ಕಾವ್ಯ ಸಂಗಾತಿ
ಸವಿತಾ ದೇಶಮುಖ
ಬಿದಿಗೆ ಚಂದ್ರ


ಯುಗಾದಿಯ ಬಿದಿಗೆ ಚಂದ್ರನ
ಆಗಮನ ತುಂಬಿ ಬಂದಿತು ನಯನ
ಶಶಿಯ ಸೌಮ್ಯಮೊಗದ ದರ್ಶನ್ …
ಪವಿತ್ರ -ಅಲ್ಲಾದಕರ ಮನವು…..
ದೂರದಲಿ ನಿಂತು ನಗು ನಗುತಿರುವ
ಶಿಶುಯ ಸುಂದರ ತಂಪು ಸೌಮ್ಯ
ಪ್ರೀತಿ ಪ್ರೇಮಿಗಳ ಪ್ರಣಯ ದ್ಯೋತಕ
ಚಂದ್ರಮಹಾತ್ಮ-ಪೂಜಿಪರು….
ವರ್ಣಿಪರು ಹೂವು ಹೃದಯದವನು
ಬಿದಿಗ ಚಂದಿರ- ಚೆಲುವಿನ ಚಿತ್ತಾರಾ
ಎದೆಯೋಳಿದು ದಿಟ ಉಲ್ಲಾಸಕರ
ಬಿದಿಗೆ ಚಂದ್ರನ ಕಂಡರೆ ಶುಭನಂಬುಗೆ …
ಅದುವೇ ಚೌತಿಯ ದಿನವೂ
ನಿನ್ನ ಕಂಡರೆ ಇಲ್ಲದ ಅಪವಾದವು
ಸಹಿಸಬೇಕು ಮನುಜ ಜನಾಂಗವು
ಇದೆಂತ ಆಟ ವಿಚಿತ್ರ ಗ್ರಹಿಕೆಗಳು…
ಯುಗಯುಗಗಳು ಕಳೆದರೂ
ಮೂಢನಂಬಿಕೆಗಳು ಅಚ್ಚ
ಅಳಿಯದ ಕಾಠಿಣ್ಯ ಸ್ತರಗಳು
ಎದೆಯ ಗಾಢ ನಂಬಿಕೆಗಳು…..
ಅಚ್ಚಕ್ಕಿದವು ದೃಷ್ಟಿಯಂತೆ ಅವರವರ ನೋಟ ಗ್ರಹಿಕೆಯು ….
ಸವಿತಾ ದೇಶಮುಖ
ವರ್ಷಾರಂಭದ ಯುಗಾದಿ ಕಾಣಿಸುವ ಜೊತೆಗೆ ವಾಸ್ತವದ ಹಾದಿಯಲ್ಲಿ ಮೌಢ್ಯ, ಪ್ರಕೃತಿಯ ಚೆಲುವನ್ನು ಕವಿತೆ ಹೇಳುತ್ತದೆ.
Thank you
Very nice
Beautiful poem
ಉತ್ತಮ ಆಶಯ