ಮಹಿಳಾ ದಿನಾಚರಣೆ ಏಕೆ ಮತ್ತು ಹೇಗೆ.

ಮಾರ್ಚ್ ೮ ವಿಶ್ವ ಮಹಿಳಾ ದಿನಾಚರಣೆ.
ಇಪ್ಪತ್ತನೆಯ ಶತಮಾನದ ಆದಿಯಲ್ಲಿ, ಮಹಿಳೆಯರು ಹಕ್ಕು ಮತ್ತು ಸಂರಕ್ಷಣೆ ಕುರಿತಾಗಿ ಮಹಿಳಾ ಕಾರ್ಮಿಕರು ನ್ಯೂಯಾರ್ಕ್ ನಗರದಲ್ಲಿ ಪ್ರತಿಭಟನೆ ನಡೆಸಿದರು. ಅದರ ಪ್ರಭಾವದಿಂದ ಮಹಿಳಾ ದಿನಾಚರಣೆ ಜಾರಿಗೆ ಬಂದಿತು.
ಇಪ್ಪತ್ತನೇಯ ಶತಮಾನದ ಆದಿಯಲ್ಲಿ
ಮಹಿಳಾ ದಿನಾಚರಣೆಯ ಒಂದು ಭಾವಾಂಕುರ ಆಗಿದ್ದು ಇಪತ್ತನೇಯ ಶತಮಾನದ ಆದಿಯಲ್ಲಿ, ಆಗ ಕೈಗಾರಿಕಾ ಕ್ರಾಂತಿ ಭರದಿಂದ ಸಾಗಿತ್ತು. ಆದರೆ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು.
ಅದರ ವಿರುದ್ಧ ಕಾರ್ಮಿಕ ಮಹಿಳೆಯರು ಧ್ವನಿ ಎತ್ತಿದರು.
೧೯೦೮ ರಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ೧೫೦೦೦ ಕಾರ್ಮಿಕ ಮಹಿಳೆಯರು ನ್ಯೂಯಾರ್ಕ್ ನಗರ ತುಂಬಾ ಒಂದು ಜಾಥಾ ಅಥವಾ ಮೆರವಣಿಗೆ ಹೋರಾಟ ನಡೆಸಿದರು. ಅವರು ಕೆಲವು ಬೇಡಿಕೆಗಳನ್ನು ಇಟ್ಟರು.
೧ ಸುಧಾರಿತ ಕೆಲಸ ಮಾಡುವ ಸ್ಥಳ.
ಕೆಲಸ ಮಾಡುವ ಸ್ಥಳ ಅನಕೂಲಕರವಾಗಿದ್ದು ತಕ್ಕ ಮಟ್ಟಿಗೆ ಗಾಳಿ ಬೆಳಕು ಇರಬೇಕು, ಮತ್ತು ಮಹಿಳೆಯರ ಶೌಚಾಲಯ ವ್ಯವಸ್ಥೆ ಹೊಂದಿರಬೇಕು.
೨ ನ್ಯಾಯಬೆಲೆಯ ಸಂಬಳ ಅಥವಾ ಕೂಲಿ.
ಹೆಣ್ಣು ಮಕ್ಕಳಿಗೆ ಸಂಬಳ ನ್ಯಾಯವಾಗಿ ಕೊಡಬೇಕು. ಪುರಷರಿಗೆ ಹೋಲಿಸಿದರೆ ಆವಾಗ ಅದು ತುಂಬಾ ಕಡಿಮೆ ಇತ್ತು.
೩ ಮತ ಚಲಾಯಿಸುವ ಅಧಿಕಾರ
ಹೆಣ್ಣು ಮಕ್ಕಳಿಗೆ ಮತ ಚಲಾಯಿಸಲು ಅಧಿಕಾರ ನೀಡಬೇಕು.
ಈ ಬೇಡಿಕೆ ಅವರದಾಗಿತ್ತು.
೧೯೦೯ರಲ್ಲಿ ಮೊದಲ ಮಹಿಳಾ ದಿನಾಚರಣೆ
ಈ ಬೃಹತ ಮಹಿಳಾ ಕಾರ್ಮಿಕರ ಮೋರ್ಚಾ ನೋಡಿ ಅವರ ಬೇಡಿಕೆಯನ್ನು ಪರಿಗಣಿಸಿ, ಅಮೆರಿಕದ ಸಾಮಾಜಿಕ ಪಕ್ಷ ಮೊದಲ ಮಹಿಳಾ ದಿನಾಚರಣೆ ಘೋಷಿಸಿತು ಫೆಬ್ರವರಿ ೨೮ ರಂದು ಘೋಷಿಸಿತು. ಇದರ ಮೂಲಕ ಕಾರ್ಮಿಕ ಮಹಿಳೆಯರ ಕೆಲಸ ಮಾಡುವ ಸ್ಥಿತಿಗತಿಗಳನ್ನು ಸುಧಾರಿಸುವ ಉದ್ದೇಶವಾಗಿತ್ತು.
೧೯೧೦ ರಲ್ಲಿ : ಅಂತರಾಷ್ಟ್ರೀಯ ಸಮಾಜವಾದಿ ಮಹಿಳೆಯರ ಸಂಘಟನೆ.
ಕೊಪೆನಹಗೆನ್ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಬಂದ ಮಹಿಳಾ ಪ್ರತಿನಿಧಿಗಳು ಅಂಗೀಕರಿಸಿದರು. ಇದು ಫಿನ್ನಿಷ್ ಪಾರ್ಲಿಮೆಂಟ್ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು. ಕ್ಲಾರಾ ಝೆಟಕಿನ್ ಎಂಬ ರಷ್ಯಿಯನ್ ಮಹಿಳೆ ಮಹಿಳಾ ದಿನಾಚರಣೆ ಬಗ್ಗೆ ಪ್ರಸ್ತಾಪ ಇಟ್ಟರು. ಅದು ಎಲ್ಲರಿಗೂ ಒಪ್ಪಿಗೆ ಆಯಿತು.
ಮಹಿಳಾ ದಿನಾಚರಣೆ ಅಂತರಾಷ್ಟ್ರೀಯ ಮಟ್ಟದಲ್ಲಿ.
೧೯೧೧ ರಲ್ಲಿ ಈ ಚಳುವಳಿ ತೀವ್ರ ಸ್ವರೂಪ ಪಡೆದು ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನ್ ಮತ್ತು ಸ್ವಿಟ್ಜರ್ಲೆಂಡ್ ಗಳಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಜನಭಾಗಿ ಆಗಿ ಈ ಮಹಿಳಾಪರ ಚಳುವಳಿಯನ್ನು ಬೆಂಬಲಿಸಿ ಭಾಗಿ ಆದರು.
೧೯೧୭ ರಷ್ಯಾದ ಕ್ರಾಂತಿ.
ಮೊದಲನೇ ಮಹಾಯುದ್ಧದಿಂದ ಆಹಾರದ ಕೊರತೆ ಮತ್ತು ಮತ್ತು ಹೆಣ್ಣು ಮಕ್ಕಳ ಶೋಚನೀಯ ಬದುಕುವ ಸ್ಥಿತಿಗೆ ಬೇಸತ್ತು ರಷ್ಯಾದ ಮಹಿಳೆಯರು ಇದರ ವಿರುದ್ಧ ಮಾರ್ಚ ೮ ರಂದು ಪೀಟರ್ಸ್ ಬರ್ಗ್ ನಲ್ಲಿ ಒಂದು ಮೋರ್ಚಾ ಮಾಡಿದರು. ಇದು ರಷ್ಯನ ಕ್ರಾಂತಿಗೂ ನಾಂದಿ ಆಯಿತು.
೧೯୭೫ ಸಂಯುಕ್ತ ರಾಷ್ಟ್ರಗಳ ಒಕ್ಕೂಟಗಳ ಸಹಮತಿ.
ಸಂಯುಕ್ತ ರಾಷ್ಟ್ರಗಳ ಒಕ್ಕೂಟದ ಒಪ್ಪಂದ ದ ಪ್ರಕಾರ ಮಾರ್ಚ ୭ ಮಹಿಳಾ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು.
೧೯୭୭ ರಲ್ಲಿ ಸಂಯುಕ್ತ ರಾಷ್ಟ್ರಗಳ ವಾರ್ಷಿಕ ಸಭೆಯಲ್ಲಿ ಮಹಿಳಾ ದಿನಾಚರಣೆ ಮಹಿಳೆಯರ ಹಿತ ಸಂರಕ್ಷಣೆ ಮತ್ತು ಅವರ ಹಕ್ಕು ಗಳನ್ನು ಕಾಪಾಡಲು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮಹಿಳೆಯರಿಗಾಗಿ ಕೆಲವು ಮೂಲಭೂತ ಹಕ್ಕು ಮತ್ತು ಸೌಕರ್ಯ ಸ್ಥಾಪಿಸುವ ಉದ್ದೇಶ ಹೊಂದಿತ್ತು.
೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತಾರಾಷ್ಟ್ರೀಯ “ಲಿಂಗ ಸಮಾನತಾ ತತ್ವ” ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪಿ ಒಪ್ಪಂದ ನೀತಿ, ನಿರ್ದಿಷ್ಟಯುತ, ಮಹಿಳಾಭಿವೃದ್ಧಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲ ವರ್ಷಗಳ ನಂತರ ಸಂಯುಕ್ತ ರಾಷ್ಟ್ರಗಳು ಮತ್ತು ಅದರ ತಾಂತ್ರಿಕ ಸಂಘಟನೆಗಳು ಮಾನವ ಹಕ್ಕುಗಳನ್ನ ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಬಲಗೊಳಿಸುವ ಸಂಯುಕ್ತ ರಾಷ್ಟ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.
ಮಹಿಳಾ ದಿನಾಚರಣೆಯ ಮೂಲ ಉದ್ದೇಶ.
* ಮಹಿಳೆಯರ ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುವುದು.
* ಮಹಿಳೆಯರಿಗೆ ಮತ ಚಲಾಯಿಸುವ ಅಧಿಕಾರ.
* ಮಹಿಳೆಯರ ಶಿಕ್ಷಣದ ಹಕ್ಕು ಮಾನ್ಯೀಕರಿಸುವುದು.
* ಮಹಿಳಾ ಮತ್ತು ಮಕ್ಕಳ ಸುರಕ್ಷತೆ
* ಮನೆಯಲ್ಲಿ ನಡೆಯುವ ಮಹಿಳಾ ಹಿಂಸಾಚಾರ ತಡೆಗಟ್ಟುವುದು.
* ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟುವುದು.
ಇಂತಹ ಉದ್ದೇಶಗಳಿಗಾಗಿ ಮಹಿಳಾ ದಿನಾಚರಣೆ ಆಚರಣೆ ಬಂದಿತು. ಸಾಧನೆ ಮಾಡಿದ ಮಹಿಳೆಯರಿಗೆ ಇಂದು ಸನ್ಮಾನ ಮಾಡಲಾಗುವುದು. ಮಹಿಳಾ ದಿನಾಚರಣೆ ಅಂದರೆ ಕೇವಲ ಕೇಕ ಕತ್ತರಿಸಿ ಕುಣಿದು ಕುಪ್ಪಳಿಸಿ ಸಂತಸಪಡುವದಷ್ಟೇ ಅಲ್ಲ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟುವುದು ನಿಜವಾದ ಅರ್ಥದಲ್ಲಿ ಮಹಿಳಾ ದಿನಾಚರಣೆ.
ಸಾಕ್ಷಿ ಶ್ರೀಕಾಂತ ತಿಕೋಟಿಕರ.
ಮಹಿಳಾ ದಿನಾಚರಣೆಯ ಬಗ್ಗೆ ಸಾಕ್ಷಿ ಶ್ರೀಕಾಂತ್ ತಿಕೋಟಿಕರ್ ಅವರು ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದಾರೆ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚಿನ ವಿದ್ಯಾಭ್ಯಾಸ ಹಾಗು ಹೊರಗಡೆ ಕೆಲಸಕ್ಕೆ ಹೋದಗ ಅವರನ್ನು ಗೌರವಿಸುವದು ಅಂತ ಗೊತ್ತದ ದಿನವಿದು ಧನವಾದಗಳು Happy women’s day to you Sakshi kotekar bye Lakshmi.P.K
Thank you