ಕಾವ್ಯ ಸಂಗಾತಿ
ಇಂದಿರಾ.ಕೆ –
ಸಂಕ್ರಾಂತಿ ವಿಶೇಷ
ಉತ್ತರಾಯಣಕ್ಕೆ ಸೂರ್ಯಪಥವ ಬದಲಾಯಿಸುವ ಸಂಕ್ರಮಣ ಪರ್ವಕಾಲವಿದು…
ಸಮೃದ್ಧಿ, ನಾವೀನ್ಯತೆ ಬಲಪಡಿಸುವ ಸಂಭ್ರಮದ ಕಾಲವಿದು…
ಸುಗ್ಗಿಯ ಋತುವಿನ ಪೈರು ತೆಗೆಯುವ ಸುಗ್ಗಿ ಕಾಲವಿದು..
ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಾಂಕೇತಿಸುವ ಗೆಲುವಿನ ಕಾಲವಿದು…
ಭಾರತದ ಸಂಸ್ಕೃತಿ, ಧರ್ಮಗಳ ಭಾಂದವ್ಯ ಬೆಸೆಯುವ ಸುಸಮಯವಿದು..
ವೈವಿಧ್ಯ ಸಮುದಾಯಗಳ ಒಗ್ಗೂಡಿಸುವ ಐಕ್ಯಮತ್ಯ ಉತ್ಸವ ಕಾಲವಿದು…
ದಾನ ಪುಣ್ಯವನು ಅರ್ಪಿಸಿ ಆತ್ಮ ಶುದ್ಧೀಕರಿಸುವ ನಿರ್ಮಲತೆ ಕಾಲವಿದು..
ಫಲಪ್ರದ ಇಳುವರಿಗಾಗಿ ಕೃತಜ್ಞತೆ ವ್ಯಕ್ತಪಡಿಸುವ ಉಪಕಾರ ಸ್ಮರಣೆ ಕಾಲವಿದು..
ರೈತಾಪಿವರ್ಗಕ್ಕೆ ಗೌರವಾಧಾರವಾಗಿ ಅವನ ಶ್ರಮದ ಪ್ರತೀಕವಾಗಿ ಸಂತೋಷಿಸುವ ಕಾಲವಿದು…
ಹಾರುವ ಗಾಳಿಪಟವು ನಕಾರಾತ್ಮಕತೆ ಹೋಗಲಾಡಿಸಿ ಸಕಾರಾತ್ಮಕತೆ ಶಕ್ತಿಯ ಸೃಷ್ಟಿಯ ಕಾಲವಿದು…