆ ರಜೆ ವರ್ಷದ ಮೊದಲ ದಿನವೇ ರಜೆ ಹಾಕಲು ಯಾರಿಗೂ ಇಷ್ಟ ಇರಲಿಲ್ಲ. ಬೆಳಿಗ್ಗೆ ಬೇಗ ಹೋಗಿ ಮದುವೆ ಮಂಟಪಕ್ಕೆ ಹಾಜರಾತಿ ಹಾಕಿ 11:30ಗೆ ಶಾಖೆಗೆ ವಾಪಸ್ ಆಗಿದ್ದೆವು. ಹಾಗೆಯೇ ಗೆಳತಿ ಸರಸ್ವತಿಯ ಮದುವೆಯು ಒಂದು ವಾರ ಬಿಟ್ಟು ಜುಲೈ 8ಕ್ಕೆ ಇದುದರಿಂದ ಅವಳ ಮದುವೆಗೆ ಸಹ ಹಾಗೆಯೇ ಬೆಳಿಗ್ಗೆಯೇ ಹೋಗಿ ಆಫೀಸಿಗೆ ಬಂದಿದ್ದೆವು. 11:30ಗೆ ಬಂದೆವು ಎಂದು ಹೇಳಿದೆನಲ್ಲ ಅದರ ವಿವರ ಹೇಳುತ್ತೇನೆ ಕೇಳಿ. ನಮ್ಮ ಉದ್ಯೋಗಿಗಳ ನಿಯಮಾವಳಿ Staff Regulation ಅನುಸಾರ ತಿಂಗಳಿನಲ್ಲಿ ಎರಡು ಬಾರಿ ಬೆಳಗ್ಗಿನ ಹೊತ್ತು ಒಂದು ಗಂಟೆ ಕಾಲ ಪರ್ಮಿಷನ್ ಹಾಗೂ ಸಂಜೆಯ ಹೊತ್ತು ಒಂದು ಗಂಟೆಕಾಲ ಪರ್ಮಿಷನ್ ತೆಗೆದುಕೊಳ್ಳಲು ಅವಕಾಶವಿದೆ .ಅಂದರೆ ತಿಂಗಳಲ್ಲಿ ಎರಡು ಬಾರಿ ಬೆಳಿಗ್ಗೆ 11:30ಗೆ ಬರಬಹುದು ಹಾಗೂ ಎರಡು ಬಾರಿ ನಾಲ್ಕು ವರೆಗೆ ಹೋಗಬಹುದು ಹಾಗೆ ಹೋಗಿದ್ದನ್ನು ಹಾಜರಾತಿ ಪುಸ್ತಕದಲ್ಲಿ ಬರೆಯುತ್ತಾರೆ ಏನಾದರೂ ಅನಿವಾರ್ಯ ತುರ್ತಿನ ಪರಿಸ್ಥಿತಿ ಇದ್ದಲ್ಲಿ ಆ ರೀತಿಯ ಅವಕಾಶವನ್ನು ಬಳಸಿಕೊಳ್ಳಬಹುದು. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಮೈಸೂರಿಗೆ ಬರುವ ಮತ್ತು ವಾಪಸು ಹೋಗುವ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತಿದ್ದೆ. ನಂಜನಗೂಡಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದುದರಿಂದ ಆ ಸಮಯ ಈ ರೀತಿಯ ಅರ್ಲಿ ಪರ್ಮಿಷನ್ ಮತ್ತು ಲೇಟ್ ಪರ್ಮಿಷನ್ ಗಳಿಗೆ ಹೊಂದದೆ ಇದ್ದದರಿಂದ ಅಲ್ಲಿ ಹೆಚ್ಚು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಲಿಲ್ಲ ಒಮ್ಮೊಮ್ಮೆ ದೇವಸ್ಥಾನಕ್ಕೆ ಹೋಗುವಾಗ ಬಳಕೆಯಾಗುತ್ತಿತ್ತು ಅಷ್ಟೇ. ಮತ್ತೊಂದು ಸಮಾರಂಭದ ನೆನಪು ಎಂದರೆ ಸಹೋದ್ಯೋಗಿ ಪ್ರಕಾಶ್ ಅವರ ಮನೆಯ ಗೃಹಪ್ರವೇಶದ ಸಂದರ್ಭ ಅವರ ಮನೆ ಶ್ರೀ ರಾಮಪುರದ ಮಧುವನ ಲೇಔಟ್ ನಲ್ಲಿ ಕಟ್ಟಿದ್ದರು. ಅರ್ಧ ದಿನ ರಜೆ ಹಾಕಿ ನಾವು ಎಂಟು ಹತ್ತು ಜನದ ಗುಂಪು ಆ ಸಮಾರಂಭಕ್ಕೆ ಬಂದಿದ್ದೆವು. ವಾಪಸ್ ಹೋಗುವಾಗ ಅಲ್ಲಿಂದ ವಿವೇಕಾನಂದ ನಗರಕ್ಕೆ ಬಂದು ಅಲ್ಲಿಂದ ಬಸ್ ಹಿಡಿದು ಹೋಗಿದ್ದು. ಬರೀ ಬಯಲೇ ಕಾಣುತ್ತಿದ್ದ ಆ ಜಾಗ ಈಗ ಅದೆಷ್ಟು ಬ್ಯುಸಿ ಆಗಿದೆ ಎಂದರೆ ನಂಬಲು ಅಸಾಧ್ಯ. ಈ ಮಧ್ಯೆ ಗೆಳತಿ ಕೃಪಾಳ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವು ಸಹ ನಡೆಯಿತು. ಅವರ ಮನೆಯಲ್ಲೇ ನಡೆದ ನಿಶ್ಚಿತಾರ್ಥಕ್ಕೆ ನಾನು ಮತ್ತು ಶೈಲಾ ಹೋಗಿದ್ದೆವು. ನಗದು ಗುಮಾಸ್ತೆಯಾಗಿ ಕೆಲಸ ಮಾಡಿದ್ದು ಸಹ ನಂಜನಗೂಡು ಶಾಖೆಯಲ್ಲಿ ಪ್ರಪ್ರಥಮ ಬಾರಿಗೆ. ಸಾಮಾನ್ಯವಾಗಿ ನಿಗಮದ ಎಲ್ಲಾ ಶಾಖೆಗಳಲ್ಲೂ ಕಾಯಂ ಆದ ಕ್ಯಾಶಿಯರ್ ನಗದು ಗುಮಾಸ್ತೆ ಇರುತ್ತಾರೆ. ಅವರು ರಜೆ ಹೋದಾಗ ಮಿಕ್ಕ ಸಹಾಯಕ ಹುದ್ದೆಯಲ್ಲಿರುವ ಉದ್ಯೋಗಿಗಳನ್ನು ಅವರ ಸೀನಿಯಾರಿಟಿ ಪ್ರಕಾರ ಪಟ್ಟಿ ಮಾಡಿ ಒಬ್ಬರಾದ ನಂತರ ಒಬ್ಬರ ಪಾಳಿ ಬರುವಂತೆ ಮಾಡಿರುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಖಾಯಂ ಕ್ಯಾಶಿಯರ್ ಹೆಚ್ಚು ರಜೆ ಹೋಗುತ್ತಿರಲಿಲ್ಲ. ಅಲ್ಲದೆ ಮೊದಲ ಆರು ತಿಂಗಳು ನಮ್ಮನ್ನು ಕ್ಯಾಶಿಯರ್ ಹುದ್ದೆಯಲ್ಲಿ ಕೂಡಿಸುತ್ತಿರಲಿಲ್ಲ. ಹಾಗಾಗಿ ನನಗೆ ಒಂದು ದಿನವೂ ನಗದುಗುಮಾಸ್ತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ನಂಜನಗೂಡಿನಲ್ಲಿ ಆಗ ವೇಣುಗೋಪಾಲ್ ಎನ್ನುವವರು ಕ್ಯಾಶಿಯರ್ ಆಗಿದ್ದರು. ಅವರ ವೈಯುಕ್ತಿಕ ಕಾರಣಗಳಿಂದಾಗಿ ಅವರು ದೀರ್ಘ ರಜೆ ಹೋಗಿದ್ದರಿಂದ ನಮ್ಮೆಲ್ಲರಿಗೂ ನಗದು ಗುಮಾಸ್ತೆಯ ಸರದಿ ಬಂದಿತ್ತು. ನನಗೋ ನೋಟುಗಳನ್ನು ಕೈಯಲ್ಲಿ ಸರಿಯಾಗಿ ಹಿಡಿಯಲು ಸಹ ಬರುತ್ತಿರಲಿಲ್ಲ. ಅಲ್ಲದೆ ಒಂದು ರೀತಿಯ ಅಂಜಿಕೆ ಬೇರೆ ಆದರೆ ನನ್ನ ಸಹೋದ್ಯೋಗಿಗಳು ತುಂಬಾ ಸಹಕಾರ ನೀಡಿ ನನಗೆ ರಶೀದಿ ಬರೆಯುವ ಕೆಲಸ ಮಾತ್ರ ಬಿಟ್ಟು ರೂಢಿಯಾಗುವವರೆಗೆ ಬೇರೆಯವರೇ ಒಬ್ಬರಾದ ನಂತರ ಒಬ್ಬರು ಬಂದು ಹಣ ಎಣಿಸಿಕೊಳ್ಳುತ್ತಿದ್ದರು. ಇಲ್ಲಿನ ಅನುಭವದ ಮೇಲೆ ಇತ್ತೀಚೆಗೆ ಸಾಹಿತ್ಯ ರಂಗಕ್ಕೆ ಬಂದ ನಂತರ ಒಂದು ಕಥೆ ಬರೆದಿದ್ದೆ. ಕ್ಯಾಶ್ ಕೌಂಟರ್ ಎಂದಾಗ ಮತ್ತೊಂದು ಘಟನೆ ನೆನಪಿಗೆ ಬರುತ್ತದೆ. ಆಗ ಕ್ಯಾಶ್ ಕೌಂಟರ್ ಗಳಲ್ಲಿ ನಗದು ಗುಮಾಸ್ತೆಯ ಜೊತೆಗೆ ಒಬ್ಬರು ಉನ್ನತ ಶ್ರೇಣಿ ಸಹಾಯಕರು ಸಹ ಇರುತ್ತಿದ್ದರು. ರಶೀದಿಗಳಿಗೆ ಸಹಿ ಹಾಕುತ್ತಿದ್ದು ಅವರೇ. ನಾವು ನಂಜನಗೂಡಿನಲ್ಲಿ ಇದ್ದಾಗ ಮಲಿಕ್ ಅನ್ನುವವರು ಕ್ಯಾಷ್ ಕೌಂಟರಿನ ಉನ್ನತ ಶ್ರೇಣಿ ಸಹಾಯಕರು. ಬೆಂಗಳೂರಿನವರನ್ನು ನಂಜನಗೂಡಿಗೆ ಪೋಸ್ಟ್ ಮಾಡಿದ್ದರು. ಅದು ಮೈಸೂರು ಬೆಂಗಳೂರು ವಿಭಾಗಗಳು ಪ್ರತ್ಯೇಕವಾಗುವ ಮೊದಲು. ಈಗ ಅವರು ಬೆಂಗಳೂರಿಗೆ ವರ್ಗಾವಣೆ ಕೇಳಿದ್ದರು. ಆದರೆ ವಿಭಾಗಗಳು ಬದಲಾಗಿದ್ದರಿಂದ ಸ್ವಲ್ಪ ತಡವಾಗಿತ್ತು. ಅವರು ಪ್ರತಿ ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳಿ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ನಂಜನಗೂಡಿಗೆ ಬರುತ್ತಿದ್ದರು. ಹೀಗೆ ಒಮ್ಮೆ ಬರುವಾಗ ಅವರ ಬಳಿ ಇದ್ದ ಕ್ಯಾಶ್ ಬಾಕ್ಸ್ ನ ಕೀ ಕಳೆದುಕೊಂಡು ಬಿಟ್ಟಿದ್ದರು. ಅದಕ್ಕೆ ತಗಲುವ ವೆಚ್ಚ ಅವರಿಂದ ವಸೂಲು ಮಾಡಿದ್ದು ಅಲ್ಲದೆ ಶಿಸ್ತಿನ ಕ್ರಮ ತೆಗೆದುಕೊಂಡು ಆಗ ಅವರಿಗೆ ಎರಡು ಇಂಕ್ರಿಮೆಂಟ್ ಗಳನ್ನು ಕಡಿತ ಮಾಡಲಾಗಿತ್ತು. ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎನ್ನುವ ಎಚ್ಚರಿಕೆಯನ್ನು ನಾವು ಕಲಿತದ್ದೇ ಆಗ. ಈಗಲೂ ಕ್ಯಾಶ್ ಕೀ ನನ್ನ ಬಳಿ ಇರುವಾಗ ತುಂಬಾನೇ ಜಾಗ್ರತೆ ವಹಿಸುತ್ತೇನೆ. ಆ ಘಟನೆ ಮನಸ್ಸಿನಿಂದ ಮಾಸಿಯೇ ಇಲ್ಲ. ಹಾಗೆ ಹೀಗೆ ನೋಡನೋಡುತ್ತಲೇ ನಂಜನಗೂಡಿಗೆ ಬಂದು ಒಂದು ವರ್ಷ ಕಳೆದೇ ಬಿಟ್ಟಿತು.1991 ಅಕ್ಟೋಬರ್ ಒಂದು ವರ್ಗಾವಣೆ ಪಟ್ಟಿ ಬಿಡುಗಡೆಯಾಗಿ ಕೆಲವು ಜನರಿಗೆ ಮೈಸೂರು ನಗರದ ಶಾಖೆಗಳಿಗೆ ವರ್ಗಾವಣೆ ಸಿಕ್ಕಿತು. ಮಧ್ಯೆ ಮಂಡ್ಯಗೆ ಹೋಗಿ ಬಂದಿದ್ದರಿಂದ ನಾನು ಒಂದು ತಿಂಗಳು ತಡವಾಗಿ ನಂಜನಗೂಡಿಗೆ ಬಂದಿದ್ದೆ. ಹಾಗಾಗಿ ನನಗೆ ಆ ಪಟ್ಟಿಯಲ್ಲಿ ಮೈಸೂರಿಗೆ ವರ್ಗಾವಣೆ ಸಿಕ್ಕಿರಲಿಲ್ಲ. ಮತ್ತೊಂದು ವರ್ಷ ಕಾಯಬೇಕಾಗಿತ್ತು. ಆದರೆ ನಂಜನಗೂಡು ಓಡಾಟ ಹೋಗಿದ್ದರಿಂದ ಅಷ್ಟೇನೂ ಬೇಸರ ಆಗಲಿಲ್ಲ. ಈ ಮಧ್ಯೆ ಗೆಳತಿ ಶೈಲಾಳಿಗೆ ವಿವಾಹವಾಗಿ ಮೈಸೂರಿಗೆ ವರ್ಗಾವಣೆ ಸಿಕ್ಕಿತು. ನಿಗಮದ ನೀತಿಯ ಪ್ರಕಾರ ಕೆಲಸ ಸಿಕ್ಕ ನಂತರ ಮದುವೆಯಾದರೆ ಪತಿ ಇರುವ ಜಾಗಕ್ಕೆ ಆದಷ್ಟು ಬೇಗ ವರ್ಗಾವಣೆ ಸಿಗುತ್ತದೆ. ಹಾಗಾಗಿ ಅವಳ ಪತಿ ಮೈಸೂರಿನಲ್ಲಿ ಇದ್ದಿದ್ದರಿಂದ ತಕ್ಷಣವೇ ಅವಳಿಗೆ ವರ್ಗಾವಣೆ ಸಿಕ್ಕಿತ್ತು. ಹಾಗೆಯೇ ಗೆಳತಿ ಸರಸ್ವತಿಯೂ ಸಹ ವಿವಾಹವಾದ ಒಂದೆರಡು ತಿಂಗಳಲ್ಲಿಯೇ ಮೈಸೂರಿಗೆ ವರ್ಗಾವಣೆ ಹೊಂದಿ ಹೋಗಿದ್ದಳು. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗಳಿಗೆ ವರಿಷ್ಠರು ಬಂದು ಇಲ್ಲಿನ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಏನಾದರೂ ಮಾರ್ಗದರ್ಶನ ಬೇಕಾದರೆ ಕೊಡುತ್ತಾರೆ. ಹಾಗೆ ನಾನು ಹೊಸ ವ್ಯವಹಾರ ವಿಭಾಗದಲ್ಲಿ ಇದ್ದಾಗ ಆಗ ಅಲ್ಲಿನ ಮ್ಯಾನೇಜರ್ ಆಗಿದ್ದ ಆಚಾರ್ಯ ಎನ್ನುವವರು ಮತ್ತು ಆಡಳಿತ ಅಧಿಕಾರಿ ಆಗಿದ್ದ ಎಸ್ಎಂಎಸ್ ಗೋಪಾಲನ್ ಅವರು ಕಚೇರಿಗೆ ಬಂದಿದ್ದರು. ಕೆಲವೊಂದು ಕೆಲಸಗಳು ಮಾಡದೆ ಪೆಂಡಿಂಗ್ ಉಳಿದಿದ್ದನ್ನು ನನಗೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟು ಮುಗಿಸಲು ಹೇಳಿದ್ದರು. ಹಾಗೆಯೇ ನಾನು ಮಾಡಿ ಮುಗಿಸಿದ್ದೆ ಮತ್ತೆ ಅದಕ್ಕಾಗಿ ಶಾಖಾಧಿಕಾರಿಗಳ ಕೋಣೆಗೆ ಫೋನ್ ಮಾಡಿ ಕರೆಸಿ, ಒಳ್ಳೆಯ ಪ್ರೋತ್ಸಾಹದ ನುಡಿಗಳನ್ನು ಆಡಿದ್ದರು ನಮ್ಮ ನಿಗಮದಲ್ಲಿ ಯಾವುದೇ ವರ್ಗದಲ್ಲೂ ಬೇರೆ ಹೊಸಬರು ವರ್ಗಾವಣೆಯಾಗಿ ಬಂದಾಗ ಮೊದಲಿನಿಂದ ಶಾಖೆಯಲ್ಲೇ ಇರುವವರಿಗೆ ವಿಭಾಗಗಳಲ್ಲಿ ಬದಲಾವಣೆ ಬೇಕಾಗಿದ್ದರೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗಾಗಿ ನಾನು ಹೊಸ ವ್ಯವಹಾರ ವಿಭಾಗವನ್ನು ಬಿಟ್ಟು ಪಾಲಿಸಿ ಸೇವೆ ವಿಭಾಗಕ್ಕೆ ಬದಲಾವಣೆ ಕೋರಿಕೊಂಡೆ. ಪಾಲಿಸಿಗಳ ಪುನರುಜ್ಜೀವನ revival ಮಾಡುವ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು. ಮೊದಲಿನಿಂದ ನನಗೆ ಪಾಲಿಸಿ ಸೇವಾ ವಿಭಾಗ ಎಂದರೆ ಒಂದು ರೀತಿಯ ಆಕರ್ಷಣೆ ಆದರೆ ಮಂಡ್ಯದಲ್ಲಿ ಅವಕಾಶ ಸಿಕ್ಕಿದ್ದರೂ ಹೆಚ್ಚು ದಿನ ಆ ವಿಭಾಗದಲ್ಲಿ ಕೆಲಸ ಮಾಡಲು ಆಗಿರಲಿಲ್ಲ ಈಗ ನನ್ನಿಷ್ಟದ ವಿಭಾಗ ಸಿಕ್ಕಿತು ಎಂಬ ಖುಷಿಯಿಂದ ಹೊಸ ಕೆಲಸ ಕಲಿಯಲು ಆರಂಭಿಸಿದೆ. ಪಾಲಿಸಿಗಳ ಪ್ರೀಮಿಯಂ ಕಟ್ಟದೆ 6 ತಿಂಗಳುಗಳ ಕಾಲ ಆಗಿ ಹೋದರೆ ಪಾಲಿಸಿಗಳು ಲ್ಯಾಬ್ಸ್ ಆಗುತ್ತದೆ ಹಾಗೆ ಲ್ಯಾಪ್ಸ್ ಆದ ಪಾಲಿಸಿಗಳನ್ನು ಗೊಳಿಸಲು ಅವರ ಆರೋಗ್ಯದ ಬಗ್ಗೆ ಒಂದು ಡಿಕ್ಲರೇಷನ್ ಅದರಲ್ಲಿ ಏನಾದರೂ ಋಣಾತ್ಮಕ ಸಂಗತಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ಮೆಡಿಕಲ್ ರಿಪೋರ್ಟ್ ಇವೆಲ್ಲವನ್ನು ತೆಗೆದುಕೊಂಡು ಮತ್ತೆ ಪ್ರೀಮಿಯಂ ಪಡೆದುಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ನಂತರ ಪ್ರೀಮಿಯಂ ಕಟ್ಟಿ ಅದನ್ನು ಚಾಲ್ತಿಗೆ ತರಬೇಕು. ಹಾಗೆ ಪರಿಶೀಲಿಸುವ ಕೆಲಸ ನನ್ನದು. ಮತ್ತೆ ಕೆಲವೊಮ್ಮೆ ಚೆಕ್ ಮುಖಾಂತರ ಅಥವಾ ಪೋಸ್ಟ್ ನಲ್ಲಿ ಕಳಿಸಿದ ಚೆಕ್ಗಳ ಮೊತ್ತಗಳು ತಾಳೆ ಯಾಗದೆ ಅವುಗಳನ್ನು ಪ್ರೀಮಿಯಂಗೆ ಸರಿದೂಗಿಸಲು ಆಗುವುದಿಲ್ಲ ಕೆಲವೊಮ್ಮೆ ಹಣ ಹೆಚ್ಚಾಗಿ ಅದನ್ನು ಡಿಪಾಸಿಟ್ ಎಂದು ಪರಿಗಣಿಸಿ ಇಡಲಾಗುತ್ತದೆ ಆ ತರಹದ ಕೇಸುಗಳನ್ನು ಪರಿಶೀಲಿಸಿ ಮುಂದಿನ ಪ್ರೀಮಿಯಂ ಗಳಿಗೆ ಅಡ್ಜಸ್ಟ್ ಮಾಡುವುದು ಅಥವಾ ಪಾಲಿಸಿದಾರರಿಗೆ ಹಣ ಹಿಂತಿರುಗಿಸುವುದು ಎಂಬುದನ್ನು ನಿರ್ಧರಿಸಿ ಹಾಗೆ ಮಾಡಬೇಕಿತ್ತು ಹಾಗೆಲ್ಲ ಮೊತ್ತಗಳು ಬಹಳ ಕಡಿಮೆ ಇದ್ದುದರಿಂದ ಮನಿ ಆರ್ಡರ್ ಮೂಲಕವೇ ಪಾಲಿಸಿದಾರರಿಗೆ ಹೆಚ್ಚಿನ ಹಣ ಇದ್ದಲ್ಲಿ ಹಿಂದಿರುಗಿಸಲಾಗುತ್ತಿತ್ತು. 8/10 ರೂಪಾಯಿಗಳನ್ನು ಸಹ ಆಗ ಮನಿ ಆರ್ಡರ್ ಮಾಡುತ್ತಿದ್ದೆವು. 40 ಗಳಿಗಿಂತ ಹೆಚ್ಚಾಗಿ ಇದ್ದರೆ ಚೆಕ್ ಮೂಲಕ ವಾಪಸ್ ಮಾಡಲಾಗುತ್ತಿತ್ತು. ಹೊಸ ವಿಭಾಗಕ್ಕೆ ಬಂದು 15 ದಿನ ಆಗಿತ್ತು ಅಷ್ಟೇ ಒಂದು ದಿನ ಪ್ರಸಾದ್ ಅವರು ಶಾಖೆಗೆ ಬಂದು ಮತ್ತೊಂದು ಪಟ್ಟಿ ಸಹಾಯಕರ ವರ್ಗಾವಣೆಗೆ ಸಿದ್ಧವಾಗುತ್ತಿದೆ ಆ ಪಟ್ಟಿಯಲ್ಲಿ ನನಗೂ ಮೈಸೂರಿಗೆ ವರ್ಗಾವಣೆ ಸಿಕ್ಕಬಹುದು ಎಂಬ ವಿಷಯ ತಿಳಿಸಿದರು ಇದು ತುಂಬಾ ಅನಿರೀಕ್ಷಿತವೇ ಆಗಿತ್ತು ಆದರೆ ಹೆಚ್ಚಿನ ಖುಷಿ ಸಹ ತಂದಿತ್ತು. ಅಂತೆಯೇ ಪಟ್ಟಿ ಬಿಡುಗಡೆಯಾಗಿತ್ತು. ನನಗೆ ಮೈಸೂರಿನ ವಿಭಾಗ ಕಚೇರಿಯ ಹೊಸ ವ್ಯವಹಾರ ವಿಭಾಗದ ಸಹಾಯಕಳಾಗಿ ವರ್ಗಾವಣೆ ಸಿಕ್ಕಿತು .ನಂತರ ತಿಳಿದ ವಿಷಯ ನನ್ನ ಕಾರ್ಯ ವೈಖರಿ ನೋಡಿದ ಮ್ಯಾನೇಜರ್ ಹಾಗೂ ಆಡಳಿತ ಅಧಿಕಾರಿ ಅವರು ನನ್ನ ಹೆಸರನ್ನು ಅವರ ವಿಭಾಗಕ್ಕೆ ಸೂಚಿಸಿದ್ದರು ಎಂದು. ಕೃಪಾಳಿಗೆ ಮೈಸೂರು ಶಾಖೆ 4 ಸಿಕ್ಕಿತ್ತು ನನ್ನ ತಂಗಿ ಛಾಯಾಳಿಗೆ ಮೈಸೂರು ಶಾಖೆ ಎರಡಕ್ಕೆ ವರ್ಗಾವಣೆ ಸಿಕ್ಕಿತು. ಒಂದು ರೀತಿಯ ನೆಮ್ಮದಿಯ ಭಾವ. ಒಟ್ಟು ನಾವು ಎಂಟು ಜನ ನಂಜನಗೂಡಿನಿಂದ ವರ್ಗಾವಣೆಯಾಗಿ ಮೈಸೂರಿಗೆ ಬಂದದ್ದು. ನಮ್ಮದೇ ಬ್ಯಾಚ್ನ ಪ್ರಕಾಶ್ ಶ್ರೀಹರಿ ಸುಬ್ರಮಣ್ಯ ನಾನು ಎಲ್ಲಾ ಮೈಸೂರಿಗೆ ವರ್ಗಾವಣೆ ಕೋರಿದ್ದರೂ ಪ್ರಸಾದ್ ಒಬ್ಬರು ಮಾತ್ರ ವರ್ಗಾವಣೆ ಬಯಸದೆ ನಂಜನಗೂಡಿನಲ್ಲಿಯೇ ಉಳಿದುಕೊಂಡಿದ್ದರು. ಮೊದಲಿನಿಂದ ಬಂದ ಅಭ್ಯಾಸದಂತೆ
“ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”ಹೇಮಂತ್ ಗೌಡ ಪಾಟೀಲ್
ಕಾವ್ಯ ಸಂಗಾತಿ ಹೇಮಂತ್ ಗೌಡ ಪಾಟೀಲ್ “ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ” ಕಾಲ್ಪನಿಕ ಚಿತ್ರ(ಗೂಗಲ್ ಕೃಪೆ) ಅದು 1887ರ ಸಮಯ. ಮುಂಬೈಯ ಹೈಕೋರ್ಟ್ ಆ ಮಹಿಳೆಗೆ ಎರಡು ಆಯ್ಕೆಗಳನ್ನು ನೀಡಿತು. ಬಾಲ್ಯದಲ್ಲಿ ನಿನ್ನನ್ನು ವಿವಾಹವಾದ ವ್ಯಕ್ತಿಯೊಂದಿಗೆ ಹೋಗಿ ಬದುಕನ್ನು ಕಟ್ಟಿಕೋ, ಇಲ್ಲವೇ ಜೈಲಿಗೆ ಹೋಗು ಎಂದು. ಆಕೆ ಜೈಲಿಗೆ ಹೋಗಲು ತಯಾರಾದಳು. ಆಕೆಯ ಉತ್ತರ ಎಲ್ಲರಿಗೂ ದಿಗ್ಬ್ರಾಂತಿಯನ್ನು ಉಂಟು ಮಾಡಿತು. ಕೇವಲ ಭಾರತ ದೇಶವನ್ನು ಮಾತ್ರವಲ್ಲದೆ ಅಂದಿನ ಭಾರತ ದೇಶವನ್ನು ಆಳುತ್ತಿದ್ದ ಇಂಗ್ಲೆಂಡ್ ದೇಶದವರೆಗೆ ಈ ವಿಷಯದ ಕುರಿತ ಚರ್ಚೆ ಮುಂದುವರೆದು ಕಾನೂನಿನ ಕ್ರಮದಲ್ಲಿ ಬದಲಾವಣೆಯನ್ನು ಕೈಗೊಂಡು ನಂತರದ ಕೋಟ್ಯಾಂತರ ಹೆಣ್ಣುಮಕ್ಕಳ ಪಾಲಿಗೆ ವರದಾನವಾಯಿತು. ಕೇವಲ ಒಬ್ಬ ಹೆಣ್ಣುಮಗಳ ದಿಟ್ಟ ನಿರ್ಧಾರ ಒಂದು ಇಡೀ ಬ್ರಿಟೀಷ್ ಸಾಮ್ರಾಜ್ಯವನ್ನು ಮೊಳಕಾಲೂರಿ ನಿಲ್ಲುವಂತೆ ಮಾಡಿತು. ಆ ಹೆಣ್ಣು ಮಗಳೇ ರುಕ್ಮಾಬಾಯಿ. 1864 ರಲ್ಲಿ ಮುಂಬೈಯಲ್ಲಿ ಜಯಂತಿ ಬಾಯಿ ಎಂಬ ಹೆಣ್ಣು ಮಗಳನ್ನು ಕೇವಲ 14 ವರ್ಷ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಡಲಾಯಿತು. ತನ್ನ 15ನೇ ವಯಸ್ಸಿಗೆ ಆಕೆ ಹೆಣ್ಣು ಮಗುವೊಂದನ್ನು ಹಡೆದಳು ಹಾಗೂ 17ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ಮುಂದೆ ತನ್ನ ಮಗಳು ಎಂಟು ವರ್ಷದವಳಿದ್ದಾಗ ಆಕೆಯ ತಾಯಿ ಡಾ. ಸಖಾರಾಮ್ ಅರ್ಜುನ್ ಎಂಬ ವೃತ್ತಿಯಿಂದ ತಜ್ಞ ವೈದ್ಯ ಹಾಗೂ ಪ್ರವೃತ್ತಿಯಿಂದ ಸಮಾಜ ಸುಧಾರಕರಾಗಿದ್ದ ವ್ಯಕ್ತಿಯನ್ನು ವಿವಾಹವಾದಳು. ತನ್ನ ಕಾಲದ ಪುರುಷ ಸಮಾಜದ ಯೋಚನೆಗಳಿಗಿಂತ ವಿಭಿನ್ನವಾಗಿ ಯೋಚಿಸುತ್ತಿದ್ದ ಡಾ. ಸಖಾರಾಮ್ ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು ಎಂದು ಬಯಸುತ್ತಿದ್ದರು. ತನ್ನ ಮನೆಯ ತುಂಬಾ ಪುಸ್ತಕಗಳನ್ನು ಜೋಡಿಸಿದ್ದ ಆತ ರುಕ್ಮ ಬಾಯಿಗೆ ಓದಿನಲ್ಲಿ ಆಸಕ್ತಿಯನ್ನು ವಹಿಸಲು ಪ್ರೋತ್ಸಾಹಿಸಿದ.ಸಮಾಜ ಸುಧಾರಕನಾದರೂ ಕೂಡ ಆತನಿಗೂ ಕೂಡ ತನ್ನದೇ ಆದ ಕೆಲವು ಸಾಮಾಜಿಕ ಮಿತಿಗಳು ಇದ್ದವು. ಅಂತೆಯೇ ರುಕುಮಾ ಬಾಯಿ 11 ವರ್ಷದವಳಾದಾಗ ಆಕೆಗೆ 19ರ ಹರಯದ ದಾದಾ ಜೀ ಭಿಕಾಜಿ ಎಂಬ ವ್ಯಕ್ತಿಯೊಡನೆ ಜಯಂತಿ ಬಾಯಿಯ ತಂದೆ ಸನಾತನ ಕಾಲದಿಂದಲೂ ಆಚರಿಸುತ್ತಿದ್ದ ರೀತಿಯಲ್ಲಿ ಎಲ್ಲ ಭಾರತೀಯ ಸಂಪ್ರದಾಯಗಳನ್ನು ಪಾಲಿಸಿ ಮದುವೆ ಮಾಡಿದರು. ಪುಟ್ಟ ಬಾಲಕಿಯಾದ ಆಕೆಗೆ ಯಾವುದೇ ರೀತಿಯ ಆಯ್ಕೆಗಳಾಗಲಿ, ಮದುವೆ ಮಾಡಿಕೊಳ್ಳಲು ಒಲ್ಲೆ ಎಂದು ಹೇಳುವ ಧೈರ್ಯವಾಗಲಿ ಇರಲಿಲ್ಲ. ಮೌನ ಒಪ್ಪಿಗೆ ಆಕೆಯದಾಗಿತ್ತು.ಅಂದಿನ ಸಮಾಜದ ನಿಯಮಾವಳಿಗಳ ಪ್ರಸಾರ ಮದುವೆ ಆದ ನಂತರವೂ ಕೂಡ ಋತುಮತಿಯಾಗುವವರೆಗೆ ತನ್ನ ತವರು ಮನೆಯಲ್ಲಿಯೇ ಉಳಿಯಬೇಕಾದ ಕಾರಣ ಆಕೆ ತನ್ನ ಶಿಕ್ಷಣವನ್ನು ರಹಸ್ಯವಾಗಿಯೇ ಮುಂದುವರಿಸಿದಳುಆಕೆಯನ್ನು ಮದುವೆಯಾದ ವ್ಯಕ್ತಿ ಅಂದಿನ ಸಾಮಾಜಿಕ ನೀತಿ ನಿಯಮಾವಳಿಗೆ ಬದ್ಧನಾಗಿದ್ದ. ತನ್ನ ಶಿಕ್ಷಣವನ್ನು ಪೂರೈಸಿದ ರುಕ್ಮಭಾಯಿ ಅತ್ಯಂತ ಜಾಣ ಹಾಗೂ ಸಂಸ್ಕಾರವಂತ ಹೆಣ್ಣುಮಗಳಾಗಿ ಪರಿವರ್ತಿತಳಾಗಿದ್ದರು. ಆಕೆಯಲ್ಲಿ ಆಧುನಿಕ ವಿಚಾರಧಾರೆಗಳ ಪ್ರಭಾವದಿಂದ ತನ್ನದೇ ಆದ ವೈಯುಕ್ತಿಕ ಅಭಿಪ್ರಾಯಗಳು ಹರಳುಗಟ್ಟಿದ್ದವು. ಅಂದಿನ ಕಾಲದ ಇತರ ಸಮಾಜ ಸುಧಾರಕರೊಂದಿಗಿನ ಭೇಟಿ, ಅಭಿಪ್ರಾಯ, ವಿಚಾರ ವಿನಿಮಯಗಳು, ಚರ್ಚೆಗಳು, ಭಾಷಣಗಳು, ಉಪನ್ಯಾಸಗಳು ಆಕೆಯ ಮೇಲೆ ಪರಿಣಾಮವನ್ನು ಬೀರಿದ್ದವು. ಆಕೆಯ ಪತಿ ದಾದಾಜಿ ತನ್ನ ಸೋಮಾರಿತನದ ಕಾರಣದಿಂದ ಶಾಲೆಯಿಂದ ಹೊರ ಹಾಕಲ್ಪಟ್ಟಿದ್ದ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದ. ದುಶ್ಚಟಗಳಿಗೆ ದಾಸನಾದ ಆತನ ಚಿಕ್ಕಪ್ಪನ ಕುಮ್ಮಕ್ಕು ಕೂಡ ಆತನಿಗಿತ್ತು.ತನ್ನೆಲ್ಲ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತನ್ನ ಪತ್ನಿಯ ತವರು ಮನೆ ಆತನ ಪಾಲಿಗೆ ಅಲ್ಲಾವುದ್ದೀನನ ದೀಪವಾಗಲಿ ಎಂಬುದು ಆತನ ಬಯಕೆಯಾಗಿತ್ತು. 1884 ರಲ್ಲಿ 20 ವರ್ಷದ ರುಕುಮಾಬಾಯಿಯನ್ನು ಆತ ತನ್ನೊಂದಿಗೆ ಬಂದು ವಾಸಿಸಲು ಕೇಳಿಕೊಂಡ… ಆದರೆ ಆತನ ಕೆಟ್ಟ ಚಟಗಳ ಕುರಿತು ಅರಿವಿದ್ದ ಆಕೆ ಆತನ ಕೋರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದಳು.ಆಕೆಯನ್ನು ಪತ್ನಿಯಾಗಿ ಮನೆ ತುಂಬಿಸಿಕೊಂಡು ತನ್ನೆಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಆಶಿಸಿದ್ದ ದಾದಾಜಿ ಶತಾಯಗತಾಯ ಆಕೆಯನ್ನು ಹೊಂದಲೇಬೇಕೆಂಬ ಹಟದಿಂದ ನ್ಯಾಯಾಲಯದ ಮೊರೆ ಹೊಕ್ಕ. 19ನೇ ಶತಮಾನದಲ್ಲಿ ಸಾರ್ವಜನಿಕವಾಗಿ ಅತ್ಯಂತ ಚರ್ಚೆಗೆ ಒಳಗಾದ ಕಾನೂನು ಹೋರಾಟ ದಾದಾಜಿ ಮತ್ತು ರುಕ್ಮಬಾಯಿ ಅವರದಾಗಿತ್ತು. ದಾದಾ ಜೀ ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಯ ಪ್ರಾಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ದಾವೆಯನ್ನು ಪತ್ನಿಯ ಮೇಲೆ ಹೂಡಿದ್ದ. ಈ ಹಕ್ಕಿನ ಪ್ರಕಾರ ಪತ್ನಿ ಆತನ ಸೊತ್ತಾಗಿದ್ದು ಕಾನೂನು ಆಕೆ ತನ್ನ ಪತಿಯ ಜೊತೆಯಲ್ಲಿ ಬಾಳುವೆ ಮಾಡಬೇಕು ಎಂದು ಸೂಚಿಸಿತು. ಇದಕ್ಕೆ ರುಕ್ಮಾ ಬಾಯಿಯ ಉತ್ತರ ಹೀಗಿತ್ತು… ಅರಿಯದ ಅಬೋಧ ವಯಸ್ಸಿನಲ್ಲಿ ತನಗೆ ಮದುವೆ ಮಾಡಿಕೊಡಲಾಗಿದ್ದು ತಾನು ಅಸಹಾಯಕಳಾಗಿದ್ದೆ. ಮದುವೆ ಎಂದರೆ ಏನು ಎಂಬುದೇ ತನಗೆ ಗೊತ್ತಿರಲಿಲ್ಲ. ಅದೂ ಅಲ್ಲದೆ ಹೆಣ್ಣುಮಕ್ಕಳನ್ನು ಹೊಲ ಮನೆ,ದನ ಕರು ಒಡವೆಗಳ ರೀತಿಯಲ್ಲಿ ಆಸ್ತಿಯಂತೆ ಭಾವಿಸಬಾರದು ಎಂದು ಆಕೆ ವಾದ ಹೂಡಿದಳು. ಹೆಣ್ಣು ಮಕ್ಕಳು ಪುರುಷರಷ್ಟೇ ಸರಿ ಸಮಾನವಾಗಿ ಬದುಕುವ ಕಣ್ಣು ಹೊಂದಿದ್ದಾರೆ ಅವರನ್ನು ತಮ್ಮ ಹಕ್ಕಿನ ಸೊತ್ತಾಗಿ ಬೇರೆಯವರು ಭಾವಿಸಬಾರದು ಎಂದು ಆಕೆ ನ್ಯಾಯಾಲಯವನ್ನು ಒತ್ತಾಯಿಸಿದಳು. ಇದಕ್ಕೂ ಮುನ್ನ ಈ ರೀತಿ ಹೆಣ್ಣು ಮಕ್ಕಳ ಹಕ್ಕಿನ ಕುರಿತಾಗಿ ನ್ಯಾಯಾಲಯದ ಮುಂದೆ ಯಾರೂ ಹಕ್ಕೊತ್ತಾಯವನ್ನು ಮಂಡಿಸಿರಲಿಲ್ಲ. 1885ರಲ್ಲಿ ಜಸ್ಟಿಸ್ ರಾಬರ್ಟ್ ಪಿನ್ಹೇ ಆಕೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಾವು ಪಾಲಿಸುತ್ತಿರುವ ಬ್ರಿಟಿಷ್ ಕಾನೂನು ಬಾಲ್ಯ ವಿವಾಹ ಮಾಡಲ್ಪಟ್ಟ ಅಬೋಧ ರುಕ್ಮಭಾಯಿಗೆ ಸಂಬಂಧ ಪಡುವುದಿಲ್ಲ ಎಂದು ತೀರ್ಪು ನೀಡಿತು. ಸಂಪ್ರದಾಯವಾದಿ ಭಾರತೀಯರು ಸಿಡಿದೆದ್ದರು. ಹಿಂದೂ ರೀತಿ ರಿವಾಜುಗಳನ್ನು ಪ್ರಶ್ನಿಸುವ ನ್ಯಾಯಾಲಯದ ವಿರುದ್ಧ ಸನಾತನವಾದಿಗಳು ದನಿಯೆತ್ತಿದರು.ಉಕ್ಕಿನ ಮನುಷ್ಯ ಎಂದೇ ಭಾರತೀಯ ಸ್ವತಂತ್ರ ಇತಿಹಾಸದಲ್ಲಿ ಹೆಸರಾದ ಬಾಡೋಲಿಯ ಸರದಾರ ಬಾಲಗಂಗಾಧರನಾಥ ತಿಲಕ್ ಅವರು ರುಕ್ಮಾಭಾಯಿಯ ಆಂಗ್ಲ ಶಿಕ್ಷಣದ ಪರಿಣಾಮವೇ ಆಕೆಯ ಈ ತೀರ್ಮಾನಕ್ಕೆ ಕಾರಣ ಎಂದು ಹೇಳಿದರು ಭಾರತದ ಹಿಂದುತ್ವ ಅಪಾಯದಲ್ಲಿದೆ ಎಂದು ಸಾರ್ವಜನಿಕರು ಕೂಗು ಹಾಕಿದರು . 1886 ರಲ್ಲಿ ಮತ್ತೆ ಮರುಪರಿಶೀಲನೆಗೆ ಒಳಪಟ್ಟ ತೀರ್ಪನ್ನು ಹೆಚ್ಚುವರಿ ನ್ಯಾಯಾಲಯದ ಅಂದಿನ ಜಡ್ಜ್ ಆಗಿದ್ದ ಜಸ್ಟಿಸ್ ಫರಾನ್ ಅವರು ರುಕ್ಮಬಾಯಿ ಮರಳಿ ತನ್ನ ಪತಿಯ ಮನೆಗೆ ಹೋಗಬೇಕು ಇಲ್ಲವೇ ಆರು ತಿಂಗಳ ಕಾಲ ಕಾರಾಗ್ರಹ ವಾಸವನ್ನು ಅನುಭವಿಸುವ ನಿಟ್ಟಿನಲ್ಲಿ ಜೈಲಿಗೆ ಹೋಗಬೇಕು ಎಂದು ಆದೇಶವನ್ನು ಹೊರಡಿಸಿದರು. ಇದೀಗ ರುಕ್ಮಭಾಯಿತಾನು ಜೈಲಿಗೆ ಹೋದರೂ ಪರವಾಗಿಲ್ಲ, ಆದರೆ ತನ್ನ ಒಪ್ಪಿಗೆ ಇಲ್ಲದೆ ಮಾಡಿದ ವಿವಾಹವನ್ನು ಹಾಗೂ ವಲ್ಲದ ಗಂಡನೊಂದಿಗಿನ ಬದುಕನ್ನು ನಡೆಸಲಾರೆ ಎಂಬ ಹೇಳಿಕೆ ನೀಡಿದ್ದು ಐತಿಹಾಸಿಕ ಸಮರ್ಥನೆಯಾಯಿತು. ಆಕೆಯ ಮಾತುಗಳು, ಕೇಸಿನ ವಿವರಗಳು ಸಮುದ್ರಗಳನ್ನು ದಾಟಿ ಬ್ರಿಟಿಷ್ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾದವು. ಇಂಗ್ಲೆಂಡಿನ ಪ್ರಸಿದ್ಧ ಮಹಿಳಾ ನಿಯತಕಾಲಿಕವೊಂದು ರುಕ್ಮಾಬಾಯಿಯ ನಿಲುವನ್ನು ಸಮರ್ಥಿಸಿತು, ಮಾತ್ರವಲ್ಲದೇ ಪ್ರಸಿದ್ಧ ತತ್ವಜ್ಞಾನಿಯಾಗಿದ್ದ ಮ್ಯಾಕ್ಸ್ ಮುಲ್ಲರ್ ರುಕ್ಮಾಭಾಯಿಯ ಆಂಗ್ಲ ಶಿಕ್ಷಣವು ಆಕೆಗೆ ತನ್ನ ಆಯ್ಕೆಗಳ ಕುರಿತು ಸ್ಪಷ್ಟ ನಿಲುವನ್ನು ಹೊಂದಲು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಅತ್ಯುತ್ತಮ ನ್ಯಾಯಾಧೀಶನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದರು. ಇದೇ ಸಮಯದಲ್ಲಿ ರುಕ್ಮಾ ಬಾಯಿ ಅನಾಮಿಕವಾಗಿದಿ ಹಿಂದೂ ಲೇಡಿ ಎಂಬ ಹೆಸರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ನಿಯತಕಾಲಿಕಕ್ಕೆ ಬಾಲ್ಯ ವಿವಾಹವನ್ನು ವಿರೋಧಿಸುವ ನಿಟ್ಟಿನಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಳು. ತನ್ನ 14ನೇ ಹುಟ್ಟುಹಬ್ಬಕ್ಕೆ ಮುನ್ನವೇ ಮಕ್ಕಳನ್ನು ಪಡೆಯಲು ಹೆಣ್ಣು ಮಕ್ಕಳನ್ನು ಒತ್ತಾಯಿಸುವ ಸಂಪ್ರದಾಯವನ್ನು ವಿರೋಧಿಸಿ ಆಕೆ ಬರೆದಳು. ಕನಸುಗಳ ಸಾವಿನ ಕುರಿತು ಹೆಣ್ಣು ಮಕ್ಕಳ ಅಂತಃಸತ್ವವನ್ನು ಹೀರಿ ಎಸೆಯುವ, ಅವರ ಬಾಲ್ಯವನ್ನು ಕಸಿಯುವ ಕುರಿತು ಆಕೆ ಬರೆದ ಲೇಖನಗಳು ಬುದ್ಧಿವಂತರ, ವಿಚಾರ ಜೀವಿಗಳ ಮನಸ್ಸನ್ನು ತಾಕಿದವು. ಬಾಲ್ಯವಿವಾಹದಂತಹ ಕೆಟ್ಟ ಸಂಪ್ರದಾಯವು ನನ್ನ ಜೀವನದ ಎಲ್ಲಾ ಸಂತೋಷಗಳನ್ನು ಕಸಿದುಕೊಂಡಿತ್ತು ಎಂದು ಆಕೆ ಬರೆದಳು. ನನ್ನ ಬದುಕಿನಲ್ಲಿ ವಿವಾಹವು ನನ್ನ ವಿದ್ಯೆ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡ ಬಂದಿತು ಎಂದು ಹೇಳಿದ ಆಕೆ ಅಂದು ಬ್ರಿಟನ್ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಣಿ ವಿಕ್ಟೋರಿಯಾಗೆ ಪತ್ರ ಬರೆದು ತನಗೆ ನ್ಯಾಯ ದೊರಕಿಸಿಕೊಡಲು ಕೇಳಿಕೊಂಡಳು. ಹಿಂದೂ ಕಾನೂನಿನಲ್ಲಿ ವೈವಾಹಿಕ ವಯಸ್ಸನ್ನು ಹೆಣ್ಣು ಮಕ್ಕಳಿಗೆ 15 ವರ್ಷ ಮೇಲ್ಪಟ್ಟು ಹಾಗೂ ಗಂಡು ಮಕ್ಕಳಿಗೆ 20 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾಡುವ ಮೂಲಕ ಬಾಲ್ಯ ವಿವಾಹವನ್ನು ನಿಷೇಧಿಸಲು ಕೋರಿಕೊಂಡಳು.ಬಾಲ್ಯ ವಿವಾಹವನ್ನು ನಿಷೇಧಿಸುವ ಮೂಲಕ ಹಿಂದೂ ಯುವತಿಯರಿಗೆ ಮಹದುಪಕಾರ ಮಾಡಿ ಎಂದು ಕೇಳಿಕೊಂಡಳು. 1888 ರಲ್ಲಿ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಯಿತು.2 ಸಾವಿರ ರೂ ಹಣವನ್ನು ದಾದಾಜಿಗೆ ನೀಡುವ ಮೂಲಕ ಮದುವೆಯನ್ನು ರದ್ದುಗೊಳಿಸುವ ಹಾಗೂ ರುಕ್ಮಾಭಾಯಿಯ ಮೇಲೆ ಹೊರಿಸಿರುವ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದವಾಗಿತ್ತದು. ಅಂತಿಮವಾಗಿ ಆಕೆ ಪಂಜರದಿಂದ ಹೊರ ಬಿಟ್ಟ ಪಕ್ಷಿಯಾದಳು.ಇಲ್ಲಿಗೆ ಆಕೆಯ ಕಥೆ ಮುಗಿಯಲಿಲ್ಲ. ಇಂಗ್ಲೆಂಡಿನ ಡಾಕ್ಟರ್ ಎಡಿತ್ ಪೆಚ್ಚಿ ಎಂಬ ತಜ್ಞ ವೈದ್ಯರ ಸಹಾಯ ಮತ್ತು ಸಹಕಾರದಿಂದ 1894 ರಲ್ಲಿ ಆಕೆ ವೈದ್ಯಕೀಯ ಪದವಿ ಪಡೆಯಲು ಇಂಗ್ಲೆಂಡಿಗೆ ತೆರಳಿದಳು. ಮಹಿಳೆಯರಿಗಾಗಿಯೇ ಇದ್ದ ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಆಕೆ ಓದಿ ವೈದ್ಯಕೀಯ ಪದವಿಯನ್ನು ಪಡೆದಳು. ಮುಂದೆ ಮರಳಿ ಭಾರತಕ್ಕೆ ಬಂದ ಆಕೆ ವೈದ್ಯಕೀಯ ಚಿಕಿತ್ಸಕಳಾಗಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯೆ ಎಂದು ರಾಷ್ಟ್ರದ ಇತಿಹಾಸದಲ್ಲಿ ದಾಖಲಾದಳು. ಮುಂದಿನ 35 ವರ್ಷಗಳ ಕಾಲ ರುಕ್ಮಭಾಯಿ ಸೂರತ್ ಮತ್ತು ರಾಜಕೋಟ್ಗಳಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಎಲ್ಲ ಜಾತಿ, ವರ್ಗಗಳ ಜನರ ಚಿಕಿತ್ಸೆಯನ್ನು ಕೈಗೊಂಡ ಆಕೆ ಸಾಕಷ್ಟು ಹೆಣ್ಣು ಮಕ್ಕಳಿಗೆ ನರ್ಸಿಂಗ್ ಕ್ಷೇತ್ರದಲ್ಲಿ ತರಬೇತಿ ನೀಡಿದಳು. ಮತ್ತೆ ನೂರಾರು ಹೆಣ್ಣು ಮಕ್ಕಳಿಗೆ ಶುಶ್ರೂಷೆ ಮತ್ತು ಸ್ವಚ್ಛತೆಯ ಕುರಿತು ತರಬೇತಿ ನೀಡಿ ಅವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದರು. ಮಾರಣಾಂತಿಕ ಕಾಯಿಲೆಗಳು ದೇಶದಲ್ಲಿ ತಾಂಡವವಾಡುತ್ತಿದ್ದಾಗಲೂ ಆಕೆ ಸಾವಿಗೆ ಅಂಜದೆ, ರೋಗಕ್ಕೆ ಹಿಂಜರಿದು ಧೈರ್ಯಗೆಡದೆ ತಾನೇ ಮುಂಚೂಣಿಯಲ್ಲಿ ನಿಂತು ರೋಗಿಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದಳು. ಹೋರಾಟ ಆಕೆಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ತನ್ನ ವೃತ್ತಿ ಜೀವನದಿಂದ ನಿವೃತ್ತಿಯಾದ ನಂತರವೂ ಕೂಡ ಆಕೆ ಪರ್ದಾ ಪದ್ಧತಿಯನ್ನು ವಿರೋಧಿಸಿ ಹೆಣ್ಣು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು. ಭಾರತೀಯ ಸಭ್ಯತೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಬಲವಂತದಿಂದ ಮನೆಯಲ್ಲಿ ಕೂಡಿ ಹಾಕುವುದನ್ನು ವಿರೋಧಿಸಿ ಆಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಶಾಲೆಯನ್ನು ತೆರೆಯಲು ತನ್ನ ಮನೆಯನ್ನೇ ಬಿಟ್ಟುಕೊಟ್ಟಳು. ಅಂದು ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ರುಕ್ಮಬಾಯಿ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದ ಪರಿಣಾಮವಾಗಿ ತಲೆ ತಲೆಮಾರುಗಳ ಹೆಣ್ಣು ಮಕ್ಕಳು ನೆಮ್ಮದಿಯ ಬಾಲ್ಯವನ್ನು ಕಳೆಯಲು ಸಾಧ್ಯವಾಗಿದೆ. 1888 ರ ರುಕುಮಾಬಾಯಿ ಮೊಕದ್ದಮೆಯ ಐತಿಹಾಸಿಕ ತೀರ್ಪಿನ ಮೂರು ವರ್ಷಗಳ ನಂತರ 1891ರಲ್ಲಿ ಬ್ರಿಟಿಷ್ ಸರ್ಕಾರವು ‘ ದ ಏಜ್ ಆಫ್ ಕನ್ಸೆಂಟ್ ಆಕ್ಟ್’ ಅನ್ನು ಜಾರಿ ಮಾಡಿತು. ನಿರ್ದಿಷ್ಟ ವಿಷಯಗಳ ಕುರಿತು ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ನೀಡಲಾಯಿತು. ವೈವಾಹಿಕ ವಯಸ್ಸಿನ ಮಿತಿಯನ್ನು ಹೆಚ್ಚಿಸಲಾಯಿತು. ರುಕ್ಮಾಭಾಯಿಯ ಮೊಕದ್ದಮೆಯು ಮೊಟ್ಟಮೊದಲ ಬಾಲ್ಯ ವಿವಾಹ ವಿರುದ್ಧದ ಪ್ರಕರಣ ಎಂದು ದಾಖಲಾಯಿತು, ಆದರೆ ಅದುವೇ ಕೊನೆಯ ಪ್ರಕರಣವಾಗಬೇಕಿತ್ತು… ದುರ್ದೈವವಶಾತ್ ಇಂದಿಗೂ ಕೂಡ ಬಾಲ್ಯ ವಿವಾಹ ತೆರೆ ಮರೆಯಲ್ಲಿ ನಡೆಯುತ್ತಲೇ ಇವೆ ಹಾಗೂ ಅದರ ಪರಿಣಾಮವಾಗಿ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ಅನಿರೀಕ್ಷಿತ ಗರ್ಭ ಧರಿಸುವಿಕೆ, ಹೆರಿಗೆಯಲ್ಲಿ ಸಾವು, ತಾನೇ ಒಂದು ಮಗುವಾಗಿ ತನ್ನಲ್ಲಿ ಆ ಸಾಮರ್ಥ್ಯ ಇಲ್ಲದೆ ಇದ್ದಾಗಲೂ ಕೂಡ ತನ್ನದೇ ಮಗುವನ್ನು ಹೆರುವ, ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ
“ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”ಹೇಮಂತ್ ಗೌಡ ಪಾಟೀಲ್ Read Post »
ಜ್ಯೋತಿ ಡಿ ಬೊಮ್ಮ ಅಂಕಣ “ಮನದ ಮಾತುಗಳು”
ಹೆಣ್ಣು ಹೆರಲೂಬೇಡ , ಸಿಟ್ಟಾಗಿ ಶಿವನಿಗೆ ಬೈಬೇಡ…
ನಮ್ಮ ದೇಶ ಸುಧಾರಕರು ಹೇಳತಾರ. , ನಾಲೈದು ಮಕ್ಕಳ ಹೆತ್ತು ನಮ್ಮ ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚು ಮಾಡ್ರಿ ಅಂತ. ನೀವು ಮಕ್ಳನ್ನ ಹೆರಿ ನಾವು ಅವರನ್ನು ಚಂದ ಸಲವತೀವಿ ಅಂತನೂ ಭರವಸೆ ಕೊಟ್ರ ಈಗ ಆಸ್ಪತ್ರೆ ದಾಗ ಮೂರನೇ ಮಗುನೂ ಹೆಣ್ಣಾಗಿದ್ದಕ್ಕ ಕತ್ತು ಹಿಸುಕಿ ಆ ತಾಯಿ ಮಗುವನ್ನು ಕೊಲ್ಲುತ್ತಿರಲಿಲ್ಲವೇನೊ..
ರುಕ್ಮಿಣಿ ನಾಯರ್ ಅವರ ಧಾರಾವಾಹಿಯ104 ನೆ ಕಂತು
ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
“ಓ ಆರ್ ಎಸ್ ಎಂಬ ಜೀವರಕ್ಷಕ.. ಒಂದು ಕಾನೂನು ಹೋರಾಟ” ವೀಣಾ ಹೇಮಂತ್ ಗೌಡ ಪಾಟೀಲ್
“ಓ ಆರ್ ಎಸ್ ಎಂಬ ಜೀವರಕ್ಷಕ.. ಒಂದು ಕಾನೂನು ಹೋರಾಟ” ವೀಣಾ ಹೇಮಂತ್ ಗೌಡ ಪಾಟೀಲ್
“ಓ ಆರ್ ಎಸ್ ಎಂಬ ಜೀವರಕ್ಷಕ.. ಒಂದು ಕಾನೂನು ಹೋರಾಟ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಸಾವಿಲ್ಲದ ಶರಣರು ಮಾಲಿಕೆ,ವ್ಯಾಕರಣದ ಶ್ರೀ ಬೇಗೂರು ಮಲ್ಲಪ್ಪ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ,ವ್ಯಾಕರಣದ ಶ್ರೀ ಬೇಗೂರು ಮಲ್ಲಪ್ಪ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಬಂದು ಮೈಸೂರು ಮಹಾರಾಜರ ಪ್ರೀತಿಗೆ ಪಾತ್ರರಾಗಿ
ಶ್ರೇಷ್ಠ ವ್ಯಾಕರಣ ತಜ್ಞರೆನಿಸಿಕೊಂಡ ಬೇಗೂರ ಮಲ್ಲಪ್ಪನವರು ಲಿಂಗಾಯತ ಧರ್ಮದ ಸಾವಿಲದ ಶರಣರು
ಸಾವಿಲ್ಲದ ಶರಣರು ಮಾಲಿಕೆ,ವ್ಯಾಕರಣದ ಶ್ರೀ ಬೇಗೂರು ಮಲ್ಲಪ್ಪ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಭಾರತದ ಮಹಿಳಾ ಮುಖ್ಯ ಮಂತ್ರಿಗಳು
ಭಾರತದ ಮಹಿಳಾ ಮುಖ್ಯ ಮಂತ್ರಿಗಳು
ಸುರೇಖಾ ರಾಠೋಡ್
ಜೆ. ಜಯಲಲಿತಾ
(೨೪/೦೨/೧೯೪೮ ರಿಂದ೦೫/೧೨/೨೦೧೬)*
ಅವಧಿ: ೧೪ ವರ್ಷ, ೧೨೪ ದಿನಗಳು
ಭಾರತದ ಮಹಿಳಾ ಮುಖ್ಯ ಮಂತ್ರಿಗಳು Read Post »
ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೧೯
ಮತ್ತಷ್ಟು ಸ್ವಾರಸ್ಯಕರ ಘಟನೆಗಳು
“ಸಹಕಾರ ಸಪ್ತಾಹ…ಒಂದು ವಿಶ್ಲೇಷಣೆ”ವಿಶೇಷಬರಹ, ವೀಣಾ ಹೇಮಂತಗೌಡ ಪಾಟೀಲ್
“ಸಹಕಾರ ಸಪ್ತಾಹ…ಒಂದು ವಿಶ್ಲೇಷಣೆ”ವಿಶೇಷಬರಹ, ವೀಣಾ ಹೇಮಂತಗೌಡ ಪಾಟೀಲ್
ಹಾಲು ಒಕ್ಕೂಟ, ಸಹಕಾರಿ ಶಿಕ್ಷಣ ಸಂಸ್ಥೆಗಳು ಮುಂತಾದ ಅತಿ ದೊಡ್ಡ ಸಂಸ್ಥೆಗಳು ಇಂದಿಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಕಾರಣ ಅವುಗಳ ಹಿಂದಿರುವ ಸಹಕಾರ ತತ್ವದ ನಿಖರ ಪರಿಪಾಲನೆ. ಸಹಕಾರದಲ್ಲಿ ಸಂಘಟನೆ ಮತ್ತು ಸಂಘಟನೆಯಲ್ಲಿ ಸಹಕಾರ ತತ್ವಗಳು ಮಿಳಿತಗೊಂಡಿವೆ.
“ಸಹಕಾರ ಸಪ್ತಾಹ…ಒಂದು ವಿಶ್ಲೇಷಣೆ”ವಿಶೇಷಬರಹ, ವೀಣಾ ಹೇಮಂತಗೌಡ ಪಾಟೀಲ್ Read Post »







