ಕಾವ್ಯ ಸಂಗಾತಿ
ಚಿನ್ನಸ್ವಾಮಿ ಎಸ್
ಜನನದಿಂದ ಮರಣದವರೆಗು

ಧರೆಗೆ ಬರುವಾಗ ಜೀವ ಹೊತ್ತು
ದರೆಬಿಟ್ಟು ಹೋಗುವಾಗ ಜೀವ ತೆತ್ತು
ಹುಟ್ಟುವಾಗ ಕರುಳುಬಳ್ಳಿಯ ಮಾಲೆ ಹೊತ್ತು
ಧರೆಬಿಟ್ಟು ಹೋಗುವಾಗ ಹೂ ಮಾಲೆಯ ಹೊತ್ತು
ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ
ಹುಟ್ಟುವಾಗ ತಾಯಿ ಮತ್ತು ಮಗುವಿನ ಅಳಲು
ಹೋಗುವಾಗ ಬಂಧು ಬಳಗದವರ ತೊಳಲು
ಇದ್ದಾಗ ಹಾರಾಟ ಕೂಗಾಟ
ಹೋಗುವಾಗ ಮೌನದಾಟ
ಇಳೆಗೆ ಬಂದರೆ ಜನನ
ಇಳೆಯೋಳೋದರೆ ಮರಣ
ಹುಟ್ಟಿದಾಗ ಮಗುವಿಗೆ ತಾಯಿ ಆಸರೆ
ಮುಪ್ಪಾದಾಗ ಮಕ್ಕಳಿಗೆ ತಾಯಿಯೇ ಬೇಸರ
ತಾಯಿ ಮಕ್ಕಳ ಹಠವನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲುವಳು
ಆದರೆ ಮಕ್ಕಳು ತಾಯಿಯ ಪ್ರೀತಿಯನ್ನು ಗದರಿಸುವಿಕೆಯಿಂದ ಸೋಲಿಸುವರು
ತನ್ನ ಉಸಿರಿಗಿಂತ ಮಕ್ಕಳ ಉಸಿರಿಗೆ ಬೆಲೆ ಬೆತ್ತವಳು
ಆದರೆ ಮಕ್ಕಳು ತಾಯಿಯ ಉಸಿರಿಗೆ ನೆಲೆ ನೀಡದವರು
ಮಕ್ಕಳ ಕನಸಿಗಾಗಿ ತನ್ನ ಕನಸ ಮಾರಾಟಕ್ಕಿಟ್ಟವಳು
ನಮ್ಮ ಕನಸಿಗಾಗಿ ತಾಯಿ ಕನಸನ್ನ ಬಂಧಿಸಿದವರು.
ನಮ್ಮ ಬದುಕಿಗಾಗಿ ನೊಂ ದು ಬೆಂದು ಸುಟ್ಟು ಕರುಕಲಾದವಳು
ನೊಂದು ಬೆಂದ ಕರಕಲಾದವಳ ಗುರುತಿಸದಾದವೋ
———
ಚಿನ್ನಸ್ವಾಮಿ ಎಸ್

Superb
ತುಂಬಾ ಅರ್ಥ ಗರ್ಬಿತವಾಗಿ ವಾಸ್ತವ ವಿಷಯಗಳನ್ನು ಕವನದ ಮೂಲಕ ತಿಳಿಸಿರುವ ಶ್ರೀ ಚಿನ್ನಸ್ವಾಮಿ ರವರಿಗೆ ವಂದನೆಗಳು
ತುಂಬಾ ಸೊಗಸಾಗಿದೆ ನಿಮ್ಮ ಈ ಕವಿತೆ
ಸಾಗಲಿ ನಿಮ್ಮ ಪ್ರಯತ್ನ ನಿರಂತತೆ…
ಬಹಳ ಅರ್ಥಗರ್ಭಿತ ಸಾಲುಗಳು.
ತುಂಬಾ ಚೆನ್ನಾಗಿದೆ
ಸರ್
fine sir
ಸೊಗಸಾಗಿದೆ ಕವಿತೆ
From
Umesh
Super sir
ಅರ್ಥಗರ್ಭಿತ ಸಾಲುಗಳು. ಕವಿತೆ ತುಂಬಾ ಚೆನ್ನಾಗಿದೆ ಸರ್
ಪ್ರತ್ಸುತ ಸನ್ನಿವೇಶ ತೆರೆದಿದ್ದೀರ ಸರ್
ತುಂಬಾ ಚೆನ್ನಾಗಿ ಮೂಡಿಬರುತ್ತಿರುವ ನಿಮ್ಮ ಕವನಗಳನ್ನು ಇನ್ನಷ್ಟು ಸುಂದರವಾಗಿಸಿ, ಅಭಿನಂದನೆಗಳು