ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ದೇಶವೆಂಬುದು ಮನುಜರು.

ದೇಶವೆಂಬುದು, ಕಲ್ಲು ಮಣ್ಣಲ್ಲವೊ,
ದೇಶವೆಂಬುದು ಮನುಜರೋ.
ನಿತ್ಯ ಶ್ರಮದಿ, ದೇಶ ಕಟ್ಟಲು,
ತಪವ ಗೈವ ಸಂತರೋ.
ಇವನೆಮ್ಮವನು, ಅವ ಬೇರೆ ಎನೆ,
ಬೇಧವೆಸಗೊ ಖೂಳರು ,
ಇವರೂ ಅವರೆ,ಅವರೂ ಇವರೆ,
ಎಲ್ಲಾ ದೇಶದ ಮನುಜರು.
ಮೇಲು ಕೀಳು, ಬೇಧಭಾವವ,
ಸೃಷ್ಟಿ ಮಾಡಿದ ಸ್ವಾರ್ಥರು,
ವೃತ್ತಿ ಏನಾದರು, ಬುತ್ತಿ ನೀಡುವ,
ಎಲ್ಲಾ ದೇಶದ ಮನುಜರು.
ಕಾಡು ನಾಡು ,ಮಹಡಿ ಗುಡಿಲು,
ಎಲ್ಲಿ ಹೇಗೆ, ಇದ್ದರೂ,
ನಾಡ ಗುಡಿಯ, ಕಟ್ಟಿ ಬೆಳಸೊ,
ಎಲ್ಲಾ ದೇಶದ ಮನುಜರು.
ಪಿ.ವೆಂಕಟಾಚಲಯ್ಯ.
