ಪುಸ್ತಕ ಓದಿದರೆ ತೆರೆಯುವುದು ಜ್ಞಾನದ ಮಸ್ತಕ ನಾಗರತ್ನ. ಹೆಚ್ ಗಂಗಾವತಿ

ಪುಸ್ತಕ ಎನ್ನುವುದು ಮನುಷ್ಯನ ಬದುಕಿಗೆ ದಾರಿದೀಪವಿದ್ದಂತೆ ಪ್ರತಿಯೊಬ್ಬರಿಗೂ ಕೂಡ ಅಜ್ಞಾನವನ್ನು ತೊಡೆದು ಜ್ಞಾನ ನೀಡುವ ಸಾಧನ ಅಷ್ಟೇ ಅಲ್ಲದೆ ಸಂವಹನ ಕೌಶಲ್ಯ ಸೃಜನಶೀಲತೆ ಉತ್ತಮ ಜ್ಞಾನ ಸಂಪತ್ತು ನೀಡುವ ಅಮೂಲ್ಯವಾದ ಸಾಧನ.
ಹಾಗೂ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುವ ಜ್ಞಾನ ಸಂಜೀವಿನಿ ಇದ್ದಂತೆ. ಪ್ರತಿಯೊಬ್ಬ ಓದುಗರ ಅಭಿರುಚಿ ಭಿನ್ನವಾಗಿರಬಹುದು ಆದರೆ ಆ ಓದು ಆತನ ಜ್ಞಾನದ ಹದವನ್ನ ಉತ್ತಮಗೊಳಿಸುತ್ತದೆ ಪುಸ್ತಕ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚಿಸುವುದ ಜೊತೆಯಲ್ಲಿ ಮನೋವಿಕಾಸಕ್ಕೆ ನೆರವಾಗುತ್ತದೆ.
ಒಂದೊಂದು ಪುಸ್ತಕವು ತನ್ನದೇ ಆದ ವೈವಿಧ್ಯಮಯ ಕಥ ಹಂದರವನ್ನು ಒಳಗೊಂಡಿದ್ದು ಬೇರೆ ಬೇರೆ ಪ್ರಪಂಚದ ಅರಿವು ಮೂಡಿಸುತ್ತದೆ ಒಟ್ಟಿನಲ್ಲಿ ಪುಸ್ತಕಗಳು ಕೇವಲ ಜ್ಞಾನದ ಶಿಖರವಾಗಿರದೆ ಒಂದು ಪ್ರದೇಶದ ಭಾಷೆ ಸಂಸ್ಕೃತಿ ಇವುಗಳನ್ನೆಲ್ಲ ಬೆಸೆಯುವ ಕೊಂಡಿಯಾಗಿರುತ್ತದೆ.
 ಇಂಟರ್ನೆಟ್ ಯುಗದಲ್ಲಿ ಓದುಗರು ಕಡಿಮೆಯಾಗಿದ್ದರೂ  ಪುಸ್ತಕ ಓದುವುದರಿಂದಲೆ ಅದರ ಜ್ಞಾನವನ್ನು ಪಡೆಯುವುದು ಸಾಧ್ಯ
ಪುಸ್ತಕಗಳನ್ನು ಏಕೆ ಓದಬೇಕು ಎಂದು ಪ್ರಶ್ನಿಸಿದರೆ ಹಲವರ ಉತ್ತರ ವಿಭಿನ್ನವಾಗಿರಬಹುದು, ಪುಸ್ತಕಗಳನ್ನು ಓದುವುದರಿಂದ ಕೆಲವರ ಹವ್ಯಾಸವಾದರೆ ಮತ್ತೆ ಕೆಲವರಿಗೆ ಜ್ಞಾನ ವೃದ್ಧಿಯಾಗುವ ಸಾಧನ ಎಂದು ಹೇಳುತ್ತಾರೆ.

ಲೇಖಕರಿಗೆ ,ಪ್ರಕಾಶಕ, ಮಾರಾಟಗಾರರಿಗೆ ಓದುಗರೆ  ಸರ್ವಸ್ವ ಪುಸ್ತಕಗಳನ್ನು ಕೊಂಡು ಓದಿದಾಗ  ಇವರೆಲ್ಲರ ಜೀವನ ಬಂಡಿಸಾಗಲು ಸಾಧ್ಯ.
ಪುಸ್ತಕದಲ್ಲಿನ ವಿಷಯಗಳ ಕುರಿತಂತೆ ಹೊಸ ಹೊಸ ವಿಷಯ ವಿನಮಯವಾದಾಗ ಮುಂದಿನ ದಿನಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಲು ಸಾಧ್ಯ ಹಾಗಾಗಿ ಹೊಸ ಹೊಸ ಬರಹಗಾರರಿಗೆ ಪ್ರೇರಣೆ ನೀಡುವುದು ಅತ್ಯಮೂಲ್ಯವಾದ ಸಂಗತಿ ಮತ್ತು ಪುಸ್ತಕದ ಮೂಲಕ ಮೌಲ್ಯಯುತ ವಿಷಯಗಳನ್ನು ಓದುಗರಿಗೆ ೂ ಣಬಡಿಸುವ ಕೆಲಸವಾಗಬೇಕಿದೆ ಎಷ್ಟು ಓದುತ್ತೇವೆ ಅಷ್ಟು ಜ್ಞಾನ ಸಂಪತ್ತು ಹೆಚ್ಚುತ್ತದೆ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಂಡರೆ ಕಾಲಕ್ರಮೇಣ ಇದು ಬದುಕಿನ ಭಾಗವಾಗಿ ಮಾರ್ಪಾಡಾಗುತ್ತದೆ ಅಷ್ಟೇ ಅಲ್ಲದೆ ಪುಸ್ತಕದ ಜ್ಞಾನ ಇದ್ದರೆ ನಾವೆಂದೂ ಒಂಟಿಯಾಗುವುದಿಲ್ಲ.

ಪುಸ್ತಕಗಳನ್ನ ಓದುವುದು ಅಷ್ಟೇ ಅಲ್ಲದೆ ಅವುಗಳ ಸಂರಕ್ಷಣೆ ಮಾಡುವುದು ಕೂಡ ಅತ್ಯಂತ ಮುಖ್ಯವಾದ ಕಾರ್ಯವಾಗಿದೆ .ಹಾಗೂ ಪುಸ್ತಕ ಮಾನವನ ನೈತಿಕ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಮನಕುಲದ ಬೆಳವಣಿಗೆಯಲ್ಲಿ ಪುಸ್ತಕಗಳು ದಾರಿದೀಪವಿದ್ದಂತೆ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದಿನನಿತ್ಯದ ಜೀವನದಲ್ಲಿ ಪ್ರತಿಯೊಂದು ಅಂಶಗಳಲ್ಲಿ ಕಾಣಬಹುದು ಮನುಷ್ಯನ ಒತ್ತಡದಿಂದ ನಿವಾರಿಸುವ ಸಾಧನ ವಿದ್ದಂತೆ ಹಾಗೂ ಪುಸ್ತಕಗಳು ಕಲ್ಪನಾ.
 ಶಕ್ತಿಯನ್ನು ಹೆಚ್ಚಿಸುತ್ತದೆ.

ಜೀವನದ ಅತಿ ಕಠೋರ ಸತ್ಯಗಳಿಂದ ದೂರವಿರಲು ಪುಸ್ತಕಗಳು ನಮಗೆ ನೆರವಾಗುತ್ತವೆ. ಹಾಗೂ ಪ್ರತಿ ಮಗುವಿಗೆ ಬಾಲ್ಯದ ನಿಜವಾದ ಸಂಪತ್ತು ಎಂದರೆ ಪುಸ್ತಕ ನಮ್ಮ ಬಾಲದಲ್ಲಿ ಪುಸ್ತಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಅಷ್ಟೇ ಅಲ್ಲದೆ ಪುಸ್ತಕಗಳು ಧಾರ್ಮಿಕ ನಂಬಿಕೆಗಳು ಸಂಪ್ರದಾಯಗಳು ಆಲೋಚನೆಗಳು ಮತ್ತು ಆಧ್ಯಾತ್ಮಿಕತೆಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತವೆ ಮತ್ತು ಅದ್ಭುತ ಪಾತ್ರಗಳಿಂದ ತುಂಬಿದ ವಿಭಿನ್ನ ಜಗತ್ತನ್ನು ನಮಗೆ ಪರಿಚಯಿಸುತ್ತವೆ ಅಷ್ಟೇ ಅಲ್ಲದೆ ಸಾಮಾಜಿಕ ಸನ್ನಿವೇಶಗಳಿಗೆ ಜನರ ಗುಂಪುಗಳೊಂದಿಗೆ ಸಂಭಾಷಣೆ ನಡೆಸಲು ಅವಕಾಶ ಹಾಗಾಗಿ ಪುಸ್ತಕಗಳು ಉತ್ತಮವಾದ ದಾರಿದೀಪಗಳಾಗಿವೆ ಮತ್ತು  ಶಬ್ದಕೋಶ ಹೆಚ್ಚುತ್ತದೆ. ಪುಸ್ತಕಗಳು ಕೇವಲ ಜ್ಞಾನಕ್ಕೆ ಸೀಮಿತವಾಗಿರದೆ ಪುಸ್ತಕದ ವ್ಯಕ್ತಿತ್ವ ಬದಲಾವಣೆಯನ್ನು ತರವಲ್ಲಿ ಯಶಸ್ವಿಯಾಗಿವೆ. ಹಾಗಾಗಿ ಪ್ರತಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ಆಚರಣೆ ಮಾಡುತ್ತಾರೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಾಗರಿಕರು ಕೂಡ ಪುಸ್ತಕವನ್ನು ಓದುವ ಅಭಿಯಾನವನ್ನು ಕೈಗೊಂಡು ಹೆಚ್ಚು ಜ್ಞಾನವನ್ನು ಬೆಳೆಸಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ  ಉತ್ತಮ. ಜ್ಞಾನ ಎಂಬುದು ಯಾರು ಕರೆಯಲಾರದ ಸಂಪತ್ತು ಇದ್ದಂತೆ ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಗಳು ಸಹ ತಮ್ಮ ಜೀವನದಲ್ಲಿ ಓದುವಿಕೆಯನ್ನು ಒಂದು ಭಾಗವಾಗಿ ರೂಡಿಸಿಕೊಂಡರೆ ಶಿಸ್ತುಬದ್ಧ ಜೀವನ ತಮ್ಮದಾಗುತ್ತದೆ ಹಾಗೂ ಹಲವರಿಗೆ ಮಾರ್ಗದರ್ಶಕರಾಗಲು ಪ್ರೇರೇಪಿಸಿದಂತಾಗುತ್ತ
ದೆ. ಇನ್ನು ಓದುವಿಕೆಯ ಹವ್ಯಾಸವನ್ನು ಬಲಪಡಿಸುವ ಅಂಶಗಳೆಂದರೆ ನಮ್ಮ ಬಾಲ್ಯದ ದಿನಗಳಲ್ಲಿ ಶಾಲೆಯಲ್ಲಿ ಪುಸ್ತಕಗಳ ಪರಿಚಯವನ್ನು ಪ್ರಾರ್ಥನಾ ಅವಧಿಯಲ್ಲಿ ಮಾಡುವುದರಿಂದ ಪುಸ್ತಕದ ಪರಿಚಯ ಮತ್ತು ಲೇಖಕರ ಪರಿಚಯ ಸಾಧ್ಯವಾಗುತ್ತಿತ್ತು ಹಾಗೂ ಕಥೆಯ ಶೀರ್ಷಿಕೆ ಕೇಳಿದ ನಂತರ ಮಕ್ಕಳು ಕೂಡ ತಾವು ಓದಬೇಕು ಎಂಬ ಹಂಬಲ ಮಕ್ಕಳಲ್ಲಿ ಸಹ ಬರುತ್ತಿತ್ತು ಹಾಗೂ ಇದರಿಂದ ಹೆಚ್ಚು ಹೆಚ್ಚು ಓದುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಮತ್ತು ಕಥೆಗಳು ಕೂಡ ಮಕ್ಕಳನ್ನು ಹೆಚ್ಚು ಹೆಚ್ಚು ಓದಲು ಸಹಕಾರಿಯಾಗುತ್ತಿದ್ದವು ಹಾಗಾಗಿ ಪ್ರತಿಯೊಬ್ಬರೂ ಕೂಡ ಪುಸ್ತಕಗಳನ್ನ ಓದುವುದರಿಂದ ಭವಿಷ್ಯದ ಬದುಕು ಬದಲಾದೀತು ಮತ್ತು ಪುಸ್ತಕಗಳನ್ನ ಹೆಚ್ಚು ಓದಿಸುವ ಪ್ರೇರೇಪಿಸುವ ಮಾರ್ಗವೆಂದರೆ ಕವಿಗಳ ಪರಿಚಯ ಪುಸ್ತಕ ವಿಮರ್ಶೆ ಇಂತಹ ಕಾರ್ಯಗಳಲ್ಲಿ ಹೆಚ್ಚು ತೊಡಗಿದರೆ ಅಕ್ಷರ ಜ್ಞಾನವನ್ನು ಸಂಪಾದಿಸುವ ಮಾರ್ಗ ವಾಗಿದೆ ಎನ್ನಬಹುದು ಅದಕ್ಕಾಗಿ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದುವ ಹವ್ಯಾಸವನ್ನು ರೂಡಿಸಿಕೊಂಡರೆ ಭವಿಷ್ಯ ಬದಲಾಗುವುದು ಖಚಿತ


Leave a Reply

Back To Top