ಬಕಾಡೆ ಪಂಪಾಪತಿ ಅವರ ಕವಿತೆ-ನಾವು ಗಂಡಸರೇ ಹೀಗೆ…

: ಹೌದು ಕಣೇ…
ನಾವು ಗಂಡಸರೇ ಹೀಗೆ
ನೋಟದಲ್ಲಿ ಕೆಟ್ಟವರು
ಮಾತಿನಲ್ಲಿ ಮರುಳರು
ನಡೆತೆಯಲ್ಲಿ  ನೀಚರು
ಪ್ರೇಮದಲ್ಲಿ ಹುಚ್ಚರು

ಹೌದು ಕಣೇ…
ನಾವು ಗಂಡಸರೇ ಹೀಗೆ
ಸಲುಗೆಯಿಂದ ಇದ್ದರೆ
ಸಂದೇಹ ಪಡುವರು
ಮೌನಿಯಾಗಿದ್ದರೆ
ಗುಮ್ಮನೆನ್ನುವರು

ಹೌದು ಕಣೇ…
ನಾವು ಗಂಡಸರೇ ಹೀಗೆ
ಪ್ರೇಯಸಿಗೆ ಕಾಮಧೇನು
ಹೆಂಡತಿಗೆ ಕಲ್ಪವೃಕ್ಷ
ಮಗಳಿಗೆ ಹರಿವ ತೊರೆ
ಮಗನಿಗೆ ಸಂಪತ್ತಿನ ಖಜಾನೆ

ಹೌದು ಕಣೇ…
ನಾವು ಗಂಡಸರೇ ಹೀಗೆ
ತುತ್ತಾ ಮುತ್ತಾಗಳ ಮಧ್ಯೆ
ತೊತ್ತಾಗಿ ಹೊತ್ತು ಕಳೆದವರು
ಅಕ್ಕ ತಂಗಿಯರಿಗೆ ಬೆನ್ನಾಗಿ ನಿಂತವರು
ಬಂಧುಗಳಿಗೆ ಬೆಳಕಾಗಿ ಬಾಳುವವರು

ಹೌದು ಕಣೇ …
ನಾವು ಗಂಡಸರೇ ಹೀಗೆ
ಸಾಯುವಂತೆ ಪ್ರೀತಿಸುವವರು
ಪ್ರೀತಿಗಾಗಿ ಸಾಯುವವರು
ಎದೆಯಲ್ಲಿ ನೋವ ಅಡಗಿಸಿದವರು
ಮುಖದಲ್ಲಿ ನಗುವ ಮೆರೆಸಿದವರು

ಹೌದು ಕಣೇ …
ನಾವು ಗಂಡಸರೇ ಹೀಗೆ
ಬೊಗಸೆ  ಭೋಗಕೆ
ಬೆವರ ಸುರಿಸಿದವರು
ಬದುಕಿನ ದೋಣಿಗೆ
ನಡೆಸುವ ಹುಟ್ಟಾದವರು.

ಹೌದು ಕಣೇ …
ನಾವು ಗಂಡಸರೇ ಹೀಗೆ
ಬೆಳೆವ ಬಳ್ಳಿಗಳಿಗೆ
ಆಸರೆ ಮರಗಳು ನಾವು
ಮಧುವ ಸಂಗ್ರಹಿಸುವ
ಜೇನ ಹುಳಗಳು ನಾವು

ಹೌದು ಕಣೇ …
ನಾವು ಗಂಡಸರೇ ಹೀಗೆ
ಗಂಡಸೆಂಬ ಪ್ರತಿಷ್ಟೆಗೆ
ಅಳುವ ಹಕ್ಕು ಬಿಟ್ಟವರು
ನಗುವ ಸ್ವಾತಂತ್ರ್ಯ ಇಲ್ಲದವರು
ಕತ್ತೆಯಂತೆ ದುಡಿದು ಸತ್ತವರು.

————-

7 thoughts on “ಬಕಾಡೆ ಪಂಪಾಪತಿ ಅವರ ಕವಿತೆ-ನಾವು ಗಂಡಸರೇ ಹೀಗೆ…

  1. ಅಭಿನಂದನೆಗಳು ಗುರುಗಳೆ. ತಮ್ಮ ಕವಿತೆಯು ಅದ್ಬುತವಾಗಿದೆ

  2. ಅಭಿನಂದನೆಗಳು. ನಿಮ್ಮ ಕವಿತೆ ಅದ್ಭುತವಾಗಿ ಮೂಡಿಬಂದಿದೆ

  3. ಅದ್ಭುತವಾದ ಕವಿತೆ ಗೆಳೆಯ ನಿಮ್ಮ ಸಾಹಿತ್ಯದ ಪಯಣ ಹೀಗೆ ಸಾಗಲಿ ಕಂಗ್ರಾಜುಲೇಷನ್ ವನ್ಸ್ ಅಗೈನ್ ಗೆಳೆಯ

Leave a Reply

Back To Top