ನೆನಪುಗಳೇ ಹೀಗೆ

ಈ ನೆನಪುಗಳೇ ಹೀಗೆ
ಒಮ್ಮೊಮ್ಮೆ ಬಿಡದೆ ಸುರಿಯುವ
ಜಡಿ ಮಳೆಯಂತೆ ಕಾಡುವವು

ಮತ್ತೊಮ್ಮೆ ಹಿತವೆನಿಸುವ ತುಂತುರು
ತಂಪಾಗಿ ಸೋನೆ ಮಳೆಯಂತೆ

ಮಗದೊಮ್ಮೆ ಬಿಸಿಲು ಮಳೆಯಿಂದ
ಮೂಡಿದ ಕಾಮನಬಿಲ್ಲಂತೆ

ನಕ್ಕ ದಿನಗಳ ನೆನೆದು ಅಳು
ಉಕ್ಕುವುದು

ಅತ್ತ ದಿನಗಳ ನೆನೆದು
ನಗೆ ಉಕ್ಕುವುದು

ಕಷ್ಟದ ದಿನಗಳ ನೆನೆದು ಕಣ್ಣೀರು
ಕೆನ್ನೆ ತೋಯಿಸುವುದು ಧಾರಾಕಾರವಾಗಿ

ಕಹಿನೆನಪ ನೆನೆ ಬಾಳಿಗೆ ಕಂದೀಲಾಗಲಿ
ಸವಿನೆನಪುಗಳು ಸ್ಪೂರ್ತಿಯಾಗಲಿ

ಈ ನೆನಪುಗಳು ಹೀಗೆಯೇ
ಮನವ ಹಿಂಡುವವು

ನೆನಪುಗಳೇ ಬದುಕಾಗಾದಿರಲಿ
ನೆನಪುಗಳೇ ಕಾಡದಿರಲಿ

ನೆನಫುಗಳಿರಲಿ ಬದುಕು ಖರ್ಚಾಗುವಷ್ಟು

ಕೋಮಲತೆ ಇರಲಿ
ಕಾಠಿಣ್ಯವೇ ಇರಲಿ

ಹಿಗ್ಗದೆ ಕುಗ್ಗದೆ ಸಮಚಿತ್ತದಿಂದ
ಸಾಗಿಸಿ ನೆನಪುಗಳೇ

ನೆನಪುಗಳೇ ನೀವೆಂದರೆ ಇಷ್ಟವೇ
ಕೈ ಹಿಡಿದು ನಡೆಸು ಭವಿಷ್ಯತ್ತಿನೆಡೆಗೆ.


2 thoughts on “ನೆನಪುಗಳೇ ಹೀಗೆ

Leave a Reply

Back To Top