ಎಷ್ಟೋ ಬಾರಿ ಎಲ್ಲ ಇದ್ದಾಗಲೂ ಏನೂ ಇಲ್ಲದಂತೆ ಭಾಸವಾಗುವ ಮನುಷ್ಯ ಅಭಾವಗಳ ಕೊರತೆಯ ಭಾವದಿಂದ ನರಳುತ್ತಾನೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಅಡಿಗರ ಕವನದ ಸಾಲುಗಳು ನಮಗೆ ಮನುಷ್ಯನ ಅತೃಪ್ತಿಯ ಸಂಕೇತವಾಗಿ ಹೊರ ಹೊಮ್ಮುತ್ತದೆ.
ದೈಹಿಕವಾಗಿ ಅಂಗವೈಕಲ್ಯತೆಯನ್ನು ಹೊಂದಿದ್ದರೂ
ಮಾನಸಿಕವಾಗಿ ಸ್ಥಿರತೆಯನ್ನು ಹೊಂದಿದ್ದು ತಮ್ಮ ಬಲಹೀನತೆಗಳನ್ನು ಮೆಟ್ಟಿ ನಿಂತ ಹಲವಾರು ಜನರ ಉದಾಹರಣೆಗಳು ನಮ್ಮ ಮುಂದಿವೆ.
ಕಿವಿ ಕೇಳಿಸದ ಥಾಮಸ್ ಅಲ್ವಾ ಎಡಿಸನ್ ಜಗತ್ತಿನ ಬಹುದೊಡ್ಡ ಸಂಶೋಧಕನಾಗಿ ಹೊರಹೊಮ್ಮಿದ.
ಬಡತನ ಮತ್ತು ಸಮಾಜದ ಅವಹೇಳನವನ್ನು ಅನುಭವಿಸಿದ ಓಪ್ರಾ ವಿನ್ ಫ್ರೇ ಬಹುದೊಡ್ಡ ಮಾಧ್ಯಮ ಸಂವಾದಕಿಯಾಗಿ ಹೆಸರಾದಳು.
ಎಎಲ್ಎಸ್( ಎಮಿಯೋ ಟ್ರೋಪಿಕ್ ಲ್ಯಾಟರಲ್ ಪ್ಲರೋಸಿಸ್) ಎಂಬ ಮೆದುಳು ಮತ್ತು ನರರೋಗದ ವೈಫಲ್ಯವನ್ನು ಅನುಭವಿಸಿದ ಸ್ಟಿಫನ್ ಹಾಕಿಂಗ್ ಭೌತ ಶಾಸ್ತ್ರದ ಬಹುದೊಡ್ಡ ಹೆಸರೆನಿಸಿದ.
ಕಿವುಡ ಮತ್ತು ಅಂಧಳಾದ ಹೆಲನ್ ಕೆಲ್ಲರ್ ತನ್ನಂತೆಯೇ ತೊಂದರೆ ಅನುಭವಿಸುವ ಜನರಿಗೆ ತನ್ನ ಸಾಧನೆಯ ಮೂಲಕ ಸ್ಪೂರ್ತಿ ನೀಡಿದಳು.
ಬಡತನ ಮತ್ತು ಜನರ ತಿರಸ್ಕಾರದಿಂದ ನರಳಿದ ಜೆ ಕೆ ರೋಲಿಂಗ್ ಪ್ರಖ್ಯಾತ ಲೇಖಕನಾದ.
ತನ್ನ ಶಾಲೆಯ ಬಾಸ್ಕೆಟ್ ಬಾಲ್ ಟೀಮ್ ನಿಂದ ಕೈ ಬಿಡಲ್ಪಟ್ಟ ಮೈಕೆಲ್ ಜೋರ್ಡನ್ ಪ್ರಪಂಚದ ಅತಿ ದೊಡ್ಡ ಬಾಸ್ಕೆಟ್ ಬಾಲ್ ಆಟಗಾರನಾದ.
ಸತತ 27 ವರ್ಷ ಒಂದು ಕೋಣೆಯಲ್ಲಿ ಬಂಧಿಸಲ್ಪಟ್ಟ ನೆಲ್ಸನ್ ಮಂಡೇಲಾ ಅತಿ ದೊಡ್ಡ ರಾಜಕೀಯ ನೇತಾರನಾದ.
ಬಹಳಷ್ಟು ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಫ್ರಿಡಾ ಕಹಲೊ ಕಲೆಯಲ್ಲಿ ಸುಪ್ರಸಿದ್ಧಳಾದಳು.
ಅರ್ಧಕ್ಕೆ ಕಾಲೇಜಿಗೆ ಬಿಟ್ಟ ಬಿಲ್ ಗೇಟ್ ಬಹುದೊಡ್ಡ ತಂತ್ರ ಜ್ಞಾನದ ಸಾಮ್ರಾಜ್ಯವನ್ನು ಕಟ್ಟಿದ.
ಲಿಂಗ ತಾರತಮ್ಯವನ್ನು ಅನುಭವಿಸಿದ ಮೇರಿ ಕ್ಯೂರಿ ವಿಶ್ವ ಕಂಡ ಬಹುದೊಡ್ಡ ವಿಜ್ಞಾನಿಯಾಗಿ ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿಯಾದಳು.ಕೊಳಗೇರಿಯಲ್ಲಿ ಜನಿಸಿದ, ಅತ್ಯಂತ ಕೆಳ ವರ್ಗದ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿದ ಹಲವಾರು ಸಂಕಷ್ಟಗಳನ್ನು ಅನುಭವಿಸಿದ ಭೀಮರಾವ್ ಭಾರತ ದೇಶದ ಸಂವಿಧಾನ ಪಿತಾಮಹ ಮಹಾ ಮಾನವತಾವಾದಿ ಅಂಬೇಡ್ಕರ್ ಎನಿಸಿದರು.
ರಾಷ್ಟ್ರ ಮಟ್ಟದ ವಾಲಿಬಾಲ್ ಪ್ಲೇಯರ್ ಆಗಿ ಕಾಲು ಕತ್ತರಿಸಿದ ನಂತರವೂ ಹಿಮ್ಮೆಟ್ಟದೇ ಭಾರತದ ಮೌಂಟ್ ಎವರೆಸ್ಟ್ ಸೇರಿದಂತೆ ಜಗತ್ತಿನ ಏಳು ಅತಿದೊಡ್ಡ ಪರ್ವತಗಳನ್ನು ಏರಿದ ಸಾಹಸಿ ಅರುಣಿಮಾ ಸಿನ್ಹಾ ನಮಗೆಲ್ಲ ಮಾದರಿಯಾದಳು.
ಇನ್ನೂ ಕರ್ನಾಟಕಕ್ಕೆ ಬಂದರೆ ಪೋಲಿಯೋ ಪೀಡಿತಳಾಗಿಯೂ ಓದಿ ವಿದ್ಯಾವಂತೆಯಾಗಿ ಕ್ರೀಡೆ ಸಂಗೀತ ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಹೆಸರು ಮಾಡಿದ ಮಾಲತಿ ಹೊಳ್ಳ ನಮಗೆಲ್ಲಾ ಸ್ಪೂರ್ತಿ.
.
ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ಬದುಕು ತಮಗೊಡ್ಡುವ ಸವಾಲುಗಳನ್ನು ತಾಳ್ಮೆ ಮತ್ತು ಸಹನೆಯ ಜೊತೆಗೆ ನಿರಂತರ ಪರಿಶ್ರಮದಿಂದ ಎದುರಿಸಿ ಮಹಾ ಸಾಧಕರಾಗಿದ್ದಾರೆ. ಹಲವಾರು ಹೆಸರುಗಳು ಬಿಟ್ಟು ಹೋಗಿರಬಹುದು… ಅದೆಷ್ಟೇ ಕಠಿಣವಾದ ಸವಾಲಾಗಿದ್ದರು ಬದುಕು ಅದೆಲ್ಲವನ್ನು ಮೀರಿ ಸಾಧಿಸುವ ಅಂಗಣವಾಗಿರುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.
ಸವಾಲುಗಳಿಗೆ ಹಿಂಜರಿಯಬೇಡಿ, ನಿಮ್ಮ ಭಯವನ್ನು ಒಪ್ಪಿಕೊಂಡಾಗ ಅವುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಪ್ರತಿ ಸಣ್ಣ ಸವಾಲು ನಿಮ್ಮನ್ನು ಯಶಸ್ಸಿನ ಶಿಖರದ ತುದಿ ತಲುಪಲು ಸಹಾಯ ಮಾಡುತ್ತದೆ. ಹೆದರಿಕೆಯನ್ನು ಹಿಮ್ಮೆಟ್ಟಿಸಿ ನಿಮ್ಮ ನಿಜವಾದ ತಾಕತ್ತನ್ನು ಹೊರ ಹಾಕಿ… ಬದುಕಿನಲ್ಲಿ ಯಶಸ್ವಿಯಾಗಿ.


Leave a Reply

Back To Top