ಕಾವ್ಯ ಸಂಗಾತಿ
ಸವಿತಾ ದೇಶಮುಖ
ಉತ್ತರಾಯಣ
ಉತ್ತರಾಯಣದ- ಉತ್ತರೊತ್ತರ
ಶಿಶಿರ – ವಸಂತ – ಗ್ರೀಷ್ಮರ
ಆಗಮನವು, ಪ್ರಖರ ನೇಸರ
ನಡೆದ ಉತ್ತರ ಧ್ರುವರೇಖೆಯೆತ್ತ..!!೧!!
ಚಳಿ ಮಂಜಿನ ಮುಸುಕು ಸರಿಸಿ
ಝಳಿಸುವ ಬೇಸಿಗೆಯ ಆಹ್ವಾನ
ಮಕರ ಸಂಕ್ರಾಂತಿಯ ಆಗಮನ
ಪುಣ್ಯ ಕಾಲದತ ಪಯಣ…!!೨!!
ಎಳ್ಳು ಬೆಲ್ಲ ಕಬ್ಬು, ಮಾವಿನ
ಪಾನಕ, ಮೃಷ್ಟಾನ್ನ ಭೋಜನ
ಸವಿ ಸವಿದು ಹೊಸ ಹುರುಪಿನ
ಹರ್ಷ ಸಂತಸದ- ಮಜ್ಜನ..!!೪!!
ರಂಗು ರಂಗೀನ ಗಾಳಿಪಟ, ಗಗನ
ತುಂಬಾ ತುಂಬಿ ಪುಳಕಿತ, ನಯನ
ಮನೋಹರ ದೃಶ್ಯ ಖುಷಿ- ಮಂಥನ
ನವ ಹುರುಪಿಗೆ ಸಜ್ಜಾಗುವ ಜೀವನ,..!!೫!!
ಹಳೆಯ ಕಹಿ ನೆನಪು ಮರೆತು
ಬೆಲ್ಲದಂತ ಮಧುರ ನಿನಾದದಿ ಬೆರೆತು
ಜೇನ ಸುಧೆ ಒಲುಮೆ ಸ್ಪೂರ್ತಿ ಹೊತ್ತು
ವೈಯಾರದಿ ಸಂಕ್ರಾಂತಿ ಬಂತು…!!೬!!
ಅನುಭಾವದ ಸವಿ ಸವಿಯಲು
ಸುಳಿದೆಗೆದು ಬೆಳೆದು ನಿಲಲು.
ಕಬ್ಬಿನ ಸವಿಯಂತ ಕಬ್ಬರಚಿಸಲು
ತೇಲಿಹದು ಮನವು ಕಬ್ಬಿಗನಾಗಲು!!೭!!
ಉತ್ತರಾಯಣ ಪರ್ವಕಾಲದಲಿ
ಆದಿತ್ಯನ ಬೆಳಕಿನ ಕಿರಣದಲ್ಲಿ
ಸಂದುವುದೇ ಪ್ರಮಥರ ಪಥದಲಿ
ಮುನ್ನಡೆಯಲು …!!೮!!
ಆರ್ಕನ ಬೆಳಗಿನ ಎತ್ತರಕ್ಕೆ ಏರಲು ಬಯಸಿತು ಮನ…….
ಸವಿತಾ ದೇಶಮುಖ