ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಬೆಚ್ಚಗಿರೋ ಬಯಕೆ
ಈ ಶೀತಲ ಛಳಿಗೆ,
ಖರ್ಚಿಲ್ಲದ ಕಂಬಳಿ
ಪರಸ್ಪರ ಅಪ್ಪುಗೆ.
ಗಟ್ಟಿಗಿತ್ತಿ ನನ್ನಾಕೆ
ಇರುವಾಗ ಜೊತೆಗೆ
ಹತ್ತಿರ ಸುಳಿಯಲು
ಅಂಜಿಕೆಯು ಚಳಿಗೆ
ಭೂಮಿಯೇ ನಡುಗಿದೆ
ಇಬ್ಬನಿ ಹೊದಿಕೆಗೆ
ಗಿಡ-ಬಳ್ಳಿ ಪ್ರಾರ್ಥನೆ
ಸೂರ್ಯ-ರಶ್ಮಿ ಕಡೆಗೆ.
ಮರದ ಮೈ ಬಳಸಿ
ಬಳ್ಳಿಯ ಆಲಿಂಗನ
ಚಳಿಗೇ ಇರಬೇಕು!
ಅಪ್ಪುಗೆಯ ಬಂಧನ.
ಶೀತಲ ಗಾಳಿಯಲಿ
ಇಬ್ಬನಿಯ ಚಿಮುಕು
ಅಲ್ಲಿಯೂ ಮಲ್ಲಿಗೆಯ
ಸುವಾಸಿತ ಮೆಲುಕು.
ನಡುಗುವ ರೈತನಿಗೆ
ಇನ್ನೂ ಚಳಿ ಬೇಕಂತೆ,
ಮಾಗಿ ನಿಂತ ಫಸಲು
ರಾಶಿ ಹುಲುಸಾಗಲು.
—————————————————————————–
ವ್ಯಾಸ ಜೋಶಿ.