ಕಾವ್ಯ ಸಂಗಾತಿ
ವನಜ ಮಹಾಲಿಂಗಯ್ಯ
“ಉದುರಿದ ಹೂವಿನ ಕಥೆ”


ಮರಳಿನ ದೇಶ ರಾಜಸ್ಥಾನದಲ್ಲಿ
ಒಂದು ಚಿಕ್ಕ ಚಿಲುಮೆ ಹೂವು ಅರಳಿತ್ತು
ಹೆಸರು ಹೇಳುವ ಮೊದಲೇ
ಅಮಾನುಷತೆಯ ಕತ್ತಿ ಅದನ್ನು ಕತ್ತರಿಸಿತು
ಅವಳ ಕೈಯಲ್ಲಿ ಬಳೆ ಇರಬೇಕಿತ್ತು
ಕಾಲಲ್ಲಿ ಗೆಜ್ಜೆ ಸದ್ದು ಇರಬೇಕಿತ್ತು
ಬದಲಾಗಿ ಮೌನ ಮತ್ತು ಕಣ್ಣೀರು ಮಾತ್ರ ಉಳಿದವು
ಯಾರ ಮಗಳೋ, ಯಾರ ಅಕ್ಕನೋ
ಯಾರ ತಂಗಿಯೋ ಅವಳು
ಕನಸು ಕಾಣುವ ವಯಸ್ಸಲ್ಲಿ
ಕತ್ತಲೆಗೆ ತಳ್ಳಲಾಯಿತು
ಆಕಾಶವೂ ಇಂದು ಅಳುತ್ತಿದೆ
ಗಾಳಿಯೂ ನಾಚುತ್ತಿದೆ
ಏಕೆಂದರೆ ನಾವಿನ್ನೂ ಮನುಷ್ಯರಾಗಿಲ್ಲ
ಆ ಹೂವು ಉದುರಿದ್ದು ವ್ಯರ್ಥವಾಗಬಾರದು
ಪ್ರತಿಯೊಂದು ಮನೆಯಲ್ಲಿ ಹೆಣ್ಣು ಸುರಕ್ಷಿತವಾಗುವವರೆಗೆ
ನಮ್ಮ ಹೋರಾಟ ನಿಲ್ಲಬಾರದು
ನ್ಯಾಯ ಬೇಕು..
ಇನ್ನೊಂದು ಉದುರಿದ ಹೂವಿನ ಕಥೆ ಬೇಡ..
ವನಜ ಮಹಾಲಿಂಗಯ್ಯ



